ಇತ್ತೀಚೆಗಷ್ಟೇ ತೆರೆಕಂಡು ಸೂಪರ್ ಹಿಟ್ ಆದ ಸಿನಿಮಾ ಪುಷ್ಪ… ಎಲ್ಲ ವರ್ಗದ ಪ್ರೇಕ್ಷಕರ ಗಮನ ಸೆಳೆದು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಿನಿಮಾ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಕೂಡ ಮಾಡಿತ್ತು …
ಇನ್ನು ಸಿನಿಮಾದ ಹಾಡುಗಳು ಕೂಡ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಕಂಡಿತು…ಅದರಲ್ಲಿ ಸಾಮಿ ಸಾಮಿ ಹಾಡು ಎಲ್ಲೆಡೆ ಟ್ರೆಂಡ್ ಸೆಟ್ ಮಾಡಿತ್ತು ..ಕೇವಲ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯೋದು ಮಾತ್ರವಲ್ಲದೆ ಸಾಮಿ ಸಾಮಿ ಹಾಡು ಅಮುಲ್ ಸಂಸ್ಥೆಯ ಮನಸ್ಸು ಕದ್ದಿದೆ.. ಹೌದು ಅಮುಲ್ ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಸಮಾಜದಲ್ಲಿ ಆಗುಹೋಗುಗಳನ್ನು ಗಮನಿಸಿ ಒಳ್ಳೆಯ ವಿಚಾರಗಳಿಗೆ ಟ್ರಿಬ್ಯೂಟ್ ಕೊಡುವಂತಹ ಕೆಲಸವನ್ನು ಮಾಡುತ್ತಾ ಬಂದಿದೆ… ಈಗ ಅದೇ ಅಮೂಲ್ ಸಂಸ್ಥೆ ಸಾಮಿ ಸಾಮಿ ಹಾಡಿಗೆ ತನ್ನ ಕಾರ್ಟೂನ್ ಗಳನ್ನು ಡಿಸೈನ್ ಮಾಡಿ ಎಲ್ಲೆಡೆ ಜಾಹೀರಾತನ್ನು ಮೂಲಕ ಪ್ರಚಾರ ಮಾಡುತ್ತಿದೆ …
ಈ ವಿಚಾರವನ್ನ ತಿಳಿದ ಪುಷ್ಪ ಸಿನಿಮಾತಂಡ ಸಂತೋಷವನ್ನು ವ್ಯಕ್ತಪಡಿಸಿದೆ… ನಟಿ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಕಾರ್ಟೂನ್ ಅನ್ನು ಕ್ರಿಯೆಟ್ ಮಾಡಿದೆ ಅಮೂಲ್ ಟೀಂ…ಅಮುಲ್ ಡಿಸೈನ್ ಮಾಡಿರುವ ಪೋಸ್ಟನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡುವ ಮೂಲಕ ನಟಿ ರಶ್ಮಿಕಾ ಸಂತಸ ವ್ಯಕ್ತಪಡಿಸಿದ್ದಾರೆ…