ಚಿತ್ರರಂಗದಿಂದ ಅಪ್ಪು ನುಡಿ ನಮನಕ್ಕೆ ತಯಾರಿ
ಅಪ್ಪು ನುಡಿನಮನ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ತಯಾರಿಗಳು ನಡೆದಿದ್ದು ಅರಮನೆ ಮೈದಾನದಲ್ಲಿ ನಾಳೆ ಅಪ್ಪು ನುಡಿನಮನ ಕಾರ್ಯಕ್ರಮ ನಡೆಯಲಿದೆ ..
ಅಪ್ಪು ನೆನಪಿನಲ್ಲಿ ಪುನೀತ ನಮನಕ್ಕೆ ಸಕಲ ಸಿದ್ದತೆಗಳಾಗಿದ್ದು ಪುನೀತ ನಮನ ಕಾರ್ಯಕ್ರಮದಲ್ಲಿ ಸುಮಾರು 2000 ಜನರಿಗೆ ಮಾತ್ರ ಆಹ್ವಾನ ಮಾಡಲಾಗಿದೆ …ಕಾರ್ಯಕ್ರಮದಲ್ಲಿ ಇಡಿ ರಾಜ್ ಕುಟುಂಬ ಹಾಗೂ ಕನ್ನಡ ಚಿತ್ರರಂಗದ ಎಲ್ಲಾ ಪ್ರಮುಖ ಕಲಾವಿಧರು ಭಾಗಿಯಾಗಲಿದ್ದಾರೆ…ಕನ್ನಡ ಚಿತ್ರರಂಗದ ಕಡೆಯಿಂದ ಸುದೀಪ್, ಯಶ್, ಗಣೇಶ್, ಶಿವರಾಜ್ ಕುಮಾರ್, ಉಪೇಂದ್ರ, ರವಿಚಂದ್ರನ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಸೇರಿದಂತೆ ಕನ್ನಡದ ಎಲ್ಲಾ ಕಲಾವಿಧರು ನುಡಿನಮನ ಕಾರ್ಯಕ್ರಮಕ್ಕೆ ಬಂದು ಪುನೀತ್ ರಾಜ್ ಕುಮಾರ್ ರವರಿಗೆ ನಮನ ಸಲ್ಲಿಸಲಿದ್ದಾರೆ ….
ರಾಜಕೀಯ ರಂಗದಿಂದ ಹಾಲಿ ಸಿಎಂ ಗಳು,ಸಚಿವರ ಮತ್ತು ಪ್ರಮುಖ ರಾಜಕೀಯ ಮುಖಂಡರು ಭಾಗಿಯಾಗಲಿದ್ದು ಪರಭಾಷ ಚಿತ್ರರಂಗದಿಂದ ಅಮೀತಾ ಬಚ್ಚನ್,ತಮಿಳು ನಟ ವಿಶಾಲ್, ರಜನಿಕಾಂತ್, ದಳಪತಿ ವಿಜಯ್, ಅಜಿತ್, ವಿಜಯ್ ಸೇತುಪತಿ, ಚಿರಂಜೀವಿ, ಅಲ್ಲು ಅರ್ಜುನ್, ಜ್ಯೂ. ಎನ್ ಟಿ ಆರ್, ಪ್ರಭಾಸ್, ರಾಮ್ ಚರಣ್, ಮೊಮ್ಮಟ್ಟಿ, ಮೋಹನ್ ಲಾಲ್ ಸೇರಿದಂತೆ ಪ್ರಮುಖ ಕಾರ್ಯಮದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ..
ನಾಳೆ ಮಧ್ಯಾಹ್ನ ಮೂರ ಗಂಟೆಯಿಂದ ಸಂಜೆ ಆರು ಗಂಟೆ ವರಗೆ ನೆಡೆಯಲಿರುವ ಕಾರ್ಯಕ್ರಮ..ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಪಾಸ್ ವ್ಯವಸ್ಥೆ..ಹೀಗಾಗಿ ಪಾಸ್ ಇದ್ದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ..ಇನ್ನು ಈ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಅವಕಾಶ ಇರುವುದಿಲ್ಲ ಅಭಿಮಾನಿಗಳು ಮಾಧ್ಯಮಗಳಲ್ಲಿ ಕಾರ್ಯಕ್ರಮವನ್ನ ನೋಡಿ ಕಣ್ತುಂಬಿಕೊಳ್ಳಬಹುದು….