ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಸದ್ಯ ಮಗಳು ಧೃತಿಯ ಆರೈಕೆಯಲ್ಲಿ ತೊಡಗಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ವಚನಾ ಪಾತ್ರದಲ್ಲಿ ನಟಿಸಿ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಅಮೃತಾ ಇದೀಗ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. “ಇದೊಂದು ತನ್ನ ಜೀವನದ ಉತ್ತಮ ಹಂತ “ಎಂದಿದ್ದಾರೆ. ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅಮೃತಾ ಗರ್ಭಿಣಿಯ ಕಾರಣದಿಂದಾಗಿ ಅರ್ಧದಿಂದ ತೊರೆದಿದ್ದರು. ಈಗ ಮತ್ತೆ ಕಿರುತೆರೆಗೆ ಮರಳಿದ್ದಾರೆ.
“ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ನಾನು ಪ್ರಮುಖ ಖಳನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಬಹುಶಃ ಇದೇ ಮೊದಲ ಬಾರಿಗೆ ಖಳನಾಯಕಿಯಾಗಿ ಕಾಣಿಸಿಕೊಳ್ಳುತ್ತದ್ದೇನೆ ಎನ್ನಬಹುದು.
ವಚನಾ ಪಾತ್ರ ಸ್ವಲ್ಪ ನೆಗೆಟಿವ್ ಅಂಶ ಹೊಂದಿತ್ತು. ಆದರೆ ಈ ಪಾತ್ರ ಹಾಗಲ್ಲ. ಇದು ಸಂಪೂರ್ಣವಾಗಿ ನೆಗೆಟಿವ್ ಪಾತ್ರವಾಗಿದೆ” ಎನ್ನುತ್ತಾರೆ ಅಮೃತಾ ರಾಮಮೂರ್ತಿ.
ಮಗಳು ಧೃತಿಗೆ ಮೂರು ತಿಂಗಳು ಆಗಿದ್ದಾಗ ಅಮೃತಾ ಅವರಿಗೆ ಬಹಳ ಆಫರ್ಸ್ ಬಂದಿದ್ದರೂ ತಿರಸ್ಕರಿಸಿದ್ದಾರೆ. “ನನಗೆ ಆಶ್ಚರ್ಯವಾಯಿತು. ಏಕೆಂದರೆ ಮಗಳಿಗೆ ಮೂರು ತಿಂಗಳು ಆಗಿದ್ದಾಗ ನನಗೆ ತುಂಬಾ ಆಫರ್ಸ್ ಬಂದವು. ತಮಿಳು ಹಾಗೂ ತೆಲುಗು ಇಂಡಸ್ಟ್ರಿಯಿಂದಲೂ ನಟಿಸುವ ಅವಕಾಶ ಸಿಕ್ಕಿತ್ತು. ಹಾಗೂ ಇದು ಕಷ್ಟದ ಆಯ್ಕೆ ಆಗಿತ್ತು. ನಾನು ಕೊನೆಯದಾಗಿ ಕೆಂಡಸಂಪಿಗೆ ಧಾರಾವಾಹಿ ಒಪ್ಪಿಕೊಂಡೆ” ಎಂದು ಕಿರುತೆರೆಗೆ ಮರಳಿ ಬಂದುದರ ಬಗ್ಗೆ ಹೇಳುತ್ತಾರೆ
ಅಮೃತಾ.