ಚಿತ್ರಮಂದಿರಗಳಲ್ಲಿ ನೋಡಲು ಸಿಗದ ಇನ್ನೊಂದು ದೃಶ್ಯವನ್ನ ಬಿಡುಗಡೆ ಮಾಡಿದ ‘777 ಚಾರ್ಲಿ’.
‘777 ಚಾರ್ಲಿ’ ಈ ಹೆಸರು ಯಾರಿಗೇ ತಾನೇ ತಿಳಿದಿಲ್ಲ. ಚಾರ್ಲಿ ಎಂದ ತಕ್ಷಣ ಹೆಸರಾಂತ ಚಾರ್ಲಿ ಚಾಪ್ಲಿನ್ ಅವರನ್ನು ನೆನೆಯುತ್ತಿದ್ದ ಜನ, ಇದೀಗ ನಾಯಿಯೊಂದನ್ನ ನೆನಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಅವರ ಅಭಿನಯದ ‘777 ಚಾರ್ಲಿ’ ಸಿನಿಮಾ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಒಟಿಟಿ ಪರದೆ ಮೇಲೆ ಬರಲು ಕೂಡ ಸಜ್ಜಾಗಿದೆ. ಈ ನಡುವೆ ಥಿಯೇಟರ್ ಗಳಲ್ಲಿ ನೋಡಲು ಸಿಗದಿರುವಂತಹ ಸಿನಿಮಾದ ಅಂತಿಮ ಹಂತದಲ್ಲಿ ಡಿಲೀಟ್ ಮಾಡಲಾದ ದೃಶ್ಯವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಯೂಟ್ಯೂಬ್ ನಲ್ಲಿ, ಎಲ್ಲಾ ಭಾಷೆಗಳಲ್ಲೂ ಅಧಿಕೃತ ಚಾನೆಲ್ ಗಳಲ್ಲಿ ಈ ದೃಶ್ಯ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಜೂನ್ 10ರಂದು ಬೆಳ್ಳಿತೆರೆ ಮೇಲೆ ಬಿಡುಗಡೆಯಾದ ‘777 ಚಾರ್ಲಿ’ ಸಿನಿಮಾ ಪ್ರಪಂಚದಾದ್ಯಂತ ವಿವಿಧ ಭಾಷೆಗಳಲ್ಲಿ ಶ್ವಾನ-ಪ್ರೇಮಿಗಳನ್ನೂ, ಸಿನಿಪ್ರೇಮಿಗಳನ್ನೂ ಕಣ್ತುಂಬಿಕೊಂಡು ಸಿನಿಮಾ ನೋಡುವಂತೆ ಮಾಡಿತ್ತು. ಧರ್ಮ ಹಾಗು ಚಾರ್ಲಿಯ ಭಾವನಾತ್ಮಕ ಜೀವನಗಾಥೆಯನ್ನು ಸಾರುವ ಈ ಚಿತ್ರದ ಎರಡನೇ ಡಿಲೀಟ್ ಮಾಡಲಾದ ದೃಶ್ಯಾವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ದೃಶ್ಯದಲ್ಲಿ ರಕ್ಷಿತ್ ಶೆಟ್ಟಿಯವರ ಧರ್ಮ ಪಾತ್ರ, ತನ್ನ ಸಹೋದ್ಯೋಗಿಯಾದ ಉತ್ತರಕುಮಾರ್ ಅವರ ಜೊತೆಗೆ ನಡೆಸುವ ವಿಚಿತ್ರ ಸಂಭಾಷನೆಯೊಂದನ್ನು ಬಿಂಬಿಸಿದೆ. ಸಿನಿಮಾದಲ್ಲಿ ಚಾರ್ಲಿ ನಾಯಿಯ ಪಾತ್ರಕ್ಕೆ ಮಾತ್ರವಲ್ಲದೆ ರಕ್ಷಿತ್ ಅವರ ಈ ಧರ್ಮ ಪಾತ್ರವನ್ನು ಹಲವರು ಮೆಚ್ಚಿಕೊಂಡಿದ್ದರು. ಯಾರನ್ನು ಹಚ್ಚಿಕೊಳ್ಳದ ಧರ್ಮ, ತನ್ನಿಂದ ಕೆಲಸ ಹೇಳಿಸಿಕೊಳ್ಳಲು ಬಂದ ಉತ್ತರ ಕುಮಾರನಿಗೆ ಶಿಸ್ತಿನ ಪಾಠ ಹೇಳುವುದನ್ನು ಈ ದೃಶ್ಯದಲ್ಲಿ ಕಾಣಬಹುದಾಗಿದೆ. ಕಿರಣ್ ರಾಜ್ ಅವರು ರಚಿಸಿ ನಿರ್ದೇಶಿಸಿರುವ ‘777 ಚಾರ್ಲಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ 50ದಿನಗಳನ್ನು ಪೂರೈಸುವತ್ತ ಹೆಜ್ಜೆ ಹಾಕುತ್ತಿದೆ. ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ಶಾರ್ವರಿ ಮುಂತಾದ ನಟರು ಹಾಗು ಚಾರ್ಲಿ ನಾಯಿಯೂ ನಟಿಸಿರುವ ಈ ಸಿನಿಮಾ ಕಂಡವರೆಲ್ಲರ ಮನಸ್ಸಿನ ಖದವನ್ನ ತಟ್ಟಿದ್ದಂತೂ ಸತ್ಯ. ಇದೇ ಜುಲೈ 29ರಿಂದ ಸಿನಿಮಾ ‘ವೂಟ್’ ಆಪ್ ನಲ್ಲಿ ಪ್ರದರ್ಶನ ಕಾಣಲಿದ್ದು, ಸದ್ಯ ಸಿನಿಮಾದ ದೃಶ್ಯವೊಂದನ್ನು ಚಿತ್ರತಂಡ ಹೊರಹಾಕಿದೆ.
ಚಿತ್ರಮಂದಿರಗಳಲ್ಲಿ ನೋಡಲು ಸಿಗದ ಇನ್ನೊಂದು ದೃಶ್ಯವನ್ನ ಬಿಡುಗಡೆ ಮಾಡಿದ ‘777 ಚಾರ್ಲಿ’. Read More »