Karnataka Bhagya

Author name: Karnatakabhagya

ಪುನೀತ್ ಮನೆಗೆ ನಿರ್ಮಾಲಾನಂದ ಸ್ವಾಮೀಜಿ ಬೇಟಿ

ಪುನೀತ್ ಸಾವಿನ ನಂತರ ಅಪ್ಪು ಮನೆಗೆ ಸಾಕಷ್ಟು ಗಣ್ಯರು ಭೇಟಿಕೊಟ್ಟು ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದಾರೆ..‌ಇಂದು ಅಪ್ಪು ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ ಕೊಟ್ಟಿದ್ದಾರೆ.. ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ನಟ ಕುಮಾರ್ ಮತ್ತು ಆದಿ ಚುಂಚನಗಿರಿ ಮಠಕ್ಕೆ ಅವಿನಾನುಬಾವ ಸಂಬಂಧ ಇತ್ತು.ಪುನೀತ್ ರಾಜ್ ಅಗಲಿದ ಬಳಿಕ ಅವರ ಮನೆಗೆ ಬರಲು ಸಾದ್ಯ ವಾಗಿರಲಿಲ್ಲ.ಅವರ ಮನೆಯದ್ದೇ ಕಾರ್ಯಕ್ರಮ ಗಳು ಇದ್ದವು.ಹಾಗಾಗಿ ಈಗ ಬಂದಿದ್ದೇವು.ಅವರ ಪತ್ನಿ ಅಶ್ವಿನಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ ಎಂದಿದ್ದಾರೆ…

ಪುನೀತ್ ಮನೆಗೆ ನಿರ್ಮಾಲಾನಂದ ಸ್ವಾಮೀಜಿ ಬೇಟಿ Read More »

ಹಿರಿಯ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ.!

ನಟ ಶಿವರಾಮ್ ಅವರು ಕನ್ನಡಿಗರ ಮನದಲ್ಲಿ ಹಚ್ಚಾಗಿರುವ ನಟ. ಅದ್ಭುತ ನಟನೆಯಿಂದ ಅಂದಿನಿಂದ ಇಂದಿನವರೆಗೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಜನಾನುರಾಗಿಯಾಗಿದ್ದಾರೆ. 3 ದಿನದ ಹಿಂದೆ ಕಾರಿನಲ್ಲಿ ತೆರಳುವಾಗ ಅವರಿಗೆ ಅಪಘಾತವಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇದೀಗ ಮತ್ತೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.ಅವರನ್ನು ಹೊಸಕೆರೆ ಹಳ್ಳಿಯ ಬಳಿಯ ಒಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಬಹು ಬೇಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಅವರು ಆರೋಗ್ಯವಾಗಿ ಮನೆಗೆ ವಾಪಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಷ್ಟೇ ನಮ್ಮ ಕೈಯಲ್ಲಿರುವುದು.

ಹಿರಿಯ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ.! Read More »

ಹಿರಿಯ ನಟ ಶಿವರಾಮ್ ಅವರ ಆರೋಗ್ಯ ಪರಿಸ್ಥಿತಿ ಗಂಭೀರ

ಹಿರಿಯ ನಟ ಶಿವರಾಮ್ ಅವರ ಅರೋಗ್ಯ ಪರಿಸ್ಥಿತಿ ಗಂಭೀರವಾಗಿದೆ…ಶಿವರಾಮ್ ಅವರ ಅರೋಗ್ಯದ ಬಗ್ಗೆ ಶಿವರಾಮ್ ಹಿರಿಯ ಪುತ್ರ ರವಿಶಂಕರ್ ಮಾಹಿತಿ ನೀಡಿದ್ದು.ಮೂರು ದಿನಗಳ ಹಿಂದೆ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಶಿವರಾಮ್ ಅವ್ರಿಗೆ ಕಾರ್ ಆಕ್ಸಿಡೆಂಟ್ ಆಗಿತ್ತಂತೆ… ನಂತರ ಮೂರು ದಿನಗಳಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ… ಮೊನ್ನೆ ರಾತ್ರಿ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದ ವೇಳೆ ರೂಂ ನಲ್ಲಿ ಬಿದ್ದ ಹಿನ್ನೆಲೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ..ಮೊನ್ನೆ ರಾತ್ರಿಯೇ ಆಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಲಾಗಿದೆ..ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಗಿದೆ.. ವೈದ್ಯರು ಸರ್ಜರಿ ಮಾಡಬೇಕು ಎಂದು ಹೇಳಿದದ್ದುವಯಸ್ಸಾದ ಹಿನ್ನೆಲೆ ಸರ್ಜರಿ ಮಾಡಲು ಆಗಿಲ್ಲಸದ್ಯ ಐಸಿಯುನಲ್ಲೇ ಅವರಿಗೆ ಚಿಕಿತ್ಸೆ ಮುಂದು ವರೆದಿದೆ

ಹಿರಿಯ ನಟ ಶಿವರಾಮ್ ಅವರ ಆರೋಗ್ಯ ಪರಿಸ್ಥಿತಿ ಗಂಭೀರ Read More »

ನಟಿ ಅಮೂಲ್ಯ ದಂಪತಿ ಬದುಕಲ್ಲಿ ಹೊಸ ಅತಿಥಿಯ ಆಗಮನ.!

ಬಾಲನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಚಾಪು ಮೂಡಿಸಿ ಬೆಳೆದ ನಂತರ ನಾಯಕನಟಿಯಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಅವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾಗಲೇ ಜಗದೀಶ್ ಅವರ ಕೈಹಿಡಿದರು. ಮದುವೆಯ ನಂತರ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು. ಮುಗುಳುನಗೆ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು. ಗಣೇಶ್,ಯಶ್,ಲವ್ಲಿ ಸ್ಟಾರ್ ಪ್ರೇಮ್,ಕೃಷ್ಣ ಅಜಯ್ ರಾವ್, ದುನಿಯಾ ವಿಜಯ್ ಮುಂತಾದ ಸ್ಟಾರ್ ಕಲಾವಿದರ ಜೊತೆ ನಾಯಕಿಯಾಗಿ ಅಭಿನಯಿಸಿ ಕನ್ನಡಿಗರ ನೆಚ್ಚಿನ ನಟಿಯಾಗಿ ಮನಸ್ಸಿನಲ್ಲಿ ಉಳಿದಿದ್ದಾರೆ. 2017 ರಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಅಮೂಲ್ಯ ಇದೀಗ ಹೊಸ ಸುದ್ದಿ ನೀಡಿದ್ದಾರೆ. ಹೌದು ನಟಿ ಅಮೂಲ್ಯ ತಾಯಿಯಾಗುತ್ತಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಭಿನ್ನ ರೀತಿಯಲ್ಲಿ ಪೋಟೋ ಶೂಟ್ ಮಾಡಿಸುವುದರ ಮೂಲಕ ಖುಷಿ ವಿಷಯವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

ನಟಿ ಅಮೂಲ್ಯ ದಂಪತಿ ಬದುಕಲ್ಲಿ ಹೊಸ ಅತಿಥಿಯ ಆಗಮನ.! Read More »

ಭಟ್ರ ಜೊತೆ ಪದವಿಪೂರ್ವ ಕಾಲೇಜಿನಲ್ಲಿ ದಿವ್ಯ ಉರುಡುಗ.!

ಹೌದು ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಉರುಡುಗ ಅವರು ಭಟ್ರಸಿನಿಮಾ ಒಂದರಲ್ಲಿ ನಟಿಸಲು ಆಫರ್ ಗಿಟ್ಟಿಸಿಕೊಂಡಿದ್ದಾರೆ. ಈ ಹಿಂದೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ದಿವ್ಯಗೆ ಬಿಗ್ ಬಾಸ್ ಖ್ಯಾತಿಯ ನಂತರ ಆಫರ್ ಗಳು ಹೆಚ್ಚಾಗಿವೆ. ಆದರೆ ದಿವ್ಯ ಆಫರ್ ಗಳಲ್ಲಿ ಚ್ಯೂಸಿ ಆಗಿದ್ದಾರೆ. ಇದೀಗ ಅವರು ನಿರ್ದೇಶಕ ಯೋಗರಾಜ್ ಭಟ್ ರ ಸಿನಿಮಾ ಒಂದರಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. “ಪದವಿಪೂರ್ವ” ಸಿನಿಮಾದಲ್ಲಿ ದಿವ್ಯ ಅತಿಥಿ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಹರಿಪ್ರಸಾದ್ ಜಯಣ್ಣ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹೊಸ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾಗಿ ಹಾಗೂ ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಂತೂ ಯೋಗರಾಜ್ ಭಟ್ರ ಜೊತೆ ದಿವ್ಯ ಪದವಿಪೂರ್ವ ಶಿಕ್ಷಣ ಮುಗಿಸಲಿದ್ದಾರೆ. All the best DU..

ಭಟ್ರ ಜೊತೆ ಪದವಿಪೂರ್ವ ಕಾಲೇಜಿನಲ್ಲಿ ದಿವ್ಯ ಉರುಡುಗ.! Read More »

ಪದವಿ ಪೂರ್ವ ಶಿಕ್ಷಣ ಪಡೆಯಲು ಬಂದ ದಿವ್ಯಾ ಉರುಡುಗ

ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್‌ರವರ ಜಂಟಿ ನಿರ್ಮಾಣದಲ್ಲಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಚಿತ್ರ “ಪದವಿಪೂರ್ವ”ಕ್ಕೆ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ನಟಿ ‘ದಿವ್ಯ ಉರುಡುಗ’ ಎಂಟ್ರಿ ಕೊಟ್ಟಿದ್ದಾರೆ… ಸಿನಿಮಾದಲ್ಲಿ ದಿವ್ಯ ಅತಿಥಿ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ…ದಿವ್ಯ ನಟಿಸಲಿರುವ ಭಾಗದ ಚಿತ್ರೀಕರಣವು ಬೆಂಗಳೂರು ಹಾಗು ಮಂಗಳೂರಿನ ಸುತ್ತಮುತ್ತ ಶೀಘ್ರದಲ್ಲೇ ಶುರು ಆಗಲಿದ್ದು, ಚಿತ್ರದ ಐದನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ. ಚಿತ್ರದ ನಾಲ್ಕನೇ ಹಂತದ ಚಿತ್ರೀಕರಣವು ಕಳೆದ ತಿಂಗಳಷ್ಷೇ ಪೂರ್ಣಗೊಂಡಿದ್ದು, ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಸಿದ ಚಿತ್ರೀಕರಣದ ದೃಶ್ಯಗಳು ಅತ್ಯಂತ ಸೊಗಸಾಗಿ ಮೂಡಿಬಂದಿದ್ಯಂತೆ… ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಪದವಿಪೂರ್ವ ಚಿತ್ರಕ್ಕಾಗಿ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.. ಯೋಗರಾಜ್ ಭಟ್ ಸಾಹಿತ್ಯ ರಚಿಸಿದರೆ, ಸಂತೋಷ್ ರೈ ಪಾತಾಜೆ ಕ್ಯಾಮೆರಾ‌‌ವರ್ಕ್ ಸಿನಿಮಾಗಿದೆ…

ಪದವಿ ಪೂರ್ವ ಶಿಕ್ಷಣ ಪಡೆಯಲು ಬಂದ ದಿವ್ಯಾ ಉರುಡುಗ Read More »

ಇನ್ಮುಂದೆ ಅಜಿತ್ ಹೆಸರಿನ‌ ಮುಂದೆ “ತಲಾ‌” ಎಂದು ಸೇರಿಸುವಂತಿಲ್ಲ‌ !

ಟಾಲಿವುಡ್ ನ ಸೂಪರ್ ಸ್ಟಾರ್ ತಲಾ ಅಜಿತ್ …ಸೂಪರ್ ಸ್ಟಾರ್ ಆಗಿ ಸಾಕಷ್ಟು ಪ್ರಖ್ಯಾತಿ ಹೊಂದಿದ್ದರು ಕೂಡ ಅಜಿತ್ ಇಂದಿಗೂ ಸಖತ್ ಸರಳವಾಗಿ ಲೈಫ್ ಲೀಡ್ ಮಾಡ್ತಾರೆ ..ಅದಷ್ಟೇ ಅಲ್ಲದೆ ಸಾರ್ವಜನಿಕ ಜೀವನದಲ್ಲಿಯೂ ಕೂಡ ಸಖತ್ ಸಿಂಪಲ್ ಆಗಿ ಕಾಣಿಸಿಕೊಳ್ತಾರೆ …ಅಜಿತ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು ಅಭಿಮಾನಿಗಳು ಹಾಗೂ ಸಿನಿಮಾ ರಂಗದವರಿಗೆ ಶಾಕಿಂಗ್ ನ್ಯೂಸ್ ವೊಂದನ್ನ ಕೊಟ್ಟಿದ್ದಾರೆ… ಹೌದು ಇನ್ನು ಮುಂದೆ ತಲಾ ಅಜಿತ್ ಕೇವಲ ಅಜಿತ್‌ ಆಗಿ ಉಳಿದುಕೊಳ್ಳಲಿದ್ದಾರೆ … •ನಟ ಅಜಿತ್ ಇವತ್ತು ಪ್ರೆಸ್ ನೋಟ್ ರಿಲೀಸ್ ಮಾಡಿದ್ದು ಅದರಲ್ಲಿ ನನ್ನ ಹೆಸರಿಗೂ ಮುಂಚೆ ಯಾವುದೇ ರೀತಿಯ ಬಿರುದುಗಳನ್ನು ಬಳಸಬಾರದೆಂದು ತಮ್ಮ ಅಭಿಮಾನಿಗಳು ಹಾಗೂ ಸಿನಿಮಾರಂಗದ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ… ಇಷ್ಟು ದಿನಗಳ ಕಾಲ ಅಜಿತ್ ತಲಾ ಹಚ್ಚಿ ತಂದಲ್ಲಿ ಪ್ರಖ್ಯಾತಿ ಹೊಂದಿದ್ದರು ಪ್ರತಿ ಸಿನಿಮಾಗಳಲ್ಲಿಯೂ ಹಾಗೂ ಅವರನ್ನು ಅಭಿಮಾನಿಗಳು ತಲಾ ಎಂದೇ ಕರೆಯುತ್ತಿದ್ದರು… ಆದರೆ ಇನ್ನು ಮುಂದೆ ನನ್ನ ಹೆಸರಿನ ಹಿಂದೆ ಆಗಲಿ ಮುಂದೆ ಆಗಲಿ ಯಾವುದೇ ಬಿರುದು ಬೇಡ ಎಂದು ಅಜಿತ್ ಮನವಿ ಮಾಡಿದ್ದಾರೆ … ಅಜಿತ್ ಅಭಿಮಾನಿಗಳು ಕೊಟ್ಟ ಬಿರುದನ್ನು ತಮ್ಮ ಹೆಸರಿನ ಜೊತೆ ಏಕೆ ಬಳಸಬಾರದು ಎಂಬುದಕ್ಕೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ …ಆದರೆ ಮೂಲಗಳ ಪ್ರಕಾರ ಅಜಿತ್ ಸಕತ್ ಸಿಂಪಲ್ ಆಗಿ ಇರಲು ಬಯಸಿದ್ದಾರಂತೆ ಹಾಗಾಗಿ ತಮ್ಮ ಹೆಸರಷ್ಟೇ ಸಾಕು ಅದರ ಮುಂದೆ ಅಗಲಿಕೆಯಿಂದಾಗಿ ಬಿರುದುಗಳು ಬೇಡ ಎಂಬುದು ಅವರ ನಿರ್ಧಾರ ಆಗಿದೆಯಂತೆ …

ಇನ್ಮುಂದೆ ಅಜಿತ್ ಹೆಸರಿನ‌ ಮುಂದೆ “ತಲಾ‌” ಎಂದು ಸೇರಿಸುವಂತಿಲ್ಲ‌ ! Read More »

ಮಗನಿಗೆ ಹೊಸ ಹೆಸರಿಟ್ಟ ಮೇಘನಾ ರಾಜ್ ಸರ್ಜಾ

ಚಿರಂಜೀವಿ ಸರ್ಜಾ‌ ಬಾಗೂ ಮೇಘನಾ‌ರಾಜ್ ಪುತ್ರ ಒಂದು‌ವರ್ಷಕ್ಕೆ ಕಾಲಿಟ್ಟು ಸಾಕಷ್ಟು ದಿನಗಳು ಕಳೆದಿವೆ..ಇದೇ ಸಂಭ್ರಮದಲ್ಲಿ ಮೇಘನಾ ಮಗನಿಗೆ ಅದ್ದೂರಿಯಾಗಿ ಎರಡೂ ಸಂಪ್ರದಾಯದಂತೆ ನಾಮಕರಣ ಮಾಡಿದ್ರು… ಮಗ ಬಂದ ನಂತರ ಜೀವನದ ದಿಕ್ಕೇ ಬದಲಾಗಿರೋ ನಿಟ್ಟಿನಲ್ಲಿ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ರು ಮೇಘನಾ ರಾಜ್…ಆದ್ರೆ ಈಗ ಮೇಘನಾ ತಮ್ಮ ಮಗನಿಗೆ ಮತ್ತೊಂದು ಹೊಸ ಹೆಸರಿಟ್ಟಿದ್ದಾರೆ.. ತನ್ನ ಪುತ್ರನಿಗೆ ಮೇಘನಾ ಮೊಟ್ಟೆ ಬಾಸ್ ಎಂದು ಹೊಸ ಪೆಟ್ ನೇಮ್ ಇಟ್ಟಿದ್ದಾರೆ..ಹೌದು ಇತ್ತೀಚೆಗಷ್ಟೆ ಮೇಘನ ಮಗನಿಗೆ ಮುಡಿ ಕೊಡಿಸಿದ್ದು .ಮುಡಿ ಕೊಟ್ಟ ನಂತರ ಚಿರು ಫೋಟೋ ಮುಂದೆ ಅಮ್ಮ ಮಗ ಇಬ್ಬರು ಫೋಟೋ ತೆಗೆದುಕೊಂಡು ಮೊಟ್ಟೆ ಬಾಸ್ ಎಂದು ಪೋಸ್ಟ್ ಹಾಕಿದ್ದಾರೆ…ಅದ್ರ ಜೊತೆ ಲಿಟಲ್ ರೌಡಿ ಅಂತನೂ ಕರೆದಿದ್ದಾರೆ ಮೇಘನಾ

ಮಗನಿಗೆ ಹೊಸ ಹೆಸರಿಟ್ಟ ಮೇಘನಾ ರಾಜ್ ಸರ್ಜಾ Read More »

ಡಾಲಿ as ಬಡವ ರಾಸ್ಕಲ್ ಭರ್ಜರಿ ಪ್ರಚಾರ.!

ಡಾಲಿ ದನಂಜಯ್ ಎಂದರೆ ಒಂದು expectation ಇಟ್ಕೊಳ್ಳಬಹುದಾದ ಮಟ್ಟಿಗೆ ಬೆಳೆದಿರುವ ನಟ ದನಂಜಯ್ ಮೊದಲ ಬಾರಿಗೆ ನಟನೆ ಹಾಗೂ ನಿರ್ಮಾಣ ಎರಡನ್ನೂ ಮಾಡಿದ್ದಾರೆ. ಡಾಲಿ ಪಿಕ್ಚರ್ ಬ್ಯಾನರ್ ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರವ ಈ ಸಿನಿಮಾಗೆ ಸ್ವತಃ ಜನಗಳು ಆವೇ ಪ್ರಚಾರ ಮಾಡಲು ಶುರು ಮಾಡಿದ್ದಾರೆ.ತರಕಾರಿ ಅಂಗಡಿ, ಬಿಸ್ಕೆಟ್ ಪ್ಯಾಕ್, ದಿನಸಿ ಅಂಗಡಿ ಆಟೋ ಚಾಲಕರು ಇತ್ಯಾದಿ. ಬಡವ ರಾಸ್ಕಲ್ ಸಿನಿಮಾವನ್ನು ಕ್ರಿಸ್ ಮಸ್ ಪ್ರಯುಕ್ತ ಡಿಸೆಂಬರ್ 24ರಂದು ಬಿಡುಗಡೆಮಾಡಲಾಗುತ್ತದೆ. ಜನ ಸಾಮಾನ್ಯರಿಂದಲೇ ಇಷ್ಟು ಪ್ರಚಾರ ಪಡೆಯುತ್ತಿರುವ ಈ ಸಿನಿಮಾ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. Good luck Team ಬಡವ ರಾಸ್ಕಲ್!

ಡಾಲಿ as ಬಡವ ರಾಸ್ಕಲ್ ಭರ್ಜರಿ ಪ್ರಚಾರ.! Read More »

ಕಿಚ್ಚ ಸುದೀಪ್ ಗಾಗಿ ಗುಡಿ ಕಟ್ಟಿದ ಅಭಿಮಾನಿಗಳು!

ಕಿಚ್ಚ ಸುದೀಪ್ ಕನ್ನಡದ ಗಡಿಯಾಚೆಗೂ ಪಡೆದಿರುವ ನಟ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಟಾಲಿವುಡ್ ಕಾಲಿವುಡ್ ಬಾಲಿವುಡ್ ಹಾಗೂ ಹಾಲಿವುಡ್ ನಲ್ಲೂ ನಟಿಸಿ ಸೈ ಎನ್ನಿಸಿಕೊಂಡಿರುವ ಕನ್ನಡದ ಕಲಾವಿದ … ಕನ್ನಡದಲ್ಲಿ ಮಾತ್ರವಲ್ಲದೇ ಅನ್ಯ ಭಾಷೆಯಲ್ಲಿ ಕೂಡ ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ ಸಿನಿಮಾ ಮೂಲಕ ಪ್ರತಿಯೊಬ್ಬರ ನಾ ರಂಜಿಸುತ್ತಾ ಸಮಾಜಸೇವೆಯನ್ನು ಮಾಡುತ್ತಾ ಬಂದಿರುವ ಕಿಚ್ಚ ಸುದೀಪ್ ಗೆ ಈಗ ದೇವಸ್ಥಾನ ನಿರ್ಮಾಣ ಮಾಡಿ ಗೌರವ ಅರ್ಪಿಸುತ್ತಿದ್ದಾರೆ … ರಾಯಚೂರಿನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೂರ್ತಿ ನಿರ್ಮಿಸಿ ಗುಡಿಯೊಂದನ್ನು ಕಟ್ಟುತ್ತಿದ್ದಾರೆ… ಕನ್ನಡದ ನಟನಿಗಾಗಿ ಕಟ್ಟಿದ ಈ ಮೊದಲ ಗುಡಿ ಇದಾಗಿದೆ…ಕಿಚ್ಚ ಸುದೀಪ್ ಗುಡಿಯನ್ನು ಸುದೀಪ್ ಅಭಿಮಾನಿಗಳು ಕಳೆದ ಮೂರು ತಿಂಗಳಿಂದ ನಿರ್ಮಾಣ ಮಾಡುತ್ತಿದ್ದಾರೆ. ಮೊದಲು ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಕುರುಕುಂದ ಗ್ರಾಮದ ಜನರು ವಾಲ್ಮೀಕಿ ಗುಡಿ ಕಟ್ಟಲು ಮುಂದಾಗಿದ್ದರು. ಆ ವೇಳೆ ಕಿಚ್ಚನ ಅಭಿಮಾನಿಗಳು ಕಿಚ್ಚ ಸುದೀಪ್‌ಗೆ ಗುಡಿ ಕಟ್ಟಬೇಕು ಎಂದು ನಿರ್ಧರಿಸಿದ್ದರು. ತಮ್ಮ ಜನಾಂಗದ ನಾಯಕ ನಟನ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅವರಿಗಾಗಿ ಗುಡಿ ನಿರ್ಮಾಣ ಮಾಡೋಣ ಎಂದು ಈಗ ಗುಡಿ ಕಟ್ಟಿದ್ದಾರೆ….12ಲಕ್ಷ ವೆಚ್ಚದಲ್ಲಿ ಗುಡಿ ನಿರ್ಮಾಣ ಮಾಡಿದ್ದು ಗುಡಿಯ ಕಾವಲಿಗೆ ವಾಚ್ ಮ್ಯಾನ್ ಕೂಡ ನೇಮಕ ಮಾಡಿದ್ದಾರೆ ಅಭಿಮಾನಿಗಳು..

ಕಿಚ್ಚ ಸುದೀಪ್ ಗಾಗಿ ಗುಡಿ ಕಟ್ಟಿದ ಅಭಿಮಾನಿಗಳು! Read More »

Scroll to Top