Karnataka Bhagya

ಕ್ರೀಡೆ

ನಿಕ್ಕಿ ಗಲ್ರಾನಿ ನಿಶ್ಚಿತಾರ್ಥಕ್ಕೆ ಬಾರದ ಸಂಜನಾ ಗಲ್ರಾನಿ… ಯಾಕೆ ಗೊತ್ತಾ?

ಕಳೆದ ವಾರ ನಟಿ ನಿಕ್ಕಿ ಗಲ್ರಾನಿ ತಮ್ಮ ಬಹುಕಾಲದ ಗೆಳೆಯ ನಟ ಆದಿ ಪಿನಿಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಸ್ನೇಹಿತರು ಹಾಗೂ ಆಪ್ತರು ಹಾಗೂ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ನಿಕ್ಕಿ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ನಿಕ್ಕಿ ಅವರ ಸಹೋದರಿ ಸಂಜನಾ ಗಲ್ರಾನಿ ಅವರ ಅನುಪಸ್ಥಿತಿ ಕಾಣುತ್ತಿತ್ತು. ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ತಿಳಿಸಿರಲಿಲ್ಲ. ಇದು ಉದ್ಯಮದ ಹಲವರಿಗೆ ಸಹೋದರಿಯರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ನಿಕ್ಕಿ ಅವರ ಬದುಕಿನ ಸಂತೋಷದ ಕ್ಷಣಕ್ಕೆ ಸಂಜನಾ ಭಾಗಿಯಾಗಿರಲಿಲ್ಲ. ಆದರೆ ಸಂಜನಾ ಬರದಿರುವುದಕ್ಕೂ ಕಾರಣವಿದೆ. ಸಂಜನಾ ಈಗ ಬೆಂಗಳೂರಿನಲ್ಲಿ ನೆಲೆಸಿದ್ದು ಆಕೆ ಎಂಟು ತಿಂಗಳ ಗರ್ಭಿಣಿ ಹೌದು. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಂಜನಾ ತಂಗಿಯ ನಿಶ್ಚಿತಾರ್ಥಕ್ಕೆ ಹಾಜರಿಯಾಗಲಿಲ್ಲ.

ನಿಕ್ಕಿ ಗಲ್ರಾನಿ ನಿಶ್ಚಿತಾರ್ಥಕ್ಕೆ ಬಾರದ ಸಂಜನಾ ಗಲ್ರಾನಿ… ಯಾಕೆ ಗೊತ್ತಾ? Read More »

ಒಟಿಟಿಗೆ ಕಾಲಿಡಲಿರುವ ವರಣ್ ಧವನ್ ಗೆ ಒಟಿಟಿ ಫ್ಲಾಟ್ ಫಾರ್ಮ್ ಇಷ್ಟ

ಒಟಿಟಿ ಈಗ ಹೆಚ್ಚು ಜನಪ್ರಿಯ ಆಗುತ್ತಿದೆ. ಹೀಗಾಗಿ ತಾರೆಯರು ಈಗ ಒಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಈಗ ಈ ಪಟ್ಟಿಗೆ ನಟ ವರುಣ್ ಧವನ್ ಸೇರ್ಪಡೆಯಾಗಿದೆ. ದೊಡ್ಡ ವೆಬ್ ಸಿರೀಸ್ ನಲ್ಲಿ ನಟಿಸಲಿರುವ ವರುಣ್ ಪ್ರಿಯಾಂಕ ಚೋಪ್ರ ಅಥವಾ ಸಮಂತಾ ಅವರೊಂದಿಗೆ ಒಟಿಟಿಯಲ್ಲಿ ಡೆಬ್ಯುಟ್ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ. ವರುಣ್ ಕೂಡಾ ತಾನು ಒಟಿಟಿಯಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂಬ ಸುಳಿವು ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿರುವ ವರುಣ್ ” ನನಗೆ ಒಟಿಟಿ ಪ್ಲಾಟ್ ಫಾರ್ಮ್ ಇಷ್ಟ. ಸದ್ಯದಲ್ಲಿಯೇ ಆಸಕ್ತಿದಾಯಕ ಕಾರ್ಯಕ್ರಮಗಳು ಬರಲಿವೆ. ನಾನು ಉತ್ಸುಕನಾಗಿದ್ದೇನೆ” ಎಂದಿದ್ದಾರೆ. ಪ್ರಿಯಾಂಕ ಚೋಪ್ರಾ ಹಾಗೂ ರಿಚರ್ಡ್ ಮ್ಯಾಡೆನ್ ನಟಿಸಿರುವ ಅಮೆರಿಕನ್ ಸ್ಪೈ ಥ್ರಿಲ್ಲರ್ “ಸಿಟಾಡೆಲ್ “ನಲ್ಲಿ ಭಾರತೀಯ ಸ್ಪಿನ್ ಆಫ್ ನಲ್ಲಿ ವರುಣ್ ಕಾಣಿಸಿಕೊಳ್ಳಬಹುದು. ಆದರೆ ವರುಣ್ ಅವರನ್ನು ನೋಡಲು ಕಾಯಬೇಕಾಗಿದೆ. ಈ ವರ್ಷ ಶೋ ಬಿಡುಗಡೆ ಆಗುವುದಿಲ್ಲ. ಈ ಶೋ ವಿವರಗಳನ್ನು ವರುಣ್ ನೀಡಿಲ್ಲ. ಈ ಸಿರೀಸ್ ಗಾಗಿ ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರೆ. ಈ ಶೋನಲ್ಲಿ ನಟಿ ಸಮಂತಾ ಕೂಡಾ ನಟಿಸಲಿದ್ದಾರಂತೆ. ಸದ್ಯ “ಜಗ್ ಜಗ್ ಜಿಯೋ” ಹಾಗೂ “ಭೇಲಿಯಾ” ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಒಟಿಟಿಗೆ ಕಾಲಿಡಲಿರುವ ವರಣ್ ಧವನ್ ಗೆ ಒಟಿಟಿ ಫ್ಲಾಟ್ ಫಾರ್ಮ್ ಇಷ್ಟ Read More »

ರಣ್ಬೀರ್ ಪತ್ನಿಯಾಗಿ ರಶ್ಮಿಕಾ??

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಭಾರತದಾದ್ಯಂತ ವಿವಿಧ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಮುಗಿಸಿ ಸದ್ಯ ಬಾಲಿವುಡ್ ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ ರಶ್ಮಿಕಾ. ‘ನ್ಯಾಷನಲ್ ಕ್ರಶ್’ ಎಂದೇ ಖ್ಯಾತಾರಾಗಿದ್ದ ಇವರು ಇದೀಗ ನ್ಯಾಷನಲ್ ಲೆವೆಲ್ನಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಇವರ ಮುಂದಿನ ಚಿತ್ರ ಬಾಲಿವುಡ್ ನ ಸ್ಟಾರ್ ನಟ ರಣ್ಬೀರ್ ಕಪೂರ್ ಜೊತೆಗೆ ಎನ್ನಲಾಗುತ್ತಿದೆ. ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದಿಂದ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಇವರು ತದನಂತರ ಹಿಂತಿರುಗಿ ನೋಡಲೇ ಇಲ್ಲ. ಟಾಲಿವುಡ್ ಕೊಲಿವುಡ್ ಎಲ್ಲದರಲ್ಲೂ ಸೈ ಎನಿಸಿಕೊಂಡು ಬಾಲಿವುಡ್ ನಿಂದಲೂ ಬೇಡಿಕೆ ಪಡೆದವರು. ಸಿದ್ದಾರ್ಥ್ ಮಲ್ಹೋತ್ರ ಅಭಿನಯದ ‘ಮಿಷನ್ ಮಜ್ನು’ ಸಿನಿಮಾದಿಂದ ಬಾಲಿವುಡ್ ಗೆ ಪಾದರ್ಪಣೆ ಮಾಡಿದ ಇವರು, ಸದ್ಯ ಹಿಂದಿ ತೆರೆಗಳ ಮೇಲೆ ಮಿಂಚಲು ಕಾಯುತ್ತಿದ್ದಾರಷ್ಟೇ. ಚಿತ್ರೀಕರಣ ಸಂಪೂರ್ಣವಾಗಿರೋ ‘ಮಿಷನ್ ಮಜ್ನು’ವಿನ ಬೆಳ್ಳಿತೆರೆ ಭೇಟಿಗೆ ಮುಹೂರ್ತ ಇನ್ನು ಗೊತ್ತಾಗಿಲ್ಲ. ಇದಲ್ಲದೆ ತಮ್ಮ ಎರಡನೇ ಹಿಂದಿ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಜೊತೆಗೆ ರಶ್ಮಿಕಾ ಬಣ್ಣ ಹಚ್ಚಲಿದ್ದಾರೆ. ಸದ್ಯದಲ್ಲೇ ಅವರ ಮೂರನೇ ಚಿತ್ರದ ಘೋಷಣೆ ಆಗೋ ಸಾಧ್ಯತೆಯಿದೆ. ‘ಅರ್ಜುನ್ ರೆಡ್ಡಿ’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಅವರು ರಣ್ಬೀರ್ ಕಪೂರ್ ಜೊತೆಗೆ ಸಿನಿಮಾವೊಂದನ್ನು ಮಾಡುತ್ತಿದ್ದು, ‘ಅನಿಮಲ್’ ಎಂದು ಚಿತ್ರಕ್ಕೆ ನಾಮಕರಣ ಮಾಡಲಾಗಿದೆ. ಈ ಹಿಂದೆ ಇದರ ನಾಯಕಿಯಾಗಿ ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ನಟಿಸುವುದೆಂದು ಖಾತ್ರಿಯಾಗಿತ್ತು. ಆದರೆ ಅವರು ಈ ಸಿನಿಮಾದಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಹಾಗಾಗಿ ಅವರ ಜಾಗವನ್ನ ತುಂಬಲು ರಶ್ಮಿಕಾ ಮಂದಣ್ಣನವರನ್ನು ಚಿತ್ರತಂಡದವರು ಕೇಳಿಕೊಂಡಿದ್ದು, ರಶ್ಮಿಕಾ ಅವರು ಕೂಡ ಸಂತಸದಿಂದ ಒಪ್ಪಿದ್ದಾರೆ ಎನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸಿನಿತಂಡದಿಂದ ಅಧಿಕೃತ ಘೋಷಣೆ ಇನ್ನು ಬಾಕಿಯಿದ್ದು, ಈ ವಿಷಯ ಖಾತ್ರಿಯಾಗಿದ್ದೆ ಆದಲ್ಲಿ, ರಶ್ಮಿಕಾ ರಣ್ಬೀರ್ ಕಪೂರ್ ಅವರ ಪತ್ನಿಯಾಗಿ ನಟಿಸಲಿದ್ದಾರೆ.

ರಣ್ಬೀರ್ ಪತ್ನಿಯಾಗಿ ರಶ್ಮಿಕಾ?? Read More »

‘ಏಕ್ ಲವ್ ಯಾ’ ಇನ್ನು ನಿಮಗೆ ಲಭ್ಯ..

ದಶಕಗಳಿಂದ ಕನ್ನಡಿಗರ ಮನದಲ್ಲಿ ಮನೆಮಾಡಿರೋ ಹೆಸರಾಂತ ನಿರ್ದೇಶಕ ‘ಜೋಗಿ’ ಪ್ರೇಮ್ ಅವರ ಇತೀಚಿಗಿನ ಚಿತ್ರ ‘ಏಕ್ ಲವ್ ಯಾ’. ‘ದಿ ವಿಲನ್’ ನಂತರ ಒಂದಷ್ಟು ಸಮಯ ಕಳೆದು ಪ್ರೇಮ್ ಈ ಸಿನಿಮಾ ಮಾಡಿದ್ದರಿಂದ ನಿರೀಕ್ಷೆಗಳು ಹೆಚ್ಚೇ ಇತ್ತು. ಅಂತೆಯೇ ಚಿತ್ರಮಂದಿರಗಳತ್ತ ಜನರನ್ನ ಸೆಳೆಯುವಲ್ಲೂ ಸಿನಿಮಾ ಯಶಸ್ವಿಯಾಗಿತ್ತು. ಈಗ ಚಿತ್ರ ಪ್ರೇಕ್ಷಕರ ಮನೆ-ಮನೆಗಳಲ್ಲಿ ಲಭ್ಯವಾಗಲಿದೆ. ಅದ್ಹೇಗೆ ಅಂದರೆ, ಸಾಮಾನ್ಯ ಉತ್ತರ.. ಒಟಿಟಿ. ಇತ್ತೀಚೆಗೆ ಅತಿ ಹೆಚ್ಚು ಕನ್ನಡ ಸಿನಿಮಾಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಸಂಸ್ಥೆ ‘zee5’. ‘ಏಕ್ ಲವ್ ಯಾ’ ಸಿನಿಮಾ ಕೂಡ ಇವರ ಮಡಿಲಿಗೆ ಸೇರಿದೆ.ತನ್ನ ಹಾಡುಗಳಿಂದ ‘ಮ್ಯೂಸಿಕಲ್ ಬ್ಲಾಕ್ ಬಸ್ಟರ್’ ಎಂಬ ಖ್ಯಾತಿ ಪಡೆದ ಈ ಚಿತ್ರ ಬಿಡುಗಡೆಗೂ ಮುನ್ನವೇ ‘zee5’ ಜೊತೆಗೆ ಒಪ್ಪಂದದಲ್ಲಿತ್ತು ಎನ್ನಲಾಗಿದೆ. ‘ಜೀ ಕನ್ನಡ’ ವಾಹಿನಿಯಲ್ಲೂ ಚಿತ್ರ ಪ್ರಸಾರಗೊಳ್ಳಲಿದ್ದು, ದಿನಾಂಕ ಇನ್ನು ಖಾತ್ರಿಯಾಗಿಲ್ಲ. ಇದೇ ಏಪ್ರಿಲ್ 8ರಿಂದ ‘ಏಕ್ ಲವ್ ಯಾ’ ಚಿತ್ರ zee5 ನಲ್ಲಿ ಲಭ್ಯವಾಗಲಿದೆ. ಪ್ರೇಮ್ಸ್ ಅವರ ಈ ಪ್ರೇಮಕತೆಯನ್ನ ಚಿತ್ರಮಂದಿರಗಳಲ್ಲಿ ನೋಡಲಾಗದ ಪ್ರೇಕ್ಷಕರು ‘zee5’ನಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು. ರಕ್ಷಿತಾ ಪ್ರೇಮ್ ಅವರ ‘ರಕ್ಷಿತಾಸ್ ಫಿಲಂ ಫ್ಯಾಕ್ಟರಿ’ ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡ ಈ ಸಿನಿಮಾದಲ್ಲಿ ರಕ್ಷಿತ ಅವರ ಸಹೋದರ ರಾಣ ನಾಯಕನಟರಾಗಿ ಬಣ್ಣ ಹಚ್ಚಿದ್ದಾರೆ. ಇವರಿಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತ ರಾಮ್ ಹಾಗು ರೀಷ್ಮ ನಾನಯ್ಯಾ ನಟಿಸಿದ್ದು, ಕಾಮಿಡಿ ಕಿಲಾಡಿಯ ಸೂರಜ್, ಪೋಷಕ ನಟರಾದ ಸುಚೇಂದ್ರ ಪ್ರಸಾದ್, ಶಶಿಕುಮಾರ್, ಚರಣ್ ರಾಜ್ ಮುಂತಾದವರು ಪ್ರಮುಖ ಪಾತ್ರಗಳಾಗಿ ಅಭಿನಯಿಸಿದ್ದಾರೆ. ಫೆಬ್ರವರಿ 24ರಂದು ಚಿತ್ರ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮನಸೆಳೆವ ಪ್ರೇಮಕತೆಯಾಗಿ ಹೊರಹೊಮ್ಮಿತ್ತು.

‘ಏಕ್ ಲವ್ ಯಾ’ ಇನ್ನು ನಿಮಗೆ ಲಭ್ಯ.. Read More »

‘ಜೇಮ್ಸ್’ ಜೈಕಾರ ಇನ್ಮುಂದೆ ಇನ್ನೂ ಜೋರು…

ಕರುನಾಡ ಜನತೆಯ ಮನಗೆದ್ದ ‘ಜೇಮ್ಸ್’ ಚಿತ್ರ ಈಗಲೂ ಚಿತ್ರಮಂದಿರಗಳನ್ನ ಜನರಿಂದ ತುಂಬಿಸುತ್ತಿದೆ. ‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿ ಪರಿಪೂರ್ಣ ನಾಯಕನಟನಾಗಿ ಕಣ್ತುಂಬಿಕೊಳ್ಳಲು ರಾಜ್ಯದ ಎಲ್ಲ ಭಾಗಗಳಲ್ಲೂ ಜನರು ಸಾಲುಗಟ್ಟಿ ಚಿತ್ರಮಂದಿರಗಳನ್ನ ಸೇರಿದ್ದರು. ಈಗಲೂ ಸೇರುತ್ತಿದ್ದಾರೆ ಕೂಡ. ಅಪ್ಪು ಅಭಿನಯವನ್ನ, ಆಕ್ಷನ್-ಡಾನ್ಸ್ ಅನ್ನು ಅಪ್ಪಿಕೊಳ್ಳದವರೇ ಇರಲಿಲ್ಲ. ಈಗ ಚಿತ್ರತಂಡ ಸಿನಿಮಾದ ಒಟಿಟಿ ಬಿಡುಗಡೆಯ ವಿಚಾರವನ್ನ ಹೊರಹಾಕಿದೆ. ‘ಭರ್ಜರಿ’ ಖ್ಯಾತಿಯ ಚೇತನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದ ಸಂಪೂರ್ಣ ಚಿತ್ರೀಕರಣಕ್ಕೂ ಮುನ್ನವೇ ಅಪ್ಪು ನಮ್ಮನ್ನೆಲ್ಲ ಅಗಲಿದ್ದರು. ಆದರೂ ಚಿತ್ರತಂಡ ಬಹಳ ಪರಿಶ್ರಮದಿಂದ ಪ್ರೇಕ್ಷಕರೆದುರಿಗೆ ಒಂದು ಸಂಪೂರ್ಣ ಸಿನಿಮಾವಾಗಿ ಚಿತ್ರವನ್ನ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಅಪ್ಪು ಅಗಲಿಕೆಯ ದುಃಖದಲ್ಲೂ, ಹಗಲಿರುಳು ಶ್ರಮಪಟ್ಟು ಅವರ ಜನ್ಮದಿನದಂದೇ ಚಿತ್ರವನ್ನ ಬೆಳ್ಳಿತೆರೆಗೆ ತಂದರು. ಅಭಿಮಾನಿಗಳು ಮಾತ್ರವಲ್ಲದೆ ಕನ್ನಡಿಗರೆಲ್ಲರೂ ಸಿನಿಮಾವನ್ನ ಕೊಂಡಾಡಿ ಸಂಭ್ರಮಿಸಿದ್ದರು. ಈಗ ಚಿತ್ರದ ಒಟಿಟಿ ಬಿಡುಗಡೆಗೆ ಮುಹೂರ್ತ ಗೊತ್ತಾಗಿದೆ. ಏಪ್ರಿಲ್ 14ರಂದು ‘ಸೋನಿ ಲಿವ್’ನಲ್ಲಿ ಸಿನಿಮಾ ಬಿಡುಗಡೆಯಗಲಿದ್ದು, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳ್, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲೂ ನೋಡಲು ಲಭ್ಯವಾಗಲಿದೆ. ಅಭಿಮಾನಿಗಳ ಅಭಿಮಾನ ಮಾತ್ರವಲ್ಲದೆ ಬಾಕ್ಸ್-ಆಫೀಸ್ ನಲ್ಲೂ ‘ಜೇಮ್ಸ್’ ಧೂಳೆಬ್ಬಿಸಿತ್ತು. ಕಿಶೋರ್ ಪತಿಕೊಂಡ ಅವರ ‘ಕಿಶೋರ್ ಪ್ರೊಡಕ್ಷನ್ಸ್’ ನಿರ್ಮಾಣದಲ್ಲಿ ಮೂಡಿಬಂದ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾದರೆ, ರಂಗಾಯಣ ರಘು, ಚಿಕ್ಕಣ್ಣ, ತಿಲಕ್, ಶರತ್ ಕುಮಾರ್, ಶ್ರೀಕಾಂತ್ ಮೊದಲಾದ ದೊಡ್ಡ ದೊಡ್ಡ ಹೆಸರುಗಳು ತಾರಾಗಣದಲ್ಲಿತ್ತು. ಪ್ರಪಂಚಾದಾದ್ಯಂತ ಬಿಡುಗಡೆಯಗಿದ್ದ ಸಿನಿಮಾ ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು.

‘ಜೇಮ್ಸ್’ ಜೈಕಾರ ಇನ್ಮುಂದೆ ಇನ್ನೂ ಜೋರು… Read More »

ಕೊನೆಗೂ ಬಿಡುಗಡೆಗೆ ಮುಹೂರ್ತವಿಟ್ಟ ‘ವಿಕ್ರಾಂತ್ ರೋಣ’

ಮಾಡಿರೋ ಎರಡೇ ಚಿತ್ರಗಳಿಂದ ಜನರಲ್ಲಿ ತನ್ನ ಬಗ್ಗೆ ಹೊಸದೊಂದು ಭರವಸೆ ಹುಟ್ಟಿಸಿರೋ ನಿರ್ದೇಶಕರು ಅನೂಪ್ ಭಂಡಾರಿ. ದಶಕಗಳಿಂದ ಕನ್ನಡ ಚಿತ್ರರಂಗದ ‘ಅಭಿನಯ ಚಕ್ರವರ್ತಿ’ ಆಗಿರೋ ಬಾದ್ಶಾಹ್ ಕಿಚ್ಚ ಸುದೀಪ. ಇವರಿಬ್ಬರು ಜೊತೆಯಾಗಿ ಒಂದು ಸಿನಿಮಾ ಮಾಡಲಿದ್ದಾರೆ ಎಂದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ‘ರಂಗಿತರಂಗ’, ‘ರಾಜರಥ’ದಂತಹ ಚಿತ್ರಗಳಿಂದ ಜನರ ಮನಸೆಳೆದ ನಿರೂಪ್ ಭಂಡಾರಿ ಅವರ ಮುಂದಿನ ಚಿತ್ರ ‘ವಿಕ್ರಾಂತ್ ರೋಣ’ ಚಿತ್ರ ಸದ್ಯ ಭಾರತದಾದ್ಯಂತ ಬಹುನಿರೀಕ್ಷಿತ ಚಿತ್ರವಾಗಿದೆ. ಬಹುಕಾಲದ ಹಿಂದೆಯೇ ಸೆಟ್ಟೇರಿದ್ದ ಈ ಸಿನಿಮಾ ಕೊನೆಗೂ ಬೆಳ್ಳಿತೆರೆ ಏರುವ ಗಳಿಗೆಯನ್ನ ಚಿತ್ರತಂಡ ಹೇಳಹೊರಟಿದ್ದಾರೆ. ಚಿತ್ರೀಕರಣ ಪ್ರಾರಂಭವಾದಾಗಿನಿಂದ ಚಿತ್ರತಂಡದವರು ಒಂದಲ್ಲ ಒಂದು ವಿಡಿಯೋ ಬಿಡುಗಡೆಗೊಳಿಸಿ ಪ್ರೇಕ್ಷಕರ ಕುತೂಹಲವನ್ನ ಹೆಚ್ಚಿಸುತ್ತಲೇ ಇದ್ದರು. ಮೊದಲು ‘ಫಾಂತಮ್’ ಎಂದಿದ್ದ ಸಿನಿಮಾ ಹೆಸರನ್ನು ‘ವಿಕ್ರಾಂತ್ ರೋಣ’ ಎಂದು ಬದಲಾಯಿಸಲಾಯಿತು. ‘ಭುರ್ಜ್ ಖಲಿಫಾ’ದಲ್ಲಿ ಸಿನಿಮಾದ ಟೀಸರ್ ಬಿಡುಗಡೆಗೊಳಿಸಿ ಪ್ರಪಂಚದೆಲ್ಲೆಡೆಯ ಗಮನವನ್ನ ಸೆಳೆದಿದ್ದರು. ಕೋರೋನ ಕಾರಣದಿಂದ ಚಿತ್ರದ ಬೆಳ್ಳಿತೆರೆಯ ಭೇಟಿ ಮುಂದೆ ಹೋಗುತ್ತಲೇ ಇತ್ತು. ಇದೀಗ ಇದೇ ಏಪ್ರಿಲ್ 2ರಂದು ಟೀಸರ್ ಒಂದರ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನ ಹೇಳಲಿದ್ದಾರೆ ಚಿತ್ರತಂಡ. ಏಪ್ರಿಲ್ 2ರ ಬೆಳಿಗ್ಗೆ 9:55ಕ್ಕೆ ಬಿಡುಗಡೆಯಾಗಲಿರೋ ಟೀಸರ್ ಒಂದು ಚಿತ್ರದ ಬಿಡುಗಡೆ ದಿನಾಂಕವನ್ನ ಹೊತ್ತು ತರಲಿದೆ. ‘ವಿಕ್ರಾಂತ್ ರೋಣ’ ಒಂದು ಪಾನ್ ಇಂಡಿಯನ್ ಸಿನಿಮಾ ಆಗಿದ್ದು, ಇಂಗ್ಲೀಷ್ ಅವತರಣಿಕೆ ಕೂಡ ಬರುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಲ್ಲಿ ಸುದೀಪ್ ಅವರಿಗೆ ನಾಯಕಿಯಾಗಿ ನೀತಾ ಅಶೋಕ್ ಅವರು ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ನಿರೂಪ್ ಭಂಡಾರಿ, ರವಿಶಂಕರ್ ಗೌಡ, ಮಧುಸೂದನ್ ರಾವ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ವಿಶೇಷ ಪಾತ್ರವೊಂದರಲ್ಲಿ ಬಾಲಿವುಡ್ ಬೆಡಗಿ ಜಾಕ್ವೀಲಿನ್ ಫೆರ್ನಾಂಡಿಸ್ ಅವರು ನಟಿಸಿದ್ದಾರೆ. ಅಜನೀಶ್ ಲೋಕನಾತ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಜಾಕ್ ಮಂಜು ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

ಕೊನೆಗೂ ಬಿಡುಗಡೆಗೆ ಮುಹೂರ್ತವಿಟ್ಟ ‘ವಿಕ್ರಾಂತ್ ರೋಣ’ Read More »

ಇಂಜಿನಿಯರಿಂಗ್ ಪದವಿ ಪಡೆದಿರುವ ಈಕೆ ನಟನೆಯಲ್ಲಿ ಬ್ಯುಸಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಳಿಹೆಂಡ್ತಿ ಧಾರಾವಾಹಿಯಲ್ಲಿ ತುಳಸಿ ಆಗಿ ನಟಿಸಿರುವ ದೀಪಿಕಾ ಆರಾಧ್ಹ ಇದೀಗ ಬಾಡಿ ಗಾಡ್ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ.ಇಂಜಿನಿಯರಿಂಗ್ ಮುಗಿಸಿರುವ ದೀಪಿಕಾ ಈಗ ನಟನೆಗೆ ಇಳಿದಿದ್ದಾರೆ. “ನಾನು ನಟನಾ ಕ್ಷೇತ್ರಕ್ಕೆ ಪ್ರವೇಶ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಸಾಮಾಜಿಕ ಜಾಲತಾಣದ ಪೇಜಸ್ ಮೂಲಕ ಹಲವು ಆಫರ್ಸ್ ಗಳಿಸಿ ಆಡಿಷನ್ ಮೂಲಕ ನನಗೆ ಅವಕಾಶ ದೊರಕಿತು” ಎಂದು ನಟನಾ ಪಯಣದ ಶುರುವಾದುದರ ಬಗ್ಗೆ ಹೇಳುತ್ತಾರೆ. ತಮ್ಮ ಮೊದಲ ಸಿನಿಮಾ ಕುರಿತು ಉತ್ಸುಕರಾಗಿರುವ ದೀಪಿಕಾ ” ಇದು ನನ್ನ ಮೊದಲ ಸಿನಿಮಾ. ತಂಡದವರು ಆಯೋಜಿಸಿದ ನಟನಾ ವರ್ಕ್ ಶಾಪ್ ಲ್ಲಿ ಭಾಗಿಯಾದೆ‌. ಇದು ನನಗೆ ಪಾತ್ರ ಮಾಡಲು ಸಹಾಯ ಮಾಡಿತು. ನರ್ಸ್ ಆಗಿ ಕನ್ನಡದ ಜೊತೆಗೆ ಮಲೆಯಾಳಂ ಕೂಡಾ ಮಾತನಾಡಬೇಕಿತ್ತು. ಇದಕ್ಕೆ ತರಬೇತಿ ಬೇಕಿತ್ತು. ಮೊದಲ ಸಿನಿಮಾದಲ್ಲಿಯೇ ನನಗೆ ಉತ್ತಮವಾಗಿತ್ತು. ಗುರುಪ್ರಸಾದ್ ಸರ್ ಜೊತೆಗೆ ಕೆಲಸ ಮಾಡಿದ್ದು ಒಳ್ಳೆ ಕಲಿಯುವಿಕೆಯ ಅನುಭವ ನೀಡಿತು” ಎಂದಿದ್ದಾರೆ. ಅಮರ ಪ್ರೇಮಿ ಅರುಣ್ ಹಾಗೂ ಔರಾ ಎಂಬ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. “ಅಮರ ಪ್ರೇಮಿ ಅರುಣ್ ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆ ಮಾತನಾಡಿದ್ದೇನೆ. ಔರಾದಲ್ಲಿ ಉಡುಪಿ ಕನ್ನಡ ಮಾತನಾಡಿದ್ದೇನೆ. ನನಗೆ ಸಿಗುತ್ತಿರುವ ಪಾತ್ರಗಳನ್ನು ಎಂಜಾಯ್ ಮಾಡುತ್ತಿದ್ದೇನೆ” ಎಂದಿದ್ದಾರೆ.

ಇಂಜಿನಿಯರಿಂಗ್ ಪದವಿ ಪಡೆದಿರುವ ಈಕೆ ನಟನೆಯಲ್ಲಿ ಬ್ಯುಸಿ Read More »

ಅಪ್ಪು ಎಕ್ಸ್‌ಪ್ರೆಸ್‌ ಶುರು ಮಾಡಿದ ಪ್ರಕಾಶ್ ರಾಜ್… ಅದೇನು ಗೊತ್ತಾ?

ನಟ ಪ್ರಕಾಶ್ ರಾಜ್ ಏನೇ ಮಾಡಿದರೂ, ಏನೇ ಹೇಳಿದರೂ ವಿವಾದವಾಗಿ ಬಿಡುತ್ತದೆ. ಸಮಾಜದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಆಗಾಗ ಧ್ವನಿ ಎತ್ತುತ್ತಾರೆ. ವಿವಾದಗಳನ್ನು ಹುಟ್ಟು ಹಾಕುವ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಾರಣ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಪ್ರಕಾಶ್ ರಾಜ್ ಮೊನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಈ ಬಾರಿ ಪ್ರಕಾಶ್ ಉತ್ತಮವಾದ ವಿಚಾರ ಹಂಚಿಕೊಂಡಿದ್ದಾರೆ. ಅಪ್ಪು ಹೆಸರಿನಲ್ಲಿ ಹೊಸ ಯೋಜನೆ ಒಂದನ್ನು ಕೈಗೊಂಡಿದ್ದು ಹುಟ್ಟು ಹಬ್ಬದ ಅಂಗವಾಗಿ ಈ ವಿಚಾರ ಹಂಚಿಕೊಂಡಿದ್ದಾರೆ. “ಅಪ್ಪು ಎಕ್ಸ್ ಪ್ರೆಸ್ ” ಎನ್ನುವ ಹೊಸ ಯೋಜನೆಯನ್ನು ಪ್ರಕಾಶ್ ರಾಜ್ ಆರಂಭಿಸಿದ್ದಾರೆ. ತಮ್ಮ ಫೌಂಡೇಶನ್ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುವ ಯೋಜನೆ ಹಾಕಿಕೊಂಡಿರುವ ಪ್ರಕಾಶ್ ರಾಜ್ ಇದೀಗ ಅಪ್ಪು ಹೆಸರಿನಲ್ಲಿ ಮತ್ತೊಂದು ಯೋಜನೆ ಶುರು ಮಾಡಿದ್ದಾರೆ. ಈ ಫೌಂಡೇಶನ್ ಬಗ್ಗೆ ಮಾತ್ರ ಮಾಹಿತಿ ಹಂಚಿಕೊಂಡಿದ್ದಾರೆ. ಅಪ್ಪು ಎಕ್ಸ್ ಪ್ರೆಸ್ ಎಂಬ ಯೋಜನೆ ಆರಂಭಿಸಿರುವ ಪ್ರಕಾಶ್ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ. “ನನ್ನ ದಿನವಾದ ಈ ದಿನದಂದು ಈ ಸುದ್ದಿಯನ್ನು ಹಂಚಿಕೊಳ್ಳಲು ಸಂತಸಪಡುತ್ತೇನೆ. ಪ್ರಕಾಶ್ ರಾಜ್ ನೇತೃತ್ವದಲ್ಲಿ “ಹಿಂದಿರುಗಿಸೋಣ” ಎಂದು ಬರೆದುಕೊಂಡಿದ್ದಾರೆ. ಅಪ್ಪು ಎಕ್ಸ್ ಪ್ರೆಸ್ ಯೋಜನೆಯ ಬಗ್ಗೆ ಪೋಸ್ಟರ್ ಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ಪ್ರಕಾಶ್ ರಾಜ್ ಅವರಿಗೆ ತುಂಬಾ ನೋವುಂಟು ಮಾಡಿತ್ತು. ವಿಡಿಯೋ ಮೂಲಕ ನೋವು ಹಂಚಿಕೊಂಡಿದ್ದರು. ಅಪ್ಪು ಜೊತೆ ಹಲವು ಚಿತ್ರಗಳಲ್ಲಿ ನಟಿಸಿರುವ ಪ್ರಕಾಶ್ ರಾಜ್ ಪುನೀತ್ ಅವರನ್ನು ಹೊಗಳಿದ್ದರು. ಅಪ್ಪು ಎಕ್ಸ್ ಪ್ರೆಸ್ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಗಳು ಇನ್ನೂ ತಿಳಿಯಬೇಕಷ್ಟೆ.

ಅಪ್ಪು ಎಕ್ಸ್‌ಪ್ರೆಸ್‌ ಶುರು ಮಾಡಿದ ಪ್ರಕಾಶ್ ರಾಜ್… ಅದೇನು ಗೊತ್ತಾ? Read More »

ದಶಕದ ನಂತರ ಯೋಗರಾಜ್ ಭಟ್ ಹಾಗೂ ಗಣೇಶ್ ಜೊತೆ ನಟಿಸುವುದು ಖುಷೊ ತಂದಿದೆ – ಶರ್ಮಿಳಾ ಮಾಂಡ್ರೆ

ಶರ್ಮಿಳಾ ಮಾಂಡ್ರೆಗೆ ಈ ವರ್ಷ ಹರುಷವೇ ಸರಿ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗಿ “ದಸರಾ” ಚಿತ್ರವನ್ನು ನಿರ್ಮಾಣ ಮಾಡುವುದರೊಂದಿಗೆ ನಾಯಕಿಯಾಗಿ ಸತೀಶ್ ನೀನಾಸಂ ಜೊತೆ ನಟಿಸುತ್ತಿದ್ದಾರೆ. ಗಾಳಿಪಟ 2 ಚಿತ್ರದಲ್ಲಿ ನಟಿಸುತ್ತಿರುವ ಶರ್ಮಿಳಾ ಮಾಂಡ್ರೆ ಅವರಿಗೆ ಇದೇ ತರದ ಪಾತ್ರ ಗಾಳಿಪಟ ಚಿತ್ರದ ಮೊದಲ ಭಾಗದಲ್ಲಿ ನಟಿಸಲು 2008ರಲ್ಲಿ ಆಫರ್ ದೊರಕಿತ್ತು. “ಹೆಚ್ಚಿನವರಿಗೆ ಈ ವಿಷಯದ ಬಗ್ಗೆ ತಿಳಿದಿಲ್ಲ. ಯೋಗರಾಜ್ ಭಟ್ ಸರ್ ಗಾಳಿಪಟ ಚಿತ್ರಕ್ಕೆ ನನಗೆ ಆಫರ್ ನೀಡಿದ್ದರು. ಆದರೆ ಈ ಸಮಯದಲ್ಲಿ ನಾನು ಬೇರೆ ಸಿನಿಮಾದಲ್ಲಿ ನಟಿಸುತ್ತಿದ್ದೆ. ಹೀಗಾಗಿ ಈ ಸಿನಿಮಾಕ್ಕೆ ಇಲ್ಲ ಎನ್ನಲೇಬೇಕಾಯಿತು. ಆ ನಿರ್ಧಾರವು ನನ್ನೊಂದಿಗೆ ಹಾಗೆ ಉಳಿದಿದೆ. ಯೋಗರಾಜ್ ಸರ್ ಹಾಗೂ ಗಣೇಶ್ ಸರ್ ಜೊತೆ ನಟಿಸುವ ಅವಕಾಶ ಸಿಕ್ಕಾಗ ಬೇಡ ಎಂದು ಹೇಳಲು ಸಾಧ್ಯವಿಲ್ಲ” ಎನ್ನುತ್ತಾರೆ. ದಶಕದ ನಂತರ ಮತ್ತೆ ಅವರಿಬ್ಬರ ಜೊತೆ ಕೆಲಸ ಮಾಡುವ ಅವಕಾಶ ದೊರಕಿರುವುದಕ್ಕೆ ಸಂತೋಷ ಆಗುತ್ತಿದೆ. ಹಾಗೂ ಇದು ಉತ್ತಮ ಅನುಭವ. ಕೋವಿಡ್ ನಿಂದಾದ ಎಲ್ಲಾ ಸವಾಲುಗಳ ಹೊರತಾಗಿಯೂ ತಂಡ ಮುನ್ನುಗ್ಗಿತು ಮತ್ತು ಸಾಧಿಸಿತು” ಎಂದಿದ್ದಾರೆ. ಗಾಳಿಪಟ 2 ಗಣೇಶ್, ದಿಗಂತ್, ಯೋಗರಾಜ್ ಭಟ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರ ಆಗಿದ್ದು ಅನಂತ್ ನಾಗ್ ಹಾಗೂ ರಂಗಾಯಣ ರಘು ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಅಲ್ಲದೇ ವೈಭವಿ ಶಾಂಡಿಲ್ಯ , ಸಂಯುಕ್ತ ಮೆನನ್ ಕೂಡಾ ನಟಿಸಲಿದ್ದು ನಿರ್ದೇಶಕ ಪವನ್ ಕುಮಾರ್ ಬಾಯ್ಸ್ ಗ್ಯಾಂಗ್ ನ ಮೂರನೇ ಸದಸ್ಯರಾಗಿದ್ದಾರೆ. ನಿಶ್ವಿಕಾ ನಾಯ್ಡು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದಶಕದ ನಂತರ ಯೋಗರಾಜ್ ಭಟ್ ಹಾಗೂ ಗಣೇಶ್ ಜೊತೆ ನಟಿಸುವುದು ಖುಷೊ ತಂದಿದೆ – ಶರ್ಮಿಳಾ ಮಾಂಡ್ರೆ Read More »

ತೇಜಸ್ವಿ‌ನಿ ಪ್ರಕಾಸ್ ರಿಸೆಪ್ಶನ್ ನಲ್ಲಿ ಚಾಲೆಂಜಿಗ್ ಸ್ಟಾರ್…

ನಟಿ ತೇಜಸ್ವಿನಿ ಪ್ರಕಾಶ್ ಅವರು ಮೊನ್ನೆಯಷ್ಟೇ ತನ್ನ ಬಾಲ್ಯದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ರಿಸೆಪ್ಷನ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದ್ದು ಈ ಸಂಭ್ರಮದಲ್ಲಿ ತಾರೆಯರು ಪಾಲ್ಗೊಂಡಿದ್ದು ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಈ ಸಂಭ್ರಮದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಭಾಗವಹಿಸಿದ್ದಾರೆ. ನವದಂಪತಿಗಳೊಂದಿಗೆ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ತೇಜಸ್ವಿನಿ ಈ ಫೋಟೋವನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು “ನಿಮಗೆ ಧನ್ಯವಾದ ತಿಳಿಸಲು ಪದಗಳೇ ಇಲ್ಲ. ನಿಮ್ಮ ಆಗಮನವೇ ಆಶೀರ್ವಾದ. ನಾವು ತುಂಬಾ ಖುಷಿಯಾಗಿದ್ದೇವೆ. ಹಾಗೂ ಕೃತಜ್ಞತೆ ಸಲ್ಲಿಸುತ್ತೇವೆ. ಧನ್ಯವಾದ ಅಣ್ಣ”ಎಂದು ಬರೆದುಕೊಂಡಿದ್ದಾರೆ. ನಿಜಜೀವನದಲ್ಲಿಯೂ ಅಣ್ಣ ತಂಗಿ ಬಾಂಧವ್ಯ ಹೊಂದಿದ್ದಾರೆ ದರ್ಶನ್ ಹಾಗೂ ತೇಜಸ್ವಿನಿ. ದರ್ಶನ್ ನಟನೆಯ ಗಜ ಸಿನಿಮಾದಲ್ಲಿ ದರ್ಶನ್ ತಂಗಿಯಾಗಿ ನಟಿಸಿದ್ದ ತೇಜಸ್ವಿನಿ ಇದೀಗ ರಾಬರ್ಟ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌.

ತೇಜಸ್ವಿ‌ನಿ ಪ್ರಕಾಸ್ ರಿಸೆಪ್ಶನ್ ನಲ್ಲಿ ಚಾಲೆಂಜಿಗ್ ಸ್ಟಾರ್… Read More »

Scroll to Top