ಡಾಲಿ ಧನಂಜಯ ಹಾಗೂ ಅಮೃತಾ ಅಯ್ಯಂಗಾರ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ ..ಡಾಲಿ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದು… ಧನಂಜಯ ಅಮೃತಾ, ನಾಗಭೂಷಣ್, ಪೂರ್ಣಚಂದ್ರ, ಇನ್ನೂ ಅನೇಕರು ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ…
ಡಿಸೆಂಬರ್ 24ರಂದು ಸಿನಿಮಾವನ್ನ ತೆರೆಗೆ ತರುವ ಪ್ರಯತ್ನದಲ್ಲಿರುವ ಡಾಲಿ ಧನಂಜಯ್… ತಮ್ಮ ಸಿನಿಮಾವನ್ನ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ …ಸದ್ಯ ಬಡವ ರಾಸ್ಕಲ್ ಚಿತ್ರತಂಡ ಮಾಡುತ್ತಿರುವ ಪ್ರಚಾರ ಪ್ರೇಕ್ಷಕರ ಗಮನ ಸೆಳೆಯುತ್ತಿದೆ…
ಟೈಟಲ್ ನಲ್ಲೇ ಬಡವ ಅಂತಿರೋ ಕಾರಣದಿಂದ ಬಡ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಿಕೊಂಡು ಚಿತ್ರತಂಡ ತಮ್ಮ ಸಿನಿಮಾವನ್ನು ಪ್ರಚಾರ ಮಾಡುತ್ತಿದೆ… ಎಳನೀರು ಅಂಗಡಿ, ತರಕಾರಿ ಅಂಗಡಿಯಲ್ಲಿ ಸ್ಲೇಟನ್ನು ಬಳಸಿ ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನ ಬರೆದು ಅಲ್ಲಿಯೇ ಪ್ರಚಾರ ಮಾಡುತ್ತಿದೆ …
ಈ ಹಿಂದೆ ಈ ರೀತಿಯ ಪ್ರಚಾರ ಯಾರೂ ಕೂಡ ಮಾಡದಿರುವ ಕಾರಣ ಇದೊಂದು ವಿಭಿನ್ನ ಪ್ರಯತ್ನ ಎಂದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ ..ಇನ್ನೂ ಬಡವ ರಾಸ್ಕಲ್ ಸಿನಿಮಾವನ್ನ ಶಂಕರ್ ನಿರ್ದೇಶನ ಮಾಡಿದ್ದಾರೆ ..