ಅಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಚಿತ್ರ ತೆರೆ ಕಂಡು ಯಶಸ್ಸು ಕಾಣುತ್ತಿದೆ. ಅಲಿಯಾ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇಂತಿಪ್ಪ ಅಲಿಯಾ ಭಟ್ ಮದುವೆ ಯಾವಾಗ ಎಂಬ ಪ್ರಶ್ನೆ ಅವರಿಗೆ ಸಂದರ್ಶನಗಳಲ್ಲಿ ಪದೇ ಪದೇ ಎದುರಾಗುತ್ತಿದೆ. ಈ ಪ್ರಶ್ನೆ ಕೇಳಿ ಸುಸ್ತಾಗಿರುವ ಅಲಿಯಾ ಈ ಪ್ರಶ್ನೆಗೆ ಉತ್ತರ ನೀಡದಿರಲು ನಿರ್ಧರಿಸಿದ್ದಾರೆ.
ಅಲಿಯಾ ಮತ್ತು ರಣಬೀರ್ ಕಪೂರ್ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರ ಸೆಟ್ಟೇರಿ ಹಲವು ವರ್ಷಗಳೇ ಕಳೆದಿವೆ. ಪರಸ್ಪರ ಪ್ರೀತಿಸುತ್ತಿರುವ ಅಲಿಯಾ ಹಾಗೂ ರಣಬೀರ್ ಶೀಘ್ರವೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸಂದರ್ಶನದಲ್ಲಿ ಹೇಳಿರುವ ಅಲಿಯಾ “ನನ್ನ ಮದುವೆ ಯಾವಾಗ ? ಎಂದು ಕೇಳಿದರು. ನಾನು ಹೇಳುವುದಿಲ್ಲ ಎಂದೆ. ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ನಾನು ಉತ್ತಮ ಸ್ಥಾನದಲ್ಲಿದ್ದೇನೆ”ಎಂದಿದ್ದಾರೆ ಅಲಿಯಾ.
ಹಲವು ವರ್ಷಗಳ ಹಿಂದೆಯೇ ಅಲಿಯಾ ರಣಬೀರ್ ಕಪೂರ್ ಅವರಿಗೆ ಮನಸೋತಿದ್ದರು.”ಪ್ರಾಮಾಣಿಕವಾಗಿ ಹೇಳಬೇಕೆಂದರೆ ಮಾನಸಿಕವಾಗಿ ಅವರ ಜೊತೆ ಈಗಾಗಲೇ ಮದುವೆ ಆಗಿದ್ದೇನೆ. ಮೊದಲ ಬಾರಿಗೆ ಅವರನ್ನು ತೆರೆ ಮೇಲೆ ನೋಡಿದಾಗಲೇ ಮದುವೆ ಆದರೆ ಇವರನ್ನೇ ಅಂತ ನಿರ್ಧರಿಸಿದ್ದೆ. ರಣಬೀರ್ ಕಪೂರ್ ನಾನು ಕಂಡ ಅತಿ ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬರು. ಅವರ ಮೇಲೆ ನನಗೆ ಪ್ರೀತಿ ಇದೆ. ಅವರು ನನಗೆ ಬೆಂಬಲ ನೀಡುತ್ತಾರೆ”ಎಂದಿದ್ದರು. ಶೀಘ್ರದಲ್ಲಿ ಮದುವೆ ಆಗಲ್ಲ ಎಂದಿದ್ದರು.