Karnataka Bhagya
Blogವಾಣಿಜ್ಯ

ರೆಬಲ್ ಸ್ಟಾರ್ ಅಂಬರೀಶ್ ಪುಣ್ಯಸ್ಮರಣೆ : ಸುಮಲತಾರ ಭಾವುಕ ನುಡಿಗಳು..

ಕಲಿಯುಗ ಕರ್ಣ ಎಂದೇ ಚಿರಪರಿಚಿತರಾಗಿರುವ ಮಂಡ್ಯದ ಗಂಡು ಅಂಬರೀಶ್ ಅವರು ನಮ್ಮನ್ನಗಲಿ ನವೆಂಬರ್ 24 ಕ್ಕೆ 3 ವರ್ಷ.

ಅವರ ಪುಣ್ಯಸ್ಮರಣೆಗಾಗಿ ಸುಮಲತಾ ಅವರು ಅಂಬಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಅವರ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು.

ಅಂಬಿ ಅವರು ಜೊತೆಗೆ ಇಲ್ಲದಿದ್ದರು ಅವರ ಆದರ್ಶಗಳಿಂದ ಅವರು ಸದಾ ಜೀವಂತ. ಅವರ ಅಭಿಮಾನಿಗಳ ಹಾಗೂ ನಮ್ಮ ಮನಸ್ಸಿನಲ್ಲಿ ಅವರು ಸದಾ ಚಿರಂಜೀವಿ.

ಅಪ್ಪುವಿನ ಅಕಾಲಿಕ ಮರಣದಿಂದ ಕನ್ನಡ ಜನತೆಗೆ ತುಂಬಾ ನೋವಾಗಿದೆ. ಹಾಗೆ ನಮಗೂ ಕೂಡ ಶಾಕ್ ಇಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇನ್ನು ಅವರಿಗೆ ಕರ್ನಾಟಕ ರತ್ನ ಸಿಕ್ಕಿದೆ ಎಂದ ಮೇಲೆ ಅದು ಅಂಬಿಯವರಿಗೆ ಸಿಕ್ಕಂತೆಯೇ ಎಂದು ಅಂಬಿ ಅಭಿಮಾನಿಗಳ ಪ್ರಶಸ್ತಿ ಬಗೆಗಿನ ಅಸಮಾಧಾನಕ್ಕೆ ಉತ್ತರ ಕೊಟ್ಟರು.

ಅಂಬಿ ಎಂದೂ ಇದು ಬೇಕು ಎಂಬ ಅಪೇಕ್ಷೆ ಇಟ್ಟುಕೊಂಡು ಬದುಕಿದವರಲ್ಲ ಅವರ ಸ್ವಾಭಿಮಾನದ ಬದುಕೇ ನಮಗೆಲ್ಲಾ ಮಾದರಿಯಾಗಿ ನಾವು ಅದನ್ನ ಪಾಲಿಸಬೇಕು ಅದೇ ಅಂಬಿಯವರಿಗೆ ನೀವು ಕೊಡುವ ಪ್ರಶಸ್ತಿ ಎಂದು ಅಂಬಿ ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಅಂಬಿ ಅಮರ.

Related posts

ಜೊತೆಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿ ಯಾಗಿ ಕಾಣಿಸಿಕೊಳ್ಳಲಿರುವ ನಟಿ ಇವರೇ ನೋಡಿ

Nikita Agrawal

ಲೂಸ್ ಮಾದ ಈಗ “ಕಿರಿಕ್ ಶಂಕರ್”.

Nikita Agrawal

ಮುಸ್ಲಿಂ ಮಹಿಳೆಯ ತಲ್ಲಣವನ್ನು ಬಿಚ್ಚಿಡಲಿದೆ ಸಾರಾ ವಜ್ರ

Nikita Agrawal
Share via
Copy link
Powered by Social Snap