Karnataka Bhagya

Author name: kartik

ಮತ್ತೆ ಸದ್ದು ಮಾಡುತ್ತಿದೆ 9ಕೋಟಿ ವಿಚಾರ ಕಿಚ್ಚನ ಪರ ಮತ್ತೆ ಬ್ಯಾಟ್ ಬೀಸಿದ ಜಾಕ್ ಮಂಜು, ವಾಣಿಜ್ಯ ಮಂಡಳಿಗೆ ಕಿಚ್ಚನ ಅಭಿಮಾನಿಗಳು ಮುತ್ತಿಗೆ ಹಾಕಲಿದ್ದಾರೆ.

ಸುದೀಪ್ ಮೇಲಿನ ಆರೋಪಗಳಿಗೆ ತಾವು ಉತ್ತರಿಸುವುದಾಗಿ ಜಾಕ್ ಮಂಜು ಹೇಳಿದ್ದಾರೆ. ಜೊತೆಗೆ ಸುದೀಪ್ ಅವರ ಅಭಿಮಾನಿಗಳು ಕೂಡ ಇಂದು ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕುವುದಾಗಿ ಸಂದೇಶವನ್ನು ರವಾನಿಸಿದ್ದಾರೆ. ನಿರ್ಮಾಪಕ ಎನ್.ಎಂ. ಕುಮಾರ್ ತಮಗೆ ಸುದೀಪ್ ಕಾಲ್ ಶೀಟ್ ನೀಡುತ್ತಿಲ್ಲವೆಂದು ಆರೋಪ ಮಾಡಿದ್ದರೆ, ನಿನ್ನೆಯಷ್ಟೇ ಮತ್ತೋರ್ವ ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ಅವರಿಂದ ತಮಗೆ ಹಾನಿಯಾಗಿದೆ ಎಂದು ಪತ್ರಿಕಾಗೋಷ್ಠಿ ನಡೆಸಿದ್ದರು.ಜಾಕ್ ಮಂಜು ಮತ್ತೊಂದು ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿದ್ದಾರೆ. ಸುದೀಪ್ ಬಗ್ಗೆ ಆರೋಪ ಮಾಡಿದ ರೆಹಮಾನ್ ಜೊತೆಯಲ್ಲೇ ಪತ್ರಿಕಾಗೋಷ್ಠಿ ಮಾಡುವುದಾಗಿ ತಿಳಿಸಿದ್ದಾರೆ. ತಮ್ಮ ವ್ಯಕ್ತಿತ್ವಕ್ಕೆ ಕುಮಾರ್ ಧಕ್ಕೆ ತರುತ್ತಿದ್ದಾರೆ ಎಂದು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ಬರೋಬ್ಬರಿ 10 ಕೋಟಿ ರೂಪಾಯಿ ಮಾನನಷ್ಟ ಕಟ್ಟಿಕೊಡಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ. ಈ ಎಲ್ಲ ಆರೋಪ ಪ್ರತ್ಯಾರೋಪಕ್ಕೆ ಉತ್ತರ ಎನ್ನುವಂತೆ ಸುದೀಪ್, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಕ್ಕೆ ಪತ್ರ ಬರೆದಿದ್ದಾರೆ. ಯಾವುದೇ ನಿರ್ಮಾಪಕರು, ಯಾರೇ ಕಲಾವಿದರು, ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತೃ ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆಂದು ವಿನಮ್ರತೆಯಿಂದ ಮನವಿ ಮಾಡುತ್ತೇನೆ ಎಂದು ಮಾತೃ ಸಂಸ್ಥೆಗಳಿಗೂ ಕಿಚ್ಚ ಪಾಠ ಮಾಡಿದ್ದಾರೆ. 27 ವರ್ಷಗಳ ಕಾಲ ನಾನೂ ಎಂದಾದರೂ ಒಂದೇ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೇಯೆ. ಆ ನಂಬಿಕೆಯ ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತು ಪಡಿಸಿ, 45 ಸಿನಿಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈವರೆಗೂ ಈ ನಿಮ್ಮ ಪ್ರೀತಿಯ ಸುದೀಪ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನೆ ಹೊರತು ಕೆಟ್ಟತನಕ್ಕಲ್ಲ ಎಂದು ಹೇಳುವ ಮೂಲಕ ತಮಗೂ ನಿರ್ಮಾಪಕರಿಂದ ಬಾಕಿ ಬರಬೇಕಾಗಿದ್ದನ್ನೂ ನೆನಪಿಸಿದ್ದಾರೆ. ಚಿತ್ರರಂಗದ ಭವಿಷ್ಯಕ್ಕೆ ಕೆಟ್ಟ ಉದಾಹರಣೆ ದಕ್ಕಬಾರದು ಅದಕ್ಕೆ ಈ ಕಠಿಣವಾದ ಹೋರಾಟ ಮಾಡುತ್ತಿರುವುದಾಗಿ ಕಿಚ್ಚ ಪತ್ರದಲ್ಲಿ ಬರೆದಿದ್ದಾರೆ. ಯಾರ ಜೀವ ಹೋಗಲೂ ನಾನು ಬದುಕಿನುದ್ದಕ್ಕೂ ಸಾಕ್ಷಿಯಾಗಲಾರೆ ಎಂದು ಹೇಳುವ ಮೂಲಕ ಎನ್.ಎಂ. ಸುರೇಶ್ ಅವರಿಗೂ ಇದೇ ಪತ್ರದಲ್ಲಿ ಉತ್ತರ ನೀಡಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಮತ್ತೆ ಸದ್ದು ಮಾಡುತ್ತಿದೆ 9ಕೋಟಿ ವಿಚಾರ ಕಿಚ್ಚನ ಪರ ಮತ್ತೆ ಬ್ಯಾಟ್ ಬೀಸಿದ ಜಾಕ್ ಮಂಜು, ವಾಣಿಜ್ಯ ಮಂಡಳಿಗೆ ಕಿಚ್ಚನ ಅಭಿಮಾನಿಗಳು ಮುತ್ತಿಗೆ ಹಾಕಲಿದ್ದಾರೆ. Read More »

‘ಹಾಸ್ಟೆಲ್ ಹುಡುಗರು’ ಟೀಸರ್ ಲಾಂಚ್ ಬಿಡುಗಡೆ‌ ಮಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್, ರಿಷಬ್,ರಕ್ಷೀತ್,ದೃವ ಸರ್ಜಾ.

ಪ್ರೋಮೋ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಟ್ರೇಲರನ್ನ ಅಶ್ವಿನಿ ಪುನೀತ್ ರಾಜ್‍ಕುಮಾರ್,ರಿಷಬ್ ಶೆಟ್ಟಿ, ರಕ್ಷೀತ್ ಶೆಟ್ಟಿ, ಧೃವ ಸರ್ಜಾ ರಿಲೀಸ್ ಮಾಡಿ ತಂಡಕ್ಕೆ ಹಾರೈಸಿದರು. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಎಂಬ ಭಿನ್ನ ಟೈಟಲ್ ಮೂಲಕ ಸಿನಿಮಾ ತಂಡ ಗಮನ ಸೆಳೆಯುತ್ತಿದೆ. ಈಗಾಗಲೇ ಹಾಸ್ಟೆಲ್ ಹುಡುಗರು ಊರಿಗೆಲ್ಲಾ ಫೇಮಸ್ ಆಗಿದ್ದಾರೆ. ಅಲ್ಲದೆ ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ದಿಗಂತ್ ಅಂತಹ ಕನ್ನಡ ತಾರೆಯರು ನಟಿಸಿದ್ದಾರೆ. ಅಪ್ಪು, ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್, ರಮ್ಯಾ, ಸೂಪರ್‌ಸ್ಟಾರ್‌ಗಳೆಲ್ಲರೂ ಹೊಸಬರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನಿತೀನ್ ನಿರ್ದೇಶಕ- ಈ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇನಾಗುರೇಟ್ ಮಾಡಿದ್ದೇ ಅಪ್ಪು ಸರ್. ಸುಮಾರು 2ವರ್ಷಗಳ ಕಾಲ ಸಮಯ ಕಳೆದಿದ್ದೇವೆ ಈ ಸಿನಿಮಾ ನಿರ್ಮಾಕ್ಕಾಗಿ.ಸುಮಾರು ಸಾವಿರಕ್ಕು ಹೆಚ್ಚು ಜನ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಹೊಸ ತಂಡಕ್ಕೆ ಸಾಕಷ್ಟು ಸಹಾತ ಮಾಡಿದಂತಹ ಅಶ್ವೀನಿ ಪುನೀತ್ ರಾಜ್‍ಕುಮಾರ್, ರಕ್ಷೀತ್ ಶೆಟ್ಟಿ, ರಿಷಬ್ ಶೆಟ್ಟಿ,ದೃವ ಸರ್ಜಾ ಸರ್ ಗೆ ಧನ್ಯವಾದ ತಿಳಿಸುತ್ತೇನೆ. ಪ್ರಮೋದ್ ಶೆಟ್ಟಿ- ಈ ಸಿನಿಮಾ ತಂಡದಲ್ಲಿ ಅರ್ಧಕ್ಕೆ ಅರ್ಧ ಜನ ನನ್ನ ರಂಗಸೌರಭ ತಂಡದವರೆ ಇದ್ದಾರೆ. ಕಿರೀಕ್ ಪಾರ್ಟಿ ಸಿನಿಮಾ ಹೇಗೆ ಹಿಟ್ ಆಯ್ತೋ ಹಾಗೆ ಈ ಸಿನಿಮಾ ಕೂಡ ಹಿಟ್ ಆಗಲಿದೆ. ರಕ್ಷೀತ್ ಶೆಟ್ಟಿ- ಅಪ್ಪು ಸರ್ ಏನೆ ಶುರು ಮಾಡಿದ್ರು ಅದು ಅಧ್ಭುತವಾದ ರಿಸಲ್ಟ್ ಕೊಡುತ್ತೆ. ಈ ಸಿನಿಮಾಗೆ ಮೊದಲು ವಿಶ್ ಮಾಡಿದ್ದೇ ಅಪ್ಪು ಸರ್.ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಸಾಕಷ್ಟು ವಿಷಯಗಳು ಜನರಿಗೆ ಹಿಡಿಸುತ್ತೆ. ಚಿಕ್ಕ ಬಜೆಟ್ ನಲ್ಲಿ ಸಿನಿಮಾ ಸಖತ್ ಮೂಡಿಬಂದಿದೆ.ಲೂಸಿಯಾ ಸಿನಿಮಾದಲ್ಲಿ ಕೆಲಸ ಮಾಡಿದವರು ಈ ಸಿನಿಮಾದಲ್ಲಿ ಇದ್ದಾರೆ‌. ಇವರೆಲ್ಲ ಕನ್ನಡ ಇಂಡಸ್ಟ್ರೀಯ ಫ್ಯೂಚರ್ ಸ್ಟಾರ್ ಗಳು.ಸಿನಿಮಾದಲ್ಲಿ ಸಾಕಷ್ಟು ತರಲೆ ಡೈಲಾಗ್ ಇವೆ.ಇಡೀ ಪ್ಯಾಮೀಲಿ ಕೂತು ನೋಡುವಂತಹ ಸಿನಿಮಾ ಇದಾಗಿದೆ. ರಿಷಬ್ ಶೆಟ್ಟಿ-ಹಾಸ್ಟೆಲ್ ದಿನವನ್ನ ನೆನಪಿಸುವ ಸಿನಿಮಾ ಇದು. ನನ್ನ ಶಿಷ್ಯರೆ ಮಾಡಿರುವಂತಹ ಸಿನಿಮಾ ಹಾಸ್ಟೆಲ್ ಹುಡುಗರು. ಹರಿಕಥೆ ಗಿರಿಕಥೆ ಸಿನಿಮಾ ಮಾಡುವಾಗ ನನಗೆ ಗೆಸ್ಟ್ ರೋಲ್ ಗೆ ಕರೆ ಬಂದಿತ್ತು. ತುಂಬಾ ಅಧ್ಭುತವಾದ ತಂಡ ಇದು.ಕಾಂತಾರ ಸಿನಿಮಾ ಶುರುವಾಗುವುದಕ್ಕು ಮುಂಚೆ ಶುರುವಾದ ಸಿನಿಮಾ ಹಾಸ್ಟೆಲ್ ಹುಡುಗರು.ಅತೀ ಹೆಚ್ಚು ಪ್ರೋಮೋ ಇರುವ ಏಕೈಕ ಸಿನಿಮಾ. ಹಾಸ್ಟೆಲ್ ಲೈಫನ್ನ ಮತ್ತೆ ಮರುಕಳಿಸುವ ಸಿನಿಮಾ. ನಾನು ತುಂಬಾ ಇಷ್ಟಪಟ್ಟು ಈ ಸಿನಿಮಾದಲ್ಲಿ ನಟಿಸಿದ್ದೇನೆ.ಸಿನಿಮಾ ಸಾಕಷ್ಟು ಮಟ್ಟದಲ್ಲಿ ದೊಡ್ಡ ಹೆಸರು ಮಾಡುತ್ತೆ. ದೃವ ಸರ್ಜಾ- ಈ ಸಿನಿಮಾದ ಟ್ರೇಲರ್ ‌ನೋಡಿದ ಮೇಲೆ ನನಗೆ ನೆನಪಿಗೆ ಬಂದದ್ದು ನಮ್ ಅಣ್ಣ ನಾನು ನಮ್ ಅಣ್ ಇಬ್ಬರು -6-7 ವರ್ಷಗಳ ಕಾಲ ಹಾಸ್ಟೆಲ್ ಲಿ ಇದ್ದದ್ದು. ಸಾಕಷ್ಟು ಗೆಳೆಯರನ್ನ ಮಿಸ್ ಮಾಡ್ಕೊಳ್ತಾ ಇದೀನಿ. ಆ ಒಂದು ಗೆಳೆತನ ನೆನಪಾಗ್ತಿದೆ.ಹಾಸ್ಟೆಲ್ ನಲ್ಲಿ ಸಾಕಷ್ಟು ತರ್ಲೆ ಮಾಡಿರ್ತೇವೆ‌, ಒಟ್ನಲ್ಲಿ ಈ ಸಿನಿಮಾಗೆ ಒಳ್ಳೆಯದಾಗಲಿ. ಸಿನಿ ದುನಿಯಾದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಮೋಡಿ ಮಾಡುತ್ತಲೇಯಿದೆ. ಚಿತ್ರಕ್ಕೆ ರಮ್ಯಾ, ದಿಗಂತ್ ಸಾಥ್ ನೀಡಿದ್ದಾರೆ. ದಿಗಂತ್ ಟೀಸರ್ ಮೂಲಕ ಗಮನ ಸೆಳೆದಿದ್ದಾರೆ. ಹಾಸ್ಟೆಲ್ ಹುಡುಗರ ಜೊತೆ ದೂದ್ ಪೇಡಾ ದಿಗಂತ್ ಸಾಥ್ ನೀಡಿದ್ದು, ಕಪ್ಪು ಕಪ್ಪಾಗಿರೋ ಸಿನಿಮಾ ಬಗ್ಗೆ ಸಖತ್ ಡೈಲಾಗ್ ಬಿಟ್ಟಿದ್ದಾರೆ. ಆದರೆ ದಿಗಂತ್ ರೋಲ್ ಬಗ್ಗೆ ಹಿಂಟ್ ಬಿಟ್ಟುಕೊಟ್ಟಿಲ್ಲ. ದಿಗಂತ್ ಲುಕ್ ಮ್ಯಾನರಿಸಂ, ಡೈಲಾಗ್ ಡಿಲೆವರಿ ಎಲ್ಲವೂ ಮಜವಾಗಿದೆ. ಈಗೆಲ್ಲ ಕಪ್ಪು ಕಪ್ಪಾಗಿರೋದೇ ಟ್ರೆಂಡ್.. ಆಗಲೇ ಜನ ಥಿಯೇಟರ್‌ಗೆ ಬರೋದು ಅಂತ ಹೇಳಿರೋ ಡೈಲಾಗ್ ಸಿನಿಪ್ರಿಯರಿಗೆ ಖುಷಿ ಕೊಟ್ಟಿದೆ. ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮಂಸ್ ಬ್ಯಾನರ್ ನಡಿ ಪ್ರಜ್ವಲ್ ಬಿ.ಪಿ. ವರುಣ್ ಕುಮಾರ್ ಗೌಡ , ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಪ್ರತಿ ಬಾರಿ ಯುನಿಕ್ ಕಾನ್ಸೆಪ್ಟ್ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರ ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

‘ಹಾಸ್ಟೆಲ್ ಹುಡುಗರು’ ಟೀಸರ್ ಲಾಂಚ್ ಬಿಡುಗಡೆ‌ ಮಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್, ರಿಷಬ್,ರಕ್ಷೀತ್,ದೃವ ಸರ್ಜಾ. Read More »

ಪುರಿ ಜಗನ್ನಾಥ್ ಹಾಗೂ ರಾಮ್ ಪೋತಿನೇನಿ ಸಿನಿಮಾದ ಅಪ್ ಡೇಟ್…ಸೆಟ್ಟೇರಿದ ಡಬಲ್ ಇಸ್ಮಾರ್ಟ್….2024ರ ಶಿವರಾತ್ರಿಗೆ ಚಿತ್ರ ರಿಲೀಸ್.

ಉಸ್ತಾದ್ ರಾಮ್ ಪೋತಿನೇನಿ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಮತ್ತೊಮ್ಮೆ ಒಂದಾಗಿರುವುದು ಗೊತ್ತೇ ಇದೆ. ಇಸ್ಮಾರ್ಟ್ ಶಂಕರ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಡೆಡ್ಲಿ ಕಾಂಬಿನೇಷನ್ ನಾಲ್ಕು ವರ್ಷದ ಬಳಿಕ ಸೀಕ್ವೆಲ್ ಗೆ ಕೈ ಹಾಕಿದ್ದಾರೆ. ರಾಮ್ ಹುಟ್ಟುಹಬ್ಬದ ಪ್ರಯುಕ್ತ ಟೈಟಲ್ ಹಾಗೂ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಇಂದು ಹೈದ್ರಾಬಾದ್ ನಲ್ಲಿ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿಸಲಾಗಿದೆ. ಚಾರ್ಮಿ ಡಬಲ್ ಇಸ್ಮಾರ್ಟ್ ಸಿನಿಮಾಗೆ ಕ್ಲಾಪ್ ಮಾಡಿದರೆ, ನಿರ್ದೇಶಕ ಪುರಿ ಜಗನ್ನಾಥ್ ಮೊದಲ ಶಾಟ್ ಗೆ ಆಕ್ಷನ್ ಕಟ್ ಹೇಳಿದರು. ಡಬಲ್ ಮಾಸ್ ಹಾಗೂ ಡಬಲ್ ಮನರಂಜನೆ ನೀಡಲು ಸಜ್ಜಾಗಿರುವ ಪುರಿ ಜಗನ್ನಾಥ್ ಡಬಲ್ ಇಸ್ಮಾರ್ಟ್ ಸಿನಿಮಾದ ಶೂಟಿಂಗ್ ಇದೇ ತಿಂಗಳ 12ರಿಂದ ಶುರುವಾಗಲಿದೆ. ಮುಂದಿನ ವರ್ಷ ಅಂದ್ರೆ 2024‌ ಮಾರ್ಚ್ 8 ರಂದು ಶಿವರಾತ್ರಿ ಹಬ್ಬಕ್ಕೆ ಈ ಚಿತ್ರ ತೆರೆಗೆ ಬರಲಿದೆ. ಪುರಿ ಜಗನ್ನಾಥ್ ಕಥೆ ಬರೆದು ನಿರ್ದೇಶಿಸುತ್ತಿರುವ ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ಸ್ ನಡಿ ಚಾರ್ಮಿ ಕೌರ್ ಹಾಗೂ ಪುರಿ ಜಗನ್ನಾಥ್ ನಿರ್ಮಿಸುತ್ತಿದ್ದಾರೆ. ಲೈಗರ್ ಸಿನಿಮಾದಲ್ಲಿ ಖಳನಾಯಕ ಘರ್ಜಿಸಿದ್ದ ವಿಷು ರೆಡ್ಡಿ ಪುರಿ ಕನೆಕ್ಟ್ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಭಾರೀ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ. ಮುಂದಿನ ವರ್ಷದ ಶಿವರಾತ್ರಿ ಹಬ್ಬಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ‌ ಮಲಯಾಳಂ ಭಾಷೆಯಲ್ಲಿ ಮೂಡಿ ಬರಲಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಪುರಿ ಜಗನ್ನಾಥ್ ಹಾಗೂ ರಾಮ್ ಪೋತಿನೇನಿ ಸಿನಿಮಾದ ಅಪ್ ಡೇಟ್…ಸೆಟ್ಟೇರಿದ ಡಬಲ್ ಇಸ್ಮಾರ್ಟ್….2024ರ ಶಿವರಾತ್ರಿಗೆ ಚಿತ್ರ ರಿಲೀಸ್. Read More »

ಟಾಪ್ ಲೆಸ್ ವಿಡಿಯೋದಲ್ಲಿ ಕನ್ನಡದ ನಟಿ, ಕಾಂಟ್ರವರ್ಸಿಯಿಂದ ಈಕೆ ಫೇಮಸ್…

ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾದ ನಟಿ ಸಂಯುಕ್ತ ಹೆಗ್ಡೆ, ಸಿನಿಮಾ ಮಾತ್ರವಲ್ಲದೆ ಸಂಯುಕ್ತ ಕನ್ನಡ, ಹಿಂದಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಕೂಡಾ ಹೆಸರು ಮಾಡಿದ್ದಾರೆ, ಜೊತೆಗೆ ಫಿಟ್ನೆಸ್‌ನತ್ತ ಕೂಡಾ ಹೆಚ್ಚು ಗಮನ ನೀಡುತ್ತಾರೆ. ಇತ್ತೀಚಿಗೆ ನಟಿಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ ಸದಾ ಕಾಂಟ್ರವರ್ಸಿಯಿಂದಲೇ ಫೇಮಸ್ ಆಗುತ್ತಿರುವ ನಟಿ ಈ ಬಾರಿ ಟಾಪ್ ಲೆಸ್ ವಿಡಿಯೋ ಒಂದನ್ನ ಶೇರ್ ಮಾಡಿದ್ದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಿಮ್ಮ ದೇಹ ನಿಮ್ಮ ಆಸ್ತಿ ಅಂತಾ ಸಂಯುಕ್ತ ಹೆಗ್ಡೆಸಂಯುಕ್ತ ಹೆಗ್ಡೆ ಸಿನಿಮಾಗಳ ವಿಚಾರಕ್ಕಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ತಾವು ಧರಿಸುವ ಬಟ್ಟೆಗಳಿಂದಲೇ ವಿವಾದಕ್ಕೆ ಒಳಗಾಗುತ್ತಾರೆ. ಇದೀಗ ಸಂಯುಕ್ತ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದು ಇದಕ್ಕೆ ಪರ ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ. ಸಂಯುಕ್ತ ಟಾಪ್‌ಲೆಟ್‌ ಆಗಿ ದೇಹ ಪ್ರದರ್ಶನ ಮಾಡಿದ್ದಾರೆ. ಸಂಯುಕ್ತ ಬಾಡಿ ನೋಡಿ ಹಲವರು ಶಾಕ್‌ ಆಗಿದ್ದಾರೆ. ಹುಡುಗರಂತೆ ಬಾಡಿ ಬಿಲ್ಡ್‌ ಮಾಡಿರುವ ಸಂಯುಕ್ತ ನಿಮ್ಮ ದೇಹವೇ ನಿಮ್ಮ ಆಸ್ತಿ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ನೀವು ಯಾವುದೇ ಸಾಮಾಜಿಕ ಮಾನದಂಡಗಳ ಮಾಲೀಕತ್ವ ಹೊಂದಿಲ್ಲ, ಮಹಿಳೆಯರಾಗಿ ನಾವು ಸ್ಟ್ರಾಂಗ್‌ ಆಗಿರಬೇಕು, ಸ್ವತಂತ್ಯ್ರಳಾಗಿ, ಆತ್ಮವಿಶ್ವಾಸದಿಂದ ಇರಬೇಕು ಎಂದು ಸಂಯುಕ್ತ ಬರೆದುಕೊಂಡಿದ್ದಾರೆ. ಕೆಲವರು ಹೆಣ್ಣಾಗಿ ಈ ರೀತಿ ನಿಮ್ಮ ದೇಹ ಪ್ರದರ್ಶಿಸುವ ಅಗತ್ಯವಿರಲಿಲ್ಲ, ಜನರ ಗಮನ ಸೆಳೆಯಲು ನೀವು ಮಾಡ್ತಿರೋ ಗಿಮಿಕ್‌ ಅಷ್ಟೇ ಎನ್ನುತ್ತಿದ್ದಾ 2020 ರಲ್ಲಿ ಬೆಂಗಳೂರಿನ ಪಾರ್ಕ್‌ವೊಂದರಲ್ಲಿ ಸಮಯುಕ್ತ ತಮ್ಮ ಸಂಗಡಿಗರೊಂದಿಗೆ ಹುಲಾ ಹೂಪ್ಸ್‌ ಅಭ್ಯಾಸ ಮಾಡುತ್ತಿದ್ದ ವೇಳೆ ಅವರ ಡ್ರೆಸ್‌ ಬಗ್ಗೆ ವಿರೋಧ ವ್ಯಕ್ತಪಡಿಸಿ ಮಹಿಳೆಯೊಬ್ಬರೊಂದಿಗೆ ಕಿರಿಕ್‌ ಮಾಡಿಕೊಂಡಿದ್ದರು. ರಿಷಬ್‌ ಶೆಟ್ಟಿ ನಿರ್ದೇಶನದ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಸಂಯುಕ್ತ ತೆಲುಗು, ತಮಿಳು ಸಿನಿಮಾಗಳಲ್ಲೇ ಹೆಚ್ಚು ಬ್ಯುಸಿ ಆಗಿದ್ದರು ಇತ್ತೀಚೆಗೆ ತೆರೆ ಕಂಡ ತುರ್ತು ನಿರ್ಗಮನ ಸಿನಿಮಾದಲ್ಲಿ ಸಂಯುಕ್ತ ನಟಿಸಿದ್ದಾರೆ. ಅವರು ನಟಿಸಿರುವ ಕ್ರೀಮ್‌ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು ಶೀಘ್ರವೇ ತೆರೆ ಕಾಣಲಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಟಾಪ್ ಲೆಸ್ ವಿಡಿಯೋದಲ್ಲಿ ಕನ್ನಡದ ನಟಿ, ಕಾಂಟ್ರವರ್ಸಿಯಿಂದ ಈಕೆ ಫೇಮಸ್… Read More »

ಈಗೆಲ್ಲಾ‌ ಬ್ಲಾಕ್/ ವೈಟ್ ಇದ್ರೆ ಸಿನಿಮಾ ಓಡುತ್ತೆ, ಅದೇ ಈಗ ಟ್ರೆಂಡ್, ಹಾಸ್ಟೆಲ್ ಹುಡುಗರ ಜೊತೆ ದೂದ್ ಪೇಡ ದಿಗಂತ್

ಡೇರ್ ಡೆವಿಲ್ ಮುಸ್ತಫಾ ಯಶಸ್ಸಿನ ಬೆನ್ನಲ್ಲೆ ದೊಡ್ಡ ದೊಡ್ಡ ಸ್ಟಾಟ್ ಗಳೆ ಹಾಸ್ಟೆಲ್ ಹುಡುಗರಿಗೆ ಸಾಥ್ ನೀಡಿದ್ದಾರೆ. ಸಿನಿ ದುನಿಯಾದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಮೋಡಿ ಮಾಡುತ್ತಲೇಯಿದೆ. ಚಿತ್ರಕ್ಕೆ ರಮ್ಯಾ, ದಿಗಂತ್ ಸಾಥ್ ನೀಡಿದ್ದಾರೆ. ದಿಗಂತ್ ಟೀಸರ್ ಮೂಲಕ ಗಮನ ಸೆಳೆದಿದ್ದಾರೆ. ಈ ಬೆನ್ನಲ್ಲೇ ಚಿತ್ರದ ಟ್ರೈಲರ್‌ ರಿಲೀಸ್‌ಗೆ ಕೌಂಟ್ ಡೌನ್ ಶುರುವಾಗಿದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಎಂಬ ಭಿನ್ನ ಟೈಟಲ್ ಮೂಲಕ ಸಿನಿಮಾ ತಂಡ ಗಮನ ಸೆಳೆಯುತ್ತಿದೆ. ಈಗಾಗಲೇ ಹಾಸ್ಟೆಲ್ ಹುಡುಗರು ಊರಿಗೆಲ್ಲಾ ಫೇಮಸ್ ಆಗಿದ್ದಾರೆ. ಅಲ್ಲದೆ ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ದಿಗಂತ್ ಅಂತಹ ಕನ್ನಡ ತಾರೆಯರು ನಟಿಸಿದ್ದಾರೆ. ಅಪ್ಪು, ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್, ರಮ್ಯಾ, ಸೂಪರ್‌ಸ್ಟಾರ್‌ಗಳೆಲ್ಲರೂ ಹೊಸಬರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಸ್ಟೆಲ್ ಹುಡುಗರ ಜೊತೆ ದೂದ್ ಪೇಡಾ ದಿಗಂತ್ ಸಾಥ್ ನೀಡಿದ್ದು, ಕಪ್ಪು ಕಪ್ಪಾಗಿರೋ ಸಿನಿಮಾ ಬಗ್ಗೆ ಸಖತ್ ಡೈಲಾಗ್ ಬಿಟ್ಟಿದ್ದಾರೆ. ಆದರೆ ದಿಗಂತ್ ರೋಲ್ ಬಗ್ಗೆ ಹಿಂಟ್ ಬಿಟ್ಟುಕೊಟ್ಟಿಲ್ಲ. ದಿಗಂತ್ ಲುಕ್ ಮ್ಯಾನರಿಸಂ, ಡೈಲಾಗ್ ಡಿಲೆವರಿ ಎಲ್ಲವೂ ಮಜವಾಗಿದೆ. ಈಗೆಲ್ಲ ಕಪ್ಪು ಕಪ್ಪಾಗಿರೋದೇ ಟ್ರೆಂಡ್.. ಆಗಲೇ ಜನ ಥಿಯೇಟರ್‌ಗೆ ಬರೋದು ಅಂತ ಹೇಳಿರೋ ಡೈಲಾಗ್ ಸಿನಿಪ್ರಿಯರಿಗೆ ಖುಷಿ ಕೊಟ್ಟಿದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಹಾಡು, ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಬೆನ್ನಲ್ಲೇ ಟ್ರೈಲರ್ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಇದೇ ಜುಲೈ 10ರಂದು ಸಂಜೆ 6 ಗಂಟೆಗೆ ಸಿನಿಮಾ ಟ್ರೈಲರ್ ರಿಲೀಸ್ ಆಗಲಿದೆ. ಇದನ್ನು ದಿಗಂತ್ ವಿಡಿಯೋ ಮೂಲಕವೇ ಅನೌನ್ಸ್ ಮಾಡಲಾಗಿದೆ. ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ಟೀಸರ್ ಕಾರ್ಯಕ್ರಮ ಆಯೋಜಿಸಿದ್ದು, ಮುಖ್ಯ ಅತಿಥಿಗಳಾಗಿ ಅಶ್ವಿನಿ ಪುನೀತ್‌ರಾಜ್‌ಕುಮಾರ್, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಆಗಮಿಸುತ್ತಿದ್ದಾರೆ. ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮಂಸ್ ಬ್ಯಾನರ್ ನಡಿ ಪ್ರಜ್ವಲ್ ಬಿ.ಪಿ. ವರುಣ್ ಕುಮಾರ್ ಗೌಡ , ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಪ್ರತಿ ಬಾರಿ ಯುನಿಕ್ ಕಾನ್ಸೆಪ್ಟ್ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರ ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಈಗೆಲ್ಲಾ‌ ಬ್ಲಾಕ್/ ವೈಟ್ ಇದ್ರೆ ಸಿನಿಮಾ ಓಡುತ್ತೆ, ಅದೇ ಈಗ ಟ್ರೆಂಡ್, ಹಾಸ್ಟೆಲ್ ಹುಡುಗರ ಜೊತೆ ದೂದ್ ಪೇಡ ದಿಗಂತ್ Read More »

ಮುಂದಿನ‌ ಸಿನಿಮಾ ಬಗ್ಗೆ ಕ್ಲೂ ಕೊಟ್ಟ ರಾಕಿಭಾಯ್,ಸದ್ಯದಲ್ಲೇ ಮಾಸ್ ಸಿನಿಮಾ ಹೆಸರು ಅನೌನ್ಸ್..!

ಮಲೇಷ್ಯಾದಲ್ಲಿ ಹೊಸ ಸಿನಿಮಾದ ಕುರಿತು ಮಾತನಾಡಿರುವ ಯಶ್, ‘ದೊಡ್ಡ ಸಿನಿಮಾವನ್ನು ಮಾಡುತ್ತೇನೆಂದು‌ ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಅಪ್ ಡೇಟ್ ನೀಡಿದ್ದಾರೆ ಸದ್ಯದಲ್ಲೇ ಮಾಸ್ ಸಿನಿಮಾ ಕುರಿತು ಮಾಹಿತಿ ನೀಡುತ್ತೇನೆ’ ಎಂದು ಮಾತನಾಡಿದ್ದಾರೆ. ಗೆಳೆಯರೊಂದಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಯಶ್, ಮಲೇಷ್ಯಾದಲ್ಲಿ ಚಿನ್ನದ ಅಂಗಡಿಯೊಂದರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ಇಬ್ಬರು ಮಕ್ಕಳು ಹಾಗೂ ಯಶ್ ಅವರ ತಂದೆ-ತಾಯಿ ಇರುವಂತಹ ಗ್ರೂಪ್ ಫೋಟೋವನ್ನು ಪ್ರಸಿದ್ಧ ಕಲಾವಿದರ ಜೊತೆ ಪೇಟಿಂಗ್ ಮಾಡಿಸಿ, ಉಡುಗೊರೆಯಾಗಿ ನೀಡಿದ್ದಾರೆ. ಆ ಫೋಟೋವನ್ನು ಅವರೇ ಬಿಡುಗಡೆಗೊಳಿಸಿ ಬೆರಗಿನಿಂದ ನೋಡಿದರು ಯಶ್. ಆ ವಿಡಿಯೋ ಕೂಡ ವೈರಲ್ ಆಗಿದೆ. ಬೆಂಗಳೂರಿನಿಂದ ಹೊರಟ ವಿಶೇಷ ವಿಮಾನದಲ್ಲಿ ಪಾನಿಪುರಿ ಕಿಟ್ಟಿ (Panipuri Kitty) ಸೇರಿದಂತೆ ಹಲವರು ಇದ್ದಾರೆ. ಮಲೇಷ್ಯಾಗೆ ಬಂದಿಳಿದಿದ್ದ ತಮ್ಮ ನೆಚ್ಚಿನ ನಟನನ್ನು ನೋಡುವುದಕ್ಕಾಗಿ ಅಲ್ಲಿನ ಅಭಿಮಾನಿಗಳು ಕಾಯುತ್ತಿದ್ದರು ಎನ್ನುತ್ತಾರೆ ಯಶ್ ಆಪ್ತರು. ಚಿನ್ನದ ಅಂಗಡಿ ಉದ್ಘಾಟನೆಯ ನಂತರ ಮುಂದಿನ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡದೇ ಇದ್ದರೂ, ಕಾರ್ಯಕ್ರಮದ ನಂತರ ಫ್ಯಾನ್ಸ್ ಭೇಟಿ ಮಾಡುವುದು ಖಚಿತ ಎಂದಿದ್ದರು. ಹಾಗೆಯೇ ಯಶ್ ಅಭಿಮಾನಿಗಳನ್ನೂ ಭೇಟಿ ಮಾಡಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಮುಂದಿನ‌ ಸಿನಿಮಾ ಬಗ್ಗೆ ಕ್ಲೂ ಕೊಟ್ಟ ರಾಕಿಭಾಯ್,ಸದ್ಯದಲ್ಲೇ ಮಾಸ್ ಸಿನಿಮಾ ಹೆಸರು ಅನೌನ್ಸ್..! Read More »

ಜುಲೈ 21ಕ್ಕೆ ತೆರೆಗೆ ಬರ್ತಿದೆ ಹೊಸಬರ ‘ನಿಮ್ಮೆಲ್ಲರ ಆರ್ಶೀರ್ವಾದ’..ಯುವ ಸಿನಿಮೋತ್ಸಾಹಿಗಳ ಮೇಲೆ ಇರಲಿ ನಿಮ್ಮ ಆಶೀರ್ವಾದ

ಕನ್ನಡದಲ್ಲೀಗ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾ ನಿಮ್ಮೆಲ್ಲರ ಆಶೀರ್ವಾದ. ವರುಣ್ ಸಿನಿ ಕ್ರಿಯೇಷನ್ ಮೊದಲ ಪ್ರಯತ್ನದ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಯುವ ಸಿನಿ ಸಿನಿಮೋತ್ಸಾಹಿಗಳೇ ಸೇರಿಕೊಂಡು ತಯಾರಿಸಿರುವ ನಿಮ್ಮೆಲ್ಲರ ಆಶೀರ್ವಾದ ಜುಲೈ 21ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಚಿತ್ರರಂಗದ ಮೇಲಿನ ಅಪಾರ ಅಭಿಮಾನ ಹಾಗೂ ಆಸಕ್ತಿಯಿಂದಾಗಿ ವರುಣ್ ಹೆಗ್ಡೆ ಈ ಸಿನಿಮಾ ನಿರ್ಮಾಣ ಮಾಡಿದ್ದು, ಇದು ಇವರ ಮೊದಲ ಕನಸು..ಈ ಬಗ್ಗೆ ಚಿತ್ರತಂಡ ಮಾಧ್ಯಮದವರೊಟ್ಟಿಗೆ ಒಂದಷ್ಟು ವಿಷಯವನ್ನು ಹಂಚಿಕೊಂಡಿದೆ. ನಿರ್ಮಾಪಕರಾದ ವರುಣ್ ಹೆಗ್ಡೆ ಮಾತನಾಡಿ, ನನ್ನ ಸ್ನೇಹಿತ ಕತೆ ಬರೆಯುತ್ತಿದ್ದ, ಕತೆ ಕೇಳಿ ಖುಷಿ ಆಯ್ತು. ಕೊರೋನಾ ಬಂದು ಎಲ್ಲಾ ಜೀವನದ ಮೇಲೆ ಪರಿಣಾಮ ಬೀರಿತು. ಜನರಿಗೆ ಎಂಟರ್ಟೈನ್ಮೆಂಟ್ ಈ ಸಿನಿಮಾ ಹಾಸ್ಯಸ್ಪದ ರೀತಿಯಲ್ಲಿ ಬರೆಯಲಾಗಿದೆ. ಈ ಚಿತ್ರವನ್ನು ಒಂದೊಳ್ಳೆ ಟೈಮ್ ಗೆ ತಂದು ಒಪ್ಪಿಸಬೇಕು ಎಂದುಕೊಂಡಿದ್ದೆವು. ಇದೊಂದು ಫ್ಯಾಮಿಲಿ ಎಂಟರ್ ಟೈನರ್. ನನ್ನ ಹಾಗು ನಿರ್ದೇಶಕನ ಸ್ನೇಹಕ್ಕಿಂತ ಕತೆ ನನಗೆ ಇಷ್ಟವಾಯ್ತು. ಹೀಗಾಗಿ ನಿಮ್ಮೆಲ್ಲರ ಆಶೀರ್ವಾದ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ರವಿಕಿರಣ್‌ ಮಾತನಾಡಿ, ಸುಂದರ-ಸರಳ ಕತೆಯನ್ನು ಎಣೆದಿದ್ದೇವೆ. ಪ್ರತಿಯೊಬ್ಬರಿಗೂ ಸಿನಿಮಾ ಇಷ್ಟಪಡಬೇಕು. ಅರ್ಥ ಮಾಡಿಕೊಳ್ಳಬೇಕು ಎಂಬ ರೀತಿಯಲ್ಲಿ ಸಿನಿಮಾ ಮಾಡಿದ್ದೇವೆ. ಇತ್ತೀಚೆಗಿನ ವರ್ಷಗಳಲ್ಲಿ ತುಂಬಾ ಜಾನರ್ ಗಳ ಬಗ್ಗೆ ಯೋಚನೆ ಮಾಡುತ್ತಿದ್ದೆ. ಫ್ಯಾಮಿಲಿ ಡ್ರಾಮಾ ಇದ್ದಾವೆ. ಆದ್ರೆ ಮೊದಲಿನಿಂದ ಕೊನೆತನಕ ಸಿಂಪಲ್ ಆಗಿ ಎಂಟರ್ ಟೈನ್ ಡ್ರಾಮಾಗಳು ಇತ್ತೀಚೆಗೆ ಕಡಿಮೆಯಾಗಿವೆ ಎಂದು ಈ ಕತೆ ಬರೆದಿದ್ದೇವೆ. ಈಗ ಸಿನಿಮಾ ರಿಲೀಸ್ ಹಂತದಲ್ಲಿದೆ. ಇಡೀ ಫ್ಯಾಮಿಲಿ ಕುಳಿತುಕೊಂಡು ನೋಡುವ ಚಿತ್ರ ಇದಾಗಿದ್ದು, ಇದೇ ಜುಲೈ 21ಕ್ಕೆ ತೆರೆಗೆ ಬರ್ತಿದೆ. ಈ ಚಿತ್ರದ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು. ಕೌಟುಂಬಿಕ ಕಥಾಹಂದರದ ನಿಮ್ಮೆಲ್ಲರ ಆಶೀರ್ವಾದ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ದಿನಚರಿಯನ್ನು ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಈ ಚಿತ್ರದ ಮೂಲಕ ಪ್ರತೀಕ್‌ ಶೆಟ್ಟಿ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದು, ಭಿನ್ನ ಸಿನಿಮಾ ಖ್ಯಾತಿಯ ಪಾಯಲ್‌ ರಾಧಾಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಎಂ. ಎನ್‌.ಲಕ್ಷ್ಮೀದೇವಿ, ಅರವಿಂದ ಬೋಳಾರ್‌, ಗೋವಿಂದೇಗೌಡ, ಸ್ವಾತಿ ಗುರುದತ್‌, ದಿನೇಶ್‌ ಮಂಗಳೂರು ಸೇರಿದಂತೆ ಹಿರಿಯ ಹಾಗೂ ಅನುಭವಿ ಕಲಾದಂಡು ಚಿತ್ರದಲ್ಲಿದೆ. ನಿಮ್ಮೆಲ್ಲರ ಆಶೀರ್ವಾದ ಸಿನಿಮಾಗೆ ಯುವ ನಿರ್ದೇಶಕ ರವಿಕಿರಣ್‌ ಆಕ್ಷನ್ ಕಟ್ ಹೇಳಿದ್ದು, ಸರವಣನ್‌ ಜಿ.ಎನ್‌.ಛಾಯಾಗ್ರಹಣ, ರಘು ನಿಡುವಳ್ಳಿ ಡೈಲಾಗ್, ರೂಪೇಂದ್ರ ಆಚಾರ್‌ ಕಲಾ ನಿರ್ದೇಶನ, ಸುನಾದ್‌ ಗೌತಮ್‌ ಸಂಗೀತ ಮತ್ತು ವಿವೇಕ್‌ ಚಕ್ರವರ್ತಿ ಹಿನ್ನೆಲೆ ಸಂಗೀತ, ಸುರೇಶ್‌ ಆರುಮುಗಂ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ಕರಾವಳಿಯ ವಿವಿಧ ಭಾಗಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಈಗಾಗಲೇ ಒಂದಷ್ಟು ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ನಿಮ್ಮೆಲ್ಲರ ಆಶೀರ್ವಾದ ಚಿತ್ರ ಇದೇ ತಿಂಗಳು 21 ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಜುಲೈ 21ಕ್ಕೆ ತೆರೆಗೆ ಬರ್ತಿದೆ ಹೊಸಬರ ‘ನಿಮ್ಮೆಲ್ಲರ ಆರ್ಶೀರ್ವಾದ’..ಯುವ ಸಿನಿಮೋತ್ಸಾಹಿಗಳ ಮೇಲೆ ಇರಲಿ ನಿಮ್ಮ ಆಶೀರ್ವಾದ Read More »

ಸೆಟ್ಟೇರಿದ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಹೊಸ ಸಿನಿಮಾ…ಚೆನ್ನೈನಲ್ಲಿ ’ಜೀನಿ’ ಅದ್ಧೂರಿ ಮುಹೂರ್ತ

ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಈಗ ಪ್ಯಾನ್ ಇಂಡಿಯಾ ಸ್ಟಾರ್..ಇತ್ತೀಚೆಗೆಷ್ಟೇ ಇರೈವನ್ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಅವರ 32ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ. ವೆಲ್ಸ್ ಫಿಲಂಸ್ ಇಂಟರ್‌ನ್ಯಾಶನಲ್‌ನಡಿ ಡಾ.ಇಶಾರಿ ಕೆ ಗಣೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಚೆನ್ನೈನಲ್ಲಿಂದು ಸೆಟ್ಟೇರಿರುವ ಈ ಸಿನಿಮಾಗೆ ಜೀನಿ ಎಂಬ ಟೈಟಲ್ ಇಡಲಾಗಿದೆ ಯುವ ನಿರ್ದೇಶಕ ಅರ್ಜುನನ್ ಜೆ ಆರ್ ನಿರ್ದೇಶನದಲ್ಲಿ ಜಯಂ ರವಿ ನಾಯಕನಾಗಿ ನಟಿಸುತ್ತಿದ್ದು, ಕೃತಿ ಶೆಟ್ಟಿ, ಕಲ್ಯಾಣಿ ಪ್ರಿಯದರ್ಶನ್, ವಾಮಿಕಾ ಗಬ್ಬಿ ಮತ್ತು ದೇವಯಾನಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್ ಮುತ್ತುಸಾಮಿ ಛಾಯಾಗ್ರಹಣ, ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ, ಪ್ರದೀಪ್ ಇ ರಾಘವ್ ಸಂಕಲನ, ಹಾಲಿವುಡ್ ಮತ್ತು ಅಂತರಾಷ್ಟ್ರೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಸ್ಟಂಟ್ ಕೊರಿಯೋಗ್ರಾಫರ್‌ಗಳಲ್ಲಿ ಒಬ್ಬರಾದ ಯಾನಿಕ್ ಬೆನ್ ಈ ಚಿತ್ರಕ್ಕೆ ಆಕ್ಷನ್ ಸೀಕ್ವೆನ್ಸ್ ಖದರ್ ಚಿತ್ರದಲ್ಲಿರಲಿದೆ. ಜೀನಿ ವೆಲ್ಸ್ ಫಿಲ್ಮ್ ಇಂಟರ್‌ನ್ಯಾಶನಲ್‌ನ 25 ನೇ ಚಿತ್ರವಾಗಿದ್ದು, ದುಬಾರಿ ಬಜೆಟ್‌ನಲ್ಲಿ ತಯಾರಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿರುವ ಜೀನಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಸೆಟ್ಟೇರಿದ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಹೊಸ ಸಿನಿಮಾ…ಚೆನ್ನೈನಲ್ಲಿ ’ಜೀನಿ’ ಅದ್ಧೂರಿ ಮುಹೂರ್ತ Read More »

ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ ಡೆವಿಲ್ ಗ್ಲಿಂಪ್ಸ್ ಉಡುಗೊರೆ….ಏಜೆಂಟ್ ಹೇಗಿರಬೇಕು ಗೊತ್ತಾ?

ಟಾಲಿವುಡ್ ನಟ ಕಲ್ಯಾಣ್ ರಾಮ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅವರ ಜನ್ಮದಿನದ ಉಡುಗೊರೆಯಾಗಿ ಡೆವಿಲ್ ಸಿನಿಮಾದ ಸಣ್ಣ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ. ಸದಾ ಹೊಸಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಕಲ್ಯಾಣ್ ರಾಮ್ ಈ ಬಾರಿಯೂ ವಿಶಿಷ್ಟ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ. ಅದರ ಮುಂದುವರೆದ ಭಾಗವೇ ಡೆವಿಲ್. ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಡೆವಿಲ್ ಗ್ಲಿಂಪ್ಸ್ ಭಾರೀ ಸದ್ದು ಮಾಡುತ್ತಿದೆ. 1 ನಿಮಿಷ 2 ಸೆಕೆಂಡ್ ಇರುವ ಝಲಕ್ ನಲ್ಲಿ ಡೆವಿಲ್ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಏಜೆಂಟ್ ಕಥೆ ಅನ್ನೋ ಗೊತ್ತಾಗುತ್ತಿದೆ. ಗೂಢಚಾರಿ ಹೇಗೆ ಇರಬೇಕು ಅನ್ನೋದನ್ನು ವಿವರಿಸುತ್ತಾ ಎಂಟ್ರಿ ಕೊಡುವ ಕಲ್ಯಾಣ್ ರಾಮ್ ಲುಕ್ ಗೆಟಪ್ ಗಮನಸೆಳೆಯುತ್ತದೆ‌. ಕ್ಯಾಮೆರಾ ವರ್ಕ್ ಹಾಗೂ ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿಬಂದಿದೆ. ಕಲ್ಯಾಣ್ ರಾಮ್ ಗೆ ಜೋಡಿಯಾಗಿ ಸಂಯುಕ್ತ ಮೆನನ್ ನಟಿಸಿದ್ದಾರೆ. ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಪ್ರೆಸೆಂಟ್ ಮಾಡುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಭಿಷೇಕ್ ನಾಮಾ ನಿರ್ಮಿಸುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ ಡೆವಿಲ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀಕಾಂತ್ ವಿಸ್ಸಾ ಒದಗಿಸಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಚಿತ್ರಕ್ಕೆ ಸಂಗೀತ, ಸೌಂದರರಾಜನ್ ಛಾಯಾಗ್ರಹಣ ಮಾಡಲಿದ್ದಾರೆ. ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಡೆವಿಲ್ ಸಿನಿಮಾ ಮೂಡಿಬರಲಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ ಡೆವಿಲ್ ಗ್ಲಿಂಪ್ಸ್ ಉಡುಗೊರೆ….ಏಜೆಂಟ್ ಹೇಗಿರಬೇಕು ಗೊತ್ತಾ? Read More »

ಕಿಚ್ಚನಿಗೆ ಎಂದು ಮರೆಯಲಾಗದ ದಿನವಿದು..ಸುದೀಪ್ ವೃತ್ತಿ ಬದುಕಿಗೆ ಸ್ಪೆಷಲ್ ಯಾಕೆ ಗೊತ್ತಾ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 26 ವರ್ಷ ಕಳೆದಿದೆ. ಈ ಪಯಣದಲ್ಲಿ ಏಳು ಬೀಳು ಕಂಡಿರುವ ಕೋಟಿಗೊಬ್ಬನಿಗೆ ಈ ದಿನ ಬಹಳ ವಿಶೇಷ.. ಸುದೀಪ್ ಸಿನಿಕರಿಯರ್ ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ ಬಿಡುಗಡೆಯಾಗಿ ಸರಿಯಾಗಿ 22 ವರ್ಷ ಕಳೆದಿದೆ. 2001ರ ಜು.6ರಂದು ರಾಜ್ಯಾದ್ಯಂತ ಹುಚ್ಚ ರಿಲೀಸ್ ಆಗಿತ್ತು. ಡಿಫರೆಂಟ್ ಆದ ಶೀರ್ಷಿಕೆ, ಪೋಸ್ಟರ್ಗಳಲ್ಲಿ ಕಾಣಿಸಿಕೊಂಡ ಸುದೀಪ್ ಡಿಫರೆಂಟ್ ಗೆಟಪ್ ನೋಡಿ ಸಹಜವಾಗಿಯೇ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿತ್ತು. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜೇಶ್ ರಾಮ್ನಾಥ್ ಅವರ ಸುಮಧುರ ಹಾಡುಗಳು. ಜು.6ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗಲಿಲ್ಲ. ಅದಾಗಿ 11 ವರ್ಷ ಕಳೆಯುವುದರಲ್ಲಿ, ಅಂದರೆ 2012ರಲ್ಲಿ ಸುದೀಪ್ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಕನ್ನಡದಲ್ಲಿ ಸ್ಟಾರ್ ನಟನಾಗಿದ್ದ ಅವರ ಜೊತೆ ಜಕ್ಕಣ್ಣ ಜೊಯೆ ಕೈ ಜೋಡಿಸಿ ‘ಈಗ’ ಸಿನಿಮಾ ಮಾಡಿದರು. ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ಬಿಡುಗಡೆಯಾಗಿ ಜಯಭೇರಿ ಬಾರಿಸಿತು. ‘ಈಗ’ ರಿಲೀಸ್ ಆಗಿದ್ದು ಕೂಡ ಜು.6ರಂದು. ಅಂದರೆ ಇವತ್ತಿಗೆ 11 ವರ್ಷ..ಹೀಗಾಗಿ ಕಿಚ್ಚ ಸುದೀಪ್ ಪಾಲಿಗೆ ಜುಲೈ 6 ತುಂಬಾ ಸ್ಪೆಷಲ್. ಧೂಳ್ ಎಬ್ಬಿಸಿದ ಕಿಚ್ಚ 46 ಟೀಸರ್ಕಿಚ್ಚ ಸುದೀಪ್ ಸದ್ಯ 46ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ 2ರಂದು ಯೂಟ್ಯೂಬ್ ಲೋಕಕ್ಕೆ ಎಂಟ್ರಿ ಕೊಟ್ಟ ಡಿಮೋನ್ ಟೀಸರ್ ಭಾರೀ ಸದ್ದು ಮಾಡ್ತಿದೆ. ರಕ್ತಸಿಕ್ತ ದೇಹದ ಹೆಬ್ಬುಲಿ ಘರ್ಜನೆ ಜೋರಾಗಿದೆ. ಇದೇ ಜುಲೈ 15ರಿಂದ ಸುದೀಪ್ ಹೊಸ ಚಿತ್ರದ ಶೂಟಿಂಗ್ ಅಖಾಡಕ್ಕೆ ಧುಮುಕಲಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಕಿಚ್ಚನಿಗೆ ಎಂದು ಮರೆಯಲಾಗದ ದಿನವಿದು..ಸುದೀಪ್ ವೃತ್ತಿ ಬದುಕಿಗೆ ಸ್ಪೆಷಲ್ ಯಾಕೆ ಗೊತ್ತಾ? Read More »

Scroll to Top