Karnataka Bhagya

ಕರ್ನಾಟಕ

ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ..

ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ.. ಕರ್ನಾಟಕ ಭಾಗ್ಯ ವಾರ್ತೆಯಾದಗಿರಿ : ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಬಾಂಗ್ಲಾದೇಶದಲ್ಲಿ ನಡೆಯಿತ್ತಿರುವ ಹಿಂದೂಗಳ ಮೇಲಿನ ಆತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ ಯಾದಗಿರಿ ನಗರದ ಆಂಜನೇಯ ದೇವಸ್ಥಾನದಿಂದ ಸುಭಾಷ್ ಚಂದ್ರ ಬೋಸ್ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು.ಇದೇ ವೇಳೆ ಮಾತನಾಡಿದ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರು ಬಾಂಗ್ಲಾದಲ್ಲಿ ಹಿಂದುಗಳ ಪರವಾಗಿ ಹೋರಾಟ ನಡೆಸಿದ್ದಾರೆ ಎಂಬ ಕಾರಣಕ್ಕೆ ಇಸ್ಮ್ಕಾನ್‌ನ ಚಿನ್ಮಯ್ ಕೃಷ್ಣದಾಸ್ ಪ್ರಭು ಅವರನ್ನು ಬಂಧಿಸಿರುವುದು ಖಂಡನೀಯ. ಬಾಂಗ್ಲಾದ ಅಭಿವೃದ್ಧಿಗೆ ಭಾರತ ಸಹಕಾರ ನೀಡಿದೆ. ಕೋವಿಡ್ ಅವಧಿಯಲ್ಲೂ ನರೇಂದ್ರ ಮೋದಿ ಸರ್ಕಾರ ಬಾಂಗ್ಲಾದೇಶಕ್ಕೆ ನೆರವಾಗಿತ್ತು. ಆದರೆ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಬಾಂಗ್ಲಾದಲ್ಲಿ ಮತೀಯವಾದದ ಆಧಾರದಲ್ಲಿ ಹಿಂದುಗಳ ಮೇಲೆ ವ್ಯಾಪಕ ದಾಳಿ ನಡೆಯುತ್ತಿದೆ. ಬಾಂಗ್ಲಾದ ಮಹಮ್ಮದ್ ಯೂನಸ್ ಸರ್ಕಾರ ಹಿಂಸಾಕೋರರ ಪರ ಹೇಳಿಕೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ರಾಯಚೂರು ಮಾತನಾಡಿದ ಅವರು ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹಾಗೂ ಹಿಂದುಗಳನ್ನು ಗುರಿಯಾಗಿಸಿಕೊಂಡು ಅಲ್ಲಿನ ಮೂಲಭೂತವಾದಿಗಳು ನಡೆಸುತ್ತಿರುವ ದಾಳಿ ಖಂಡನೀಯ. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ತಾಂಡವವಾಡುತಿದ್ದು ಜಗತ್ತು ಅದರತ್ತ ಕಣ್ಣು ಹಾಯಿಸುತ್ತಿಲ್ಲ. ಅಲ್ಲಿನ ನೊಂದ ಹಿಂದುಗಳ ಪರವಾಗಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ,ಜಿಲ್ಲಾ ವಕ್ತಾರ ಹಣಮಂತ ಇಟಗಿ,ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ವೆಂಕಟರೆಡ್ಡಿ ಅಬ್ಬೆತುಮಕೂರು,ಯುಡ ಮಾಜಿ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ,ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಕಲಾಲ,ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೆರಿ ಮತ್ತು ವಿಜಯಲಕ್ಷ್ಮಿ ನಾಯಕ, ಮಂಜುನಾಥ ದಾಸನಕೆರಿ,ವೀಣಾ ಮೋದಿ,ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೇರ,ಮೋನೇಶ ಬೆಳಿಗೇರ,ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡಮನಿ, ಅಪ್ಪಣ್ಣ ಜೈನ,ಶರಣುಗೌಡ ಅಲಿಪುರ,ಮಲ್ಲು ಕೊಲಿವಾಡ, ನಾಗಪ್ಪ ಗಚ್ಚಿನಮನಿ,ಭೀಮಬಾಯಿ ಶೆಂಡೀಗಿ, ಚಂದ್ರಕಲಾ ಕಿಲ್ಲಕೇರಿ,ಸ್ನೇಹ ರಾಸಳಕರ,ಕಲ್ಪನ ಜೈನ್,ಮರಲಿಂಗ ಕಿಲ್ಲಕೇರಿ,ವಿಕಾಸ ಚೌವ್ಹಾಣ್, ಮಲ್ಲು ಸ್ವಾಮಿ ಗುರುಸುಣಗಿ,ಚಂದ್ರಶೇಖರ ಕಡೆಸೂರ,ಬಸ್ಸು ಬಳಿಚಕ್ರ ಸೇರಿದಂತೆ ಅನೇಕ ಯುವ ಮೋರ್ಚಾ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರು ಇದ್ದರು..

ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ..

ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ.. Read More »

ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕ, ನೇಮಕ ಪತ್ರ ಪಡೆಯುವ ವೇಳೆ ಭಾವುಕರಾದ ಕಟಕಟಿ

ಕಂದಕೂರ ನಿಷ್ಠೆಗೊಲಿದ ಜೆಡಿಎಸ್ ಜಿಲ್ಲಾಧ್ಯಕ್ಷ ಪಟ್ಟ

ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕ, ನೇಮಕ ಪತ್ರ ಪಡೆಯುವ ವೇಳೆ ಭಾವುಕರಾದ ಕಟಕಟಿ ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕ, ನೇಮಕ ಪತ್ರ ಪಡೆಯುವ ವೇಳೆ ಭಾವುಕರಾದ ಕಟಕಟಿ ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಜೆಡಿಎಸ್ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಸುಭಾಷ ಕಟಕಟಿಯವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆದೇಶ ಹೊರಡಿಸಿದ್ದು, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಆದೇಶ ಪತ್ರವನ್ನು ನೀಡಿದರು.ಆದೇಶ ಪತ್ರ ನೀಡಿದ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಸುಭಾಷ ಕಟಕಟಿಯವರು ಕಂದಕೂರ ಕುಟುಂಬದೊAದಿಗೆ ಹಲವು ದಶಕಗಳಿಂದಲೂ ಸಂಪರ್ಕದಿAದಿದ್ದು, ಪಕ್ಷನಿಷ್ಠೆಗೆ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ದೊರಕಿದೆ ಎಂದು ಹೇಳಿದರು.ಯಾದಗಿರಿ ಜಿಲ್ಲೆಯಲ್ಲಿ ಎರಡು ರಾಷ್ಟಿçÃಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮೇಲ್ವರ್ಗದ ವ್ಯಕ್ತಿಗಳಿಗೆ ತಮ್ಮ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿವೆ. ನಮ್ಮ ಪಕ್ಷದಿಂದ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಬೇಕು ಎನ್ನುವ ದೃಷ್ಠಿಯಿಂದ ಹಿಂದುಳಿದ ವರ್ಗದ ಕೋಲಿ ಸಮಾಜದ ಸುಭಾಷ ಕಟಕಟಿಯವರನ್ನು ಆಯ್ಕೆ ಮಾಡಲಾಗಿದೆ. ನಮ್ಮ ಪಕ್ಷ ಪ್ರತಿಯೊಂದು ಸಮಾಜಕ್ಕೆ ಆದ್ಯತೆ ನೀಡುತ್ತದೆ, ಹಿಂದುಳಿದ ವರ್ಗವನ್ನು ಮೇಲತ್ತಬೇಕು ಎನ್ನುವ ದೃಷ್ಠಿಕೋನ ನಮ್ಮ ನಾಯಕರದ್ದಾಗಿದೆ ಎಂದು ಹೇಳಿದರು.ನೂತನ ಜಿಲ್ಲಾಧ್ಯಕ್ಷರು ಜಿಲ್ಲೆಯಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವುದರೊAದಿಗೆ, ಜಿಲ್ಲೆಯಾದ್ಯಂತ ಕನಿಷ್ಠ ೩ ಲಕ್ಷ ಸದಸ್ಯರನ್ನು ನೋಂದಾಯಿಸಬೇಕು, ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಅತಿಹೆಚ್ಚು ಮಾಡುವದರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದರು.ಮುಂಬರುವ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಪಕ್ಷವನ್ನು ಸದೃಢಗೊಳಿಸಿ ಅತಿಹೆಚ್ಚು ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಈಗಿನಿಂದಲೇ ಪಕ್ಷ ಸಂಘಟೆಗೆ ಒತ್ತು ನೀಡಬೇಕು ಎಂದು ಹೇಳಿದರು.ಸುಭಾಷ ಕಟಕಟಿಯವರು ಅಪ್ಪಾಜಿ ಕಾಲದಿಂದಲೂ ಕೂಡ ನಮ್ಮೊಂದಿಗಿದ್ದು, ಅವರು ಪಕ್ಷ ನಿಷ್ಠೆಯೊಂದಿಗೆ ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ, ಪಕ್ಷ ಸಂಘಟನೆಯಲ್ಲಿ ಅವರ ಪಾತ್ರವು ಇದೆ, ಅದರ ಜೊತೆಗೆ ಕಳೆದ ಬಾರಿ ಯಾದಗಿರಿ ಜಿಲ್ಲಾ ಪಂಚಾಯತಿಗೆ ಜೆಡಿಎಸ್‌ನ ಏಕೈಕ ಸದಸ್ಯರಾಗಿ ಅವರ ಧರ್ಮಪತ್ನಿ ಆಯ್ಕೆಯಾಗಿದ್ದರು ಎಂದು ಹೇಳಿದರು. =================== ಅಪ್ಪಾಜಿ ಆಶೀರ್ವಾದ ನನ್ನ ಮೇಲಿದೆ ಎನ್ನುವುದಕ್ಕೆ ಇದೇ ಸಾಕ್ಷಿಯಾದಗಿರಿ : ಮಾಜಿ ಶಾಸಕರಾದ ದಿ. ನಾಗನಗೌಡ ಕಂದಕೂರ ಅವರ ಆಶೀರ್ವಾದ ಸದಾ ನನ್ನ ಮೇಲಿದೆ ಎನ್ನುವುದಕ್ಕೆ ಈ ಹುದ್ದೆ ನನಗೊಲಿದಿರುವುದೇ ಸಾಕ್ಷಿಯಾಗಿದೆ ಎಂದು ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಸುಭಾಷ ಕಟಕಟಿ ಹೇಳಿದರು.ಆದೇಶ ಪತ್ರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕಳೆದ ಹಲವು ದಶಕಗಳಿಂದ ನಾನು ಕಂದಕೂರ ಕುಟುಂಬದೊAದಿಗಿದ್ದೇನೆ. ನಾನು ಹಿಂದುಳಿದ ಕೋಲಿ ಸಮಾಜಕ್ಕೆ ಸೇರಿದವನಾಗಿದ್ದರೂ ನಾಗನಗೌಡ ಕಂದಕೂರ ಅಪ್ಪಾಜಿ ಮತ್ತು ಯುವ ನಾಯಕರಾದ ಶರಣಗೌಡ ಕಂದಕೂರ ಅವರು ನನ್ನನ್ನು ಎಂದಿಗೂ ಹಿಂದುಳಿದನು ಎಂದು ನೋಡಿಲ್ಲ, ತಮ್ಮ ಮನೆಯ ಮಗನಂತೆ ನನ್ನನ್ನು ಕಂಡಿದ್ದಾರೆ, ಅದರಂತೆ ಕಳೆದ ಬಾರಿ ನನ್ನ ಧರ್ಮಪತ್ನಿಗೆ ಜಿಲ್ಲಾ ಪಂಚಾಯತ್ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದಿದ್ದರು, ಜಿಲ್ಲೆಯಲ್ಲಿ ಏಕೈಕ ಜೆಡಿಎಸ್ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೇ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಲು ಕೂಡ ಕಾರಣಿಕರ್ತರಾಗಿದ್ದರೂ, ಅವರ ಅಭಿಮಾನ ಮತ್ತು ಕಾಳಜಿಯ ಭಾಗವಾಗಿ ನಮ್ಮ ಹಿಂದು ವರ್ಗಕ್ಕೆ ಜಿಲ್ಲಾಧ್ಯಕ್ಷ ಪಟ್ಟ ದೊರಕಿದೆ ಎಂದು ಸಂತಸವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಹಿಂದುಳಿದ ವರ್ಗಕ್ಕೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಇನ್ನೂ ಹೆಚ್ಚಿನ ಬಲಬಂದAತಾಗಿದ್ದು, ಪ್ರತಿಯೊಂದು ಹೋಬಳಿ, ಗ್ರಾಮ ಮಟ್ಟದಲ್ಲಿ ಜೆಡಿಎಸ್ ಪಕ್ಷ ಸಂಘಟನೆಯನ್ನು ಕಟ್ಟಿ, ಶಾಸಕ ಶರಣಗೌಡ ಕಂದಕೂರ ನನ್ನ ಮೇಲಿಟ್ಟಿರುವ ವಿಶ್ವಾಸದೊಂದಿಗೆ ಅತಿಹೆಚ್ಚು ಸದಸ್ಯರನ್ನು ಮಾಡಿ ಜಿಲ್ಲೆಯಲ್ಲಿ ಸದೃಢ ಪಕ್ಷವಾಗಿ ಹೊರಹೊಮ್ಮಲು ಕೆಲಸ ಮಾಡುತ್ತೇನೆ ಎಂದು ಹೇಳಿದರು. ರಾಷ್ಟಿçÃಯ ಪಕ್ಷಗಳಿಗೆ ಸೆಡ್ಡೊಡೆಯಲು ಜೆಡಿಎಸ್ ಅಹಿಂದಕ್ಕೆ ಮಣೆಯಾದಗಿರಿ : ಜಿಲ್ಲೆಯಲ್ಲಿ ರಾಷ್ಟಿçÃಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸೆಡ್ಡು ಹೊಡೆಯಲು ಜೆಡಿಎಸ್ ಪೂರ್ವ ತಯಾರಿ ನಡೆಸಿದ್ದು, ತಾಪಂ ಮತ್ತು ಜಿಪಂ ಚುನಾವಣೆ ಪೂರ್ವ ಹಿಂದುಳಿದ ವರ್ಗದ ಮೇಲೆ ಕಣ್ಣಿಟ್ಟು ಜಿಲ್ಲಾಧ್ಯಕ್ಷ ಪಟ್ಟವನ್ನು ಅಹಿಂದ ವರ್ಗವಾದ ಕೋಲಿ ಸಮಾಜಕ್ಕೆ ನೀಡಿದೆ.ಬಿಗು ಧೋರಣೆ, ಸೌಮ್ಯ ಸ್ವಭಾವ ಶಿಸ್ತಿನ ಕಾರ್ಯಕರ್ತರಾಗಿ ಪಕ್ಷದಲ್ಲಿನಿಷ್ಠೆಯಿಂದ ಕೆಲಸ ನಿರ್ವಹಿಸಿದ ಸುಭಾಷ ಕಟಕಟಿಯವರಿಗೆ ಅಧ್ಯಕ್ಷ ಪಟ್ಟ ದಕ್ಕಿರುವದು ಔಚಿತ್ಯಪೂರ್ಣವಾದದ್ದು. ಕಟಕಟಿಯವರು ಎಲ್ಲರ ಸಹಾಯ ಸಹಕಾರದೊಂದಿಗೆ ಹಿರಿಯರ ಸಲಹೆ,ಸೂಚನೆಗಳ ಮೇರೆಗೆ ಪಕ್ಷವನ್ನು ಸಂಘಟಿಸಿ, ಬಲಿಷ್ಠಗೊಳಿಸಿ ಕಾರ್ಯಕರ್ತರಿಗೆ ಸಮಾನವಾಗಿ ನೊಡಿಕೊಳ್ಳುವಂತೆ ಶಾಸಕರು ಸೂಚಿಸಿರುವುದು ಅವರಲ್ಲಿ ಕಾರ್ಯಕರ್ತರ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ.ಜೆಡಿಎಸ್ ಜಿಲ್ಲಾ ನೂತನ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕಗೊಂಡಿರುವುದು ಅವರ ಅಭಿಮಾನಗಳಲ್ಲಿ ಹರುಷದ ಹೊನಲು ಹರಿದಿದೆ.

ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕ, ನೇಮಕ ಪತ್ರ ಪಡೆಯುವ ವೇಳೆ ಭಾವುಕರಾದ ಕಟಕಟಿ

ಕಂದಕೂರ ನಿಷ್ಠೆಗೊಲಿದ ಜೆಡಿಎಸ್ ಜಿಲ್ಲಾಧ್ಯಕ್ಷ ಪಟ್ಟ Read More »

ಹುಣಸಗಿಯಲ್ಲಿ ಕನ್ನಡ ರಥಯಾತ್ರೆಗೆ ಭವ್ಯ ಸ್ವಾಗತದಾರಿಯುದ್ಧಕ್ಕೂ ರಾರಾಜಿಸಿದ ಕನ್ನಡ ಬಾವುಟಗಳು

‘ಕನ್ನಡ ಜ್ಯೋತಿ ರಥ ರಥಯಾತ್ರೆಗೆ ಅದ್ದೂರಿ ಸ್ವಾಗತ ಕರ್ನಾಟಕ ಭಾಗ್ಯ ವಾರ್ತೆಹುಣಸಗಿ: ಮಂಡ್ಯ ಜಿಲ್ಲೆಯಲ್ಲಿ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜನರಲ್ಲಿ ಜಾಗೃತಿ, ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ‘ಕನ್ನಡ ಜ್ಯೋತಿ ರಥ ಯಾತೆ’್ರಗೆ ಮಂಗಳವಾರ ಹುಣಸಗಿ ಪಟ್ಟಣದಲ್ಲಿ ಭರ್ಜರಿ ಸಂಭ್ರಮದೊAದಿಗೆ ಸ್ವಾಗತಿಸಲಾಯಿತು.ಕೆಂಭಾವಿಯಿAದ ಆಗಮಿಸಿದ ರಥಯಾತ್ರೆಯು ಪಟ್ಟಣದ ಮಹಾಂತಸ್ವಾಮಿ ವೃತ್ತದ ಮೂಲಕ ಪ್ರವೇಶಿಸಿತು. ಮಹಿಳೆಯರು, ಹಿರಿಯರು ಸೇರಿದಂತೆ ನೆರೆದಿದ್ದ ಎಲ್ಲ ವರ್ಗದ ನೂರಾರು ಜನರು ರಥ ಆಗಮಿಸಿಸುತ್ತಿದ್ದಂತೆ ಕೇಕೆ ಹಾಕಿ ಖುಷಿಯಿಂದ ಸಂಭ್ರಮಿಸಿದರು. ಬಳಿಕ ರಥಕ್ಕೆ ಸಂಪ್ರದಾಯದAತೆ ವಿಧಿವತ್ತಾಗಿ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕಸಾಪ ಯಾದಗಿರಿ ಜಿಲ್ಲಾಧ್ಯಕ್ಷ ಸಿದ್ಧಪ್ಪ ಹೊಟ್ಟಿ ಮಾತನಾಡುತ್ತ ಡಿಸೆಂಬರ್ ೨೦ ರಿಂದ ಮೂರು ದಿನಗಳ ಕಾಲ ಮಂಡ್ಯ ನಗರದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಿ, ಕನ್ನಡ ಭಾಷೆ ನೆಲ,ಜಲ ಸಂಸ್ಕೃತಿ ಕುರಿತಂತೆ ಅಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಈ ನುಡಿ ಜಾತ್ರೆಗೆ ರಾಜ್ಯದ ಎಲ್ಲ ಗ್ರಾಮಗಳಿಂದಲೂಈ ಜನರು ಭಾಗವಹಿಸಿ ಕನ್ನಡ ಕಹಳೆ ಮೊಳಗಿಸುವ ಕಾರ್ಯ ನಡೆಯಲಿ ಎಂಬುದೆÀ ಈ ‘ ಕನ್ನಡ ಜ್ಯೋತಿ ರಥ ಯಾತ್ರೆಯ ಸದುದ್ದೇಶವಾಗಿದೆ ಎಂದರು. ಯಾದಗಿರಿ ಜಿಲ್ಲೆಯಾದ್ಯಂತ ಈ ರಥಯಾತ್ರೆಗೆ ಸಮುದಾಯದವರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಎಲ್ಲ ಕಡೆಗಳಲ್ಲಿಯೂ ಹಬ್ಬದ ವಾತಾವರಣ ಮೂಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಪಟ್ಟಣದ ಮಹಾಂತಸ್ವಾಮಿ ಮುಖ್ಯ ರಸ್ತೆಯ ಮೂಲಕ ಬಸವೇಶ್ವರ ವೃತ್ತದವರೆಗೂ ಎಲ್ಲಡೆ ಕನ್ನಡದ ಬಾವುಟಗಳು ರಾರಾಜಿಸಿದÀವು. ಡೊಳ್ಳು ವಾದನಕ್ಕೆ ತಕ್ಕಂತೆ ಯುವಕರು ಕನ್ನಡ ಧ್ವಜ ಹಿಡಿದು ನರ್ತನ ಮಾಡಿ ಸಂಭ್ರಮಿಸಿದರು. ಮೆರವಣಿಗೆಯುದ್ಧಕ್ಕೂ ಮಹಿಳೆಯರು ಸೇರಿದಂತೆ ಎಲ್ಲರೂ ಕನ್ನಡದ ಹಿರಿಮೆ ಗರಿಮೆಯನ್ನು ಸಾರುವ ಘೋಷಣೆಗಳನ್ನು ಮೊಳಗಿಸಿ ಕನ್ನಡ ಪ್ರೇಮ ಮೆರೆದರು. ಭಾಗವಹಿಸಿದ್ದ ಎಲ್ಲರೂ ತಮ್ಮವರೊಂದಿಗೆ ರಥದೊಂದಿಗೆ ಫೊಟೊ ತೆಗೆಸಿಕೊಂಡು ಖುಷಿಪಡುತ್ತಿದ್ದುದು ಸಾಮಾನ್ಯವಾಗಿತ್ತು. ಮಾರ್ಗದ ಹಲವು ಕಡೆಗಳಲ್ಲಿ ರಥದಲ್ಲಿನ ಕನ್ನಡ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.ಕನ್ನಡ ಜೋತಿ ರಥಯಾತ್ರೆಯು ಡೊಳ್ಳು ವಾದ್ಯದೊಂದಿಗೆ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.ಈ ಸಂದರ್ಭದಲ್ಲಿ ಹುಣಸಗಿಯ ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ,ಕಸಾಪ ತಾಲೂಕು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಪ.ಪಂ.ಅಧ್ಯಕ್ಷ ತಿಪ್ಪಣ್ಣ ನಾಯ್ಕ ರಾಠೋಡ, ಪ.ಪಂ.ಉಪಾಧ್ಯಕ್ಷ ಶಾಂತಣ್ಣ ಮಲಗಲದಿನ್ನಿ, ಪ.ಪಂ ಮುಖ್ಯಾಧಿಕಾರಿ ಸಿದ್ಧರಾಮೇಶ್ವರ, ಪ್ರಕಾಶ ಅಂಗಡಿ ಕನ್ನೆಳ್ಳಿ, ಹಿರಿಯರಾದ ಬಿ.ಎಲ್ ಹಿರೇಮಠ, ಮುಖಂಡರಾದ ಸಿದ್ಧಣ್ಣ ಮಲಗಲದಿನ್ನಿ, ಚಂದ್ರಶೇಖರ ದಂಡಿನ, ಬಾಪುಗೌq ಪಾಟೀಲ್, ಬಸವರಾಜ್ ಮಲಗಲದಿನ್ನಿ, ಹೊನ್ನಪ್ಪ ದೇಸಾಯಿ,ಭೀಮನಗೌಡ ಕುಪ್ಪಿ ಪಟ್ಟಣ ಪಂಚಾಯಿತಿ ಸದಸ್ಯರಾದ ಶರಣು ದಂಡಿನ್, ಸಿದ್ಧು ಮುದಗಲ್, ಮಲ್ಲಣ್ಣ ಬಾಕಲಿ,ಕಾಶೀಂಸಾಬ್, ತಾ.ಪಂ.ಇಒ ಬಸವರಾಜ ಸಜ್ಜನ್, ಮೇಲಪ್ಪ ಗುಳಗಿ,ನೀಲಕಂಠ ಹೊನಕಲ್, ಶಿವಕುಮಾರ ಬಂಡೋಳಿ,ನಾಗನಗೌಡ ಪಾಟೀಲ್, ಆರ್.ಎಲ್ ಸುಣಗಾರ, ಅಬ್ದುಲ್ ಸುಭಾನ ಅಲಿ ಡೆಕ್ಕನ್, ಮಂಜುನಾಥ ಎಸ್.ಬಳಿ, ಮಹಾದೇವಿ ಬೇನಾಳಮಠ, ಮಶಾಕ ಯಾಳಗಿ,ಗುರು ಹುಲಕಲ್,ಕಾಂತೇಶ,ಹೊನ್ನಕೇಶವ ದೇಸಾಯಿ,ನಂದಪ್ಪ ಪೀರಾಪುರ,ಬಸವರಾಜ ತೆಗ್ಗೆಳ್ಳಿ,ಬಸವರಾಜ ಕೋಳ್ಕೂರ,ವೆಂಕನಗೌಡ ಅರಿಕೇರಿ, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ನಿಂಗನಗೌಡ ಪಾಟೀಲ್, ಎಸ್.ಕೆ ಶಿಕ್ಷಣ ಸಂಸ್ಥೆಯ ವಿಜಯಕುಮಾರ ದೇಸಾಯಿ, ಸಹಜಯೋಗದ ಅಯ್ಯನಗೌಡ ಬನ್ನೀಬಸವ ಮತ್ತು ಕಸಾಪದ ವಿವಿಧ ಪದಾಧಿಕಾರಿಗಳು ಹಾಗೂ ವಿವಿಧ ಶಾಲೆಗಳ ಶಿಕ್ಷಕ, ಶಿಕ್ಷಕಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸಮುದಾಯದ ಪ್ರಮುಖರು ಹಾಗೂ ಕನ್ನಡಪರ ಸಂಘಟನೆಯ ಬಸವರಾಜ ಚನ್ನೂರ, ಪ್ರಭುಗೌಡ ಪೋತರಡ್ಡಿ ಮುದನೂರ,ಮತ್ತು ಪದಾಧಿಕಾರಿಗಳು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ಹುಣಸಗಿಯಲ್ಲಿ ಕನ್ನಡ ರಥಯಾತ್ರೆಗೆ ಭವ್ಯ ಸ್ವಾಗತದಾರಿಯುದ್ಧಕ್ಕೂ ರಾರಾಜಿಸಿದ ಕನ್ನಡ ಬಾವುಟಗಳು Read More »

ಕಲ್ಲದೇವನಹಳ್ಳಿಯಲ್ಲಿ ಅ.೧೭ ರಿಂದ ಅ.೨೧ ರವರೆಗೆ ಖಾಸ್ಗತೇಶ್ವರ ಶಾಂತಾಶ್ರಮದ ಜಾತ್ರಾ ಮಹೋತ್ಸವಕುಂಭೋತ್ಸವ, ಆನೆ ಮರವಣಿಗೆ ; ಶ್ರೀ ಸಿದ್ದಲಿಂಗದೇವರು

ಕಲ್ಲದೇವನಹಳ್ಳಿಯಲ್ಲಿ ಅ.೧೭ ರಿಂದ ಅ.೨೧ ರವರೆಗೆ ಖಾಸ್ಗತೇಶ್ವರ ಶಾಂತಾಶ್ರಮದ ಜಾತ್ರಾ ಮಹೋತ್ಸವಕುಂಭೋತ್ಸವ, ಆನೆ ಮರವಣಿಗೆ ; ಶ್ರೀ ಸಿದ್ದಲಿಂಗದೇವರು ಕರ್ನಾಟಕ ಭಾಗ್ಯ ವಾರ್ತೆಹುಣಸಗಿ: ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಖಾಸ್ಗತೇಶ್ವರ ಶಾಂತಾಶ್ರಮದ ೨ ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವು ನಾಳೆ ಅ.೧೭ ರಿಂದ ಅ.೨೧ ರವರೆಗೆ ಜರುಗಲಿದೆ ಎಂದು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ದೇವರು ಹೇಳಿದರು.ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದ ಖಾಸ್ಗತೇಶ್ವರ ಶಾಂತಾಶ್ರಮದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಭಿತ್ತಿಪತ್ರಗಳ ಬಿಡುಗಡೆಗೊಳಿಸಿ ಮಾತನಾಡುತ್ತ ಅ.೨೧ ರಂದು ಸಂಜೆ ೭ ಗಂಟೆಗೆ ‘ ತಿಳಿದು ಬದುಕು’ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ವೇ.ಮೂ.ವೀರೂಪಾಕ್ಷಯ್ಯ ಶಾಸ್ತಿç ಜಿಗಳೂರ ಪ್ರವಚನ ನಡೆಸಿಕೊಡಲಿದ್ದು, ಅಂದೇ ಬೆಳಗ್ಗೆ ೧೦ ಗಂಟೆಗೆ ಗ್ರಾಮದಿಂದ ಶಾಂತಾಶ್ರಮದವರೆಗೂ ಕುಂಭೋತ್ಸವ ಹಾಗೂ ಆನೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.ನಂತರ ಸಂಜೆ ಧರ್ಮಸಭೆ ಕಾರ್ಯಕ್ರಮ ನಡೆಯಲಿದೆ, ಶ್ರೀಮಠಕ್ಕೆ ಭಕ್ತಸಮೂಹವೇ ಬಹು ದೊಡ್ಡ ಆಸ್ತಿ ಇದ್ದಂತೆ. ಧಾರ್ಮಿಕ ಭಕ್ತಿ, ಭಾವನೆಗೆ ಕಲ್ಲದೇವನಹಳ್ಳಿ ಗ್ರಾಮಸ್ಥರು ಶ್ರೀಮಂತರಾಗಿದ್ದಾರೆ. ಸ್ವಯಂ ಮನಸ್ಸು, ತನು-ಮನ ಧನದಿಂದ ಭಕ್ತರ ಇಚ್ಚೆಯಂತೆ ಧಾರ್ಮಿಕ ಕರ‍್ಯಕ್ರಮ ಯಶಸ್ವಿಯಾಗಲಿದೆ ಎಂದು ಹಾರೈಸಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ನಂತರ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸೌಕರ್ಯಗಳ ಕುರಿತಾಗಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಸಿದ್ದನಗೌಡ ಪೊಲೀಸ್ ಪಾಟೀಲ್, ಚೆನ್ನಪ್ಪ ಕೊಡೇPಲ್, ಭೀಮನಗೌಡ ದ್ಯಾಮನ, ಚಂದ್ರಶೇಖರ, ಶಾಂತಗೌಡ ಪೊಲೀಸ್ ಪಾಟೀಲ್, ಶಿವರಾಯಗೌಡ ಮೇಟಿ, ರಾಜ್ಯ ಜಾನಪದ ಅಕಾಡೆಮಿಯ ನಿಕಟ ಪೂರ್ವ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಸೇರಿದಂತೆ ಗ್ರಾಮಸ್ಥರು ಇದ್ದರು.

ಕಲ್ಲದೇವನಹಳ್ಳಿಯಲ್ಲಿ ಅ.೧೭ ರಿಂದ ಅ.೨೧ ರವರೆಗೆ ಖಾಸ್ಗತೇಶ್ವರ ಶಾಂತಾಶ್ರಮದ ಜಾತ್ರಾ ಮಹೋತ್ಸವಕುಂಭೋತ್ಸವ, ಆನೆ ಮರವಣಿಗೆ ; ಶ್ರೀ ಸಿದ್ದಲಿಂಗದೇವರು Read More »

ವೀರಶೈವ ಮಹಾಸಭೆಗೆ ಶಾಸಕ ಚನ್ನಾರಡ್ಡಿ ತುನ್ನೂರ ಮತದಾನ

ವೀರಶೈವ ಮಹಾಸಭೆಗೆ ಶಾಸಕ ಚನ್ನಾರಡ್ಡಿ ತುನ್ನೂರ ಮತದಾನ

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗಾಗಿ ನಡೆದ ಚುನಾವಣೆಯಲ್ಲಿ ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಮತ ಚಲಾಯಿಸಿದರು.ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿಯ ಸದಸ್ಯ ಸ್ಥಾನಗಳ ಚುನಾವಣೆಗಾಗಿ ಚುನಾವಣೆ ನಡೆಯುತ್ತಿದ್ದು, ಯಾದಗಿರಿ ಶಾಸಕರು ಸೇರಿದಂತೆ ಹಲವು ಜನಪ್ರತಿನಿಧಿಗಳು ವೀರಶೈವ ಮುಖಂಡರು, ಸದಸ್ಯರು ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಹಲವು ಸದಸ್ಯರಿದ್ದರು.

ವೀರಶೈವ ಮಹಾಸಭೆಗೆ ಶಾಸಕ ಚನ್ನಾರಡ್ಡಿ ತುನ್ನೂರ ಮತದಾನ

ವೀರಶೈವ ಮಹಾಸಭೆಗೆ ಶಾಸಕ ಚನ್ನಾರಡ್ಡಿ ತುನ್ನೂರ ಮತದಾನ Read More »

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಗಿರಿನಾಡು ಗೆಳೆಯರ ಬಳಗದ ವತಿಯಿಂದ ಯಾದಗಿರಿ ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಕಲ್ಯಾಣ ಮಂಟಪದಲ್ಲಿ ಆಗಷ್ಟ್ ೨೬ರಂದು ಸಂಜೆ ೭ಕ್ಕೆ ಪ್ರಪ್ರಥಮವಾಗಿ ಶ್ರೀ ಕೃಷ್ಣ ಜನ್ಮಾಷ್ಠಿ ಅಂಗವಾಗಿ ದಹಿ ಹಂಡೀ ಉತ್ಸವ ಕಾರ್ಯಕ್ರಮ

ಗಿರಿನಾಡು ದಹಿ ಹಂಡಿ ಉತ್ಸವ 26 ಕ್ಕೆ

ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ಗಿರಿನಾಡು ಗೆಳೆಯರ ಬಳಗದ ವತಿಯಿಂದ ಯಾದಗಿರಿ ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಕಲ್ಯಾಣ ಮಂಟಪದಲ್ಲಿ ಆಗಷ್ಟ್ ೨೬ರಂದು ಸಂಜೆ ೭ಕ್ಕೆ ಪ್ರಪ್ರಥಮವಾಗಿ ಶ್ರೀ ಕೃಷ್ಣ ಜನ್ಮಾಷ್ಠಿ ಅಂಗವಾಗಿ ದಹಿ ಹಂಡೀ ಉತ್ಸವ ಕಾರ್ಯಕ್ರಮ

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಗಿರಿನಾಡು ಗೆಳೆಯರ ಬಳಗದ ವತಿಯಿಂದ ಯಾದಗಿರಿ ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಕಲ್ಯಾಣ ಮಂಟಪದಲ್ಲಿ ಆಗಷ್ಟ್ ೨೬ರಂದು ಸಂಜೆ ೭ಕ್ಕೆ ಪ್ರಪ್ರಥಮವಾಗಿ ಶ್ರೀ ಕೃಷ್ಣ ಜನ್ಮಾಷ್ಠಿ ಅಂಗವಾಗಿ ದಹಿ ಹಂಡೀ ಉತ್ಸವ ಕಾರ್ಯಕ್ರಮ

ಗಿರಿನಾಡು ದಹಿ ಹಂಡಿ ಉತ್ಸವ 26 ಕ್ಕೆ Read More »

ಆಗಸ್ಟ್ 19ರಿಂದ ಸಗರನಾಡಿನ ಆರಾಧ್ಯದೈವ ಶ್ರೀ ಹೈಯ್ಯಾಳಲಿಂಗೇಶ್ವರ ಜಾತ್ರೆ ಆರಂಭ

ಆಗಸ್ಟ್ 19ರಿಂದ ಸಗರನಾಡಿನ ಆರಾಧ್ಯದೈವ ಶ್ರೀ ಹೈಯ್ಯಾಳಲಿಂಗೇಶ್ವರ ಜಾತ್ರೆ ಆರಂಭ

ಆಗಸ್ಟ್ 19ರಿಂದ ಸಗರನಾಡಿನ ಆರಾಧ್ಯದೈವ ಶ್ರೀ ಹೈಯ್ಯಾಳಲಿಂಗೇಶ್ವರ ಜಾತ್ರೆ ಆರಂಭ

ಆಗಸ್ಟ್ 19ರಿಂದ ಸಗರನಾಡಿನ ಆರಾಧ್ಯದೈವ ಶ್ರೀ ಹೈಯ್ಯಾಳಲಿಂಗೇಶ್ವರ ಜಾತ್ರೆ ಆರಂಭ Read More »

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಆರ್ಯ ಈಡಿಗ ಸಮಾಜದ ವತಿಯಿಂದ ಆಗಸ್ಟ್ 20ರಂದು ನಡೆಯುವ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರ ಅನಪೂರ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಯಾದಗಿರಿ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಗಸ್ಟ್ 20ರಂದು ರಾಜ್ಯ ಸರ್ಕಾರ, ಜಿಲ್ಲಾಡಳಿತ, ಆರ್ಯ ಈಡಿಗ ಸಮಾಜದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.75ರಷ್ಟು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಉಪಾಧ್ಯಕ್ಷ ರಾದ ದೇವಪ್ಪಗೌಡ ರಾಚನಹಳ್ಳಿ ಮಾತನಾಡಿ, ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಛಲ ಬರಲಿ ಎನ್ನುವ ಉದ್ದೇಶದಿಂದ ಈ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ನಮ್ಮ ಸಮಾಜದ ಬೇರೆ ಕ್ಷೇತ್ರದಲ್ಲಿರುವ ಪ್ರತಿಭಾವಂತರಿಗೂ ಗೌರವ ಪ್ರೋತ್ಸಾಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಗುಂಡಗುರ್ತಿ ಮಾತನಾಡಿ, ಎಲ್ಲಾ ತಾಲೂಕುಗಳ ಅಧ್ಯಕ್ಷರು ತಾಲೂಕು ಆಡಳಿತವತಿಯಿಂದ ನಡೆಯುವ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಪ್ರತಿ ತಾಲೂಕಿನಲ್ಲಿಯೂ ಕೂಡ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಆಗಸ್ಟ್ 20ರಂದು ಆರ್ಯ ಈಡಿಗ ಸಮಾಜದ ವತಿಯಿಂದ ಯಾದಗಿರಿ ನಗರದ ಬಾಲಯೋಗಿ ರಾಜೇಂದ್ರ ಮಹಾರಾಜರ ಮಠದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಭವ್ಯ ಭಾವಚಿತ್ರ ಮೆರವಣಿಗೆಯು ನಗರದ ಮೈಲಾಪುರ ಅಗಸಿ , ಚಕ್ಕರ ಕಟ್ಟ , ಗಾಂಧಿ ವೃತ್ತ, ಬಾಬು ಜಗಜೀವನರಾಂ ವೃತ್ತ, ಕನಕ ವೃತ್ತ, ಅಂಬೇಡ್ಕರ್ ನಗರ, ಶಾಸ್ತ್ರೀ ವೃತ್ತದಿಂದ ಸುಭಾಷ್ ಚಂದ್ರ ಬೋಸ್ ವ್ರತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಲಿದೆ. ಈ ಮೆರವಣಿಗೆಯಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಖಜಾಂಚಿ ವೆಂಕಟೇಶ್ ಬದ್ದೆಪಲ್ಲಿ, ಸಂಘಟನಾ ಕಾರ್ಯದರ್ಶಿ ಮರೆಪ್ಪ ಇಬ್ರಾಹಿಂಪುರ, ನಂದಕುಮಾರ್ ಜಿಲ್ಲಾಲಪುರ್, ಜಿಲ್ಲಾ ಯ್ಯುತ್ ಅಧ್ಯಕ್ಷ ಪಿ ಬಾಲಾಜಿ ಪೋಲಿಸ್, ಯ್ಯುತ್ ತಾಲ್ಲೂಕು ಅಧ್ಯಕ್ಷ ರಾಘು ಸೈದಾಪುರ, ಪ್ರಕಾಶ್ ಗುತ್ತೆದಾರ ಬಳಿಚಕ್ರ, ನರೇಂದ್ರ ಗೌಡ ಮಾನಸಗಲ್, ಮಲ್ಲಿಕಾರ್ಜುನ ಶಾಬಾದಿ, ಕಾಶಿನಾಥ್ ಮುಷ್ಟೂರ್, ದತ್ತಾತ್ರೇಯ ಶಾಬಾದಿ ಇದ್ದರು.

ಈಡಿಗ ಸಮಾಜದಿಂದ‌ ಪ್ರತಿಭಾ ಪುರಸ್ಕಾರ ಸಮಾರಂಭ ಆಗಸ್ಟ್ 20ರಂದು

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಆರ್ಯ ಈಡಿಗ ಸಮಾಜದ ವತಿಯಿಂದ ಆಗಸ್ಟ್ 20ರಂದು ನಡೆಯುವ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರ ಅನಪೂರ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಯಲ್ಲಿ ವಿಷಯ ತಿಳಿಸಿದ ಅವರು, ಯಾದಗಿರಿ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಗಸ್ಟ್ 20ರಂದು ರಾಜ್ಯ ಸರ್ಕಾರ, ಜಿಲ್ಲಾಡಳಿತ, ಆರ್ಯ ಈಡಿಗ ಸಮಾಜದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.75ರಷ್ಟು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.ಜಿಲ್ಲಾ ಉಪಾಧ್ಯಕ್ಷ ರಾದ ದೇವಪ್ಪಗೌಡ ರಾಚನಹಳ್ಳಿ ಮಾತನಾಡಿ,ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಛಲ ಬರಲಿ ಎನ್ನುವ ಉದ್ದೇಶದಿಂದ ಈ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ನಮ್ಮ ಸಮಾಜದ ಬೇರೆ ಕ್ಷೇತ್ರದಲ್ಲಿರುವ ಪ್ರತಿಭಾವಂತರಿಗೂ ಗೌರವ ಪ್ರೋತ್ಸಾಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಗುಂಡಗುರ್ತಿ ಮಾತನಾಡಿ,ಎಲ್ಲಾ ತಾಲೂಕುಗಳ ಅಧ್ಯಕ್ಷರು ತಾಲೂಕು ಆಡಳಿತವತಿಯಿಂದ ನಡೆಯುವ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಪ್ರತಿ ತಾಲೂಕಿನಲ್ಲಿಯೂ ಕೂಡ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಆಗಸ್ಟ್ 20ರಂದು ಆರ್ಯ ಈಡಿಗ ಸಮಾಜದ ವತಿಯಿಂದ ಯಾದಗಿರಿ ನಗರದ ಬಾಲಯೋಗಿ ರಾಜೇಂದ್ರ ಮಹಾರಾಜರ ಮಠದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಭವ್ಯ ಭಾವಚಿತ್ರ ಮೆರವಣಿಗೆಯು ನಗರದ ಮೈಲಾಪುರ ಅಗಸಿ , ಚಕ್ಕರ ಕಟ್ಟ , ಗಾಂಧಿ ವೃತ್ತ, ಬಾಬು ಜಗಜೀವನರಾಂ ವೃತ್ತ, ಕನಕ ವೃತ್ತ, ಅಂಬೇಡ್ಕರ್ ನಗರ, ಶಾಸ್ತ್ರೀ ವೃತ್ತದಿಂದ ಸುಭಾಷ್ ಚಂದ್ರ ಬೋಸ್ ವ್ರತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಲಿದೆ. ಈ ಮೆರವಣಿಗೆಯಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಕೋರಿದರು.ಈ ಸಂದರ್ಭದಲ್ಲಿ ಖಜಾಂಚಿ ವೆಂಕಟೇಶ್ ಬದ್ದೆಪಲ್ಲಿ, ಸಂಘಟನಾ ಕಾರ್ಯದರ್ಶಿ ಮರೆಪ್ಪ ಇಬ್ರಾಹಿಂಪುರ, ನಂದಕುಮಾರ್ ಜಿಲ್ಲಾಲಪುರ್, ಜಿಲ್ಲಾ ಯ್ಯುತ್ ಅಧ್ಯಕ್ಷ ಪಿ ಬಾಲಾಜಿ ಪೋಲಿಸ್, ಯ್ಯುತ್ ತಾಲ್ಲೂಕು ಅಧ್ಯಕ್ಷ ರಾಘು ಸೈದಾಪುರ, ಪ್ರಕಾಶ್ ಗುತ್ತೆದಾರ ಬಳಿಚಕ್ರ, ನರೇಂದ್ರ ಗೌಡ ಮಾನಸಗಲ್, ಮಲ್ಲಿಕಾರ್ಜುನ ಶಾಬಾದಿ, ಕಾಶಿನಾಥ್ ಮುಷ್ಟೂರ್, ದತ್ತಾತ್ರೇಯ ಶಾಬಾದಿ ಇದ್ದರು.

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಆರ್ಯ ಈಡಿಗ ಸಮಾಜದ ವತಿಯಿಂದ ಆಗಸ್ಟ್ 20ರಂದು ನಡೆಯುವ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರ ಅನಪೂರ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಯಾದಗಿರಿ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಗಸ್ಟ್ 20ರಂದು ರಾಜ್ಯ ಸರ್ಕಾರ, ಜಿಲ್ಲಾಡಳಿತ, ಆರ್ಯ ಈಡಿಗ ಸಮಾಜದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.75ರಷ್ಟು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಉಪಾಧ್ಯಕ್ಷ ರಾದ ದೇವಪ್ಪಗೌಡ ರಾಚನಹಳ್ಳಿ ಮಾತನಾಡಿ, ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಛಲ ಬರಲಿ ಎನ್ನುವ ಉದ್ದೇಶದಿಂದ ಈ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ನಮ್ಮ ಸಮಾಜದ ಬೇರೆ ಕ್ಷೇತ್ರದಲ್ಲಿರುವ ಪ್ರತಿಭಾವಂತರಿಗೂ ಗೌರವ ಪ್ರೋತ್ಸಾಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಗುಂಡಗುರ್ತಿ ಮಾತನಾಡಿ, ಎಲ್ಲಾ ತಾಲೂಕುಗಳ ಅಧ್ಯಕ್ಷರು ತಾಲೂಕು ಆಡಳಿತವತಿಯಿಂದ ನಡೆಯುವ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಪ್ರತಿ ತಾಲೂಕಿನಲ್ಲಿಯೂ ಕೂಡ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಆಗಸ್ಟ್ 20ರಂದು ಆರ್ಯ ಈಡಿಗ ಸಮಾಜದ ವತಿಯಿಂದ ಯಾದಗಿರಿ ನಗರದ ಬಾಲಯೋಗಿ ರಾಜೇಂದ್ರ ಮಹಾರಾಜರ ಮಠದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಭವ್ಯ ಭಾವಚಿತ್ರ ಮೆರವಣಿಗೆಯು ನಗರದ ಮೈಲಾಪುರ ಅಗಸಿ , ಚಕ್ಕರ ಕಟ್ಟ , ಗಾಂಧಿ ವೃತ್ತ, ಬಾಬು ಜಗಜೀವನರಾಂ ವೃತ್ತ, ಕನಕ ವೃತ್ತ, ಅಂಬೇಡ್ಕರ್ ನಗರ, ಶಾಸ್ತ್ರೀ ವೃತ್ತದಿಂದ ಸುಭಾಷ್ ಚಂದ್ರ ಬೋಸ್ ವ್ರತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಲಿದೆ. ಈ ಮೆರವಣಿಗೆಯಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಖಜಾಂಚಿ ವೆಂಕಟೇಶ್ ಬದ್ದೆಪಲ್ಲಿ, ಸಂಘಟನಾ ಕಾರ್ಯದರ್ಶಿ ಮರೆಪ್ಪ ಇಬ್ರಾಹಿಂಪುರ, ನಂದಕುಮಾರ್ ಜಿಲ್ಲಾಲಪುರ್, ಜಿಲ್ಲಾ ಯ್ಯುತ್ ಅಧ್ಯಕ್ಷ ಪಿ ಬಾಲಾಜಿ ಪೋಲಿಸ್, ಯ್ಯುತ್ ತಾಲ್ಲೂಕು ಅಧ್ಯಕ್ಷ ರಾಘು ಸೈದಾಪುರ, ಪ್ರಕಾಶ್ ಗುತ್ತೆದಾರ ಬಳಿಚಕ್ರ, ನರೇಂದ್ರ ಗೌಡ ಮಾನಸಗಲ್, ಮಲ್ಲಿಕಾರ್ಜುನ ಶಾಬಾದಿ, ಕಾಶಿನಾಥ್ ಮುಷ್ಟೂರ್, ದತ್ತಾತ್ರೇಯ ಶಾಬಾದಿ ಇದ್ದರು.

ಈಡಿಗ ಸಮಾಜದಿಂದ‌ ಪ್ರತಿಭಾ ಪುರಸ್ಕಾರ ಸಮಾರಂಭ ಆಗಸ್ಟ್ 20ರಂದು Read More »

Scroll to Top