ಮುದ್ದುಮಣಿಯಾಗಿ ಮೋಡಿ ಮಾಡುತ್ತಿರುವ ಈ ಚೆಲುವೆ ಯಾರು ಗೊತ್ತಾ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರಾವಾಹಿಯು ಯಶಸ್ವಿ 1000 ಸಂಚಿಕೆ ಪೂರೈಸಿದ್ದು ಒಂದು ತಿಂಗಳ ಹಿಂದೆಯಷ್ಟೇ ಮುಕ್ತಾಯಗೊಂಡಿತ್ತು. ಇದರ ಜೊತೆಗೆ ಮುದ್ದುಲಕ್ಷ್ಮಿ ಧಾರಾವಾಹಿಯ ಹೊಸ ಅಧ್ಯಾಯವೂ ಆರಂಭವಾಗಿತ್ತು. ಮುದ್ದುಲಕ್ಷ್ಮಿಯ ಮುದ್ದುಮಣಿಗಳು ಎಂಬ ಶೀರ್ಷಿಕೆಯಲ್ಲಿ ಹೊಸ ಅಧ್ಯಾಯ ಪ್ರಸಾರವಾಗುತ್ತಿದ್ದು ಮುದ್ದುವಿನ ಬೆಳೆದು ನಿಂಯ ಮಕ್ಕಳ ಕತೆಯನ್ನು ಅದು ಒಳಗೊಂಡಿದೆ. ಮುದ್ದುಲಕ್ಷ್ಮಿ ಮಗಳು ದೃಷ್ಟಿಯಾಗಿ ನಟಿಸುತ್ತಿರುವ ಸಮೀಕ್ಷಾಗೆ ಕಿರುತೆರೆ ಹೊಸದೇನಲ್ಲ. ಮೊದಲ ಆಡಿಶನ್ ನಲ್ಲಿಯೇ ನಟಿಸುವ ಅವಕಾಶ ಪಡೆದ ಈಕೆ ಖಳನಾಯಕಿಯಾಗಿಯೂ ಮೋಡಿ ಮಾಡಿದ ಪ್ರತಿಭೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮೀನಾಕ್ಷಿ ಮದುವೆ ಧಾರಾವಾಹಿಯಲ್ಲಿ ನಾಯಕಿ ಮೀನಾಕ್ಷಿ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಸಮೀಕ್ಷಾ ಮೊದಲ ಧಾರಾವಾಹಿಯಲ್ಲಿಯೇ ಪ್ರೇಕ್ಷಕರಿಗೆ ಹತ್ತಿರವಾದರು. ಮುಂದೆ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ಖಳನಾಯಕಿ ಶನಾಯ ಪಾತ್ರಕ್ಕೆ ಜೀವ ತುಂಬಿದರು. ಖಳನಾಯಕಿ ಆಗಿ ಸೈ ಎನಿಸಿಕೊಂಡಿರುವ ಸಮೀಕ್ಷಾ ಮುಂದೆ ಮೂರುಗಂಟು ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ಮಿಂಚಿದರು. ಮೂರುಗಂಟುವಿನಲ್ಲಿ ಪಾವನಿ, ಶ್ರಾವಣಿ ಆಗಿ ಕಾಣಿಸಿಕೊಂಡಿರುವ ಈಕೆ ಒಂದೇ ಪಾತ್ರದಲ್ಲಿ ನೆಗೆಟಿವ್ ಹಾಗೂ ಪಾಸಿಟಿವ್ ಅವತಾರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಮುಂದೆ ಮನಸ್ಸೆಲ್ಲಾ ನೀನೆ ಧಾರಾವಾಹಿಯಲ್ಲಿ ಸಂಜನಾ ಆಗಿ ನಟಿಸಿದ್ದ ಈಕೆ ಸದ್ಯ ದೃಷ್ಡಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿರುವ ಸಮೀಕ್ಷಾ ದಿ ಟೆರರಿಸ್ಟ್ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ತಂಗಿಯಾಗಿ ಅಭಿನಯಿಸಿದರು. 96 ಸಿನಿಮಾದಲ್ಲಿ ಜ್ಯೂನಿಯರ್ ಜಾನು ಆಗಿ ಕಾಣಿಸಿಕೊಂಡಿದ್ದ ಈಕೆ ಫ್ಯಾನ್, ನೀರೆ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಮುದ್ದುಮಣಿಯಾಗಿ ಮೋಡಿ ಮಾಡುತ್ತಿರುವ ಈ ಚೆಲುವೆ ಯಾರು ಗೊತ್ತಾ? Read More »