Karnataka Bhagya

ಕರ್ನಾಟಕ

ಪ್ಯಾನ್ ಇಂಡಿಯಾ ಸಿನಿಮಾ ಟೈಟಲ್ ರಿವೀಲ್ ಮಾಡಿದ ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತಾ?

ಜೊತೆಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಈಗ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಕರಾವಳಿ ಮೂಲಕ ಕುವರಿ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾ ಮೂಲಕ ಹಿರಿತೆರೆಗೆ ಹಾರಿದರು. ಡಾರ್ಲಿಂಗ್ ಕೃಷ್ಣ ಜೊತೆಗೆ ದಿಲ್ ಪಸಂದ್ ಎನ್ನುತ್ತಿರುವ ಮೇಘಾ ಶೆಟ್ಟಿ ಸಡಗರ ರಾಘವೇಂದ್ರ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ಬಹಿರಂಗಗೊಂಡಿತ್ತು. ಕವೀಶ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದ ಟೈಟಲ್ ನ್ನು ರಿಷಬ್ ಶೆಟ್ಟಿ ರಿವೀಲ್ ಮಾಡಿದ್ದಾರೆ. ಮೇಘಾ ಶೆಟ್ಟಿ ಹಾಗೂ ಕವೀಶ್ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾಕ್ಕೆ ಆಪ್ಟರ್ ಆಪರೇಶನ್ ಲಂಡನ್ ಕೆಫೆ ಎಂದು ಹೆಸರಿಡಲಾಗಿದೆ. ಸಿನಿಮಾದ ಹೆಸರನ್ನು ರಿವೀಲ್ ಮಾಡಿದ್ದ ರಿಷಬ್ ಶೆಟ್ಟಿ ಅವರು “ಸಡಗರ ರಾಘವೇಂದ್ರ ಅವರು ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಅವರಿಗೆ ಶುಭ ಹಾರೈಕೆಗಳು. ನಾಯಕಿ ಮೇಘಾ ಶೆಟ್ಟಿ, ನಾಯಕ ಕವೀಶ್ ಶೆಟ್ಟಿ ಅವರ ಜೊತೆಗೆ ನಿರ್ಮಾಪಕರು, ಉಳಿದಿರುವ ಕಲಾವಿದರುಗಳು ಹಾಗೂ ತಂತ್ರಜ್ಞರಿಗೂ ಕೂಡಾ ಶುಭವಾಗಲಿ” ಎಂದು ಹಾರೈಸಿದ್ದಾರೆ. ಅಂದ ಹಾಗೇ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಸಿನಿಮಾವು ಕನ್ನಡ ಮಾತ್ರವಲ್ಲದೇ ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ನಾಯಕ ಕವೀಶ್ ಶೆಟ್ಟಿ ಹುಟ್ಟುಹಬ್ಬದಂದು ಸಿನಿಮಾದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಒಟ್ಟಿನಲ್ಲಿ ಮಗದೊಂದು ಫ್ಯಾನ್ ಇಂಡಿಯಾ ಸಿನಿಮಾ ನೋಡುವ ಸುವರ್ಣಾವಕಾಶ ವೀಕ್ಷಕರಿಗೆ ಶೀಘ್ರದಲ್ಲಿ ದೊರಕಿಲಿದೆ.

ಪ್ಯಾನ್ ಇಂಡಿಯಾ ಸಿನಿಮಾ ಟೈಟಲ್ ರಿವೀಲ್ ಮಾಡಿದ ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತಾ? Read More »

ಕಿರುತೆರೆಯ ತೇಜಸ್ವಿನಿ ನಟನೆಗೆ ಬಂದುದು ಬೆಳ್ಳಿತೆರೆಯಿಂದ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರತಿ ಸಂಚಿಕೆಯೂ ರೋಚಕ ತಿರುವುಗಳಿಂದ ಕೂಡಿದ್ದು ನಾಳಿನ ಸಂಚಿಕೆಯಲ್ಲಿ ಏನಾಗಬಹುದು ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿರುತ್ತದೆ. ಇದೀಗ ಅಗಸ್ತ್ಯನ ತಂಗಿ ಅಶ್ವಿನಿ ಎನ್ನುವ ಹೊಸ ಪಾತ್ರದ ಆಗಮನವೂ ಆಗಿದ್ದು ಮುಂದಿನ ದಿನಗಳಲ್ಲಿ ಕಥೆಗೆ ಮಗದಷ್ಟು ತಿರುವುಗಳು ದೊರೆತರೆ ಆಶ್ಚರ್ಯವೇನಿಲ್ಲ. ನಾಯಕ ನಾಯಕಿಯ ಹೊರತಾಗಿ ನನ್ನರಸಿ ರಾಧೆಯ ಕೇಂದ್ರವಾಗಿದ್ದ ಖಳನಾಯಕಿ ಲಾವಣ್ಯಾ ಆಗಿ ನಟಿಸುತ್ತಿದ್ದ ತೇಜಸ್ವಿನಿ ಪ್ರಕಾಶ್ ಮನೋಜ್ಞ ಅಭಿನಯದ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾದರು. ಇದೀಗ ಕಳೆದ ಎರಡು ಮೂರು ತಿಂಗಳಿನಿಂದ ಆಕೆಯ ಪಾತ್ರ ನಾಪತ್ತೆಯಾಗಿತ್ತು. ಆಕೆ ಈಗ ಮರಳಿದ್ದು ವೀಕ್ಷಕರ ಸಂತಸ ಇಮ್ಮಡಿಯಾಗಿದೆ. ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ತೇಜಸ್ವಿನಿ ಮದುವೆಯ ಸಲುವಾಗಿ ಧಾತಾವಾಹಿಯಿಂದ ಹೊರಬಂದಿದ್ದರು ಎಂಬ ಮಾತು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಮೂರು ತಿಂಗಳ ನಂತರ ಆಕೆ ಮರಳಿದ್ದು ಕಥೆಗೆ ಟ್ವಿಸ್ಟ್ ಸಿಗಲಿದೆಯಾ ಎಂದು ತಿಳಿಯಬೇಕಿದೆ. ಬೆಳ್ಳಿತೆರೆಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ತೇಜಸ್ವಿನಿ ಪ್ರಕಾಶ್ ಮೊದಲು ನಟಿಸಿದ್ದು ಮಸಣದ ಮಕ್ಕಳು ಸಿನಿಮಾದಲ್ಲಿ. ಮೊದಲ ಸಿನಿಮಾಕ್ಕೆ ಉತ್ತಮ ನಟಿ ಪ್ರಶಸ್ತಿ ಪಡೆದ ಈಕೆ ಮುಂದೆ ಗಜ ಸಿನಿಮಾದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ತಂಗಿಯಾಗಿ ಕಾಣಿಸಿಕೊಂಡರು. ಪ್ರೀತಿ ಏಕೆ ಭೂಮಿ ಮೇಲಿದೆ, ಮಾತಾಡ್ ಮಾತಾಡ್ ಮಲ್ಲಿಗೆ, ಗೂಳಿ ಹಟ್ಟಿ, ಸವಿ ಸವಿ ನೆನಪು, ಬಂಧು ಬಳಗ, ಅರಮನೆ, ಜೊತೆಯಾಗಿ ಹಿತವಾಗಿ, ತರಂಗಿಣಿ, ಪ್ರೀತಿ ನೀ ಹೀಂಗ್ಯಾಕೆ, ಕಿಲಾಡಿ ಕೃಷ್ಣ, ನಂದಗೋಕುಲ, ಕಲ್ಯಾಣ ಮಸ್ತು, ನಿತ್ಯ ಜೊತೆ ಸತ್ಯ, ಡಯಾನಾ ಹೌಸ್ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ತೇಜಸ್ವಿನಿ ಪ್ರಕಾಶ್ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ತೆಲುಗಿನ ಪ್ರತಿಕ್ಷಣಂ ಹಾಗೂ ಕಣ್ಣಲೋ ನೀ ರೂಪಮಯೇ ಎಂಬ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ತೇಜಸ್ವಿನಿ ಅವರ ಕಿರುತೆರೆ ಪಯಣ ಶುರುವಾಗಿದ್ದು ನಿಹಾರಿಕಾಳಾಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿಹಾರಿಕಾ ಧಾರಾವಾಹಿಯಲ್ಲಿ ನಿಹಾರಿಕಾ ಆಗಿ ನಟಿಸಿದ್ದ ಈಕೆ ಇದೀಗ ಲಾವಣ್ಯಾ ಆಗಿ ಕಮಾಲ್ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಖಳನಾಯಕಿಯಾಗಿ ಅಬ್ಬರಿಸುತ್ತಿರುವ ಈಕೆಯ ನಟನೆಗೆ ವೀಕ್ಷಕರು ಮನ ಸೋತಿದ್ದು ಸಣ್ಣ ಗ್ಯಾಪ್ ನ ನಂತರ ಮರಳಿದ್ದು ಖುಷಿ ತಂದಿದೆ‌.

ಕಿರುತೆರೆಯ ತೇಜಸ್ವಿನಿ ನಟನೆಗೆ ಬಂದುದು ಬೆಳ್ಳಿತೆರೆಯಿಂದ Read More »

ಎಕ್ಸ್ ಕ್ಯೂಸ್ ಮೀ.. ಸುದೀರ್ಘ ಗ್ಯಾಪ್ ನಂತರ ಮರಳುತ್ತಿದ್ದಾರೆ ಸುನೀಲ್ ರಾವ್

ಬಾಲ ಕಲಾವಿದ ಆಗಿ ಮೋಡಿ ಮಾಡಿದ್ದ ಸುನೀಲ್ ರಾವ್ ಅವರಿಗೆ ಬ್ರೇಕ್ ನೀಡಿದ್ದು ಎಕ್ಸ್ ಕ್ಯೂಸ್ ಮಿ ಸಿನಿಮಾ. ಮುಂದೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದ ಸುನೀಲ್ ರಾವ್ ಮತ್ತೆ ನಟನೆಯ ಮೂಲಕ ಸದ್ದು ಮಾಡುತ್ತಿದ್ದಾರೆ. ಬರೋಬ್ಬರಿ 12 ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ಸುನೀಲ್ ರಾವ್ ತುರ್ತು ನಿರ್ಗಮನ ಸಿನಿಮಾದ ಮೂಲಕ ಕಂ ಬ್ಯಾಕ್ ಮಾಡುತ್ತಿದ್ದಾರೆ. ಹೇಮಂತ್ ಕುಮಾರ್ ನಿರ್ದೇಶನದ ವಿಭಿನ್ನ ಕಥಾಹಂದರವನ್ನೊಳಗೊಂಡ ತುರ್ತು ನಿರ್ಗಮನ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಸಿನಿಪ್ರಿಯರು ಅದನ್ನು ಮೆಚ್ಚಿಕೊಂಡಿದ್ದರು. ಇನ್ನು ಇದೇ ತಿಂಗಳ ಜೂನ್ 24 ರಂದು ಸಿನಿಮಾ ರಿಲೀಸ್ ಆಗಲಿದ್ದು ಅದರಲ್ಲಿ ಮುಖ್ಯ ಭೂಮಿಕೆಯಲ್ಲಿ ಸುನೀಲ್ ರಾವ್ ಕಾಣಿಸಿಕೊಂಡಿದ್ದಾರೆ. “12 ವರ್ಷಗಳ ನಂತರ ಮತ್ತೆ ನಟಿಸುತ್ತಿರುವುದು ಖುಷಿ ತಂದಿದೆ. ಸುದೀರ್ಘ ಗ್ಯಾಪ್ ನ ನಂತರ ಮತ್ತೆ ನಟಿಸಬೇಕು ಎಂದು ಅಂದುಕೊಂಡಾಗ ದೊರೆತ ಸಿನಿಮಾವೇ ತುರ್ತುನಿರ್ಗಮನ. ನಿರ್ದೇಶಕರು ಕತೆ ಹೇಳಿದಾಗ ಖುಷಿ ಆಗಿ ನಾನು ಕೂಡಲೇ ನಟಿಸಲು ಒಪ್ಪಿಕೊಂಡೆ. ನಾನು ಮಾತ್ರ ಅಲ್ಲ, ಕತೆ ಕೇಳಿದ ಯಾರೇ ಆಗಲಿ ನಟಿಸಲು ಅಸ್ತು ಎನ್ನುತ್ತಿದ್ದರು. ಅಷ್ಟರ ಮಟ್ಟಿಗೆ ಕತೆ ಉತ್ತಮವಾಗಿದೆ” ಎಂದು ಹೇಳುತ್ತಾರೆ ಸುನೀಲ್ ರಾವ್. ಇದರ ಜೊತೆಗೆ “ತುಂಬಾ ವರ್ಷಗಳ ನಂತರ ಒಂದು ಉತ್ತಮವಾದ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ತಂದಿದೆ” ಎನ್ನುವ ಸುನೀಲ್ ರಾವ್ ಮುಂದಿನ ದಿನಗಳಲ್ಲಿ ಸಿನಿರಂಗದಲ್ಲಿ ಸಕ್ರಿಯರಾಗುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಎಕ್ಸ್ ಕ್ಯೂಸ್ ಮೀ.. ಸುದೀರ್ಘ ಗ್ಯಾಪ್ ನಂತರ ಮರಳುತ್ತಿದ್ದಾರೆ ಸುನೀಲ್ ರಾವ್ Read More »

ಖಳನಾಯಕರಾಗಿ ಅಬ್ಬರಿಸಲಿದ್ದಾರೆ ಜೆಕೆ

ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ಜೆಕೆ ಆಲಿಯಾಸ್ ಜಯಕೃಷ್ಣ ಆಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಹ್ಯಾಂಡ್ ಸಮ್ ಹುಡುಗನ ಹೆಸರು ಜಯರಾಂ ಕಾರ್ತಿಕ್. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಜಯರಾಂ ಕಾರ್ತಿಕ್ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿ ಅಣ್ಣನಾಗಿ ಕಾಣಿಸಿಕೊಂಡರು. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಜಯರಾಂ ಕಾರ್ತಿಕ್ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು ಜನ ಅವರ ಮೇಲೆ ಇಟ್ಟಿರುವ ಪ್ರೀತಿಗೆ ಉದಾಹರಣೆ. ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲಿಯೂ ಮಿಂಚಿರುವ ಜಯರಾಂ ಕಾರ್ತಿಕ್ ಪರಭಾಷೆಯ ಕಿರುತೆರೆಯಲ್ಲಿಯೂ ಮೋಡಿ ಮಾಡಿದರು. ಹಿಂದಿಯಾ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ಅಬ್ಬರಿಸಿದ ಜಯರಾಂ ಕಾರ್ತಿಕ್ ಅವರಿಗೆ ಆ ಪಾತ್ರ ತಂದುಕೊಟ್ಟ ಜನಪ್ರಿಯತೆ ಅಷ್ಟಿಷ್ಟಲ್ಲ. ಸಿಯಾ ಕೆ ರಾಮ್ ಧಾರಾವಾಹಿಯ ನಂತರ ಹಿಂದಿ ಕಿರುತೆರೆಯಿಂದ ದೂರವಿದ್ದ ಜಯರಾಂ ಕಾರ್ತಿಕ್ ಇದೀಗ 5 ವರ್ಷಗಳ ನಂತರ ಮತ್ತೆ ಮರಳಿ ಬರುತ್ತಿದ್ದಾರೆ. ಹಿಂದಿಯಲ್ಲಿ ಆರಂಭವಾಗಲಿರುವ ‘ಅಲಿಬಾಬಾ ದಸ್ತಾನ್-ಎ-ಕಾಬೂಲ್’ ಎನ್ನುವ ಫ್ಯಾಂಟಸಿ ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಧಾರಾವಾಹಿಯ ಪಾತ್ರದ ಬಗ್ಗೆ ಮಾತನಾಡಿರುವ ಜಯರಾಂ ಕಾರ್ತಿಕ್ “ಇದೀಗ ಮತ್ತೊಮ್ಮೆ ಖಳನಾಯಕನಾಗಿ ನಿಮ್ಮನ್ನು ರಂಜಿಸಲು ಬರುತ್ತಿದ್ದೇನೆ. ಇಲ್ಲಿಯ ತನಕ ನಾನು ನಿರ್ವಹಿಸಿರುವ ಪಾತ್ರಗಳಿಗಿಂತ ಇದು ಭಿನ್ನವಾಗಿದೆ. ಆಲಿಬಾಬ ಮತ್ತು ನಲುವತ್ತು ಕಳ್ಳರು ಕಥೆಯಿಂದ ಒಂದು ಸಣ್ಣ ಎಳೆಯನ್ನು ತೆಗೆದುಕೊಂಡು ಅದನ್ನು ಧಾರಾವಾಹಿಯಾಗಿ ನಿರ್ಮಿಸಲಾಗಿದೆ” ಎಂದು ಹೇಳುತ್ತಾರೆ. “ಹಿಂದಿ ಕಿರುತೆರೆಯ ಜನರು ನನ್ನನ್ನು ಸ್ವೀಕರಿಸಿದ್ದಾರೆ. ಇದು ನನ್ನ ಎರಡನೇ ಮನೆ ಹೌದು. ಈ ಕಿರುತೆರೆಯಲ್ಲಿ ಹೊರಗಿನಿಂದ ಬಂದ ನಟರು ನೆಲೆ ನಿಲ್ಲುವುದು ಸುಲಭದ ಮಾತಲ್ಲ. ನನಗೆ ಆ ಅವಕಾಶ ದೊರಕಿದೆ. ಹೊಸ ಧಾರಾವಾಹಿಯ ಮೂಲಕ ಮತ್ತೆ ಹೊಸ ಹವಾ ಸೃಷ್ಟಿ ಮಾಡುತ್ತೇನೆ ಎನ್ನುವ ಭರವಸೆ ನನಗಿದೆ” ಎಂದು ಹೇಳುತ್ತಾರೆ ಜಯರಾಂ ಕಾರ್ತಿಕ್.

ಖಳನಾಯಕರಾಗಿ ಅಬ್ಬರಿಸಲಿದ್ದಾರೆ ಜೆಕೆ Read More »

ತ್ರಿಶೂಲ್ ಪಾತ್ರಕ್ಕೆ ವಿದಾಯ ಹೇಳಿದ ನಿನಾದ್ ಹರಿತ್ಸ

ಕೆ.ಎಸ್. ರಾಮ್ ಜೀ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ರಲ್ಲಿ ನಾಯಕ ತ್ರಿಶೂಲ್ ಆಗಿ ಅಭಿನಯಿಸುತ್ತಿರುವ ನಿನಾದ್ ಹರಿತ್ಸ ಇದೀಗ ಪಾತ್ರದಿಂದ ಹೊರಬಂದಿದ್ದಾರೆ. ಇತ್ತೀಚೆಗಷ್ಟೇ ಬಹುಕಾಲದ ಗೆಳತಿ ರಮ್ಯಾಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ನಿನಾದ್ ಹರಿತ್ಸ ತ್ರಿಶೂಲ್ ಪಾತ್ರದಿಂದ ಹೊರಬಂದಿರುವುದು ಸೀರಿಯಲ್ ವೀಕ್ಷಕರಿಗೆ ಬೇಸರ ನೀಡಿದೆ. ಇದ್ದಕ್ಕಿದ್ದಂತೆ ನಿನಾದ್ ಅವರು ತನ್ನ ಪಾತ್ರಕ್ಕೆ ವಿದಾಯ ಹೇಳಿದ್ದು ಕಾರಣ ಎಲ್ಲೂ ಬಹಿರಂಗಗೊಳಿಸಿಲ್ಲ. ಬಾಲಕಲಾವಿದ ಆಗಿ ಕಿರುತೆರೆ ಪಯಣ ಆರಂಭಿಸಿದ ನಿನಾದ್ ಹರಿತ್ಸ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು ಕಂಡ ಹ್ಯಾಂಡ್ ಸಮ್ ಹುಡುಗ. ಟೈಂ ಪಾಸ್ ತೆನಾಲಿ ಧಾರಾವಾಹಿಯಲ್ಲಿ ಬಾಲಕಲಾವಿದ ಆಗಿ ಕಾಣಿಸಿಕೊಳ್ಳುವ ಮೂಲಕ ನಟನಾ ನಂಟು ಬೆಳೆಸಿಕೊಂಡಿರುವ ನಿನಾದ್ ಮೊದಲ ಬಾರಿ ಬಣ್ಣ ಹಚ್ಚಿದಾಗ ಕೇವಲ ಆರು ವರ್ಷ. ಮುಂದೆ ಒಂದು ಓದಿನ ಸಲುವಾಗಿ ನಟನೆಗೆ ಬ್ರೇಕ್ ಹಾಕಿದ ನಿನಾದ್ ಪದವಿ ಮುಗಿದದ್ದೇ ತಡ ರಂಗಭೂಮಿಯತ್ತ ಮುಖ ಮಾಡಿದರು. ತಕ್ಷ್ ಥಿಯೇಟರ್ಸ್ ಎಂಬ ರಂಗತಂಡದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ನಿನಾದ್ ನಾಟಕಗಳಲ್ಲಿ ನಟಿಸಿದರು. ಮುಂದೆ ಬೇರೆ ಬೇರೆ ನಾಟಕ ತಂಡಗಳಲ್ಲಿ ಗುರುತಿಸಿಕೊಂಡ ನಿನಾದ್ ರಂಗಭೂಮಿಯಲ್ಲಿ ಏಳು ವರ್ಷಗಳ ಕಾಲ ಸಕ್ರಿಯರಾಗಿದ್ದರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಮನೆ ಧಾರಾವಾಹಿಯಲ್ಲಿ ನಾಯಕಿಯ ತಮ್ಮನಾಗಿ ನಟಿಸಿ ಸೈ ಎನಿಸಿಕೊಂಡಿರುವ ನಿನಾದ್ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಳಿ ಹೆಂಡ್ತಿ ಧಾರಾವಾಹಿಯಲ್ಲಿ ನಾಯಕನ ತಂಗಿಯ ಪ್ರಿಯಕರ ಅಗಸ್ತ್ಯ ಆಗಿ ಅಭಿನಯಿಸಿದರು. ಪೋಷಕ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ನಿನಾದ್ ನಾಗಿಣಿ ಧಾರಾವಾಹಿಯ ತ್ರಿಶೂಲ್ ಆಗಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ನ ರಲ್ಲಿ ನಾಯಕನಾಗಿ ಭಡ್ತಿ ಪಡೆದ ನಿನಾದ್ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿ ಆದರು.ಇದೀಗ ಧಾರಾವಾಹಿಯಿಂದ ಹೊರಬಂದಿದ್ದು ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂದು ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.

ತ್ರಿಶೂಲ್ ಪಾತ್ರಕ್ಕೆ ವಿದಾಯ ಹೇಳಿದ ನಿನಾದ್ ಹರಿತ್ಸ Read More »

ಬಾಲಿವುಡ್ ನಲ್ಲಿ ಸದ್ದು ಮಾಡಲಿದೆಯಾ ಹೊಂಬಾಳೆ ಫಿಲಂಸ್

ಕೆಜಿಎಫ್ ಚಿತ್ರದ ನಂತರ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತಾಗಿದೆ. ರಿಲೀಸ್ ಆಗಿ ಒಂದು ವರ್ಷ ಕಳೆದರೂ ಸಿನಿಮಾದ ಕ್ರೇಜ್ ಇನ್ನೂ ಹೋಗಿಲ್ಲ. ಈ ಸಿನಿಮಾದ ಯಶಸ್ಸಿಗೆ ಕಾರಣ ಏನೇ ಇರಬಹುದು ಅಥವಾ ಯಾರೇ ಇರಬಹುದು. ಆದರೆ ಇದೆಲ್ಲ ಸಾಧ್ಯವಾಗಿದ್ದು ಹೊಂಬಾಳೆ ಫಿಲ್ಮ್ಸ್ ಮೂಲಕ. ಪರಭಾಷೆಗಳಲ್ಲಿಯೂ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಹೊಂಬಾಳೆ ಈಗ ಬಾಲಿವುಡ್ ಗೂ ಕಾಲಿಡುತ್ತಿದೆ. ಅಲ್ಲಿಯೂ ಚಿತ್ರ ನಿರ್ಮಾಣ ರೆಡಿಯಾಗಿದೆ. ಬಾಲಿವುಡ್ ನ ಸ್ಟಾರ್ ನಟನ ಜೊತೆ ಮಾತುಕತೆ ನಡೆಸಿದೆ. ಹೀಗಂತ ನಿರ್ಮಾಪಕ ವಿಜಯ್ ಕಿರಗಂದೂರು ಸಂದರ್ಶನದಲ್ಲಿ ಹೇಳಿದ್ದಾರೆ. “ನಾವು ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳನ್ನು ಮಾಡುತ್ತಿದ್ದೇವೆ. ಹಿಂದಿ ಸಿನಿಮಾ ಮಾಡುವ ಯೋಜನೆ ಹೊಂದಿದ್ದೇವೆ. ಸರಿಯಾಗಿ ಹೊಂದಾಣಿಕೆ ಆದರೆ 3,4 ತಿಂಗಳಿನಲ್ಲಿ ಘೋಷಣೆ ಮಾಡುತ್ತೇವೆ. ಚರ್ಚೆ ಆರಂಭಿಕ ಹಂತದಲ್ಲಿ ಇದೆ‌”ಎಂದಿದ್ದಾರೆ. ಹೊಂಬಾಳೆ ಸಂಸ್ಥೆ ಬಾಲಿವುಡ್ ನಲ್ಲಿ ಸಿನಿಮಾ ಮಾಡುತ್ತಿದೆ ಎಂಬ ವಿಚಾರ ಹೊರ ಬರುತ್ತಿದ್ದ ಹಾಗೆ ಶಾರುಖ್ ಖಾನ್ ಹೆಸರು ಕೇಳಿ ಬರುತ್ತಿದೆ. ಸಿನಿಮಾಕ್ಕಾಗಿ ನಿರ್ದೇಶಕರನ್ನು ಹುಡುಕುತ್ತಿರುವುದಾಗಿ ವಿಜಯ್ ಕಿರಗಂದೂರು ತಿಳಿಸಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿರುವ ಹೊಂಬಾಳೆ ತಮಿಳು ಹಾಗೂ ಮಲಯಾಳಂನಲ್ಲಿಯೂ ಚಿತ್ರ ಮಾಡುತ್ತಿದೆ‌.

ಬಾಲಿವುಡ್ ನಲ್ಲಿ ಸದ್ದು ಮಾಡಲಿದೆಯಾ ಹೊಂಬಾಳೆ ಫಿಲಂಸ್ Read More »

ಖಳನಾಯಕಿಯಾಗಿ ಅಬ್ಬರಿಸುತ್ತಿರುವ ಕಾಫಿ ನಾಡಿನ ಕುವರಿ ಆರೋಹಿ ನೈನಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ನಾಯಕಿ ಲಹರಿಯ ಅತ್ತಿಗೆ ಶೋಭಾ ಆಗಿ ಅಭಿನಯಿಸುತ್ತಿದ್ದ ಚಿಕ್ಕಮಗಳೂರಿನ ಚೆಲುವೆ ಇದೀಗ ಖಡಕ್ ವಿಲನ್! ತಾಯಿಯಂಥ ಮನಸ್ಸಿನ ಅತ್ತಿಗೆಯೆಲ್ಲಿ , ಖಡಕ್ ವಿಲನ್ ಎಲ್ಲಿ? ಕಿರುತೆರೆಯ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ಖಳನಾಯಕಿ ಸಾನಿಯಾ ಆಗಿ ಮೋಡಿ ಮಾಡುತ್ತಿರುವ ಆರೋಹಿ ನೈನಾ ಗೆದ್ದಿದ್ದಾರೆ. ಹೌದು, ಕನ್ನಡತಿ ಧಾರಾವಾಹಿಯಲ್ಲಿ ನಟಿ ರಮೋಲಾ ಅವರು ಸಾನಿಯಾ ಆಗಿ ಅಭಿನಯಿಸುತ್ತಿದ್ದರು. ಮುಂದೆ ಕಾರಣಾಂತರಗಳಿಂದ ಅವರು ಪಾತ್ರಕ್ಕೆ ವಿದಾಯ ಹೇಳಿದಾಗ ಆ ಜಾಗಕ್ಕೆ ಬಂದವರೇ ಚಿಕ್ಕಮಗಳೂರಿನ ಚೆಲುವೆ ಆರೋಹಿ ನೈನಾ‌. ಅತ್ತಿಗೆ ಪಾತ್ರದ ಮೂಲಕ ವೀಕ್ಷಕರ ಮನಸ್ಸಲ್ಲಿ ಅಚ್ಚೊತ್ತಿದ್ದ ಆರೋಹಿ ಅವರು ವಿಲನ್ ಆಗಿ ಅಬ್ಬರಿಸಲಿದ್ದಾರೆ ಎಂದಾಗ ವೀಕ್ಷಕರು ಕೂಡಾ ಒಂದು ಕ್ಷಣ ಅವಕ್ಕಾಗಿದ್ದರು. ಆರೋಹಿಗೆ ಇದು ಸಾಧ್ಯನಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಆದರೆ ಇದೀಗ ಅವರು ಆ ಪ್ರಶ್ನೆಗೆ ಸಾಧ್ಯ ಎಂಬ ಉತ್ತರ ನೀಡಿದ್ದಾರೆ. “ಸಾನಿಯಾ ಪಾತ್ರದ ಬಗ್ಗೆ ಹೇಳಬೇಕು ಅಂಥ ಇದ್ರೆ ಆರಂಭದಲಿ ನನಗೆ ತುಂಬಾ ಕಷ್ಟ ಆನ್ನಿಸ್ತಿತ್ತು. ಯಾಕೆಂದರೆ ಬೇರೆಯವರು ಮಾಡಿರುವಂತಹ ಪಾತ್ರ. ಅದಕ್ಕೆ ಜೀವ ತುಂಬುವುದು ಸುಲಭದ ಮಾತಲ್ಲ. ನಿಜಕ್ಕೂ ಸವಾಲಿನ ಕೆಲಸ. ಆರಂಭದಲ್ಲಿ ಪಾತ್ರ ಒಪ್ಪಿಕೊಂಡಾಗ ನನ್ನಿಂದ ಸಾಧ್ಯನಾ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತ್ತು. ಸ್ಕ್ರೀನ್ ಮೇಲೆ ಬರುವ ತನಕವೂ ಭಯವಿತ್ತು. ಒಂದು ಸಾರಿ ಸ್ಕ್ರೀನ್ ಮೇಲೆ ಕಾನ್ಫಿಡೆನ್ಸ್ ಬಂತು” ಎಂದು ಹೇಳುತ್ತಾರೆ ಆರೋಹಿ ನೈನಾ. “ಸಾನಿಯಾ ಪಾತ್ರಧಾರಿಯಾಗಿ ನಾನು ಕಾಣಿಸಿಕೊಂಡಾಗ ನೆಗೆಟಿವ್ ಕಾಮೆಂಟ್ ಗಳು ಕೂಡಾ ಬಂದಿತ್ತು. ವೀಕ್ಷಕರಿಗೂ ನನ್ನನ್ನು ಸ್ವೀಕರಿಸಲು ಸಮಯ ಬೇಕಾಗಿತ್ತು. ಇದೀಗ ನಾನು ಎಲ್ಲಿ ಹೋದರೂ ಸಾನಿಯಾ ಆಗಿ ಗುರುತಿಸಿಕೊಳ್ಳುತ್ತಿದ್ದೇನೆ” ಎಂದು ಸಂತಸ ವ್ಯಕ್ತಪಡಿಸುತ್ತಾರೆ ಆರೋಹಿ. ಇವಳು ಸುಜಾತಾ ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಆರೋಹಿ ನೈನಾ ಗೆ ಹೂಮಳೆಯ ಶೋಭಾ ಪಾತ್ರ ಜನಪ್ರಿಯತೆ ತಂದುಕೊಟ್ಟಿತ್ತು. ಇದೀಗ ಸಾನಿಯಾ ಆಗಿ ನಟಿಸುವ ಮೂಲಕ ಖಳನಾಯಕಿಯಾಗಿ ಭಡ್ತಿ ಪಡೆದಿರುವ ಆರೋಹಿ ನೈನಾ ಬೆಳದಿಂಗಳು ರಾತ್ರಿಲಿ ಎನ್ನುವ ಮ್ಯೂಸಿಕ್ ಆಲ್ಬಂನಲ್ಲಿ ನಟಿಸಿದ್ದಾರೆ.

ಖಳನಾಯಕಿಯಾಗಿ ಅಬ್ಬರಿಸುತ್ತಿರುವ ಕಾಫಿ ನಾಡಿನ ಕುವರಿ ಆರೋಹಿ ನೈನಾ Read More »

ಮಾಯಾಂಗನೆಯಾಗಿ ಕಿರುತೆರೆಗೆ ಮರಳಿದ ಐಶ್ವರ್ಯ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಖಳನಾಯಕಿ ಸೌಂದರ್ಯ ತಂಗಿ ಐಶ್ವರ್ಯ ಆಗಿ ಅಭಿನಯಿಸುತ್ತಿರುವ ಐಶ್ವರ್ಯ ಶಿಂಧೋಗಿ ಹಿರಿತೆರೆ ಮೂಲಕ ನಟನಾ ಪಯಣ ಶುರು ಮಾಡಿದ ಚೆಲುವೆ. ಹೋಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದಿರುವ ಐಶ್ವರ್ಯ ಶಿಂಧೋಗಿ ಬಾಲನಟಿ ಎಂಬ ವಿಚಾರ ಅನೇಕರಿಗೆ ಗೊತ್ತಿಲ್ಲ. ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿರುವ ಐಶ್ವರ್ಯ ಗೆ ಆಗ ಕೇವಲ ಒಂಭತ್ತು ವರ್ಷ. ಮುಂದೆ ಓದಿನ ಸಲುವಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡಿರುವ ಐಶ್ವರ್ಯ ಜಾಕ್ಸನ್ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಲೋಕಕ್ಕೆ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು. ಮುಂದೆ ಸಪ್ನೋಂಕಿ ರಾಣಿ, ರಣತಂತ್ರ, ಮಮ್ಮಿ ಸೇವ್ ಮಿ, ಸಂಯುಕ್ತ 2, ಮಟಾಶ್ ಸಿನಿಮಾಗಳಲ್ಲಿ ಅಭಿನಯಿಸಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ರಲ್ಲಿ ಮಾಯಾಂಗನೆ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಐಶ್ವರ್ಯ ಅಭಿನಯಕ್ಕೆ ಫಿದಾ ಆಗದವರಿಲ್ಲ. ಮಾಯಾಂಗನೆ ಪಾತ್ರ ಮುಗಿದಾಗ ಇಷ್ಟು ಬೇಗ ಮುಗಿಯಿತಾ ಎಂದು ಪ್ರೇಕ್ಷಕರು ಬೇಸರಗೊಂಡಿದ್ದರು. ತದ ನಂತರ ಮಂಗಳಗೌರಿಯಲ್ಲಿ ವಿಲನ್ ಆಗಿ ನಟಿಸುವ ಅವಕಾಶ ಪಡೆದುಕೊಂಡಿರುವ ಐಶ್ವರ್ಯ ಅಲ್ಲಿಯೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು. ಇಂತಿಪ್ಪ ಐಶ್ವರ್ಯ ಇದೀಗ ಮರಳಿ ಬಂದಿದ್ದಾರೆ. ಮಾಯಾಂಗನೆ ಆಗಿ ಮೋಡಿ ಮಾಡಲು ತಯಾರಾಗಿದ್ದಾರೆ. ಮಾಯಾಂಗನೆ ಆಗಿ ಮರಳಿರುವ ಸಂತಸದ ವಿಚಾರವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಇದು ಅಕ್ಷರಶಃ ಕನಸಿನಂತೆ. ನಾಗಿಣಿ 2 ರಲ್ಲಿ ಮಾಯಾಂಗನೆ ಮತ್ತೆ ಬರುತ್ತಿದ್ದಾಳೆ. ಇದಕ್ಕೆ ನೀವೇ ಕಾರಣ. ಮಾಯಾಂಗನೆ ಪಾತ್ರಕ್ಕೆ ನೀವು ತೋರಿಸಿರುವ ಪ್ರೀತಿ ಅಗಾಧವಾದುದು. ಮಾಯಾಂಗನೆ ಪಾತ್ರ ಕೊನೆಗೊಂಡಾಗ ನೀವು ಬೇಸರ ವ್ಯಕ್ತಪಡಿಸಿದ್ದೀರಿ. ಇದೀಗ ಮಾಯಾಂಗನೆ ಮತ್ತೆ ಮರಳಿ ಬರುತ್ತಿರುವುದು ಈ ಪುನರಾಗಮನವನ್ನು ನಾನು ವೀಕ್ಷಕರಿಗೆ ಅರ್ಪಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ ಐಶ್ವರ್ಯ. ಇದರ ಜೊತೆಗೆ “ಮಾಯಾಂಗನೆ ಪಾತ್ರ ನನ್ನ ಬಷ್ಣದ ಬದುಕಿನಲ್ಲಿ ತುಂಬಾ ನೆಚ್ಚಿನ ಪಾತ್ರವೂ ಆಗಿತ್ತು. ಅದು ಕೇವಲ ಪಾತ್ರವಾಗಿರಲಿಲ್ಲ. ನಾನು ಆ ಪಾತ್ರದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೆ. ಇದೀಗ ಮತ್ತೆ ಮಾಯಾಂಗನೆ ಆಗಿ ನಟಿಸುವ ಅವಕಾಶ ಕಲ್ಪಿಸಿದ ಜೀ ಕನ್ನಡ ವಾಹಿನಿಗೂ, ನಿರ್ದೇಶಕ ರಾಮ್ ಜೀ ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರು ಕಡಿಮೆಯೇ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಐಶ್ವರ್ಯ ಶಿಂಧೋಗಿ.

ಮಾಯಾಂಗನೆಯಾಗಿ ಕಿರುತೆರೆಗೆ ಮರಳಿದ ಐಶ್ವರ್ಯ Read More »

ರಾ ರಾ ರಕ್ಕಮ್ಮ ಹಾಡಿಗೆ ಸೊಂಟ ಬಳುಕಿಸಿದ ಅಗ್ನಿಸಾಕ್ಷಿ ಸನ್ನಿಧಿ

ವಿಕ್ರಾಂತ್ ರೋಣ ಸಿನಿಮಾದ ರಾ..ರಾ.. ರಕ್ಕಮ್ಮ ಹಾಡು ಉಂಟು ಮಾಡಿರುವ ಕ್ರೇಜ್ ಅಷ್ಟಿಷ್ಟಲ್ಲ. ಎಲ್ಲರ ಬಾಯಲ್ಲೂ ಅದೇ ಹಾಡು. ಇನ್ನು ರೀಲ್ಸ್ ಮಾಡುವವರಿಗಂತೂ ಹೇಳುವುದೇ ಬೇಡ. ರೀಲ್ಸ್ ಎಂದ ಮೇಲೆ ಅದರಲ್ಲಿ ರಾ ರಾ ರಕ್ಕಮ್ಮ ಹಾಡು ಇರಲೇಬೇಕು. ಇಲ್ಲದಿದ್ದರೆ ರೀಲ್ಸ್ ಮಾಡಿದ್ದ ಸಾರ್ಥಕವಿಲ್ಲ ಎನ್ನುವಷ್ಟರ ಮಟ್ಟಿಗೆ ಆ ಹಾಡು ಹವಾ ಸೃಷ್ಟಿ ಮಾಡಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ಈ ಹಾಡಿಗೆ ರೀಲ್ಸ್ ಮಾಡಿದ್ದು ಅದು ಸಕತ್ ವೈರಲ್ ಆಗಿತ್ತು. ಇದೀಗ ಕಿರುತೆರೆಯ ಗುಳಿಕೆನ್ನೆಯ ಚೆಲುವೆಯ ಸರದಿ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಆಗಿ ಕಿರುತೆರೆಯಲ್ಲಿ ಮನೆ ಮಾತಾಗಿರುವ ವೈಷ್ಣವಿ ಗೌಡ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟೀವ್ ಆಗಿರುವ ವೈಷ್ಣವಿ ಗೌಡ ಅವರು ರೀಲ್ಸ್ ಹಾಕಿದ್ದೇ ತಡ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಬೆಳ್ಳಿ ಚುಕ್ಕಿ ಹಳ್ಳಿ ಹಕ್ಕಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ವೈಷ್ಣವಿ ಗೌಡ ದೇವಿ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದರೂ ಜನಪ್ರಿಯರಾಗಿದ್ದು ಅಗ್ನಿಸಾಕ್ಷಿ ಮೂಲಕ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಆಗಿ ಏಳು ವರ್ಷಗಳ ಕಾಲ ವೀಕ್ಷಕರನ್ನು ರಂಜಿಸುತ್ತಿದ್ದ ವೈಷ್ಣವಿ ಎಂದ ಕೂಡಲೇ ನೆನಪಾಗುವುದು ಸನ್ನಿಧಿ ಪಾತ್ರ. ಮುಂದೆ ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ವೈಷ್ಣವಿ ಬಹುಕೃತ ವೇಷಂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ ಮಗದೊಂದು ಸಿನಿಮಾ ಒಪ್ಪಿಕೊಂಡಿರುವ ವೈಷ್ಣವಿ ಮತ್ತೆ ಕಿರುತೆರೆಗೆ ಮರಳುತ್ತಾರಾ ಎಂದು ಕಾದುನೋಡಬೇಕಾಗಿದೆ.

ರಾ ರಾ ರಕ್ಕಮ್ಮ ಹಾಡಿಗೆ ಸೊಂಟ ಬಳುಕಿಸಿದ ಅಗ್ನಿಸಾಕ್ಷಿ ಸನ್ನಿಧಿ Read More »

ಪರಮ್ ವಾಹ್ ಸ್ಟುಡಿಯೋಸ್ ಸೇರಲಿದ್ದಾರೆ ‘ನಮ್ಮನೆ ಯುವರಾಣಿ’.

‘ನಮ್ಮನೆ ಯುವರಾಣಿ’ ಧಾರವಾಹಿಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಕನ್ನಡಿಗರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದ ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿ ಅದು. ಆರಂಭದಿಂದ ಇಲ್ಲಿಯವರೆಗೂ ಹಲವಾರು ಅಭಿಮಾನಿಗಳನ್ನು ಈ ಧಾರಾವಾಹಿ ಪಡೆದಿದೆ. ಇದರಲ್ಲಿನ ನಟರು ಸಹ ಎಲ್ಲರಿಗೂ ಚಿರಪರಿಚಿತ. ಅದರಲ್ಲೂ ನಾಯಕಿ ಮೀರಾ ಪಾತ್ರದಲ್ಲಿ ನಟಿಸುತ್ತಿರುವ ಅಂಕಿತಾ ಅಮರ್ ಅವರು ಕನ್ನಡ ಕಿರುತೆರೆಯ ಅಚ್ಚುಮೆಚ್ಚು. ಸದ್ಯ ಅವರು ಹಿರಿತೆರೆಯಲ್ಲಿ ದೊಡ್ಡ ಹೆಜ್ಜೆಗಳನ್ನು ಇಡುವತ್ತ ಸಾಗುತ್ತಿದ್ದಾರೆ. ಕನ್ನಡಿಗರ ಕಣ್ಮಣಿಯಾಗಿರುವ ಅಂಕಿತಾ, ಸದ್ಯ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಸಂಸ್ಥೆಯಾದ ‘ಪರಮ್ ವಾಹ್ ಸ್ಟುಡಿಯೋಸ್’ ಜೊತೆಗೆ ಕೈಜೋಡಿಸಲು ಸಜ್ಜಾಗಿದ್ದಾರೆ. ಇವರ ಜನುಮದಿನವಾದ ಮೇ 29ರಂದು ಶುಭಾಶಯ ತಿಳಿಸುತ್ತಾ, ತಮ್ಮ ತಂಡಕ್ಕೆ ಆದರದಿಂದ ಸ್ವಾಗತಿಸಿಕೊಂಡಿದೆ ಪರಮ್ ವಾಹ್ ಸ್ಟುಡಿಯೋಸ್. ಇನ್ನು ಹೆಸರಿಡದ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಅಂಕಿತಾ ಮಿಂಚಲಿದ್ದಾರೆ. ರಕ್ಷಿತ್ ಶೆಟ್ಟಿಯವರ ‘ದಿ ಸೆವೆನ್ ಓಡ್ಸ್’ ಎಂಬ ಸಿನಿ ಬರವಣಿಗೆ ತಂಡದ ಸದಸ್ಯರಲ್ಲಿ ಒಬ್ಬರಾಗಿರುವ, ಚಂದ್ರಜಿತ್ ಬೆಳ್ಳಿಯಪ್ಪ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಲಿರುವ ಈ ಸಿನಿಮಾ ಜೂನ್ ತಿಂಗಳ ಅಂತ್ಯದ ಹೊತ್ತಿಗೆ ಅಧಿಕೃತವಾಗಿ ಘೋಷಣೆಯಾಗಲಿದೆ. ಧಾರವಾಹಿಯ ನಟನೆಯ ಜೊತೆ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದರು ಅಂಕಿತಾ. ಸ್ವತಃ ಹವ್ಯಾಸಿ ಹಾಡುಗಾರ್ತಿಯಾಗಿರುವ ಇವರು, ‘ಎದೆ ತುಂಬಿ ಹಾಡಿದೆನು’ ರಿಯಾಲಿಟಿ ಶೋ ಅನ್ನು ಸರಾಗವಾಗಿ ನಡೆಸಿಕೊಟ್ಟವರು. ಕಿರುತೆರೆಯ ಜೊತೆಗೆ ಹಿರಿತೆರೆಯನ್ನೂ ಸೇರಿರುವ ಇವರು ‘ಅಬ ಜಬ ದಬ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲು ಸಿದ್ದರಾಗಿದ್ದಾರೆ. ‘ಕನ್ನಡ್ ಗೊತ್ತಿಲ್ಲ’ ಸಿನಿಮಾ ಖ್ಯಾತಿಯ ನಿರ್ದೇಶಕ ಮಯೂರ ರಾಘವೇಂದ್ರ ಅವರ ಮುಂದಿನ ಚಿತ್ರವಾದ ‘ಅಬ ಜಬ ದಬ’ದಲ್ಲಿ ಪೃಥ್ವಿ ಅಂಬರ್ ಅವರಿಗೆ ನಾಯಕಿಯಾಗಿ ಅಂಕಿತಾ ಅಮರ್ ನಟಿಸಲಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದರ ನಂತರ ಅಂಕಿತಾ ಪರಮ್ ವಾಹ್ ಕೈಸೇರಲಿದ್ದಾರೆ. ಬಣ್ಣ ಹಚ್ಚುತಾ ನಟಿಸುವ ಜೊತೆಗೆ, ಬಣ್ಣ ಬಣ್ಣದ ಭಾವನೆಗಳನ್ನು ಸಾಲುಗಳ ಮೂಲಕ ಹೊರಹಾಕುವ ಹವ್ಯಾಸವೂ ಇದೇ ಇವರಿಗೆ. ಮಧುರ ಗೀತೆಗಳನ್ನು ಹಾಡುವುದು, ಹಳೆ ನೆನಪುಗಳ ಮೆಲುಕು ಹಾಕುತ್ತಾ ಕವಿತೆ ಸಾಲುಗಳನ್ನು ಬರೆಯುವುದು ಇವರ ನೆಚ್ಚಿನ ಕೆಲಸಗಳಲ್ಲಿ ಒಂದಂತೆ. ಚಂದ್ರಜಿತ್ ಅವರ ಸಿನಿಮಾದಲ್ಲಿ ಅಂಕಿತಾ ಅವರು ನಿರ್ವಹಿಸುವ ಪಾತ್ರವು ಸಹ ಇದೇ ರೀತಿಯದಂತೆ. ತನ್ನ ಪುಟ್ಟ ಲೋಕದಲ್ಲಿ, ಹಳೆಯ ಖುಷಿಯ ಕ್ಷಣಗಳ ಜೊತೆಗೆ ಸದಾ ಸಂತಸವಾಗಿರುವಂತಹ ಪಾತ್ರ. “ನಾನು ಪ್ರತಿನಿತ್ಯ ಇರುವುದಕ್ಕೂ, ಈ ಪಾತ್ರಕ್ಕೂ ಅಪಾರ ಹೋಲಿಕೆಯಿದೆ. ಒಂದು ರೀತಿ ನನ್ನನ್ನೇ ಪಾತ್ರವಾಗಿ ನಟಿಸುವಂತಾಗುತ್ತದೆ. ಸಿನಿಮಾ ನೋಡುವಾಗ ಖಂಡಿತ ಇದು ತಿಳಿಯುತ್ತದೆ” ಎಂದು ಹೇಳುತ್ತಾ ಸಂತಸ ವ್ಯಕ್ತಪಡಿಸುತ್ತಾರೆ ಅಂಕಿತಾ ಅಮರ್.

ಪರಮ್ ವಾಹ್ ಸ್ಟುಡಿಯೋಸ್ ಸೇರಲಿದ್ದಾರೆ ‘ನಮ್ಮನೆ ಯುವರಾಣಿ’. Read More »

Scroll to Top