Karnataka Bhagya

Author name: Nikita Agrawal

ಮಿಲಿಯನ್ ವೀಕ್ಷಣೆಯನ್ನು ಕಂಡ ‘ಮಾನ್ಸೂನ್ ರಾಗ’ ಚಿತ್ರದ ರಾಗಸುಧಾ

‘ಮಾನ್ಸೂನ್ ರಾಗ’ ಚಿತ್ರದ ರಾಗಸುಧಾ ಥೀಮ್ ವಿಡಿಯೋ ಮಿಲಿಯನ್ ವೀಕ್ಷಣೆಯನ್ನು ಕಂಡಿದೆ. ಈ ಸಂಭ್ರಮಕ್ಕೆ ಚಿತ್ರತಂಡ ರಾಗ ಸುಧಾ‌ ಮೇಕಿಂಗ್ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆಯ ಈ ಹಾಡಲ್ಲಿ ಬೈರಾಗಿ ಖ್ಯಾತಿಯ ಯಶಾ ಹಾಕಿರೋ ಸ್ಟೆಪ್ಸ್ ಈಗ ಸಖತ್ ಟ್ರೆಂಡಿಗಲ್ಲಿದೆ. ಜತೆಗೆ ಈ ಹಾಡಿನ ಕವರ್ ವರ್ಶನ್ಸ್ ಬರ್ತಿದ್ದು, ಹಾಡಿನಷ್ಟೇ ಕವರ್ ವರ್ಶನ್ಸ್ ಕೂಡ‌ ಸದ್ದು ಮಾಡುತ್ತಿದೆ. ವಿಖ್ಯಾತ್ ಅವರ ನಿರ್ಮಾಣ , ಪುಷ್ಪಕ ವಿಮಾನ ರವೀಂದ್ರನಾಥ್ ಅವರ ನಿರ್ದೇಶನ, ಡಾಲಿ ಧನಂಜಯ, ರಚಿತಾ ರಾಮ್ ಮುಖ್ಯಭೂಮಿಕೆಯ ಈ ಚಿತ್ರ ಈಗಾಗ್ಲೇ ಟೀಸರ್ ನಿಂದ ಕುತೂಹಲವನ್ನು ಹುಟ್ಟಿಸಿತ್ತು.ಆಗಸ್ಟ್‌17ಕ್ಕೆ ತೆರೆ ಕಾಣಲು ಸಜ್ಜಾಗಿರುವ ಮಾನ್ಸೂನ್ ರಾಗ ರಾಜ್ಯದಾದ್ಯಂತ ಸುಮಾರು 100ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಕಟೌಟ್ಸ್ ಹಾಕಿ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದೆ. ‘ರಚಿತಾ ರಾಮ್ ಅವರು ಕೂಡ ಇಲ್ಲಿಯವರೆಗೆ ಇಲ್ಲಿಯವರೆಗೆ ನಟಿಸದಂತಹ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.ರಚಿತರಾಮ್ ಅವರ ನಟನೆಯ ಕುರಿತಂತೆ ಮಾತನಾಡಿದ ಚಿತ್ರತಂಡ ”ಬಹಳ ಟಫ್‌ ರೋಲ್‌ ಇದಾಗಿದೆ. ನಟನೆಯನ್ನು ಬೇಡುತ್ತೆ. ಪಾತ್ರದ ವಿನ್ಯಾಸವೇ ಬೇರೆ ರೀತಿ ಇದೆ. ರಚಿತಾ ಚಾಲೆಂಜಿಂಗ್‌ ಆಗಿ ತಗೊಂಡು ನಟಿಸಿದ್ದಾರೆ’ ಎನ್ನುತ್ತದೆ. ಮಾನ್ಸೂನ್ ರಾಗ ಸಿನಿಮಾದ ಲೇಟೇಸ್ಟ್ ಅಪ್ ಡೇಟ್ ಪ್ರಕಾರ, ಪದವಿ ಪೂರ್ವ ನಟಿ ಯಶ ಶಿವಕುಮಾರ್ ಚಿತ್ರತಂಡ ಸೇರಿದ್ದಾರೆ. ಮಾನ್ಸೂನ್ ರಾಗದ ಹೊರತಾಗಿ, ಯಶ ತನ್ನ ಕನ್ನಡದ ಚೊಚ್ಚಲ ಚಿತ್ರವಾದ ‘ಪದವಿ ಪೂರ್ವ’ದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರ ಜೊತೆಗೆ ಬೈರಾಗಿ, ರಾಜ್ ಸೌಂಡ್ಸ್ ಮತ್ತು ಲೈಟ್ಸ್, ವಸಿಷ್ಠ ಸಿಂಹ ಅವರ ‘ದಂತಕಥೆ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಮಾನ್ಸೂನ್ ರಾಗದಲ್ಲಿ, ಯಶ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಯಶ ಅವರ ಪಾತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ ಚಿತ್ರದ ಫರ್ಸ್ಟ್ ಲುಕ್ ಬಹಿರಂಗಪಡಿಸಲಾಗುತ್ತದೆ. ‘ಮಾನ್ಸೂನ್‌ ರಾಗ’ ಸಿನಿಮಾ ಕೂಡ 70-80ರ ದಶಕದಲ್ಲಿ ನಡೆಯುವಂಥ ಕಥೆಯನ್ನು ಹೊಂದಿದೆ. ಆ ಪಾತ್ರದ ಪರಿಚಯಕ್ಕೆ ಮ್ಯೂಸಿಕಲ್‌ ವಿಡಿಯೊ ಒಂದನ್ನು ಮಾಡಿ ರಿಲೀಸ್‌ ಮಾಡಲಾಗಿತ್ತು. ಈ ಮ್ಯೂಸಿಕಲ್‌ ವಿಡಿಯೋದಲ್ಲಿ ಯಶಾ ಅವರ ಡ್ಯಾನ್ಸ್‌, ಸಿನಿಮಾಟೊಗ್ರಫಿ, ಅನೂಪ್‌ ಸೀಳಿನ್‌ ಅವರ ಸಂಗೀತ ಎಲ್ಲರ ಗಮನ ಸೆಳೆಯುತ್ತಿದೆ. ಚೆಂಡೆ ಮತ್ತು ವಯಲಿನ್‌ ಜುಗಲ್ಬಂದಿಯನ್ನು ಅನೂಪ್‌ ಈ ಹಾಡಿನಲ್ಲಿ ಬಳಸಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮಿಲಿಯನ್ ವೀಕ್ಷಣೆಯನ್ನು ಕಂಡ ‘ಮಾನ್ಸೂನ್ ರಾಗ’ ಚಿತ್ರದ ರಾಗಸುಧಾ Read More »

ಹೇಗಿರಲಿದ್ದಾನೆ ‘ಗಾಳಿಪಟ 2’ನ ಗಣೇಶ?

‘ಗಾಳಿಪಟ’, ಹಲವು ಕನ್ನಡಿಗರ ಮನದಲ್ಲಿ ಸದಾ ಉಳಿಯುವ ಸಿನಿಮಾ ಇದು. ದಶಕಗಳ ಹಿಂದೆ ತೆರೆಕಂಡಿದ್ದ ಈ ಸಿನಿಮಾ ಮೂರು ಸ್ನೇಹಿತರ ಕಥೆ ಹೇಳುತ್ತಾ, ಪರಿಶುದ್ಧ ಪ್ರೇಮವನ್ನ ಕನ್ನಡಿಗರಿಗೆ ತೋರಿಸಿತ್ತು. ಸದ್ಯ ‘ಗಾಳಿಪಟ’ದ ಪ್ರಮುಖ ರೂವಾರಿಗಳಾದ ಯೋಗರಾಜ್ ಭಟ್ ಹಾಗುD ಗಣೇಶ್ ಅವರು ಮತ್ತದೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಜೋಡಿಯ ‘ಗಾಳಿಪಟ 2 ಸಿನಿಮಾ ಸಿದ್ದವಾಗಿದ್ದು ಬಿಡುಗಡೆಗೂ ಸನ್ನಿಹಿತವಾಗುತ್ತಿದೆ. ಈ ನಡುವೆ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದ್ದೂ, ‘ಗಾಳಿಪಟ 2’ನಲ್ಲಿನ ಗಣೇಶ್ ಅವರ ಪಾತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ. ‘ಗಾಳಿಪಟ’ದಲ್ಲಿನ ಗಣೇಶ ಎಲ್ಲರಿಗೂ ಅಚ್ಚುಮೆಚ್ಚು. ಪಟಪಟ ಮಾತಾಡುವ ಪರಿಶುದ್ಧ ಮನಸ್ಸಿನ ಹುಡುಗನಾಗಿ, ಕೊನೆಗೆ ಪರಿಶುದ್ಧ ಪ್ರೇಮಿಯಾಗಿ ಎಲ್ಲರ ಮನದಲ್ಲಿ ಮನೆಮಾಡಿಕೊಂಡಿರುವ ಪಾತ್ರ. ಈ ಪಾತ್ರ ‘ಗಾಳಿಪಟ 2’ ಸಿನಿಮಾದಲ್ಲಿ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯ ‘ಗಾಳಿಪಟ 2’ದಲ್ಲಿನ ಗಣೇಶ ಪಾತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಜುಲೈ 26ರ ಸಂಜೆ 5:02ಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರ ಕೈಯಿಂದ ಟೀಸರ್ ಅನ್ನು ಲಾಂಚ್ ಮಾಡುತ್ತಿದೆ ಚಿತ್ರತಂಡ. ಮೊದಲ ಭಾಗದ ಪಾತ್ರ ಅಷ್ಟು ಅದ್ಭುತವಾಗಿ ಕೆತ್ತಿದ ಭಟ್ರು ಈ ಬಾರಿ ಏನೂ ಮಾಡಲಿದ್ದಾರೆ ಎಂದು ನೋಡಲು ಕನ್ನಡಿಗರು ಕಾಯುತ್ತಿದ್ದಾರೆ. ‘ವಿಕಟಕವಿ’ ಯೋಗರಾಜ್ ಭಟ್ ಅವರು ಬರೆದು-ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ‘ಗಾಳಿಪಟ 2’ ಸಿನಿಮಾದಲ್ಲಿ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಂಡ್ರೆ ಮುಂತಾದ ನಟರು ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರದಲ್ಲಿದ್ದು, ಇದೇ ಆಗಸ್ಟ್ 12kke ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಹೇಗಿರಲಿದ್ದಾನೆ ‘ಗಾಳಿಪಟ 2’ನ ಗಣೇಶ? Read More »

ಅಬ್ಬರಿಸಲು ತಯಾರಾಗುತ್ತಿದ್ದಾರೆ ಪ್ರಜ್ವಲ್ ದೇವರಾಜ್

ನಟ ಪ್ರಜ್ವಲ್ ದೇವರಾಜ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅವರ 29ನೇ ಸಿನಿಮಾ ‘ಅಬ್ಬರ’ ತೆರೆಗೆ ಬರಲು ರೆಡಿ ಆಗಿದೆ. ‘ಸಾಗರ್‌’ ಚಿತ್ರದ ನಂತರ ಮತ್ತೊಮ್ಮೆ ಮೂವರು ನಾಯಕಿಯರ ಜೊತೆಗೆ ಡ್ಯುಯೆಟ್ ಹಾಡಿದ್ದಾರೆ ಪ್ರಜ್ವಲ್. ‘ಟೈಸನ್’, ‘ಕ್ರ‍್ಯಾಕ್’ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಕೆ. ರಾಮ್‌ನಾರಾಯಣ್ ಇದೀಗ ಪ್ರಜ್ವಲ್ ದೇವರಾಜ್ ಜೊತೆ ಸೇರಿ ‘ಅಬ್ಬರ’ ಚಿತ್ರವನ್ನು ಮಾಡಿದ್ದಾರೆ. ಸಿ & ಎಂ ಮೂವೀಸ್ ಲಾಂಛನದಡಿಯಲ್ಲಿ ಬಸವರಾಜ್ ಮಂಚಯ್ಯ ಅವರು ಈ ಸಿನಿಮಾವನ್ನು ನಿರ್ಮಿಸಿದ್ದು, ‘ಅಬ್ಬರ’ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಹೌದು, ‘ಅಬ್ಬರ’ ಚಿತ್ರದಲ್ಲಿ ಪ್ರಜ್ವಲ್‌ಗೆ ನಾಯಕಿಯರಾಗಿ ಲೇಖಾ ಚಂದ್ರ, ನಿಮಿಕಾ ರತ್ನಾಕರ್ ಹಾಗೂ ರಾಜಶ್ರೀ ಪೊನ್ನಪ್ಪ ನಟಿಸಿದ್ದಾರೆ. ಆಗಸ್ಟ್ 12ರಂದು ಈ ಸಿನಿಮಾವನ್ನು ರಿಲೀಸ್ ಮಾಡಲು ನಿರ್ಮಾಪಕ ಬಸವರಾಜ ಮಂಚಯ್ಯ ಯೋಚಿಸಿದ್ದಾರೆ. ಈ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿರುವ ಪ್ರಜ್ವಲ್, ‘ಇದು ನನ್ನ ನಟನೆಯ 29ನೇ ಸಿನಿಮಾ. ಬಹಳ ಅದ್ಭುತವಾದ ಟೈಟಲ್. ಕಥೆ ಕೇಳಿದಾಗಲೇ, ‘ನನಗೆ ತುಂಬಾ ಕೆಲಸ ಕೊಡ್ತೀರಾ’ ಅಂತ ನಿರ್ದೇಶಕರಿಗೆ ಹೇಳಿದ್ದೆ. ಚಿತ್ರದಲ್ಲಿ ನನಗೆ ಮೂರು ಪಾತ್ರಗಳಿವೆ. ಇದೊಂದು ಮಜವಾದ ಚಿತ್ರ. ಕಥೆ ಕೇಳುವಾಗಲೇ ಬಹಳ ಕುತೂಹಲಕರವಾಗಿತ್ತು. ಕೊನೆಯ ಶಾಟ್ ವರೆಗೂ ಆ ಕುತೂಹಲವನ್ನು ನಿರ್ದೇಶಕರು ಉಳಿಸಿಕೊಂಡಿದ್ದಾರೆ. ಒಂದೇ ದಿನ ಮೂರೂ ಪಾತ್ರಗಳನ್ನು ಮಾಡಬೇಕಾಗಿತ್ತು. ಕಾಮಿಡಿ, ಎಂಟರ್‌ಟೈನಿಂಗ್ ಜೊತೆಗೆ ಒಂದು ರಿವೆಂಜ್ ಎಳೆ ಚಿತ್ರದಲ್ಲಿದೆ. ಅದು ಚಿತ್ರದ ಕೊನೆವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ಮೂವರು ನಾಯಕಿಯರ ಜೊತೆಗೂ 3 ಗೆಟಪ್‌ಗಳಿವೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಚಿತ್ರದ ಸಂದೇಶ’ ಎಂದು ಹೇಳಿದರು. ಈ ಸಿನಿಮಾದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲು ಪ್ಲ್ಯಾನ್ ಮಾಡಿಕೊಂಡಿರುವ ಚಿತ್ರತಂಡ, ಸಿನಿಮಾದ ಕುರಿತು ತಿಳಿಸಲೆಂದೇ 7 ದಿನ ಕರ್ನಾಟಕದಾದ್ಯಂತ ರ‍್ಯಾಲಿ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಈ ಕುರಿತಂತೆ ಮಾತನಾಡಿದ ರಾಮ್ ನಾರಾಯಣ್ ”ಪ್ರಜ್ವಲ್‌ಗೆ ಬೇರೆ ಚಿತ್ರದ ಶೂಟಿಂಗ್ ಇದ್ದರೂ, ಅದನ್ನೆಲ್ಲ ಮುಂದೆ ಹಾಕಿ ಪ್ರಮೋಷನ್‌ನಲ್ಲಿ ಭಾಗವಹಿಸುತ್ತಿದ್ದಾರೆ. ನಿರ್ಮಾಪಕರು ಯಾವುದಕ್ಕೂ ಕಮ್ಮಿ ಮಾಡಿಲ್ಲ. ರವಿಶಂಕರ್ ಅವರ ಹೀರೋ ಪಾತ್ರಕ್ಕೆ ಸರಿಸಮನಾದ ವಿಲನ್ ಕ್ಯಾರೆಕ್ಟರ್ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಲಿದೆ. ಇಲ್ಲಿ ಎಲ್ಲರ ಕೆಲಸಗಳಲ್ಲೂ ಅಬ್ಬರ ಇದೆ. 50 ದಿನಗಳವರೆಗೆ ಶೂಟಿಂಗ್ ನಡೆಸಿದ್ದು, ಮೂವರು ನಾಯಕಿಯರೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ” ಎಂದರು. ಅಲ್ಲದೆ ”ನಮ್ಮ ಸಿನಿಮಾದ ಕೆಲಸಗಳು ಮುಗಿದು ಎರಡು ತಿಂಗಳಾಗಿದೆ. ಆದರೆ, ಪ್ರತಿ ವಾರ ಎಂಟ್ಹತ್ತು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರಿಂದ, ನಾವು ಮುಂದೆ ಹೋಗುವ ಅನಿವಾರ್ಯತೆಯಿತ್ತು. ಇನ್ನೆಷ್ಟು ದಿನ ಮುಂದೂಡುವುದು? ನಾವು ಬೇರೆ ಚಿತ್ರಗಳಿಗೆ ಹೆದರಿ ಭಯಪಡುತ್ತಿದ್ದರೆ, ನಮ್ಮ ಚಿತ್ರದಲ್ಲಿ ಕಂಟೆಂಟ್ ಇಲ್ಲ ಅಂದುಕೊಳ್ಳುತ್ತಾರೆ. ನಮ್ಮ ಚಿತ್ರದಲ್ಲೂ ಒಳ್ಳೆಯ ಕಂಟೆಂಟ್ ಇದೆ. ಎಷ್ಟೇ ಸಿನಿಮಾಗಳಿದ್ದರೂ, ಜನರಿಗೆ ಇಷ್ಟವಾದರೆ ಬಂದು ನೋಡುತ್ತಾರೆ ಎಂಬ ನಂಬಿಕೆ ಇದೆ. ನಮ್ಮದು ಸಣ್ಣ ಸಿನಿಮಾ ಅಲ್ಲ, ದೊಡ್ಡ ಸಿನಿಮಾ’ ಎನ್ನುತ್ತಾರೆ ರಾಮ್ನಾರಾಯಣ್. ಪ್ರಜ್ವಲ್ ದೇವರಾಜ್, ರವಿಶಂಕರ್ ಅಲ್ಲದೆ ಶೋಭರಾಜ್‌, ಕೋಟೆ ಪ್ರಭಾಕರ್, ಶಂಕರ್ ಅಶ್ವತ್ಥ್‌, ವಿಕ್ಟರಿ ವಾಸು, ಪ್ರಶಾಂತ್ ನಟನ, ಅರಸು ಮಹಾರಾಜ್, ಮೋಹನ್ ಜುನೇಜ, ಉಮೇಶ್, ಗೋವಿಂದೇಗೌಡ, ವಿಜಯ್ ಚೆಂಡೂರ್, ಮೂಗು ಸುರೇಶ್, ಸಲ್ಮಾನ್, ಮಮತಾ ರಾಹುತ್ ಮುಂತಾದವರು ‘ಅಬ್ಬರ’ದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಯೋಗರಾಜ್ ಭಟ್, ರಾಮ್ ನಾರಾಯಣ್, ವಿಜಯ ಭರಮಸಾಗರ ಸಾಹಿತ್ಯ ಬರೆದಿದ್ದಾರೆ. ಜೆ.ಕೆ. ಗಣೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಅಬ್ಬರಿಸಲು ತಯಾರಾಗುತ್ತಿದ್ದಾರೆ ಪ್ರಜ್ವಲ್ ದೇವರಾಜ್ Read More »

ಅಗಲಿದ ಅಜ್ಜಿಯ ನೆನಪಿನಲ್ಲಿ ಭಾವುಕ ಪತ್ರ ಹಂಚಿಕೊಂಡ ಮೇಘನಾ ರಾಜ್

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದೆ. ಶಕ್ತಿ ಪ್ರಸಾದ್‌ ಪತ್ನಿ ಲಕ್ಷ್ಮಿ ದೇವಿ ಅವರು ವಯೋಸಹಜ ಕಾಯಿಲೆಯಿಂದ 22 ದಿನಗಳ ಕಾಲ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದ ಕಾರಣ ನಿನ್ನೆ ಕೊನೆ ಉಸಿರೆಳೆದಿದ್ದಾರೆ.ಲಕ್ಷ್ಮಿ ದೇವಿ ಅವರ ಜೊತೆ ಸರ್ಜಾ ಕುಟುಂಬದ ಪ್ರತಿ ಸದಸ್ಯರು ಎಮೋಷನಲ್ ಬಾಂಡ್ ಹೊಂದಿದ್ದಾರೆ. ಕುಟುಂಬಸ್ಥರು ಮಾತ್ರವಲ್ಲದೆ ಮಾಧ್ಯಮ ಮಿತ್ರರನ್ನೂ ಕೂಡ ಲಕ್ಷ್ಮಿ ದೇವಿ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅಗಲಿದ ಅಜ್ಜಿಯನ್ನು ನೆನೆದು ಮೇಘನಾ ರಾಜ್‌ ಭಾವುಕ ಪೋಸ್ಟ್‌ ಬರೆದಿದ್ದಾರೆ. ಚಿರಂಜೀವಿ ಸರ್ಜಾರ ಕೈ ಹಿಡಿದ ಮೇಲೆ ಮೇಘನಾ ರಾಜ್‌ ಮತ್ತು ಲಕ್ಷ್ಮಿ ದೇವಿ ಅವರ ಸಂಬಂಧ ಗಟ್ಟಿಯಾಗಿತ್ತು. ಮೇಘನಾ ಹೆರಿಗೆಗೆಂದು ಆಸ್ಪತ್ರೆಗೆ ಹೋದಾಗ ಲಕ್ಷ್ಮಿ ದೇವಿ ಅವರು ಒಂದು ಕ್ಷಣವೂ ಎಲ್ಲಿಯೂ ಹೋಗದೆ ಮೇಘನಾರನ್ನು ನೋಡಿಕೊಂಡಿದ್ದರಂತೆ. ಈ ಸ್ಪೆಷಲ್ ಬಾಂಧವ್ಯದ ಬಗ್ಗೆ ಮೇಘನಾ ಬರೆದುಕೊಂಡಿದ್ದಾರೆ. ”Iron lady for a reason! ನನ್ನ ಅಜ್ಜಿ ಸಂಬಂಧ ಅದ್ಭುತಾಗಿತ್ತು, ಚಿರು ಹೊರತು ಪಡಿಸಿ ನಾವು ಅನೇಕ ವಿಚಾರಗಳನ್ನು ಒಪ್ಪಿಕೊಂಡಿದ್ದೀವಿ ಹಾಗೇ ವಿರೋಧಿಸಿದ್ದೀವಿ. ಚಿರು ವಿಚಾರದಲ್ಲಿ ನಾನು ಮತ್ತು ಅಜ್ಜಿ ಏನೇ ಇದ್ದರೂ ಒಳ್ಳೆಯ ನಿರ್ಧಾರಗಳು ಮತ್ತು ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳುವುದು. ಹೀಗಾಗಿ ಚಿರು ಅಜ್ಜಿ ಅವರನ್ನು ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆಯುತ್ತಾರೆ. ಕೆಲವೊಂದು ಕ್ಷಣಗಳಲ್ಲಿ ಅಜ್ಜಿ ಮತ್ತು ನಾನು ತುಂಬಾನೇ stubborn ಆಗಿ ಅನೇಕ ವಿಚಾರಗಳಿಗೆ ಜಗಳ ಮಾಡಿದ್ದೀವಿ. ಆದರೆ ಅವರು ನನ್ನ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರು, ನನಗೆ ಬೇಕಾದ ರೀತಿಯಲ್ಲಿಯೇ ನನಗೆ ಪ್ರೀತಿ ಕೊಟ್ಟಿದ್ದಾರೆ. ನೀವು ಇಲ್ಲದಿದ್ದರೆ ಈ ಕುಟುಂಬದ ಫೌಂಡೇಷನ್‌ ಗಟ್ಟಿಯಾಗಿರುತ್ತಿರಲಿಲ್ಲ. ನನ್ನ ದೃಷ್ಠಿಯಲ್ಲಿ ನಿಮ್ಮನ ಯಾರೂ ಅಲುಗಾಡಿಸಲು ಸಾಧ್ಯವೇ ಇಲ್ಲ.. ನೀವು ಅಷ್ಟು ಸ್ಟ್ರಾಂಗ್. ನಾನು ಕಂಡಿರುವ ಸ್ಟ್ರಾಂಗ್ ವ್ಯಕ್ತಿ ನೀವು. ದಿನ ಬೆಳಗ್ಗೆ ನಿಮಗೆ ಕರೆ ಮಾಡುವುದನ್ನು ನಾನು ಮಿಸ್ ಮಾಡಿಕೊಳ್ಳುವೆ, ಮನೆಯಲ್ಲಿ ನಾವಿಬ್ಬರೂ ತಪ್ಪದೆ ಕುಳಿತುಕೊಂಡು ಕಾಫಿ ಕುಡಿಯುತ್ತಿದ್ದ ಕ್ಷಣವನ್ನು ಮಿಸ್ ಮಾಡಿಕೊಳ್ಳುವೆ, ನೀವು ಸಸ್ಯಹಾರಿ ಆಗಿದ್ದರೂ ಚಿರುಗಾಗಿ ಮಟನ್ ಚಾಪ್ಸ್‌ ಮಾಡಿಕೊಡುತ್ತಿದ್ದಿರಿ. ರುಚಿ ಸೂಪರ್ ಆಗಿರುತ್ತಿತ್ತು. ನನಗೆ ಖಂಡಿತ ಗೊತ್ತು ಈಗ ನೀವು ಚಿರು ಜೊತೆ ಸೇರಿಕೊಂಡು ರುಚಿ ರುಚಿಯಾಗಿರುವ ಮಟನ್ ತಿನ್ನುತ್ತಿರುತ್ತೀರಿ. ಲವ್ ಯು ಅಜ್ಜಿ. ನಾನು ಜೀವನದಲ್ಲಿ ಮರೆಯಲಾಗ ಕ್ಷಣ ಅಂದ್ರೆ ಆಸ್ಪತ್ರೆಯಲ್ಲಿ ನೀವು ಒಂದು ಕ್ಷಣವೂ ನನ್ನನ್ನು ಬಿಡದೆ ಜೊತೆಗಿದ್ದದ್ದು” ಎಂದು ಮೇಘನಾ ಬರೆದುಕೊಂಡಿದ್ದಾರೆ.  ನಟ ಶಕ್ತಿ ಪ್ರಸಾದ್ ಮತ್ತು ಲಕ್ಷ್ಮಿ ದೇವಿ ಅವರಿಗೆ ಮೂವರು ಮಕ್ಕಳು. ಮೊದಲ ಮಗ ಕಿಶೋರ್‌ ಕುಮಾರ್, ಎರಡನೆಯವರು ಅರ್ಜುನ್ ಸರ್ಜಾ ಮತ್ತು ಮೂರನೆಯವರು ಅಮ್ಮಾಜಿ. ಲಕ್ಷ್ಮಿ ದೇವಿ ಅವರು ವೃತ್ತಿಯಲ್ಲಿ ಆರ್ಟ್‌ ಟೀಚರ್ ಆಗಿದ್ದರು. ಶಕ್ತಿ ಪ್ರಸಾದ್ ಅಗಲಿದ ನಂತರ ಬೆಂಗಳೂರಿನಲ್ಲಿರುವ ಪುತ್ರಿ ಮನೆಯಲ್ಲಿ ಲಕ್ಷ್ಮಿ ದೇವಿ ವಾಸಿಸುತ್ತಿದ್ದರು. ಚಿರಂಜೀವಿ ಎರಡನೇ ವರ್ಷದ ಪುಣ್ಯಸ್ಮರಣೆಯಲ್ಲಿ ಕೊನೆಯದಾಗಿ ಲಕ್ಷ್ಮಿ ದೇವಿ ಅವರು ಕಾಣಿಸಿಕೊಂಡಿದ್ದರು. ಆಗ ಚಿರು ಪುತ್ರ ರಾಯನ್ ರಾಜ್‌ ಸರ್ಜಾ ಜೊತೆಗಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಅಗಲಿದ ಅಜ್ಜಿಯ ನೆನಪಿನಲ್ಲಿ ಭಾವುಕ ಪತ್ರ ಹಂಚಿಕೊಂಡ ಮೇಘನಾ ರಾಜ್ Read More »

ಗೋಲ್ಡನ್ ಕ್ವೀನ್ ನ ಗ್ಲಾಮರಸ್ ಲುಕ್ ಗೆ ಫ್ಯಾನ್ಸ್ ಫಿದಾ

ಸ್ಯಾಂಡಲ್ವುಡ್‌ ನ ಗೋಲ್ಡನ್ ಕ್ವೀನ್ ಅಮೂಲ್ಯ ಸದ್ಯ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಸಿನಿಮಾ ರಂಗದಿಂದ ದೂರ ಉಳಿದಿರುವ ಅಮೂಲ್ಯ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿ ಭಡ್ತಿ ಪಡೆದಿದ್ದಾರೆ‌. ನಟನೆಯ ಹೊರತಾಗಿ ನಟಿ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಹಾಗಾಗಿ ತಮ್ಮ ಜೀವನದ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ನಟಿ ಅಮೂಲ್ಯ ತಮ್ಮ ಹೊಸ ಲುಕ್ ಜೊತೆಗೆ ಒಂದೆರಡು ಹೆಜ್ಜೆಯನ್ನೂ ಹಾಕಿದ್ದಾರೆ. ವಿಷಯ ಏನಪ್ಪಾ ಅಂದ್ರೆ ನಟಿ ಅಮೂಲ್ಯ ತಮ್ಮ ಮೊದಲ ರೀಲ್ಸ್ ನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮತ್ತಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಅಮೂಲ್ಯ ಮಕ್ಕಳಾದ ಬಳಿಕ ತಮ್ಮ ಇತ್ತೀಚೆಗಿನ ಫೋಟೋವನ್ನು ಹಂಚಿಕೊಂಡಿದ್ದರು. ಈಗ ವಿಡಿಯೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಮೂಲ್ಯ ಅವರ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಮೂಲ್ಯ ಗ್ಲಾಮರಸ್ ಲುಕ್ ನೋಡಿದ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಂಗ ದಾವಣಿ ತೊಟ್ಟು ಅಮೂಲ್ಯ ಹೆಜ್ಜೆ ಹಾಕಿರುವ ಅಮೂಲ್ಯ ಹಲವರ ಮನ ಗೆದ್ದಿದ್ದಾರೆ. ಅಂದ ಹಾಗೆ ಇವರು ಡ್ಯಾನ್ಸ್ ಮಾಡಿರುವುದು ಶರಣ್ ಮತ್ತು ನಿಶ್ವಿಕ ನಾಯ್ಡು ಅಭಿನಯದ ‘ಗುರು ಶಿಷ್ಯರು’ ಚಿತ್ರದ ಹಾಡಿಗೆ. ‘ಆಣೆ ಮಾಡಿ ಹೇಳುತೀನಿ’ ಎನ್ನುವ ಹಾಡಿಗೆ ಮೊದಲ ಬಾರಿಗೆ ರೀಲ್ಸ್ ಮಾಡುವುದರೊಂದಿಗೆ ”ನನ್ನ ಮೊದಲ ರೀಲ್ಸ್‌ ನನಗೆ ತುಂಬಾ ಇಷ್ಟವಾದ ಹಾಡು. ನಿರ್ಮಾಪಕ ತರುಣ್ ಸುಧೀರ್ ಸೇರಿದಂತೆ, ಇಡೀ ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ” ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಅಮೂಲ್ಯ ಹೊಸ ಫೋಟೋಶೂಟ್ ಮಾಡಿಸಿ, ಫೋಟೊಗಳನ್ನೂ ಹಂಚಿಕೊಂಡಿದ್ದಾರೆ. ಹಸಿರು ಬಣ್ಣದ ಡ್ರೆಸ್‌ ತೊಟ್ಟು ಅಮುಲ್ಯಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಅಮೂಲ್ಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮಕ್ಕಳಾದ ಬಳಿಕವೂ ಇಷ್ಟೋಂದು ಗ್ಲಾಮರಸ್ ಆಗಿ ಕಾಣಿಸುವ ಅಮೂಲ್ಯ ಕಮ್ ಬ್ಯಾಕ್ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಫ್ಯಾನ್ಸ್.

ಗೋಲ್ಡನ್ ಕ್ವೀನ್ ನ ಗ್ಲಾಮರಸ್ ಲುಕ್ ಗೆ ಫ್ಯಾನ್ಸ್ ಫಿದಾ Read More »

ರಶ್ಮಿಕಾರ ಮೊದಲ ಬಾಲಿವುಡ್ ಸಿನಿಮಾ

‘ನ್ಯಾಷನಲ್ ಕ್ರಶ್’ ಎಂದೇ ಎಲ್ಲೆಡೆ ಪ್ರಸಿದ್ದರಾಗಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸದ್ಯ ಪಾನ್ ಇಂಡಿಯನ್ ಸ್ಟಾರ್ ಆಗಿದ್ದಾರೆ. ಕನ್ನಡದಿಂದ ಆರಂಭಿಸಿ, ತೆಲುಗು, ತಮಿಳು ಈಗ ಹಿಂದಿಯಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಅಭಿನಯda ಮೊದಲ ಬಾಲಿವುಡ್ ಸಿನಿಮಾ ತನ್ನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.ಅದೇ ‘ಗುಡ್ ಬೈ’ ಸಿನಿಮಾ. ರಕ್ಷಿತ್ ಶೆಟ್ಟಿಯವರ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಆರಂಭವಾದ ರಶ್ಮಿಕಾ ಅವರ ಸಿನಿಪಯಣ, ಸದ್ಯ ಬಾಲಿವುಡ್ ನಲ್ಲಿ ಓಡುತ್ತಿದೆ. ಪ್ರತೀ ಭಾಷೆಯ ಚಿತ್ರರಂಗಗಳಲ್ಲೂ ಅಪಾರ ಅಭಿಮಾನಿ ಹೊಂದಿರುವ ಇವರು, ಬಾಲಿವುಡ್ ನ ಮೊದಲ ಸಿನಿಮಾದಲ್ಲೇ ದಿಗ್ಗಜ ಅಮಿತಾಭ್ ಬಚ್ಚನ್ ಅವರ ಜೊತೆ ನಟಿಸಿದ್ದಾರೆ. ವಿಕಾಸ್ ಬೊಲ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ‘ಬಿಗ್ ಬಿ’ ಅಮಿತಾಭ್ ಬಚ್ಚನ್, ರಶ್ಮಿಕಾ ಮಂದಣ್ಣ, ನೀನಾ ಗುಪ್ತ, ಸಾಹಿಲ್ ಮೆಹತಾ ಮುಂತಾದ ನಟರು ಬಣ್ಣ ಹಚ್ಚಿದ್ದಾರೆ. ಇದರ ತಾರಾಗಣದಿಂದಲೇ ಎಲ್ಲೆಡೆ ಸುದ್ದಿಯಲ್ಲಿರುವ ಈ ಸಿನಿಮಾ ಇದೇ ಅಕ್ಟೋಬರ್ 7ರಂದು ಭಾರತದಾದ್ಯಂತ ತೆರೆಕಾಣುತ್ತಿದೆ. ಸದ್ಯ ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಹಂಚಿಕೊಂಡಿದ್ದು, ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾರ ಮೊದಲ ಬಾಲಿವುಡ್ ಸಿನಿಮಾ Read More »

‘ವಿಕ್ರಾಂತ್ ರೋಣ’ನೊಂದಿಗೆ ಬರಲಿದೆಯಾ ‘ಪರಮ್ ವಾಹ್’

ಸದ್ಯ ಭಾರತದಾದ್ಯಂತ ಸಿನಿರಸಿಕರು ಎದುರುಗಾಣುತ್ತಿರುವ ಸಿನಿಮಾಗಳಲ್ಲಿ ಒಂದು ನಮ್ಮ ಕನ್ನಡದ ಪಾನ್ m-ಇಂಡಿಯನ್ ಸಿನಿಮಾ ‘ವಿಕ್ರಾಂತ್ ರೋಣ’. ಎಲ್ಲೆಡೆ ಗುಲ್ಲೆಬ್ಬಿಸುತ್ತಿರುವ ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾ ಇದೇ ಜುಲೈ 28ಕ್ಕೆ ವಿಶ್ವದಾದ್ಯಂತ ವಿವಿಧ ಕಡೆಗಳಲ್ಲಿ ತೆರೆಕಾಣುತ್ತಿದೆ. ಹಾಡುಗಳು ಹಾಗು ಟ್ರೈಲರ್ ನಿಂದ ತನ್ನ ಮೇಲಿದ್ದ ನಿರೀಕ್ಷೆಗಳನ್ನು ಮುಗಿಲೆತ್ತರಕ್ಕೆ ಏರಿಸಿಕೊಂಡ ಈ ಸಿನಿಮಾ ಬಿಡುಗಡೆಗೆ ಸನ್ನಿಹಿತವಾಗುತ್ತಿದ್ದಂತೆ ಚಿತ್ರದ ಬಗೆಗಿನ ಹೊಸ ಹೊಸ ಸುದ್ದಿಗಳು ಹೊರಬೀಳುತ್ತಿವೆ. ‘ಅಭಿನಯ ಚಕ್ರವರ್ತಿ ‘ ಕಿಚ್ಚ ಸುದೀಪ್, ನಿರ್ದೇಶಕ ಅನೂಪ್ ಭಂಡಾರಿ ಸೇರಿದಂತೆ ಚಿತ್ರದ ಹಲವು ಕಲಾವಿದರು ಸದ್ಯ ಪ್ರಚಾರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಲು ಸಾಲು ಸಂದರ್ಶನಗಳು, ಸುದ್ದಿಗೋಷ್ಠಿಗಳು ನಡೆಯುತ್ತಲೇ ಇವೆ. ಸದ್ಯ ಇವೆಲ್ಲದರ ನಡುವೆ ಸುದ್ದಿಯೊಂದು ಸ್ಯಾಂಡಲ್ವುಡ್ ನಲ್ಲಿ ಓಡಾಡುತ್ತಿದೆ. ರಕ್ಷಿತ್ ಶೆಟ್ಟಿ ಅವರ ಮಾಲೀಕತ್ವದ ‘ಪರಮ್ ವಾಹ್ ಸ್ಟುಡಿಯೋಸ್’ ಇತ್ತೀಚಿಗಷ್ಟೇ ಹೊಸ ಸಿನಿಮಾವೊಂದನ್ನು ಘೋಷಿಸಿ, ಅದರ ನಾಯಕ ನಾಯಕಿಯರ ಪರಿಚಯವನ್ನ ಮಾಡಿಸಿತ್ತು. ಚಂದ್ರಜಿತ್ ಬೆಳ್ಳಿಯಪ್ಪ ಅವರ ನಿರ್ದೇಶನದ ಈ ಸಿನಿಮಾದಲ್ಲಿ ‘ಪಂಚತಂತ’ ಖ್ಯಾತಿಯ ವಿಹಾನ್ ಗೌಡ ಹಾಗು ಕಿರುತೆರೆಯ ಯುವರಾಣಿ ಎನಿಸಿಕೊಂಡ ಅಂಕಿತಾ ಅಮರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಟೀಸರ್ ಅನ್ನು ‘ವಿಕ್ರಾಂತ್ ರೋಣ’ ಸಿನಿಮಾದೊಂದಿಗೆ ಜೋಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಎರಡೂ ಕಡೆಗಳಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ಪರಮ್ ವಾಹ್’ ತನ್ನ ಯಾವುದೇ ಸಿನಿಮಾದ ಟೀಸರ್ ಬಿಡುಗಡೆಯಿದ್ದರೆ, ಅದನ್ನು ಕನಿಷ್ಟ ಒಂದು ವಾರದ ಹಿಂದೆಯೇ ಘೋಷಿಸಿರುತ್ತದೆ. ‘ವಿಕ್ರಾಂತ್ ರೋಣ’ ಬಿಡುಗಡೆಗೆ ಕೇವಲ ನಾಲ್ಕು ದಿನಗಳಿದ್ದರು ಇನ್ನೂ ಯಾವುದೇ ಘೋಷಣೆ ಇವರಿಂದ ಬಂದಿಲ್ಲ. ಅಲ್ಲದೇ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ್ ‘ವಿಕ್ರಾಂತ್ ರೋಣ’ ಕೂಡ ತಮ್ಮೆಲ್ಲ ಹೊಸ ಪ್ರಯತ್ನಗಳ ಬಗ್ಗೆ ಮಾತನಾಡುತ್ತಿದ್ದೂ, ಈ ಟೀಸರ್ ಬಗ್ಗೆ ಎಲ್ಲಿಯೂ ತುಟಿಬಿಚ್ಚಿಲ್ಲ. ಹಾಗಾಗಿ ಈ ಸುದ್ದಿ ಎಷ್ಟು ಸತ್ಯ, ಎಷ್ಟು ಸುಳ್ಳು ಎಂdu ಕಾದುನೋಡಬೇಕಿದೆ.

‘ವಿಕ್ರಾಂತ್ ರೋಣ’ನೊಂದಿಗೆ ಬರಲಿದೆಯಾ ‘ಪರಮ್ ವಾಹ್’ Read More »

ಪತ್ನಿಯಿಂದಲೇ ಬಿಡುಗಡೆ ಕಾಣುತ್ತಿದೆ ಅಪ್ಪು ಹೊಸ ಟೀಸರ್.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಒಂದು ವರ್ಷವೇ ಕಳೆಯುತ್ತಾ ಬಂತು. ಆದರೂ ಅವರು ಅಭಿಮಾನಿಗಳ ಎದೆಯಲ್ಲಿ ಎಂದಿಗೂ ಅಜರಾಮರ. ಅವರ ನಡತೆ ಹಾಗು ವ್ಯಕ್ತಿತ್ವಗಳಿಂದ ಎಲ್ಲರ ನಡುವೆಯೇ ಜೀವಂತವಾಗಿರುವ ಅವರು, ಕಲೆಯಿಂದ ಇನ್ನೂ ಜೀವಂತ ಎನ್ನಬಹುದು. ಸದ್ಯ ಅಪ್ಪು ಅಭಿನಯಿಸಿರೋ ಹೊಸ ಚಿತ್ರಗಳು ತೆರೆಕಡೆಗೆ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸದ್ಯ ಅಪ್ಪು ಅತಿಥಿ ಪಾತ್ರದಲ್ಲಿ ನಟಿಸಿರುವ ‘ಲಕ್ಕಿ ಮ್ಯಾನ್’ ಸಿನಿಮಾದ ಟೀಸರ್ ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ‘ಲವ್ ಮೊಕ್ಟೇಲ್’ ಸಿನಿಮಾಗಳಿಂದ ಮರಳಿ ಕೀರ್ತಿ ಗಳಿಸಿದಂತಹ ಡಾರ್ಲಿಂಗ್ ಕೃಷ್ಣ ಅವರ ನಟನೆಯ ಮುಂದಿನ ಸಿನಿಮಾವೆ ಈ ‘lucky ಮ್ಯಾನ್’.ಪ್ರಖ್ಯಾತ ನಿರ್ದೇಶಕ ಎಸ್ ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾ ಸದ್ಯ ಚಿತ್ರೀಕರಣ ಮುಗಿಸಿಕೊಂಡು ತೆರೆಕಾಣಲು ಸಿದ್ದವಾಗಿ ನಿಂತಿದೆ. ಇದೇ ಸಿನಿಮಾದಲ್ಲಿ ಅಪ್ಪು ಹಾಗು ಪ್ರಭುದೇವ ಅವರು ಅತಿಥಿ ಪಾತ್ರಗಳಿಗೆ ಬಣ್ಣ ಹಚ್ಚಿದ್ದು, ಅಪ್ಪು ‘ದೇವರ’ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅಪ್ಪುವಿನ ಪಾತ್ರದ ಬಗೆಗಿನ ಟೀಸರ್ ಲೋಕಾರ್ಪಣೆಗೊಳಿಸಲು ಚಿತ್ರತಂಡ ನಿರ್ಧರಿಸಿದ್ದು, ಇದೇ ಜುಲೈ 25ರಂದು ಮಧ್ಯಾಹ್ನ 12:15ಕ್ಕೆ ಸರಿಯಾಗಿ ‘ಎಂ ಆರ್ ಟಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಈ ಟೀಸರ್ ಬಿಡುಗಡೆ ಮಾಡುತ್ತಿರುವುದು ಬೇರಾರು ಅಲ್ಲದೇ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿಯಾದ ಅಶ್ವಿನಿ ಪುನೀತ್ ರಾಜಕುಮಾರ್ ಅವರು. ಡಾರ್ಲಿಂಗ್ ಕೃಷ್ಣ ನಾಯಕರಾಗಿ, ಸಂಗೀತ ಶೃಂಗೇರಿ ನಾಯಾಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಸಾಧು ಕೋಕಿಲ, ನಾಗಭೂಷಣ, ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದು ಅಪ್ಪು ಹಾಗು ಪ್ರಭುದೇವ ಅವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಇಂದು ಟೀಸರ್ ಬಿಡುಗಡೆಯಗುತ್ತಿದ್ದು, ಸಿನಿಮಾ ಬಿಡುಗಡೆಯ ದಿನಾಂಕವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಪತ್ನಿಯಿಂದಲೇ ಬಿಡುಗಡೆ ಕಾಣುತ್ತಿದೆ ಅಪ್ಪು ಹೊಸ ಟೀಸರ್. Read More »

ವದಂತಿಗಳಿಗೆ ಬ್ರೇಕ್ ಹಾಕಿದ ನಮ್ರತಾ ಗೌಡ

ಬಿಗ್ ಬಾಸ್ ಕನ್ನಡ ಶೀಘ್ರದಲ್ಲೇ ಸಣ್ಣ ಪರದೆಗೆ ಮರಳಲು ಸಿದ್ಧವಾಗಿರುವುದರಿಂದ, ಮುಂಬರುವ ಸೀಸನ್‌ಗಾಗಿ ತಾತ್ಕಾಲಿಕ ಸ್ಪರ್ಧಿಗಳ ಪಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವುದು ಸರ್ವೇಸಾಮಾನ್ಯ. ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ಬಿಗ್ ಬಾಸ್ ಕನ್ನಡದ ಈ ಬಾರಿಯ ಸೀಸನ್‌ನ ನಿರೀಕ್ಷಿತ ಸ್ಪರ್ಧಿಗಳಲ್ಲಿ ಒಬ್ಬರು ಎಂಬ ವದಂತಿಯಿತ್ತು. ಅದಾಗ್ಯೂ, ಇತ್ತೀಚೆಗಿನ ಮಾಹಿತಿಯ ಪ್ರಕಾರ, ನಟಿ ಈ ರಿಯಾಲಿಟಿ ಶೋನ ಭಾಗವಾಗಿರುವುದಿಲ್ಲವಂತೆ. ಹೌದು, ಇತ್ತೀಚೆಗೆ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅಭಿಮಾನಿಗಳೊಂದಿಗೆ ‘ನನಗೆ ಪ್ರಶ್ನೆ ಕೇಳಿ’ ವಿಭಾಗದಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಭಾಗವಹಿಸುವ ಬಗ್ಗೆ ತನ್ನ ಅಭಿಮಾನಿ ಕೇಳಿದ ಪ್ರಶ್ನೆಗಳಿಗೆ ನಮ್ರತಾ ಪ್ರತಿಕ್ರಿಯಿಸಿದ್ದಾರೆ. “ಈ ಎಲ್ಲಾ ವದಂತಿಗಳನ್ನು ಯಾರು ಹರಡುತ್ತಿದ್ದಾರೆ? ನಾನು ಬಿಗ್ ಬಾಸ್ ಕನ್ನಡಕ್ಕೆ ಹೋಗುತ್ತಿಲ್ಲ” ಎಂದಿದ್ದಾರೆ. ‘ನಾಗಿಣಿ’ ನಟಿ ಈ ರಿಯಾಲಿಟಿ ಶೋಗೆ ಸೆಲೆಬ್ರಿಟಿ ಸ್ಪರ್ಧಿಯಾಗಿ ಪ್ರವೇಶಿಸುತ್ತಾರೆ ಎಂಬ ಎಲ್ಲಾ ವದಂತಿಗಳಿಗೆ ಅವರ ಪ್ರತಿಕ್ರಿಯೆಯಿಂದ ಪೂರ್ಣ ವಿರಾಮ ದೊರೆತಂತಾಗಿದೆ. ಇದೆಲ್ಲವೂ ಕೇವಲ ವದಂತಿ ಮತ್ತು ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ. ವೃತ್ತಿಜೀವನದ ಮುಂಭಾಗದಲ್ಲಿ, ನಮ್ರತಾ ಗೌಡ ಪ್ರಸ್ತುತ ಕಾಲ್ಪನಿಕ ಕಥೆ ನಾಗಿಣಿ 2 ರಲ್ಲಿ ಆಕಾರ ಬದಲಾಯಿಸುವ ಸಾಮರ್ಥವಿರುವ ಶಿವಾನಿ ಎಂಬ ಸರ್ಪದ ಪಾತ್ರವನ್ನು ಮಾಡುತ್ತಿದ್ದಾರೆ.

ವದಂತಿಗಳಿಗೆ ಬ್ರೇಕ್ ಹಾಕಿದ ನಮ್ರತಾ ಗೌಡ Read More »

ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಳ್ಳಲಿರುವ ಪೃಥ್ವಿ ಅಂಬರ್

ಈಗಿರುವ ಬ್ಯುಸಿ ಸ್ಯಾಂಡಲ್‌ವುಡ್‌ ನಟರಲ್ಲಿ ಪೃಥ್ವಿ ಅಂಬರ್ ಕೂಡ ಒಬ್ಬರು. ‘ದಿಯಾ’ ಸಿನಿಮಾದಿಂದ ಶುರುವಾದ ಪೃಥ್ವಿ ಅಂಬರ್ ಅವರ ಯಶಸ್ಸಿನ ಪಯಣ ಭರ್ಜರಿಯಾಗಿ ಸಾಗುತ್ತಿದೆ. ಇತ್ತೀಚೆಗಷ್ಟೇ ಶಿವರಾಜ್‌ಕುಮಾರ್ ಅವರ ಜೊತೆಗೆ ಪೃಥ್ವಿ ಅಂಬರ್ ನಟಿಸಿದ್ದ ‘ಬೈರಾಗಿ’ ಸಿನೆಮಾ ರಿಲೀಸ್ ಆಗಿತ್ತು. ನಂತರ ಜುಲೈ 8 ರಂದು ಪೃಥ್ವಿ ಹೀರೋ ಆಗಿದ್ದ ‘ಶುಗರ್‌ಲೆಸ್’ ರಿಲೀಸ್ ಆಯ್ತು. ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡ ಈ ಸಿನೆಮಾದ ನಂತರ ಈಗ ಪೃಥ್ವಿ ಅಂಬರ್ ಅವರ ಹೊಸ ಸಿನಿಮಾದ ಕುರಿತು ಮಾಹಿತಿ ಹೊರಬಂದಿದೆ. ಅದೇನೆಂದರೆ, ಪೃಥ್ವಿ ನಟನೆಯ ‘ದೂರದರ್ಶನ’ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ.ಹೌದು, ಪೃಥ್ವಿ ಅಂಬರ್ ನಟನೆಯ ‘ದೂರದರ್ಶನ’ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರೊಳಗೆ ಟಿವಿ ಬಂದ ಮೇಲೆ ಉಂಟಾಗುವ ಪ್ರಭಾವಗಳನ್ನು ಆಧರಿಸಿ ಈ ಸಿನಿಮಾವಿದೆ.ಪೃಥ್ವಿ ಅಂಬರ್, ಉಗ್ರಂ ಮಂಜು, ಹರಿಣಿ, ಸುಂದರ್, ಅಯನ ಕಾಣಿಸಿಕೊಂಡಿರುವ ಈ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ವಿಭಿನ್ನ ಕಂಟೆಂಟ್ ಮೂಲಕ ಸದ್ದು ಮಾಡಿರುವ ‘ದೂರದರ್ಶನ’ ಸಿನಿಮಾದ ಈ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಹಳ್ಳಿಯೊಂದರ ಬ್ಯಾಕ್ ಡ್ರಾಪ್‌ ಇದೆ. ಸುಕೇಶ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಈ ಹಿಂದೆ ಅವರು ಸಂಭಾಷಣೆಕಾರರಾಗಿ, ಬರಹಗಾರರಾಗಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಸಿನಿಮಾದ ಕುರಿತು ಮಾತನಾಡಿದ ಅವರು ”1980ರ ಕಾಲಘಟ್ಟದಲ್ಲಿ ನಡೆಯುತ್ತಿರುವ ಕಥೆಯಾಧರಿಸಿ ಇರುವ ಸಿನಿಮಾ ನಾವು ನಮ್ಮ ಹಿರಿಯರ ಜೊತೆ ಅನುಭವಿಸಿದ, ನಾವು ನೋಡಿರುವ, ಕೇಳಿರುವ ಮಾಹಿತಿಯನ್ನು ಕಲೆ ಹಾಕಿ ಮಾಡಿದ ಕಥೆಯಾಗಿದೆ. ಇಡೀ ಕಥೆ ಒಂದು ಟಿವಿ ಸುತ್ತ ನಡೆಯುತ್ತದೆಯಂತೆ. 1980 ಕಾಲಘಟ್ಟ ಅಂದ್ರೆ ರೆಟ್ರೋ ಅಂದುಕೊಳ್ಳುತ್ತಾರೆ. ನಾವು ರಿಯಲಿಸ್ಟಿಕ್ ಆಗಿ, ಅದೇ ರೀತಿ ಮ್ಯಾನರಿಸಂ ಧಾಟಿಯಲ್ಲಿ ಕಟ್ಟಿಕೊಡುತ್ತಿದ್ದೇವೆ” ಎಂದರು. ಇನ್ನು ನಟ ಪೃಥ್ವಿ ಅಂಬರ್ ಮಾತನಾಡಿ ‘ಈ ಸಿನಿಮಾ ನನಗೆ ಬಹಳ ಕನೆಕ್ಟ್ ಆಗಿದೆ. ನಾನು ಹುಟ್ಟಿದ್ದು 1988ರಲ್ಲಿ. ನನ್ನ ಪೀಳಿಗೆಯಲ್ಲಿ ಪ್ರೀ-ಟೆಕ್ನಾಲಜಿ ಹಾಗೂ ಟೆಕ್ನಾಲಜಿ ಎರಡನ್ನೂ ನೋಡಿದ್ದೇನೆ. ನಾನು ಕೂಡ ಹಳ್ಳಿಯಲ್ಲಿ ಹುಟ್ಟಿದವನು. ನಮ್ಮ ಮನೆಗೆ ಟಿವಿ ಬರುವ ಮೊದಲು ಬೇರೆಯವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆವು. ಆ ಬಳಿಕ ನಮ್ಮ ಮನೆಗೆ ಕಲರ್ ಟಿವಿ ಬಂತು. ಆ ದಿನಗಳು ನನಗೆ ಬಹಳ ಕಾಡಿದವು. ಸುಕೇಶ್ ಸರ್ ಕಥೆ ಹೇಳಿದಾಗ ನಮ್ಮೂರಿನ ಕಥೆಯನ್ನೇ ಕೇಳಿದಂತೆ ಆಯ್ತು. ಈ ಸಿನಿಮಾ ಮಾಡಲೇಬೇಕು ಎಂದು ನಿರ್ಧರಿಸಿ ಮಾಡಿದ್ದೇನೆ. 80ರ ದಶಕವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೇವೆ’ ಎಂದರು. ಉಳಿದಂತೆ ವಾಸುಕಿ ವೈಭವ್ ಅವರ ಸಂಗೀತ ನಿರ್ದೇಶನ, ಅರುಣ್ ಸುರೇಶ್ ಅವರ ಛಾಯಾಗ್ರಹಣಹಾಗೂ ನಂದೀಶ್ ಟಿ.ಜಿ. ಸಂಭಾಷಣೆ ಚಿತ್ರಕ್ಕಿದೆ. ಹರಿಣಿ, ದೀಪಕ್‌ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್‌, ಸೂರಜ್‌ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರರು ತಾರಾಗಣದಲ್ಲಿದ್ದಾರೆ.

ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಳ್ಳಲಿರುವ ಪೃಥ್ವಿ ಅಂಬರ್ Read More »

Scroll to Top