ನಟ ಇರ್ಫಾನ್ ಖಾನ್ ನಮ್ಮನ್ನು ಅಗಲಿ ವರುಷ ಕಳೆದಿದೆ. ಆದರೆ ಅವರ ನೆನಪು ಅಭಿಮಾನಿಗಳು, ಸ್ನೇಹಿತರ ಮನದಲ್ಲಿ ಹಾಗೆಯೇ ಇದೆ. ಇರ್ಫಾನ್ ಅವರ ಹಿರಿಯ ಮಗ ಬಬಿಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಶೂಟಿಂಗ್ ನಿಂದ ಮನೆಗೆ ಬಂದಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ನಟ ದಿವಂಗತ ಇರ್ಫಾನ್ ಖಾನ್ ಅವರನ್ನು ನೆನಪಿಸಿಕೊಂಡಿದ್ದು ಅವರ ಮಗ ಬಬಿಲ್ ಗೆ ಭಾವನಾತ್ಮಕ ಪತ್ರ ಬರೆದು ಕಳುಹಿಸಿದ್ದಾರೆ.
“ಜೀವನವು ಕ್ಷಣಿಕವಾದದ್ದು ಹಾಗೂ ಸಾವು ಅಗ್ರಾಹ್ಯವಾದುದು. ಆದರೆ ಸ್ನೇಹ ಸಾವನ್ನು ಮೀರಿದೆ. ನೆನಪುಗಳನ್ನು ಕೂಡಾ ರೂಪಿಸಿದೆ. ಬಿಟ್ಟು ಹೋದವರ ಮೇಲೆ ಶಾಶ್ವತವಾದ ಪ್ರಭಾವವನ್ನು ಸೃಷ್ಟಿಸುತ್ತವೆ. ಎಂದಿಗೂ ಮರೆಯಲಾಗುವುದಿಲ್ಲ. ಪ್ರತಿಬಾರಿ ನಾವು ಪ್ರೀತಿಪಾತ್ರರನ್ನು ಒಂದು ತಮಾಷೆ, ನುಡಿಗಟ್ಟು ,ಕ್ರಿಯೆಯ ಮೂಲಕ ನೆನಪಿಸಿಕೊಳ್ಳುತ್ತೇವೆ. ಇವುಗಳು ಸಾವಿನ ಹೊರತಾಗಿಯೂ ನಮ್ಮನ್ನು ಹತ್ತಿರ ಇಡುತ್ತವೆ. ನಿನ್ನ ತಂದೆ ಇರ್ಫಾನ್ ಖಾನ್ ಉತ್ತಮ ಮನುಷ್ಯ. ಅವನನ್ನು ಮಿಸ್ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ.
ಇರ್ಫಾನ್ ಖಾನ್ ಹಾಗೂ ಅಮಿತಾಭ್ ಬಚ್ಚನ್ ಪಿಕು ಸಿನಿಮಾದಲ್ಲಿ ನಟಿಸಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ ಲಂಡನ್ ನಲ್ಲಿ ಟ್ರೀಟ್ಮೆಂಟ್ ಪಡೆದುಕೊಳ್ಳುತ್ತಿದ್ದರು. ಅವರ ಹಿರಿಯ ಮಗ ಬಬಿಲ್ ಈಗ ಸಿನಿಮಾರಂಗ ಪ್ರವೇಶಿಸಲು ಸಿದ್ದನಾಗಿದ್ದು ಕಾಲ ಚಿತ್ರದ ಮೂಲಕ ಕೆರಿಯರ್ ಆರಂಭಿಸುತ್ತಿದ್ದಾರೆ.