ಆಗಸ್ಟ್ 19ರಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬೃಹತ್ ಪ್ರತಿಭಟನೆ
ಆಗಸ್ಟ್ 19ರಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬೃಹತ್ ಪ್ರತಿಭಟನೆ
ಆಗಸ್ಟ್ 19ರಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬೃಹತ್ ಪ್ರತಿಭಟನೆ Read More »
ಆಗಸ್ಟ್ 19ರಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬೃಹತ್ ಪ್ರತಿಭಟನೆ
ಆಗಸ್ಟ್ 19ರಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬೃಹತ್ ಪ್ರತಿಭಟನೆ Read More »
ಏಕ್ ಪೇಡ್ ಮಾ ಕೇ ನಾಮಸೇ ಕರ್ನಾಟಕ ಭಾಗ್ಯ ವಾರ್ತೆಯಾದಗಿರಿ: ಬಿಜೆಪಿ ಜಿಲ್ಲಾ ಕಾರ್ಯಲಯದಲ್ಲಿ, ಭಾರತೀಯ ಜನಸಂಘದ ಸಂಸ್ಥಾಪಕರು, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತಿ, ಹಾಗೂ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ ಪುಣ್ಯಸ್ಮರಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಯಾದಗಿರಿ ನಗರ ಮಂಡಲ ವತಿಯಿಂದ ಪುಷ್ಪ ನಮನ ಸಲ್ಲಿಸಿ ಅವರನ್ನು ಸ್ಮರಿಸಲಾಯಿತು..ಯಾದಗಿರಿ ನಗರ ಮಂಡಲ ಅಧ್ಯಕ್ಷರು ಲಿಂಗಪ್ಪ ಹತ್ತಿಮನಿ ಅವರು ಏಕ್ ಪೇಡ್ ಮಾ ಕೆ ನಾಮ್’ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ಕರೆ ನೀಡಿರುವ ಏಕ್ ಪೇಡ್ ಮಾ ಕೆ ನಾಮ್ (ತಾಯಿಗಾಗಿ ಒಂದು ಗಿಡ) ಅಭಿಯಾನದ ಅಂಗವಾಗಿ ಭಾರತ ಮಾತೆಯ ಹೆಸರಿನಲ್ಲಿ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಸಸಿ ನೆಟ್ಟರು..ಈ ಸಂದರ್ಭದಲ್ಲಿ ಯಾದಗಿರಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೋರ್, ಯಾದಗಿರಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ದೊಡ್ಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ನಗರ ಸಭೆ ಸದಸ್ಯ ಸ್ವಾಮೀದೇವ ದಾಸನಕೇರಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಮಲ್ಲು ಕೋಲಿವಾಡ, ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ಶ್ರೀ ಧರ ರಾಯಚೂರು, ಸಾಬಣ್ಣ ಪರಸನಾಯಕ, ಸೋಮಣ್ಣಗೌಡ, ನಾಗಪ್ಪ ಗಚಿನಮನಿ, ಬಸ್ಸು ಗೊಂದೆನೂರು, ಸುನೀತಾ ಚೌವ್ಹಾಣ, ಸ್ನೇಹ ರಸಾಳಕರ್, ಭೀಮಭಾಯಿ ಶೇಂಡಗಿ, ಶಕುಂತಲಾ ಗುಂಜಲುರು, ವೆಂಕಟೇಶ್, ರಾಜರಂ, ಸೇರಿದಂತೆ ಇತರರು ಇದ್ದರು..
ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಗುರುಮಠಕಲ್ ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಹತ್ತಿಕುಣಿ ಗ್ರಾಮದ ಬೂತ್ ಸಂಖ್ಯೆ 37 ರಲ್ಲಿ ವಿದ್ಯಾರ್ಥಿ ವಿಜಯ ಶಂಕರ್ ತಂದೆ ಮಲ್ಲಿಕಾರ್ಜುನ ರಡ್ಡಿ ಹಳ್ಳಿಮನಿ ಅವರು ಪ್ರಥಮ ಬಾರಿಗೆ ಮತದಾನ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಪ್ರಥಮ ಬಾರಿಗೆ ಮತದಾನ Read More »
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕರಾದ ಅರವಿಂದ ಕೇಜ್ರಿವಾಲ್ ಇವರನ್ನು ಇ.ಡಿ. ನಿನ್ನೆ ಬಂಧಿಸಿರುವುದು ಅಸಂವಿಧಾನಿಕವಾಗಿದೆ ಎಂದು ಆರೊಪಿಸಿ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದಿಂದ ಡಿಸಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿ ರಾಷ್ಟçಪತಿಗಳಿಗೆ ಬರೆದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮೀ ಪಾರ್ಟಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಗುತ್ತೇದಾರ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ. ಸರ್ಕಾರ ಸಾಂವಿಧಾನಿಕ ಸಂಸ್ಥೆಗಳಾದ ಇ.ಡಿ. ಮತ್ತು ಸಿ.ಬಿ.ಐ. ಮೊದಲಾದವುಗೊಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳನ್ನು ದಮಮನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಅರವಿಂದ ಕೇಜ್ರಿವಾಲ ಮತ್ತು ಆಮ್ ಆದ್ಮಿ ಪಕ್ಷವನ್ನು ಬಿ.ಜೆ.ಪಿ. ಸತತ ಎರಡು ವರ್ಷಗಳಿಂದಲೂ ಸುಳ್ಳು ಅಭಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದೆ. ಇದೀಗ ಲೋಕಸಭಾ ಸಾರ್ವತ್ರಿಕ ಚುಣಾವಣೆಗಳು ಜರುಗುತ್ತಿರುವ ಸಂದರ್ಭದಲ್ಲಿ ಮೋದಿ ನೇತೃತ್ವದ ಕೇಂದ್ರದ ಬಿ.ಜೆ.ಪಿ. ಸರ್ಕಾರದ ಬ್ರಷ್ಟಾಚಾರ ಅಧಿಕಾರ ದುರುಪಯೋಗ ವೈಫಲ್ಯಗಳನ್ನು ಸಮರ್ಥವಾಗಿ ದೇಶದ ಜನರ ಮುಂದೆ ತೆರೆದಿಡುತ್ತಿರುವ ಸ್ವಚ್ಚ ದಕ್ಷ ಭ್ರಷ್ಟಾಚಾರ ರಹಿತ ಆಮ್ ಆದ್ಮಿ ಪಕ್ಷ ಮತ್ತು ಕೇಜ್ರಿವಾಲರ ವರ್ಚಸ್ಸಿನಿಂದ ಭಯಬೀತಗೊಂಡಿರುವ ಮೋದಿ ಸರ್ಕಾರವು ತನ್ನ ವಿಕೃತ ಮತ್ತು ಅಧಿಕಾರ ದುರುಪಯೋಗಮಾಡಿ ಇ.ಡಿ. ಸಿ.ಬಿ.ಐ. ಅಂತಹ ಸಂಸ್ಥೆಗಳಿAದ ಆಮ್ ಆದ್ಮಿ ಪಕ್ಷ ಹಾಗೂ ನಾಯಕರನ್ನು ಮಟ್ಟ ಹಾಕಲು ಪ್ರಯತ್ನಿಸಿತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ಮಾತನಾಡಿ, ಇಡಿ ಸಿಬಿಐ ಕೇಸುಗಳಲ್ಲಿ, ಭ್ರಷ್ಟಾಚರಗಳಲ್ಲಿ ಸಿಲುಕಿಕೊಂಡ ವಿರೋಧ ಪಕ್ಷದ ವಿವಿಧ ನಾಯಕರುಗಳನ್ನು ಅಂಜಿಸಿ ತನ್ನ ಪಕ್ಷದಲ್ಲಿ ಸೇರಿಸಿಕೊಂಡು ಅಂತವರ ವಿರುದ್ಧದ ಪ್ರಕರಣಗಳನ್ನು ಮುಚ್ಚಿಹಾಕಲಾಗುತ್ತಿದೆ. ಎಷ್ಟೇ ಕಿರುಕಳ ನೀಡಿದರೂ ಬಿ.ಜೆ.ಪಿ. ಸೇರದೆ ದೇಶದ ಉಳಿವಿಗಾಗಿ ಸಂವಿಧಾನದ ಸಂರಕ್ಷಣೆಗಾಗಿ ಭ್ರಷ್ಟಾಚಾರ, ಕೋಮುವಾದ ಇವುಗಳನ್ನು ಕಿತ್ತೆಸೆಯಲು ಮೋದಿ ನೇತೃತ್ವದ ಬಿ.ಜೆ.ಪಿ. ಕೇಂದ್ರ ಸರ್ಕಾರವನ್ನು ಪ್ರಭಲವಾಗಿ ವಿರೋಧಿಸುತ್ತಿರುವ ಆಮ್ ಆದ್ಮಿ ಪಕ್ಷ ಮತ್ತು ಅದರ ನಾಯಕರನ್ನು ವಿಷೇಶವಾಗಿ ಅರವಿಂದ ಕೇಜ್ರಿವಾಲರನ್ನು ಭಂದಿಸುವ ಮೂಲಕ ಸಮರ್ಥ ಪ್ರತಿಪಕ್ಷವನ್ನು ಧಮನಗೊಳಿಸಲು ಪ್ರಯತ್ನಿಸುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿ.ಜೆ.ಪಿ. ಸರ್ಕಾರವು ಅಧಿಕಾರ ದುರುಪಯೋಗಪಡಿಸಿಕೊಂಡು ಇ.ಡಿ. ಯಂತಹ ಸ್ವಾಯತ್ತ ಸಂಸ್ಥೆಯ ಮುಖಾಂತರ ಶ್ರೀ ಅರವಿಂದ ಕೇಜ್ರಿವಾಲರ ಭಂದನವನ್ನು ಆಮ್ ಆದ್ಮಿ ಪಕ್ಷವು ಇಡೀ ದೇಶಾದ್ಯಂತ ಪ್ರತಿಭಟಿಸಿ ಖಂಡಿಸುತ್ತೇವೆ ಎಂದರು.
ಜಿಲ್ಲಾ ಮುಖಂಡರಾದ ಸುಭಾಶ್ ತೇಲ್ಕರ್ ವಕೀಲರು, ಶರಣಪ್ಪ ದೊರೆ, ಕಮಲ್ ಪಟೇಲ್ ಕ್ಯಾತನಾಳ ಇನ್ನಿತರರು ಇದ್ದರು.
ಬಿಜೆಪಿಯಿಂದ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ : ಗುತ್ತೇದಾರ Read More »
ನೀರಿಗಾಗಿ ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ
ನೀರಿಗಾಗಿ ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ Read More »
ಈಗಿರುವ ಬ್ಯುಸಿ ಸ್ಯಾಂಡಲ್‌ವುಡ್ ನಟರಲ್ಲಿ ಪೃಥ್ವಿ ಅಂಬರ್ ಕೂಡ ಒಬ್ಬರು. ‘ದಿಯಾ’ ಸಿನಿಮಾದಿಂದ ಶುರುವಾದ ಪೃಥ್ವಿ ಅಂಬರ್ ಅವರ ಯಶಸ್ಸಿನ ಪಯಣ ಭರ್ಜರಿಯಾಗಿ ಸಾಗುತ್ತಿದೆ. ಇತ್ತೀಚೆಗಷ್ಟೇ ಶಿವರಾಜ್‌ಕುಮಾರ್ ಅವರ ಜೊತೆಗೆ ಪೃಥ್ವಿ ಅಂಬರ್ ನಟಿಸಿದ್ದ ‘ಬೈರಾಗಿ’ ಸಿನೆಮಾ ರಿಲೀಸ್ ಆಗಿತ್ತು. ನಂತರ ಜುಲೈ 8 ರಂದು ಪೃಥ್ವಿ ಹೀರೋ ಆಗಿದ್ದ ‘ಶುಗರ್‌ಲೆಸ್’ ರಿಲೀಸ್ ಆಯ್ತು. ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡ ಈ ಸಿನೆಮಾದ ನಂತರ ಈಗ ಪೃಥ್ವಿ ಅಂಬರ್ ಅವರ ಹೊಸ ಸಿನಿಮಾದ ಕುರಿತು ಮಾಹಿತಿ ಹೊರಬಂದಿದೆ. ಅದೇನೆಂದರೆ, ಪೃಥ್ವಿ ನಟನೆಯ ‘ದೂರದರ್ಶನ’ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ.ಹೌದು, ಪೃಥ್ವಿ ಅಂಬರ್ ನಟನೆಯ ‘ದೂರದರ್ಶನ’ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರೊಳಗೆ ಟಿವಿ ಬಂದ ಮೇಲೆ ಉಂಟಾಗುವ ಪ್ರಭಾವಗಳನ್ನು ಆಧರಿಸಿ ಈ ಸಿನಿಮಾವಿದೆ.ಪೃಥ್ವಿ ಅಂಬರ್, ಉಗ್ರಂ ಮಂಜು, ಹರಿಣಿ, ಸುಂದರ್, ಅಯನ ಕಾಣಿಸಿಕೊಂಡಿರುವ ಈ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ವಿಭಿನ್ನ ಕಂಟೆಂಟ್ ಮೂಲಕ ಸದ್ದು ಮಾಡಿರುವ ‘ದೂರದರ್ಶನ’ ಸಿನಿಮಾದ ಈ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಹಳ್ಳಿಯೊಂದರ ಬ್ಯಾಕ್ ಡ್ರಾಪ್ ಇದೆ. ಸುಕೇಶ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಈ ಹಿಂದೆ ಅವರು ಸಂಭಾಷಣೆಕಾರರಾಗಿ, ಬರಹಗಾರರಾಗಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಸಿನಿಮಾದ ಕುರಿತು ಮಾತನಾಡಿದ ಅವರು ”1980ರ ಕಾಲಘಟ್ಟದಲ್ಲಿ ನಡೆಯುತ್ತಿರುವ ಕಥೆಯಾಧರಿಸಿ ಇರುವ ಸಿನಿಮಾ ನಾವು ನಮ್ಮ ಹಿರಿಯರ ಜೊತೆ ಅನುಭವಿಸಿದ, ನಾವು ನೋಡಿರುವ, ಕೇಳಿರುವ ಮಾಹಿತಿಯನ್ನು ಕಲೆ ಹಾಕಿ ಮಾಡಿದ ಕಥೆಯಾಗಿದೆ. ಇಡೀ ಕಥೆ ಒಂದು ಟಿವಿ ಸುತ್ತ ನಡೆಯುತ್ತದೆಯಂತೆ. 1980 ಕಾಲಘಟ್ಟ ಅಂದ್ರೆ ರೆಟ್ರೋ ಅಂದುಕೊಳ್ಳುತ್ತಾರೆ. ನಾವು ರಿಯಲಿಸ್ಟಿಕ್ ಆಗಿ, ಅದೇ ರೀತಿ ಮ್ಯಾನರಿಸಂ ಧಾಟಿಯಲ್ಲಿ ಕಟ್ಟಿಕೊಡುತ್ತಿದ್ದೇವೆ” ಎಂದರು. ಇನ್ನು ನಟ ಪೃಥ್ವಿ ಅಂಬರ್ ಮಾತನಾಡಿ ‘ಈ ಸಿನಿಮಾ ನನಗೆ ಬಹಳ ಕನೆಕ್ಟ್ ಆಗಿದೆ. ನಾನು ಹುಟ್ಟಿದ್ದು 1988ರಲ್ಲಿ. ನನ್ನ ಪೀಳಿಗೆಯಲ್ಲಿ ಪ್ರೀ-ಟೆಕ್ನಾಲಜಿ ಹಾಗೂ ಟೆಕ್ನಾಲಜಿ ಎರಡನ್ನೂ ನೋಡಿದ್ದೇನೆ. ನಾನು ಕೂಡ ಹಳ್ಳಿಯಲ್ಲಿ ಹುಟ್ಟಿದವನು. ನಮ್ಮ ಮನೆಗೆ ಟಿವಿ ಬರುವ ಮೊದಲು ಬೇರೆಯವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆವು. ಆ ಬಳಿಕ ನಮ್ಮ ಮನೆಗೆ ಕಲರ್ ಟಿವಿ ಬಂತು. ಆ ದಿನಗಳು ನನಗೆ ಬಹಳ ಕಾಡಿದವು. ಸುಕೇಶ್ ಸರ್ ಕಥೆ ಹೇಳಿದಾಗ ನಮ್ಮೂರಿನ ಕಥೆಯನ್ನೇ ಕೇಳಿದಂತೆ ಆಯ್ತು. ಈ ಸಿನಿಮಾ ಮಾಡಲೇಬೇಕು ಎಂದು ನಿರ್ಧರಿಸಿ ಮಾಡಿದ್ದೇನೆ. 80ರ ದಶಕವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೇವೆ’ ಎಂದರು. ಉಳಿದಂತೆ ವಾಸುಕಿ ವೈಭವ್ ಅವರ ಸಂಗೀತ ನಿರ್ದೇಶನ, ಅರುಣ್ ಸುರೇಶ್ ಅವರ ಛಾಯಾಗ್ರಹಣಹಾಗೂ ನಂದೀಶ್ ಟಿ.ಜಿ. ಸಂಭಾಷಣೆ ಚಿತ್ರಕ್ಕಿದೆ. ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರರು ತಾರಾಗಣದಲ್ಲಿದ್ದಾರೆ.
ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಳ್ಳಲಿರುವ ಪೃಥ್ವಿ ಅಂಬರ್ Read More »
‘ಗಾಳಿಪಟ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಭಾವನಾ ರಾವ್ ಎಲ್ಲರಿಗೂ ಚಿರಪರಿಚಿತರು. ಎಲ್ಲರ ನೆಚ್ಚಿನ ನಟಿಯಾದ ಇವರು ಅಭಿನಯಕ್ಕೂ ಮುಂಚೆ ನೃತ್ಯ ಕಲಾವಿದೆ ಎನ್ನುವುದನ್ನು ಮರೆಯುವಂತಿಲ್ಲ. ತನ್ನ ನೃತ್ಯ ವೈಖರಿಯನ್ನು’ಗಾಳಿಪಟ’ ಸಿನಿಮಾದಲ್ಲೂ ತೋರಿಸಿರುವ ಇವರು ಡ್ಯಾನ್ಸ್ ಮೂಲಕವೇ ಗಮನ ಸೆಳೆದಿದ್ದಾರೆ. ಸಿನಿಮಾ ಶೂಟಿಂಗ್ ನಲ್ಲಿ ಬಿಝಿಯಾಗಿದ್ದ ಭಾವನಾ ನೃತ್ಯದ ಕಡೆ ಅಷ್ಟು ಗಮನ ಹರಿಸಲಿಲ್ಲವಾದರೂ ಈಗ ಮತ್ತೊಮ್ಮೆ ಅದೇ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ‘ಚಂದ್ರಚೂಡ ಶಿವ ಶಂಕರ’ ಹಾಡು ಎಲ್ಲರ ಮೈನವಿರೇಳಿಸಿತ್ತು. ಇದೀಗ ಈ ಹಾಡಿಗೆ ಸ್ವತ: ಭಾವನಾ ರಾವ್ ಅವರೇ ಕೊರಿಯೋಗ್ರಾಫಿ ಮಾಡಿ ಹಾಡನ್ನು ಕಂಪೋಸ್ ಕೂಡ ಮಾಡಿದ್ದಾರೆ. ‘ಜಿಜಿವಿವಿ’ ಸಿನಿಮಾದ ಬಗ್ಗೆ ಮಾತನಾಡಿದ ಅವರು ‘ನನಗೆ ಸಿನಿಮಾ ತುಂಬಾನೇ ಇಷ್ಟ ಆಗಿತ್ತು. ನಾನು ಭರತನಾಟ್ಯಂ ಡ್ಯಾನ್ಸರ್ ಆಗಿರುವುದರಿಂದ ನನ್ನನ್ನು ಪೌರಾಣಿಕ ಕಥೆಗಳು, ದೇವರ ಹಾಡುಗಳು ತುಂಬಾ ಬೇಗ ಸೆಳೆಯುತ್ತವೆ. ಶಿವನೆಂದರೆ ತಾಂಡವ. ಇಂತಹ ಹಾಡಿನಲ್ಲಿ ಡ್ಯಾನ್ಸ್ ಮೂವ್ಮೆಂಟ್ಸ್ ಜಾಸ್ತಿಯಾಗಿಯೇ ಇರುತ್ತೆ. ಅದಕ್ಕೆ ಈ ಹಾಡನ್ನು ಕೇಳಿದಾಗಲೆಲ್ಲಾ ಏನಾದರೂ ಮಾಡಲೇ ಬೇಕು ಅಂತ ಅನಿಸುತ್ತಿತ್ತು. ಅದಕ್ಕೆ ಮನೆಯಲ್ಲಿ ನಾನೇ ಕೊರಿಯೋಗ್ರಫಿ ಮಾಡಿದೆ. ಮೊದಲು ನನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲು ಹೊರಟಿದ್ದ ನಾನು ರಾಜ್ ಶೆಟ್ಟಿ ಅವರಲ್ಲಿ ಕೇಳಿದಾಗ, ಅವರು ಗ್ರೀನ್ ಸಿಗ್ನಲ್ ಕೊಟ್ಟರು. ಆಮೇಲೆ ಸೀರಿಯಸ್ ಆಗಿ ಕೊರಿಯೋಗ್ರಫಿ ಮಾಡಿ ಶೂಟ್ ಮಾಡಿದ್ವಿ” ಎಂದರು. ಅಲ್ಲದೆ ‘ಸಿನಿಮಾ ಹಾಡಿನ ಸನ್ನಿವೇಶಕ್ಕೂ ಈ ಹಾಡಿನ ಕೊರಿಯೋಗ್ರಫಿಗೂ ಯಾವುದೇ ಸಂಬಂಧವಿಲ್ಲ. ನಾನು ಈ ಹಾಡಿನಲ್ಲಿ ಬರುವ ಅರ್ಥವನ್ನು ಮಾತ್ರ ತೆಗೆದುಕೊಂಡೆ. ಶಿವನ ಬಗ್ಗೆ ತಲೆಯಲ್ಲಿ ಇಟ್ಟುಕೊಂಡು ಕೊರಿಯೋಗ್ರಫಿ ಮಾಡಿದ್ದೇನೆ. ಸಿನಿಮಾದ ಹಾಡನ್ನು ಕೇಳಿದ ಬಳಿಕ ಈ ಹಾಡನ್ನು ಹೀಗೂ ಮಾಡಬಹುದಾ? ಅಂತ ಅನಿಸುತ್ತೆ. ಈ ಡ್ಯಾನ್ಸ್ ಕೊರಿಯೋಗ್ರಫಿ ಮಾಡುವುದಕ್ಕೆ ಮೂರು ದಿನಗಳು ಬೇಕಾಯ್ತು. ಮೂರು ನಿಮಿಷದ ಸಾಂಗ್ ನ್ನು ಯಾರು ಶೂಟ್ ಮಾಡುತ್ತಾರೆ, ಟೆಂಪಲ್ ಲೊಕೇಶನ್ ಎಲ್ಲಿ ಸಿಗುತ್ತೆ, ಹಸಿರಾದ ಹೊಂದುವ ಪರಿಸರ ಎಲ್ಲಿದೆ? ಇದೆಲ್ಲದರ ಗೊಂದಲದ ಮಧ್ಯೆ ಇವೆಲ್ಲವೂ ಸಿಕ್ಕಿತು. ಮುಂದಿನ ನಿಲ್ದಾಣ ಛಾಯಾಗ್ರಾಹಕ ಅಭಿಮನ್ಯು ಓಕೆ ಅಂದರು.ಹಾಗಾಗಿ ನಿರಂತರ ಮೂರು ಗಂಟೆ ಶೂಟ್ ಮಾಡಿ ಮುಗಿಸಿದ್ವಿ” ಎಂದು ಹಾಡಿನ ಚಿತ್ರೀಕರಣದ ಬಗ್ಗೆ ಮೆಲುಕು ಹಾಕಿದರು. ತಮ್ಮ ಗಾಳಿಪಟ ದಿನಗಳನ್ನು ನೆನೆದ ನಟಿ ‘ನದೀಮ್ ಧೀಮ್ ತನ ಹಾಡಿಗಾಗಿ ಮೂರು ದಿನ ಶೂಟಿಂಗ್ ಮಾಡಿದ್ದೆ. ಅದಾದ ನಂತರ ಮತ್ತೆ ಈ ತರ ಹಾಡಿಗಾಗಿ ಕುಣಿದದ್ದು ಈಗಲೇ’ ಎನ್ನುತ್ತಾರೆ. ‘ಎಲ್ಲೋ ಸಿನಿಮಾ ಶೂಟಿಂಗ್ ಎಂದು ಕಳೆದು ಹೋಗಿದ್ದ ನನಗೆ ಈ ಹಾಡು ಮತ್ತೆ ಡ್ಯಾನ್ಸ್ ಮಾಡಲು ಪ್ರೇರೇಪಿಸಿತು. ಈ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ನಾನು ಮತ್ತೆ ನನ್ನ ರೂಟ್‌ಗೆ ಬಂದಿದ್ದೇನೆ ಎಂದನಿಸುತ್ತೆ. ನಾನು ಇನ್ನೂ ಭರತನಾಟ್ಯಂ ಡ್ಯಾನ್ಸರ್ ಅಂತ ಈ ಹಾಡಿನ ಮೂಲಕ ಪ್ರೂವ್ ಮಾಡುತ್ತಿದ್ದೇನೆ ಎಂದುನಿಸುತ್ತಿದೆ.’ ಅಲ್ಲದೆ ‘ನಾನು ನಟಿಯಾದ ಮೇಲೆ ಭರತನಾಟ್ಯಂ ಪರ್ಫಾಮೆನ್ಸ್ ಕೊಡುವುದಕ್ಕೆ ನನಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ. ಒಳ್ಳೆ ವೇದಿಕೆ ಸಿಕ್ಕರೆ ಖಂಡಿತವಾಗಿಯೂ ನಾನು ಭರತನಾಟ್ಯಂ ಅನ್ನು ಮುಂದುವರೆಸಿಕೊಂಡು ಹೋಗುತ್ತೇನೆ’ ಎಂದು ನೃತ್ಯದ ಬಗೆಗಿನ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು.
ನಟನೆಯ ನಂತರ ಡ್ಯಾನ್ಸ್ ಮೂಲಕ ಗಮನ ಸೆಳೆದ ಚಂದನವನದ ಚೆಲುವೆ Read More »
ಚೇಸ್ ಸಿನಿಮಾ ಮುಖಾಂತರ ಎರಡು ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದ ರಾಧಿಕಾ ಚೇತನ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ ಹಾಗೂ ಸುಶಾಂತ್ ಪೂಜಾರಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಜುಲೈ 15ರಂದು ಬಿಡುಗಡೆಯಾಗಿದೆ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರಾಧಿಕಾ ನಾರಾಯಣ್”ತರಬೇತಿಯ ಅವಧಿಯಲ್ಲಿರುವ ಒಂದು ಪೋಲಿಸ್ ನ ಪಾತ್ರವನ್ನು ನಾನು ಮಾಡುತ್ತಿದ್ದೇನೆ. ಪೊಲೀಸ್ ಡಿಪಾರ್ಟ್ಮೆಂಟ್ ಗೆ ಸೇರಬೇಕೆನ್ನುವ ಆಸೆ ಇದ್ದರೂ ಕಥೆಯ ತಿರುವು ಯಾವುದೋ ಅರಿಯದ ಊರಿನಡೆಗೆ ಪ್ರಯಾಣ ಬೆಳೆಸುವಂತೆ ಮಾಡುತ್ತದೆ” ಎಂದರು. ಚಿತ್ರದಲ್ಲಿ ನಾಯಿಯೊಂದಿಗೆ ಅಭಿನಯಿಸಿದ ದೃಶ್ಯದ ಕುರಿತು ತಮ್ಮ ಅನುಭವವನ್ನು ಹೇಳಿದ ಅವರು” ಬ್ರೂನೋ ಎಂಬ ಲ್ಯಾಬ್ರೊಡಾರ್ ಶ್ವಾನದೊಂದಿಗೆ ಬಾಂಧವ್ಯ ಬೆಳೆಸುವ ಸವಾಲು ನನಗಿತ್ತು. ನಾನು ಅದರೊಂದಿಗೆ ಸಮಯವನ್ನು ಕಳೆಯುವುದರೊಂದಿಗೆ ಅದನ್ನು ವಾಕಿಂಗಿಗೆ ಕರೆದುಕೊಂಡು ಹೋಗುತ್ತಿದ್ದೆ. ಒಂದು ದೃಶ್ಯದಲ್ಲಿ ಬ್ರೂನೋ ನನ್ನ ಮುಖವನ್ನು ನೆಕ್ಕಬೇಕಿತ್ತು. ಅವನ ಚಿತ್ತವನ್ನು ಸೆಳೆಯಲು ಕಿವಿಯ ಹಿಂಭಾಗದಲ್ಲಿ ತಿಂಡಿಯನ್ನಿರಿಸಿ ಚಿತ್ರೀಕರಣ ಮಾಡಲಾಯಿತು. ಮೊದಲ ಬಾರಿ ನಾಯಿಯೊಂದಿಗೆ ಅಭಿನಯಿಸಿದ ಅನುಭವ ತುಂಬಾ ಚೆನ್ನಾಗಿತ್ತು” ಎಂದರು. ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಚೇಸ್ ಸಿನಿಮಾಗಾಗಿ ರಾಧಿಕಾ ಸ್ಟಂಟ್ ನ್ನೂ ಮಾಡಿದ್ದಾರೆ. ಇದರ ಬಗ್ಗೆ ಮಾತನಾಡಿದ ಅವರು” ಇದಕ್ಕಾಗಿ ನಾನು ಒಂದು ವಾರಗಳ ಕಾಲ ಕ್ರವಾ ಮಗಾ ತರಬೇತಿಯನ್ನು ಕೂಡ ಪಡೆದುಕೊಂಡೆ. ದೈಹಿಕವಾಗಿ ತರಬೇತಿಯ ಸಮಯ ತುಂಬಾ ಕಠಿಣವಾಗಿತ್ತು. ಚೇತನ್ ಡಿಸೋಜಾ ಅವರು ಸಂಯೋಜಿಸಿದ ಸಾಹಸ ದೃಶ್ಯಗಳು ಅನನ್ಯವಾಗಿದೆ. ಪಾತ್ರದ ಸಾಮರ್ಥ್ಯವನ್ನು ಮೀರಿದ ದೃಶ್ಯಾವಳಿಗಳು ಇಲ್ಲದಿರುವುದರಿಂದ ಇವು ನೋಡುಗರನ್ನು ರೋಮಾಂಚಿತಗೊಳಿಸುತ್ತವೆ” ಎಂದರು. ಇದಲ್ಲದೆ ರಾಧಿಕಾ ಹಿಂದಿ ವೆಬ್ ಸೀರೀಸ್ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ”ವಿಷಯವು ಬದಲಾವಣೆಯ ಮೂಲಕ ಸಾಗುತ್ತಿದೆ. ಹಲವಾರು ಅವಕಾಶಗಳು ಒದಗಿ ಬರುತ್ತಿವೆ. ವೆಬ್ ಸೀರೀಸ್ ನಲ್ಲಿ ನಟಿಸಲು ಸ್ವಲ್ಪ ಸೂಕ್ಷ್ಮತೆಯ ಅಗತ್ಯವಿರುತ್ತದೆ. ವೃತ್ತಿಪರ ನಟಿಯಾಗಿ ನನಗೆ ತೃಪ್ತಿ ನೀಡುವಂತಹ ಪಾತ್ರಗಳಲ್ಲಿ ಅಭಿನಯಿಸಲು ಇಷ್ಟಪಡುತ್ತೇನೆ” ಎನ್ನುವ ಅವರು ಚಿತ್ರಗಳಿಗೆ ಸಂಬಂಧಿಸಿದಂತೆ ಮಾತನಾಡುತ್ತಾ ”ನಾನು ಕೇವಲ ಸಂಖ್ಯೆಯ ಸಲುವಾಗಿ ಚಿತ್ರಗಳಿಗೆ ಸಹಿ ಮಾಡಲು ಇಷ್ಟಪಡುವುದಿಲ್ಲ. ನಾನು ನನ್ನೊಂದಿಗೆ ಮಾತನಾಡುವಂತಹ ಸಿನಿಮಾಗಳನ್ನು ಮಾಡಿದ್ದೇನೆ; ಮತ್ತು ನಾನು ಪಾತ್ರಗಳನ್ನು ಪುನರಾವರ್ತಿಸುವುದಿಲ್ಲ ಎಂದು ಖಚಿತವಾಗಿ ಹೇಳುತ್ತೇನೆ. ಏಕೆಂದರೆ ನನ್ನನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಜನರು ಬರುತ್ತಾರೆ. ನಾನು ಅವರನ್ನು ನಿರಾಶೆಗೊಳಿಸಲು ಇಷ್ಟಪಡುವುದಿಲ್ಲ” ಎನ್ನುತ್ತಾರೆ.
ಹೊಸ ಲುಕ್ ನಲ್ಲಿ ಮೋಡಿ ಮಾಡಲಿದ್ದಾರೆ ರಂಗಿತರಂಗ ನಟಿ Read More »
ಬೆಳ್ಳಿತೆರೆಯ ಮೇಲೆ ಮಾತ್ರ ಪ್ರದರ್ಶನ ಕಾಣುತ್ತಿದ್ದ ಚಲನಚಿತ್ರಗಳು ಟಿವಿಯ ಕಿರುತೆರೆಮೇಲೂ ಬರಲು ಪ್ರಾರಂಭಿಸಿ ಅದೆಷ್ಟೋ ಕಾಲವಾಯ್ತು. ಇದೀಗ ಅಧಿಕೃತವಾಗಿ ಮೊಬೈಲ್ ಫೋನ್ ಗಳ ಕಿರುಪರದೆ ಮೇಲೂ ಬರಲಾರಂಭಿಸಿವೆ. ಇದಕ್ಕೆ ಮುಖ್ಯ ಕಾರಣ ‘ಒಟಿಟಿ’.ಕೊರೋನ ನಂತರವಂತು ನೇರವಾಗಿ ಒಟಿಟಿ ಮೆಟ್ಟಿಲೇರೋ ಸಿನಿಮಾಗಳು ಬರುತ್ತಿವೆ. ಅಂತೆಯೇ ಈ ವಾರ ಕನ್ನಡದ ಒಟಿಟಿ ಪ್ರೀಯರಿಗೆ ಮನರಂಜನೆಗೆ ಹಲವು ಆಯ್ಕೆಗಳು ಸಿಗುತ್ತಿವೆ. ಥೀಯೇಟರ್ ಗಳಲ್ಲಿ ತಮ್ಮ ಓಟ ಮುಗಿಸಿಕೊಂಡು ಈ ವಾರ ಒಟಿಟಿ ಕಡೆಗೆ ಬರುತ್ತಿರೋ ಹಲವು ಸಿನಿಮಾಗಳು ಕನ್ನಡದಲ್ಲೇ ನೋಡಲು ಸಿಗುತ್ತಿವೆ. ‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ನಟ ರಿಷಿ ಅವರ ಹೊಸ ಸಿನಿಮಾ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಸಿನಿಮಾ ಸೀದಾ ಒಟಿಟಿ ಕಡೆಗೆ ಹೆಜ್ಜೆ ಇಟ್ಟಿದ್ದು, ಇದೇ ಜುಲೈ 22ರಿಂದ ‘ಜೀ5’ ಆಪ್ ನಲ್ಲಿ ನೋಡಲು ಸಿಗುತ್ತಿದೆ. ಇಸ್ಲಾಹುದ್ದಿನ್ ಅವರು ಇದರ ನಿರ್ದೇಶಕರು. ತನ್ನ ಟ್ರೈಲರ್ ನಿಂದ ಹಲವೆಡೆ ವೈರಲ್ ಆದ, ವಿಶೇಷ ಕಥಾವಸ್ತು ಇರುವಂತಹ ‘ಫಿಸಿಕ್ಸ್ ಟೀಚರ್’ ಸಿನಿಮಾ ಕೂಡ ತನ್ನ ಬೆಳ್ಳಿತೆರೆ ಪಯಣ ಮುಗಿಸಿ ಒಟಿಟಿ ಕಡೆಗೆ ಬರುತ್ತಿದ್ದು, ಇದೇ ಜುಲೈ 22ರಿಂದ ‘ವೂಟ್’ ಆಪ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಸುಮುಖ ಎಂಬ ಹೊಸ ಪ್ರತಿಭೆ ನಟಿಸಿ-ರಚಿಸಿ ನಿರ್ದೇಶಿಸಿರುವ ಈ ಸಿನಿಮಾ ವಿಜ್ಞಾನದ ಬಗ್ಗೆ ಮಾತನಾಡುವಂತಹ ಚಿತ್ರ. ಇಂತಹ ಸಿನಿಮಾಗಳು ಕನ್ನಡದಲ್ಲಿ ಅಪರೂಪವಾದ್ದರಿಂದ ಇದರ ಮೇಲಿನ ನಿರೀಕ್ಷೆ ಹೆಚ್ಚಿಗೇ ಇತ್ತು. ಇನ್ನು ತಮನ್ನಾ ಭಾಟಿಯ, ವಿಕ್ಟರಿ ವೆಂಕಟೇಶ್, ವರುಣ್ ತೇಜ್ ಹಾಗು ಮೇಹ್ರೀನ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತೆಲುಗಿನ ಹೊಸ ಸಿನಿಮಾ ‘ಎಫ್ 3(F3)’ ಕೂಡ ಒಟಿಟಿ ಮೆಟ್ಟಿಲೇರಿದ್ದು, ಸೋನಿ ಲಿವ್ ಆಪ್ ನಲ್ಲಿ ಕನ್ನಡದಲ್ಲೇ ಸಿಗುತ್ತಿದೆ. ಜೊತೆಗೆ ತಮಿಳಿನ ಪ್ರಖ್ಯಾತ ನಟ ಧನುಷ್ ಅವರು ನಟಿಸಿರುವ ‘ನೆಟ್ ಫ್ಲಿಕ್ಸ್’ ಸಂಸ್ಥೆಯ ಸಿನಿಮಾವಾದ ‘ದಿ ಗ್ರೇ ಮ್ಯಾನ್’ ಕೂಡ ಬಿಡುಗಡೆಯಾಗಿದ್ದು, ನೆಟ್ ಫ್ಲಿಕ್ಸ್ ನಲ್ಲಿ ಕನ್ನಡದಲ್ಲೂ ನೋಡಬಹುದಾಗಿದೆ. ಹಾಗೆಯೇ ಇಂಗ್ಲೀಷ್ ನ ಪ್ರಖ್ಯಾತ ಸಿನಿಮಾ ಸೀರೀಸ್ ‘ಫಾಸ್ಟ್ ಅಂಡ್ ಫುರಿಯಸ್’ ನ ಒಂಬತ್ತನೇ ಭಾಗವಾದ ‘ಫಾಸ್ಟ್ ಅಂಡ್ ಫುರಿಯಸ್ 9’ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡದಲ್ಲಿಯೂ ಬಿಡುಗಡೆಯಾಗಿದೆ. ಇವಷ್ಟೇ ಅಲ್ಲದೇ ಆರ್ ಮಾಧವನ್ ಅವರು ನಟಿಸಿ ನಿರ್ದೇಶಿಸಿರುವ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾ ಕೂಡ ತನ್ನ ಒಟಿಟಿ ದಿನಾಂಕ ಘೋಷಣೆ ಮಾಡಿದ್ದು, ಇದೇ ಜುಲೈ 26ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡದಲ್ಲಿಯೂ ಪ್ರದರ್ಶನ ಕಾಣಲಿದೆ. ಹಾಗೆಯೇ ಇಂಗ್ಲೀಷ್ ನ ಪ್ರಖ್ಯಾತ ಸಿನಿಮಾ ‘ಬ್ಯಾಟ್ ಮ್ಯಾನ್’ ಕೂಡ ಇದೇ ಜುಲೈ 27ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇಂಗ್ಲೀಷ್ ಮಾತ್ರವಲ್ಲದೆ ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತಿದೆ. ಜೊತೆಗೆ ರಕ್ಷಿತ್ ಶೆಟ್ಟಿ ಅವರ ಬಹುಮೆಚ್ಚುಗೆ ಪಡೆದಂತಹ ಸಿನಿಮಾ ‘777 ಚಾರ್ಲಿ’ ಕೂಡ ಜುಲೈ 29ರಿಂದ ‘ವೂಟ್’ ಆಪ್ ನಲ್ಲಿ ಪ್ರದರ್ಶನ ಕಾಣಲಿದೆ ಎಂಬ ಸುದ್ದಿಯಿದೆ. ಒಟ್ಟಿನಲ್ಲಿ ಈ ವಾರ ಕನ್ನಡ ಸಿನಿರಸಿಕರಿಗೆ ಒಟಿಟಿ ಪರದೆ ಮೇಲೆ ಹಲವು ಆಯ್ಕೆಗಳು ಮೂಡಿಬರುವುದೇ ಸಂಭ್ರಮ.
ಒಟಿಟಿ ಕನ್ನಡಿಗರಿಗೆ ಈ ವಾರ ಹಬ್ಬವೋ ಹಬ್ಬ. Read More »
“ಜಗವೇ ನೀನು ಗೆಳತಿಯೇ, ನನ್ನ ಜೀವದ ಒಡತಿಯೇ” ಸದ್ಯ ಬಹುಪಾಲು ಕನ್ನಡಿಗರು ದಿನನಿತ್ಯ ಗುನುಗುತ್ತಿರೋ ಸಾಲಿದು.’ಸಂಗೀತ ಮಾಂತ್ರಿಕ’ ಅರ್ಜುನ್ ಜನ್ಯ ಅವರ ಸಂಗೀತದಲ್ಲಿ, ಪ್ರಖ್ಯಾತ ಗಾಯಕ ಸಿಡ್ ಶ್ರೀರಾಮ್ ಅವರ ಧ್ವನಿಯಲ್ಲಿ ಮೂಡಿಬಂದಿರೋ ಈ ಹಾಡು ಕನ್ನಡಿಗರೆಲ್ಲರ ಮನಸೆಳೆದಿತ್ತು. ಕನ್ನಡದ ಯಶಸ್ವಿ ನಿರ್ದೇಶಕರಾದ ಶಶಾಂಕ್ ಅವರ ಸಿನಿಮಾ ‘ಲವ್ 360’ಯ ಹಾಡು ಇದಾಗಿತ್ತು. ಹಾಡಿನಿಂದಲೇ ಪ್ರಸಿದ್ದಿ ಪಡೆದ ಈ ಸಿನಿಮಾ ಇದೀಗ ತನ್ನ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ‘ಕೃಷ್ಣಲೀಲಾ’, ‘ಮುಂಗಾರು ಮಳೆ 2’ ಸೇರಿ ಹಲವು ಮಧುರ ಪ್ರೇಮಕತೆಗಳನ್ನು ಕನ್ನಡಿಗರಿಗೆ ನೀಡಿರುವ ಶಶಾಂಕ್ ಅವರ ಮುಂದಿನ ಪ್ರಯತ್ನ ‘ಲವ್ 360’. ಪ್ರವೀಣ್ ಎಂಬ ಹೊಸ ಪ್ರತಿಭೆಯನ್ನು ಈ ಸಿನಿಮಾದ ಮೂಲಕ ನಾಯಕನಟನಾಗಿ ಪರಿಚಯಿಸುತ್ತಿದದ್ದು, ‘ಲವ್ ಮೊಕ್ಟೇಲ್’ನ “ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್ ಇದರ ನಾಯಕಿಯಾಗಿ ನಟಿಸಿದ್ದಾರೆ. ಇದೇ ಆಗಸ್ಟ್ 19ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಈಗಾಗಲೇ ಟ್ರೈಲರ್ ಹಾಗು ಹಾಡುಗಳು ಜನರ ಮನಸೆಳೆದಿದ್ದು, ಸಿನಿಮಾದ ಬಗೆಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಆಗಸ್ಟ್ ತಿಂಗಳಿನಲ್ಲಿ ಹಲವು ಕನ್ನಡ ಸಿನಿಮಾಗಳು ಬಿಡುಗಡೆಯ ಬಾಗಿಲು ತಟ್ಟುತ್ತಿದ್ದು, ಯಾವುದು ಗೆಲ್ಲಲಿದೆ, ಯಾವುದು ಸೋಲಲಿದೆ ಎಂದು ಕಾದುನೋಡಬೇಕಿದೆ.
ಬಿಡುಗಡೆಗೆ ಮುಹೂರ್ತವಿಟ್ಟ ಮಧುರ ಪ್ರೇಮಕತೆ Read More »