Karnataka Bhagya

ಕ್ರೀಡೆ

ಮತ್ತೆ ನೈಜ ಘಟನೆಯತ್ತ ಮಂಸೋರೆ ಚಿತ್ತ.

‘ನಾತಿಚರಾಮಿ’, ‘ಹರಿವು’, ಹಾಗು ಇತ್ತೀಚಿಗಿನ ‘ಆಕ್ಟ್ 1978’ ಗಳಂತಹ ಮನಕಲುಕುವ ಚಿತ್ರಗಳಿಂದ ಸಮಾಜಕ್ಕೆ ವಿಶೇಷ ಸಂದೇಶಗಳನ್ನು ನೀಡಿದ ನಿರ್ದೇಶಕರು ಮಂಸೋರೆ ಅವರು. ನೈಜ ಹಾಗು ನೈಜತೆಗೆ ಹತ್ತಿರವಾದ ಕಥೆಗಳನ್ನ ತೆಗೆದುಕೊಂಡು, ತನ್ನದೇ ನಿರ್ಲಿಪ್ತ ರೀತಿಯಲ್ಲಿ ಜನರೆದುರಿಗೆ ಅದನ್ನ ಇರಿಸಿ, ಸೈ ಎನಿಸಿಕೊಂಡವರಿವರು. ಎರಡೆರಡು ಬಾರಿ ರಾಷ್ಟ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಕನ್ನಡದ ಹೆಮ್ಮೆಯ ಈ ನಿರ್ದೇಶಕರು ಈಗ ಹೊಸತೊಂದು ಚಿತ್ರವನ್ನ ಆರಂಭಿಸಲಿದ್ದಾರೆ. ವಿಶೇಷವೆಂದರೆ ಈ ಬಾರಿಯು ಕೂಡ ಮಂಸೋರೆ ತೆಕ್ಕೆಯಲ್ಲಿರೋದು ಒಂದು ನೈಜ ಕಥೆಯೇ ಅಂತೆ. ಕೋರೋನ ಲಾಕ್ಡೌನ್ ಸಂಧರ್ಭದಲ್ಲಿ ಹೊಸ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದ ನಿರ್ದೇಶಕರು ಈಗ ಚಿತ್ರೀಕರಣ ಆರಂಭಿಸಿದ್ದಾರಂತೆ. ಬಿಡುಗಡೆ ಮಾಡಿರೋ ಪೋಸ್ಟರ್ ಹಲವರ ತಲೆ ಕೆಡಿಸಿತ್ತು. ಅದರಲ್ಲಿದ್ದ ಶೀರ್ಷಿಕೆ ಹಲವರ ಮನಸೆಳೆದಿತ್ತು. ‘19.20.21’ ಎಂಬ ಶೀರ್ಷಿಕೆ ಕೆಳಗೆ ‘ನೈಜ ಘಟನೆ ಆಧಾರಿತ’ ಎಂದು ಮಂಸೋರೆಪೋಸ್ಟರ್ ನಲ್ಲಿ ಬರೆಸಿದ್ದರು. ಇವರ ಚೊಚ್ಚಲ ಚಿತ್ರ ‘ಹರಿವು’ ಕೂಡ ನೈಜಘಟನೆಯನ್ನೇ ಆಧರಿಸಿತ್ತು. ಹೀಗಾಗಿ ಈ ಪೋಸ್ಟರ್ ಕುತೂಹಲಗಳ ಸರಮಾಲೆಯನ್ನೇ ಸುರಿದಿತ್ತು. ಮಂಸೋರೆ ಅವರ ಹೊಸ ಚಿತ್ರ ‘19.20.21’ಕ್ಕಿರುವ ತಂತ್ರಜ್ಞ ತಂಡ ಬಹುಪಾಲು ಹಳೆ ಗೆಳೆಯರದ್ದೇ. ‘ಆಕ್ಟ್ 1978’ ತಂಡವೇ ಮರಳಿ ನಮ್ಮ ಮುಂದೆ ಬರಲಿದೆ ಎಂಬ ಸುದ್ದಿಯಿದೆ. ಸದ್ಯ ಚಿತ್ರತಂಡದ ಜೊತೆ ಮಲೆನಾಡಿನಲ್ಲಿ ಬೀಡುಬಿಟ್ಟಿರುವ ಮಂಸೋರೆ ಕರಾವಳಿ ಹಾಗು ಉತ್ತರ ಕರ್ನಾಟಕದ ಭಾಗಗಳಲ್ಲೂ ಚಿತ್ರೀಕರಣ ಮಾಡಲಿದ್ದಾರಂತೆ. ‘ಆಕ್ಟ್ 1978’ನಂತೆಯೇ ದೇವರಾಜ್ ಅವರ ನಿರ್ಮಾಣ ಹಾಗು ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.

ಮತ್ತೆ ನೈಜ ಘಟನೆಯತ್ತ ಮಂಸೋರೆ ಚಿತ್ತ. Read More »

ಸಿನಿಮಾದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಕನಸಿನ ರಾಣಿ

ಕನ್ನಡದ ಸಿನಿಮಾ ರಂಗದ ಖ್ಯಾತ ನಟಿ ಮಾಲಾಶ್ರೀ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.ಪತಿ ರಾಮು ನಿಧನದ ನಂತರ ಒಪ್ಪಿಕೊಂಡಿರುವ ಚಿತ್ರ ಇದಾಗಿದ್ದು ಈ ಚಿತ್ರವನ್ನು ರವೀಂದ್ರ ವಂಶಿ ನಿರ್ದೇಶನ ಮಾಡಲಿದ್ದಾರೆ. ಉಪ್ಪು ಹುಳಿ ಖಾರ ಚಿತ್ರದ ನಂತರ ಮಾಲಾಶ್ರೀ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಇದೀಗ ಒತ್ತಾಯದ ಮೇರೆಗೆ ಮತ್ತೆ ಚಿತ್ರರಂಗದತ್ತ ಮರಳಿರುವ ಮಾಲಾಶ್ರೀ ಈ ಸಿನಿಮಾದಲ್ಲಿ ಸೇನಾ ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡುವ ವೈದ್ಯೆಯ ಪಾತ್ರ ನಿರ್ವಹಿಸಲಿದ್ದಾರೆ. ಅವರ ಕೆರಿಯರ್ ನಲ್ಲಿ ಎರಡನೇ ಬಾರಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು ಸಹಜವಾಗಿ ಮಾಸ್ ಅಂಶಗಳು ಇರಲಿದೆ‌‌. ಆಸ್ಪತ್ರೆಯ ಸುತ್ತ ಕತೆಯು ಸುತ್ತಲಿದೆ. ಇನ್ನು ಮಾಲಾಶ್ರೀ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು “ವಿಭಿನ್ನ ರೀತಿಯ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಎಂದು ನಾನು ಬಯಸಿದ್ದೆ. ನಿರ್ದೇಶಕ ರವೀಂದ್ರ ಅವರು ಕಥೆ ಹೇಳಿದಾಗ ಸಂತಸವಾಯಿತು. ಒಪ್ಪಿಕೊಂಡೆ. ಚಿತ್ರದಲ್ಲಿ ನಾನು ಡಾಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ಇನ್ನು ಇದರ ಹೊರತಾಗಿ ಸಿನಿಮಾದಲ್ಲಿ ಒಂದಷ್ಟು ಮಾಸ್ ಅಂಶಗಳು ಕೂಡಾ ಇದೆ. ಒಟ್ಟಾರೆಯಾಗಿ ನಿರ್ದೇಶಕರು ಬಹಳ ಉತ್ತಮವಾಗಿ ನನ್ನ ಪಾತ್ರ ಕಟ್ಟಿ ಕೊಟ್ಟಿದ್ದಾರೆ” ಎನ್ನುತ್ತಾರೆ. ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಸಾಧು ಕೋಕಿಲ ,ರಂಗಾಯಣ ರಘು ,ಪ್ರಮೋದ್ ಶೆಟ್ಟಿ ಹಾಗೂ ಮಂಜು ಪಾವಗಡ ನಟಿಸುತ್ತಿದ್ದಾರೆ. ರಾಮು ಅವರ ನಿಧನದ ನಂತರ ಮಾಲಾಶ್ರೀ ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಚಿತ್ರದ ರಿಲೀಸ್ ಮಾಡಿದ್ದರು. ಈಗ ನಟನೆ ಹಾಗೂ ಪ್ರೊಡಕ್ಷನ್ ಮೇಲೆ ಗಮನ ಹರಿಸಿದ್ದಾರೆ.

ಸಿನಿಮಾದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಕನಸಿನ ರಾಣಿ Read More »

ನನ್ನ ಹಿರಿತೆರೆ ಪಯಣ ಶುರುವಾಗಿದ್ದು ಪಿ ಆರ್ ಕೆ ಪ್ರೊಡಕ್ಷನ್ ನಿಂದ – ಶ್ರುತಿ ರಮೇಶ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಲಕ್ಷಣದಲ್ಲಿ ಖಳನಾಯಕಿ ಶ್ವೇತಾಳ ಪರ್ಸನಲ್ ಅಸಿಸ್ಟೆಂಟ್ ಮಿಲಿ ಆಗಿ ನಟಿಸುತ್ತಿರುವ ಶ್ರುತಿ ರಮೇಶ್ ಚಿಕ್ಕಮಗಳೂರಿನ ತರೀಕೆರೆ ಕುವರಿ. ಇಂಜಿನಿಯರಿಂಗ್ ಪದವಿ ಪಡೆದು ಸದ್ಯ ಕಿರುತೆರೆಯಲ್ಲಿ ಬದುಕು ರೂಪಿಸಿಕೊಂಡಿರುವ ಶ್ರುತಿ ರಮೇಶ್ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದು ಹಾಸ್ಯ ಕಲಾವಿದೆಯಾಗಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಧಾರಾವಾಹಿ ಪಾಪಾ ಪಾಂಡು ಸೀಸನ್ 2 ರಲ್ಲಿ ನಿಮ್ಮಿ ಆಗಿ ನಟಿಸಿ ಸೀರಿಯಲ್ ಲೋಕದಲ್ಲಿ ಮನೆ ಮಾತಾಗಿರುವ ಶ್ರುತಿ ಅವರನ್ನು ಜನ ಇಂದಿಗೂ ಆ ಪಾತ್ರದ ಮೂಲಕವೇ ಗುರುತಿಸುತ್ತಾರೆ. ಹೌದು, ಪಾಪಾ ಪಾಂಡು ಸೀಸನ್ 2 ಮುಗಿದು ವರ್ಷಗಳಾಗುತ್ತಾ ಬಂದರೂ ಶ್ರುತಿ ರಮೇಶ್ ಹೆಸರು ಕೇಳಿದ ಕೂಡಲೇ ನೆನಪಾಗುವುದು ನಿಮ್ಮಿ ಪಾತ್ರ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯಂ ಶಿವಂ ಸುಂದರಂ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸುಬ್ಬಲಕ್ಷ್ಮೀ ಸಂಸಾರ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ, ಸ್ಟಾರ್ ಸುವರ್ಣ ವಾಹಿನಿಯ ಬಿಳಿ ಹೆಂಡ್ತಿ, ಉದಯ ವಾಹಿನಿಯ ಮಾನಸ ಸರೋವರ ಧಾರಾವಾಹಿಯಲ್ಲಿ ಪುಟ್ಟ ಪಾತ್ರಗಳಲ್ಲಿ ನಟಿಸಿ ನಟನೆಯಲ್ಲಿ ಪಳಗಿದ ಶ್ರುತಿ ರಮೇಶ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದು ಎಂದರೆ ಅದು ಪಾಪಾ ಪಾಂಡು ಧಾರಾವಾಹಿಯಲ್ಲಿ. “ನಾನು ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಎಂದರೆ ಪಾಪಾ ಪಾಂಡುವಿನಲ್ಲಿ. ಪಾಪಾ ಪಾಂಡುವಿಗಿಂತಲೂ ಮೊದಲು ಒಂದಷ್ಟು ಧಾರಾವಾಹಿಗಳಲ್ಲಿ ನಟಿಸದ್ದರೂ ಪ್ರಮುಖ ಪಾತ್ರ ಎಂದಾಗ ಸಹಜವಾಗಿ ಆತಂಕವಾಗಿತ್ತು. ನನ್ನಿಂದ ಸಾಧ್ಯನಾ ಎಂಬ ಅನುಮಾನವೂ ಮೂಡಿತ್ತು. ಆದರೆ ದೊಡ್ಡವರು ಮಾತ್ರವಲ್ಲದೇ ಪುಟ್ಟ ಮಕ್ಕಳು ಕೂಡಾ ನಿಮ್ಮಿ ಪಾತ್ರವನ್ನು ಮೆಚ್ಚಿಕೊಂಡಾಗ ತುಂಬಾನೇ ಸಂತಸವಾಗಿತ್ತು. ಮಾತ್ರವಲ್ಲ ಬಣ್ಣದ ಬದುಕಿಗೆ ಬಂದುದು ಸಾರ್ಥಕವೆಂದೆನಿಸಿತ್ತು” ಎಂದು ಹೇಳುವ ಶ್ರುತಿ ರಮೇಶ್ ಒಂದೂವರೆ ವರ್ಷದ ಬಳಿಕ ಮಿಲಿಯಾಗಿ ಮರಳಿದ್ದು ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಪಿಆರ್ ಕೆ ಪ್ರೊಡಕ್ಷನ್ ನಡಿಯಲ್ಲಿ ಇತ್ತೀಚೆಗಷ್ಟೇ ಪ್ರಸಾರವಾದ ಫ್ಯಾಮಿಲಿ ಫ್ಯಾಕ್ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿರುವ ಶ್ರುತಿ ರಮೇಶ್ “ನನ್ನ ಹಿರಿತೆರೆ ಪಯಣ ಶುರುವಾಗಿದ್ದು ಪಿಆರ್ ಕೆ ಪ್ರೊಡಕ್ಷನ್ ನಿಂದ. ಪುನೀತ್ ರಾಜ್ ಕುಮಾರ್ ಬ್ಯಾನರ್ ನಿಂದ ನಾನು ಹಿರಿತೆರೆಗೆ ಕಾಲಿಟ್ಟಿರುವುದು ಸಂತಸ ತಂದಿದೆ. ಇದು ಪುಣ್ಯವೇ ಸರಿ” ಎಂದು ಹೇಳುತ್ತಾರೆ. ಇನ್ನು ಶುಗರ್ ಲೆಸ್ ಸಿನಿಮಾದಲ್ಲಿ ಪೃಥ್ವಿ ಅಂಬರ್ ಜೊತೆ ಅಭಿನಯಿಸಿರುವ ಅವರು ಜೆರ್ಸಿ ನಂ 1, ಸಿರಿ ಲಂಬೋದರ ವಿವಾಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನನ್ನ ಹಿರಿತೆರೆ ಪಯಣ ಶುರುವಾಗಿದ್ದು ಪಿ ಆರ್ ಕೆ ಪ್ರೊಡಕ್ಷನ್ ನಿಂದ – ಶ್ರುತಿ ರಮೇಶ್ Read More »

ಇಪ್ಪತ್ತು ವರ್ಷಗಳಲ್ಲಿ ಕಲಿಯಲಾಗದ್ದನ್ನು ಎರಡು ವರ್ಷದಲ್ಲಿ ಕಲಿತೆ – ಸಂಯುಕ್ತಾ ಹೊರನಾಡು

ರಾಷ್ಟ್ರೀಯ ಲಾಕ್ ಡೌನ್ ಘೋಷಣೆ ಆಗಿ ಎರಡು ವರ್ಷಗಳೇ ಕಳೆದಿವೆ. ಇದರ ಬಳಿಕ ಎಲ್ಲರ ಬದುಕು ಬದಲಾಗಿದೆ. ಹಲವು ಪಾಠಗಳನ್ನು ಕಲಿಸಿದೆ. ನಟಿ ಸಂಯುಕ್ತ ಹೊರನಾಡು ಅವರ ಬದುಕು ಹೇಗೆ ಬದಲಾಗಿದೆ ಹಾಗೂ ಲಾಕ್ ಡೌನ್ ಅವರಿಗೆ ಏನೇನೆಲ್ಲಾ ಕಲಿಸಿದೆ ಎಂಬುದರ ಕುರಿತಾಗಿ ಹೇಳಿದ್ದಾರೆ. “ಈ ಎರಡು ವರ್ಷಗಳಲ್ಲಿ ನಾನು ತುಂಬಾ ಬದಲಾಗಿದ್ದೇನೆ ಎಂದು ಅನಿಸುತ್ತದೆ. ಕೋವಿಡ್ ನಿಂದಾಗಿ ನಾನು ಹೊಸ ವ್ಯಕ್ತಿ ಆಗಿದ್ದೇನೆ. ಜನರು, ಜೀವನ ಮತ್ತು ಪರಸ್ಪರ ಹೇಗೆ ಇರಬೇಕು ಎಂಬುದನ್ನು 20 ವರ್ಷಗಳಲ್ಲಿ ಕಲಿಯದ್ದನ್ನು ಕಳೆದ ಎರಡು ವರ್ಷ ಕಲಿಸಿದೆ. ಸಂಕಷ್ಟಗಳು ಜನರಲ್ಲಿ ಉತ್ತಮ ಹಾಗೂ ಕೆಟ್ಟದ್ದನ್ನು ತರುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ. “ನಾನು ಸಾಕಷ್ಟು ಕೋವಿಡ್ ಕೆಲಸಗಳನ್ನು ಮಾಡಿದ್ದೇನೆ ಮತ್ತು ನಾನು ವ್ಯವಹರಿಸಿದ ರೀತಿಯ ಜನರು, ನಾನು ನೋಡಿದ ನೋವುಗಳು, ಸಾವುಗಳು ಇವೆಲ್ಲವೂ ಹೇಗೆ ಹೊಂದಿಕೊಳ್ಳುವುದು ಎಂಬುದರ ಕುರಿತು ಹೇಳಿವೆ. ನಾನು ಬದುಕು, ಜನರು ಹಾಗೂ ಘಟನೆಗಳನ್ನು ನೋಡುವ ರೀತಿಯೇ ಬದಲಾಗಿದೆ. ಪ್ಯಾಂಡೆಮಿಕ್ ಒಟ್ಟಿಗೆ ಕೆಲಸ ಮಾಡುವುದು ಹಾಗೂ ಪರಸ್ಪರ ಹೇಗೆ ನೋಡುವುದು ಎಷ್ಟು ಮಹತ್ವದ್ದು ಎಂಬುದನ್ನು ಕಲಿಸಿದೆ” ಎನ್ನುತ್ತಾರೆ ಸಂಯುಕ್ತಾ ಹೊರನಾಡು. ಇನ್ನು ನಟನೆಯಲ್ಲಿ ಬ್ಯುಸಿಯಾಗಿರುವ ಸಂಯುಕ್ತಾ “ನಾನು ಕ್ಯಾಮೆರಾ ನೋಡುವ ರೀತಿ, ಸೆಟ್ ಗೆ ಮರಳಿದ ನಂತರ ಪ್ರತಿ ಕ್ಷಣವು ನನ್ನ ಕೆಲಸವನ್ನು ನೋಡುವ ರೀತಿ ಅದ್ಭುತವಾಗಿದೆ. ನಾನು ಗೆಳೆತನಕ್ಕೆ ತುಂಬಾ ಬೆಲೆ ಕೊಡುತ್ತೇನೆ ಹಾಗೂ ಸಂಬಂಧವನ್ನು ಅರ್ಥ ಮಾಡಿಕೊಳ್ಳುತ್ತೇನೆ. ಇದು ನನಗೆ ಆಸಕ್ತಿದಾಯಕವಾದ ಬೆಳವಣಿಗೆಯಾಗಿದೆ” ಎಂದಿದ್ದಾರೆ.

ಇಪ್ಪತ್ತು ವರ್ಷಗಳಲ್ಲಿ ಕಲಿಯಲಾಗದ್ದನ್ನು ಎರಡು ವರ್ಷದಲ್ಲಿ ಕಲಿತೆ – ಸಂಯುಕ್ತಾ ಹೊರನಾಡು Read More »

ಹೆತ್ತವರು ನೀಡಿದ ಮರೆಯಲಾರದ ಉಡುಗೊರೆ ಎಂದ ಮೇಘನಾ ರಾಜ್… ಏನು ಗೊತ್ತಾ?

ನಟಿ ಮೇಘನಾ ರಾಜ್ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರ ನೆಚ್ಚಿನ ಜಡ್ಜ್ ಆಗಿರುವ ಮೇಘನಾ ತನ್ನ ಸ್ಟೈಲ್ ಗೂ ಹೆಸರಾಗಿದ್ದಾರೆ. ವಿವಿಧ ಡಿಸೈನರ್ ಗಳು ರೂಪಿಸಿರುವ ಡ್ರೆಸ್ ಗಳನ್ನು ಧರಿಸಿರುವ ಮೇಘನಾ ಈ ವೀಕೆಂಡ್ ಶೋನಲ್ಲಿ ಧರಿಸಿರುವ ಸೀರೆಯ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ನೇರಳೆ ಬಣ್ಣದ ಅಂಚು ಇರುವ ಹಸಿರು ಬಣ್ಣದ ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅದಕ್ಕೊಪ್ಪುವ ಮ್ಯಾಚಿಂಗ್ ರವಿಕೆ ಹಾಗೂ ಆಭರಣ, ಅಲಂಕಾರದಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಮುಖ್ಯವಾದ ವಿಚಾರವೆಂದರೆ ಈ ಸೀರೆ ಜೊತೆ ಅವರಿಗೆ ಭಾವನಾತ್ಮಕವಾದ ಸಂಬಂಧವಿದೆ. ಹೌದು, ಮೇಘನಾ ಅವರ ಸೀಮಂತದ ಕಾರ್ಯಕ್ರಮಕ್ಕೆ ಅಮ್ಮ ಪ್ರಮೀಳಾ ಜೋಶಾಯ್ ನೀಡಿದ ಸೀರೆ ಇದಾಗಿದೆ. ಇದೇ ಸೀರೆಯನ್ನು ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಡ್ಯಾನ್ಸಿಂಗ್ ಚಾಂಪಿಯನ್ ಶೋ ಗಳ ಮಹಾಮಿಲನ ಸಂಚಿಕೆಯಲ್ಲಿ ಉಟ್ಟುಕೊಂಡಿದ್ದಾರೆ. ಈ ವಿಚಾರವನ್ನು ತನ್ನ ಇನ್ಸಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಡ್ಯಾನ್ಸಿಂಗ್ ಚಾಂಪಿಯನ್ ಮಹಾಮಿಲನ. ಸೀಮಂತದ ಸೀರೆಯನ್ನು ಧರಿಸಲು ಆರಿಸಿಕೊಂಡಿದ್ದೇನೆ. ಹೆತ್ತವರು ನೀಡಿದ ಮರೆಯಲಾಗದ ಉಡುಗೊರೆ. ಈ ಸಂಚಿಕೆಯು ಖಂಡಿತವಾಗಿಯೂ ಈ ಕಾರ್ಯಕ್ರಮವು ನಮ್ಮೆಲ್ಲರ ಅತ್ಯುತ್ತಮತೆಯನ್ನು ಹೇಗೆ ಹೊರತರುತ್ತದೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ” ಎಂದಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ ಮಹಾಮಿಲನ ಈ ಸಂಚಿಕೆ ಮೇಘನಾ ರಾಜ್ ಅವರಿಗೆ ಭಾವನಾತ್ಮಕವಾದ ಸಂಚಿಕೆ ಆಗಿದ್ದು ತಾಯಿ ಹಾಗೂ ನಟಿ ಪ್ರಮೀಳಾ ಜೋಶಾಯ್ ಅವರ ಅನಿರೀಕ್ಷಿತ ಪ್ರವೇಶ ಮೇಘನಾ ಅವರಿಗೆ ಸರ್ಪ್ರೈಸ್ ತಂದಿದೆ. ತಾಯಿ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿರುವ ಮೇಘನಾ ತಾಯಿ ತನಗೆ ದೊಡ್ಡ ಸ್ಪೂರ್ತಿ ಎಂದು ಹೇಳಿದ್ದಾರೆ.

ಹೆತ್ತವರು ನೀಡಿದ ಮರೆಯಲಾರದ ಉಡುಗೊರೆ ಎಂದ ಮೇಘನಾ ರಾಜ್… ಏನು ಗೊತ್ತಾ? Read More »

ನಿಶ್ಚಿತಾರ್ಥ ಮಾಡಿಕೊಂಡ ನಿಕ್ಕಿ ಗಲ್ರಾನಿ

ನಟಿ ಸಂಜನಾ ಗಲ್ರಾನಿ ತಂಗಿ ನಿಕ್ಕಿ ಗಲ್ರಾನಿ ಸಿಹಿ ಸುದ್ದಿ ನೀಡಿದ್ದಾರೆ. ನಿಕ್ಕಿ ಗಲ್ರಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದು ಇತ್ತೀಚೆಗಷ್ಟೇ ತೆಲುಗು ಹಾಗೂ ತಮಿಳಿನ ಖ್ಯಾತ ನಟ ಆದಿ ಪಿನಿಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎರಡು ವರ್ಷಗಳಿಂದ. ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಬಹಳ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆ. ವಿಶೇಷವೆಂದರೆ ಕಳೆದ ಎರಡು ವರ್ಷಗಳಿಂದ ಇವರಿಬ್ಬರೂ ಪ್ರೀತಿ ಮಾಡುತ್ತಿದ್ದರೂ ಎಲ್ಲಿಯೂ ಈ ವಿಚಾರ ಬಹಿರಂಗ ಮಾಡಿರಲಿಲ್ಲ. ಈಗ ತಮ್ಮ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಸಂತಸದ ವಿಚಾರವನ್ನು ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ ನಿಕ್ಕಿ ಗಲ್ರಾನಿ. ನಿಶ್ಚಿತಾರ್ಥದ ಫೋಟೋ ಹಂಚಿಕೊಂಡಿರುವ ಆಕೆ “ನನ್ನ ಜೀವನದಲ್ಲಿ ಇದೊಂದು ಅತ್ಯಮೂಲ್ಯವಾದ ಕ್ಷಣ. ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ನಾವು ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇವೆ.ಇನ್ನು ಈಗಾಗಲೇ ಕುಟುಂಬಸ್ಥರ, ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ” ಎಂದಿದ್ದಾರೆ. ಅತಿ ಶೀಘ್ರದಲ್ಲೇ ಹಸೆಮಣೆ ಏರಲಿರುವ ಈ ಜೋಡಿ “ಯಾಗವರಾಯಿನುಮ್ ನಾ ಕಾಕ್ಕಾ” ಹಾಗೂ ಮರಗಧ ನಾನಯಮ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಸದ್ಯ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ನಿಶ್ಚಿತಾರ್ಥ ಮಾಡಿಕೊಂಡ ನಿಕ್ಕಿ ಗಲ್ರಾನಿ Read More »

‘ರಾಧೆ ಶ್ಯಾಮ್’ ಚಿತ್ರತಂಡದಿಂದ ಗುಡ್ ನ್ಯೂಸ್

ತೆಲುಗು ಚಿತ್ರರಂಗದ ‘ಡಾರ್ಲಿಂಗ್’ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಅತ್ಯಂತ ನಿರೀಕ್ಷೆಗಳನ್ನ ಬೆನ್ನಿಗಂಟಿಸಿಕೊಂಡಿದ್ದ ಚಿತ್ರ ‘ರಾಧೆ ಶ್ಯಾಮ್’ ಮಾರ್ಚ್ 11ರಂದು ಬೆಳ್ಳಿತೆರೆ ಕಂಡದ್ದು ಎಲ್ಲರಿಗೂ ಗೊತ್ತಿರೋ ವಿಷಯ. ರಾಧಾಕೃಷ್ಣ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಬಹುಪಾಲು ಪ್ರೇಕ್ಷಕರ ಮನಸೆಳೆಯುವಲ್ಲಿ ವಿಫಲವಾಗಿತ್ತು. ಚಿತ್ರಮಂದಿರಗಳನ್ನ ಜನರಿಂದ ತುಂಬಿಸಲು ಈ ಸಿನಿಮಾಗೆ ಸಾಧ್ಯವಾಗಲಿಲ್ಲ. ನಿರೀಕ್ಷೆಗಳ ಸಾಗರವನ್ನೇ ಹೊತ್ತುಬಂದಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಸೋತಿದ್ದು ಹಲವಾರು ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿತ್ತು. ಸದ್ಯ ಈ ಸಿನಿಮಾ ಒಟಿಟಿ ಕಡೆಗೆ ಮುಖಮಾಡಿದೆ. ಪ್ರಭಾಸ್ ಗೆ ಜೊತೆಯಾಗಿ ಕುಡ್ಲದ ಕುವರಿ ತೆಲುಗಿನ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿರೋ ಈ ಸಿನಿಮಾ ಇದೇ ಏಪ್ರಿಲ್ 1ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಲು ಲಭ್ಯವಾಗಲಿದೆ. ಬಿಡುಗಡೆಯಾಗಿ ಒಂದು ತಿಂಗಳು ತುಂಬದೆಯೇ ಒಟಿಟಿಗೆ ಬರುತ್ತಿರುವುದು ಅಚ್ಚರಿಯನ್ನ ತಂದರು, ಥೀಯೇಟರ್ಗಳಲ್ಲಿ ನೋಡಲಾಗದ ಅಭಿಮಾನಿಗಳಲ್ಲಿ ಆನಂದವನ್ನ ಈ ವಿಷಯ ತಂದಿದೆ. ಅಮೆಜಾನ್ ಪ್ರೈಮ್ ವಿಡಿಯೋ ಸಂಸ್ಥೆಯು ಟ್ವಿಟ್ಟರ್, ಇನ್ಸ್ಟಾಗ್ರಾಮ್, ಮುಂತಾದ ತನ್ನ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಈ ವಿಚಾರವನ್ನ ಸಿನಿಮಾದ ಪೋಸ್ಟರ್ ಒಂದರ ಜೊತೆಗೆ ಹಂಚಿಕೊಂಡಿದೆ. ರಾಧೆ-ಶ್ಯಾಮನ ಪ್ರೇಮ-ಸಮರದ ಕಥೆಯನ್ನ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳಿಗೆ ಕನ್ನಡ, ತಮಿಳು ತೆಲುಗು ಹಾಗು ಮಲಯಾಳಂ ಭಾಷೆಗಳಲ್ಲಿ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ.

‘ರಾಧೆ ಶ್ಯಾಮ್’ ಚಿತ್ರತಂಡದಿಂದ ಗುಡ್ ನ್ಯೂಸ್ Read More »

ಸಂಚಾರಿ ವಿಜಯ್ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಮಮ್ಮುಟ್ಟಿ

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರ “ತಲೆ ದಂಡ” ವು ಇದೇ ಎಪ್ರಿಲ್ ಒಂದರಂದು ರಿಲೀಸ್ ಆಗಲಿದೆ.ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಅವರು ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಡಿನಲ್ಲಿ ನೆಲೆಸಿ ಮರ ಹಾಗೂ ಪರಿಸರವನ್ನು ಕಾಪಾಡಲು ಹೋರಾಟ ಮಾಡುವ ಪಾತ್ರವಾಗಿದ್ದು ಮತ್ತೊಮ್ಮೆ ನಟನೆಯ ಮೂಲಕ ಸಿನಿ ಪ್ರಿಯರನ್ನು ರಂಜಿಸಲು ವಿಜಯ್ ತಯಾರಾಗಿದ್ದಾರೆ. ಮಲೆಯಾಳಂ ಸಿನಿಮಾರಂಗದ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರು ಸಂಚಾರಿ ವಿಜಯ್ ಜೊತೆಗಿನ ಭೇಟಿಯ ಸುಂದರ ಘಳಿಗೆಯನ್ನು ನೆನಪಿಸಿಕೊಂಡಿದ್ದು, ತಲೆದಂಡ ಸಿನಿಮಾ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ತಲೆದಂಡ ಚಿತ್ರದ ಪೋಸ್ಟರ್ ನ್ನು ತನ್ನ ಪೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿರುವ ಮಮ್ಮುಟ್ಟಿ “ನಾನು ಇಲ್ಲಿ ಕುಳಿತು ಸಂಚಾರಿ ವಿಜಯ್ ಅವರ ನೆನಪುಗಳನ್ನು ಮೆಲುಕು ಹಾಕುತ್ತಿದ್ದೇನೆ. ಅವರಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ನಾವು ಹೈದರಾಬಾದ್ ನಲ್ಲಿ ಅವಾರ್ಡ್ ಫಂಕ್ಷನ್ ನಲ್ಲಿ ಭೇಟಿ ಆಗಿದ್ದೆವು. ಅವರು ನನ್ನ ಅಭಿಮಾನಿ ಎಂದು ಹೇಳಿದಾಗ ನಾನು ನಿಜವಾಗಿಯೂ ವಿನಮ್ರನಾಗಿದ್ದೆ. ಅವರ ಮುಂದಿನ ಚಿತ್ರವನ್ನು ನಾನು ನೋಡಬೇಕೆಂದು ಬಯಸಿದ್ದರು. ನನ್ನ ಆಲೋಚನೆಗಳನ್ನು ಕೇಳಲು ಬಯಸಿದ್ದರು. ಅದು ಅವರ ಕೊನೆ ಎಂದು ಯಾರಿಗೆ ತಿಳಿದಿತ್ತು. ನಾವು ಚಲನಚಿತ್ರವನ್ನು ಹಾಗೂ ಅವರ ಪರಿಶ್ರಮ ಹಾಗೂ ಪ್ರತಿಭೆಯನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದನ್ನು ಅವರು ತಿಳಿಯಲು ಬಯಸುತ್ತಾರೆ ಎಂಬುದು ನನಗೆ ಖಾತ್ರಿಯಾಗಿದೆ” ಎಂದಿದ್ದಾರೆ.

ಸಂಚಾರಿ ವಿಜಯ್ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಮಮ್ಮುಟ್ಟಿ Read More »

ಪಾತ್ರ ನೋಡುವ ದೃಷ್ಟಿಕೋನ ಬದಲಾಗಿದೆ – ಶರ್ಮಿಳಾ ಮಾಂಡ್ರೆ

ಶರ್ಮಿಳಾ ಮಾಂಡ್ರೆ ಚಿತ್ರರಂಗಕ್ಕೆ ಕಾಲಿಟ್ಟು ಹದಿನೈದು ವರ್ಷಗಳೇ ಕಳೆದಿವೆ. 2007ರಲ್ಲಿ ಸಜನಿ ಚಿತ್ರದಲ್ಲಿ ನಾಯಕಿ ಸಜನಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಈ ಬೆಡಗಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಕೃಷ್ಣ, ನವಗ್ರಹ, ಮಸ್ತ್ ಮಜಾ ಮಾಡಿ, ಶಿವಮಣಿ, ವೆಂಕಟ ಇನ್ ಸಂಕಟ, ಸ್ವಯಂವರ, ಕರಿಚಿರತೆ, ಗೋವಾ, ಮುಮ್ತಾಜ್, ಆಕೆ, ಮಾಸ್ ಲೀಡರ್ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಶರ್ಮಿಳಾ ಮಾಂಡ್ರೆ ನಟನೆಯ ಹೊರತಾಗಿ ನಿರ್ಮಾಪಕಿ ಆಗಿಯೂ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿ ಭಡ್ತಿ ಪಡೆದಿರುವ ಶರ್ಮಿಳಾ ಮಾಂಡ್ರೆ ಇದೀಗ ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತಮ್ಮದೇ ಹೋಂ ಪ್ರೊಡಕ್ಷನ್ ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್ ನಡಿಯಲ್ಲಿ ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸತೀಶ್ ನೀನಾಸಂ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ಶರ್ಮಿಳಾ ನಟಿಸುತ್ತಿದ್ದಾರೆ. “ನಿರ್ಮಾಪಕಿಯಾಗಿ ಬದಲಾದ ಮೇಲೆ ಪಾತ್ರವನ್ನು ನೋಡುವ ದೃಷ್ಟಿಕೋನವು ಬದಲಾಗಿದೆ. ಇದು ಬಹು ಮುಖ್ಯವಾದ ಬದಲಾವಣೆ ಎನ್ನಬಹುದು. ಮೊದಲೆಲ್ಲಾ ನನಗೆ ನಟಿಸುವ ಅವಕಾಶ ದೊರೆತಾಗಕೇವಲ ಪಾತ್ರ ,ಕಥೆ ಇತ್ಯಾದಿ ಅಂಶಗಳನ್ನಷ್ಟೇ ನಾನು ಗಮನಿಸುತ್ತಿದ್ದೆ. ಆದರೆ ನಿರ್ಮಾಪಕಿಯಾಗಿ ಬದಲಾದ ಬಳಿಕ ಬೇರೆ ರೀತಿಯ ಅಂಶಗಳತ್ತಲೂ ಗಮನ ಸೆಳೆಯುತ್ತದೆ” ಎಂದು ಹೇಳುತ್ತಾರೆ ಶರ್ಮಿಳಾ ಮಾಂಡ್ರೆ.

ಪಾತ್ರ ನೋಡುವ ದೃಷ್ಟಿಕೋನ ಬದಲಾಗಿದೆ – ಶರ್ಮಿಳಾ ಮಾಂಡ್ರೆ Read More »

ಬಹುಭಾಷಾ ನಟಿ ಮನೆಗೆ ಹೊಸ ಅತಿಥಿಯ ಆಗಮನ

ಬಹುಭಾಷಾ ತಾರೆ ಎಂದು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹರಿಪ್ರಿಯಾ ಅವರಿಗೆ ಪ್ರಾಣಿಗಳೆಂದರೆ ಅಪಾರ ಕಾಳಜಿ. ಕೆಲವು ತಿಂಗಳುಗಳಷ್ಟೇ ತಮ್ಮ ಪ್ರೀತಿಯ ನಾಯಿಯ ಅಗಲುವಿಕೆಯನ್ನು ತಿಳಿಸಿದ್ದ ಹರಿಪ್ರಿಯಾ ದುಃಖತಪ್ತರಾಗಿದ್ದರು. ಆದರೆ ಇದೀಗ ತಮ್ಮ ಮನೆಗೆ ಪುಟ್ಟ ಅತಿಥಿಯನ್ನು ಈಕೆ ಬರಮಾಡಿಕೊಂಡಿದ್ದು ಮನೆಯ ಹೊಸ ಸದಸ್ಯನನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾರೆ. ನಮ್ಮ ಕುಟುಂಬಕ್ಕೆ ಹೊಸದಾಗಿ ಸೇರಿರುವ ಅತಿಥಿ. ಈ ಅತಿಥಿಯ ಹೆಸರು ಕ್ರಿಸ್ಟಲ್. ನೀವು ಇವನನ್ನು ಮೀಟ್ ಮಾಡಲೇಬೇಕು. ನೀಲಿ ಕಂಗಳ ಮೂಲಕ ಮನ ಸೆಳೆಯುವ ಈತನಿಗೆ ಕೇವಲ 3.5 ತಿಂಗಳು.”ಎಂದು ಹೊಸ ಅತಿಥಿಯ ಪರಿಚಯ ಮಾಡಿಕೊಟ್ಟಿದ್ದಾರೆ ಹರಿಪ್ರಿಯಾ. “ಮುದ್ದಿನ ನಾಯಿ ಲಕ್ಕಿಯನ್ನು ಕಳೆದುಕೊಂಡಿದ್ದೇನೆ. ಲಕ್ಕಿ ಹೋದ ಎರಡು ತಿಂಗಳ ಬಳಿಕ ಈತ ಸರ್ಪ್ರೈಸ್ ಗಿಫ್ಟ್ ಆಗಿ ನಮ್ಮ ಮನೆಗೆ ಬಂದನು. ಇದೀಗ ನಾನು ನಿಮಗೆ ಮತ್ತೊಮ್ಮೆ ನನ್ನ ಲಕ್ಕಿಯನ್ನು ಭೇಟಿ ಮಾಡಿಸುತ್ತಿದ್ದೇನೆ. ಲಕ್ಕಿ ಹಾಗೂ ಕ್ರಿಸ್ಟಲ್ ಇವೆರಡು ಹುಟ್ಟಿದ್ದು ಒಂದೇ ದಿನ, ಅದು ಡಿಸೆಂಬರ್ 6. ಸದಾ ನಿಮ್ಮ ಆಶೀರ್ವಾದವನ್ನು ಕ್ರಿಸ್ಟಲ್ ಗೆ ನೀಡಿ” ಎಂದು ಪೋಸ್ಟ್ ಮಾಡಿದ್ದಾರೆ. ಇನ್ನು ಹರಿಪ್ರಿಯಾ ಅವರಿಗೆ ಪ್ರಾಣಿಗಳ ಮೇಲಿರುವ ಪ್ರೀತಿ, ಕಾಳಜಿ ಎಲ್ಲವೂ ಅವರು ಇನ್ ಸ್ಟಾಗ್ರಾಂನಲ್ಲಿ ಹಾಕುವ ಪೋಸ್ಟ್ ಗಳಿಂದಲೇ ತಿಳಿಯುತ್ತದೆ. ಬಿಡುವಿನ ಸಮಯದಲ್ಲಿ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುವ ಆಕೆ ಅವುಗಳ ಜೊತೆಗಿನ ಫೋಟೋವನ್ನಾಗಲೀ, ವಿಡಿಯೋವನ್ನಾಗಲೀ ಅಪ್ ಲೋಡ್ ಮಾಡುವುದನ್ನು ಮರೆಯುವುದಿಲ್ಲ.

ಬಹುಭಾಷಾ ನಟಿ ಮನೆಗೆ ಹೊಸ ಅತಿಥಿಯ ಆಗಮನ Read More »

Scroll to Top