ಕನ್ನಡ ಕಿರುತೆರೆಯ ಬಾರಿ ಬೇಡಿಕೆಯ ನಿರೂಪಕಿ ಅನುಶ್ರೀ ಈಘ ರಿಯಾಲಿಟಿ ಶೋ ಬಿಟ್ಟು ಸೈತಾನನ ಹಿಂದೆ ಬಿದ್ದಿದ್ದಾರೆ…ಹೌದು ನಟಿ ಅನುಶ್ರೀ ಅಭಿನಯದ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ…ಸಂಕ್ರಾಂತಿ ಸಂಭ್ರಮಕ್ಕೆ ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿದ ಸಿನಿಮಾತಂಡ ಸ್ಯಾಂಡಲ್‌ವುಡ್ ನ ಅನೇಕ ಗಣ್ಯರಿಂದಸಮಾಗಮದಲ್ಲಿಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದಾರೆ…
ಅನುಶ್ರೀ ಅಭಿನಯದ ಮಹಿಳಾ ಪ್ರಧಾನ ಸಿನಿಮಾಗೆ ಸೈತಾನ್ ಎಂದು ಹೆಸರಿಡಲಾಗಿದೆ…ಪ್ರಭಾಕರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು ಪ್ರತಿಭನ್ ಹಾಗೂ ಪುನೀತ್ ಹೆಚ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಇನ್ನು ನೋಬಿನ್ ಪೌಲ್ ಸಂಗೀತ ಸಿನಿಮಾಗೆ ಇರಲಿದೆ ..
ಈಗಾಗಲೇ ಬೆಂಕಿಪಟ್ಟಣ ಹಾಗೂ ಉಪ್ಪು ಹುಳಿ ಖಾರ ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರ ಮನರಂಜಿಸಿದ ಅನು ಶ್ರೀ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ ..ಸದ್ಯ ಚಿತ್ರದ ಟೈಟಲ್ ರಿವಿಲ್ ಆಗಿದ್ದು ಇನ್ನು ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ..