Karnataka Bhagya

Author name: Mahesh Kalal

ಸಮರ್ಥ ದೇಶ ಕಟ್ಟಲು ಮತದಾನ ಮಾಡಿ

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಸಮರ್ಥ ದೇಶ ಕಟ್ಟಲು ನಿಮ್ಮ ಒಂದು ಮತ ಅವಶ್ಯಕತೆ ಇರುವುದರಿಂದ ಪತಿಯೊಬ್ಬರೂ ಮತದಾನ ಮಾಡಿ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ ಹೇಳಿದರು.ಯಾದಗಿರಿ ನಗರದ ಚಕ್ರಕಟ್ಟಾ ಮತಗಟ್ಟೆಯಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಮತ ಚಲಾಯಿಸಿ ಮಾತನಾಡಿದರು.ಪ್ರತಿಯೊಬ್ಬರು ಮತದಾನ ಮಾಡಿ ಜೊತೆಗೆ ನಿಮ್ಮ ಕುಟುಂಬದಲ್ಲಿ ಎಲ್ಲರೂ ತಪ್ಪದೆ ಮತ ಚಲಾಯಿಸಿ ಎಂದು ಹೇಳಿದರು.ಸಮಗ್ರ ದೇಶದ ಅಭಿವೃದ್ಧಿ ಯ ದೃಷ್ಟಿಯಿಂದ ಹಾಗೂ ಭದ್ರತೆಯ ದೃಷ್ಟಿಯಿಂದ ಇಂದಿನ ಮತದಾನ ಕಾರಣವಾಗಲಿದ್ದು, ಪ್ರಜ್ಞಾವಂತ ಮತದಾರರು ಮತದಾನದಿಂದ ದೂರ ಉಳಿಯಬೇಡಿ ಎಲ್ಲರಿಗೂ ಚಲಾಯಿಸಲು ಪ್ರೇರೆಪಿಸಿ ನೀವು ಮತದಾನ ಮಾಡಿ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಸಮರ್ಥ ದೇಶ ಕಟ್ಟಲು ಮತದಾನ ಮಾಡಿ Read More »

ಪ್ರಥಮ ಬಾರಿಗೆ ಮತದಾನ

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಗುರುಮಠಕಲ್ ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಹತ್ತಿಕುಣಿ ಗ್ರಾಮದ ಬೂತ್ ಸಂಖ್ಯೆ 37 ರಲ್ಲಿ ವಿದ್ಯಾರ್ಥಿ ವಿಜಯ ಶಂಕರ್ ತಂದೆ ಮಲ್ಲಿಕಾರ್ಜುನ ರಡ್ಡಿ ಹಳ್ಳಿಮನಿ ಅವರು ಪ್ರಥಮ ಬಾರಿಗೆ ಮತದಾನ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಪ್ರಥಮ ಬಾರಿಗೆ ಮತದಾನ Read More »

ನಾನು ಮತದಾನ ಮಾಡಿದ್ದೇನೆ ನೀವು ಮತದಾನ ಮಾಡಿ : ಶಾಸಕ ಶರಣಗೌಡ ಕಂದಕೂರ

ದೇಶದ ಸದೃಡತೆಗೆ ನಿಮ್ಮ ಮತ ಅವಶ್ಯ ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ದೇಶದ ಸದೃಡತೆಗಾಗಿ ನಿಮ್ಮ ಒಂದು ಮತ ತೀರಾ ಅವಶ್ಯಕತೆ ಇರುವುದರಿಂದ ಪತಿಯೊಬ್ಬರೂ ಮತದಾನ ಮಾಡಿ, ಜೊತೆಗೆ ನಿಮ್ಮ ಕುಟುಂಬದಲ್ಲಿ ಎಲ್ಲರೂ ತಪ್ಪದೆ ಮತ ಚಲಾಯಿಸಿ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು. ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮತ ಚಲಾಯಿಸಿ ಮಾತನಾಡಿದರು. ಸಮಗ್ರ ದೇಶದ ಅಭಿವೃದ್ಧಿ ಯ ದೃಷ್ಟಿಯಿಂದ ಹಾಗೂ ಭದ್ರತೆಯ ದೃಷ್ಟಿಯಿಂದ ಇಂದಿನ ಮತದಾನ ಕಾರಣವಾಗಲಿದ್ದು, ಪ್ರಜ್ಞಾವಂತ ಮತದಾರರು ಮತದಾನದಿಂದ ದೂರ ಉಳಿಯಬೇಡಿ ಎಲ್ಲರಿಗೂ ಚಲಾಯಿಸಲು ಪ್ರೇರೆಪಿಸಿ ನೀವು ಮತದಾನ ಮಾಡಿ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ನಾನು ಮತದಾನ ಮಾಡಿದ್ದೇನೆ ನೀವು ಮತದಾನ ಮಾಡಿ : ಶಾಸಕ ಶರಣಗೌಡ ಕಂದಕೂರ Read More »

ಯಾದಗಿರಿ ನಗರದ ಆರ್ಯಭಟ್ಟ ಅಂತರರಾಷ್ಟಿçÃಯ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಭೌತ ಮತ್ತು ಜೀವ ವಿಜ್ಞಾನ ವಿಷಯದ ಕುರಿತು ೩ ದಿನಗಳ ಕಾರ್ಯಾಗಾರದ ಸಮಾರಂಭದಲ್ಲಿ ಪದ್ಮಶ್ರೀ ಭೌತಶಾಸ್ತçಜ್ಞ ಪ್ರೊ. ಹೆಚ್.ಸಿ ವರ್ಮಾ ಉಪನ್ಯಾಸ ಕಲಿಕಾ ಆಸಕ್ತಿ ಇದ್ದಲ್ಲಿ ಬೆಳವಣಿಗೆ ಸಾಧ್ಯ : ಪ್ರೊ. ಹೆಚ್.ಸಿ ವರ್ಮಾ

ಯಾದಗಿರಿ ನಗರದ ಆರ್ಯಭಟ್ಟ ಅಂತರರಾಷ್ಟಿçÃಯ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಭೌತ ಮತ್ತು ಜೀವ ವಿಜ್ಞಾನ ವಿಷಯದ ಕುರಿತು ೩ ದಿನಗಳ ಕಾರ್ಯಾಗಾರದ ಸಮಾರಂಭದಲ್ಲಿ ಪದ್ಮಶ್ರೀ ಭೌತಶಾಸ್ತçಜ್ಞ ಪ್ರೊ. ಹೆಚ್.ಸಿ ವರ್ಮಾ ಉಪನ್ಯಾಸ

ಕಲಿಕಾ ಆಸಕ್ತಿ ಇದ್ದಲ್ಲಿ ಬೆಳವಣಿಗೆ ಸಾಧ್ಯ :  ಪ್ರೊ. ಹೆಚ್.ಸಿ ವರ್ಮಾ ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಇಂದು ಪ್ರಪಂಚದಲ್ಲಿ ಬಹುತೇಕ ದೇಶಗಳು ಕಲಿಕೆ, ಜ್ಞಾನ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿವೆ, ಅದರಂತೆ ಭಾರತ ದೇಶವು ಕೂಡ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮುನ್ನುಗ್ಗುತ್ತಿದೆ, ಕಾರಣ ಈ ಭಾಗದ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ತಮ್ಮ ಬದುಕಿನಲ್ಲಿ ಶ್ರದ್ದೆಯಿಂದ ಕಲಿಕಾ ಆಸಕ್ತಿ ಬೆಳೆಸಿಕೊಂಡು ಬೌದ್ಧಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸಬೇಕು ಎಂದು ಪದ್ಮಶ್ರೀ ಭೌತಶಾಸ್ತçಜ್ಞ ಪ್ರೊ. ಹೆಚ್.ಸಿ ವರ್ಮಾ ಸಲಹೆ ನೀಡಿದರು. ನಗರದ ಆರ್ಯಭಟ್ಟ ಅಂತರರಾಷ್ಟಿçÃಯ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಭೌತ ಮತ್ತು ಜೀವ ವಿಜ್ಞಾನ ವಿಷಯದ ಕುರಿತು ೩ ದಿನಗಳ ಕಾರ್ಯಾಗಾರದ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಯಾವುದೇ ವಿಷಯದಲ್ಲಾಗಲೀ ಮೊದಲು ಅವರಲ್ಲಿ ಕಲಿಕಾ ಉತ್ಸಾಹ, ಏಕಾಗ್ರತೆ, ಛಲ ಇರುತ್ತದೆ, ಅವರಿಗೆ ಈ ಜಗತ್ತಿನಲ್ಲಿ ಯಾವುದೇ ವಿಷಯವಾಗಲಿ ಕಠೀಣ ವಾಗುವದಿಲ್ಲ, ಈ ನಿಟ್ಟಿನಲ್ಲಿ ಸಮಯಪ್ರಜ್ಞೆಯೊಂದಿಗೆ ಪರಿಶ್ರಮ ಪಟ್ಟರೆ ಕಠೀಣವಾಗುವುದಿಲ್ಲ ಎಂದರು. ಶಿಕ್ಷಕರು ಮೊದಲು ತಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳ ಬೋಧನೆ ಮಾಡುವ ಮುನ್ನ, ಪ್ರಸಕ್ತ ದಿನಗಳಲ್ಲಿ ದೇಶದಲ್ಲಿ ಹಾಗೂ ಮುಂದುವರೆದ ರಾಷ್ಟçಗಳಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಹೊರ ಬರುತ್ತಿರುವ ಹೊಸ ವಿಷಯಗಳು, ಸಂಶೋಧನೆಗಳನ್ನು ತಿಳಿದುಕೊಂಡು ಹೆಚ್ಚಿನ ವಿಷಯ ಬೋಧನೆ ಮಾಡಬೇಕು ಅಂದಾಗ ಮಾತ್ರ ಅವರಲ್ಲಿ ಇನ್ನೂ ಹೆಚ್ಚಿನ ಕಲಿಕಾ ಆಸಕ್ತಿ ವೃದ್ದಿಯಾಗುತ್ತದೆ, ಸಮಯ ಸಿಕ್ಕಾಗ ಅವರೊಂದಿಗೆ ವಿಷಯಗಳ ಕುರಿತು ಚರ್ಚೆ, ವಿಮರ್ಶೆ, ಸಂಶೋಧನೆ ಬಗ್ಗೆ ಅವರಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸಬೇಕು, ಇದು ಅವರ ಜ್ಞಾನ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಸ್ಪರ್ಧಾತ್ಮಕ ಯುಗದಲ್ಲಿ ದೇಶದ ಶಕ್ತಿಯಾಗಿರುವ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಮೊದಲು ಮೊಬೈಲ್‌ಗಳ ಬಳಕೆ ಕಡಿಮೆ ಮಾಡಬೇಕು, ಜೊತೆಗೆ ಶಾಲೆಯಿಂದ ಮನೆಗೆ ತೆರಳಿದ ಮೇಲೆ ಟಿ.ವಿ ನೋಡುವುದನ್ನು ಕಡಿಮೆ ಮಾಡಿ, ದೈನಂದಿನ ಪಠ್ಯ ಪುಸ್ತಕಗಳ ಅಭ್ಯಾಸದ ಕಡೆಗೆ ಹೆಚ್ಚು ಗಮನ ನೀಡಿ, ಬೆಳಿಗ್ಗೆ ದಯವಿಟ್ಟು ಎಲ್ಲರೂ ಸ್ವಲ್ಪ ಸಮಯ ಧ್ಯಾನ, ಯೋಗಕ್ಕೆ ನೀಡಿ, ಅದರಂತೆ ದಿನವಿಡೀ ನೀವೂ ಸಕರಾತ್ಮಕ ಚಿಂತನೆ, ಚಟುವಟಿಕೆಗಳೊಂದಿಗೆ ಆರೋಗ್ಯದಿಂದ ಜೀವನ ಕಳೆಯುತ್ತೀರಿ ಎಂದು ಕಿವಿ ಮಾತು ಹೇಳಿದರು. ನಾನು ಬಿಸಿಲು ನಾಡಿಗೆ ಮೊದಲ ಬಾರಿಗೆ ಆಗಮಿಸಿದ್ದೇನೆ, ಇಲ್ಲಿನ ಸಮಸ್ಯೆಗಳನ್ನು ಸೂಕ್ಷö್ಮತೆಯಿಂದ ಗಮನಿಸಿದ್ದೇನೆ, ನಾವೂ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿ ಕೇವಲ ಬೋಧನೆ ಮಾಡಿದರೆ ಸಾಲದು, ಅವರಿಂದ ಆಗಾಗ ಶಾಲೆಗಳಲ್ಲಿ ವಿಜ್ಞಾನ ಪ್ರದರ್ಶನ ಮಾಡಿಸಬೇಕು, ಜೊತೆಗೆ ಶಿಕ್ಷಕರು ಆ ವಿಷಯಗಳ ಬಗ್ಗೆ ಅವರಿಗೆ ವಿವರಿಸಬೇಕು, ಆಗ ಅವರು ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾರೆ ಎಂದರು. ಇಲ್ಲಿ ಮಾನವ ಸಂಪನ್ಮೂಲಕ್ಕೆ ಏನು ಕೊರತೆಯಿಲ್ಲ, ನಾವೂ ಸಮಚಿತ್ತಪ್ರಜ್ಞೆ, ದೂರದೃಷ್ಟಿಯೊಂದಿಗೆ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ಬಗ್ಗೆ ಬೋಧನೆ, ಪ್ರೋತ್ಸಾಹ, ಆತ್ಮವಿಶ್ವಾಸ ನೀಡಿದರೆ ಅವರಿಗೆ ಪರೀಕ್ಷೆಗಳಲ್ಲಿ ನೀಡುವ ಪ್ರಶ್ನೆಪತ್ರಿಕೆಗಳ ಬಗ್ಗೆ ತಮ್ಮಲ್ಲಿರುವ ಭಯ ದೂರವಾಗಿ ಚೆನ್ನಾಗಿ ತಮ್ಮ ಜ್ಞಾನ ಪ್ರದರ್ಶನ ಮಾಡಿ, ಉತ್ತಮ ಅಂಕಗಳನ್ನು ಪಡೆದು, ಇನ್ನೂ ಹೆಚ್ಚಿನ ಸಾಧನೆ ಮಾಡುವ ಗುರಿ ಅವರಲ್ಲಿ ಪ್ರಬಲವಾಗುತ್ತದೆ ಎಂದು ಭೌತಶಾಸ್ತç ಮತ್ತು ಜೀವಶಾಸ್ತçದ ಮಹತ್ವದ ವಿಷಯಗಳನ್ನು ವಿವರಿಸಿದರು. ಸಮಾರಂಭವನ್ನು ಉದ್ಘಾಟಿಸಿದ ಕಲಬುರಗಿಯ ವಿಕಾಸ ಅಕಾಡೆಮಿಯ ಸಂಯೋಜಕರಾದ ಡಾ. ಬಸವರಾಜ ಪಾಟೀಲ ಸೇಡಂ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿ ಜ್ಞಾನದ ಮುಕುಟವಾಗಿರುವ ಪ್ರೊ. ಹೆಚ್.ಸಿ ಶರ್ಮಾ ಅವರು ಇಲ್ಲಿಗೆ ಆಗಮಿಸಿ, ತಮ್ಮ ಅಪಾರ ಜ್ಞಾನವನ್ನು ಎಲ್ಲರಿಗೂ ನೀಡುತ್ತಿರುವುದು ನಮ್ಮೇಲ್ಲರ ಭಾಗ್ಯ, ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿ, ವಿಷಯ ಅರಿತುಕೊಂಡು ತಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ದೂರ ಮಾಡಿ ಎಂದು ಕರೆ ನೀಡಿದರು. ತಮ್ಮ ಸೇವಾ ಅವಧಿಯಲ್ಲಿ ನಿವೃತ್ತಿಯಾದರು ವರ್ಮಾ ಅವರು ಬಿಹಾರದ ತಮ್ಮ ಹಳ್ಳಿಯಲ್ಲಿರುವ ಸ್ವಂತ ಜಮೀನಿನಲ್ಲಿ ವಿಜ್ಞಾನ ಕೇಂದ್ರ ತೆರೆದು ನಿರಂತರ ಜ್ಞಾನ ಮಾರ್ಗದರ್ಶನ ನೀಡುವ ಮೂಲಕ ನಾಡಿನ ಪ್ರಗತಿಗೆ ತಮ್ಮದೇ ಮಹತ್ವದ ಕೊಡುಗೆ ನೀಡುತ್ತಿದ್ದಾರೆ, ಇಲ್ಲಿರುವ ಆರ್ಯಭಟ್ಟ ಶಿಕ್ಷಣ ಸಂಸ್ಥೆಯಲ್ಲಿ, ಸಂಸ್ಥೆಯವರು ಅಪಾರ ಹಣ ಖರ್ಚು ಮಾಡಿ, ೩ ದಿನಗಳ ಕಾಲ ಶಿಕ್ಷಕರಿಗೆ ಉಪನ್ಯಾಸ ಕೊಡಿಸುತ್ತಿದ್ದಾರೆ, ಇದು ಬರುವ ದಿನಗಳಲ್ಲಿ ಬದಲಾವಣೆಗೆ ಖಂಡಿತ ಪ್ರೇರಣೆ ಸಿಗುತ್ತದೆಂದು ನಾನು ನಂಬಿದ್ದೇನೆ ಎಂದು ತಿಳಿಸಿದರು, ಪ್ರಾಸ್ತಾವಿಕವಾಗಿ ಅಕಾಡೆಮಿಯ ಅಧ್ಯಕ್ಷ ಸುಧಾಕರರಡ್ಡಿ ಮಾಲಿ ಪಾಟೀಲ್ ಅನಪೂರ ಮಾತನಾಡಿ, ನಾವೂ ನಮ್ಮ ಶಿಕ್ಷಣ ಸಂಸ್ಥೆ ಮಾತ್ರ ಪ್ರಗತಿ ಸಾಧಿಸಿದರೆ ಸಾಲದು, ಅದರಂತೆ ಜಿಲ್ಲೆಯಲ್ಲಿರುವ ಸರ್ಕಾರಿ-ಅನುದಾನಿತ ಶಾಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಉದ್ದೇಶದೊಂದಿಗೆ ಕಾರ್ಯಾಗಾರ ಹಮ್ಮಿಕೊಂಡು ವರ್ಮಾ ಅವರು ರಚಿಸಿರುವ ಅನೇಕ ಪುಸ್ತಕಗಳನ್ನು ನಾವೂ ಉಚಿತವಾಗಿ ಶಿಕ್ಷಕರಿಗೆ ನೀಡುತ್ತಿದ್ದೇವೆ ಎಂದು ಹೇಳಿದರು. ವೇದಿಕೆ ಮೇಲೆ ಹಿರಿಯ ಭೌತ ಶಾಸ್ತçಜ್ಞರಾದ ಶರ್ಮಿಷ್ಠಾ ಬೆಂಗಳೂರು,  ಪ್ರಾಂಶುಪಾಲರಾದ ಪಿ. ಅರವಿಂಧಾಕ್ಷಣ ಉಪಸ್ಥಿತರಿದ್ದರು. ಆರ್ಯಭಟ್ಟ ಪಿ.ಯು ಕಾಲೇಜ್ ಪ್ರಾಂಶುಪಾಲರಾದ ಮಂಜುನಾಥ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದರು.

ಯಾದಗಿರಿ ನಗರದ ಆರ್ಯಭಟ್ಟ ಅಂತರರಾಷ್ಟಿçÃಯ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಭೌತ ಮತ್ತು ಜೀವ ವಿಜ್ಞಾನ ವಿಷಯದ ಕುರಿತು ೩ ದಿನಗಳ ಕಾರ್ಯಾಗಾರದ ಸಮಾರಂಭದಲ್ಲಿ ಪದ್ಮಶ್ರೀ ಭೌತಶಾಸ್ತçಜ್ಞ ಪ್ರೊ. ಹೆಚ್.ಸಿ ವರ್ಮಾ ಉಪನ್ಯಾಸ ಕಲಿಕಾ ಆಸಕ್ತಿ ಇದ್ದಲ್ಲಿ ಬೆಳವಣಿಗೆ ಸಾಧ್ಯ : ಪ್ರೊ. ಹೆಚ್.ಸಿ ವರ್ಮಾ

ಯಾದಗಿರಿ ನಗರದ ಆರ್ಯಭಟ್ಟ ಅಂತರರಾಷ್ಟಿçÃಯ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಭೌತ ಮತ್ತು ಜೀವ ವಿಜ್ಞಾನ ವಿಷಯದ ಕುರಿತು ೩ ದಿನಗಳ ಕಾರ್ಯಾಗಾರದ ಸಮಾರಂಭದಲ್ಲಿ ಪದ್ಮಶ್ರೀ ಭೌತಶಾಸ್ತçಜ್ಞ ಪ್ರೊ. ಹೆಚ್.ಸಿ ವರ್ಮಾ ಉಪನ್ಯಾಸ Read More »

ದೇವತ್ಕಲ್ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ-೨ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ ಕರ್ನಾಟಕ ಭಾಗ್ಯ ವಾರ್ತೆ ಸುರಪೂರ :

ದೇವತ್ಕಲ್ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ-೨ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ವಾಗ್ದಾಳಿ

ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ ಕರ್ನಾಟಕ ಭಾಗ್ಯ ವಾರ್ತೆ ಸುರಪೂರ : ಬಿಜೆಪಿ ಎಂದರೆ ಸುಳ್ಳಿನ ಫ್ಯಾಕ್ಟರಿ ಇದ್ದಂಗೆ ಒಬ್ಬರಾದರು ಸತ್ಯವನ್ನು ಹೇಳುವುದಿಲ್ಲ,೧೦ ವರ್ಷದಲ್ಲಿ ಒಂದೇ ಒಂದು ಅಭಿವೃಧ್ಧಿ ಕಾರ್ಯ ಮಾಡಿದ್ದರೆ ತೋರಿಸಲಿ, ಆದರೆ ನಾವು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಟ್ಟ ಮಾತಿನಂತೆ ೫ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದೇವತ್ಕಲ್ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ-೨ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಅಭಿವೃಧ್ಧಿ ಗುರುತಿಸಿ ನಮ್ಮ ಕಾಂಗ್ರೆಸ್ ಪಕ್ಷದ ರಾಯಚೂರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರ ಸುಪುತ್ರನಿಗೆ ತಾವೆಲ್ಲರು ಮತ ನೀಡಿ ೫೦ ಸಾವಿರ ಮತಗಳ ಅಂತರದಿAದ ಗೆಲ್ಲಿಸಿ ಕೊಡುವಂತೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ವಿಧಾನಸಭಾ ಉಪ ಚುನಾವಣೆ ಅಭ್ಯರ್ಥಿ ರಾಜುಗೌಡ ವಿರುದ್ಧ ಹರಿಹಾಯ್ದು,ನರೇಂದ್ರ ಮೋದಿ,ಅಮಿತ್ ಶಾ ಅವರನ್ನ ನೋಡಿ ರಾಜುಗೌಡ ಕೂಡ ಸುಳ್ಳು ಹೇಳುವುದನ್ನು ಕಲಿತಿದ್ದಾನೆ,ಅವನಿಗೆ ತಕ್ಕ ಪಾಠ ಕಲಿಸಲು ಈ ಚುನಾವಣೆಯಲ್ಲಿ ಸೋಲಿಸುವಂತೆ ಕರೆ ನೀಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದರೆ ಸುಳ್ಳಿನ ಸರದಾರ ಇದ್ದಂತೆ,ಕಳೆದ ೧೦ ವರ್ಷಗಳಲ್ಲಿ ಏನೊಂದು ಅಭಿವೃಧ್ಧಿ ಕಾರ್ಯ ಮಾಡದಿದ್ದರು ಸುಳ್ಳನ್ನು ಹೇಳುವುದರಲ್ಲಿ ನಿಸ್ಸಿಮರಾಗಿದ್ದಾರೆ ಎಂದು ಕೇಂದ್ರ ಸರಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದರು. ನಾವು ಎಂದಿಗೂ ಸುಳ್ಳು ಹೇಳುವುದಿಲ್ಲ ಏನು ಹೇಳುತ್ತೇವೆ ಅದನ್ನು ಮಾಡಿ ತೋರಿಸುತ್ತೇವೆ,ನರೇಂದ್ರ ಮೋದಿ ಎಲ್ಲರ ಖಾತೆಗೆ ೧೫ ಲಕ್ಷ ಹಾಕುತ್ತೇನೆ ಎಂದು ಸುಳ್ಳು ಹೇಳಿದರು.ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡುವುದಾಗಿ ಸುಳ್ಳು ಹೇಳಿದರು,ರೈತರ ಲಾಭ ದ್ವಿಗುಣಗೊಳಿಸುವುದಾಗಿ ಸುಳ್ಳು ಹೇಳಿದರು ಇಂತಹ ಎಲ್ಲಾ ಸುಳ್ಳು ಹೇಳುವುದರ ಮೂಲಕ ಜನರಿಗೆ ಮೋಸಗೊಳಿಸಲು ಹೊರಟಿದ್ದಾರೆ,ಆದರೆ ಜನರು ದಡ್ಡರಲ್ಲ ಈಬಾರಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದರು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಮಾತನಾಡಿ,ನಮ್ಮ ಸರಕಾರ ೫ ಗ್ಯಾರಂಟಿಗಳನ್ನು ಕೊಟ್ಟಿದೆ,ಅದರಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಲು ಅದಕ್ಕೆ ಯಾದಗಿರಿ ಜಿಲ್ಲೆಯ ಜನರು ಬೆಂಗಳೂರಲ್ಲಿ ಪಟ್ಟ ಭವಣೆಯನ್ನು ನಾನು ಕಣ್ಣಾರೆ ಕಂಡಿದ್ದು ಕಾರಣವಾಗಿದೆ ಎಂದರು.ಅಲ್ಲದೆ ತಾವೆಲ್ಲರು ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು,ರಾಜಾ ವೆಂಕಟಪ್ಪ ನಾಯಕ ಕೇವಲ ಈ ಕ್ಷೇತ್ರಕ್ಕೆ ಮಾತ್ರವಲ್ಲ,ಯಾದಗಿರಿ ಜಿಲ್ಲೆಯ ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿದ್ದರು,ಅವರನ್ನು ನಾವು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಅನಿಸಿರಲಿಲ್ಲ,ಹುಟ್ಟು ಉಚಿತ,ಸಾವು ಖಚಿತ ಆದರೆ ಅವರು ೫ ವರ್ಷಗಳ ಕಾಲ ನಿಗಮದ ಅಧ್ಯಕ್ಷರಾಗಿ ನಾಡಿನ ಸೇವೆ ಮಾಡಬೇಕಿತ್ತು ಎಂದರು.ಅಲ್ಲದೆ ಈಗ ಅವರ ಮಗ ತುಂಬಾ ವಿದ್ಯಾವಂತ ಇದ್ದಾನೆ,ರಾಯಚೂರ ಲೋಕಸಭಾ ಅಭ್ಯರ್ಥಿಯೂ ಒಬ್ಬ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿಯಾಗಿದ್ದರು,ಇಬ್ಬರು ಗೆದ್ದು ಬಂದು ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು. ಶಾಸಕ ದಿ.ರಾಜಾ ವೆಂಕಟಪ್ಪ ನಾಯಕ ಅವರ ಪತ್ನಿ ರಾಣಿ ಲತಾ ರಾಜಾ ವೆಂಕಟಪ್ಪ ನಾಯಕ ಅವರು ಮಾತನಾಡಿ,ತಾವೆಲ್ಲರು ಹಿಂದೆ ನಿಮ್ಮ ಧಣಿ ರಾಜಾ ವೆಂಕಟಪ್ಪ ನಾಯಕ ಅವರಿಗೆ ಕೊಟ್ಟಂತ ಬೆಂಬಲವನ್ನು ಇಂದು ನನ್ನ ಮಗನಿಗೆ ಕೊಡಿ,ಅವನು ಈಗ ನಿಮ್ಮ ಮನೆಯ ಮಗನಾಗಿದ್ದಾನೆ,ಅವನನ್ನು ಗೆಲ್ಲಿಸಿ ಎಂದು ನಿಮ್ಮೆಲ್ಲರಲ್ಲಿ ಸೆರಗೊಡ್ಡಿ ವಿನಂತಿಸುವುದಾಗಿ ಭಾವುಕರಾಗಿ ನುಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ,ಡಾ:ಯತೀಂದ್ರ ಸಿದ್ದರಾಮಯ್ಯ,ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ,ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವಿರ್ ಸೇಠ್,ವಿಜಯಪುರ ವಿಪ ಸದಸ್ಯ ಪ್ರಕಾಶ ರಾಥೋಡ,ರಾಜಾ ಕೃಷ್ಣಪ್ಪ ನಾಯಕ,ಶಂಕ್ರಣ್ಣ ವಣಿಕ್ಯಾಳ,ಚೇತನ ಗೋನಾಯಕ,ವಿಠ್ಠಲ್ ಯಾದವ್,ಶಾಂತಗೌಡ ಚನ್ನಪಟ್ಟಣ,ರಾಜಾ ಸಂತೋಷ ನಾಯಕ,ರಾಜಾ ಕುಮಾರ  ಸೇರಿದಂತೆ ಅನೇಕ ಮುಖಂಡರು ಹಾಗೂ ಸಾವಿರಾರು ಜನರು ಭಾಗವಹಿಸಿದ್ದರು.ರಾಜಶೇಖರಗೌಡ ವಜ್ಜಲ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಎಸ್.ಎಮ್.ಭಕ್ತ ಕುಂಬಾರ,ರಾಮುನಾಯಕ ಅರಳಹಳ್ಳಿ,ಮಾನಪ್ಪ ಸೂಗುರ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮೀ ಯೋಜನೆ ಅಡಿ ಪ್ರತಿ ಮನೆಯ ಗೃಹಿಣಿಗೆ ವರ್ಷಕ್ಕೆ ೧ ಲಕ್ಷ,ರೈತರ ೧ ಲಕ್ಷದ ವರೆಗಿನ ಸಾಲ ಮನ್ನಾ,ಉದ್ಯೋಗ ಖಾತ್ರಿ ಕೂಲಿಕಾರರ ದಿನಗೂಲಿ ೪೦೦ ರೂಪಾಯಿಗೆ ಹೆಚ್ಚಳ,ಯುವ ನ್ಯಾಯ ಸೇರಿ ೨೫ ಭಾಗ್ಯ ನೀಡುತ್ತೇವೆ- ಡಾ.ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು

ದೇವತ್ಕಲ್ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ-೨ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ ಕರ್ನಾಟಕ ಭಾಗ್ಯ ವಾರ್ತೆ ಸುರಪೂರ :

ದೇವತ್ಕಲ್ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ-೨ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ವಾಗ್ದಾಳಿ Read More »

ಯಾದಗಿರಿ ಜಿಲ್ಲಾ ಕಸಾಪ ಸಾಹಿತ್ಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

ಪರೋಪಕಾರವೇ ಪರಮ ಕಾರ್ಯ ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಸ್ವಾರ್ಥ ಚಿಂತನೆ ಬಿಟ್ಟು ಪರೋಪಕಾರ ಚಿಂತನೆ ನಡೆಸಿದಾಗ ಮಾತ್ರ ಸಕಲ ಜೀವರಾಶಿಗಳಿಗೆ ಲೇಸಾಗಲಿದೆ ಎಂದು ಗುರುಮಠಕಲ್ ಖಾಸಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ನಗರದ ಜಿಲ್ಲಾ ಕಸಾಪ ಸಾಹಿತ್ಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರಸಕ್ತ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂAಭಕ್ಕೆ ಚಾಲನೆ ನೀಡಿ ಮಾತನಾಡಿದರು. ಜೀವಸಂಕುಲದಲ್ಲಿ ಮನುಷ್ಯ ಜೀವಿ ವಿಭಿನ್ನವಾಗಿ ನಿಲ್ಲುತ್ತಾನೆ. ಪರೋಪಕಾರವೇ ಮನುಷ್ಯನ ಪರಮ ಕಾರ್ಯವಾಗಬೇಕು ಎಂದರು. ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರವೇ ಮಾಡಿದ ಈ ಕಾರ್ಯ ಶ್ಲಾಘನೀಯ ನಾಡು ನುಡಿ ಜೊತೆಗೆ ಶೈಕ್ಷಣಿಕ ಏಳಿಗೆಗಾಗಿ ಮಾಡಿದ ಕಾರ್ಯ ಸ್ತುತ್ಯಾರ್ಹ. ಗಡಿ ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕನ್ನಡ ಕಾರ್ಯ ಮಾಡುತ್ತಿರುವ ಕರವೇ ನಾಯಕರ ನೇತೃತ್ವದಲ್ಲಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಸಂಘಟನೆಗಳು ಹಾದಿ ತಪ್ಪುತ್ತಿರುವ ಈ ದಿನಮಾನಗಳಲ್ಲಿ ಕರವೇ ನಾರಾಯಣಗೌಡ ಬಣ ಯಾವುದೇ ಆಮಿಷಗಳಿಗೆ ಬಲಿಯಾಗದೇ ನಿಸ್ವಾರ್ಥವಾಗಿ ಕನ್ನಡ ನಾಡು ನುಡಿಯ ಹಿತರಕ್ಷಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ ಎಂದರು. ಕರವೇ ರಾಜ್ಯ ಸಂಚಾಲಕ ಸಂತೋಷ ಪಾಟೀಲ್ ಡಂಬಳ ಉದ್ಘಾಟಿಸಿ ಮಾತನಾಡಿ ರಾಜ್ಯದ ನೆಲ ಜಲ, ಗಡಿ ವಿಷಯ ಬಂದಾಗ ಪ್ರಾಣದ ಹಂಗು ತೊರೆದು ಹೋರಾಟಕ್ಕೆ ನಿಲ್ಲುವ ಕರವೇ, ಕೇವಲ ಬೀದಿಗಿಳಿದು ಹೋರಾಟ ಮಾಡುವುದಷ್ಟೇ ಅಲ್ಲದೇ ಸೃಜನಾತ್ಮಕ ಕಾರ್ಯಗಳಿಗೂ ಕೂಡ ತನ್ನನ್ನು ತೊಡಿಸಿಕೊಂಡಿದೆ ಎನ್ನಲು ಈ ಕಾರ್ಯಕ್ರಮ ಸಾಕ್ಷಿ ೩೧ ಜಿಲ್ಲೆಗಳಲ್ಲಿಯೇ ಕ್ರಿಯಾಶೀಲ ಜಿಲ್ಲೆ ಭೀಮುನಾಯಕರ ನೇತೃತ್ವದ ಯಾದಗಿರಿ ಕರವೇ ಎಂದರು. ದಕ್ಷಿಣ ಕರ್ನಾಟಕದವರಿಗೆ ಯಾದಗಿರಿ ಸೇರಿದಂತೆ ಕಲ್ಯಾಣ ಕರ್ನಾಟಕ ಅತ್ಯಂತ ಹಿಂದುಳಿದಿದೆ ಎಂಬ ಭಾವನೆ ಇದೆ. ಆ ಭಾವನೆ ಕಿತ್ತೊಗೆಯಲು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ಕಸಾಪ ಜಿಲ್ಲಾದ್ಯಕ್ಷ ಸಿದ್ದಪ್ಪ ಹೊಟ್ಟಿ ಪ್ರತಿಭಾ ಪುರಸ್ಕಾರ ಕಾರ್ಯ ಹಮ್ಮಿಕೊಂಡ ಕರವೇ ಪ್ರತಿವರ್ಷ ಈ ಕಾರ್ಯ ಕೈಗೊಂಡಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು. ಪಿಯು ಉಪನಿರ್ದೇಶಕ  ಚೆನ್ನಬಸಪ್ಪ ಕುಳಗೇರಿ ಮಾತನಾಡಿ ಪಿಯು ಪರೀಕ್ಷೆಯಲ್ಲಿ ಕೊನೆ ಸ್ಥಾನದಲ್ಲಿದ್ದ ಜಿಲ್ಲೆಯನ್ನು ೨೬ನೇ ಸ್ಥಾನಕ್ಕೆ ಏರಿಸುವಲ್ಲಿ ಅಧಿಕಾರಿಗಳು, ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದಾರೆ. ಮುಂಬರುವ ದಿನಗಳಲಿ ಇನ್ನು ಉತ್ತಮಗೊಳಿಸುವ ಕೆಲಸ ಮಾಡಲಾಗುವುದು ಎಂದರು. ಸುಭಾಶ್ಚAದ್ರ ಕೌಲಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆ ಮುಖ್ಯ ಪ್ರೌಢಾವಸ್ತೆಯಿಂದ ಉನ್ನತ ಶಿಕ್ಷಣಕ್ಕೆ ಪಾದಾರ್ಪಣೆ ಮಾಡುವ ನೀವು ಓದಿನೊಂದಿಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಭೀಮುನಾಯುಕ ಮಾತನಾಡಿ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರ ಹಲವು ಸಮಸ್ಯೆ ಎದುರಿಸುತ್ತಿದೆ ಇವುಗಳ ಪರಿಹಾರಕ್ಕಾಗಿ ರಸ್ತೆಗಿಳಿಯುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಸರ್ಕಾರಗಳು ಮುಂದಾಗಬೇಕೆAದು ಆಗ್ರಹಿಸಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು. ಡಾ. ಸಿದ್ದರಾಜರೆಡ್ಡಿ ಪ್ರಾಸ್ತಾವಿಕ ಮಾತನಾಡಿ ಕರವೇಯಿಂದ ನಾಮಫಲಕದಲ್ಲಿ ಶೇ. ೬೦ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಉಗ್ರ ಹೋರಾಟ ಮಾಡಿ ಕೇಸ್ ಹಾಕಿದರೂ ಹೆದರದೇ  ಹೋರಾಟ ಮಾಡಿದ್ದು ವಿಶೇಷ ಎಂದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ನಿರೂಪಿಸಿದರು. ಮಲ್ಲು ಮಾಳಿಕೇರಿ ಸ್ವಾಗತಿಸಿದರು, ವಿಶ್ವಾರಾಧ್ಯ ದಿಮ್ಮೆ ವಂದಿಸಿದರು. ಕರವೇ ಮುಖಂಡರಾದ ಸಂತೋಷ ನಿರ್ಮಲಕರ್, ಚೌಡಯ್ಯ ಬಾವುರ, ಸಿದ್ದಪ್ಪ ಕುಯಿಲೂರ, ಯಮುನಯ್ಯ ಗುತ್ತೇದಾರ, ಹಣಮಂತ ತೇಕರಾಳ, ಅಬ್ದುಲ್ ಚಿಗಾನೂರ, ಭೀಮರಾಯ ಕೋಳಿ, ಶರಣಬಸಪ್ಪ ಯಲ್ಹೇರಿ, ವಿಶ್ವಾರಾಜ ಹೊನಿಗೇರ, ಲಕ್ಷö್ಮಣ ಕುಡ್ಲೂರ, ಮಲ್ಲಿಕಾರ್ಜುನ ಕನ್ನಡಿ, ಸೈದಪ್ಪ ಗೌಡಗೇರಿ, ಸಿದ್ದು ಪೂಜಾರಿ, ಬಸ್ಸು ನಾಯಕ ಮಲ್ಲು ಬಾಡಿಯಾಳ, ಸಾಗರ ಸೈದಾಪೂರ, ಕಾಶಿನಾಥ ನಾನೇಕ, ಸಿದ್ದು ಸಾಹುಕಾರ, ಮಹೇಶ ಠಾಣಗುಂದಿ ಇನ್ನಿತರರು ಇದ್ದರು. ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. ೯೦ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಯಾದಗಿರಿ ಜಿಲ್ಲಾ ಕಸಾಪ ಸಾಹಿತ್ಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ Read More »

ಕರ್ನಾಟಕ ರಕ್ಷಣಾ ವೇದಿಕೆ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಕಸಾಪ ಆವರಣದಲ್ಲಿ ಕಾರ್ಯಕ್ರಮ

ಏ.25ರಂದು ಪ್ರತಿಭಾ ಪುರಸ್ಕಾರ ಸಮಾರಂಭ ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಕರವೇ ಕೇವಲ ನಾಡುನುಡಿ ನೆಲ ಜನ ರಕ್ಷಣೆಗೆ ಹೋರಾಟ ಮಾಡುವುದಷ್ಟೇ ಅಲ್ಲ ನಾಡಿನಲ್ಲಿ ಸಾಧನೆ ಮಾಡಿದವರನ್ನು ಗುರ್ತಿಸಿ ಗೌರವಿಸುವ ಪ್ರತಿಭೆಗೆ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿ ಜಿಲ್ಲೆಗೆ ಕೀರ್ತಿ ತಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ತಿಳಿಸಿದರು. ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡಗಡೆ ಮಾಡಿ ಮಾತನಾಡಿದ ಅವರು, ಏ. ೨೫ರಂದು ಬೆಳಗ್ಗೆ೧೧ಕ್ಕೆ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಗುರುಮಠಕಲ್ ಖಾಸಾಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು ವಹಿಸಲಿದ್ದು, ಕರವೇ ರಾಜ್ಯ ಸಂಚಾಲಕ ಸಂತೋಷ ಪಾಟೀಲ್ ಡಂಬಳ ಉದ್ಘಾಟಿಸಲಿದ್ದು, ಟಿ.ಎನ್. ಭೀಮುನಾಯಕ ಅಧ್ಯಕ್ಷತೆವಹಿಸಲಿದ್ದಾರೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಿಯು ಉಪ ನಿರ್ದೇಶಕ ಚೆನ್ನಬಸಪ್ಪ ಕುಳಗೇರಿ, ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ. ಸುಭಾಶ್ಚಂದ್ರ ಕೌಲಗಿ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ನಿವೃತ್ತ ಪ್ರಾಚಾರ್ಯ ವೆಂಕಟರಾವ ಕುಲಕರ್ಣಿ, ತನಾರತಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಡಾ. ಸಿದ್ದರಾಜರೆಡ್ಡಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕು ಪದಾಧಿಕಾರಿಗಳು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿದ್ದುನಾಯಕ ಹತ್ತಿಕುಣಿ, ಅಂಬ್ರೆಷ್ ಹತ್ತಿಮನಿ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ವಿಶ್ವರಾಜ ಹೊನಗೇರಾ, ಸಂತೋಷ ನಿರ್ಮಲಕರ್, ಸಾಹೇಬಗೌಡ ನಾಯಕ, ಪಪ್ಪುಗೌಡ ಚಿನ್ನಾಕಾರ, ಹಣಮಂತ ಅಚ್ಚೋಲಿ  ಇನ್ನಿತರರಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಕಸಾಪ ಆವರಣದಲ್ಲಿ ಕಾರ್ಯಕ್ರಮ Read More »

ಬಿಜೆಪಿ ಜೆಡಿಎಸ್ ಮೈತ್ರಿಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಬೆಂಬಲ

ಜಾಧವ್ ನಾಮಪತ್ರ ಸಲ್ಲಿಕೆಯಲ್ಲಿ ಶಾಸಕ ಕಂದಕೂರ ಭಾಗಿ ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ರಾಯಚೂರು ಲೋಕಸಭಾ ಕ್ಷೇತ್ರ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರ ಹಾಗೂ ಸುರಪುರ ಉಪ ಚುನಾವಣೆ ಕ್ಷೇತ್ರಗಳಲ್ಲಿ ನಾನು ಸಂಪೂರ್ಣ ಸಮಯ ಕೊಟ್ಟು ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು. ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಲೋಕಸಭೆ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತ್ತು ಸುರಪೂರ ವಿಧಾನಸಭೆ ಅಭ್ಯರ್ಥಿ ರಾಜುಗೌಡ ಕೂಡ ಭೇಟಿಯಾಗಿ ಬೆಂಬಲ ಕೋರಿದ್ದಾರೆ ಹಾಗೆ ನಮ್ಮ ರಾಜ್ಯ ಜೆಡಿಎಸ್ ನಾಯಕರು ಕೂಡ ನನ್ನ ಜೊತೆ ಚರ್ಚೆ ಮಾಡಿದ್ದು, ಮೈತ್ರಿ ಕುರಿತು ಪರ ವಿರೋಧ ಚರ್ಚೆ ಮಾಡಲಾಗಿ ಸುದೀರ್ಘವಾಗಿ ನಾಯಕರ ಜೊತೆ ಹಾಗೂ ಕುಟುಂಬದವರ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದರು. ಕಲಬುರಗಿ, ಯಾದಗಿರಿ ಜೆಡಿಎಸ್‌ನ ನಾಯಕರು ಕೂಡ ಒಟ್ಟಿಗೆ ಸೇರಿ ಸ್ಥಳಿಯ ಸಾಧಕ ಬಾಧಕಗಳ ಚರ್ಚೆ ನಡೆಸಿದ್ದು, ಮಾಜಿ ಸಚಿವರಾದ ಡಾ.ಎ.ಬಿ.ಮಾಲಕರಡ್ಡಿ, ಮಾಜಿ ಶಾಸಕರಾದ ಗುರುಪಾಟೀಲ ಶಿರವಾಳ, ದೊಡ್ಡಪ್ಪಗೌಡ ನರಬೋಳಿ ಸೇರಿದಂತೆ ಹಲವು ನಾಯಕರ ಜೊತೆ ಚರ್ಚೆ ನಡೆಸಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಬಿಜೆಪಿ ಪಕ್ಷದ ಜೊತೆ ಜೆಡಿಎಸ್ ಪಕ್ಷ ಜೊತೆ ಮೈತ್ರಿಮಾಡಿಕೊಂಡ ಕಾರಣ ನನಗೆ ವೈಯಕ್ತಿಕವಾಗಿ ಅಸಮಧಾನವಿತ್ತು ಆದರೇ ನಮ್ಮ ರಾಜ್ಯದ ನಾಯಕರ ಆದೇಶದಂತೆ ನಡೆಯಬೇಕಾಗುತ್ತಿದ್ದು, ಅದರ ಜೊತೆಗೆ ಬಿಜೆಪಿ ರಾಜ್ಯ ಅಧ್ಯಕ್ಷ ವಿಜೆಯೇಂದ್ರ ಅವರು ನನಗೆ ಕರೆ ಮಾಡಿ  ನಾಳೆ ನಡೆಯುವ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ನಾಮಪತ್ರ ಸಲ್ಲಿಸಲು ತಮ್ಮ ಉಪಸ್ಥಿತಿ ಅಗತ್ಯವಿದೆ ಆದ್ದರಿಂದ ತಾವು ಆಗಮಿಸಬೇಕು ಎಂದು ಹೇಳಿದ್ದಾರೆ ನಾನು ಕೂಡ ಭಾಗವಹಿಸುತ್ತಿದ್ದೇನೆ ಎಂದು ಹೇಳಿದರು. ಮೈತ್ರಿ ಅನಿವಾರ್ಯತೆ ಇರುವುದನ್ನು ನಮ್ಮ ನಾಯಕರು ನನಗೆ ತಿಳಿಸಿದ್ದರಿಂದ ನಾನು ಜಾಧವ್ ನಾಮಿನೇಶನ್ ಸಂದರ್ಭದಲ್ಲಿ ನಾನು ಉಪಸ್ಥಿತಿ ಇರುತ್ತಿದ್ದು ಬಿಜೆಪಿಗೆ ಬೆಂಬಲ ಕೊಡುತ್ತಿದ್ದೇನೆ ಎಂದರು. ಕಾರ್ಯಕರ್ತರ ಅಭಯ : ತಂದೆಯವರ ಅನುಪಸ್ಥಿತಿಯಲ್ಲಿ ಮೊದಲ ಚುನಾವಣೆ ಎದುರಿಸುತ್ತಿದ್ದೇನೆ ಜೆಡಿಎಸ್ ಬಿಜೆಪಿ ಹೊಂದಾಣಿಕೆಯಾದ ಮೇಲೆ ಮೈತ್ರಿ ಸಾಧಕ ಬಾಧಕಗಳ ಚರ್ಚೆ ನಡೆಸಲಾಗಿತ್ತು. ಗುರುಮಠಕಲ್ ಕ್ಷೇತ್ರದ ಜನರೊಂದಿಗೆ ಚರ್ಚೆ ಮಾಡಿ ಅವರೊಡನೆ ಕೇಳಿದಾಗ ನಿಮ್ಮ ನಿರ್ಧಾರ ಕ್ಕೆ ಬದ್ದರಾಗಿದ್ದೇವೆ ಎಂದು ತಿಳಿಸಿದ್ದು, ಜೆಡಿಎಸ್ ಪಕ್ಷದ ಗುರಮಿಠಕಲ್ ಮತಕ್ಷೇತ್ರದ ಕಾರ್ಯಕರ್ತರ ಜೊತೆ ಸಭೆ ಮಾಡಿದ್ದಾಗ ನೀವು ಶಾಸಕರಾಗಿ ರಾಜಕೀಯವಾಗಿ ಏನೆ ನಿರ್ದಾರ ತೆಗೆದುಕೊಂಡರು ಅದಕ್ಕೆ ನಾವು ಬದ್ದರಿದ್ದೇವೆ ಎಂದು ನಮ್ಮ ಪಕ್ಷದ  ಕಾರ್ಯಕರ್ತರು ಹೇಳಿದ್ದಾರೆ ಎಂದು ಕಂದಕೂರ ತಿಳಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರಿದ್ದರು.

ಬಿಜೆಪಿ ಜೆಡಿಎಸ್ ಮೈತ್ರಿಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಬೆಂಬಲ Read More »

ವಿದ್ಯುತ್ ತಗುಲಿ ಮೃತಪಟ್ಟ ರೈತನ ಕುಟುಂಬಕ್ಕೆ ಶಾಸಕ ಚೆನ್ನಾರೆಡ್ಡಿಗೌಡ ಪಾಟೀಲ ನೆರವು

ವಿದ್ಯುತ್ ತಗುಲಿ ಮೃತಪಟ್ಟ ರೈತನ ಕುಟುಂಬಕ್ಕೆ ಶಾಸಕ ಚೆನ್ನಾರೆಡ್ಡಿಗೌಡ ಪಾಟೀಲ ನೆರವು ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಮತಕ್ಷೇತ್ರದ ಗೋಡಿಹಾಳ ಬಳಿಯ ವಿಶ್ವಾಸಪುರ ಶೆಡ್ ಬಳಿಯಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ರೈತ ಮರೆಪ್ಪ ತಂದೆ ಬಸಪ್ಪನ ಕುಟುಂಬಕ್ಕೆ ಶಾಸಕ ಚೆನ್ನಾರೆಡ್ಡಿಗೌಡ ಪಾಟೀಲ ತುನ್ನೂರ ನೆರವು ನೀಡಿದರು.ರೈತ ಮೃತಪಟ್ಟ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅವರು, ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿ ಸರ್ಕಾರದಿಂದ ನೆರವು ಒದಗಿಸುವ ಭರವಸೆಯೊಂದಿಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಗೌರಿಶಂಕರ ಸ್ವಾಮಿ ಗೋಡಿಹಾಳ, ಭೀಮರಾಯ ನಾಟೇಕಾರ ಹಾಲಗೇರಾ, ಯಲ್ಲಪ್ಪ ಬಾಗ್ಲಿ ಹೊರಟೂರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದ್ದರು.

ವಿದ್ಯುತ್ ತಗುಲಿ ಮೃತಪಟ್ಟ ರೈತನ ಕುಟುಂಬಕ್ಕೆ ಶಾಸಕ ಚೆನ್ನಾರೆಡ್ಡಿಗೌಡ ಪಾಟೀಲ ನೆರವು Read More »

ಕೃಷ್ಣಾ ನದಿ ರೈತರ ವಿದ್ಯುತ್ ಸಮಸ್ಯೆಗೆ ಸಿಎಂ. ಡಿಸಿಎಂ ಸ್ಪಂದನೆ ಶಾಸಕ ತುನ್ನೂರ ಹರ್ಷ

ಏ.9 ರಿಂದ11ರವರೆಗೆ ರೈತರಿಗೆ ವಿದ್ಯುತ್ ಸಂಪರ್ಕ ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ವಡಗೇರಾ ತಾಲೂಕಿನ ಕೃಷ್ಣಾ ನದಿ ಪಾತ್ರದ ಬೆಂಡೆ ಬೆಂಬಳಿ, ಗೋನಾಲ್, ಅಗ್ನಿಹಾಳ್, ಶಿವಪುರ, ತುಮಕೂರು, ಇಟಗಿ, ಕೊಂಕಲ್, ಚನ್ನೂರ, ಇನ್ನಿತರ ಗ್ರಾಮದ ರೈತರ ನೀರೆತ್ತುವ ವಿದ್ಯುತ್ ಯಂತ್ರಗಳಿಗೆ ವಿದ್ಯುತ್ ಸರಬರಾಜು ಕಡಿತಗೊಳಿಸದಂತೆ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಮಾಡಿದ ಮನವಿಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಏ.೯ರಿಂದ೧೧ರವರೆಗೆ ವಿದ್ಯುತ್ ಸಂಪರ್ಕ ಒದಗಿಸಲು ಆದೇಶ ಹೊರಡಿಸಲಾಗಿದೆ ಎಂದು ಶಾಸಕ ಚೆನ್ನಾರೆಡ್ಡಿಗೌಡ ಪಾಟೀಲ ತುನ್ನೂರ ತಿಳಿಸಿದ್ದಾರೆ. ನನ್ನ ಮತಕ್ಷೇತ್ರದ ರೈತರು ಸಂಕಷ್ಟ ಅನುಭವಿಸಬಾರದು ಎಂದು ಮನಗಂಡು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ ರೈತರ ಸ್ಥಿತಿಗತಿ ಕುರಿತು ಅವರಿಗೆ ಮನವರಿಕೆ ಮಾದ್ದೇ, ಈಗಾಗಲೇ ರೈತರು ಸಾಕಷ್ಟು ಹಣ ಖರ್ಚು ಮಾಡಿ ಭತ್ತ ಬೆಳೆದಿದ್ದು ಇನ್ನೇನು ಕೈಗೆ ಬರುವ ಹಂತದಲ್ಲಿದೆ ಆ ಕಾರಣ ಏಪ್ರಿಲ್ ೧೫ ರವರೆಗೆ ಕೃಷ್ಣಾ ನದಿ ಪಾತ್ರದ ರೈತರಿಗೆ ವಿದ್ಯುತ್ ಒದಗಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಸಿಎಂ ಡಿಸಿಎಂ ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಆದೇಶ ಹೊರಡಿಸಿದ್ದು ಸಂತಸ ತಂದಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ನಮ್ಮ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದ್ದು, ರೈತರಿಗಾಗಿ ನಾವು ಸದಾ ಸ್ಪಂದಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷ್ಣಾ ನದಿ ರೈತರ ವಿದ್ಯುತ್ ಸಮಸ್ಯೆಗೆ ಸಿಎಂ. ಡಿಸಿಎಂ ಸ್ಪಂದನೆ ಶಾಸಕ ತುನ್ನೂರ ಹರ್ಷ Read More »

Scroll to Top