Karnataka Bhagya

ಅಂಕಣ

ಗೋಲ್ಡನ್ ಕ್ವೀನ್ ನ ಗ್ಲಾಮರಸ್ ಲುಕ್ ಗೆ ಫ್ಯಾನ್ಸ್ ಫಿದಾ

ಸ್ಯಾಂಡಲ್ವುಡ್‌ ನ ಗೋಲ್ಡನ್ ಕ್ವೀನ್ ಅಮೂಲ್ಯ ಸದ್ಯ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಸಿನಿಮಾ ರಂಗದಿಂದ ದೂರ ಉಳಿದಿರುವ ಅಮೂಲ್ಯ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿ ಭಡ್ತಿ ಪಡೆದಿದ್ದಾರೆ‌. ನಟನೆಯ ಹೊರತಾಗಿ ನಟಿ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಹಾಗಾಗಿ ತಮ್ಮ ಜೀವನದ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ನಟಿ ಅಮೂಲ್ಯ ತಮ್ಮ ಹೊಸ ಲುಕ್ ಜೊತೆಗೆ ಒಂದೆರಡು ಹೆಜ್ಜೆಯನ್ನೂ ಹಾಕಿದ್ದಾರೆ. ವಿಷಯ ಏನಪ್ಪಾ ಅಂದ್ರೆ ನಟಿ ಅಮೂಲ್ಯ ತಮ್ಮ ಮೊದಲ ರೀಲ್ಸ್ ನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮತ್ತಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಅಮೂಲ್ಯ ಮಕ್ಕಳಾದ ಬಳಿಕ ತಮ್ಮ ಇತ್ತೀಚೆಗಿನ ಫೋಟೋವನ್ನು ಹಂಚಿಕೊಂಡಿದ್ದರು. ಈಗ ವಿಡಿಯೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಮೂಲ್ಯ ಅವರ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಮೂಲ್ಯ ಗ್ಲಾಮರಸ್ ಲುಕ್ ನೋಡಿದ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಂಗ ದಾವಣಿ ತೊಟ್ಟು ಅಮೂಲ್ಯ ಹೆಜ್ಜೆ ಹಾಕಿರುವ ಅಮೂಲ್ಯ ಹಲವರ ಮನ ಗೆದ್ದಿದ್ದಾರೆ. ಅಂದ ಹಾಗೆ ಇವರು ಡ್ಯಾನ್ಸ್ ಮಾಡಿರುವುದು ಶರಣ್ ಮತ್ತು ನಿಶ್ವಿಕ ನಾಯ್ಡು ಅಭಿನಯದ ‘ಗುರು ಶಿಷ್ಯರು’ ಚಿತ್ರದ ಹಾಡಿಗೆ. ‘ಆಣೆ ಮಾಡಿ ಹೇಳುತೀನಿ’ ಎನ್ನುವ ಹಾಡಿಗೆ ಮೊದಲ ಬಾರಿಗೆ ರೀಲ್ಸ್ ಮಾಡುವುದರೊಂದಿಗೆ ”ನನ್ನ ಮೊದಲ ರೀಲ್ಸ್‌ ನನಗೆ ತುಂಬಾ ಇಷ್ಟವಾದ ಹಾಡು. ನಿರ್ಮಾಪಕ ತರುಣ್ ಸುಧೀರ್ ಸೇರಿದಂತೆ, ಇಡೀ ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ” ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಅಮೂಲ್ಯ ಹೊಸ ಫೋಟೋಶೂಟ್ ಮಾಡಿಸಿ, ಫೋಟೊಗಳನ್ನೂ ಹಂಚಿಕೊಂಡಿದ್ದಾರೆ. ಹಸಿರು ಬಣ್ಣದ ಡ್ರೆಸ್‌ ತೊಟ್ಟು ಅಮುಲ್ಯಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಅಮೂಲ್ಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮಕ್ಕಳಾದ ಬಳಿಕವೂ ಇಷ್ಟೋಂದು ಗ್ಲಾಮರಸ್ ಆಗಿ ಕಾಣಿಸುವ ಅಮೂಲ್ಯ ಕಮ್ ಬ್ಯಾಕ್ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಫ್ಯಾನ್ಸ್.

ಗೋಲ್ಡನ್ ಕ್ವೀನ್ ನ ಗ್ಲಾಮರಸ್ ಲುಕ್ ಗೆ ಫ್ಯಾನ್ಸ್ ಫಿದಾ Read More »

ರಶ್ಮಿಕಾರ ಮೊದಲ ಬಾಲಿವುಡ್ ಸಿನಿಮಾ

‘ನ್ಯಾಷನಲ್ ಕ್ರಶ್’ ಎಂದೇ ಎಲ್ಲೆಡೆ ಪ್ರಸಿದ್ದರಾಗಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸದ್ಯ ಪಾನ್ ಇಂಡಿಯನ್ ಸ್ಟಾರ್ ಆಗಿದ್ದಾರೆ. ಕನ್ನಡದಿಂದ ಆರಂಭಿಸಿ, ತೆಲುಗು, ತಮಿಳು ಈಗ ಹಿಂದಿಯಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಅಭಿನಯda ಮೊದಲ ಬಾಲಿವುಡ್ ಸಿನಿಮಾ ತನ್ನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.ಅದೇ ‘ಗುಡ್ ಬೈ’ ಸಿನಿಮಾ. ರಕ್ಷಿತ್ ಶೆಟ್ಟಿಯವರ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಆರಂಭವಾದ ರಶ್ಮಿಕಾ ಅವರ ಸಿನಿಪಯಣ, ಸದ್ಯ ಬಾಲಿವುಡ್ ನಲ್ಲಿ ಓಡುತ್ತಿದೆ. ಪ್ರತೀ ಭಾಷೆಯ ಚಿತ್ರರಂಗಗಳಲ್ಲೂ ಅಪಾರ ಅಭಿಮಾನಿ ಹೊಂದಿರುವ ಇವರು, ಬಾಲಿವುಡ್ ನ ಮೊದಲ ಸಿನಿಮಾದಲ್ಲೇ ದಿಗ್ಗಜ ಅಮಿತಾಭ್ ಬಚ್ಚನ್ ಅವರ ಜೊತೆ ನಟಿಸಿದ್ದಾರೆ. ವಿಕಾಸ್ ಬೊಲ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ‘ಬಿಗ್ ಬಿ’ ಅಮಿತಾಭ್ ಬಚ್ಚನ್, ರಶ್ಮಿಕಾ ಮಂದಣ್ಣ, ನೀನಾ ಗುಪ್ತ, ಸಾಹಿಲ್ ಮೆಹತಾ ಮುಂತಾದ ನಟರು ಬಣ್ಣ ಹಚ್ಚಿದ್ದಾರೆ. ಇದರ ತಾರಾಗಣದಿಂದಲೇ ಎಲ್ಲೆಡೆ ಸುದ್ದಿಯಲ್ಲಿರುವ ಈ ಸಿನಿಮಾ ಇದೇ ಅಕ್ಟೋಬರ್ 7ರಂದು ಭಾರತದಾದ್ಯಂತ ತೆರೆಕಾಣುತ್ತಿದೆ. ಸದ್ಯ ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಹಂಚಿಕೊಂಡಿದ್ದು, ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾರ ಮೊದಲ ಬಾಲಿವುಡ್ ಸಿನಿಮಾ Read More »

‘ವಿಕ್ರಾಂತ್ ರೋಣ’ನೊಂದಿಗೆ ಬರಲಿದೆಯಾ ‘ಪರಮ್ ವಾಹ್’

ಸದ್ಯ ಭಾರತದಾದ್ಯಂತ ಸಿನಿರಸಿಕರು ಎದುರುಗಾಣುತ್ತಿರುವ ಸಿನಿಮಾಗಳಲ್ಲಿ ಒಂದು ನಮ್ಮ ಕನ್ನಡದ ಪಾನ್ m-ಇಂಡಿಯನ್ ಸಿನಿಮಾ ‘ವಿಕ್ರಾಂತ್ ರೋಣ’. ಎಲ್ಲೆಡೆ ಗುಲ್ಲೆಬ್ಬಿಸುತ್ತಿರುವ ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾ ಇದೇ ಜುಲೈ 28ಕ್ಕೆ ವಿಶ್ವದಾದ್ಯಂತ ವಿವಿಧ ಕಡೆಗಳಲ್ಲಿ ತೆರೆಕಾಣುತ್ತಿದೆ. ಹಾಡುಗಳು ಹಾಗು ಟ್ರೈಲರ್ ನಿಂದ ತನ್ನ ಮೇಲಿದ್ದ ನಿರೀಕ್ಷೆಗಳನ್ನು ಮುಗಿಲೆತ್ತರಕ್ಕೆ ಏರಿಸಿಕೊಂಡ ಈ ಸಿನಿಮಾ ಬಿಡುಗಡೆಗೆ ಸನ್ನಿಹಿತವಾಗುತ್ತಿದ್ದಂತೆ ಚಿತ್ರದ ಬಗೆಗಿನ ಹೊಸ ಹೊಸ ಸುದ್ದಿಗಳು ಹೊರಬೀಳುತ್ತಿವೆ. ‘ಅಭಿನಯ ಚಕ್ರವರ್ತಿ ‘ ಕಿಚ್ಚ ಸುದೀಪ್, ನಿರ್ದೇಶಕ ಅನೂಪ್ ಭಂಡಾರಿ ಸೇರಿದಂತೆ ಚಿತ್ರದ ಹಲವು ಕಲಾವಿದರು ಸದ್ಯ ಪ್ರಚಾರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಲು ಸಾಲು ಸಂದರ್ಶನಗಳು, ಸುದ್ದಿಗೋಷ್ಠಿಗಳು ನಡೆಯುತ್ತಲೇ ಇವೆ. ಸದ್ಯ ಇವೆಲ್ಲದರ ನಡುವೆ ಸುದ್ದಿಯೊಂದು ಸ್ಯಾಂಡಲ್ವುಡ್ ನಲ್ಲಿ ಓಡಾಡುತ್ತಿದೆ. ರಕ್ಷಿತ್ ಶೆಟ್ಟಿ ಅವರ ಮಾಲೀಕತ್ವದ ‘ಪರಮ್ ವಾಹ್ ಸ್ಟುಡಿಯೋಸ್’ ಇತ್ತೀಚಿಗಷ್ಟೇ ಹೊಸ ಸಿನಿಮಾವೊಂದನ್ನು ಘೋಷಿಸಿ, ಅದರ ನಾಯಕ ನಾಯಕಿಯರ ಪರಿಚಯವನ್ನ ಮಾಡಿಸಿತ್ತು. ಚಂದ್ರಜಿತ್ ಬೆಳ್ಳಿಯಪ್ಪ ಅವರ ನಿರ್ದೇಶನದ ಈ ಸಿನಿಮಾದಲ್ಲಿ ‘ಪಂಚತಂತ’ ಖ್ಯಾತಿಯ ವಿಹಾನ್ ಗೌಡ ಹಾಗು ಕಿರುತೆರೆಯ ಯುವರಾಣಿ ಎನಿಸಿಕೊಂಡ ಅಂಕಿತಾ ಅಮರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಟೀಸರ್ ಅನ್ನು ‘ವಿಕ್ರಾಂತ್ ರೋಣ’ ಸಿನಿಮಾದೊಂದಿಗೆ ಜೋಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಎರಡೂ ಕಡೆಗಳಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ಪರಮ್ ವಾಹ್’ ತನ್ನ ಯಾವುದೇ ಸಿನಿಮಾದ ಟೀಸರ್ ಬಿಡುಗಡೆಯಿದ್ದರೆ, ಅದನ್ನು ಕನಿಷ್ಟ ಒಂದು ವಾರದ ಹಿಂದೆಯೇ ಘೋಷಿಸಿರುತ್ತದೆ. ‘ವಿಕ್ರಾಂತ್ ರೋಣ’ ಬಿಡುಗಡೆಗೆ ಕೇವಲ ನಾಲ್ಕು ದಿನಗಳಿದ್ದರು ಇನ್ನೂ ಯಾವುದೇ ಘೋಷಣೆ ಇವರಿಂದ ಬಂದಿಲ್ಲ. ಅಲ್ಲದೇ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ್ ‘ವಿಕ್ರಾಂತ್ ರೋಣ’ ಕೂಡ ತಮ್ಮೆಲ್ಲ ಹೊಸ ಪ್ರಯತ್ನಗಳ ಬಗ್ಗೆ ಮಾತನಾಡುತ್ತಿದ್ದೂ, ಈ ಟೀಸರ್ ಬಗ್ಗೆ ಎಲ್ಲಿಯೂ ತುಟಿಬಿಚ್ಚಿಲ್ಲ. ಹಾಗಾಗಿ ಈ ಸುದ್ದಿ ಎಷ್ಟು ಸತ್ಯ, ಎಷ್ಟು ಸುಳ್ಳು ಎಂdu ಕಾದುನೋಡಬೇಕಿದೆ.

‘ವಿಕ್ರಾಂತ್ ರೋಣ’ನೊಂದಿಗೆ ಬರಲಿದೆಯಾ ‘ಪರಮ್ ವಾಹ್’ Read More »

ಪತ್ನಿಯಿಂದಲೇ ಬಿಡುಗಡೆ ಕಾಣುತ್ತಿದೆ ಅಪ್ಪು ಹೊಸ ಟೀಸರ್.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಒಂದು ವರ್ಷವೇ ಕಳೆಯುತ್ತಾ ಬಂತು. ಆದರೂ ಅವರು ಅಭಿಮಾನಿಗಳ ಎದೆಯಲ್ಲಿ ಎಂದಿಗೂ ಅಜರಾಮರ. ಅವರ ನಡತೆ ಹಾಗು ವ್ಯಕ್ತಿತ್ವಗಳಿಂದ ಎಲ್ಲರ ನಡುವೆಯೇ ಜೀವಂತವಾಗಿರುವ ಅವರು, ಕಲೆಯಿಂದ ಇನ್ನೂ ಜೀವಂತ ಎನ್ನಬಹುದು. ಸದ್ಯ ಅಪ್ಪು ಅಭಿನಯಿಸಿರೋ ಹೊಸ ಚಿತ್ರಗಳು ತೆರೆಕಡೆಗೆ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸದ್ಯ ಅಪ್ಪು ಅತಿಥಿ ಪಾತ್ರದಲ್ಲಿ ನಟಿಸಿರುವ ‘ಲಕ್ಕಿ ಮ್ಯಾನ್’ ಸಿನಿಮಾದ ಟೀಸರ್ ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ‘ಲವ್ ಮೊಕ್ಟೇಲ್’ ಸಿನಿಮಾಗಳಿಂದ ಮರಳಿ ಕೀರ್ತಿ ಗಳಿಸಿದಂತಹ ಡಾರ್ಲಿಂಗ್ ಕೃಷ್ಣ ಅವರ ನಟನೆಯ ಮುಂದಿನ ಸಿನಿಮಾವೆ ಈ ‘lucky ಮ್ಯಾನ್’.ಪ್ರಖ್ಯಾತ ನಿರ್ದೇಶಕ ಎಸ್ ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾ ಸದ್ಯ ಚಿತ್ರೀಕರಣ ಮುಗಿಸಿಕೊಂಡು ತೆರೆಕಾಣಲು ಸಿದ್ದವಾಗಿ ನಿಂತಿದೆ. ಇದೇ ಸಿನಿಮಾದಲ್ಲಿ ಅಪ್ಪು ಹಾಗು ಪ್ರಭುದೇವ ಅವರು ಅತಿಥಿ ಪಾತ್ರಗಳಿಗೆ ಬಣ್ಣ ಹಚ್ಚಿದ್ದು, ಅಪ್ಪು ‘ದೇವರ’ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅಪ್ಪುವಿನ ಪಾತ್ರದ ಬಗೆಗಿನ ಟೀಸರ್ ಲೋಕಾರ್ಪಣೆಗೊಳಿಸಲು ಚಿತ್ರತಂಡ ನಿರ್ಧರಿಸಿದ್ದು, ಇದೇ ಜುಲೈ 25ರಂದು ಮಧ್ಯಾಹ್ನ 12:15ಕ್ಕೆ ಸರಿಯಾಗಿ ‘ಎಂ ಆರ್ ಟಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಈ ಟೀಸರ್ ಬಿಡುಗಡೆ ಮಾಡುತ್ತಿರುವುದು ಬೇರಾರು ಅಲ್ಲದೇ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿಯಾದ ಅಶ್ವಿನಿ ಪುನೀತ್ ರಾಜಕುಮಾರ್ ಅವರು. ಡಾರ್ಲಿಂಗ್ ಕೃಷ್ಣ ನಾಯಕರಾಗಿ, ಸಂಗೀತ ಶೃಂಗೇರಿ ನಾಯಾಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಸಾಧು ಕೋಕಿಲ, ನಾಗಭೂಷಣ, ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದು ಅಪ್ಪು ಹಾಗು ಪ್ರಭುದೇವ ಅವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಇಂದು ಟೀಸರ್ ಬಿಡುಗಡೆಯಗುತ್ತಿದ್ದು, ಸಿನಿಮಾ ಬಿಡುಗಡೆಯ ದಿನಾಂಕವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಪತ್ನಿಯಿಂದಲೇ ಬಿಡುಗಡೆ ಕಾಣುತ್ತಿದೆ ಅಪ್ಪು ಹೊಸ ಟೀಸರ್. Read More »

ವದಂತಿಗಳಿಗೆ ಬ್ರೇಕ್ ಹಾಕಿದ ನಮ್ರತಾ ಗೌಡ

ಬಿಗ್ ಬಾಸ್ ಕನ್ನಡ ಶೀಘ್ರದಲ್ಲೇ ಸಣ್ಣ ಪರದೆಗೆ ಮರಳಲು ಸಿದ್ಧವಾಗಿರುವುದರಿಂದ, ಮುಂಬರುವ ಸೀಸನ್‌ಗಾಗಿ ತಾತ್ಕಾಲಿಕ ಸ್ಪರ್ಧಿಗಳ ಪಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವುದು ಸರ್ವೇಸಾಮಾನ್ಯ. ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ಬಿಗ್ ಬಾಸ್ ಕನ್ನಡದ ಈ ಬಾರಿಯ ಸೀಸನ್‌ನ ನಿರೀಕ್ಷಿತ ಸ್ಪರ್ಧಿಗಳಲ್ಲಿ ಒಬ್ಬರು ಎಂಬ ವದಂತಿಯಿತ್ತು. ಅದಾಗ್ಯೂ, ಇತ್ತೀಚೆಗಿನ ಮಾಹಿತಿಯ ಪ್ರಕಾರ, ನಟಿ ಈ ರಿಯಾಲಿಟಿ ಶೋನ ಭಾಗವಾಗಿರುವುದಿಲ್ಲವಂತೆ. ಹೌದು, ಇತ್ತೀಚೆಗೆ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅಭಿಮಾನಿಗಳೊಂದಿಗೆ ‘ನನಗೆ ಪ್ರಶ್ನೆ ಕೇಳಿ’ ವಿಭಾಗದಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಭಾಗವಹಿಸುವ ಬಗ್ಗೆ ತನ್ನ ಅಭಿಮಾನಿ ಕೇಳಿದ ಪ್ರಶ್ನೆಗಳಿಗೆ ನಮ್ರತಾ ಪ್ರತಿಕ್ರಿಯಿಸಿದ್ದಾರೆ. “ಈ ಎಲ್ಲಾ ವದಂತಿಗಳನ್ನು ಯಾರು ಹರಡುತ್ತಿದ್ದಾರೆ? ನಾನು ಬಿಗ್ ಬಾಸ್ ಕನ್ನಡಕ್ಕೆ ಹೋಗುತ್ತಿಲ್ಲ” ಎಂದಿದ್ದಾರೆ. ‘ನಾಗಿಣಿ’ ನಟಿ ಈ ರಿಯಾಲಿಟಿ ಶೋಗೆ ಸೆಲೆಬ್ರಿಟಿ ಸ್ಪರ್ಧಿಯಾಗಿ ಪ್ರವೇಶಿಸುತ್ತಾರೆ ಎಂಬ ಎಲ್ಲಾ ವದಂತಿಗಳಿಗೆ ಅವರ ಪ್ರತಿಕ್ರಿಯೆಯಿಂದ ಪೂರ್ಣ ವಿರಾಮ ದೊರೆತಂತಾಗಿದೆ. ಇದೆಲ್ಲವೂ ಕೇವಲ ವದಂತಿ ಮತ್ತು ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ. ವೃತ್ತಿಜೀವನದ ಮುಂಭಾಗದಲ್ಲಿ, ನಮ್ರತಾ ಗೌಡ ಪ್ರಸ್ತುತ ಕಾಲ್ಪನಿಕ ಕಥೆ ನಾಗಿಣಿ 2 ರಲ್ಲಿ ಆಕಾರ ಬದಲಾಯಿಸುವ ಸಾಮರ್ಥವಿರುವ ಶಿವಾನಿ ಎಂಬ ಸರ್ಪದ ಪಾತ್ರವನ್ನು ಮಾಡುತ್ತಿದ್ದಾರೆ.

ವದಂತಿಗಳಿಗೆ ಬ್ರೇಕ್ ಹಾಕಿದ ನಮ್ರತಾ ಗೌಡ Read More »

Scroll to Top