Karnataka Bhagya

Author name: kartik

ಮಲೇಷ್ಯಾಗೆ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಭೇಟಿ : ಯಾವಾಗ? ಕಾರಣ ಏನು?

‘KGF 2’ ಬಳಿಕ ರಾಕಿಂಗ್‌ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅಂದ್ಹಾಗೆ, ದಿಢೀರನೇ ಯಶ್ ಮಲೇಷ್ಯಾಗೆ ತೆರಳುತ್ತಿರೋದ್ಯಾಕೆ? ಮಲೇಷ್ಯಾಗೆ ರಾಕಿಂಗ್ ಸ್ಟಾರ್ ಯಶ್ ಇನ್ನೆರಡು ದಿನಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾದಲ್ಲಿರುವ ತಮ್ಮ ಅಭಿಮಾನಿಗಳನ್ನು ಮಾಡುತ್ತಿರೋ ಬಗ್ಗೆ ಸುಳಿವು ಸಿಕ್ಕಿದೆ. ಸಾಮಾನ್ಯವಾಗಿ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ತಮ್ಮ ಮನೆಗೆ ಬರುವ ಅಭಿಮಾನಿಗಳನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಯಶ್, ಕೆಲವೇ ತಿಂಗಳ ಹಿಂದಷ್ಟೇ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಈಗ ದಿಢೀರನೇ ಮಲೇಷ್ಯಾಗೆ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ಪ್ರಯಾಣ ಬೆಳೆಸುತ್ತಿದ್ದಾರೆ. ಅಂದಹಾಗೆ, ಯಶ್ ಮಲೇಷ್ಯಾದಲ್ಲಿ ನಡೆಯಲಿರುವ ಒಂದು ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ. ಈ ವೇಳೆ ಜುಲೈ 8ರಂದು ತಮ್ಮ ಅಭಿಮಾನಿಗಳನ್ನೂ ಭೇಟಿ ಮಾಡುತ್ತಿದ್ದಾರೆ ಎಂದು ಮಲೇಷ್ಯಾದ ವೆಬ್‌ಸೈಟ್ ಒಂದು ವರದಿ ಮಾಡಿದೆ. ಮಲೇಷ್ಯಾದಲ್ಲಿ ಏನದು ಕಾರ್ಯಕ್ರಮ? ಮಲೇಷ್ಯಾದಲ್ಲಿ ಮಲಿಕ್ ಸ್ಟ್ರೀಮ್ಸ್ ಕಾರ್ಪೊರೇಷನ್ ಒಡೆತನದ ಎರಡನೇ ಎಂಎಸ್ ಗೋಲ್ಡ್ ಬುಟಿಕ್ ಉದ್ಘಾಟನೆಗೆ ಯಶ್ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಅಲ್ಲಿನ ಕೌಲಾಲಂಪುರ್‌ದಲ್ಲಿರುವ ಜಲಾನ್ ಮಸ್ಜಿದ್ ಇಂಡಿಯಾದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಕೆಜಿಎಫ್ ಬಳಿಕ ರಿಸ್ಕ್ ತೆಗೆದುಕೊಳ್ತಿದ್ದಾರಾ ರಾಕಿ ಭಾಯ್? ಈ ಸುದ್ದಿ ನಿಜವೇ ಆದರೆ ಟೆನ್ಷನ್ ತಪ್ಪಿದ್ದಲ್ಲ! ಎಂಎಸ್ ಗೋಲ್ಡ್ ಬುಟಿಕ್‌ನ ಸಂಸ್ಥಾಪಕ ಹಾಗೂ ಕಂಪನಿಯ ಸಿಇಓ ದಟುಕ್ ಅಬ್ದುಲ್ ಮಲಿಕ್ ದಸ್ತಿಗೀರ್ ಈ ವಿಷಯವನ್ನು ಮಲೇಷ್ಯಾದ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೀಗಾಗಿ ಯಶ್ ಮಲೇಷ್ಯಾಗೆ ತೆರಳುವುದು ಬಹುತೇಕ ಖಚಿತ. ಇದೇ ವೇಳೆ ಅಲ್ಲಿರುವ ತನ್ನ ಅಭಿಮಾನಿಗಳನ್ನೂ ಭೇಟಿ ಮಾಡಿ ಬರಲಿದ್ದಾರೆ. ಶೀಘ್ರದಲ್ಲಿಯೇ ಯಶ್ 19 ಅನೌನ್ಸ್ ‘ಕೆಜಿಎಫ್ 2’ ಅಂತಹ ಮೆಗಾ ಹಿಟ್ ಕೊಟ್ಮೇಲೆ ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾವನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಒಂದು ಕ್ಷಣವೂ ಬಿಡದಂತೆ ಸ್ಕ್ರಿಪ್ಟ್ ಮಾಡುತ್ತಿರುವ ತಂಡ ಆದಷ್ಟು ಬೇಗ 19ನೇ ಸಿನಿಮಾವನ್ನು ಅನೌನ್ಸ್ ಮಾಡುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಯಶ್, ಸ್ಕ್ರಿಪ್ಟ್ ಲಾಕ್ ಆಗಿದೆ ಅಂತ ಹೇಳಿಕೆ ಕೊಟ್ಟಿದ್ದರು. Salaar Teaser: ‘KGF’ ಪ್ರಶಾಂತ್ ನೀಲ್ ಬತ್ತಳಿಕೆಯಲ್ಲಿದ್ದ ಸಣ್ಣ ಕಥೆ.. ಹಾಗದ್ರೆ ‘ಸಲಾರ್’? ಈಗ ಮಲೇಷ್ಯಾದಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಯಶ್ ತಮ್ಮ 19ನೇ ಸಿನಿಮಾ ಬಗ್ಗೆ ಸುಳಿವು ನೀಡುವ ಸಾಧ್ಯತೆಯಿದೆ. ಇನ್ನೊಂದು ಕಡೆ ಇಲ್ಲಿರುವ ಯಶ್ ಅಭಿಮಾನಿಗಳು 19ನೇ ಸಿನಿಮಾದ ಘೋಷಣೆಗಾಗಿ ಕಾಯುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಅವರ ಮೊದಲ ಸಿನಿಮಾ ರಿಲೀಸ್ ಆಗಿದ್ದ ದಿನವೇ ಸಿನಿಮಾ ಅನೌನ್ಸ್ ಆಗಲಿದೆ ಎಂದು ಸುದ್ದಿ ಹಬ್ಬಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಮಲೇಷ್ಯಾಗೆ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಭೇಟಿ : ಯಾವಾಗ? ಕಾರಣ ಏನು? Read More »

KGF ಕ್ಲೈಮ್ಯಾಕ್ಸ್ ಗೂ #Salaar ಟೀಸರ್ ಗೂ ಲಿಂಕ್ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್..!

KGF 2’ ಕ್ಲೈಮ್ಯಾಕ್ಸ್​ನಲ್ಲಿ ರಾಕಿ ಭಾಯ್ ಸಮುದ್ರಕ್ಕೆ ಬೀಳುತ್ತಾನೆ. ಆಗ ಸಮಯ ಮುಂಜಾನೆ 5 ಗಂಟೆ. ಇದೇ ರೀಸನ್ ಗೆ ‘ಸಲಾರ್’ ಟೀಸರ್ ಮುಂಜಾನೆ 5ಗಂಟೆಗೆ ರಿಲೀಸ್ ಆಗಿದೆ ಅಂತಾ ಅಭಿಪ್ರಾಯಪಟ್ಟಿದ್ದರು. Salaar Movie‌ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇದು ಪ್ರಶಾಂತ್ ನೀಲ್ ಯೂನಿವರ್ಸ್ ಎಂದು ಎಲ್ಲರೂ ಕರೆದಿದ್ದಾರೆ. ವಿಶೇಷ ಎಂದರೆ ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ ಚಿತ್ರಕ್ಕೂ ಟೀಸರ್​ನಲ್ಲಿ ಲಿಂಕ್ ನೀಡಲಾಗಿದೆ. ಇದನ್ನು ಗಮನಿಸಿದ ಅನೇಕರು ಶಾಕ್ ಆಗಿದ್ದಾರೆ. ‘ಸಲಾರ್’ ಟೀಂನವರು ಮುಂಜಾನೆ 5:12ಕ್ಕೆ ಟೀಸರ್ ಅನಾವರಣ ಮಾಡಿದ್ದರು. ಇದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು.ಆದರೆ, ಆ ರೀತಿಯ ಯಾವುದೇ ಕನೆಕ್ಷನ್ ಕಂಡಿಲ್ಲ. ಆದರೆ, ‘ಕೆಜಿಎಫ್ 2’ ಚಿತ್ರಕ್ಕೂ ‘ಸಲಾರ್​’ಗೂ ಲಿಂಕ್ ಇರುವ ವಿಚಾರ ಗೊತ್ತಾಗಿದೆ. ‘ಕೆಜಿಎಫ್ 2’ ಸಿನಿಮಾದಲ್ಲಿ ಒಂದಷ್ಟು ಟ್ಯಾಂಕರ್​ಗಳು ಕಂಡಿದ್ದವು. ಆ ಪೈಕಿ ಒಂದು ಟ್ಯಾಂಕರ್ ಹೆಸರು ‘ಸಿ-516’. ‘ಸಲಾರ್’ ಸಿನಿಮಾದಲ್ಲೂ ಅದೇ ನಂಬರ್​ನ ಟ್ಯಾಂಕರ್ ಕಾಣಿಸಿದೆ. ಹೀಗಾಗಿ, ‘ಕೆಜಿಎಫ್ 2’ ಚಿತ್ರದ ಮುಂದುವರಿದ ಭಾಗದ ರೀತಿಯಲ್ಲಿ ‘ಸಲಾರ್’ ಸಿನಿಮಾ ಮೂಡಿಬರಲಿದೆ ಎಂದು ಅನೇಕರು ಭಾವಿಸಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

KGF ಕ್ಲೈಮ್ಯಾಕ್ಸ್ ಗೂ #Salaar ಟೀಸರ್ ಗೂ ಲಿಂಕ್ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್..! Read More »

ರಿಲೀಸ್ ಆಯ್ತು ಸಲಾರ್ ಟೀಸರ್ಟ್ರೆಂಡ್ ಆಯ್ತು #Disappointment ಟ್ವೀಟ್

ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ‌ ಸಲಾರ್ ಟೀಸರ್ ಬೆಳಗ್ಗೆ 5 ಗಂಟೆಗೆ ರಿಲೀಸ್ ಆಗಿದೆ. ಸತತ 3 ವರ್ಷಗಳಿಂದ ಅಭಿಮಾನಿಗಳು ಸಲಾರ್ ಟೀಸರ್ ಗಾಗಿ‌ ಕಾದಿದ್ದರು‌, ಆದ್ರೆ ಟ್ರೇಲರ್ ರಿಲೀಸ್ ಆಗಿ 6 ಗಂಟೆಗಳು ಕಳೆದರು ಸಹ ಕೇವಲ‌ ಒಂದು ಮಿಲಿಯನ್ ಮಾತ್ರ ವೀವ್ಸ್ ಆಗಿದೆ.ಇದರಿಂದ ಅಭಿಮಾನಿಗಳು ಕೊಂಚ ಬೇಸರವಾಗಿದ್ದು ಟ್ವಿಟರ್ ನಲ್ಲಿ #Disappointment ಟ್ವೀಟ್ ಸದ್ಯಕ್ಕೆ ‌ಮುನ್ನಡೆಯಲ್ಲಿದೆ. ಸಲಾರ್’ ಸಿನಿಮಾ ಘೋಷಣೆ ಆಗಿದ್ದು 2020ರ ಡಿಸೆಂಬರ್​ನಲ್ಲಿ. ಈ ಚಿತ್ರದ ಮುಹೂರ್ತದಲ್ಲಿ ಪ್ರಭಾಸ್, ಯಶ್ ಮೊದಲಾದವರು ಭಾಗಿ ಆಗಿದ್ದರು. ಅದ್ಯಾಕೋ ಬೆನ್ನು ಬಿದ್ದ ಬೇತಾಳದಂತೆ ಡಾರ್ಲಿಂಗ್ ಪ್ರಭಾಸ್ ಭೀತಿ ಬೆನ್ನು ಬಿದ್ದ ಬೇತಾಳದಂತೆ ಕಾಡುತ್ತಿದೆ.ಹೀಗಿರುವಾಗಲೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಸಲಾರ್ ಟೀಸರ್ ಒಂದು ಕಡೆ ಸೋತಿದೆಪ್ರಭಾಸ್ ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಹೀಗಾಗಿ, ‘ಸಲಾರ್’ ಟೀಸರ್ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆ ಸುಳ್ಳಾಗಿದೆ. ಅಂದುಕೊಂಡ ರೀತಿಯಲ್ಲಿ ಈ ಟೀಸರ್ ಬಂದಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ‘ಕೆಜಿಎಫ್ 2’ ಚಿತ್ರದ ಟೀಸರ್ ರಿಲೀಸ್ ಆದಾಗ ದೊಡ್ಡ ಮಟ್ಟದಲ್ಲಿ ಸದ್ದಾಗಿತ್ತು. ರಿಲೀಸ್ ಆದ ಕೆಲವೇ ಹೊತ್ತಿನಲ್ಲಿ ಮಿಲಿಯನ್​ಗಟ್ಟಲೆ ವೀಕ್ಷಣೆ ಕಂಡಿತ್ತು. ಆದರೆ, ಮುಂಜಾನೇ ‘ಸಲಾರ್’ ಟೀಸರ್ ರಿಲೀಸ್ ಆದ ಕಾರಣಕ್ಕೋ ಏನೋ ಈ ವಿಡಿಯೋ ಬಿಡುಗಡೆ ಆಗಿ ಎರಡು ಗಂಟೆಗೆ ಕೇವಲ 1 ಮಿಲಿಯನ್ ವೀಕ್ಷಣೆ ಕಂಡಿದೆ. ಟೀನು ಆನಂದ್ ನಿರೂಪಣೆಯಲ್ಲಿ​ ‘ಸಲಾರ್’ ಟೀಸರ್​ ಮೂಡಿಬಂದಿದೆ. ಆರಂಭದಿಂದ ಕೊನೆಯವರೆಗೂ ಅವರೇ ಹೈಲೈಟ್ ಆಗುತ್ತಾರೆ. ಸೆಪ್ಟೆಂಬರ್ 28ಕ್ಕೆ ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಶ್ರುತಿ ಹಾಸನ್ ಅವರು ಈ ಚಿತ್ರಕ್ಕೆ ನಾಯಕಿ. ಪೃಥ್ವಿರಾಜ್ ಮೊದಲಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಸಂಯೋಜನೆ, ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ರಿಲೀಸ್ ಆಯ್ತು ಸಲಾರ್ ಟೀಸರ್ಟ್ರೆಂಡ್ ಆಯ್ತು #Disappointment ಟ್ವೀಟ್ Read More »

ಲೈಕಾ ಪ್ರೊಡಕ್ಷನ್ ಸಂಸ್ಥೆಯ ಹೊಸ ಸಿನಿಮಾ ಅನೌನ್ಸ್….ಸೆನ್ಸೇಷನಲ್ ಸಿನಿಮಾ ’2018’ ನಿರ್ದೇಶಕರ ಜೊತೆ ಕೈ ಜೋಡಿಸಿದ ಸುಭಾಷ್ ಕರಣ್

ಭಾರತೀಯ ಚಿತ್ರರಂಗದ ದುಬಾರಿ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಲೈಕಾ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದೆ. ಇಂಡಿಯನ್, ಖೈದಿ-150, ವಡಾ ಚೆನ್ನೈ, ದರ್ಬಾರ್, ಪೊನ್ನಿಯಿನ್ ಸೆಲ್ವನ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಇಂಡಿಯನ್-2, ರಜನಿ ಜೊತೆ ಲಾಲ್ ಸಲಾಂ ಸೇರಿದಂತೆ ಹಲವು ಚಿತ್ರಗಳಿಗೆ ಹಣ ಸುರಿದಿರುವ ಸುಭಾಷ್ ಕರಣ್ ಈಗ ಸೆನ್ಸೇಷನಲ್ ಮೂವೀ 2018 ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ. ಲೈಕಾ ಬರೀ ಸೂಪರ್ ಸ್ಟಾರ್ಸ್ ಸಿನಿಮಾಗಳನ್ನು ಮಾತ್ರವಲ್ಲ ಹೊಸ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸಿಕೊಡುತ್ತಿದೆ. ಮೋಸ್ಟ್ ಹ್ಯಾಪನಿಂಗ್ ಡೈರೆಕ್ಟರ್ ಜೂಡಾ ಆಂಥನಿ ಜೋಸೆಫ್ ಜೊತೆ ಸಿನಿಮಾ ಮಾಡುವುದಾಗಿ ಲೈಕಾ ಅನೌನ್ಸ್ ಮಾಡಿದೆ. ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಕೇರಳ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ ಬಸ್ಟರ್ ಆಗಿದೆ. ಈ ಚಿತ್ರವನ್ನು ನಿರ್ದೇಶಿಸಿದ್ದು, ಜೂಡಾ ಆಂಥನಿ ಜೋಸೆಫ್..ಇದೇ ನಿರ್ದೇಶಕರಿಗೆ ಈಗ ಲೈಕಾ ಸಿನಿಮಾ ಮಾಡುತ್ತಿವೆ. ಶೀಘ್ರದಲ್ಲಿಯೇ ಈ ಚಿತ್ರದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಅಪ್ ಡೇಟ್ ನೀಡಲಿದೆ ಲೈಕಾ.. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಲೈಕಾ ಪ್ರೊಡಕ್ಷನ್ ಸಂಸ್ಥೆಯ ಹೊಸ ಸಿನಿಮಾ ಅನೌನ್ಸ್….ಸೆನ್ಸೇಷನಲ್ ಸಿನಿಮಾ ’2018’ ನಿರ್ದೇಶಕರ ಜೊತೆ ಕೈ ಜೋಡಿಸಿದ ಸುಭಾಷ್ ಕರಣ್ Read More »

’ಕೋಟಿಗೊಬ್ಬ’ನ ಹೃದಯವಂತಿಕೆ..ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್

ಕರುನಾಡ ‘ರನ್ನ’ನ ಹೃದಯವಂತಿಕೆ, ಸರಳತೆಗೆ ಈ ವಿಡಿಯೋ ಸಾಕ್ಷಿ ಅಭಿನಯ ಚಕ್ರವರ್ತಿ ಸುದೀಪ್ ತೆರೆಮೇಲೆ ಮಾತ್ರವಲ್ಲ ತೆರೆಹಿಂದೆಯೂ ಅವರು ರಿಯಲ್ ಹೀರೋ..ಕಷ್ಟದಲ್ಲಿದ್ದವರಿಗೆ ಜೊತೆಯಾಗಿ ನಿಲ್ಲುವ ಸೂಪರ್ ಸ್ಟಾರ್..ಕಿಚ್ಚನ ಹೃದಯವಂತಿಕೆ, ಸರಳತೆ ಬಗ್ಗೆ ಹೊಸದಾಗಿ ವಿವರಿಸುವ ಅಗತ್ಯವಿಲ್ಲ. ಕೋಟಿಗೊಬ್ಬನ್ನು ಒಮ್ಮೆಯಾದ್ರೂ ಭೇಟಿಯಾಗಬೇಕು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಪ್ರತಿಯೊಬ್ಬ ಸುದೀಪಿಯನ್ಸ್ ಗೂ ಇದ್ದೇ ಇರುತ್ತದೆ. ಆ ಆಸೆ ಈಡೇರಿಕೆಗೆ ಸಮಯ ಕೂಡಿ ಬರಬೇಕು ಅಷ್ಟೇ. ಈಗ ಸುದೀಪ್ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಸಾಕ್ಷಿ ಎಂಬ ಬಾಲಕಿ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿ.. ಜೀವನದಲ್ಲಿ ಒಮ್ಮೆಯಾದ್ರೂ ತಮ್ಮ ನೆಚ್ಚಿನ ಸ್ಟಾರ್ ಭೇಟಿಯಾಗಬೇಕು ಎಂಬುದು ಸಾಕ್ಷಿ ಆಸೆ. ಬಾಲಕಿಯ ಆಸೆ ಮತ್ತು ಆರೋಗ್ಯ ಸಮಸ್ಯೆ ಬಗ್ಗೆ ತಿಳಿದುಕೊಂಡ ಕಿಚ್ಚ ಸುದೀಪ್ ತನ್ನ ಅಭಿಮಾನಿ ಹಾಗೂ ಅವರ ಕುಟುಂಬಸ್ಥರನ್ನ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಕ್ಷಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ‘ಆಟೋಗ್ರಾಫ್’ ನೀಡಿ ಪ್ರೀತಿಯಿಂದ ಅಭಿಮಾನಿಗೆ ಅಪ್ಪುಗೆ ಕೊಟ್ಟಿದ್ದಾರೆ. ಸುದೀಪ್ ಭೇಟಿಯಾದ ಖುಷಿ ಕ್ಷಣಗಳನ್ನು ಹಂಚಿಕೊಂಡಿರುವ ಸಾಕ್ಷಿ, ನನಗೆ ಸುದೀಪ್ ಸರ್ ಇಷ್ಟ. ರನ್ನ ಸಿನಿಮಾದ ಥಿತಲಿ ಹಾಡು ನನಗೆ ಸ್ಪೂರ್ತಿ ಎಂದಿದ್ದಾರೆ. ಕೋಟಿಗೊಬ್ಬನ್ನು ನೋಡಿ ಆ ಪುಟ್ಟ ಅಭಿಮಾನಿಯ ಖುಷಿಗೆ ಪಾರವೇ ಇಲ್ಲ. ಕಿಚ್ಚನ ಈ ಹೃದಯವಂತಿಕೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಸಲಾಂ ಎಂದಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

’ಕೋಟಿಗೊಬ್ಬ’ನ ಹೃದಯವಂತಿಕೆ..ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್ Read More »

ಸಖತ್ ವೈರಲ್ ಆಗುತ್ತಿದೆ ಆ ನಟಿಯ ಪೋಟೋ, ವಿತೌಟ್ ಬ್ಲೌಸ್ ನಲ್ಲಿ ಆ ನಟಿ‌, ಯಾರದು…!

ಅಭಿಮಾನಿಗಳು ಆಲಿಯಾ ಭಟ್ ವಿರುದ್ಧ ಕೆಂಡಾಮಂಡಲಗೊಂಡಿದ್ದಾರೆ‌ ಅಷ್ಟೆ ಅಲ್ಲದೆ ಆಲಿಯಾಳ‌ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಿವುಡ್ ನಟ ರಣವೀರ್‌ಸಿಂಗ್ ಜೊತೆ ನಟಿ ಆಲಿಯಾ ಭಟ್ ಬ್ಲೌಸ್ ಇಲ್ಲದೆ, ಸೀರೆಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಒಂದು ಮಗುವಾದ ಮೇಲೂ ಎದೆಭಾಗ ಕಾಣಿಸುವ ಈ ರೀತಿಯ ಭಂಗಿಯಲ್ಲಿ ಫೋಟೋ ಬೇಕಿತ್ತಾ ಎಂದು ಆಲಿಯಾ ಭಟ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ. ಆಲಿಯಾ ಭಟ್ ರಣವೀರ್ ಜೊತೆ ತೆಗೆಸಿಕೊಂಡಿರೋ ಫೋಟೋ ಸುದ್ದಿಯಾಗಿದೆ. ಇದರಲ್ಲಿ ಆಲಿಯಾ ತಿಳಿ ಹಸಿರು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆ ಚಿತ್ರದಲ್ಲಿ ಅವರು ಬ್ಲೌಸ್ ಧರಿಸಿಲ್ಲ. ಒಳ ಉಡುಪು ಕೂಡ ಇಲ್ಲ. ಆಕೆಯನ್ನು ರಣವೀರ್ ಬಳಸಿ ಹಿಡಿದುಕೊಂಡಿದ್ದಾರೆ. ಈ ಚಿತ್ರದಲ್ಲಿ ಆಕೆಯ ಎದೆಯ ಭಾಗ ಎದ್ದು ಕಾಣಿಸುತ್ತಿದೆ. ಆದರೆ ಅಸಲಿಗೆ ಈ ರೀತಿ ಅಶ್ಲೀಲ ಎನಿಸುವ ಬಟ್ಟೆಯನ್ನು ಆಲಿಯಾ ಹಾಕಿಕೊಂಡಿಲ್ಲ. ತನ್ನ ದೇಹಸಿರಿಯನ್ನು ಪ್ರದರ್ಶನ ಮಾಡಿಲ್ಲ‌ ಅಂತಾ ತಿಳಿದು ಬಂದಿದೆ. ಇದು ಎಡಿಟ್ ಮಾಡಿರುವ ಫೋಟೋ. ಆದರೆ ಬ್ಲೌಸ್ ಧರಿಸಿರುವ ಭಾಗವನ್ನು ಎಡಿಟ್ ಮಾಡಲಾಗಿದ್ದು, ಎದೆ ಭಾಗವನ್ನು ಪ್ರದರ್ಶಿಸಲಾಗಿದೆ. ಇದನ್ನು ಅನೇಕರು ಸುಮ್ಮೆನೆ ಟ್ರೋಲ್ ಮಾಡುತ್ತಿದ್ದಾರೆ ಎಂದು ಆಲಿಯಾ ಹೇಳಿದ್ದಾಳೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಸಖತ್ ವೈರಲ್ ಆಗುತ್ತಿದೆ ಆ ನಟಿಯ ಪೋಟೋ, ವಿತೌಟ್ ಬ್ಲೌಸ್ ನಲ್ಲಿ ಆ ನಟಿ‌, ಯಾರದು…! Read More »

ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಆಹ್ವಾ‌ನ ನೀಡಿದ ರಿಷಬ್ ಶೆಟ್ಟಿ- ಅಭಿಮಾನಿಗಳೊಡನೆ‌ ದೊಡ್ಡದಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ವಿಶ್ವಶ್ರೇಷ್ಠ ಕನ್ನಡಿಗ

ಕಾಂತಾರ ಸಿನಿಮಾದ ಮೂಲಕ‌ ದೇಶದ ಮೂಲೆ ಮೂಲೆಯಲ್ಲಿ ನಟ ರಿಷಬ್ ಶೆಟ್ಟಿಗೆ ಸಾಕಷ್ಟು ಬೇಡಿಕೆ ಹೆಚ್ಚಿದೆ.ಚಂದನವನದ ಮೋಸ್ಟ್ ಪೇವರೇಟ್ ಸ್ಟಾರ್ ಅಂದ್ರೆ ತಪ್ಪಾಗೋದಿಲ್ಲ. ಅಷ್ಟೆ ಅಲ್ಲದೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ‌ ಹೊಮ್ಮಿದ್ದಾರೆ.ನಟರನ್ನು ಭೇಟಿಯಾಗುವುದು ಅಭಿಮಾನಿಗಳಿಗೆ ಹೇಗೆ ಪುಳಕವೋ ಅಂತೆಯೇ ನಟರಿಗೂ ಅಭಿಮಾನಿಗಳನ್ನು ಭೇಟಿ ಆಗುವುದು ಸಂಭ್ರಮವೇ. ಇದೀಗ ರಿಷಬ್ ಶೆಟ್ಟಿ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು ಮುಂದಾಗಿದ್ದಾರೆ. ಅದಕ್ಕಾಗಿ ಸಮಯ, ಸ್ಥಳ ನಿಗದಿಪಡಿಸಿದ್ದಾರೆ. ಕೆಲವೇ ದಿನಗಳಲ್ಲಿ ರಿಷಬ್ ಶೆಟ್ಟಿಯವರ ಹುಟ್ಟುಹಬ್ಬವಿದೆ. ರಿಷಬ್ ಶೆಟ್ಟಿ ಈ ಬಾರಿ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ. ಹುಟ್ಟುಹಬ್ಬದ ನೆವದ ಮೂಲಕ ತಮ್ಮ ಅಭಿಮಾನಿಗಳನ್ನು ಭೇಟಿ ಆಗಲು ರಿಷಬ್ ಶೆಟ್ಟಿ ಮುಂದಾಗಿದ್ದಾರೆ. ”ಕೆರಾಡಿ ಎಂಬ ಸಣ್ಣ ಊರಿನಿಂದ ಸಿನಿಮಾ‌ ಕನಸು ಕಟ್ಟಿಕೊಂಡು ಬಂದಿರುವ ನನಗೆ ಎಷ್ಟೆಲ್ಲ ಪ್ರೀತಿ ತೋರಿಸಿ ಇಲ್ಲಿಯವರೆಗೆ ಕರೆದು ಕೊಂಡು ಬಂದು ನಿಲ್ಲಿಸಿದ್ದೀರ. ನೀವು ಇಷ್ಟೆಲ್ಲ ಪ್ರೀತಿ ತೋರಿಸಿದಾಗ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದೇ ನನಗೆ ಗೊತ್ತಾಗಲಿಲ್ಲ. ಆದರೆ ಕಾಂತಾರ ಬಿಡುಗಡೆ ಆದ ಬಳಿಕ ತುಂಬಾ ಜನ ನನ್ನ ಮನೆ ಹತ್ತಿರ ಬಂದಿದ್ದೀರ. ಆದ್ದರಿಂದ ನನ್ನ ಹುಟ್ಟಿದ ದಿನ ಜುಲೈ 7ನೇ ತಾರೀಖು. ಬೆಂಗಳೂರಿನ ನಂದಿನಿ ಲಿಂಕ್ ಗ್ರೌಂಡ್​ನಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಸಿಗೋಣ, ನಿಮ್ಮನ್ನು ಭೇಟಿ ಆಗಲು ನಾನು ಕಾಯುತ್ತಿರುತ್ತೀನಿ” ಎಂದಿದ್ದಾರೆ. ಕಾಂತಾರ 2 ಸಿನಿಮಾದ ಚಿತ್ರಕತೆ ತಯಾರಿಯಲ್ಲಿರುವ ರಿಷಬ್ ಶೆಟ್ಟಿ ಬಿಡುವು ಮಾಡಿಕೊಂಡು ಅಭಿಮಾನಿಗಳನ್ನು ಭೇಟಿ ಆಗುತ್ತಿದ್ದಾರೆ. ಕಾಂತಾರ ಸಿನಿಮಾವನ್ನು ಗೆಲ್ಲಿಸಿದ ಜನರನ್ನು, ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು ತಮ್ಮ ಹುಟ್ಟುಹಬ್ಬದ ಸಂದರ್ಭವನ್ನು ರಿಷಬ್ ಬಳಸಿಕೊಳ್ಳಲಿದ್ದಾರೆ. ಹಾಗೆಯೇ ಹುಟ್ಟುಹಬ್ಬದ ದಿನ ಕಾಂತಾರ 2 ಸಿನಿಮಾದ ಅಪ್​ಡೇಟ್ ಸಹ ಕೊಡುವ ಸಾಧ್ಯತೆ ಇದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಆಹ್ವಾ‌ನ ನೀಡಿದ ರಿಷಬ್ ಶೆಟ್ಟಿ- ಅಭಿಮಾನಿಗಳೊಡನೆ‌ ದೊಡ್ಡದಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ವಿಶ್ವಶ್ರೇಷ್ಠ ಕನ್ನಡಿಗ Read More »

ನಿರ್ಮಾಪಕ ಕುಮಾರ್ ಎನ್ ಗೆ ಕಿಚ್ಚ‌ ಸುದೀಪ್ ಟ್ವಿಟರ್ ಉತ್ತರ, “ನನ್ನ ಒಳ್ಳೆಯತನವನ್ನ ದುರುಪಯೋಗ ಮಾಡಿಕೊಳ್ಳ ಬೇಡಿ”-ಕಿಚ್ಚ ಸುದೀಪ್

ಸುದೀಪ್‌ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿರ್ಮಾಪಕ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕುಮಾರ್‌ ಅವರ ಆರೋಪಗಳಿಗೆ ಉತ್ತರ ಎನ್ನುವಂತೆ ಸುದೀಪ್‌ ತಮ್ಮ ಟ್ವಿಟ್ಟರ್‌ನಲ್ಲಿ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಸುದೀಪ್‌ ನನ್ನ ಸಿನಿಮಾದಲ್ಲಿ ನಟಿಸುವುದಾಗಿ ಹಣ ಪಡೆದು ಈಗ ಕಾಲ್‌ಶೀಟ್‌ ನೀಡದೆ ನನ್ನನ್ನ ಸತಾಯಿಸಿದ್ದಾರೆ.ಸುದೀಪ್‌ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೂಡಾ ನಿರ್ಮಾಪಕ ಫಿಲ್ಮ್‌ ಚೇಂಬರ್‌ ವಿರುದ್ಧ ಗರಂ ಆಗಿದ್ದಾರೆ. ಕುಮಾರ್‌ ಅವರ ಆರೋಪಗಳಿಗೆ ಉತ್ತರ ಎನ್ನುವಂತೆ ಸುದೀಪ್‌ ತಮ್ಮ ಟ್ವಿಟ್ಟರ್‌ನಲ್ಲಿ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಟ್ವಿಟರ್ ಪೋಸ್ಟ್ ”ಈ ವಿಚಾರವನ್ನು ನಿಮಗೆ ತಿಳಿಸಲು ಇಷ್ಟಪಡುತ್ತೇನೆ, ನನ್ನ ಒಳ್ಳೆಯತನವು ದುರುಪಯೋಗ ಅಥವಾ ನನ್ನನ್ನು ಕೆರಳಿಸುವುದು ಸಾಧನೆ ಅಲ್ಲ. ಅದು ಪ್ರಾಮಾಣಿಕತೆಯಿಂದ ಇದ್ದಾಗ ಮಾತ್ರ ಹೊಳೆಯುತ್ತದೆ. ಅಹಂಕಾರವು ಒಳ್ಳೆಯತನದ ಪ್ರಕಾಶತೆಯನ್ನು ಹಾಳುಮಾಡಲು ನಾನು ಬಿಡುವುದಿಲ್ಲ. ಸದಾ ಪ್ರಾಮಾಣಿಕತೆಯಿಂದ ಸತ್ಯವಂತಾಗಿರಿ ಎಂದು ಆಂಗ್ಲ ಭಾಷೆಯಲ್ಲಿ ಬರೆದಿರುವ ಪೋಸ್ಟ್‌ ಒಂದನ್ನು ಸುದೀಪ್‌ ಹಂಚಿಕೊಂಡಿದ್ದಾರೆ. ಈ ಕೋಟ್ಸ್‌ ಬಹಳ ಚೆನ್ನಾಗಿದೆ, ಎಲ್ಲರೂ ಓದಿ” ಎಂದು ಸುದೀಪ್‌ ಬರೆದುಕೊಂಡಿದ್ದಾರೆ. ತಮಿಳಿನಲ್ಲಿ ತುಪಾಕಿ, ಕಬಾಲಿ, ಕರ್ಣನ್‌, ಅಸುರನ್‌ ಸೇರಿ ಅನೇಕ ಸೂಪರ್‌ ಹಿಟ್ ಮತ್ತು ಹೈ ಬಜೆಟ್‌ ಸಿನಿಮಾಗಳನ್ನು ನೀಡಿದ ಖ್ಯಾತ ಚಿತ್ರ‌ ನಿರ್ಮಾಣ ಸಂಸ್ಥೆ ವಿ ಕ್ರಿಯೆಷನ್ಸ್‌ ಬ್ಯಾನರ್‌ನಲ್ಲಿ ಕಿಚ್ಚನ 46ನೇ ಸಿನಿಮಾವನ್ನು ನಿರ್ಮಿಸುತ್ತಿದೆ. ಕಲೈಪುಲಿ ಎಸ್‌ ಧಾನು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ವಿಜಯ್‌ ಕಾರ್ತಿಕೇಯ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ನಿರ್ಮಾಪಕ ಕುಮಾರ್ ಎನ್ ಗೆ ಕಿಚ್ಚ‌ ಸುದೀಪ್ ಟ್ವಿಟರ್ ಉತ್ತರ, “ನನ್ನ ಒಳ್ಳೆಯತನವನ್ನ ದುರುಪಯೋಗ ಮಾಡಿಕೊಳ್ಳ ಬೇಡಿ”-ಕಿಚ್ಚ ಸುದೀಪ್ Read More »

ಕೋಮಲ್ ಹುಟ್ಟುಹಬ್ಬಕ್ಕೆ ‘ರೋಲೆಕ್ಸ್’ ಪೋಸ್ಟರ್ ಉಡುಗೊರೆ..ಸ್ಟೈಲೀಶ್ ಲುಕ್ ನಲ್ಲಿ ಮಿಂಚಿದ ಸೆನ್ಸೇಷನಲ್ ಸ್ಟಾರ್..

ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೋಮಲ್ ಜನುಮದಿನ ಉಡುಗೊರೆಯಾಗಿ ‘ರೋಲೆಕ್ಸ್’ ಸಿನಿಮಾದ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸೂಟು ಬೂಟೂ ತೊಟ್ಟು ಸ್ಟೈಲೀಶ್ ಲುಕ್ ನಲ್ಲಿ ಸೆನ್ಸೇಷನಲ್ ಸ್ಟಾರ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಟೈಟಲ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ‘ರೋಲೆಕ್ಸ್’ಗೆ ಶ್ರೀನಿವಾಸ್ ಮಂಡ್ಯ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ‘ಬಿಲ್ ಗೇಟ್ಸ್’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಮಂಡ್ಯ ಈ ಬಾರಿ ಇಂಟ್ರಸ್ಟಿಂಗ್ ಕಥೆ ಹೊತ್ತು ಬಂದಿದ್ದಾರೆ. ಕೋಮಲ್ ಗೆ ಜೋಡಿಯಾಗಿ ಪಂಚತಂತ್ರ ಬ್ಯೂಟಿ ಸೋನಲ್ ಮೊಂಟೆರೋ ನಟಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ಶೋಭರಾಜ್, ಅರವಿಂದ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ. ಈಗಾಗಲೇ ಶೇಖಡ 50ರಷ್ಟುರೋಲೆಕ್ಸ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಉಳಿದ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿಸೆಪ್ಟಂಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಕೋಮಲ್ ಹುಟ್ಟುಹಬ್ಬಕ್ಕೆ ‘ರೋಲೆಕ್ಸ್’ ಪೋಸ್ಟರ್ ಉಡುಗೊರೆ..ಸ್ಟೈಲೀಶ್ ಲುಕ್ ನಲ್ಲಿ ಮಿಂಚಿದ ಸೆನ್ಸೇಷನಲ್ ಸ್ಟಾರ್.. Read More »

ಡೈನಾಮಿಕ್ ಪ್ರಿನ್ಸ್ ಇನ್ಮುಂದೆ ‘ಗಣ’ ಟೀಸರ್ ರಿಲೀಸ್ ಮಾಡಿದ ಚಂದ್ರಲೇಖಾ- (ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್‌ ದೇವರಾಜ್ ಮುಖ್ಯ ಭೂಮಿಕೆಯ ‘ಗಣ’ ಸಿನಿಮಾದ ಟ್ರೇಲರನ್ನ ಪ್ರಜ್ವಲ್ ತಾಯಿ ಚಂದ್ರಲೇಖಾ. ಬಿಡುಗಡೆ ಮಾಡಿದರು. ಹರಿ ಪ್ರಸಾದ್ ಜಕ್ಕ ಅವರ ನಿರ್ದೇಶನದಲ್ಲಿ…ತಾಯಿ)

ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್‌ ದೇವರಾಜ್ ಮುಖ್ಯ ಭೂಮಿಕೆಯ ‘ಗಣ’ ಸಿನಿಮಾದ ಟ್ರೇಲರನ್ನ ಪ್ರಜ್ವಲ್ ತಾಯಿ ಚಂದ್ರಲೇಖಾ. ಬಿಡುಗಡೆ ಮಾಡಿದರು. ಹರಿ ಪ್ರಸಾದ್ ಜಕ್ಕ ಅವರ ನಿರ್ದೇಶನದಲ್ಲಿ ಮೂಡಿಬಂದ ಮೊದಲ ಕನ್ನಡ ಸಿನಿಮಾ‌ ಗಣ. ‘ಗಣ’ ಚಿತ್ರಕ್ಕೆ ಬೆಂಗಳೂರು-ಮೈಸೂರಿನಲ್ಲಿ ಚಿತ್ರೀಕರಣ ಕೆಲಸ‌ ನಡೆದಿದೆ. ‘ನೆನೊಕ್ಕಡೇನೆ’, ‘100% ಲವ್’ ಮುಂತಾದ ಸಿನಿಮಾಗಳಿಗೆ ಸುಕುಮಾರ್ ಜೊತೆಗೆ ರೈಟರ್‌ ಆಗಿ ಕೆಲಸ ಮಾಡಿರುವ ಹರಿ ಪ್ರಸಾದ್, ತೆಲುಗಿನಲ್ಲಿ ಬೇಡಿಕೆಯ ಸ್ಕ್ರಿಪ್ಟ್‌ ರೈಟರ್. ಎರಡು ಸಿನಿಮಾಗಳಿಗೆ ನಿರ್ದೇಶನವನ್ನೂ ಮಾಡಿರುವ ಹರಿ ಪ್ರಸಾದ್ ಜಕ್ಕ ಅವರು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ನೀಡಿದ್ದಾರೆ. ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ‘ಗಣ ಚಿತ್ರದಲ್ಲಿ ಪ್ರಜ್ವಲ್ ಎದುರು ಯಶಾ ಶಿವಕುಮಾರ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶಾಲ್ ಹೆಗ್ಡೆ, ವೇದಿಕಾ ಕುಮಾರ್, ಮಾಸ್ಟರ್ ರಘುನಂದನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಿವರಾಜ್ ಕೆ.ಆರ್. ಪೇಟೆ, ಕೃಷಿ ತಾಪಂಡ, ಸಂಪತ್ ರಾಜ್, ರವಿ ಕಾಳೆ, ರಮೇಶ್ ಭಟ್, ಉಮೇಶ್, ಸಿದ್ಲಿಂಗು ಶ್ರೀಧರ್, ಬಾಬು ಹಿರಣ್ಣಯ್ಯ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣವಿದ್ದು , ಹರೀಶ್ ಕೊಮ್ಮೆ ಸಂಖಲನ ಮಾಡಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಡೈನಾಮಿಕ್ ಪ್ರಿನ್ಸ್ ಇನ್ಮುಂದೆ ‘ಗಣ’ ಟೀಸರ್ ರಿಲೀಸ್ ಮಾಡಿದ ಚಂದ್ರಲೇಖಾ- (ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್‌ ದೇವರಾಜ್ ಮುಖ್ಯ ಭೂಮಿಕೆಯ ‘ಗಣ’ ಸಿನಿಮಾದ ಟ್ರೇಲರನ್ನ ಪ್ರಜ್ವಲ್ ತಾಯಿ ಚಂದ್ರಲೇಖಾ. ಬಿಡುಗಡೆ ಮಾಡಿದರು. ಹರಿ ಪ್ರಸಾದ್ ಜಕ್ಕ ಅವರ ನಿರ್ದೇಶನದಲ್ಲಿ…ತಾಯಿ) Read More »

Scroll to Top