ಮೈಮಾಟ ಪ್ರದರ್ಶನ ಮತ್ತು ಅಶ್ಲೀಲತೆ ಎಂದಿಗೂ ಕೆಟ್ಟ ಸಿನಿಮಾಗಳನ್ನ ಬದುಕಿಸಲಾರದು ಎಂದು ಇತ್ತೀಚೆಗಷ್ಟೇ ಬಿಡುಗಡೆಯಾದ ಗೆಹ್ರಾಯಿಯಂ ಚಿತ್ರದ ಬಗ್ಗೆ ಕಂಗನಾ ರಣಾವತ್ ಗುಡುಗಿದ್ದರು …ಚಿತ್ರದಲ್ಲಿ ದೀಪಿಕಾ ಪಡುಕೋಣೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ರೀತಿಯ ಕಮೆಂಟ್ ಮಾಡಿದರೂ ಕಂಗನಾ… ಈಗ ಸದ್ಯ ಕಂಗನಾ ಕಣ್ಣು ಆಲಿಯಾ ಭಟ್ ಮೇಲೆ ಬಿದ್ದಿದೆ.,
ಕಳೆದ ವಾರವಷ್ಟೇ ಬಿಡುಗಡೆಯಾಗಿರುವ ಗಂಗೂಬಾಯಿ ಕಾಥೇವಾಡಿ ಚಿತ್ರದ ಟ್ರೇಲರ್ ನೋಡಿದ ನಂತರ ಕಂಗನಾ ಸಿನಿಮಾ ಬಗ್ಗೆ ಕಮೆಂಟ್ ಮಾಡಿದ್ದಾರೆ…
ಗಂಗೂಬಾಯಿ ಕಾಥೆವಾಡಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಯಶಸ್ಸು ಕಂಡಿದೆ.. ಅದಷ್ಟೇ ಅಲ್ಲದೆ ಟ್ರೇಲರ್ ವೈರಲ್ ಆಗಿದ್ದು ಬಹಳಷ್ಟು ಜನರು ಆಲಿಯಾ ರನ್ನ ಅನುಕರಣೆ ಮಾಡಿ ಸೋಷಿಯಲ್ ಮೀಡಿಯಾ ವಿಡಿಯೋವನ್ನು ಅಪ್ಲೋಡ್ ಮಾಡುತ್ತಿದ್ದಾರೆ… ಇತ್ತೀಚೆಗಷ್ಟೇ ಕಿಯಾರ ಖನ್ನಾ ಎಂಬ ಪುಟ್ಟ ಹುಡುಗಿಯೊಬ್ಬಳು ಆಲಿಯಾ ತರದ ಬಟ್ಟೆ ಧರಿಸಿ ಅದೇ ತರ ಮೇಕಪ್ ಮಾಡಿಕೊಂಡು ಬಾಯಿಲಿ ಕಡ್ಡಿ ಇಟ್ಟುಕೊಂಡು ಡೈಲಾಗ್ ಹೇಳುವ ವಿಡಿಯೋ ಭಾರೀ ವೈರಲ್ ಆಗಿತ್ತು…. ಇದನ್ನ ಕಂಡ ಕಂಗನಾ ಕೆಂಡಮಂಡಲವಾಗಿದ್ದಾರೆ…
ಒಬ್ಬ ವೇಶ್ಯೆಯನ್ನು ಸಣ್ಣ ಹುಡುಗಿಯೊಬ್ಬಳು ಅನುಕರಣೆ ಮಾಡುವುದು ಎಷ್ಟು ಸರಿ… ಬಾಯಲ್ಲಿ ಬೀಡಿ ಇಟ್ಟುಕೊಂಡು ಕೆಟ್ಟ ಸಂಭಾಷಣೆ ಹೇಳುವುದು ಎಷ್ಟು ಸರಿ… ಆ ಚಿಕ್ಕ ವಯಸ್ಸಿಗೆ ಅವಳಿಗೆ ಇದೆಲ್ಲ ಬೇಕಿತ್ತಾ… ಅವಳು ಮಾತ್ರ ಇಂತಹ ಹಲವು ಮಕ್ಕಳು ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿದೆ… ಮಕ್ಕಳು ಈ ರೀತಿ ವಿಡಿಯೋಗಳನ್ನು ಮಾಡುತ್ತಿರುವುದನ್ನ ನೋಡಿ ಸುಮ್ಮನಿರೋ ತಂದೆ ತಾಯಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು… ಗಂಗೂಬಾಯಿ ಸಿನಿಮಾದಲ್ಲಿ ಆಲಿಯಾ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಂಜಯ್ ಲೀಲಾ ಬನ್ಸಾಲಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ