ಪ್ರತಿಭಾನ್ವಿತ ಕನ್ನಡದ ನಟ ಬಿಗ್ ಬಾಸ್ ಖ್ಯಾತಿಯ ಅರುಣ್ ಸಾಗರ್ ಗೆ ಖ್ಯಾತ ನಿರ್ದೇಶಕ ರಾಜಮೌಳಿ ಅವರಿಂದ ಬಂಪರ್ ಆಫರ್ ಬಂದಿದೆ.
ಜನವರಿ 7, 2022 ರಂದು ತೆರೆಗೆ ಬರಲಿರುವ RRR ಸಿನಿಮಾದಲ್ಲಿ ನಟಿಸುವ ಅವಕಾಶ ನಟ ಅರುಣ್ ಸಾಗರ್ ಗೆ ದೊರೆತಿದೆ.
RRR ಸಿನಿಮಾದಲ್ಲಿ ಅರುಣ್ ಸಾಗರ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ವಿಚಾರ ಕೇಳಿ ಕನ್ನಡಿಗರು ಹಾಗೂ ಅರುಣ್ ಸಾಗರ್ ಅಭಿಮಾನಿಗಳು ಖುಷಿಯಾಗಿದ್ದಾರೆ.
ಅರುಣ್ ಸಾಗರ್ ರಂಗಭೂಮಿ ಕಲಾವಿದ. ಹಲವು ಕಲಾ ನಿರ್ದೇಶನವನ್ನು ಮಾಡಿದ್ದಾರೆ.
ಡಿಸೆಂಬರ್ 3 ರಂದು RRR ಸಿನಿಮಾ ಟ್ರೇಲರ್ ರಿಲೀಸ್ ಆಗಲಿದೆ. ಕರ್ನಾಟಕದಲ್ಲಿ ಗ್ರ್ಯಾಂಡ್ ಆಗಿ ಪ್ರೀ ರಿಲೀಸ್ ಇವೆಂಟ್ ನಡೆಸಲು ನಿರ್ದರಿಸಲಾಗಿದೆ ಎಂದು ಚಿತ್ರ ತಂಡ ಹೇಳಿದೆ.