Karnataka Bhagya

ಕ್ರೀಡೆ

ನಟಿ ಸಮಂತಾ ಅವರ ಈ ನಡೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ…

ಸಮಂತಾ ಮತ್ತು ನಾಗ ಚೈತನ್ಯ ಅವರ ಅಗಲಿಕೆ ಅವರ ಅಭಿಮಾನಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದೊಡ್ಡ ಚರ್ಚೆಯಾಗಿತ್ತು… ಇದೀಗ ನಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮದುವೆಯ ದಿನದಂದು ಉಟ್ಟಿದ್ದ ಸೀರೆಯನ್ನು ನಟಿ ಸಮಂತಾ ಹಿಂತಿರುಗಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಸೀರೆ ನಾಗಚೈತನ್ಯ ಅವರ ಅಜ್ಜಿ ಡಿ ರಾಜೇಶ್ವರಿ ಅವರಿಗೆ ಸೇರಿದ್ದಂತೆ ಈಗ ಶಾಕುಂತಲಂ ಸಿನಿಮಾ ನಟಿ ಈಗ ಅದನ್ನು ಹಿಂದಿರುಗಿಸಿದ್ದಾರೆ. ಅಕ್ಟೋಬರ್ 2, 2021 ರಂದು, ಸಮಂತಾ ಮತ್ತು ನಾಗ ಚೈತನ್ಯ ತಾವಿಬ್ಬರು ವಿಚ್ಛೆದನಾ‌ ಪಡೆದುಕೊಳ್ಳುವ ವಿಚಾರವನ್ನ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು….ಅವರ ಐದನೇ ವಿವಾಹ ವಾರ್ಷಿಕೋತ್ಸವದ ಕೆಲವು ದಿನಗಳ ಮೊದಲು, ದಂಪತಿಗಳು ಬೇರೆಯಾದರು….ವಿಚ್ಛೆದನಾ ಆಗುವ ಮುನ್ನವೇ ಸಮಂತಾ ತನ್ನ ಹೆಸರಿನ‌ಜೊತೆಗಿದ್ದ ಅಕ್ಕಿನೇನಿಯನ್ನು ಕೈಬಿಟ್ಟಿದ್ದರು..ಮತ್ತು ನಾಗ ಚೈತನ್ಯ ಜೊತೆಗಿನ Instagram ಪೋಸ್ಟ್‌ಗಳನ್ನು ಕೂಡ ಡಿಲೀಟ್ ಮಾಡಿದ್ದರು… ಇದೀಗ ಸಮಂತಾ ತಮ್ಮ ಮದುವೆಯ ಸೀರೆಯನ್ನು ನಾಗ ಚೈತನ್ಯ ಅವರಿಗೆ ಹಿಂತಿರುಗಿಸಿದ್ದಾರೆ ಎನ್ನಲಾಗಿದೆ…. ಅದು ದಗ್ಗುಬಾಟಿ ಕುಟುಂಬಕ್ಕೆ ಸೇರಿದ್ದರಿಂದ ಅದನ್ನು ವಾಪಸ್ ಕೊಡಲು ನಟಿ ನಿರ್ಧರಿಸಿದ್ದರಂತೆ…ಸಮಂತಾ ಉಟ್ಟಿದ್ದ ಸೀರೆ ಚಿತ್ರ ನಿರ್ಮಾಪಕ ಡಿ ರಾಮನಾಯ್ಡು ಅವರ ಪತ್ನಿ ಛಾಯ್ ಅವರ ಅಜ್ಜಿ ಡಿ ರಾಜೇಶ್ವರಿ ಅವರು ಉಟ್ಟಿದ್ದರು. ನಟಿ ತನ್ನ ದೊಡ್ಡ ದಿನದಂದು ಕುಟುಂಬದ ಸೀರೆಯನ್ನು ಧರಿಸುವ ಮೂಲಕ ಅಕ್ಕಿನೇನಿ ಮತ್ತು ದಗ್ಗುಬಾಟಿ ಮನೆತನವನ್ನು ಹೆಮ್ಮೆಪಡುವಂತೆ ಮಾಡಿದರು. ನಾಗ ಚೈತನ್ಯ ಅಥವಾ ಅವರ ಕುಟುಂಬಕ್ಕೆ ಸೇರಿದ ಯಾವುದನ್ನೂ ಇಟ್ಟುಕೊಳ್ಳಲು ಸಮಂತಾ ಬಯಸುವುದಿಲ್ಲ ಎಂದು ವದಂತಿಗಳು ಸೂಚಿಸುತ್ತವೆ. ಹಾಗಾಗಿ ಸೀರೆಯನ್ನು ಹಿಂತಿರುಗಿಸಿದ್ದಾರೆ…. ತಮ್ಮ ವಿಚ್ಛೇದನವನ್ನು ಘೋಷಿಸಿದ ನಂತರ, ನಾಗ ಚೈತನ್ಯ ಮತ್ತು ಅವರ ಕುಟುಂಬ ಸದಸ್ಯರು ಸಮಂತಾ ಅವರಿಗೆ 200 ಕೋಟಿ ರೂ. ಜೀವನಾಂಶವನ್ನು ನೀಡಲು‌ಮುಂದಾಗಿದ್ದರು.. ಆದರೆ, ನಟಿ ಈ ಪ್ರಸ್ತಾಪವನ್ನು ನಿರಾಕರಿಸಿದರು ಮತ್ತು ಚೇಯ್ ಅಥವಾ ಅವರ ಕುಟುಂಬದಿಂದ ತನಗೆ ಒಂದು ಪೈಸೆಯೂ ಬೇಡ ಎಂದು ಹೇಳಿದರು. ಸಮಂತಾ ಮತ್ತು ನಾಗ ಚೈತನ್ಯ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಅಕ್ಟೋಬರ್ 2017 ರಲ್ಲಿ ಇವರಿಬ್ಬರ ವಿವಾಹ ಗೋವಾದಲ್ಲಿ ಅದ್ಧೂರಿಯಾಗಿ ನಡೆದಿತ್ತು…

ನಟಿ ಸಮಂತಾ ಅವರ ಈ ನಡೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ… Read More »

ರಿಷಭ್ ಶೆಟ್ಟರ ಖುಷಿಗೆ ಕಾರಣ ಇದೇ..

ಕೇರಳದ ತಿರುವನಂತಪುರದಲ್ಲಿ ಈಗ ಹಬ್ಬದ ಸಂಭ್ರಮ. ಅಸರಲ್ಲೂತ ಸಿನಿಪ್ರಿಯರ ಸಂಭ್ರಮವಂತೂ ಕೇಳುವುದೇ ಬೇಡ. ಯಾಕೆಂದರೆ ಕೇರಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇದೇ ಮಾರ್ಚ್ 18 ರಿಂದ 25ರ ತನಕ ತಿರುವನಂತಪುರದಲ್ಲಿ ನಡೆಯಲಿದೆ. ಸಂತಸದ ವಿಚಾರವೆಂದರೆ ಆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ಪ್ರದರ್ಶನಗೊಳ್ಳಲಿದೆ. ಆ ಸಿನಿಮಾ ಬೇರಾವುದು ಅಲ್ಲ ಪೆದ್ರೊ. ರಿಷಬ್ ಶೆಟ್ಟಿ ನಿರ್ಮಾಣದ, ನಟೇಶ್ ಹೆಗಡೆ ನಿರ್ದೇಶನದ ಪೆದ್ರೊ ಸಿನಿಮಾ ಕೇರಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ವರ್ಲ್ಡ್ ಸಿನಿಮಾ ಎನ್ನುವ ವಿಭಾಗದಡಿ ಇದು ಪ್ರದರ್ಶನಗೊಳ್ಳಲಿದೆ. ಈ ಸಂತಸದ ವಿಚಾರವನ್ನು ಸ್ವತಃ ರಿಷಬ್ ಶೆಟ್ಟಿ ಅವರೇ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ” ಪೆದ್ರೊ – ಕೇರಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಲ್ಡ್ ಸಿನಿಮಾ ವಿಭಾಗದಲ್ಲಿ ಪ್ರದರ್ಶನವಾಗಲಿದೆ. ಎಲ್ಲರೂ ಚಲನಚಿತ್ರೋತ್ಸವಕ್ಕೆ ಬನ್ನಿ. ನಾವೆಲ್ಲಾ ಜೊತೆಯಾಗಿ ಸಂಭ್ರಮಿಸೋಣ” ಎಂದು ಬರೆದುಕೊಂಡಿದ್ದಾರೆ. ಉತ್ತರ ಕರ್ನಾಟಕದ ಯಲ್ಲಾಪುರದ ನಟೇಶ್ ಹೆಗಡೆ ಅವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಪೆದ್ರೊ ಮಧ್ಯಮ ವರ್ಗದ ಎಲೆಕ್ಟ್ರಿಷಿಯನ್ ಒಬ್ಬನ ಕಥೆಯಾಗಿದೆ. ತನ್ನ ಪ್ರೀತಿಯ ನಾಯಿಯನ್ನು ಕೊಂದಂತಹ ಹಂದಿಯನ್ನು ಹೊಡೆಯಲು ಹೋದಾಗ ಡೆನು ಅನಾಹುತವಾಯಿತು ಎಂಬುದನ್ನು ಈ ಚಿತ್ರ ನೀಡಲಿದೆ. ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲಿ ನಿರ್ದೇಶಕ ನಟೇಶ್ ಹೆಗಡೆ ಅವರ ತಂದೆ ಗೋಪಾಲಕೃಷ್ಣ ಹೆಗಡೆ ಅಭಿನಯಿಸುತ್ತಿದ್ದಾರೆ.

ರಿಷಭ್ ಶೆಟ್ಟರ ಖುಷಿಗೆ ಕಾರಣ ಇದೇ.. Read More »

‘ವೇದ’ದಲ್ಲಿ ಇರಲಿದ್ದಾರಂತೆ ಅಪ್ಪು!!

ಪುನೀತ್ ರಾಜಕುಮಾರ್, ಪ್ರತಿಯೊಬ್ಬ ಕನ್ನಡಿಗನ ಮನದಲ್ಲೂ ಅಮೃತಾಶಿಲೆಯಲ್ಲಿ ಕೆಟ್ಟಿದಂತಿರೋ ಹೆಸರು. ಅರ್ಧದಾರಿಯಲ್ಲೇ ನಮ್ಮನ್ನೆಲ್ಲ ಅಗಲಿ ಹೊರಟಿದ್ದರು, ಅವರ ವರ್ಚಸ್ಸು ಇನ್ನು ನಮ್ಮ ಮನಸಲ್ಲಿದೆ. ಆ ಅಮೋಘ ವ್ಯಕ್ತಿತ್ವ, ಆ ಅಪೂರ್ವ ವ್ಯಕ್ತಿಯನ್ನ ಇನ್ನೊಮ್ಮೆ ಭುವಿಯಲ್ಲಿ ಕಾಣಲಾಗುವುದಿಲ್ಲವೇನೋ ಎಂಬುದು ಎಲ್ಲ ಕನ್ನಡಿಗರ ಮರುಕ. ಅಪ್ಪು ನಟನೆಯ ಕೊನೆಯ ಚಿತ್ರ ಜೇಮ್ಸ್ ಇದೇ ಮಾರ್ಚ್ 17ರಂದು ತೆರೆಕಾಣುತ್ತಿದೆ. ಇದೆ ಚಿತ್ರದ ಸಂದರ್ಶನದ ವೇಳೆ ಮಾತನಾಡಿದ ಪುನೀತ್ ರಾಜಕುಮಾರ್ ಅವರ ಸಹೋದರನಾದ ಕರುನಾಡ ಚಕ್ರವರ್ತಿ ಶಿವಣ್ಣ, ತನ್ನ ಮುಂದಿನ ಚಿತ್ರ ‘ವೇದ’ದಲ್ಲಿ ಅಪ್ಪುವಿನ ನಟನಾ ಅಂಶಗಳನ್ನು ತುಂಬಿಕೊಳ್ಳುತ್ತೇನೆ ಎಂದಿದ್ದಾರೆ. ಏನೇ ಆದರೂ ಅಪ್ಪು ನಾಯಕ ನಟನಾಗಿ ನಮ್ಮ ಕಣ್ಣ ತುಂಬಲಿರೋ ಕೊನೆಯ ಚಿತ್ರ ‘ಜೇಮ್ಸ್’ ಆಗಿರಲಿದೆ. ಶಿವಣ್ಣ ಸದ್ಯ ನಿರ್ಮಿಸಿ ನಟಿಸುತ್ತಿರೋ ‘ವೇದ’ ಚಿತ್ರದಲ್ಲಿ ಅಪ್ಪುವಿನ ಅಂಶಗಳನ್ನು ಬಳಸಿಕೊಳ್ಳುತ್ತಾರಂತೆ. “ಜೇಮ್ಸ್” ಚಿತ್ರದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಅಪ್ಪು ನನ್ನ ಮನಸ್ಸಿನಲ್ಲಿ ಸದಾ ಇರುತ್ತಾನೆ. ನನ್ನ ಮುಂದಿನ ಚಿತ್ರ “ವೇದ”ದಲ್ಲಿ ನನ್ನ ನಟನೆಯ ಮೂಲಕ ಅಪ್ಪುವನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ. ಅವನ ಹಾಸ್ಯಪ್ರಜ್ಞೆಗಳನ್ನು ನನ್ನ ಪಾತ್ರದಲ್ಲಿ ಅಳವಡಿಸಿಕೊಳ್ಳುತ್ತೇನೆ” ಎಂದಿದ್ದಾರೆ. ರಾಜ್ ಕುಟುಂಬದ ಮೂವರು ಯುವರಾಜರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಹಾಗು ಪುನೀತ್ ರಾಜಕುಮಾರ್ ಅವರನ್ನು ಒಂದೇ ಸಿನಿಮಾದಲ್ಲಿ ಒಟ್ಟಿಗೆ ನೋಡಬೇಕೆಂಬುದು ಅಭಿಮಾನಿಗಳು ಹಲವರ ಮಹದಾಸೆಯಾಗಿತ್ತು. ಅಲ್ಲದೇ ಶಿವಣ್ಣನ ಜೊತೆ ನಟಿಸಬೇಕು, ಶಿವಣ್ಣನಿಗೆ ನಿರ್ದೇಶನ ಮಾಡಬೇಕು ಎನ್ನುವುದು ಸ್ವತಃ ಅಪ್ಪುವಿನ ಕನಸುಗಳಾಗಿತ್ತು. ಸದ್ಯ ಈಗ ಬರುತ್ತಿರೋ ‘ಜೇಮ್ಸ್’ ಚಿತ್ರದಲ್ಲಿ ಈ ಮೂವರು ಜೊತೆಯಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಅಲ್ಲದೇ ‘ಜೇಮ್ಸ್’ ಚಿತ್ರದಲ್ಲಿನ ಅಪ್ಪುವಿನ ಪಾತ್ರಕ್ಕೆ ಶಿವಣ್ಣ ಸ್ವರತುಂಬಿದ್ದಾರೆ. ಈ ಬಗ್ಗೆ ಮಾತನಾಡಿದ ಶಿವಣ್ಣ, “ನಿರ್ದೇಶಕ ಚೇತನ್ ಅವರು ನನ್ನ ಬಳಿ ಬಂದು ಅಪ್ಪು ಪಾತ್ರಕ್ಕೆ ಡಬ್ ಮಾಡಬೇಕೆಂದಾಗ, ನನ್ನಿಂದಾಗದು ಯಾವುದಾದರೂ ಮಿಮಿಕ್ರಿ ಕಲಾವಿದರನ್ನು ಬಳಸಿ ಅಪ್ಪುವಿನ ಸ್ವರವನ್ನೇ ಮಾರುಕಳಿಸುವಂತೆ ಮಾಡಿ. ಕಾರಣ ಅಪ್ಪುವಿನದ್ದು ಒಂದು ವಿಶೇಷ ಧ್ವನಿ. ಅಭಿಮಾನಿಗಳ ಎದೆಯಲ್ಲಿ ಗಡಚಿಕ್ಕುವಂತೆ ಉಳಿದಿರೋ ಆ ಧ್ವನಿಗೆ ಜೀವತುಂಬುವುದು ಸುಲಭವಲ್ಲ. ಆದರೆ ಯಾವ ಪ್ರಯತ್ನದಿಂದಲೂ ಚೇತನ್ ಅವರಿಗೆ ಸಮಾಧಾನ ಸಿಗದೇ ಇದ್ದಾಗ ನಾನೇ ಡಬ್ ಮಾಡಿದೆ” ಎನ್ನುತ್ತಾರೆ. ಸದ್ಯ ಶಿವಣ್ಣ ಮತ್ತು ಅಪ್ಪುವನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನೋಡಬಹುದೆಂಬ ಒಂದು ಸಣ್ಣ ಸುಳಿವು ಸಹ ಅಭಿಮಾನಿಗಳಿಗೆ ಅತೀವ ಆನಂದ ನೀಡುತ್ತದೆ. ಶಿವಣ್ಣ ಇದನ್ನ ಹೇಗೆ ನೆರವೇರಿಸುತ್ತಾರೆ ಎಂದು ಕಾದುನೋಡಬೇಕಿದೆ.

‘ವೇದ’ದಲ್ಲಿ ಇರಲಿದ್ದಾರಂತೆ ಅಪ್ಪು!! Read More »

ಮೊದಲ ಬಾರಿಗೆ ಸೈಕಿಯಾಟ್ರಿಸ್ಟ್ ಆಗಿ ತೆರೆಮೇಲೆ ಬರಲಿದ್ದಾರೆ ಮೇಘನಾ

ನಟಿ ಮೇಘನಾ ರಾಜ್ ಹಿರಿತೆರೆಗೆ ಮರಳಿದ್ದು, ಸದ್ಯ ಇರುವುದೆಲ್ಲವ ಬಿಟ್ಟು ಚಿತ್ರ ತಂಡದೊಂದಿಗೆ ಮತ್ತೊಮ್ಮೆ ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ಹೊಸ ಚಿತ್ರದ ಹೆಸರನ್ನು ಕೂಡಾ ಮೇಘನಾ ರಾಜ್ ಅನೌನ್ಸ್ ಕೂಡಾ ಮಾಡಿದ್ದು ಆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಕಾಂತರಾಜ್ ಕನ್ನಳ್ಳಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ಮಗ ಹುಟ್ಟಿದ ನಂತರ ಮೇಘನಾ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದಾಗಿದೆ. ಇನ್ನು ಈ ಸಿನಿಮಾದಲ್ಲಿ ಮೇಘನಾ ವಿಭಿನ್ನಪಾತ್ರದ ಮೂಲಕ ತೆರೆ ಮೇಲೆ ಬರಲಿದ್ದಾರೆ. ಹೌದು, ಮೇಘನಾ ಈ ಚಿತ್ರದಲ್ಲಿ ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದೇ ಮೊದಲ ಬಾರಿಗೆ ಈ ರೀತಿಯ ಪಾತ್ರ ಮಾಡುತ್ತಿದ್ದಾರೆ. “ನಾನು ಇಲ್ಲಿ ಮಾಧವಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಮಾಧವಿ ಪಾತ್ರ ಒಂದು ಘಟನೆ ಏಕೆ , ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬುದನ್ನು ಬೇಧಿಸುವ ವ್ಯಕ್ತಿಯಾಗಿರುತ್ತಾರೆ. ಇದು ಚಿತ್ರದ ಪ್ರಮುಖ ಅಂಶವಾಗಿದೆ. ಚಿತ್ರದಲ್ಲಿ ಪ್ರಮುಖ ಪಾತ್ರಗಳಿಲ್ಲ. ಮೂರು ಪ್ರಮುಖ ಪಾತ್ರಗಳು ಕಥೆಯನ್ನು ಮುಂದೆ ತೆಗೆದುಕೊಂಡು ಹೋಗುತ್ತದೆ. ಕಟೆಂಟ್ ಇರುವಂತಹ ಸಿನಿಮಾವಾದ ಕಾರಣ ನಾನು ಇದನ್ನು ಒಪ್ಪಿಕೊಂಡೆ” ಎಂದು ಹೇಳುತ್ತಾರೆ ಮೇಘನಾ ರಾಜ್. ಸದ್ಯ ಶಬ್ದ ಸಿನಿಮಾದ ಶೂಟಿಂಗ್ ಕುಂದಾಪುರದಲ್ಲಿ ನಡೆಯುತ್ತಿದ್ದು ಮೇಘನಾ ಅಲ್ಲದೇ ಅತುಲ್ ಕುಲಕರ್ಣಿ ನಟಿಸಿದ್ದಾರೆ. ನಿರ್ದೇಶಕ ಹಾಗೂ ನಟ ಎಸ್ ಮಹೇಂದರ್ ತುಂಬಾ ವರ್ಷಗಳ ಬಳಿಕ ಈ ಸಿನಿಮಾ ಮೂಲಕ ನಟನೆಗೆ ಮರಳಿದ್ದು ಅವರು ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೊದಲ ಬಾರಿಗೆ ಸೈಕಿಯಾಟ್ರಿಸ್ಟ್ ಆಗಿ ತೆರೆಮೇಲೆ ಬರಲಿದ್ದಾರೆ ಮೇಘನಾ Read More »

ನಂ.1 ವಾಹಿನಿಯ ನಂ.1 ಸೀರಿಯಲ್

ಜೀ ಕನ್ನಡ ವಿನೂತನ ಕಾರ್ಯಕ್ರಮಗಳ ಮೂಲಕ ಮನರಂಜಿಸುತ್ತ ನಂಬರ್ 1 ಸ್ಥಾನದಲ್ಲಿ ಮುನ್ನುಗುತ್ತಿರುವ ಕನ್ನಡಿಗರ ಹೆಮ್ಮೆಯ ವಾಹಿನಿ. ಇದರಲ್ಲಿ ಬರುವ “ಜೊತೆಜೊತೆಯಲಿ ” ಕನ್ನಡ ಕಿರುತೆರೆಗೆ ಶ್ರೀಮಂತಿಕೆಯನ್ನು ಪರಿಚಯಿಸಿದ ಧಾರಾವಾಹಿ. ವಿಭಿನ್ನ ಬಗೆಯ ಕಥೆಯ ಮೂಲಕ ಆರಂಭದಿಂದಲೇ ವೀಕ್ಷಕರ ಗಮನ ಸೆಳೆದದ್ದು ಇದರ ಹೆಗ್ಗಳಿಕೆ. ಸೀರಿಯಲ್ ನೇ ಸಿನಿಮಾ ಶೈಲಿಯಲ್ಲಿ ನಿರೂಪಿಸಿ ಎಲ್ಲರೂ ಬೆರಗಾಗುವಂತೆ ಮಾಡಿದ ಮೊದಲ ಧಾರಾವಾಹಿ. ನಂಬಿಕೆ ಎಂಬ ಮೂರಕ್ಷರವನ್ನು ಮೂಲವಾಗಿಟ್ಟುಕೊಂಡು ಸಾಗುತ್ತಿರುವ ಈ ಕಥೆ ಹಲವಾರು ರೋಚಕ , ಮನಮೋಹಕ ಸನ್ನಿವೇಶಗಳೊಂದಿಗೆ 650 ಸಂಚಿಕೆಗಳತ್ತ ಯಶಸ್ವಿಯಾಗಿ ಹೆಜ್ಜೆ ಇಟ್ಟಿದೆ.ಆರ್ಯವರ್ಧನ್ ,ಅನು ಸಿರಿಮನೆ , ಪುಷ್ಪ , ಸುಬ್ಬು , ಝೇಂಡೆ ಹೀಗೆ ಇಲ್ಲಿ ಬರುವ ಎಲ್ಲಾ ಪಾತ್ರಗಳು ತನ್ನದೇ ಆದ ಮಹತ್ವ ಪಡೆದುಕೊಂಡು ಅನೇಕ ತಿರುವುಗಳಿಗೆ ಸಾಕ್ಷಿಯಾಗಿದೆ ಮತ್ತು ಜನರ ಮನಸ್ಸಿನಲ್ಲಿ ವಿಶೇಷವಾದ ಸ್ಥಾನ ಪಡೆದುಕೊಂಡಿದೆ.ರಾಜನಂದಿನಿ ರಹಸ್ಯ , ಸಂಕ್ರಾಂತಿ ಸಂಭ್ರಮ , ಮದುವೆ ಸಡಗರ , ಸೀಕ್ರೆಟ್ ರೂಮ್ ಅನಾವರಣ ಹೀಗೆ ಅನೇಕ ವಿಶೇಷ , ಕುತೂಹಲಕಾರಿ ಸಂಚಿಕೆಗಳೊಂದಿಗೆ ಜನಪ್ರಿಯಗೊಂಡಿದ್ದ ಈ ಧಾರಾವಾಹಿ ಇದೀಗ ” ರಾಜನಂದಿನಿ ಅಧ್ಯಾಯ ” ದ ಹೊಸ ಲೋಕಕ್ಕೆ ನೋಡುಗರನ್ನು ಕರೆದೊಯ್ಯಲು ಸಜ್ಜಾಗಿದೆ.ತನ್ನ ಸುತ್ತ ಸುಳ್ಳಿನ ಕೋಟೆಯನ್ನ ಕಟ್ಟಿಕೊಂಡಿರುವ ಆರ್ಯವರ್ಧನ್ ಮುಖವಾಡಗಳು ಒಂದೊಂದೇ ಕಳಚಿ ಬೀಳುವಾಗ ಅವರು ಅದರಿಂದ ಪಾರಾಗುವ ರೀತಿ, ನಂಬಿಕೆಯನ್ನೇ ಅಸ್ತ್ರವಾಗಿಸಿಕೊಂಡು ಉಳಿದ ಪಾತ್ರಗಳನ್ನು ಆಡಿಸುವ ಬಗೆ ಎಲ್ಲವೂ ಜನರನ್ನು ಆಕರ್ಷಿಸಿವೆ .ಈ ರಾಜನಂದಿನಿಯ ಹೊಸ ಅಧ್ಯಾಯದಲ್ಲಿ ಸುಭಾಷ್ ಪಾಟೀಲ್ ಎಂಬ ಪಾತ್ರವೊಂದು ಜೀವಪಡೆದುಕೊಂಡಿದ್ದು ಈಗಾಗಲೇ ಬಿಡುಗಡೆಗೊಂಡಿರುವ ಪ್ರೋಮೋ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸುಭಾಷ್ ಪಾಟೀಲ್ ಯಾರು ? ಅವರಿಗೂ ರಾಜನಂದಿನಿಗೂ ಇರುವ ಸಂಬಂಧವೇನು ? ಈ ಸುಭಾಷ್ ಪಾಟೀಲ್ ಪಾತ್ರ ಅನು ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ? ಹೀಗೆ ಹತ್ತುಹಲವು ನಿಗೂಢತೆಗಳನ್ನೇ ಕಥೆಯುದ್ದಕ್ಕೂ ಹೊತ್ತು ತರುತ್ತಿದೆ ಜೊತೆಜೊತೆಯಲಿ. ಅಷ್ಟೇ ಅಲ್ಲದೇ ವೀಕ್ಷಕರ ತಲೆಯಲ್ಲಿ ಪ್ರಶ್ನೆಗಳ ಸುರಿಮಳೆ ಮೂಡುವ ಹಾಗೆ ಮಾಡಿದೆ.

ನಂ.1 ವಾಹಿನಿಯ ನಂ.1 ಸೀರಿಯಲ್ Read More »

ಬೆಂಗಳೂರಿನಲ್ಲೂ ನಡೆಯಲಿದೆ RRR ಮಹಾನ್ ಹಬ್ಬ

ಭಾರತದಾದ್ಯಂತ ಬಹುನಿರೀಕ್ಷೆ ಹುಟ್ಟಿಸಿರೋ ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿನ ದೊಡ್ಡ ಹೆಸರುಗಳಲ್ಲೊಂದು “RRR”. ಬಾಹುಬಲಿಯ ಜೋಡಿಸಿನೆಮಾಗಳಿಂದ ತಮ್ಮ ಮೇಲೆ ತಮ್ಮ ಸಿನಿಮಾಗಳ ಮೇಲೆ ಅಪೂರ್ವ ಆಸೆಗಳನ್ನ ಪ್ರೇಕ್ಷಕರಲ್ಲಿ ಹುಟ್ಟಿಸಿದ ಶಕ್ತಿ ನಿರ್ದೇಶಕರಾದ ರಾಜಮೌಳಿ ಅವರದ್ದು. ಅವರ ಮುಂದಿನ ಚಿತ್ರ RRR ಇನ್ನೇನು ಬೆರಳೆಣಿಕೆಯಷ್ಟು ದಿನಗಳಲ್ಲಿ ತೆರೆಮೇಲೆ ರಾರಾಜಿಸಲಿದೆ. ನಿರೀಕ್ಷೆಗಳ ರಾಯಭಾರಿ ರಾಜಮೌಳಿಯವರ ಚಿತ್ರಕ್ಕೆ ಭಾಷೆಯ ಗಡಿ ಇಲ್ಲದೆ ದೇಶ-ವಿದೇಶಗಳ ಎಲ್ಲ ಭಾಗದ ಜನರೂ ಕಾತುರದಿಂದ ಕಾಯುತ್ತಿದ್ದಾರೆ. ರಾಮಚರಣ್,ಜೂನಿಯರ್ ಎನ್ ಟಿ ಆರ್, ಅಜಯ್ ದೇವಗನ್, ಆಲಿಯಾ ಭಟ್ ಮಾತ್ರವಲ್ಲದೆ ಶ್ರೀಯ ಶರಣ್ ಮೊದಲಾಗಿ ಹಲವಾರು ಗಣ್ಯರ ತಾರಾಗಣ ಹೊಂದಿರೋ ಈ ಚಿತ್ರ ಇದೆ ಮಾರ್ಚ್ 25ರಂದು ಸಿನಿಮಂದಿರಗಳನ್ನ ಪ್ರವೇಶಿಸಲಿದೆ. ಈಗಾಗಲೇ ಪ್ರಚಾರ ಕಾರ್ಯವನ್ನ ಭರದಿಂದ ನಡೆಸುತ್ತಿರೋ ಚಿತ್ರತಂಡ, ಎಲ್ಲ ಭಾಷೆಯ ಎಲ್ಲ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಅದೇ ನಿಟ್ಟಿನಲ್ಲಿ ಇದೇ ಬರುವ ಮಾರ್ಚ್ 20ರಂದು ಬೆಂಗಳೂರಿನಲ್ಲಿ ಬಿಡುಗಡೆ-ಪೂರ್ವದ ಸಮಾರಂಭವೊಂದು ನಡೆಯಲಿದೆ. ಸಿನಿಮಾ ಬಿಡುಗಡೆಗೆ ಕೇವಲ ಐದು ದಿನಗಳ ಮುನ್ನ ನಡೆಯಲಿರೋ ಈ ಕಾರ್ಯಕ್ರಮವನ್ನ ಬಹಳ ವಿಜೃಂಭಣೆಯಿಂದ ಜನರ ಮುಂದಿಡಲಿದೆ ಚಿತ್ರತಂಡ. ಈ ಕಾರ್ಯಕ್ರಮದಿಂದ ಈಗಾಗಲೇ ಮುಗಿಲಿನೆತ್ತರಕ್ಕೆ ಸಮೀಪದಲ್ಲಿರೋ ಚಿತ್ರದ ಬಗೆಗಿನ ನಿರೀಕ್ಷೆಗಳು ಮುಗಿಲುಮುಟ್ಟುವ ಎಲ್ಲ ಸಾಧ್ಯತೆಗಳಿವೆ.

ಬೆಂಗಳೂರಿನಲ್ಲೂ ನಡೆಯಲಿದೆ RRR ಮಹಾನ್ ಹಬ್ಬ Read More »

ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಮರಳಿದ ಪುಟ್ಟ ಗೌರಿ

ಬಾಲಕಲಾವಿದೆಯಾಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಸಾನ್ಯಾ ಅಯ್ಯರ್ ಕನ್ನಡಿಗರ, ಕರ್ನಾಟಕದ ಮನೆ ಮಗಳು ಎಂದರೆ ತಪ್ಪಾಗಲಾರದು. ಸಾನ್ಯಾ ಅಯ್ಯರ್? ಅದ್ಯಾರು ಎಂದು ಯೋಚಿಸುತ್ತಿದ್ದೀರಾ? ನಿಮಗೆ ಹಾಗೆ ಯೋಚನೆ ಬಂದರೆ ಆಶ್ಚರ್ಯವೇ ಇಲ್ಲ! ಯಾಕೆಂದರೆ ಸಾನ್ಯಾ ಅಯ್ಯರ್ ಎನ್ನುವುದು ಆಕೆಯ ರಿಯಲ್ ಹೆಸರು. ಅಂದ ಹಾಗೇ ಸಾನ್ಯಾ ಅಯ್ಯರ್ ರೀಲ್ ಹೆಸರು ಪುಟ್ಟ ಗೌರಿ! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಧಾರಾವಾಹಿ ಪುಟ್ಟ ಗೌರಿ ಮದುವೆ ಧಾರವಾಹಿಯಲ್ಲಿ ನಾಯಕಿ ಪುಟ್ಟ ಗೌರಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಸಾನ್ಯಾ ಅಯ್ಯರ್ ಅವರ ಮುದ್ದಾದ ಅಭಿನಯಕ್ಕೆ ಮನಸೋಲದವರಿಲ್ಲ! ಇಂದಿಗೂ ಪುಟ್ಟ ಗೌರಿ ಮದುವೆ ಎಂದಾಗ ತತ್ ಕ್ಷಣ ನೆನಪಾಗುವ ಮುಖ ಸಾನ್ಯಾ ಅವರದ್ದು. ಅಷ್ಟರ ಮಟ್ಟಿಗೆ ಆ ಪಾತ್ರ ವೀಕ್ಷಕರ ಮನ ಸೆಳೆದಿತ್ತು. ಪುಟ್ಟ ಗೌರಿ ಮದುವೆ ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಸಾನ್ಯಾ ಇದೀಗ ಲಾಂಗ್ ಬ್ರೇಕ್ ನ ನಂತರ ಮತ್ತೆ ಬಂದಿದ್ದಾರೆ. ಆದರೆ ಈ ಬಾರಿ ಆಕೆ ಮರಳಿರುವುದು ನಟಿಯಾಗಿ ಅಲ್ಲ, ಬದಲಿಗೆ ಡ್ಯಾನ್ಸರ್ ಆಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಜ್ಯೂನಿಯರ್ಸ್ ನ ಸ್ಪರ್ಧಿಯಾಗಿ ಕಿರುತೆರೆಗೆ ಮರಳಿರುವ ಸಾನ್ಯಾ ಇದೀಗ ಡ್ಯಾನ್ಸ್ ಮೂಲಕವೂ ವೀಕ್ಷಕರನ್ನು ರಂಜಿಸುತ್ತಿದ್ದಾರೆ‌. ಸಾಕ್ಷಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸಾನ್ಯಾ ಅಯ್ಯರ್ ಸಿಂಧೂರ, ಕುಸುಮಾಂಜಲಿ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಶ್ರುತಿ ನಾಯ್ಡು ಅವರ ಸಿಂಧೂರ ಧಾರಾವಾಹಿಯಲ್ಲಿ ಸಿಂಧೂ ಆಗಿ ನಟಿಸಿದ್ದ ಸಾನ್ಯಾ ಖಳನಾಯಕಿಯಾಗಿಯೂ ಕಿರುತೆರೆಯಲ್ಲಿ ಫೇಮಸ್ಸು! ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಧಾರಾವಾಹಿಯಲ್ಲಿ ರಶ್ಮಿ ಎನ್ನುವ ವಿಲನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆಯನ್ನು ಜನ ಒಪ್ಪಿಕೊಂಡದ್ದು ಪುಟ್ಟಗೌರಿಯಾಗಿ ಬದಲಾದ ಬಳಿಕವೇ! ಪುಟ್ಟ ಗೌರಿ ಮದುವೆ ಮುಗಿದು ವರ್ಷಗಳಾದರೂ ಜನ ಇನ್ನು ಕೂಡಾ ಆಕೆಯನ್ನು ನೆನಪಿನಲ್ಲಿಟ್ಟುಕೊಂಡಿರುವುದು ಅದಕ್ಕೆ ಪ್ರಸಕ್ತ ಉದಾಹರಣೆ. ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಮಿಂಚಿರುವ ಆಕೆ ಗಜ, ಅನು, ಬೆಳಕಿನೆಡೆಗೆ ಸಿನಿಮಾದಲ್ಲಿ ನಟಿಸಿದ್ದಾರೆ. ಪಿ.ಶೇಷಾದ್ರಿ ನಿರ್ದೇಶನದ ವಿಮುಕ್ತಿ ಸಿನಿಮಾದಲ್ಲಿಯೂ ನಟಿಸಿರುವ ಸಾನ್ಯಾ ಆ ಸಿನಿಮಾದ ನಟನೆಗೆ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಕೂಡಾ ಪಡೆದಿದ್ದಾರೆ. ಇನ್ನು ಮಲಯಾಳಂ ನ ಆರಾರೊ ನೀಯಾರೊ ಎನ್ನುವ ಆಲ್ಬಂ ಹಾಡಿನಲ್ಲಿ ಹೆಜ್ಜೆ ಹಾಕುವ ಮೂಲಕ ಪರಭಾಷೆಯಲ್ಲೂ ಕಮಾಲ್ ಮಾಡಿದ್ದಾರೆ.

ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಮರಳಿದ ಪುಟ್ಟ ಗೌರಿ Read More »

ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಕಿರುತೆರೆ ನಟಿಯರು ಇವರೇ ನೋಡಿ

ಸೆಲೆಬ್ರಿಟಿಗಳು ಇಂದು ಜನರಿಗೆ ತುಂಬಾ ಹತ್ತಿರವಾಗಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಸೋಶಿಯಲ್ ಮೀಡಿಯಾ. ಹೌದು, ಸೋಶೊಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ವಿಷಯಗಳನ್ನು ಅಪ್ ಡೇಟ್ ಮಾಡಲು ಸಾಧ್ಯವಾಗಿದೆ. ಅಂದ ಹಾಗೇ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವಂತಹ ಕನ್ನಡ ಕಿರುತೆರೆಯ ನಟನಾ ಮಣಿಯರು ಯಾರು ಎಂಬುದನ್ನು ನೋಡೋಣ. ಅನುಶ್ರೀ- ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಟಿವಿ ಸೆಲೆಬ್ರಿಟಿಗಳಲ್ಲಿ ಅನುಶ್ರೀ ಮುಂಚೂಣಿಯಲ್ಲಿ ಇದ್ದಾರೆ. ಮಿಲಿಯನ್ ಫಾಲೋವರ್ಸ್ ಹೊಂದಿರುವ ಅನುಶ್ರೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರೂ ಆಗಿದ್ದಾರೆ. ದೀಪಿಕಾ ದಾಸ್- ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿರುವ ದೀಪಿಕಾ ಹೆಚ್ಚು ಫಾಲೋವರ್ಸ್ ಹೊಂದಿದ ಕನ್ನಡ ಕಿರುತೆರೆಯ ನಟಿಯರಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿರಲು ದಿನದ 7 ಗಂಟೆಗಳ ಕಾಲ ಇನ್ಸ್ಟಾಗ್ರಾಮ್ ನಲ್ಲಿ ಕಳೆಯುತ್ತಿದ್ದೆ ಎಂದು ದೀಪಿಕಾ ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದಾರೆ. ವೈಷ್ಣವಿ- ಇತ್ತೀಚೆಗಷ್ಟೇ 1 ಮಿಲಿಯನ್ ಫಾಲೋವರ್ಸ್ ಹೊಂದಿರುವ ವೈಷ್ಣವಿ ಬ್ಯೂಟಿಗೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ಹೊಸ ಹೊಸ ಸವಾಲುಗಳನ್ನು ಜನರಿಗೆ ನೀಡುವ ಮೂಲಕ ಸದಾ ಜನರ ಜೊತೆ ಸಂಪರ್ಕದಲ್ಲಿರುತ್ತಾರೆ. ನಿವೇದಿತಾ ಗೌಡ- ನಿವೇದಿತಾ ಕೂಡಾ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ನಿವೇದಿತಾ ಅವರ ಖ್ಯಾತಿಗೆ ಸೋಶಿಯಲ್ ಮೀಡಿಯಾ ಪ್ರಮುಖ ಪಾತ್ರ ವಹಿಸಿದೆ. ತೆರೆ ಮೇಲೆ ಕಾಣಿಸಿಕೊಳ್ಳದಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿರುತ್ತಾರೆ. ರಂಜನಿ ರಾಘವನ್- ಸದ್ಯದಲ್ಲೇ 1 ಮಿಲಿಯನ್ ತಲುಪಲಿರುವ ರಂಜನಿ ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರಲು ಇಷ್ಟಪಡುತ್ತಾರೆ. ನಟನೆಯ ಮೂಲಕ ಮನೆ ಮಾತಾಗಿರುವ ರಂಜನಿ ಸಮಯ ಸಿಕ್ಕಾಗಲ್ಲೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ನೇಹಾ ಗೌಡ- ಕನ್ನಡ ಕಿರುತೆರೆಯಲ್ಲಿ ಜನ ತುಂಬಾ ಇಷ್ಟ ಪಡುವ ನಟಿಯರಲ್ಲಿ ಒಬ್ಬರು. ಜನಪ್ರಿಯ ಟಿವಿ ನಟಿಯಾಗಿರುವ ನೇಹಾ ಸೋಶಿಯಲ್ ಮೀಡಿಯಾದಲ್ಲಿ ಕೂಡ ಪ್ರೇಕ್ಷಕರ ಜೊತೆ ಸಂವಹನ ನಡೆಸಲು ಇಷ್ಟ ಪಡುತ್ತಾರೆ. ಮೇಘಾ ಶೆಟ್ಟಿ- ಕಿರುತೆರೆಗೆ ಹೊಸಬರಾದರೂ ಕಡಿಮೆ ಅವಧಿಯಲ್ಲಿ ಕಿರುತೆರೆ ವೀಕ್ಷಕರ ಮನಗೆದ್ದಿರುವ ಮೇಘಾ ಸೋಶಿಯಲ್ ಮೀಡಿಯಾದಲ್ಲಿದಲ್ಲಿಯೂ ಸದ್ದು ಮಾಡುತ್ತಿರುವುದು ನಿಜ.

ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಕಿರುತೆರೆ ನಟಿಯರು ಇವರೇ ನೋಡಿ Read More »

ಮಧುಮತಿಯಾಗಿ ಸ್ಯಾಂಡಲ್ ವುಡ್ ಗೆ ಮರಳಿದ ಶ್ರೀಯಾ ಶರಣ್

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್ ಈಗ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. 2013ರಲ್ಲಿ ರೂಪಾ ಅಯ್ಯರ್ ನಿರ್ದೇಶನದ “ಚಂದ್ರ” ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರೀಯಾ ಶರಣ್ ಪುನೀತ್ ರಾಜ್ ಕುಮಾರ್ ಅಭಿನಯದ ಅರಸು ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ತದ ನಂತರ ಮದುವೆ, ಮಗು ಎಂದು ಫ್ಯಾಮಿಲಿಯಲ್ಲಿ ಬ್ಯುಸಿಯಾಗಿದ್ದ ಶ್ರೀಯಾ ಮತ್ತೆ ನಟನೆಯತ್ತ ಮುಖ ಮಾಡಿದ್ದು ಇಂದು ಆಕೆಯ ಕೈಯಲ್ಲಿ ಹಲವು ಚಿತ್ರಗಳಿವೆ. ಬರೋಬ್ಬರಿ ಒಂಭತ್ತು ವರ್ಷಗಳ ನಂತರ ಕನ್ನಡ ಸಿನಿಮಾರಂಗದಲ್ಲಿ ಅಭಿನಯಿಸಲಿದ್ದಾರೆ ಶ್ರೀಯಾ. ಆರ್ ಚಂದ್ರು ನಿರ್ದೇಶನದ ಉಪೇಂದ್ರ ಹಾಗೂ ಸುದೀಪ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಅನ್ನು ಬಹಳ ಅದ್ಧೂರಿಯಾಗಿ ಮಾಡಿದ್ದಾರೆ. ಇನ್ನು ಈಗಾಗಲೇ ಶೂಟಿಂಗ್ ನಲ್ಲಿಯೂ ಈಕೆ ಪಾಲ್ಗೊಂಡಿದ್ದಾರೆ. ಕಬ್ಜ ಚಿತ್ರದಲ್ಲಿ ಮಧುಮತಿ ಪಾತ್ರದಲ್ಲಿ ನಟಿಸುತ್ತಿರುವ ಶ್ರೀಯಾ ಮಹಾರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಕೂಡಾ ರಿಲೀಸ್ ಆಗಿದ್ದು ಸಿನಿಪ್ರಿಯರು ಹೊಸ ಅವತಾರ ಕಂಡು ಫಿದಾ ಆಗಿದ್ದಾರೆ. ಉತ್ತರ ಪ್ರದೇಶದ ಶ್ರೀಯಾ ಸಿನಿ ಕೆರಿಯರ್ ಆರಂಭಿಸಿದ್ದು ತೆಲುಗಿನ ಇಷ್ಟಂ ಮೂಲಕ. ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದ ಶ್ರೀಯಾ ಸೌತ್ ಸಿನಿ ದುನಿಯಾದಲ್ಲಿ ಮೋಡಿ ಮಾಡಿದರು.

ಮಧುಮತಿಯಾಗಿ ಸ್ಯಾಂಡಲ್ ವುಡ್ ಗೆ ಮರಳಿದ ಶ್ರೀಯಾ ಶರಣ್ Read More »

ಪಾಸಿಟಿವ್ ಪಾತ್ರದತ್ತ ರಶ್ಮಿತಾ ಚಿತ್ತ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರಿವಳು ಧಾರಾವಾಹಿಯು ಮುಕ್ತಾಯಗೊಂಡಿದೆ. ಸುಖಾಂತ್ಯ ಕಾಣುವ ಮೂಲಕ ತನ್ನ ಪ್ರಯಾಣವನ್ನು ಕೊನೆಗೊಳಿಸಿದೆ. ಯಾರಿವಳು ಧಾರಾವಾಹಿಯಲ್ಲಿ ಖಳನಾಯಕಿ ಗೌತಮಿಯಾಗಿ ನಟಿಸುತ್ತಿದ್ದ ರಶ್ಮಿತಾ ಚೆಂಗಪ್ಪ ಅವರು ತಮ್ಮ ಪಾತ್ರದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. “ಗೌತಮಿ ಪಾತ್ರ ನಿಜಕ್ಕೂ ತುಂಬಾ ಅದ್ಭುತವಾದುದು. ಒಂದೇ ಪಾತ್ರದಲ್ಲಿ ಪಾಸಿಟಿವ್ ಜೊತೆಗೆ ನೆಗೆಟಿವ್ ಆಗಿ ಕಾಣಿಸಿಕೊಂಡಿದ್ದೇನೆ. ಇನ್ನು ಕೊನೆಯ ಒಂದಷ್ಟು ಸಂಚಿಕೆಗಳಲ್ಲಿ ನಟನೆಗೆ ತುಂಬಾನೇ ಅವಕಾಶ ಸಿಕ್ಕಿತ್ತು”ಎನ್ನುತ್ತಾರೆ ರಶ್ಮಿತಾ. ಇನ್ನು ಧಾರಾವಾಹಿ ತಂಡದವರ ಕುರಿತು ಮಾತನಾಡಿರುವ ರಶ್ಮಿತಾ “ಧಾರಾವಾಹಿ ತಂಡ ಕೂಡಾ ತುಂಬಾ ಒಳ್ಳೆಯದಾಗಿತ್ತು. ಕೊನೆಯ ದಿನದ ಶೂಟಿಂಗ್ ತನಕ ನಾವೆಲ್ಲಾ ನಗುನಗುತ್ತಾ, ಸಂತಸದಿಂದ ಶೂಟಿಂಗ್ ಮಾಡುತ್ತಿದ್ದೆವು. ಧಾರಾವಾಹಿ ಮುಗಿಯುತ್ತಿದೆ ಎಂದಾಗ, ಕೊನೆಯ ಸಂಚಿಕೆ ಶೂಟಿಂಗ್ ಮಾಡುವಾಗ ನಾನು ಮಾತ್ರವಲ್ಲದೇ ಇಡೀ ತಂಡದವರು ಭಾವುಕರಾಗಿದ್ದೆವು” ಎಂದು ಹೇಳುತ್ತಾರೆ. ಅಭಿನಯಿಸಿರುವಂತಹ ಹೆಚ್ಚಿನ ಧಾರಾವಾಹಿಗಳಲ್ಲಿ ಖಳನಾಯಕಿಯಾಗಿಯೇ ನಟಿಸಿ ಸೈ ಎನಿಸಿಕೊಂಡಿರುವ ರಶ್ಮಿತಾಗೆ ಸದ್ಯ ಪಾಸಿಟಿವ್ ಪಾತ್ರದಲ್ಲಿ ನಟಿಸುವ ಬಯಕೆ. “ಇಲ್ಲಿಯ ತನಕ ನಾನು ಖಳನಾಯಕಿಯಾಗಿ ನಟಿಸಿದ್ದರೂ ಪ್ರತಿ ಪಾತ್ರವೂ ವಿಭಿನ್ನ ಆಗಿತ್ತು. ನೆಗೆಟಿವ್ ಪಾತ್ರವಾದರೂ ಬೇರೆ ಬೇರೆ ಶೇಡ್ ನ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದಕ್ಕೆ ಸಂತಸವಿದೆ” ಎನ್ನುತ್ತಾರೆ. “ನೆಗೆಟಿವ್ ಪಾತ್ರ ಎಂದರೆ ಯಾವ ರೀತಿಯಾಗಿ ಬೇಕಾದರೂ ನಟಿಸಬಹುದು. ಅದು ನೆಗೆಟಿವ್ ಪಾತ್ರದ ಪ್ಲಸ್ ಪಾಯಿಂಟ್. ಆದರೆ ಸದ್ಯ ನನಗೆ ಪಾಸಿಟಿವ್ ಪಾತ್ರಕ್ಕೆ ಜೀವ ತುಂಬಬೇಕು ಎನ್ನುವ ಆಸೆ. ಇಷ್ಟು ದಿನಗಳ ಕಾಲ ಖಳನಾಯಕಿಯಾಗಿ ಪ್ರೇಕ್ಷಕರು ನನ್ನನ್ನು ಸ್ವೀಕರಿಸಿದ್ದರು. ಇದೀಗ ಪಾಸಿಟಿವ್ ಪಾತ್ರ ಮಾಡಿದಾಗ ವೀಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ತಿಳಿಯುವ ಕುತೂಹಲ ನನಗಿದೆ” ಎನ್ನುತ್ತಾರೆ ರಶ್ಮಿತಾ ಚೆಂಗಪ್ಪ.

ಪಾಸಿಟಿವ್ ಪಾತ್ರದತ್ತ ರಶ್ಮಿತಾ ಚಿತ್ತ Read More »

Scroll to Top