ಒಟಿಟಿಗೆ ಬಂದೇ ಬಿಟ್ಟಾ ಡೇರ್ ಡೆವಿಲ್ ಮುಸ್ತಾಫಾ:ಅಮೆಜಾನ್ ಪ್ರೈಂನಲ್ಲಿ ಡೇರ್ ಡೆವಿಲ್ ಮುಸ್ತಾಫಾ…!
Dare Devil Mustafa:ಮೇ 19ರಂದು ತೆರೆಕಂಡಿದ್ದ ಡೇರ್ ಡೆವಿಲ್ ಮುಸ್ತಾಫಾ ಪೂರ್ಣಚಂದ್ರ ತೇಜಸ್ವಿ ಆಧಾರಿತ ಕಥೆಯಾಗಿದೆ. ಮೇಕಿಂಗ್ ಮತ್ತು ಗಟ್ಟಿ ಕಂಟೆಂಟ್ ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಕರ್ನಾಟಕ ಮಾತ್ರವಲ್ಲದೆ, ಪಕ್ಕದ ರಾಜ್ಯದಲದಲಿಯೂ ಹೊಸ ಹೊಲೆ ಹುಟ್ಟುಹಾಕಿದ ಡೇರ್ ಡೆವಿಲ್ ಮುಸ್ತಾಫಾ ಚಿತ್ರಮಂದಿರದಲ್ಲಿ ಓಡುತ್ತಿರುವಾಗಲೇ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈ ವಿಚಾರವನ್ನು ಚಿತ್ರತಂಡ ರಿವೀಲ್ ಮಾಡದಿದ್ದರೂ, ಪ್ರೈಂ ಇಂಡಿಯಾ ತನ್ನ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದೆ. ಶಶಾಂಕ್ ಸೋಗಲ್ ನಿರ್ದೇಶನ ಮಾಡಿರುವ ಸಿನಿಮಾಗೆ ಡಾಲಿ ಬೆನ್ನಾಗಿ ನಿಂತಿದ್ದರು.ನೋಡುಗರಿಂದಲೂ ಬಹುಪರಾಕ್ ಪಡೆದ ಸಿನಿಮಾ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆದು ಈಗ ಓಟಿಟಿಯಲ್ಲಿ ಪ್ರದರ್ಶನ ಗೊಳ್ಳುತ್ತಿದೆ. ಡೇರ್ ಡೆವಿಲ್ ಮುಸ್ತಾಫಾ ತಂಡ:ಶಶಾಂಕ್ ಸೋಗಾಲ್ ನಿರ್ದೇಶನ ಮಾಡಿದ್ದಾರೆ, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಬರೆದಿರುವ ಸಾಹಿತ್ಯಕ್ಕೆ ನವನೀತ್ ಶ್ಯಾಮ್ ಸಂಗೀತ ನೀಡಿದ್ದಾರೆ. ರಾಹುಲ್ ರಾಯ್ ಛಾಯಾಗ್ರಹಣ ಚಿತ್ರಕ್ಕೆ ಇದೆ. ಸಿನಿಮಾದಲ್ಲಿ ಪ್ರಮುಖ ಪಾತ್ರಗಳಾದ ಮುಸ್ತಫಾ ಮಾತ್ರದಲ್ಲಿ ಶಿಶಿರ್ ಬೈಕಾಡಿ, ರಾಮಾನುಜ ಅಯ್ಯಂಗಾರಿ ಪಾತ್ರದಲ್ಲಿ ಆದಿತ್ಯ ಅಶ್ರೀ ನಟಿಸಿದ್ದಾರೆ. ಉಳಿದಂತೆ ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಹಿರಿಯ ನಟ ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಸೇರಿ ಅನೇಕ ಕಲಾವಿದರು ನಟಿಸಿದ್ದಾರೆ. .ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್
ಒಟಿಟಿಗೆ ಬಂದೇ ಬಿಟ್ಟಾ ಡೇರ್ ಡೆವಿಲ್ ಮುಸ್ತಾಫಾ:ಅಮೆಜಾನ್ ಪ್ರೈಂನಲ್ಲಿ ಡೇರ್ ಡೆವಿಲ್ ಮುಸ್ತಾಫಾ…! Read More »