ಏಕ್ತಾ ಕಪೂರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿನ್ 6 ಧಾರಾವಾಹಿಯಲ್ಲಿ ನಾಗಿನ್ ಆಗಿ ನಟಿಸುತ್ತಿರುವ ತೇಜಸ್ವಿ ಪ್ರಕಾಶ್ ತನ್ನ ಲುಕ್ ಹಾಗೂ ಗೆಟ್ ಅಪ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ತೂಕ ಇಳಿಸಿಕೊಂಡಿರುವುದೇ ಅದಕ್ಕೆ ಕಾರಣ. ಹೌದು, ನಾಗಿನ್ 6 ಧಾರಾವಾಹಿ ಶೂಟಿಂಗ್ ಮುನ್ನ ತೇಜಸ್ವಿನಿ ತಮ್ಮ ತೂಕ ಇಳಿಸಿಕೊಂಡಿದ್ದರು. ಆ ಸಮಯದಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದರು ತೇಜಸ್ವಿ.
ತೂಕ ಇಳಿಸಿಕೊಂಡಿರುವುದಕ್ಕೆ ಸಹಜವಾಗಿ ಸಂತಸದಿಂದಿರುವ ತೇಜಸ್ವಿ ಅವರು ತೂಕ ಕಳೆದುಕೊಂಡಿರುವುದರಿಂದ ನಾನು ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದರ ಬಗ್ಗೆ ಮಾತನಾಡಿರುವ ತೇಜಸ್ವಿ “ಮನೆಯಲ್ಲಿ ನನಗೆ ಸಂಭವಿಸಿದ ವಿಷಯಗಳಿಂದಾಗಿ ನನಗೆ ಸರಿಯಾಗಿ ಆಹಾರ ತಿನ್ನಲು ಸಾಧ್ಯವಾಗಿಲ್ಲ. ಬಿಗ್ ಬಾಸ್ ಮನೆಯಲ್ಲಿ ನಾನು ತುಂಬಾ ತೂಕ ಕಳೆದುಕೊಂಡೆ ಹಾಗೂ ನಂತರ ನನಗೆ ನಾಗಿನ್ ಧಾರಾವಾಹಿಯ ಆಫರ್ ಬಂತು. ಫಿಟ್ ಮತ್ತು ಡಿಸೈರೇಬಲ್ ಆಗಿ ಕಾಣಿಸಿಕೊಳ್ಳುವುದು ನಾಗಿನ್ ಶೋನ ಮಹತ್ವದ ಸಂಗತಿ. ನಾನು ಲುಕ್ ನ ವಿಷಯದಲ್ಲಿ ಸಾಧಿಸಿರುವುದಕ್ಕೆ ಖುಷಿ ಇದೆ ಹಾಗೂ ಜನರು ನನ್ನ ಲುಕ್ ನ್ನು ಇಷ್ಟ ಪಟ್ಟಿದ್ದಾರೆ” ಎಂದಿದ್ದಾರೆ.
ನಾಗಿನ್ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ತೇಜಸ್ವಿ “ಈ ಹಿಂದೆ
ಹಿಂದೆ ಕೆಲಸ ಮಾಡಿರುವ ಅನುಭವ ನನ್ನನ್ನು ಈ ಮಟ್ಟಕ್ಕೆ ಬೆಳೆಯುವಂತೆ ಮಾಡಿತು” ಎಂದು ಖುಷಿಯಿಂದ ಹೇಳುತ್ತಾರೆ.