ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ “ವರ್ಲ್ಡ್ ಮೆನುಸ್ಟ್ರಲ್ ಹೈಜಿನ್ ಡೇ” ಯನ್ನು ಆಚರಿಸಿದ್ದಾರೆ. ಹೌದು, ವರ್ಲ್ಡ್ ಮೆನುಸ್ಟ್ರಲ್ ಹೈಜಿನ್ ಡೇ ಸಲುವಾಗಿ ಘಟ್ಕೋಪರ್ ಈಸ್ಟ್ ನಲ್ಲಿ ಗೋಡೆಯಲ್ಲಿ ಚಿತ್ರ ಬಿಡಿಸಿದ್ದಾರೆ.
ಗೋಡೆಯಲ್ಲಿ ಚಿತ್ರ ಬಿಡಿಸುವ ವಿಡಿಯೋವನ್ನು ಇನ್ಸ್ಟಾ ಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. “ವಿಶ್ವ ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲು ನಾವು ಗೋಡೆಯ ಮೇಲೆ ಚಿತ್ರಿಸುತ್ತಿದ್ದೇವೆ. ಮುಟ್ಟನ್ನು ಆಚರಿಸಲು ಹಾಗೂ ಸಾರ್ವಜನಿಕ ಸ್ಥಳಗಳನ್ನು ಮುಟ್ಟು ಸ್ನೇಹಿಯಾಗಿ ಮಾಡಲು ನಮ್ಮ ಪ್ರಯತ್ನವಾಗಿದೆ”ಎಂದಿದ್ದಾರೆ.
ಇನ್ನು ಫೋಟೋ ಹಂಚಿಕೊಂಡಿರುವ ನವ್ಯಾ ನವೇಲಿ ನಂದಾ “ವರ್ಲ್ಡ್ ಮೆನುಸ್ಟ್ರಲ್ ಹೈಜಿನ್ ಡೇ ಶುಭಾಶಯಗಳು “ಎಂದು ಬರೆದುಕೊಂಡಿದ್ದಾರೆ. ನವ್ಯಾ ಅವರ ಈ ಪೋಸ್ಟ್ ನ್ನು ಹಲವು ನೆಟ್ಟಿಗರು ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಸಮಾಜದಲ್ಲಿ ಉತ್ತಮ ಸಂದೇಶ ಹಂಚುತ್ತಿರುವುದಕ್ಕೆ ನವ್ಯಾ ಅವರನ್ನು ಹೊಗಳಿದ್ದಾರೆ.