Karnataka Bhagya

Author name: kartik

ಅಪರೂಪದ ಕ್ಷಣ..ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಭೇಟಿ…ಬಾಲ್ಯದ ದಿನಗಳಿಗೆ ಜಾರಿದ ಅಣ್ಣ ತಂಗಿ..!

ಅಭಿ ಮದುವೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ..ಹೇಗಿದೆ ಗೊತ್ತಾ ಅಣ್ಣ-ತಂಗಿ ಬಾಂಧವ್ಯ? ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ..ಈ ಇಬ್ಬರು ಚಿತ್ರರಂಗದ ತಾರೆಯರು. ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣ-ತಂಗಿ..ಆದರೆ ಇಲ್ಲಿವರೆಯೂ ವಿನೋದ್ ಆಗಲಿ..ಸೌಂದರ್ಯ ಆಗಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ..ಒಬ್ಬರನ್ನೊಬ್ಬರ ಭೇಟಿಯಾಗಿಲ್ಲ. ಅಂತಹ ಸನ್ನಿವೇಶ ನಿರ್ಮಾಣವಾಗಿಲ್ಲ ಅಂತೇನಲ್ಲ..ಒಟ್ಟಿಗೆ ಆಡುತ್ತಾ ಬೆಳೆದ ಇವರಿಬ್ಬರು ಈ ಅಣ್ಣ ತಂಗಿ ಬದಲಾದ ಸನ್ನಿವೇಶದಲ್ಲಿ ದೂರ ಉಳಿದಿದ್ದೂ ಬಿಟ್ರೆ, ಅವರ ನಡುವೆ ಗಾಂಧಿನಗರ ಮಾತಾಡಿಕೊಳ್ಳುವ ರೀತಿ ಸಂಬಂಧವೇನು ಅಳಸಿಲ್ಲ. ವಿನೋದ್ ಹಾಗೂ ಸೌಂದರ್ಯ ಇಂದಿಗೂ..ಎಂದೆಂದಿಗೂ ಅಣ್ಣ ತಂಗಿಯೇ..ಆದ್ರೆ ಅವರಿಬ್ಬರನ್ನು ಅವರ ಅಕ್ಕ-ಪಕ್ಕದವರು ಭೇಟಿ ಮಾಡಲಾಗದಂತೆ ನೋಡಿಕೊಂಡಿದ್ದರು ಅನ್ನೋದೇ ವಿಪರ್ಯಾಸ..ಆದ್ರೆ ಸಮಯ-ಸಂದರ್ಭ ಇದೆಲ್ಲಾ ಸಂಬಂಧಗಳನ್ನು ಮತ್ತೆ ಬೆಸೆಯುವಂತೆ ಮಾಡಿದೆ. ಮೊನ್ನೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ನಡೆದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ ಆರತಕ್ಷಣೆಯಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಮುಖಾಮುಖಿಯಾಗಿದ್ದಾರೆ. ಬಹಳ ವರ್ಷದ ಬಳಿಕ ತಂಗಿ ನೋಡಿದ ಖುಷಿ ವಿನೋದ್ ಅವರದ್ದು, ಅಣ್ಣನನ್ನೂ ನೋಡಿದ ಖುಷಿ ಸೌಂದರ್ಯಗೆ..ಭೇಟಿ ಕ್ಷಣದಲ್ಲಿ ಅಣ್ಣ ತಂಗಿ ಮತ್ತೆ ಬಾಲ್ಯದ ದಿನಗಳಿಗೆ ಜಾರಿದ್ದಾರೆ. ಬಾಲ್ಯದ ಆಟ-ತುಂಟಾಟ ನೆನಪುಕೊಂಡು ಒಂದಷ್ಟು ಸಮಯ ಚರ್ಚೆ ನಡೆಸಿದ್ದಾರೆ. ಅಣ್ಣನ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಯಲ್ಲಿಯೂ ಸೌಂದರ್ಯ ಖುಷಿ ಖುಷಿಯಿಂದ ಕಾಲ ಕಳೆದು ಮೂವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮರಿಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ನಡುವೆ ಅಣ್ಣ ತಂಗಿಯ ಬಾಂಧವ್ಯವಿದೆ. ಅದು ಬಿಟ್ರೆ ಅವ್ರು ದೂರವಾಗಿದ್ದರೆ ,ಅವ್ರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋ ಮಾತುಗಳು ಸತ್ಯಕ್ಕೆ ದೂರವಾದುದ್ದು.

ಅಪರೂಪದ ಕ್ಷಣ..ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಭೇಟಿ…ಬಾಲ್ಯದ ದಿನಗಳಿಗೆ ಜಾರಿದ ಅಣ್ಣ ತಂಗಿ..! Read More »

ತಮಿಳು ನಟ ಜಯಂರವಿ ಹೊಸ ಸಿನಿಮಾ ಅನೌನ್ಸ್..!

ಜಯಂಗೆ ಲೇಡಿ ಡಾನ್ ನಯನತಾರಾ ನಾಯಕಿ. ಪೊನ್ನಿಯಿನ್ ಸೆಲ್ವನ್ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ತಮಿಳು ನಟ ಜಯಂರವಿ ಇದೀಗ ಇರೈವನ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.  ತಮಿಳು, ಹಿಂದಿ, ತೆಲುಗು,ಮಲಯಾಳಂ ಭಾಷೆಯಲ್ಲಿ ‘ಇರೈವನ್’ ಸಿನಿಮಾ‌‌ ಮೂಡಿಬರಲಿದ್ದು ನಾಯಕನಿಗೆ ಲೇಡಿ ಸೂಪರ್ ಸ್ಟಾರ್ ನಯನತಾರಾ  ಕಾಣಿಸಿಕೊಳ್ಳಲಿದ್ದಾರೆ.  ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೊನೆ ಹಂತದಲ್ಲಿರುವ ಇರೈವನ್ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. 2024 ಆಗಸ್ಟ್ 25ಕ್ಕೆ ವರ್ಲ್ಡ್ ವೈಡ್ ಈ ಚಿತ್ರ ತೆರೆಕಾಣಲಿದೆ. ಆಕ್ಷನ್ ಥ್ರಿಲ್ಲರ್ ಇರೈವನ್ ನಲ್ಲಿ ರಾಹುಲ್ ಬೋಸೆ, ಅಶಿಶ್ ವಿದ್ಯಾರ್ಥಿ, ನರೇನ್, ವಿಜಯಲಕ್ಷ್ಮೀ, ಚಾರ್ಲಿ, ಬಗ್ಸ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಈ ಪ್ರಾಜೆಕ್ಟ್ ಗೆ ಐ.ಅಹಮದ್ ಆಕ್ಷನ್ ಕಟ್ ಹೇಳಿದ್ದು, ಯುವನ್ ಶಂಕರ್ ಸಂಗೀತ, ಮಣಿಕಂದನ್ ಬಾಲಾಜಿ ಸಂಕಲನ, ಸುಧನ್ ಸುಂದರಂ ಮತ್ತು ಜಯರಾಮ್.ಜಿ ನಿರ್ಮಾಣ ಮಾಡಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ತಮಿಳು ನಟ ಜಯಂರವಿ ಹೊಸ ಸಿನಿಮಾ ಅನೌನ್ಸ್..! Read More »

ಸೀರೇಯಲ್ಲಿ ಮನೀಶಾ ಕೊಯಿರಾಲಾ ಸಖತ್ ಮಿಂಚಿಂಗ್.

ಭಾರತೀಯ ಚಿತ್ರರಂಗದಲ್ಲಿ ಮನಿಷಾ ಕೊಯಿರಾಲಾ ಅವರಷ್ಟು ಮಿಂಚಿದವರು.ಕೆಲವೇ ಕೆಲವು ನಟಿಯರು. ತನ್ನ ಕಾಂತೀಯ ಉಪಸ್ಥಿತಿ, ಅಪಾರ ಪ್ರತಿಭೆ ಮತ್ತು ದಶಕದ ವೃತ್ತಿಜೀವನದೊಂದಿಗೆ, ಅವರು ವಿಶ್ವಾದ್ಯಂತ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನುಗಿಟ್ಟಿಸಿಕೊಂಡಿದ್ದಾರೆ. ಮನಿಶಾ ಕೊಯಿರಾಲಾ ಇತ್ತೀಚೆಗೆ ತನ್ನ ಭಾರತೀಯ ಬಟ್ಟೆಗಳ ಕೆಲವು ಅದ್ಭುತ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಳು, ಅದರಲ್ಲಿ ಭಾರತೀಯ ಉಡುಪಾದ ಸೀರೆಯ ಮೇಲಿನ ಪ್ರೀತಿಯನ್ನು ತೋರಿಸುತ್ತಿದ್ದಾಳೆ. ವಿಭಿನ್ನ ಶೈಲಿಯ ಸೀರೆಗಳು ಮತ್ತು ಸೂಟ್‌ಗಳನ್ನು ಧರಿಸಿದ್ದಳು. ಅವಳ ಸರಳತೆ ಮತ್ತು ಸುಂದರವಾದ ನಗು, ನಿಜವಾಗಿಯೂ ಕಣ್ಣಿಗೆ ಕಟ್ಟುವಂತೆ ಕಾಣುತ್ತದೆ. ಮನೀಶಾ ಬಾಲಿವುಡ್‌ನ ಅತ್ಯಂತ ಪ್ರೀತಿಪಾತ್ರ ವ್ಯಕ್ತಿಗಳಲ್ಲಿ ಒಬ್ಬರು, ಅವಳ ಡ್ರೆಸ್ಸಿಂಗ್ ಸೆನ್ಸ್ ತುಂಬಾ ವಿಭಿನ್ನವಾಗಿರುತ್ತದೆ. ಬಾಲಿವುಡ್ ನಟಿಯ ನಿತ್ಯಹರಿದ್ವರ್ಣ ಸೌಂದರ್ಯವು ತನ್ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ವಿವಿಧ ಹೊದಿಕೆಯ ಸೀರೆಗಳು ಮತ್ತು ಸೂಟ್‌ಗಳಲ್ಲಿ ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತದೆ. ಮನೀಶಾ ಕೊಯಿರಾಲಾ ಅವರ ಸೀರೆಯುಟ್ಟ ಪೋಟೊ ಪ್ಯಾನ್ಸ್ ಗಳನ್ನ ಫಿದಾ ಆಗುವಂತೆ ಮಾಡಿದೆ.ಸೀರೆಯು ಭಾರತೀಯ ಸಂಸ್ಕೃತಿಯ ಅಪ್ರತಿಮ ಉಡುಗೆಯಾಗಿದೆ. ಇದಕ್ಕಾಗಿ, ನಮ್ಮ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿ ಮನಿಶಾ ಕೊಯಿರಾಲಾ ಸೀರೆಯಲ್ಲಿ ಲಕ್ಷಣವಾಗಿ ಕಾಣುತ್ಯಿರುವುದು ನಮ್ಮ‌ ಸಂಸ್ಕ್ರತಿಯ ಪ್ರತೀಕವಾಗಿದೆ.ಇನ್ನು ಈಕೆ ಬಾಂಬೆ ಸೇರಿದಂತೆ ದಿಲ್‌ಸೆ, ಹಿಂದೂಸ್ತಾನಿ, 1942,ಭಾಗಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾಳೆ

ಸೀರೇಯಲ್ಲಿ ಮನೀಶಾ ಕೊಯಿರಾಲಾ ಸಖತ್ ಮಿಂಚಿಂಗ್. Read More »

ಮತ್ತೆ ಮದುವೆ ನೈಜ ಕಥೆ

ರಾಜ್ಯಾದ್ಯಂತ ಮತ್ತೆ ಮದುವೆ ಸಿನಿಮಾ ಬಿಡುಗಡೆಯಾಗಿ ವೀಕ್ಷಕರಿಂದ ಉತ್ತಮ‌ ಪ್ರತಿಕ್ರಿಯೆ ಪಡೆಯುತ್ತಿದೆ‌.ಪ್ಯಾಮಿಲಿ ಕಂಟೆಂಟ್ ಸಿನಿಮಾ‌ ಇದಾಗಿದ್ದು ಮನೆಯ ಒಡೆಯ ಮತ್ತು ಒಡತಿ ಕೂತು ನೋಡುವಂತ ಸಿನಿಮಾ ಇದಾಗಿದೆ.ಸಣ್ಣ ಸಣ್ಣ ವಿಷಯಕ್ಕು ಗಂಡ ಹೆಂಡತಿಯರ ನಡುವೆ ಬಿರುಕು ಉಂಟಾಗಿ ಡಿವೋರ್ಸ್ನ ಕಡೆ ಮುಖ ಮಾಡುವವರಿಗೆ ಈ ಸಿನಿಮಾ‌ ಅರ್ಪಣೆ.ಒಂದು ಗಂಡು ಹೆಣ್ಣನ್ನ ಮದುವೆಯಾದ ಮಾತ್ರಕ್ಕೆ ಎಲ್ಲವು ಮುಗಿದಂತೆ ಅಲ್ಲ. ಹೆಂಡತಿ ಎಂದರೆ ಅರ್ಧಾಂಗಿ ಇದ್ದಂತೆ ಕೇವಲ ಮನೆ ಕೆಲಸ ಅಷ್ಟೇ ಅಲ್ಲದೆ ಗಂಡನ ಕಷ್ಟ ಸುಖದಲ್ಲಿಯು ಅವಳಿಗೆ ಹಕ್ಕಿದೆ ಎಂಬುದು ಕಥೆಯ ಸಾರಾಂಶ. ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರ ಎಕ್ಸ್ ಕ್ಲೂಸಿವ್ ಕಥೆಯನ್ನೆ ತೆರೆಯ ಮೇಲೆ ತರಲಾಗಿದೆ. ಪ್ರೀತಿ ಯಾವಾಗ ಯಾರ ಮೇಲಾದರು ಹುಟ್ಟಬಹುದು, ಪ್ರೀತಿಗೆ ವಯಸ್ಸಿನ ಕಂಡೀಶನ್ ಇಲ್ಲ ಎಂಬದು ಮೇಲ್ನೋಟಕ್ಕೆ ಕಾಣುತ್ತದೆ.ಪಾತ್ರಕ್ಕೆ ಜೀವ ತುಂಬುವ ಕೆಲಸವನ್ನ ಪವಿತ್ರಾ ಲೋಕೇಶ್ ,ನರೇಶ್ ತುಂಬಾ ಅಧ್ಬತವಾಗಿ ಮಾಡಿದ್ದಾರೆ. ಕಾನೂನಿನ‌ ಚೌಕಟ್ಟಿನಲ್ಲಿ ಹೆಣ್ಣು ಇಷ್ಟಪಟ್ಟವರೊಡನೆ ಸಂಸಾರ ಮಾಡುಬಹುದು ಎಂಬುದನ್ನ ನಿರ್ದೇಶಕರು ತುಂಬಾ ಸ್ಪಷ್ಟವಾಗಿ ತೋರಿಸಿದ್ದಾರೆ.ನಟ ನರೇಶ್ ಮಾತನಾಡಿ.ಒಂದೋಳ್ಳೆ ಸಂದೇಶ ಇರುವ ಸಿನಿಮಾವನ್ನ ನಾವು ಮಾಡಿದ್ದೇವೆ.ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ನಾನು ಸಿನಿಮಾದಲ್ಲಿ ಮಾತಾಡಿದ್ದೇನೆ. ಪ್ರತಿಯೊಬ್ಬರಿಗು ತಮಗೆ ಇಷ್ಟ ಬಂದಂತೆ ಬದುಕುವ ಹಕ್ಕಿದೆ.ಈ ಸಿನಿಮಾಗಾಗಿ ಹಗಲು ರಾತ್ರಿ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರಿಗೆ ಧನ್ಯವಾದ ಹೇಳುತ್ತೇನೆ.ದಯಮಾಡಿ ಪ್ರತಿಯೊಬ್ಬರು ಸಿನಿಮಾವನ್ನ ಥಿಯೇಟರ್ ಗೆ ಬಂದು ನೋಡಿ ಎಂದರು.

ಮತ್ತೆ ಮದುವೆ ನೈಜ ಕಥೆ Read More »

ಅಭಿಷೇಕ್ ಕಾಲೆಳೆದ ರಿಷಬ್ ಶೆಟ್ಟಿ,ಪ್ರಮೋದ್ ಶೆಟ್ಟಿ‌

‘ರೆಬೆಲ್ ಸ್ಟಾರ್’ ಅಂಬರೀಷ್ ಪುತ್ರ ಅಭಿಷೇಕ್ ಮತ್ತು ಫ್ಯಾಷನ್ ಗುರು ಪ್ರಸಾದ್‌ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಜೋಡಿಯ ವಿವಾಹವು ತುಂಬಾ ಅದ್ಧೂರಿಯಾಗಿ ನಡೆಯಿತು‌.ಅಭಿಷೇಕ್ ಮತ್ತು ಅವಿವಾ ಮದುವೆಯ ಸಂಭ್ರಮದಲ್ಲಿ ಎರಡು ಕುಟುಂಬಗಳ ಆಪ್ತರು, ಬಂಧು ಮಿತ್ರರು ಭಾಗಿಯಾಗಿದ್ದರು. ಅಭಿಷೇಕ್ ಮತ್ತು ಅವಿವಾ ಅವರು ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದ್ದು, ನವ ಜೋಡಿಗೆ ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ,ಪತ್ನಿ ಪ್ರಗತಿ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಪತ್ನಿ ಸುಪ್ರೀತಾ ಶೆಟ್ಟಿ ಹರಸಿ ಹಾರೈಸಿದರು‌‌. ಇದರ ನಡುವೆಯೆ ಕಾಂತಾರ 1 ಯಾವಾಗ ಎಂದು ಅಭಿಷೇಕ್ ಕೇಳಿದ್ದಕ್ಕೆ ನಿನ್ನ ಮದುವೆ ಆಯ್ತಲಾ‌ ಇನ್ಮೇನು ಕಾಂತಾರ ಮೊದಲ ಭಾಗ ಬರುತ್ತೆ ಅಂತಾ ಕಾಲೆಳೆದ್ರು‌.

ಅಭಿಷೇಕ್ ಕಾಲೆಳೆದ ರಿಷಬ್ ಶೆಟ್ಟಿ,ಪ್ರಮೋದ್ ಶೆಟ್ಟಿ‌ Read More »

Scroll to Top