Karnataka Bhagya

Author name: Mahesh Kalal

ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕ ತುನ್ನೂರು

ಮಾ.೨೩ರಿಂದ ಭೀಮಾ ಸೇತುವೆ ಸಂಚಾರಕ್ಕೆ ಮುಕ್ತ ಯಾದಗಿರಿ: ಶಹಾಪುರ-ಯಾದಗಿರಿ ಸಂಪರ್ಕ ಕಲ್ಪಿಸುವ ಭೀಮಾ ನದಿಗೆ ಅಡ್ಡಲಾಗಿರುವ ಹಳೆಯ ಸೇತುವೆ ರಿಪೇರಿ ಕಾರ್ಯ ಮುಗಿದಿದ್ದು ಮಾ.೨೩ ರಂದು ಸಂಚಾರಕ್ಕೆ ಮುಕ್ತವಾಗಲಿದೆ ಎಂದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.ಭೀಮಾ ಸೇತುವೆ ಹಾಗೂ ರೈಲ್ವೆ ಮೇಲ್ಸೇತುವೆ(ಬ್ರಿಡ್ಜ್) ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕೆಲಸ ವಿಳಂಭವಾದರೂ ಕಾಮಗಾರಿ ಗುಣಮಟ್ಟದಿಂದ ಕೂಡಿದೆ ಎಂದು ಸಂಬAಧಿಸಿದ ತಾಂತ್ರಿಕ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲು ಚರ್ಚಿಸಿದ್ದೇನೆ. ಸೇತುವೆ ಮೇಲಿನ ಸಿಸಿ ರಸ್ತೆ ಪೂರ್ಣಗೊಂಡಿದ್ದು, ಈಗ ಕ್ಯೂರಿಂಗ್ ಸಮಯವಿದೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಲು ಅಲ್ಲಲ್ಲಿ ಹೋಲ್ಸ್ ಬಿಡಲಾಗಿದೆ. ಹೋಲ್‌ಗಳ ಮೂಲಕ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಸ್ಟೀಲ್ ರಾಡ್ಸ್ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಈ ಕೆಲಸ ಮಾಡುವುದಾಗಿ ಅಧಿಕಾರಿ ತಿಳಿಸಿದ್ದಾಗಿ ಹೇಳಿದರು.ಈ ವರ್ಷ ಅಧಿಕ ಮಳೆ ಆಗಿದ್ದರಿಂದ ಸುಮಾರ ೧೦೦ ವರ್ಷದ ಸೇತುವೆ ತಗ್ಗುಗುಂಡಿಗಳು ಬಿದ್ದು ಸತ್ಯಾನಾಸ್ ಆಗಿತ್ತು. ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.ಸಂಘ ಸಂಸ್ಥೆಗಳಿಂದ ಸೇತುವೆ ರಿಪೇರಿಗೆ ಒತ್ತಡವೂ ಇತ್ತು.ಜನರ ಹಿತದೃಷ್ಟಿಯಿಂದ ಸರ್ಕಾರದ ಗಮನಕ್ಕೆ ತಂದು ಸೇತುವೆ ದುರಸ್ಥಿಗೊಳಿಸಲಾಗಿದೆ. ವಾರದಲ್ಲಿ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.ಅಧಿಕ ಮಳೆಯಾಗಿದ್ದರಿಂದ ಭೀಮಾ ಸೇತುವೆ ಮತ್ತು ರೈಲ್ವೆ ಮೇಲ್ಸೇತುವೆ ಕಸಿದಿತ್ತು. ಭೀಮಾ ಸೇತುವೆ ರಿಪೇರಿ ಕಾರ್ಯಕ್ಕೆ ರೂ.೧ ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ರೈಲ್ವೆ ಮೇಲ್ಸೇತುವೆ ಸೈಡ್ ವಾಲ್ ಮತ್ತು ಪೇಚಿಂಗ್ ಕಲ್ಲುಗಳ ಅಳವಡಿಸಲು ರೂ.೧ ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಗುತ್ತಿಗೆದಾರ ಸುದರ್ಶನ ನಾಯ್ಕ್, ಕಾಂಗ್ರೆಸ್ ಮುಖಂಡರಾದ ವೆಂಕಟರೆಡ್ಡಿ ವನಕೇರಿ, ಲಚಮ ರೆಡ್ಡಿ,ಮಲ್ಲಿಕಾರ್ಜುನ ಈಟೆ,ಸುರೇಶ ಮಡ್ಡಿ, ಶರಣಗೌಡ ಬಲಕಲ್, ಕಿಸ್ಟೋಪರ ಬೆಳ್ಳಿ, ಗುಲಾಮ ಮುರ್ತುಜಾ, ಅಮರೇಶ ಜಾಕಾ,ಲೋಕೋಪಯೋಗಿ ಇಲಾಖೆ ಎಇಇ ಶ್ರೀಧರ ಇದ್ದರು. ಬಾಕ್ಸ.. ಬಾಕ್ಸ..ಈಗಿರುವ ಭೀಮಾ ಮತ್ತು ರೈಲ್ವೆ ಸೇತುವೆ ಅತ್ಯಂತ ಪರಾತನವಾಗಿದೆ. ಇದಕ್ಕೆ ಪರ್ಯಾಯ ಬ್ರಿಡ್ಜ್ ನಿರ್ಮಾಣದ ಚಿಂತನೆ ಇದೆ. ನೂರಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಮೇಲಿರುವ ಈ ಸೇತುವೆಗೆ ಪರ್ಯಾಯವಾಗಿ ಇನ್ನೊಂದು ಸೇತುವೆ ನಿರ್ಮಾಣಕ್ಕೆ ಜನರ ಬೇಡಿಕೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಗಮನಕ್ಕೆ ಈಗಾಗಲೇ ತಂದಿದ್ದೇನೆ. ಶೀಘ್ರದಲ್ಲೇ ಅಂದಾಜು ವೆಚ್ಚ ತಯ್ಯಾರಿಸಿ ಸಲ್ಲಿಸುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕ ತುನ್ನೂರು Read More »

ರಾಣಿ ಅಬ್ಬಕ್ಕ ದೇವಿ ರಾಜ್ಯ ಪ್ರಶಸ್ತಿಗೆ ಪತ್ರಕರ್ತ ಸುರೇಶ ಲೇಂಗಟಿ ಆಯ್ಕೆ….

ರಾಣಿ ಅಬ್ಬಕ್ಕ ದೇವಿ ರಾಜ್ಯ ಪ್ರಶಸ್ತಿಗೆ ಪತ್ರಕರ್ತ ಸುರೇಶ ಲೇಂಗಟಿ ಆಯ್ಕೆ…. ಕರ್ನಾಟಕ ರಾಜ್ಯ ಸರಕಾರಿ ಮಹಿಳೆಯರ ನೌಕರ ಸಂಘ (ರಿ) ಬೆಂಗಳೂರು ಅವರು ಕೊಡ ಮಾಡುವ ರಾಣಿ ಅಬ್ಬಕ್ಕದೇವಿ ರಾಜ್ಯ ಪ್ರಶಸ್ತಿಗೆ ಕಮಲಾಪುರ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಸುರೇಶ್ ಲೇಂಗಟಿ ಆಯ್ಕೆಯಾಗಿದ್ದಾರೆ. ಮಾರ್ಚ್ 9 ರಂದು ಕಲಬುರ್ಗಿ ನಗರದ ಪೂಜ್ಯ ಡಾ. ಬಸವರಾಜ ಅಪ್ಪ ಮೆಮೋರಿಯಲ್ ಹಾಲ್ , ಅಪ್ಪ ಪಬ್ಲಿಕ್ ಶಾಲೆಯಲ್ಲಿ ರಾಜ್ಯ ಸರಕಾರಿ ಮಹಿಳೆಯರ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಕಲ್ಬುರ್ಗಿ ಜಿಲ್ಲೆಯ ನೂತನ ಪದಾಧಿಕಾರಿಗಳ ಪದಗ್ರಹಣ, ಸುಭದ್ರ ರೇಖೆ ಕವನ ಸಂಕಲನ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ರಾಣಿ ಅಬ್ಬಕ್ಕದೇವಿ ರಾಜ್ಯ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಪತ್ರಿಕಾ ರಂಗದಲ್ಲಿ ಸುರೇಶ ಲೇಂಗಟಿ ಅವರ ಗ್ರಾಮೀಣ ಪ್ರದೇಶಗಳಲ್ಲಿನ ಜನಪರ ವರದಿಗಳನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಮಹಿಳೆಯರ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ನಂದಿನಿ ಸನಬಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ರಾಣಿ ಅಬ್ಬಕ್ಕ ದೇವಿ ರಾಜ್ಯ ಪ್ರಶಸ್ತಿಗೆ ಪತ್ರಕರ್ತ ಸುರೇಶ ಲೇಂಗಟಿ ಆಯ್ಕೆ…. Read More »

ಯಾದಗಿರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆ

ಯಾದಗಿರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆ

ಪತ್ರಕರ್ತರು ಸಾಮಾಜಿಕ ಕಳಕಳಿಯ ವರದಿ ಮಾಡಲಿ ಕರ್ನಾಟಕ ಭಾಗ್ಯ ವಾರ್ತೆಯಾದಗಿರಿ : ಯಾವುದೇ ಸುದ್ದಿ ಜನರಿಗೆ ತಲುಪಲು ಪತ್ರಕರ್ತರ ಪಾತ್ರ ಮಹತ್ವದ್ದಾಗಿದ್ದು, ಸಮಾಜ ತಿದ್ದುವಲ್ಲಿ ಬಹಳಷ್ಟು ಪ್ರಮುಖ ವಹಿಸುತ್ತಾರೆ. ಹಾಗಾಗಿ, ಸಾಮಾಜಿಕ ಕಳಕಳಿಯಿಂದ ಪರಿಣಾಮಕಾರಿಯಾಗಿ ವರದಿ ಮಾಡಿ ಸಮಾಜದ ಅಂಕುಡೊAಕು ತಿದ್ದುವ ಕೆಲಸ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಹೇಳಿದರು.ನಗರದಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಎಷ್ಟೋ ಸಂದರ್ಭದಲ್ಲಿ ಜೀವವನ್ನು ಪಣಕ್ಕಿಟ್ಟು ಸುದ್ದಿಗಳು ಮಾಡಬೇಕಾಗುತ್ತದೆ. ಅಂತಹ ಸಮಯದಲ್ಲಿ ಪತ್ರಕರ್ತರು ಕೊಲೆಯಾದ ಘಟನೆಗಳು ನಡೆದಿವೆ. ಆದ್ದರಿಂದ, ಈ ವೃತ್ತಿಯಲ್ಲಿ ಕೆಲಸ ಮಾಡುವುದು ಅಷ್ಟೊಂದು ಸುಲಭವಿಲ್ಲ ಎಂದರು.ಪತ್ರಕರ್ತರ ಕೆಲಸ ಬಹಳಷ್ಟು ಕಷ್ಟದ ಕೆಲಸವಾಗಿದ್ದರೂ, ಜನರು ಹೆದರುವುದು ಮಾಧ್ಯಮಗಳಿಗೆ ಮಾತ್ರ. ಅಧಿಕಾರಿಗಳು ಹೆದರಿಸಿದರೆ ಹಾಗೂ ಪೊಲೀಸರು ಕೇಸ್ ಹಾಕುತ್ತೇವೆ ಎಂದರೂ ಜನರು ಹೆದರುವುದಿಲ್ಲ. ಸಮಾಜವನ್ನು ನಿಕೃಷ್ಟ ಪರಿಸ್ಥಿತಿಗೆ ಒಯ್ಯುವಂತಹ ಕೃತ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನಡೆತ್ತಿದ್ದು, ಜನರು ಕೂಡ ನೋಡಿಕೊಂಡು ಸುಮ್ಮನಿರುತ್ತಾರೆ. ಇಂತಹವುಗಳ ಬಗ್ಗೆ ವರದಿ ಮಾಡಿದರೆ ಇಂದಲ್ಲ, ನಾಳೆ ಜನರು ಪ್ರಶ್ನೆ ಮಾಡುವುದನ್ನು ಕಲಿಯಲಿದ್ದಾರೆ ಎಂದರು.ಪೋಕ್ಸೊ ಕಾಯ್ದೆಯಡಿ ವರದಿ ಮಾಡುವಾಗ ಹೆಸರು ಹಾಗೂ ವಿಳಾಸ ಗೌಪ್ಯವಾಗಿ ಇಡಬೇಕು. ಇಂತಹ ಮಾಹಿತಿ ಪ್ರಕಟಿಸಿದರೆ ಅದು ಅಪರಾಧ ಆಗಲಿದೆ. ಇಂತಹ ಸೂಕ್ಷ್ಮತೆ ಅರಿತುಕೊಂಡು ಕೆಲಸ ಮಾಡಬೇಕು ಎಂದರು.ವರದಿ ಆಗಬೇಕಾದ ಸುದ್ದಿಗಳನ್ನು ಹಾಗೂ ಕಾನೂನು ಬಾಹಿರ ಕೆಲಸಗಳನ್ನು ವರದಿ ಮಾಡಿದರೆ ಸಮಾಜದ ಬೆಳವಣಿಗೆಗೆ ಅನುಕೂಲವಾಗಲಿದೆ. ಆದ್ದರಿಂದ, ಏನೇ ಸಮಸ್ಯೆಯಿದ್ದರೂ ಪ್ರಕಟಿಸಿದರೆ ಸರಿಪಡಿಸಲು ಸಾಧ್ಯವಾಗಲಿದೆ. ಸಮಾಜಘಾತುಕ ಶಕ್ತಿಗಳೊಂದಿಗೆ ಬ್ರಿಟೀಷರ ಆಡಳಿತದಲ್ಲೂ ಸುದ್ದಿ ಮಾಡಲಾಗುತ್ತಿತ್ತು. ಸ್ವಾತಂತ್ರö್ಯ ಚಳವಳಿ ಸಮಯದಲ್ಲೂ ಪತ್ರಕರ್ತರು ಛಾಪು ಮೂಡಿಸುವ ಕೆಲಸಮಾಡಿದ್ದಾರೆ ಎಂದು ತಿಳಿಸಿದರು.ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ಪತ್ರಿಕೆಗಳು ಸಮಾಜದ ಕನ್ನಡಿ ಇದ್ದಂತೆ. ಪ್ರಶಸ್ತಿ ಎಂಬುದು ಜವಾಬ್ದಾರಿ ಹೆಚ್ಚಿಸಲಿದೆ. ಆದರೆ, ಕೆಲವೊಂದು ಪತ್ರಿಕೆಗಳಲ್ಲಿ ದುರ್ಬಳಕೆ ಮಾಡಿಕೊಳ್ಳುವುದು ಕೂಡ ನಡೆಯುತ್ತಿದೆ. ಇಂತಹಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.ಅನ್ಯಾಯಕ್ಕೊಳಗಾದ ನಿರಾಶ್ರಿತರಿಗೆ ಎಲ್ಲಿಯೂ ನ್ಯಾಯ ದೊರೆದಿದ್ದಾಗ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿರುವ ಪತ್ರಿಕಾರಂಗ ಸುದ್ದಿ ಪ್ರಕಟಿಸುವುದರಿಂದ ನ್ಯಾಯ ದೊರಕುತ್ತದೆ. ಆದ್ದರಿಂದ, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಜೊತೆಗೆ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದಿAದ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ ಎಂದು ತಿಳಿಸಿದರು.ಆರೋಗ್ಯ ಸಂಬAಧ ನಗರಸಭೆ ಅನುದಾನ ಮೀಸಲಿಟ್ಟಿದೆ. ಮುಂದಿನ ಬಜೆಟ್‌ನಲ್ಲಿ ಕೂಡ ಮೀಸಲಿಡಲಾಗುತ್ತದೆ. ಪತ್ರಕರ್ತರ ನಿವೇಶನಕ್ಕೆ ಸಂಬAಧಿಸಿದAತೆ ನಗರಸಭೆ ಯಾವಾಗಲೂ ಸಹಕಾರ ನೀಡುತ್ತದೆ. ನಮ್ಮ ಅವಧಿ ಮುಗಿಯುವುದರೊಳಗೆ ನಿವೇಶನ ದೊರಕಿಸಲಾಗುವುದು ಎಂದು ಭರವಸೆ ನೀಡಿದರು.ರಾಜ್ಯ ಸರಕಾರದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿದ ವಿಜಯ ಕರ್ನಾಟಕ ಪತ್ರಿಕೆಯ ಕಲಬುರಗಿ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ್ ಮಾತನಾಡಿ, ಮಾನವ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ರಂಗದಲ್ಲೂ ಯಾದಗಿರಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಸಾಕ್ಷರತೆ ಪ್ರಮಾಣ ಹೆಚ್ಚಾದರೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದು ಹೇಳಿದರು.ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಸರಕಾರ ಕ್ರಮ ವಹಿಸುತ್ತಿದ್ದರೂ, ಅವಕಾಶ ಬಂದಾಗಲೆಲ್ಲ ಹಿಂದುಳಿದ ಜಿಲ್ಲೆಯ ಬಗ್ಗೆ ವರದಿಗಳನ್ನು ಮಾಡುವುದರಿಂದ ಈ ಭಾಗದ ಅಭಿವೃದ್ಧಿಗೆ ಮನ್ನಣೆ ದೊರೆಯಲಿದೆ ಎಂದರು.ಪತ್ರಿಕಾರAಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆAದು ಅಧಿಕೃತವಾಗಿಲ್ಲದಿದ್ದರೂ, ಆಳುವ ಸರಕಾರಗಳು ಮಾಧ್ಯಮಗಳನ್ನು ನಿಯಂತ್ರಣ ಮಾಡಲು ಹೊರಟಾಗ ಹಲವಾರು ಸಂದರ್ಭಗಳಲ್ಲಿ ಮಾಧ್ಯಮಗಳ ಪರವಾಗಿ ಸುಪ್ರೀಂಕೋರ್ಟ್ ನಿಂತಿರುವ ನಿದರ್ಶನಗಳಿವೆ. ಪತ್ರಕರ್ತರು ಸ್ವಯಂ ನಿಯಂತ್ರಣ ಹಾಕಿಕೊಂಡು ಸಮಾಜಕ್ಕೆ ಉಪಕಾರಿಯಾಗುವಂತ ವರದಿಗಳನ್ನು ಮಾಡಬೇಕು ಎಂದು ಸಲಹೆ ನೀಡಿದ ಅವರು, ಕರ್ನಾಟಕದಲ್ಲಿ ಅತ್ಯಂತ ಕ್ರಿಯಾಶೀಲ ಸಂಘ ಯಾದಗಿರಿ ಕಾರ್ಯನಿರತ ಪತ್ರಕರ್ತರ ಸಂಘವಾಗಿದೆ ಎಂದರು.ವಿಜಯವಾಣಿ ಸ್ಥಾನಿಕ ಸಂಪಾದಕ ಹಾಗೂ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಮಾರಾಟವಾದ ಪತ್ರಕರ್ತ ಸಾವಿರ ಭಯೋತ್ಪಾದಕರಿಗೆ ಸಮ. ಪತ್ರಿಕೋದ್ಯಮ ಕವಲು ದಾರಿಯಲ್ಲಿದ್ದು, ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಾಗಿದೆ ಎಂದು ಹೇಳಿದರು.ಪತ್ರಿಕೆಗಳ ಪ್ರಸರಣ ಸಂಖ್ಯೆ ಏರಿಕೆಯಾಗುತ್ತಿರುವುದು ಗಮನಿಸಿದರೆ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿರುವಂತೆ ಕಾಣುತ್ತಿದೆ. ಜವಾಬ್ದಾರಿಯಿಟ್ಟುಕೊಂಡು ಕೆಲಸಮಾಡಿದ ಪತ್ರಕರ್ತರಿಗೆ ಕೀರ್ತಿ ಸಿಗಲಿದೆ. ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದರಿಂದ ಪತ್ರಿಕೋದ್ಯಮ ಶ್ರೇಷ್ಠತೆ ಮೆರೆಯಲು ಸಾಧ್ಯ ಎಂದ ಅವರು, ಕಲ್ಯಾಣ ಕರ್ನಾಟಕದ ಪತ್ರಕರ್ತರ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟ ಕಲಬುರಗಿಯಲ್ಲಿ ಮಾಡಲು ಉದ್ದೇಶಿಸಲಾಗಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.ಕನ್ನಡ ಪ್ರಭ ಸ್ಥಾನಿಕ ಸಂಪಾದಕ ಅಪ್ಪಾರಾವ ಸೌದಿ ಮಾತನಾಡಿ, ಸಮಾಜಕ್ಕೆ ಎಚ್ಚರಿಸುವ ಕೆಲಸ ಪತ್ರಕರ್ತರಿಂದ ಆಗಬೇಕು. ಹಿಂದೆಲ್ಲ ಬೆಂಗಳೂರಿಗೂ ಇಲ್ಲಿಯ ಸುದ್ದಿ ಹೋಗುತ್ತಿತ್ತು. ಜಿಲ್ಲಾವಾರು ಎಡಿಷನ್ ಆಗಿರುವುದರಿಂದ ಪಕ್ಕದ ಜಿಲ್ಲೆಗೂ ಹೋಗುತ್ತಿಲ್ಲ. ಸುದ್ದಿ ವ್ಯಾಪ್ತಿ ಕಡಿಮೆಯಾಗುತ್ತ್ತಿರುವುದು ಬೇಸರದ ಸಂಗತಿ ಎಂದರು.ಅಧ್ಯಕ್ಷತೆ ವಹಿಸಿದ್ದ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಸಂಕಷ್ಟದಲ್ಲಿರುವ ಹಲವು ಪತ್ರಕರ್ತರಿಗೆ ಹಾಗೂ ಅವರ ಕುಟುಂಬದವರಿಗೆ ಸಂಘದಿAದ ಇಲ್ಲಿಯವರೆಗೆ ೨ ಲಕ್ಷದ ೯೦ ಸಾವಿರ ನೆರವು ನೀಡಲಾಗಿದೆ. ಇತಿ-ಮಿತಿಯಲ್ಲೇ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕೆಲಸ ಮಾಡಲಾಗಿದೆ. ಸಂಘದ ಪ್ರಯತ್ನದಿಂದ ನಗರಸಭೆಯಿಂದ ಪತ್ರಕರ್ತರ ಆರೋಗ್ಯ ನಿಧಿ ಸ್ಥಾಪಿಸಿ ಅನುದಾನ ಮೀಸಲಿಡಲಾಗುತ್ತಿದೆ ಎಂದು ತಿಳಿಸಿದರು.ಸಂಘದ ರಾಜ್ಯ ಪರಿಷತ್ತಿನ ಸದಸ್ಯ ರಾಘವೇಂದ್ರ ಕಾಮನಟಗಿ ಪ್ರಾಸ್ತಾವಿಕ ಮಾತನಾಡಿ, ಮಲ್ಲಪ್ಪ ಸಂಕೀನ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯ ಸಂಘದಿAದ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಉತ್ತಮವಾಗಿ ಸಂಘಟನೆ ಮಾಡುವ ಮೂಲಕ ಬಹಳಷ್ಟು ಉತ್ತಮ ಕಾರ್ಯಗಳನ್ನು ಮಾಡಲಾಗಿದೆ ಎಂದು ಹೇಳಿದರು.ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿಜಯ ಕರ್ನಾಟಕದ ಸೋಮಶೇಖರ ಕಿಲಾರಿ, ಕರ್ನಾಟಕ ಮಾಧ್ಯಮ ಮಾನತಾ ಸಮಿತಿಯ ನೂತನ ಸದಸ್ಯ ಗುರುರಾಜ ಕುಲಕರ್ಣಿ, ಕೆಯುಡಬ್ಲೂಜೆಯ ರಾಜ್ಯಮಟ್ಟದ ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ ಪುರಸ್ಕೃತ ನಾಮದೇವ ವಾಟ್ಕರ್, ಕೆಯುಡಬ್ಲೂಜೆಯ ಯಜಮಾನ್ ಟಿ. ನಾರಾಯಣಪ್ಪ ಪ್ರಶಸ್ತಿ ಪುರಸ್ಕೃತ ವಿಜಯಭಾಸ್ಕರರೆಡ್ಡಿ, ಜಿಲ್ಲಾಡಳಿತದಿಂದ ಮಾಧ್ಯಮ ಕ್ಷೇತ್ರದಿಂದ ಪ್ರಶಸ್ತಿ ಪುರಸ್ಕೃತ ವಿಶಾಲಕುಮಾರ ಶಿಂಧೆ ಅವರನ್ನು ಸನ್ಮಾನಿಸಲಾಯಿತು.ವಡಗೇರಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಕಲಾಲ್ ಇದ್ದರು.ಪತ್ರಕರ್ತ ಮಲ್ಲಿಕಾರ್ಜುನ ಆಶನಾಳ ಸ್ವಾಗತಿಸಿದರು. ಪತ್ರಕರ್ತ ನರಸಪ್ಪ ನಾರಾಯಣೋರ್ ನಿರೂಪಿಸಿ, ವಂದಿಸಿದರು.

ಯಾದಗಿರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆ

ಯಾದಗಿರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆ Read More »

ಮಹಾಸಭಾಕ್ಕೆ ಹಲವರ ನೇಮಕಸಂಘಟನೆ ಆನೆಬಲ : ಸುರೇಶ ಜಾಕಾ

ಮಹಾಸಭಾಕ್ಕೆ ಹಲವರ ನೇಮಕಸಂಘಟನೆ ಆನೆಬಲ : ಸುರೇಶ ಜಾಕಾ ಕರ್ನಾಟಕ ಭಾಗ್ಯ ವಾರ್ತೆಯಾದಗಿರಿ: ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಘಟಕದ ಪದಾಧಿಕಾರಿಗಳನ್ನು ಮತ್ತು ರಾಜ್ಯ ಯುವ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಿದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕ್ರಮವನ್ನು ಸ್ವಾಗತಿಸಿರುವ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುರೇಶ ಜಾಕಾ, ರಾಜ್ಯದ ಎಲ್ಲಡೇ ಸಂಪೂರ್ಣ ಸಂಘಟನೆ ಮಾಡಿ ಉಳಿದ ಪದಾಧಿಕಾರಿಗಳ ಆಯ್ಕೆ ಅನುಕೂಲ ಆಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು,ರಾಷ್ಟ್ರೀಯ ಘಟಕಕ್ಕೆ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಾಜದ ಅನೇಕರಿಗೆ ಅವಕಾಶ ನೀಡಿದ್ದು ಸಂಘಟನಗೆ ಬಲ ಬಂದಂತಾಗಿದೆ.ಅದರಲ್ಲಿ ಸಚಿವರಾದ ಶರಣಬಸಪ್ಪ ದರ್ಶನಾಪುರ, ಈಶ್ವರ ಖಂಡ್ರೆ, ಸಮಾಜದ ಹಿರಿಯರಾದ ಗುರಮ್ಮ ಸಿದ್ದಾರೆಡ್ಡಿ, ಸಿದ್ದಾಮಪ್ಪ ಉಪ್ಪಿನ ಅವರಿಗೆ ಸ್ಥಾನ ನೀಡಿದ್ದು ಮತ್ತು ರಾಜ್ಯ ಯುವ‌ ಘಟಕಕ್ಕೆ ಅಬ್ಬಿಗೆರೆ ಮನೋಹರ ಅವರನ್ನು ನೇಮಕ ಮಾಡಿದ್ದು ಸಂತಸ ತಂದಿದೆ ಎಂದು ಯುವ ಘಟಕದ ಅಧ್ಯಕ್ಷ ಸುರೇಶ ಜಾಕಾ ಹೇಳಿದ್ದಾರೆ.

ಮಹಾಸಭಾಕ್ಕೆ ಹಲವರ ನೇಮಕಸಂಘಟನೆ ಆನೆಬಲ : ಸುರೇಶ ಜಾಕಾ Read More »

ತುಂತುರು ನೀರಾವರಿ ಘಟಕದಿಂದ ಹೆಚ್ಚಿನ ಇಳುವರಿ ಮಾಡಿ; ಶಾಸಕ‌ ತುನ್ನೂರ್

ತುಂತುರು ನೀರಾವರಿ ಘಟಕದಿಂದ ಹೆಚ್ಚಿನ ಇಳುವರಿ ಮಾಡಿ; ಶಾಸಕ‌ ತುನ್ನೂರ್

ತುಂತುರು ನೀರಾವರಿ ಘಟಕದಿಂದ ಹೆಚ್ಚಿನ ಇಳುವರಿ ಮಾಡಿ; ಶಾಸಕ‌ ತುನ್ನೂರ್ ಯಾದಗಿರಿ : ತುಂತುರು ನೀರಾವರಿ ಘಟಕಗಳಿಂದ ರೈತರು ಹೆಚ್ಚಿನ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಮುಂದೇ ಬರಬೇಕೆಂದು ಶಾಸಕ‌ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.ನಗರದ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಯಿಂದ 2024-25 ನೇ ಸಾಲಿನ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆ ಉತ್ಪಾದನಾ ಪದ್ದತಿ ಅಡಿಯಲ್ಲಿ 385 ರೈತರಿಗೆ ತುಂತುರು ನೀರಾವರಿ ಘಟಕಗಳನ್ನು ವಿತರಣೆ ಮಾಡಿದರು. ಈಗ 11 ಗ್ರಾಮಗಳ ರೈತರಿಗೆ ವಿತರಣೆ ಮಾಡಲಾಗಿದ್ದು, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೈತರಿಗೆ ಇವುಗಳನ್ನು ವಿತರಿಸಲಾಗುವುದೆಂದರು.ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಮುಟ್ಟಿಸಬೇಕೆಂದು ಶಾಸಕರು ಸೂಚಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಮಾತನಾಡಿ, ಕೃಷಿಯಲ್ಲಿ ಬೆಳೆಗಳನ್ನು ಬೆಳೆಯಲು ತುಂತುರು ನೀರಾವರಿ ಘಟಕಗಳು ತುಂಬಾ ಅನುಕುಲವಾಗಿದ್ದು, ಸಕಾಲದಲ್ಲಿ ಮತ್ತು ಸರಿಯಾದ ಪ್ರಮಾಣದ ನೀರನ್ನು ಬೆಳೆಗಳಿಗೆ ಸಿಗುವುದರಿಂದ ರೈತರಿಗೆ ಹೆಚ್ಚಿನ ಇಳುವರಿ ಬರುತ್ತದೆ ಎಂದರು. ಉತ್ತಮ ಇಳುವರಿ ಮತ್ತು ಆದಾಯವನ್ನು ನೀಡಲು ತುಂತುರು ನೀರಾವರಿ ಸಹಕಾರಿಯಾಗಿದ್ದು, ರೈತರ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ‌ ಸಂದರ್ಭದಲ್ಲಿ ತಾಂತ್ರಿಕ ಅಧಿಕಾರಿಗಳಾದ ಯಾಮರೆಡ್ಡಿ, ಮದುಕಾಂತ, ಜಯಪ್ಪ, ಕಭೇರಿ ಅಧೀಕ್ಷಕರಾದ ವೆಂಕಟೇಶ ಎಂ ಹಿರೆನೂರ್, ಕೃಷಿ ಅಧಿಕಾರಿಗಳಾದ ಅಯ್ಯಣ್ಣ, ನರೇಶ ಇದ್ದರು.

ತುಂತುರು ನೀರಾವರಿ ಘಟಕದಿಂದ ಹೆಚ್ಚಿನ ಇಳುವರಿ ಮಾಡಿ; ಶಾಸಕ‌ ತುನ್ನೂರ್

ತುಂತುರು ನೀರಾವರಿ ಘಟಕದಿಂದ ಹೆಚ್ಚಿನ ಇಳುವರಿ ಮಾಡಿ; ಶಾಸಕ‌ ತುನ್ನೂರ್ Read More »

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ನಗರದ ವಾರ್ಡ ನಂ. ೧೮ರ ಡಾ.ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಐದು ಕೋಣೆಗಳ ಹಾಗೂ ಕಂಪೌAಡ ಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಶನಿವಾರ ಭೂಮಿ ಪೂಜೆ ನೆರವೇರಿಸಿದರು.

೮೫ ಲಕ್ಷ್ಯ ವೆಚ್ಚದ ಐದು ಶಾಲಾ ಕೋಣೆ,ಕಂಪೌAಡ ಕಾಮಗಾರಿಗೆ ಭೂಮಿ ಪೂಜೆ.

ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿ : ಶಾಸಕ ಚನ್ನಾರಡ್ಡಿ ಪಾಟೀಲ್ ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ನಗರದ ವಾರ್ಡ ನಂ. ೧೮ರ ಡಾ.ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಐದು ಕೋಣೆಗಳ ಹಾಗೂ ಕಂಪೌAಡ ಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಶನಿವಾರ ಭೂಮಿ ಪೂಜೆ ನೆರವೇರಿಸಿದರು. ಕೆಕೆಆರ್ ಡಿಬಿ ಅನುದಾನದಡಿ ೮೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಕಾಮಗಾರಿ ಗುಣಮಟ್ಟದಲ್ಲಿ ಮತ್ತು ನಿಗದಿತ ಸಮಯದಲ್ಲಿ ಮುಗಿಸಬೇಕೆಂದು ಹೇಳಿದರು. ಒಟ್ಟಾರೆ ೧.೧೦ ಕೋಟಿ ರೂ.ಖರ್ಚು ಮಾಡಲಾಗಿದೆ ಎಂದರು. ಶಿಕ್ಷಣದಿAದಲೇ ಮಕ್ಕಳ ಸರ್ವಾಂಗಿಣ ಅಭಿವೃದ್ಧಿ ಸಾಧ್ಯ. ಕಾರಣ ಪಾಲಕರು ತಪ್ಪದೇ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಸೌಲಭ್ಯಗಳು ನೀಡಿದೆ, ಅದರ ಲಾಭ ಪಡೆದು ಜೀವನದಲ್ಲಿ ಯಶಸ್ಸಿ ಮೆಟ್ಟಿಲು ಮುಟ್ಟಬೇಕೆಂದರು. ಮಕ್ಕಳ ಸಂಖ್ಯೆ ಹೆಚ್ಚಳ ಮಾಡಿ ಎಂದರು. ನಗರಸಭೆ ಸದಸ್ಯ ಹಣಮಂತ ನಾಯಕ ಮಾತನಾಡಿ, ನನ್ನ ವಾರ್ಡನಲ್ಲಿನ( ಮ್ಯಾಸಮ್ಮ ಗುಡಿ)  ಶಾಲೆಗೆ ಕಳೆದ ೧೭ ವರ್ಷಗಳ ಸಮಸ್ಯೆ ಇತ್ತು. ಅದನ್ನು ಶಾಸಕರ ಗಮನಕ್ಕೆ ತಂದಾಗ ೫೪ ಲಕ್ಷ ರೂ. ಅನುದಾನ ನೀಡಿ ಹೊಸ ರೂಪ ನೀಡಿದ ಕೀರ್ತಿ ಸಲ್ಲುತ್ತದೆ. ಇಲ್ಲಿನ ಮಕ್ಕಳ ಬೇಡಿಕೆಯಂತೆಯೇ ಪ್ರೌಢ ಶಾಲೆ ಮಂಜೂರು ಮಾಡಿಸಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಬಸಮ್ಮ ಕುರಕುಂಬಳಿ, ಎಸ್ ಡಿಎಂಸಿ ಅಧ್ಯಕ್ಷ ಅಂಬರೀಶ ಚಟ್ಟರಕಿ,  ಮಲ್ಲಿಕಾರ್ಜುನ ಈಟೆ, ಲಕ್ಷ್ಮಾರಡ್ಡಿ, ಪ್ರಶಾಂತ, ಮಲ್ಲಯ್ಯ ಈಟೆ, ಭೀಮಣ್ಣಾಕಾಗೆ, ಶರಣು ನಾಟಿಕಾರ, ಪರಶುರಾಮ ಒಡೆಯರ, ಎಂಜಿನಿಯರ್ ನಾಗೇಶ , ಮುಖ್ಯ ಗುರುಗಳಾದ ವಿಜಯಲಕ್ಷ್ಮಿ, ಶಿವು ಕರದಳ್ಳಿ, ವೆಂಕಟರಡ್ಡಿ, ಮಹೇಶ ಕುರಕುಂಬಳ, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆಯೇ ಇತರರಿದ್ದರು. ಬಿಆರ್ ಸಿ ವೆಂಕಟರಡ್ಡಿ ನಿರೂಪಿಸಿದರು. ಬಾಕ್ಸ್ ಯಾದಗಿರಿ ನಗರದ ವಾರ್ಡ ನಂ. ೧೮ರ ಡಾ.ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಶಾಲೆ ಇದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕರು ಆದ್ಯತೆ ಮೆರೆಗೆ ಕೆಲಸ ಮಾಡಿದ್ದಾರೆ. ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ  ಶಾಲೆ ಇದೆ. ಹೆಚ್ಚಿನ ಮಕ್ಕಳು ಬರುವಂತೆಯೇ ಮಾಡಬೇಕು. – ಬಿಆರ್‌ಸಿ ಮಲ್ಲಿಕಾರ್ಜುನ ಪೂಜಾರಿ,

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ನಗರದ ವಾರ್ಡ ನಂ. ೧೮ರ ಡಾ.ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಐದು ಕೋಣೆಗಳ ಹಾಗೂ ಕಂಪೌAಡ ಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಶನಿವಾರ ಭೂಮಿ ಪೂಜೆ ನೆರವೇರಿಸಿದರು.

೮೫ ಲಕ್ಷ್ಯ ವೆಚ್ಚದ ಐದು ಶಾಲಾ ಕೋಣೆ,ಕಂಪೌAಡ ಕಾಮಗಾರಿಗೆ ಭೂಮಿ ಪೂಜೆ. Read More »

ಜೇವರ್ಗಿ ಬಾಲಕಿ ಆತ್ಮಹತ್ಯೆ,‌ ಬಸವೇಶ್ವರ ಮೂರ್ತಿಗೆ ಅವಮಾನ ಖಂಡಿಸಿ ಪ್ರತಿಭಟನೆ.

ಜೇವರ್ಗಿ ಬಾಲಕಿ ಆತ್ಮಹತ್ಯೆ,‌ ಬಸವೇಶ್ವರ ಮೂರ್ತಿಗೆ ಅವಮಾನ ಖಂಡಿಸಿ ಪ್ರತಿಭಟನೆ. ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಜಿಲ್ಲಾ ಯುವ ಘಟಕದಿಂದ ಮಾನವ ಸರಪಳಿ ನಿರ್ಮಿಸಿ ಆಕ್ರೋಶ. ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಜೇವರ್ಗಿಯಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮತ್ತು ಬಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿ ಬಸವೇಶ್ವರ ಮೂರ್ತಿಗೆ ಅವಮಾನ ಮಾಡಿದ ಘಟನೆಗಳನ್ನು ಖಂಡಿಸಿ ಕೂಡಲೇ ಕಾನೂನು ಕ್ರಮ ಜರುಗಿಸುವಂತೆಯೇ ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ಜಿಲ್ಲಾ ಯುವ ಘಟಕ, ತಾಲೂಕು ಘಟಕದ‌ ಪದಾಧಿಕಾರಿಗಳು, ಕಾರ್ಯಕರ್ತರು ಇಲ್ಲಿನ‌ ಸುಭಾಷಚಂದ್ರ ಬೋಸ್ ಸರ್ಕಲ್ ಬಳಿ ಗುರುವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ವಿವಿಧ ಘಟಕಗಳ ಜಿಲ್ಲಾಧ್ಯಕ್ಷರುಗಳಾದ ಚನ್ನಪ್ಪಗೌಡ ಮೊಸಂಬಿ, ಸುರೇಶ ಜಾಕಾ, ರಾಜಶೇಖರ ಪಾಟೀಲ್ ಚಾಮನಳ್ಳಿ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ‌ ಸಮಾಜದ ಜನರು ಈ ಎರಡು ಘಟನೆಗಳಲ್ಲಿ‌ಭಾಗಿಯಾದ ಆರೋಪಿಗಳನ್ನು ಬಂಧಿಸಿ,ಕಠಿಣ ಶಿಕ್ಷೆಗೆ ಗುರಿ ಮಾಡಬೇಕೆಂದರು.ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಡಾ.ಸಿದ್ಧರಾಜ್ ರಡ್ಡಿ, ಜೇವರ್ಗಿಯಲ್ಲಿ ಅಮಾಯಕ ಅಪ್ರಾಪ್ತ್ ಬಾಲಕಿಯನ್ನು ಪ್ರೀತಿಸುವಂತೆಯೆ ಪೀಡಿಸಿ ತೊಂದರೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಕಾರಣನಾದ ಆರೋಪಿಯನ್ನು ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವ ಬದಲುಗೆ ಬಾಲ ಮಂದಿರಲ್ಲಿ ಇಟ್ಟಿದ್ದು ಯಾಕೆ?. ಆ ಕ್ರೂರಿಯನ್ನು ಅಪ್ರಾಪ್ತ ಬಾಲಕ ಎಂದು ಬಿಂಬಿಸಿ ಉಳಿಸಿಕೊಳ್ಳುವ ಯತ್ನ ನಡೆದಿದೆ. ಕಾರಣ, ಆತ ಅಪ್ರಾಪ್ತನಲ್ಲ, ಹರೆದ ಯುವಕನಾಗಿದ್ದಾನೆ,‌ಕಾರಣ ಕೂಡಲೇ ಆತನನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಬೇಕೆಂದು ಆಗ್ರಹಿಸಿದರು.ದಾಡಗಿ ಕ್ರಾಸ್ ಬಳಿ ವಿಶ್ವಗುರು ಬಸವಣ್ಣನವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೆಡಿಗಳನ್ನು ಕೂಡಲೇ ಬಂಧಿಸಬೇಕು, ಪುತ್ಥಳಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು. ಯುವ ಘಟಕದ ಜಿಲ್ಲಾಧ್ಯಕ್ಷ ಸುರೇಶ ಜಾಕಾ ಮಾತನಾಡಿದರು.ಸುಮಾರು ಅರ್ಧ ಗಂಟೆಗಳ‌ ಕಾಲ ಪ್ರತಿಭಟನೆ ನಡೆಸಿ, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಸಮಾಜದ ಪದಾಧಿಕಾರಿಗಳು ಹಾಗೂ ಹಿರಿಯರಾದ ಮಹೇಶ ಆನೆಗುಂದಿ, ಪಂಪಣ್ಣಗೌಡ ಪಾಟೀಲ್ ತುನ್ನೂರು, ವಿನಾಯಕ ರಾಕಾ, ಶರಣಬಸವ ಇಡ್ಲೂರ್, ಅನ್ನಪೂರ್ಣಮ್ಮ, ಸಿದ್ದು ಕಾಮರಡ್ಡಿ, ಶ್ರೀಧರ ರಾಯಚೂರು, ಸುಭಾಷ ದೇವದುರ್ಗ, ಇಂಧೂದರ ಶೇಖರ, ರಾಜಕುಮಾರ ಬೆಲಮಂಚಿ, ವೀರಭದ್ರಯ್ಯ ಜಾಕಾಮಠ, ವಿಶ್ವನಾಥ ಕಾಜಗಾರ, ಸುರೇಶ ಮಹಾಜನಶೆಟ್ಟಿ, ಚನ್ನಪ್ಪ ಠಾಣಗುಂದಿ, ಅರವಿಂದ ಕೆಂಭಾವಿ, ಮಂಜು ಹೊಟ್ಟಿ, ನವಿನ್ ಕುಮಾರ, ಸತೀಶ ಫಲ್ ಪುಲ್ ಸೇರಿದಂತೆಯೇ ಇತರರಿದ್ದರು.

ಜೇವರ್ಗಿ ಬಾಲಕಿ ಆತ್ಮಹತ್ಯೆ,‌ ಬಸವೇಶ್ವರ ಮೂರ್ತಿಗೆ ಅವಮಾನ ಖಂಡಿಸಿ ಪ್ರತಿಭಟನೆ. Read More »

ಮಲ್ಲಯ್ಯನ ಮೂರ್ತಿ ಕಿತ್ತಿ ನಿಧಿ ಹುಡುಕಾಟ

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ನಿಧಿಗಾಗಿ ದೇವರ ಕಲ್ಲಿನ ಮೂರ್ತಿ ಕಿತ್ತು ಹಾಕಿ ತೆಗ್ಗು ಗುಂಡಿ ಅಗೆದು ನಿಧಿ ಹುಡುಕಾಡಿದ ಘಟನೆ ವಡಗೇರಾ ತಾಲೂಕಿನ ಗೋಡಿಹಾಳ ಬಳಿ ನಡೆದಿದೆ. ಗೋಡಿಹಾಳ ಹೋಗುವ ಮಾರ್ಗದಲ್ಲಿರುವ ಶಿಬರ ಮಲ್ಲಯ್ಯನ ದೇವಸ್ಥಾನ ಅಗೆದ ನಿಧಿಗಳ್ಳರು ಮೂರ್ತಿಗಳನ್ನು ಕಿತ್ತಿ ಅಲ್ಲಲ್ಲಿ ಹೊಗೆದು, ಅಲ್ಲಿರುವ ಮರಗಳನ್ನು ಕೂಡ ಕಡಿದು ಹಾಕಿದ ಘಟನೆ ನಡೆದಿದ್ದು, ಇಲ್ಲಿ ನೂರಾರು ವರ್ಷ ಹಳೆಯ ಕಾಲದ ಹಳೆಯ ಶಿಲಾಮೂರ್ತಿಗಳಿವೆ. ಶಿಬಿರ ಮಲ್ಲಯ್ಯನ ದೇವರ ಮೂರ್ತಿ ಎಂದು ಗುರುತಿಸಿದ್ದ ಕಲ್ಲಿನ ಮೂರ್ತಿಯನ್ನು ಕಿತ್ತು ಹಾಕಿ ಅದರ ಕೆಳ ಭಾಗದ ಭೂಮಿಯನ್ನು ಅಗೆದು ತೆಗ್ಗು ಮಾಡಿ ನಿಧಿಗಾಗಿ ಹುಡುಕಾಟ ನಡೆಸಲಾಗಿದೆ. ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದು ಪತ್ತೆಯಾಗಬೇಕಿದೆ. ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಗ್ರಾಮಸ್ಥರು ನಿಧಿಗಳ್ಳರ ಪತ್ತೆಗೆ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮಲ್ಲಯ್ಯನ ಮೂರ್ತಿ ಕಿತ್ತಿ ನಿಧಿ ಹುಡುಕಾಟ Read More »

ಸಮ-ಸಮಾಜದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ : ಕಾಶೀನಾಥ ನಾಟೇಕಾರ್

ಸಮ-ಸಮಾಜದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ : ಕಾಶೀನಾಥ ನಾಟೇಕಾರ್

ಸಮ-ಸಮಾಜದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ : ಕಾಶೀನಾಥ ನಾಟೇಕಾರ್ ಕರ್ನಾಟಕ ಭಾಗ್ಯ ವಾರ್ತೆಯಾದಗಿರಿ : ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ ಸೇರಿದಂತೆ ಮುಂತಾದ ಅನಿಷ್ಟ ಪದ್ಧತಿಗಳ ನಿವಾರಣೆಗೆ ಹೋರಾಡಿ, ಸಮ-ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಧೀಮಂತ ನಾಯಕರು ಡಾ.ಬಿ.ಆರ್.ಅಂಬೇಡ್ಕರ್ ರವರಾಗಿದ್ದರು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಕಾಶೀನಾಥ ನಾಟೇಕಾರ್ ಹೇಳಿದರು.ಇಲ್ಲಿನ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ರವರ ೬೮ನೇ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದರು.ದೇಶದ ಎಲ್ಲ ಪ್ರಜೆಗಳಿಗೆ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಕಲ್ಪಿಸುವ ಮೂಲಕ ಶೋಷಿತರು, ಹಿಂದುಳಿದವರಿಗೆ ಸಮಾನತೆ ಮತ್ತು ಗೌರವಯುತ ಬದಕನ್ನು ಬದುಕಲು ಕಲಿಸಿದ ಮಹಾನ್ ಚೇತನ್. ನಾವೆಲ್ಲ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಗೌರವ ಸಲ್ಲಿಸೋಣ ಎಂದರು.ಈ ಸಂದರ್ಭದಲ್ಲಿ : ಜಿಲ್ಲಾ ಸಹ ಕಾರ್ಯದರ್ಶಿ ಮೌನೇಶ ಯಡ್ಡಳ್ಳಿ, ಸಾಬಣ್ಣ ಕೆ ಶಾಹಪುರ್, ಹಣಮಂತ ನಾಯಕ, ಯಾದಗಿರಿ ತಾಲೂಕು ಅಧ್ಯಕ್ಷರಾದ ಸಾಯಬಣ್ಣ ನಾಟೇಕರ್, ವಡಗೇರಿ ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಕುಮನೂರ್, ಹಣಮಂತ ಕುಲೂರ್, ಭೀಮಪ್ಪ ಕ್ಯಾತ್ನಾಳ, ಅನಿಲ್ ವಡ್ನಳ್ಳಿ ಇತರರಿದ್ದರು.

ಸಮ-ಸಮಾಜದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ : ಕಾಶೀನಾಥ ನಾಟೇಕಾರ್

ಸಮ-ಸಮಾಜದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ : ಕಾಶೀನಾಥ ನಾಟೇಕಾರ್ Read More »

ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ..

ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ.. ಕರ್ನಾಟಕ ಭಾಗ್ಯ ವಾರ್ತೆಯಾದಗಿರಿ : ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಬಾಂಗ್ಲಾದೇಶದಲ್ಲಿ ನಡೆಯಿತ್ತಿರುವ ಹಿಂದೂಗಳ ಮೇಲಿನ ಆತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ ಯಾದಗಿರಿ ನಗರದ ಆಂಜನೇಯ ದೇವಸ್ಥಾನದಿಂದ ಸುಭಾಷ್ ಚಂದ್ರ ಬೋಸ್ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು.ಇದೇ ವೇಳೆ ಮಾತನಾಡಿದ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರು ಬಾಂಗ್ಲಾದಲ್ಲಿ ಹಿಂದುಗಳ ಪರವಾಗಿ ಹೋರಾಟ ನಡೆಸಿದ್ದಾರೆ ಎಂಬ ಕಾರಣಕ್ಕೆ ಇಸ್ಮ್ಕಾನ್‌ನ ಚಿನ್ಮಯ್ ಕೃಷ್ಣದಾಸ್ ಪ್ರಭು ಅವರನ್ನು ಬಂಧಿಸಿರುವುದು ಖಂಡನೀಯ. ಬಾಂಗ್ಲಾದ ಅಭಿವೃದ್ಧಿಗೆ ಭಾರತ ಸಹಕಾರ ನೀಡಿದೆ. ಕೋವಿಡ್ ಅವಧಿಯಲ್ಲೂ ನರೇಂದ್ರ ಮೋದಿ ಸರ್ಕಾರ ಬಾಂಗ್ಲಾದೇಶಕ್ಕೆ ನೆರವಾಗಿತ್ತು. ಆದರೆ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಬಾಂಗ್ಲಾದಲ್ಲಿ ಮತೀಯವಾದದ ಆಧಾರದಲ್ಲಿ ಹಿಂದುಗಳ ಮೇಲೆ ವ್ಯಾಪಕ ದಾಳಿ ನಡೆಯುತ್ತಿದೆ. ಬಾಂಗ್ಲಾದ ಮಹಮ್ಮದ್ ಯೂನಸ್ ಸರ್ಕಾರ ಹಿಂಸಾಕೋರರ ಪರ ಹೇಳಿಕೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ರಾಯಚೂರು ಮಾತನಾಡಿದ ಅವರು ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹಾಗೂ ಹಿಂದುಗಳನ್ನು ಗುರಿಯಾಗಿಸಿಕೊಂಡು ಅಲ್ಲಿನ ಮೂಲಭೂತವಾದಿಗಳು ನಡೆಸುತ್ತಿರುವ ದಾಳಿ ಖಂಡನೀಯ. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ತಾಂಡವವಾಡುತಿದ್ದು ಜಗತ್ತು ಅದರತ್ತ ಕಣ್ಣು ಹಾಯಿಸುತ್ತಿಲ್ಲ. ಅಲ್ಲಿನ ನೊಂದ ಹಿಂದುಗಳ ಪರವಾಗಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ,ಜಿಲ್ಲಾ ವಕ್ತಾರ ಹಣಮಂತ ಇಟಗಿ,ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ವೆಂಕಟರೆಡ್ಡಿ ಅಬ್ಬೆತುಮಕೂರು,ಯುಡ ಮಾಜಿ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ,ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಕಲಾಲ,ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೆರಿ ಮತ್ತು ವಿಜಯಲಕ್ಷ್ಮಿ ನಾಯಕ, ಮಂಜುನಾಥ ದಾಸನಕೆರಿ,ವೀಣಾ ಮೋದಿ,ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೇರ,ಮೋನೇಶ ಬೆಳಿಗೇರ,ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡಮನಿ, ಅಪ್ಪಣ್ಣ ಜೈನ,ಶರಣುಗೌಡ ಅಲಿಪುರ,ಮಲ್ಲು ಕೊಲಿವಾಡ, ನಾಗಪ್ಪ ಗಚ್ಚಿನಮನಿ,ಭೀಮಬಾಯಿ ಶೆಂಡೀಗಿ, ಚಂದ್ರಕಲಾ ಕಿಲ್ಲಕೇರಿ,ಸ್ನೇಹ ರಾಸಳಕರ,ಕಲ್ಪನ ಜೈನ್,ಮರಲಿಂಗ ಕಿಲ್ಲಕೇರಿ,ವಿಕಾಸ ಚೌವ್ಹಾಣ್, ಮಲ್ಲು ಸ್ವಾಮಿ ಗುರುಸುಣಗಿ,ಚಂದ್ರಶೇಖರ ಕಡೆಸೂರ,ಬಸ್ಸು ಬಳಿಚಕ್ರ ಸೇರಿದಂತೆ ಅನೇಕ ಯುವ ಮೋರ್ಚಾ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರು ಇದ್ದರು..

ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ..

ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ.. Read More »

Scroll to Top