Karnataka Bhagya

ಕಲೆ/ಸಾಹಿತ್ಯ

ನನ್ನೊಳಗಿನ ಜೀವಕ್ಕಾಗಿ ಜಾಗರೂಕಳಾಗಿದ್ದೇನೆ ಎಂದ ಬಾಲಿವುಡ್ ಬೆಡಗಿ

ಬಾಲಿವುಡ್ ನ ಖ್ಯಾತ ನಟಿ ,ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಹಾಗೂ ಪತಿ ಆನಂದ್ ಅಹುಜಾ ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಹೆರಿಗೆ ಆಗುವ ಸಾಧ್ಯತೆ ಇದ್ದು ಕಳೆದ ತಿಂಗಳು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಐದು ತಿಂಗಳ ಗರ್ಭಿಣಿ ಆಗಿರುವ ಸೋನಂ ಗರ್ಭಾವಸ್ಥೆಯ ಕಷ್ಟಕರ ಸಂದರ್ಭವನ್ನು ಹಂಚಿಕೊಂಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ. “ಸಾಮಾನ್ಯವಾಗಿ ಗರ್ಭಾವಸ್ಥೆಯ ಸಮಯದಲ್ಲಿ ಎದುರಿಸುವ ಕಷ್ಟಗಳ ಕುರಿತು ಯಾರೂ ಮಾತನಾಡುವುದಿಲ್ಲ. ನನಗೆ ಸುಖವಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ಇದರಿಂದ ನನಗೆ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅನೇಕ ಬಾರಿ ಬಾತ್ ರೂಂ ಗೆ ತೆರಳಬೇಕಾಗುತ್ತದೆ. ಆದರೂ ಕೆಲವು ಬಾರಿ ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ನಿದ್ದೆ ಮಾಡುತ್ತೇನೆ. ಈ ಸಮಯದಲ್ಲಿ ಯಾರಿಂದಲೂ ನನ್ನನ್ನು ಎಬ್ಬಿಸಲು ಸಾಧ್ಯವಾಗುವುದಿಲ್ಲ. ನಾನು ಬೆಳಿಗ್ಗೆ ಬೇಗನೆ ಏಳುವ ವ್ಯಕ್ತಿ. ಆದರೆ ಈಗ ಬೆಳಿಗ್ಗೆ 8-30 ಆದರೂ ಹಾಸಿಗೆ ಬಿಟ್ಟು ಏಳುವುದಕ್ಕೆ ಆಗುತ್ತಿಲ್ಲ. ಈ ಸಮಯದಲ್ಲಿ ನಾನು ಡಯೆಟ್ ಮಾಡುತ್ತಿಲ್ಲ. ಈಗ ಆರೋಗ್ಯದಿಂದ ಇರುವುದು ಮುಖ್ಯ. ನನ್ನೊಳಗೆ ಒಂದು ಜೀವ ಇರುವುದರಿಂದ ನಾನು ಜಾಗರೂಕತೆಯಿಂದ ಇರಬೇಕಾಗಿದೆ” ಎಂದಿದ್ದಾರೆ ಸೋನಂ ಕಪೂರ್. ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ ಸೋನಂ. ನಾಲ್ಕು ಕೈಗಳು ನಿನ್ನನ್ನು ಉತ್ತಮವಾಗಿ ಬೆಳೆಸಲು … ಎರಡು ಹೃದಯಗಳು ನಿನಗಾಗಿ ಮಿಡಿಯುತ್ತವೆ… ಒಂದು ಕುಟುಂಬ ನಿನಗೆ ಪ್ರೀತಿ ಹಾಗೂ ಬೆಂಬಲ ನೀಡುತ್ತದೆ.. ನಿನ್ನನ್ನು ಸ್ವಾಗತಿಸಲು ನಾವು ಕಾಯುತ್ತಿದ್ದೇವೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ನನ್ನೊಳಗಿನ ಜೀವಕ್ಕಾಗಿ ಜಾಗರೂಕಳಾಗಿದ್ದೇನೆ ಎಂದ ಬಾಲಿವುಡ್ ಬೆಡಗಿ Read More »

ಬಿಡುಗಡೆಗೆ ಮುಹೂರ್ತವಿಟ್ಟ ರಿಷಬ್ ಶೆಟ್ಟಿ ಯವರ ಮುಂದಿನ ಚಿತ್ರ.

ಕನ್ನಡದಲ್ಲಿ ಸದ್ಯ ಎಲ್ಲ ವರ್ಗದ ಸಿನಿಪ್ರಿಯರನ್ನೂ ಸೆಳೆವಂತ ಒಬ್ಬ ನಟ-ನಿರ್ದೇಶಕನೆಂದರೆ ಅದು ರಿಷಬ್ ಶೆಟ್ಟಿಯವರು. ನಟನೆಯಲ್ಲಿ, ನಿರ್ದೇಶನದಲ್ಲಿ, ಕಥಾರಚನೆಯಲ್ಲಿ ಜೊತೆಗೆ ನಿರ್ಮಾಣದಲ್ಲಿ, ಎಲ್ಲದರಲ್ಲೂ ಎತ್ತಿದ ಕೈ ಎಂದು ಸಾಬೀತು ಮಾಡಿರುವ ಇವರು ಇದೀಗ ತಮ್ಮ ಮುಂದಿನ ಚಿತ್ರದ ಬಿಡುಗಡೆಯ ಭರದಲ್ಲಿದ್ದಾರೆ. ಅದುವೇ ‘ಹರಿಕಥೆ ಅಲ್ಲ ಗಿರಿಕಥೆ’. ಆದರೆ ಈ ಬಾರಿ ರಿಷಬ್ ಶೆಟ್ಟಿ ಕೇವಲ ನಟ ಹಾಗು ನಿರ್ಮಾಪಕ ಮಾತ್ರನಾಗಿ ಕಾಣಿಸಿಕೊಳ್ಳಲಿದ್ದಾರೆ. ಕರಣ್ ಅನಂತ್ ಹಾಗು ಅನಿರುಧ್ ಮಹೇಶ್ ಅವರ ಜೋಡಿ ಈ ಚಿತ್ರದ ಕಥೆಯನ್ನ ಬರೆದು ನಿರ್ದೇಶನವನ್ನು ಕೂಡ ತಾವೇ ಮಾಡಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ, ನಿರ್ದೇಶಕನಾಗಬೇಕೆಂಬ ಕನಸನ್ನ ಹೊತ್ತು ಹೊರಡೋ ಪಯಣದ ಕಥೆಯೇ ಈ ‘ಹರಿಕಥೆ ಅಲ್ಲ ಗಿರಿಕಥೆ’. 2021ರ ಅಂತ್ಯಕ್ಕೂ ಮೊದಲೇ ಸುಮಾರು 90% ಚಿತ್ರೀಕರಣವನ್ನ ಮುಗಿಸಿಕೊಂಡಿದ್ದ ಈ ಸಿನಿಮಾ ಅಳಿದುಳಿದ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ಜೂನ್ 23ರಂದು ಚಿತ್ರ ಚಿತ್ರಮಂದಿರಗಳ ಬೆಳ್ಳಿಪರದೆಯನ್ನ ಸೇರಲಿದೆ. ರಿಷಬ್ ಶೆಟ್ಟಿ ಯವರು ನಾಯಕನಾಗಿ ಕಾಣಿಸಿಕೊಳ್ಳುವ ಈ ಚಿತ್ರದಲ್ಲಿ ‘ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್ ಒಬ್ಬ ನಾಯಕಿ. ಸಿನಿಮಾ ನಟಿಯಗಬೇಕೆಂಬ ಕನಸಿರುವ ಹುಡುಗಿಯೊಬ್ಬಳ ಪಾತ್ರವಂತೆ ಇವರದ್ದು.ಇವರಷ್ಟೇ ಅಲ್ಲದೇ ಚಿತ್ರದಲ್ಲಿ ತಪಸ್ವಿನಿ ಪೂಣಚ್ಚ, ಪ್ರಮೋದ್ ಶೆಟ್ಟಿ, ಹೊನ್ನವಳ್ಳಿ ಕೃಷ್ಣ, ರಘು ಪಾಂಡೇಶ್ವರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸಂದೇಶ್ ನಾಗರಾಜ್ ಹಾಗು ರಿಷಬ್ ಶೆಟ್ಟಿಯವರು ಸೇರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತವಿರಲಿದೆ. ಇದೇ ಬರುವ ಜೂನ್ 23ರಂದು ಬಿಡುಗಡೆಯಾಗಲಿರೋ ಈ ಚಿತ್ರದ ಪ್ರಚಾರ ಕಾರ್ಯಗಳು ಇನ್ನಷ್ಟೇ ಆರಂಭವಾಗಬೇಕಿವೆ.

ಬಿಡುಗಡೆಗೆ ಮುಹೂರ್ತವಿಟ್ಟ ರಿಷಬ್ ಶೆಟ್ಟಿ ಯವರ ಮುಂದಿನ ಚಿತ್ರ. Read More »

ಸ್ಟುಡಿಯೋ ಫೋಟೋ ಹಂಚಿಕೊಂಡ ಯಾಮಿ ಗೌತಮ್

ಬಾಲಿವುಡ್ ನ ಪ್ರತಿಭಾವಂತ ನಟಿಯರಲ್ಲಿ ಯಾಮಿ ಗೌತಮ್ ಕೂಡಾ ಒಬ್ಬರು. ಇತ್ತೀಚೆಗೆ ರಿಲೀಸ್ ಆಗಿರುವ ಅವರ ದಾಸ್ವಿ ಸಿನಿಮಾದ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ. ಇದರ ಜೊತೆಗೆ ತಮ್ಮ ಮೊದಲ ಬಾಲಿವುಡ್ ಸಿನಿಮಾ ” ವಿಕ್ಕಿ ಡೋನರ್” ಸಿನಿಮಾ ರಿಲೀಸ್ ಆಗಿ ದಶಕಗಳು ತುಂಬಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಆಯುಷ್ಮಾನ್ ಖುರಾನಾ ನಾಯಕರಾಗಿ ನಟಿಸಿದ್ದ ಈ ಚಿತ್ರವನ್ನು ಶೂಜಿತ್ ಸರ್ಕಾರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಹತ್ತನೇ ವರ್ಷದಂದು ಯಾಮಿ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ವಿಕ್ಕಿ ಡೋನರ್ ಸಿನಿಮಾಕ್ಕೆ ಆಡಿಷನ್ ನೀಡಿದ್ದ ಸ್ಟುಡಿಯೋಗೆ ಇತ್ತೀಚಿಗೆ ಯಾಮಿ ಹೋಗಿದ್ದರು. ಆ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. “ಎಲ್ಲಾ ಪ್ರಾರಂಭವಾದ ಸ್ಥಳ. ಇಲ್ಲಿ ವಿಕ್ಕಿ ಡೋನರ್ ಸಿನಿಮಾಕ್ಕೆ ಆಡಿಷನ್ ನೀಡುವ ಮೂಲಕ ನನ್ನ ಪಯಣ ಆರಂಭಿಸಿದೆ. ಈ ಸ್ಟುಡಿಯೋಗೆ ಇತ್ತೀಚಿನ ಭೇಟಿಯು ನನ್ನನ್ನು ನೆನಪಿನ ಹಾದಿಗೆ ಕೊಂಡೊಯ್ಯಿತು. ಈ ಪಯಣದ ಸುಂದರ ಕ್ಷಣಗಳು ನೆಮ್ಮದಿ ನೀಡಿತು. ಶೂಜಿತ್ ಸರ್ ಹಾಗೂ ತಂಡಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ವಿಕ್ಕಿ ಡೋನರ್ ಸಿನಿಮಾಕ್ಕೆ ಆಯುಷ್ಮಾನ್ ಖುರಾನಾ ಹಾಗೂ ಯಾಮಿ ತಮ್ಮ ನಟನೆಗೆ ಪ್ರಶಂಸೆ ಪಡೆದಿದ್ದರು. ಸದ್ಯ ಅಭಿಷೇಕ್ ಬಚ್ಚನ್ ಜೊತೆ ನಟಿಸಿದ ದಾಸ್ವಿ ಸಿನಿಮಾ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಿದೆ.

ಸ್ಟುಡಿಯೋ ಫೋಟೋ ಹಂಚಿಕೊಂಡ ಯಾಮಿ ಗೌತಮ್ Read More »

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚಿನ್ನು…

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ನಟಿ ರಶ್ಮಿ ಪ್ರಭಾಕರ್ ನಿಖಿಲ್ ಭಾರ್ಗವ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕನ್ವೆನ್ಷನ್ ಸೆಂಟರ್ ನಲ್ಲಿ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ರಶ್ಮಿ ವಿವಾಹವಾಗಿರುವ ನಿಖಿಲ್ ಜಾಹೀರಾತು ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ರಶ್ಮಿ ನೃತ್ಯ ಪ್ರದರ್ಶನಕ್ಕೆ ಕಾರ್ಯಕ್ರಮಕ್ಕೆ ಹೋದಾಗ ಇಬ್ಬರಿಗೂ ಪರಿಚಯವಾಗಿ ಗೆಳೆತನಕ್ಕೆ ತಿರುಗಿತು. ಲಾಕ್ ಡೌನ್ ಸಂದರ್ಭದಲ್ಲಿ ಇಬ್ಬರು ಸಾಮಾಜಿಕ ಕೆಲಸ ಮಾಡಿದ್ದರು. ನಂತರ ರಶ್ಮಿಗೆ ಪ್ರಪೋಸ್ ಮಾಡಿದ್ದಾರೆ ನಿಖಿಲ್. ಇವರಿಬ್ಬರ ಬಗ್ಗೆ ಮೊದಲೇ ತಿಳಿದಿದ್ದ ಕಾರಣ ಮನೆಯವರು ಸಮ್ಮತಿ ಸೂಚಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಸರಳವಾಗಿ ವಿವಾಹ ಆಗಿದ್ದಾರೆ. ನಟಿಯಾಗಿ ಗಮನ ಸೆಳೆದಿರುವ ರಶ್ಮಿ ಸದ್ಯ ತೆಲುಗಿನಲ್ಲಿ ಕಾವ್ಯಾಂಜಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಮಿಳು ತೆಲುಗು ಕಿರುತೆರೆಗಳಲ್ಲಿ ನಟಿಸಿರುವ ರಶ್ಮಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ವಿವಾಹ ಕಾರ್ಯಕ್ರಮದಲ್ಲಿ ಕಿರುತೆರೆ ಕಲಾವಿದರುಗಳು ಭಾಗಿಯಾಗಿದ್ದು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚಿನ್ನು… Read More »

ರಾಕಿ ಭಾಯ್ ನ ಭೇಟಿಯಾಗ ಬಯಸಿದ ಬಾಲಕ, ಪ್ರತಿಕ್ರಿಯಿಸಿದ ಯಶ್.

ಕೆಜಿಎಫ್ ಒಂದು ಸಿನಿಮಾವಾಗಿ ಉಳಿದಿಲ್ಲ, ಬದಲಾಗಿ ಅದು ಎಷ್ಟೋ ಪ್ರೇಕ್ಷಕರ ಜೀವನದ ಒಂದು ಭಾಗವಾಗಿ ಸೇರಿಕೊಂಡಿದೆ. ಅದರಲ್ಲಿ ಬರೋ ಪಾತ್ರಗಳು ಅಷ್ಟೇ. ಅಭಿಮಾನಿಗಳೆಲ್ಲರ ಮನದಲ್ಲಿ ಮನೆಮಾಡಿ ಕುಳಿತಿದ್ದಾರೆ ಇಲ್ಲಿನ ರಾಕಿ ಭಾಯ್, ಅಧೀರ, ಗರುಡ, ರಮಿಕ ಸೇನ್ ಮುಂತಾದವರು. ಅದರಲ್ಲೂ ರಾಕಿ ಭಾಯ್ ಯುವಪೀಳಿಗೆಗೆ ಆರಾಧ್ಯ ದೈವವಾದಂತಾಗಿದೆ. ಇಂತಹ ಅಭಿಮಾನವೊಂದು ಒಬ್ಬ ಪುಟ್ಟ ಹುಡುಗನಲ್ಲಿ ಕಾಣಸಿಕ್ಕಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರ ಏಪ್ರಿಲ್ 14ರಂದು ಬಿಡುಗಡೆ ಕಂಡಿದೆ. ಪ್ರಪಂಚದಾದ್ಯಂತ ಹಲವರು, ಹಲವು ಕುಟುಂಬಗಳು ಚಿತ್ರಮಂದಿರದೆಡೆಗೆ ಓಡಿ ಚಿತ್ರವನ್ನ ಕಣ್ತುಂಬಿಕೊಂಡಿದ್ದಾರೆ. ಇಂತಹದೆ ಒಂದು ಕುಟುಂಬದ ಮುಗ್ಧ ಮಗುವೊಂದು ಕೆಜಿಎಫ್ ನ ಎರಡನೇ ಅಧ್ಯಾಯವನ್ನ ನೋಡಿಬಂದು ರಾಕಿ ಭಾಯ್ ಅನ್ನ ಭೇಟಿಯಾಗಲೇ ಬೇಕು ಎಂದು ಹಠ ಹಿಡಿದು ಕೂತಿದ್ದಾನೆ. ಚಿತ್ರವನ್ನ ನೋಡಿದ ದಿನದಿಂದ ರಾಕಿ ಭಾಯ್ ಜಪವನ್ನೇ ಮಾಡುತ್ತಿದ್ದಾನಂತೆ ಈ ಕಂದಮ್ಮ. ಹೀಗೆ ಹೇಳುತ್ತಿರೋ ವಿಡಿಯೋ ಒಂದನ್ನ ಮನೆಯವರು ಟ್ವಿಟರ್ ನಲ್ಲಿ ಹಾಕಿಕೊಂಡಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. “ಯಶ್ ಅವರೇ, ಈ ಮಗು ರಾಕಿ ಭಾಯ್ ಅನ್ನು ಭೇಟಿಯಾಗಬೇಕಂತೆ. ಚಿತ್ರ ನೋಡಿದಾಗಿನಿಂದ ಇದನ್ನೇ ಹೇಳುತ್ತಿದ್ದಾನೆ. ರಾಕಿ ಭಾಯ್ ನ ನೋಡಲೇ ಬೇಕು ಎಂದು ಬೇಜಾರಿನಲ್ಲಿ ಕೂತಿದ್ದಾನೆ” ಎಂದು ಬರೆದುಕೊಂಡಿದ್ದಾರೆ. ವಿಶೇಷವೆಂದರೆ, ಈ ವಿಡಿಯೋ ನಮ್ಮ ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ ಅವರನ್ನ ಕೂಡ ತಲುಪಿದೆ. ಟ್ವಿಟರ್ ನಲ್ಲಿ ಯಶ್ ಅವರನ್ನ ಟ್ಯಾಗ್ ಮಾಡಿ ಹಾಕಲಾಗಿದ್ದ ಈ ವಿಡಿಯೋವನ್ನ ಯಶ್ ನೋಡಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. “ಆರಾಮಾಗಿರು ಕಂದ, ನಿನ್ನ ರಾಕಿ ಭಾಯ್ ನೋಡುತ್ತಿದ್ದಾನೆ. ಖುಷಿಯಾಗಿರು. ನಂಗೆ ಬೇಜಾರು ಇಷ್ಟವಾಗಲ್ಲ” ಎಂದು ಟ್ವೀಟ್ ಮಾಡಿದ್ದಾರೆ ರಾಕಿಂಗ್ ಸ್ಟಾರ್. ಯಶ್, ಸಂಜಯ್ ದತ್, ರವೀನ ಟಂಡನ್, ಅಚ್ಯುತ್ ಕುಮಾರ್ ಮುಂತಾದವರು ಬಣ್ಣ ಹಚ್ಚಿರೋ ಕೆಜಿಎಫ್ ಚಾಪ್ಟರ್ 2 ಚಿತ್ರ ತೆರೆಕಂಡು ಸದ್ಯ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ ಹಾಗು ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾ ಸದ್ಯ ಪ್ರಪಂಚದಾದ್ಯಂತದ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಒಟ್ಟುಮಾಡುವ ಭರದಲ್ಲಿ ಸಾಗುತ್ತಿದೆ.

ರಾಕಿ ಭಾಯ್ ನ ಭೇಟಿಯಾಗ ಬಯಸಿದ ಬಾಲಕ, ಪ್ರತಿಕ್ರಿಯಿಸಿದ ಯಶ್. Read More »

ಬದುಕಲು ಕಲ್ಲಿಗೆ ರೂಪ ಕೊಡುತ್ತಿದ್ದ ಶಿಲ್ಪಿ ಈಗ ಪ್ರಪಂಚ ಹೆಮ್ಮೆಯಿಂದ ಗುರುತಿಸುವ ಅದ್ಭುತ ಸಂಗೀತಗಾರ.

‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಮಾತಿದೆ. ಕಷ್ಟ ಪಟ್ಟರೇನೇ ಕೊನೆಗೆ ಯಶಸ್ಸು ಸಿಗೋದು. ಈ ಮಾತಿಗೆ ಸರಿಹೊಂದುವಂತ ಒಂದು ನಿದರ್ಶನ ನಮ್ಮ ರವಿ ಬಸ್ರುರು. ಸದ್ಯ ‘ಕೆಜಿಎಫ್’ ಎಂಬ ಯಶೋಗಾಥೆಯ ಒಂದು ಪ್ರಮುಖ ಅಂಗವಾಗಿರೋ ಇವರು, ಒಂದು ಕಾಲದಲ್ಲಿ ಒಂದೋತ್ತಿನ ಊಟಕ್ಕೂ ಒದ್ದಾಡಿದವರು. ಇಂದು ಯಶಸ್ಸಿನ ಸಾಗರದಲ್ಲಿ ತೇಲುತ್ತಿದ್ದರೆ, ಹಿಂದೊಂದು ದಿನ ಅವರು ಪಟ್ಟ ಪರಿಶ್ರಮವೇ ಕಾರಣ ಎಂದು ಹೇಳಬಹುದು. ನಮ್ಮ ಕರಾವಳಿಯ ಕುಂದಾಪುರ ತಾಲೂಕಿನ ಬಸ್ರುರಿನ ಒಂದು ಬಡಕುಟುಂಬದಲ್ಲಿ ‘ಕಿರಣ್’ ಎಂಬ ಹೆಸರಿನಿಂದ ಜನಿಸಿದವರು ರವಿ ಬಸ್ರುರ್. ಚಿಕ್ಕವಯಸ್ಸಿನಲ್ಲೇ ಮನೆಯ ಜವಾಬ್ದಾರಿ ಹೊತ್ತು, ತನ್ನದೇ ಆರ್ಕೆಸ್ಟ್ರಾ ಆರಂಭಿಸಿದ್ದರು. ತನ್ನ ಕಾಲಮೇಲೆ ನಿಲ್ಲಲು, ಹುಟ್ಟೂರನ್ನು ಬಿಟ್ಟು ಬೆಂಗಳೂರು ಸೇರಿದರು. ಬಿಡದಿಯ ಕಲಾಸಂಘವೊಂದರಲ್ಲಿ ಕೆತ್ತನೆ ಕೆಲಸದಲ್ಲಿ ಪರಿಣಿತಿ ಪಡೆದರು. ಮರ ಹಾಗು ಕಲ್ಲಿನ ಶಿಲ್ಪಗಳ ಕೆತ್ತನೆ ಕೆಲಸವನ್ನು ಮಾಡುತ್ತಾ, ದಿನದ ಗಳಿಕೆಯನ್ನು ಪಡೆದು, ರಾತ್ರಿ ಹೊತ್ತಿನಲ್ಲಿ ತನ್ನ ಸಂಗೀತಕ್ಕೆ ಅವಕಾಶ ಹುಡುಕಿ ಹೊರಡುತ್ತಿದ್ದರು. ಹಲವಾರು ವ್ಯರ್ಥ ಪ್ರಯತ್ನಗಳ ನಂತರ ಬೆಂಗಳೂರು ತೊರೆದು ಮುಂಬೈ ಸೇರಿದರು. ಸಿನಿಮಾರಂಗಕ್ಕೆ ಹಾರಬೇಕೆಂದೆನಿಸುವವರಿಗೆ ಮುಂಬೈ ಒಂದು ಅವಾಕಾಶಗಳ ಮಹಾ ಸಮುದ್ರ. ಆದರೆ ಅಲ್ಲಿಯೂ ರವಿ ಅವರದ್ದು ಒಂದೇ ಕಥೆ. ಹಗಲು ಹೊತ್ತಿನಲ್ಲಿ ಕೆತ್ತನೆ ಕೆಲಸದಲ್ಲಿ ದುಡಿದು, ಇರುಳಿನಲ್ಲಿ ಅವಕಾಶಗಳಿಗಾಗಿ ಅಲೆಯುತ್ತಿದ್ದರು. ಅವರ ಕೈಯಲ್ಲಿ ಹುಟ್ಟಿದಂತ ಒಂದಿಷ್ಟು ಕೆತ್ತನೆಗಳು ಇಲ್ಲಿವೆ. ಮುಂಬೈಯಲ್ಲಿ ಒಂದೋತ್ತಿನ ಊಟಕ್ಕೂ ಕಷ್ಟಪಾಡಬೇಕಾಗಿ ಬಂದು ರವಿ ಮರಳಿ ಹುಟ್ಟೂರನ್ನು ಸೇರಿದರು. ಊರಿನವರು ಆಡುತ್ತಿದ್ದ ಕೊಂಕುಮಾತುಗಳೆಲ್ಲ ಒಟ್ಟಾಗಿ ಅವರಲ್ಲಿದ್ದ ತಾನೇನಾದರೂ ಸಾಧಿಸಲೇ ಬೇಕು ಎಂಬ ಹಠ ಹೆಚ್ಚಾಗುತ್ತಾ ಹೋಗಿತ್ತು. ತಮ್ಮ RJ ಸ್ನೇಹಿತನೊಬ್ಬನಿಂದ 92.7 ಬಿಗ್ FM ನಲ್ಲಿ ಸಂಗೀತ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡರು. ಎಲ್ಲರ ಮೆಚ್ಚುಗೆ ಪಡೆದ ರವಿ, ಕನ್ನಡ ಚಿತ್ರರಂಗದಲ್ಲಿನ ಹೆಸರಾಂತ ಸಂಗೀತ ನಿರ್ದೇಶಕರ ಅಡಿಯಲ್ಲಿ ಪ್ರೋಗ್ರಾಮರ್ ಆಗಿ ಸೇರಿಕೊಂಡರು. ಕೆಲಸದ ಜೊತೆಗೆ ಅನುಭವವನ್ನು ತನ್ನದಾಗಿಸಿಕೊಳ್ಳುತ್ತಾ ಚಿತ್ರರಂಗದ ಬಗೆಗಿನ ತನ್ನ ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳುತ್ತಿದ್ದರು ರವಿ. ಈ ಹಿಂದೆಯೇ ಹಲವಾರು ಆಲ್ಬಮ್ ಸಾಂಗ್ ಗಳನ್ನು ಪ್ರಯತ್ನಿಸಿದ್ದ ರವಿಗೆ, ಹೇಳಿಕೊಳ್ಳುವಷ್ಟು ಯಾವುದು ಕೈ ಹಿಡಿದಿರಲಿಲ್ಲ. ಆದರೆ ಈ ಬಾರಿ ರವಿಯ ನಿಪುಣತೆ ಅವರನ್ನ ಸಣ್ಣ ಪುಟ್ಟ ಸಿನಿಮಾಗಳೆಡೆಗೆ ಸೆಳೆಯುವಂತೆ ಮಾಡಿತ್ತು. ಹಲವಾರು ಸಿನಿಮಾಗಳಿಗೆ ಸಂಗೀತ ನೀಡಿದ್ದರು, ರವಿ ಬಸ್ರುರ್ ಅವರನ್ನ ನಾಡಿಗೆ ಪರಿಚಯವಾಗುವಂತೆ ಮಾಡಿದ್ದು 2014ರಲ್ಲಿ ಮೂಡಿಬಂದ ಪ್ರಶಾಂತ್ ನೀಲ್ ಅವರ ‘ಉಗ್ರಂ’. ಹೆಸರು ಮಾತ್ರವಲ್ಲದೆ ಪ್ರಶಸ್ತಿಗಳು ಸಹ ಇವರನ್ನ ಹುಡುಕಿಕೊಂಡು ಬರುವಂತೆ ಮಾಡಿತ್ತು ಈ ಚಿತ್ರ. ನಂತರ ಓಡುತ್ತಲೇ ಹೊರಟ ರವಿಯವರ ಸಂಗೀತ ಬಂಡಿ, ಹಿಂತಿರುಗಿ ನೋಡಲೇ ಇಲ್ಲ. ಕುಂದಗನ್ನಡದ ‘ಗರ್ ಗರ್ ಮಂಡ್ಲ’, ‘ಬಿಲಿಂಡರ್’ ಚಿತ್ರಗಳನ್ನ ನಿರ್ದೇಶಿಸಿ, ಸಂಗೀತ ಕೂಡ ನೀಡಿದ್ದರು. ತುಳು ಸಿನಿಮಾಗಳಾದ, ‘ಎಕ್ಕ ಸಕ’, ‘ಜಸ್ಟ್ ಮದುವೆಲ್ಲಿ’ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದರು. ಕನ್ನಡ ಚಿತ್ರರಂಗದಲ್ಲಿ ಉಗ್ರಂ ನಿಂದ ಆರಂಭಿಸಿ, ‘ಕರ್ವ’, ‘ಅಂಜನೀಪುತ್ರ’, ‘100’,’ಮದಗಜ’ ಮಾತ್ರವಲ್ಲದೆ ಈಗ ಎಲ್ಲೆಡೆ ಸದ್ದು ಮಾಡುತ್ತಿರೋ ‘ಕೆಜಿಎಫ್ ಚಾಪ್ಟರ್ 1’ ಹಾಗು ‘ಕೆಜಿಎಫ್ ಚಾಪ್ಟರ್ 2’ ಚಿತ್ರಗಳಿಗೂ ಇವರದ್ದೇ ಸಂಗೀತ. ಇದೆಲ್ಲದರ ನಡುವೆ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಅವರ ‘ಅಂತಿಮ್: ದಿ ಫೈನಲ್ ಟ್ರುಥ್’ ಚಿತ್ರಕ್ಕೂ ಸಂಗೀತ ನೀಡಿದ್ದಾರೆ ರವಿ ಬಸ್ರುರ್. ಮುಂದೆ ಬರಲಿರುವಂತ ಬಹು ನಿರೀಕ್ಷಿತ ಪಾನ್-ಇಂಡಿಯನ್ ಚಿತ್ರಗಳಾದ, ‘ಸಲಾರ್’ ಹಾಗು ‘ಕಬ್ಜ’ ಚಿತ್ರದಲ್ಲೂ ಸಹ ಇವರ ಸಂಗೀತವೇ ಸದ್ದು ಮಾಡಲಿದೆ. ಸದ್ಯ ಭಾರತದಾದ್ಯಂತ ಎಲ್ಲ ಕನ್ನಡ, ತಮಿಳು, ತೆಲುಗು,ಹಿಂದಿ ಹಾಗು ಮಲಯಾಳಂ ಭಾಷೆಗಳಲ್ಲೂ ಬಹುಬೇಡಿಕೆಯಲ್ಲಿರುವ ಇವರು ಒಮ್ಮೆ ಕಷ್ಟಗಳ ಸಾಲಿನಲ್ಲೇ ಮುಳುಗೆದ್ದವರು. ಇಂದು ಜನಮನ ಕೆಡಿಸುವಂತ ಸಂಗೀತವನ್ನ ಎಲ್ಲೆಡೆ ನೀಡುತ್ತಿರುವವರು, ಹಿಂದೊಂದು ದಿನ ಅದ್ಭುತ ಶಿಲ್ಪಗಳನ್ನ ಕೆತ್ತಿ, ತನ್ನ ದಿನದೂಡುತ್ತಿದ್ದವರು. ಪರಿಶ್ರಮದ ಕೊನೆ ಫಲಿತಾಂಶ ಯಶಸ್ಸಿನ ಸಡಗರ ಎಂಬ ಮಾತಿಗೆ ಒಂದೊಳ್ಳೆ ಉದಾಹರಣೆ ನಮ್ಮ ರವಿ ಬಸ್ರುರು.

ಬದುಕಲು ಕಲ್ಲಿಗೆ ರೂಪ ಕೊಡುತ್ತಿದ್ದ ಶಿಲ್ಪಿ ಈಗ ಪ್ರಪಂಚ ಹೆಮ್ಮೆಯಿಂದ ಗುರುತಿಸುವ ಅದ್ಭುತ ಸಂಗೀತಗಾರ. Read More »

ಕೆಜಿಎಫ್ ಅಭಿಮಾನಿಗಳಿಗೆ ಮತ್ತೊಂದು ಸಂತಸ.

ಮೊದಲನೇ ಅಧ್ಯಾಯ ಹುಟ್ಟಿಸಿದ ನಿರೀಕ್ಷೆಗಳಿಗೆ, ಎರಡನೇ ಅಧ್ಯಾಯ ಪಟಾಕಿ ಹಚ್ಚಿದೆ. ಚಾಪ್ಟರ್ 1 ನೀಡಿದಂತ ಸಂತಸವನ್ನ ಹತ್ತು ಪಟ್ಟು ಹೆಚ್ಚಿಸಿದೆ ಚಾಪ್ಟರ್ 2. ಬಿಡುಗಡೆಯಾದ ಮೊದಲ ವಾರದೊಳಗೆ 700ಕೋಟಿ ದಾಟಿ ದಾಖಲೆ ಬರೆದಂತ ಚಿತ್ರ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2. ಬಿಡುಗಡೆಯಾಗಿ ಹದಿನೈದನೆ ದಿನದಂದು ಪ್ರಪಂಚದಾದ್ಯಂತ 900 ಕೋಟಿಗೂ ಹೆಚ್ಚು ಗಳಿಕೆ ಕಂಡು ಸಾವಿರ ಕೋಟಿಯ ಕ್ಲಬ್ ಸೇರೋ ಭರದಲ್ಲಿದೆ. ಇಷ್ಟೆಲ್ಲಾ ದಾಖಲೆ ಬರೆದು ಅಭಿಮಾನಿಗಳಲ್ಲಿ ಹರ್ಷೋದ್ಗಾರ ಹುಟ್ಟು ಹಾಕಿದ ಚಿತ್ರದಿಂದ ಮತ್ತೊಂದು ಸುದ್ದಿ ಹೊರಬಂದಿದೆ. ಅದುವೇ ಒಟಿಟಿ ಬಿಡುಗಡೆಯ ಬಗ್ಗೆ. ಕೆಜಿಎಫ್ ಚಾಪ್ಟರ್ 1 ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಒಟಿಟಿ ಮುಖ ಕಂಡಿತ್ತು. ಬಿಡುಗಡೆಯಾದ ಕೇವಲ ಒಂದು ತಿಂಗಳೊಳಗೆ ಚಿತ್ರ ಪ್ರೈಮ್ ವಿಡಿಯೋನಲ್ಲಿ ಲಭ್ಯವಾಗಿತ್ತು. ಅಲ್ಲದೆ ಕಲರ್ಸ್ ಕನ್ನಡ ವಾಹಿನಿಯ ಮೂಲಕ ದೂರದರ್ಶನದ ವೀಕ್ಷಕರನ್ನ ತಲುಪಿತ್ತು ಮೊದಲನೇ ಅಧ್ಯಾಯ. ಇದೀಗ ಎರಡನೇ ಅಧ್ಯಯವು ಸಹ ಅದೇ ಮಾರ್ಗದಲ್ಲಿ ನಡೆಯುವಂತೆ ಕಾಣುತ್ತಿದೆ. ಏಪ್ರಿಲ್ 14ಕ್ಕೆ ತೆರೆಕಂಡಿರುವಂತ ಈ ಸಿನಿಮಾ ಬಿಡುಗಡೆಯಾದ ಒಂದು ತಿಂಗಳೊಳಗೆ, ಒಟಿಟಿ ಸೇರಲಿದೆ. ಅಧಿಕೃತ ಘೋಷಣೆ ಇನ್ನು ಬಾಕಿಯಿದ್ದರು, ಮೂಲಗಳ ಪ್ರಕಾರ ಚಿತ್ರ ಮೇ ತಿಂಗಳ 13ನೇ ತಾರೀಕು ನಡುರಾತ್ರಿ 12ಗಂಟೆಯಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಲು ಸಿಗಲಿದೆ. ಚಿತ್ರದ ದೂರದರ್ಶನದ ಹಕ್ಕುಗಳನ್ನು(Satelite Rights) ಜೀ(zee) ವಾಹಿನಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಕನ್ನಡ, ತಮಿಳು, ತೆಲುಗು ಹಾಗು ಮಲಯಾಳಂ ಭಾಷೆಗಳಲ್ಲಿ ಕ್ರಮವಾಗಿ, ಜೀ ಕನ್ನಡ, ಜೀ ತಮಿಳ್, ಜೀ ತೆಲುಗು ಹಾಗು ಜೀ ಕೇರಳಮ್ ವಾಹಿನಿಗಳಲ್ಲಿ ತನ್ನ ಮೊದಲ ದೂರದರ್ಶನದ ಪ್ರದರ್ಶನ ಕಾಣಲಿದೆ ಕೆಜಿಎಫ್ ಚಾಪ್ಟರ್ 2. ಚಿತ್ರಮಂದಿರಗಳಲ್ಲಿ ಸಾವಿರ ಕೋಟಿಯೇಡೆಗೆ ಸಾಗುತ್ತಿರೋ ಸಿನಿಮಾ, ಡಿಜಿಟಲ್ ಹಕ್ಕುಗಳ ಗಳಿಕೆಯಲ್ಲು ಕಡಿಮೆಯೇನಿಲ್ಲ. ಸದ್ಯ ಕೇಳಿಬರುತ್ತಿರೋ ಸುದ್ದಿಗಳ ಪ್ರಕಾರ ಕೆಜಿಎಫ್ ಚಾಪ್ಟರ್ 2 ಚಿತ್ರದ ಎಲ್ಲ ಭಾಷೆಯ ಒಟಿಟಿ ಹಕ್ಕುಗಳ ಒಟ್ಟು ಮೊತ್ತ ಬರೋಬ್ಬರಿ 320 ಕೋಟಿ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ, ರಾಕಿಂಗ್ ಸ್ಟಾರ್ ಯಶ್ ನಾಯಕತ್ವದಲ್ಲಿ ಮೂಡಿಬಂದಿರೋ ಈ ಚಿತ್ರ ಹುಟ್ಟಿಸಿರೋ ತೂಫಾನ್ ಅನ್ನು ತಡೆಯೋರೆ ಇಲ್ಲವಾಗಿದೆ. ಸಂಜಯ್ ದತ್, ರವೀನ ತಂಡನ್, ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್ ಮುಂತಾದವರ ನಟನೆ ಸಿನಿಮಾದ ಮೌಲ್ಯವನ್ನ ಇನ್ನಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ವಿಜಯ್ ಕಿರಗಂದೂರ್ ಅವರ ನೇತೃತ್ವದ ‘ಹೊಂಬಾಳೆ’ ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡ ಈ ಚಿತ್ರ ‘ರಿಚ್ ಗಿಂತ ಹೆಚ್ಚಾಗೆ’ ಕಾಣಿಸಿಕೊಂಡಿದೆ.

ಕೆಜಿಎಫ್ ಅಭಿಮಾನಿಗಳಿಗೆ ಮತ್ತೊಂದು ಸಂತಸ. Read More »

‘ಯುವ’ ರಾಜಕುಮಾರನನ್ನ ತರುತ್ತಿದೆ ಹೊಂಬಾಳೆ.

ನಿಮ್ಮ ಅತ್ಯಂತ ನೆಚ್ಚಿನ ಸಿನೆಮಾ ಸಂಸ್ಥೆ ಯಾವುದು ಎಂದು ಯಾರೇ ಕನ್ನಡಿಗನ ಹತ್ತಿರ ಕೇಳಿದರೂ, ಬಹುಪಾಲು ಉತ್ತರ ಹೇಳೋ ಹೆಸರು, ‘ಹೊಂಬಾಳೆ ಫಿಲಂಸ್’. ಕನ್ನಡಕ್ಕೆ, ಅಲ್ಲಲ್ಲ ಪ್ರಪಂಚದ ಸಿನಿರಂಗಕ್ಕೆ ‘ಕೆಜಿಎಫ್’ನಂತಹ ಚಿನ್ನದ ಗಣಿಯನ್ನ ಕೊಟ್ಟಂತ ಕನ್ನಡಿಗರ ಹೆಮ್ಮೆ, ‘ಹೊಂಬಾಳೆ ಫಿಲಂಸ್’. ಇದೀಗ ಹೊಸದೊಂದು ಹೆಜ್ಜೆಯನ್ನ ಈ ದಿಗ್ಗಜ ಸಂಸ್ಥೆ ಇಡುತ್ತಿದೆ. ರಾಜ್ ಕುಟುಂಬ ಕನ್ನಡಿಗರೆಲ್ಲರ ನೆಚ್ಚಿನ ಸಿನಿಬಳಗ ಎಂದೇ ಹೇಳಬಹುದು. ರಾಜಕುಮಾರ್ ಅವರಿಂದ ಆರಂಭವಾದ ಇವರ ಕಲಾಸೇವೆ ಇದೀಗ 3ನೇ ಪೀಳಿಗೆಯಿಂದ ಮುಂದುವರೆಯುತ್ತಿದೆ. ರಾಜಕುಮಾರ್ ಹಾಗು ಅವರ ಮಕ್ಕಳಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಮುಂತಾದವರು ಕನ್ನಡ ಸಿನಿರಂಗಕ್ಕೆ ಕೊಟ್ಟಂತ ಕೊಡುಗೆ ಅಪಾರ. ಸದ್ಯ ಈ ಕಲಾದೋಣಿಯನ್ನ ಮುಂದೂಡಿಕೊಂಡು ಹೋಗಲು ಧನ್ಯ ರಾಮಕುಮಾರ್, ವಿನಯ್ ರಾಜಕುಮಾರ್ ಸಜ್ಜಾಗಿ ನಿಂತಿದ್ದಾರೆ. ಇವರೊಂದಿಗೆ ಇದೀಗ ರಾಘವೇಂದ್ರ ರಾಜಕುಮಾರ್ ಅವರ ಎರಡನೇ ಕುಡಿ, ಯುವ ರಾಜಕುಮಾರ್ ಕೂಡ ಸೇರಿಕೊಳ್ಳಲಿದ್ದಾರೆ. ‘ಹೊಂಬಾಳೆ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಯುವ ರಾಜಕುಮಾರ್ ಚಿತ್ರರಂಗದ ಮೆಟ್ಟಿಲನ್ನ ಏರಲಿದ್ದಾರೆ. ಏಪ್ರಿಲ್ 27, ಬೆಳಿಗ್ಗೆ 9:50ಕ್ಕೆ ಅಧಿಕೃತವಾಗಿ ಹೊಸ ಘೋಷಣೆಯೊಂದನ್ನು ಮಾಡುವುದಾಗಿ ‘ಹೊಂಬಾಳೆ ಫಿಲಂಸ್’ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಅದರಂತೆ ಇಂದು(ಏಪ್ರಿಲ್ 27) ಯುವ ರಾಜಕುಮಾರ್ ಅವರನ್ನು ತಮ್ಮ ಸಂಸ್ಥೆಯ ಮೂಲಕ ಲಾಂಚ್ ಮಾಡುವುದಾಗಿ ಸಂತಸದಿಂದ ಹೇಳಿಕೊಂಡಿದ್ದಾರೆ. ರಾಜ್ ಕುಟುಂಬಕ್ಕೂ ಅವರಿಗೂ ಇರುವಂತ ಅಪೂರ್ವ ಅನುಭಂದವನ್ನ ನೆನೆಯುತ್ತ, 3ನೇ ಪೀಳಿಗೆಯನ್ನ ಪರಿಚಯಿಸುತ್ತಿದ್ದಾರೆ ಹೊಂಬಾಳೆ. ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿರುವುದು, ಯಶಸ್ವಿ ನಿರ್ದೇಶಕ ಹಾಗು ಹೊಂಬಾಳೆ ಸಂಸ್ಥೆಗೆ ‘ರಾಜಕುಮಾರ’, ‘ಯುವರತ್ನ’ದಂತಹ ಯಶಸ್ಸುಗಳನ್ನು ದಕ್ಕಿಸಿಕೊಟ್ಟ ಸಂತೋಷ್ ಆನಂದ್ ರಾಮ್ ಅವರು. ಮೂಲಗಳ ಪ್ರಕಾರ ಈ ಕಥೆಯನ್ನ ಪುನೀತ್ ರಾಜಕುಮಾರ್ ಅವರಿಗಾಗಿ ಬರೆಯಲಾಗಿತ್ತಂತೆ.

‘ಯುವ’ ರಾಜಕುಮಾರನನ್ನ ತರುತ್ತಿದೆ ಹೊಂಬಾಳೆ. Read More »

ನೀವೆಲ್ಲರೂ ನನ್ನ ಶಕ್ತಿ ಎಂದ ಅಧೀರ

ದೇಶಾದ್ಯಂತ ಕೆಜಿಎಫ್ ಹವಾ ಜೋರಾಗಿದ್ದು ಚಿತ್ರದ ಗಳಿಕೆ ದಿನೇದಿನೇ ಹೆಚ್ಚುತ್ತಿದೆ. ಪ್ರತಿಯೊಂದು ಪಾತ್ರವೂ ಮನಸೆಳೆದಿದೆ. ಅಧೀರ ಪಾತ್ರ ಕೂಡಾ ಜನರಿಗೆ ಇಷ್ಟವಾಗಿದೆ. ಅಭಿಮಾನಿಗಳ ಈ ಪ್ರೀತಿಗೆ ಅಧೀರ ಪಾತ್ರ ನಿರ್ವಹಿಸಿರುವ ನಟ ಸಂಜಯ್ ದತ್ ಧನ್ಯವಾದ ಸಲ್ಲಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಧೀರ ಪಾತ್ರ ಕೂಡಾ ಒಂದಾಗಿದೆ. ಜನರ ಪ್ರೀತಿಗೆ ಆಭಾರಿಯಾಗಿರುವ ಬಾಲಿವುಡ್ ನ ಮುನ್ನಾಭಾಯಿ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. “ಕೆಲವು ಚಿತ್ರಗಳು ಬೇರೆ ಚಿತ್ರಗಳಿಗಿಂತ ವಿಶೇಷ ಆಗಿರುತ್ತದೆ. ಪ್ರತಿ ಬಾರಿ ನಾನು ಕಂಫರ್ಟ್ ಜೋನ್ ನಿಂದ ತಳ್ಳುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಈ ಸಾಲಿಗೆ ಕೆಜಿಎಫ್ ಚಿತ್ರ ಸೇರುತ್ತದೆ. ನನ್ನ ಸಾಮರ್ಥ್ಯದ ಬಗ್ಗೆ ಈ ಚಿತ್ರ ಅರಿವು ಮೂಡಿಸಿತ್ತು. ಈ ಚಿತ್ರದ ಕೊನೆಯಲ್ಲಿ ಸಿನಿಮಾನೇ ಎಲ್ಲಾ ಎಂಬುದನ್ನು ಅರ್ಥ ಮಾಡಿಸಿದೆ. ಈ ಪಾತ್ರದ ಯಶಸ್ಸು ಪ್ರಶಾಂತ್ ನೀಲ್ ಅವರಿಗೆ ಸಲ್ಲಬೇಕು” ಎಂದಿರುವ ಸಂಜಯ್ ದತ್ ಅಭಿಮಾನಿಗಳಿಗೆ , ಸ್ನೇಹಿತರಿಗೆ, ಹಿತೈಷಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. “ನೀವೆಲ್ಲರೂ ನನ್ನ ಶಕ್ತಿ” ಎಂದಿರುವ ಸಂಜಯ್ ದತ್ ಅವರ ಭಾವನಾತ್ಮಕ ಪೋಸ್ಟ್ ಗೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.

ನೀವೆಲ್ಲರೂ ನನ್ನ ಶಕ್ತಿ ಎಂದ ಅಧೀರ Read More »

‘ಬಾನದಾರಿಯಲ್ಲಿ’ನ ಪಯಣ ಸೇರಿದ ನಟಿಮಣಿಯರು.

ಗೋಲ್ಡನ್ ಸ್ಟಾರ್ ಗಣೇಶ್ ಹಾಗು ಅವರ ಆಪ್ತ ಸ್ನೇಹಿತ ಪ್ರೀತಮ್ ಗುಬ್ಬಿಯವರು ಹೊಸದೊಂದು ಚಿತ್ರಕ್ಕೆ ಒಂದಾಗುತ್ತಿದ್ದಾರೆ ಎಂಬುದು ಸದ್ಯ ಸ್ಯಾಂಡಲ್ವುಡ್ ನ ತಾಜ ಸುದ್ದಿ. ಈಗಾಗಲೇ ‘ಮಳೆಯಲಿ ಜೊತೆಯಲಿ’, ’99’ ಹಾಗು ‘ದಿಲ್ ರಂಗೀಲಾ’ ಚಿತ್ರಗಳಲ್ಲಿ ನಾಯಕ-ನಿರ್ದೇಶಕ ಜೋಡಿಯಾಗಿ ಕಾಣಿಸಿಕೊಂಡಿರುವ ಈ ಇಬ್ಬರು ಇದೀಗ ನಾಲ್ಕನೇ ಬಾರಿಗೆ ಒಂದಾಗುತ್ತಿದ್ದಾರೆ. ಅಪ್ಪು ಅವರು ಹಾಡಿದಂತ ಪ್ರಸಿದ್ಧ ಹಾಡನ್ನ ಗೌರವದಿಂದ ನೆನೆಯುತ್ತ ‘ಬಾನದಾರಿಯಲ್ಲಿ’ ಎಂದೇ ಚಿತ್ರಕ್ಕೆ ನಾಮಕರಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟಿಸಲಿರುವ ಇಬ್ಬರು ನಟಿಯರನ್ನು ಪರಿಚಯಿಸಿದೆ ಚಿತ್ರತಂಡ. ‘ಬೀರಬಲ್’ ಚಿತ್ರದಿಂದ ಸಿನಿಮಾರಂಗಕ್ಕೆ ಕಾಲಿಟ್ಟಂತ ರುಕ್ಮಿಣಿ ವಸಂತ್ ಮೊದಲ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಬೀರಬಲ್: ಫೈಂಡಿಂಗ್ ವಜ್ರಮುನಿ’ ಚಿತ್ರದಿಂದ ನಾಯಕಿಯಾಗಿ ಕಾಣಿಸಿಕೊಂಡ ರುಕ್ಮಿಣಿ ವಸಂತ್, ಸದ್ಯ ಹೇಮಂತ್ ಕುಮಾರ್ ಅವರ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿಯವರಿಗೆ ನಾಯಕಿಯಾಗಿ, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಾದಮೇಲೆ ‘ಬಾನದಾರಿಯಲ್ಲಿ’ ಚಿತ್ರದ ‘ಲೀಲಾ’ ಆಗಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಎರಡನೇ ನಾಯಕಿಯಾಗಿ ಇತ್ತೀಚಿಗಷ್ಟೇ ಬಿಡುಗಡೆಗೊಂಡ ‘ಏಕ್ ಲವ್ ಯ’ ಚಿತ್ರದ ನಾಯಕಿ, ರೀಷ್ಮ ನಾನಂಯ್ಯ ಅವರು ಬಣ್ಣ ಹಚ್ಚಲಿದ್ದಾರೆ. ಪ್ರೇಮ್ ಅವರ ನಿರ್ದೇಶನದಲ್ಲಿ ರಾಣ ಅವರಿಗೆ ನಾಯಕಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ಇವರು ಈ ಚಿತ್ರದಲ್ಲಿ ‘ಕಾದಂಬರಿ’ಯಾಗಿ ಮನಸೆಳೆಯಲು ಸಿದ್ದರಾಗಿದ್ದಾರೆ. ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗೋ ಸಾಧ್ಯತೆಗಳಿದ್ದು, ಚಿತ್ರತಂಡ ತನ್ನ ತಾರಾಗಣದ ಪರಿಚಯವನ್ನ ಪ್ರೇಕ್ಷಕರಿಗೆ ನೀಡುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ನಾಯಕ ನಟರಾಗಿರಲಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಚಿತ್ರದಲ್ಲಿ ಇಬ್ಬರು ನಾಯಕಿಯರಿರಲಿದ್ದಾರೆ. ಪ್ರೀತಮ್ ಗುಬ್ಬಿ ನಿರ್ದೇಶನದ ಈ ಚಿತ್ರ ‘ಶ್ರೀ ವಾರಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ. ವಿ ಹರಿಕೃಷ್ಣ ಅವರ ಸಂಗೀತ ಚಿತ್ರದಲ್ಲಿರಲಿದ್ದು, ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

‘ಬಾನದಾರಿಯಲ್ಲಿ’ನ ಪಯಣ ಸೇರಿದ ನಟಿಮಣಿಯರು. Read More »