Karnataka Bhagya

ದೇಶ

20 ವರ್ಷದ ನಂತರವೂ ಲಕ್ಕಿ ಹೀರೋಯಿನ್ ಮರೆಯದ ಚಾಲೆಂಜಿಂಗ್ ಸ್ಟಾರ್

ನಟ ದರ್ಶನ್ ಅಭಿನಯದ ಮೆಜೆಸ್ಟಿಕ್ ಸಿನಿಮಾ ಬಿಡುಗಡೆಯಾಗಿ ಇಪತ್ತು ವರ್ಷ ತುಂಬಿದೆ…ಇದೇ ಸಂಭ್ರಮದಲ್ಲಿ ಚಿತ್ರತಂಡ ಇತ್ತೀಚೆಗಷ್ಟೆ ಆಚರಿಸಿತು… ಮೆಜೆಸ್ಟಿಕ್ ಸಿನಿಮಾ ದರ್ಶನ್ ಅವರ ಕೆರಿಯರ್ ಗೆ ಸಖತ್ ಸಪೋರ್ಟ್ ಮಾಡಿದ್ದು…. ಮೊದಲ ಸಿನಿಮಾದಲ್ಲೇ ದರ್ಶನ್ ಸಕ್ಸಸ್ ಬಾರಿಸಿದ್ರು …ಇತ್ತೀಚೆಗಷ್ಟೇ ಸಿನಿಮಾದ 20ವರ್ಷದ ಸಂಭ್ರಮವನ್ನ ಆಚರಣೆ ಮಾಡಲಾಯ್ತು….ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್ ಅಂದಿನ ದಿನಗಳನ್ನು ಮೆಲುಕು ಹಾಕಿದ್ರು… ಸಿನಿಮಾ ಆರಂಭ ಮುಂಚೆಯಿದ್ದ ಕಷ್ಟದ ದಿನಗಳು… ಅವಕಾಶ ಸಿಗುವುದಕ್ಕೆ ಪಟ್ಟ ಕಷ್ಟಗಳು… ಆಗ ಸಹಾಯ ಮಾಡಿದ ವ್ಯಕ್ತಿಗಳು ಹೀಗೆ ಸಾಕಷ್ಟು ವಿಚಾರಗಳನ್ನ ಮಾಧ್ಯಮದ ಮುಂದೆ ಹಂಚಿ ಕೊಂಡರು .. ಇನ್ನು ಸಿನಿಮಾದ ನಾಯಕಿಯ ಬಗ್ಗೆ ಮಾತನಾಡಿದ ದರ್ಶನ್ ರೇಖಾ ಅವರು ನನಗೆ ಎಂದೆಂದಿಗೂ ಲಕ್ಕಿ ನಟಿ ಎಂದರು…ಈ ವಿಚಾರವನ್ನ ಹೇಳಿಕೊಳ್ಳಲು ನನಗೆ ತುಂಬಾ ಖುಷಿಯಾಗುತ್ತದೆ…. ಮೆಜೆಸ್ಟಿಕ್ ಸಿನಿಮಾದಲ್ಲಿ ತಂಗಾಳಿ ಮೇಲೆ ಹಾಡಿಗೆ ನಾನು ಕಮ್ಮಿ ಅಂದರೂ ಮೂವತ್ತು ರಿಂದ ನಲವತ್ತು ಟೇಕ್ ತೆಗೆದುಕೊಂಡಿದ್ದೆ…ರೀಲ್ ಬೇರೆ ಹೋಗ್ತಾ ಇತ್ತು… ಆದ್ರೂ ನಟಿ ರೇಖಾ ಅವರು ಮಾತ್ರ ದರ್ಶನ್ ನಿಮ್ಮ ಕೈಲಿ ಆಗುತ್ತೆ ಏನೂ ಆಗಲ್ಲ ಅಂತ ಧೈರ್ಯ ತುಂಬಿದರು… ನಟಿ ರೇಖಾ ಮಾಡಿದ ಸಪೋರ್ಟ್ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎಂದರು ..

20 ವರ್ಷದ ನಂತರವೂ ಲಕ್ಕಿ ಹೀರೋಯಿನ್ ಮರೆಯದ ಚಾಲೆಂಜಿಂಗ್ ಸ್ಟಾರ್ Read More »

ಹಿರಿಯ ನಟ ರಾಜೇಶ್ ಆರೋಗ್ಯ ಸ್ಥಿತಿ ಗಂಭೀರ

ಕನ್ನಡ ಸಿನಿಮಾರಂಗದ ಹಿರಿಯ ನಟ ರಾಜೇಶ್ ಅವರ ಆರೋಗ್ಯ ಸ್ಥಿತಿ ಗಂಭಿರವಾಗಿದೆ… ಕಲಾತಪಸ್ವಿ ಎಂದೇ ಪ್ರಖ್ಯಾತಿ ಗಳಿಸಿರುವ ರಾಜೇಶ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಜೇಶ್ ಅವರಿಗೆ ಚಿಕಿತ್ಸೆ ನೀಡುತ್ತಿತ್ತು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳ ಬಳಗ ಪ್ರಾರ್ಥನೆ ಸಲ್ಲಿಸುತ್ತಿದೆ… 200 _ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಾಜೇಶ್ ಅವರು ರಾಜ್ ಕುಮಾರ್ ,ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಅನೇಕ ರ ಜತೆ ತೆರೆಹಂಚಿಕೊಂಡಿದ್ದರು… ಅಷ್ಟೇ ಅಲ್ಲದೆ ನಾಯಕ ನಟರಾಗಿ ಕೂಡ ಗುರ್ತಿಸಿಕೊಂಡಿದ್ದರು ..

ಹಿರಿಯ ನಟ ರಾಜೇಶ್ ಆರೋಗ್ಯ ಸ್ಥಿತಿ ಗಂಭೀರ Read More »

ಸ್ಯಾಂಡಲ್ ವುಡ್ ಕಲಾವಿದರಿಂದ ಅಮ್ಮು ಅವರಿಗೆ ಸಿಕ್ತು ಪ್ರೀತಿ ಆಶೀರ್ವಾದ

-ಸ್ಯಾಂಡಲ್ ವುಡ್ ಗೋಲ್ಡನ್ ಗರ್ಲ್ ನಟಿ ಅಮೂಲ್ಯ ಇನ್ನು ಕೆಲವೇ ದಿನಗಳಲ್ಲಿ ತಾಯಿಯಾಗುತ್ತಿದ್ದಾರೆ… -ತುಂಬು ಗರ್ಭಿಣಿಯಾಗಿರುವ ಅವರಿಗೆ ಇತ್ತೀಚೆಗಷ್ಟೇ ಸಂಪ್ರದಾಯಬದ್ಧವಾಗಿ ಸೀಮಂತ ಮಾಡಲಾಯಿತು.. -ಅದಾದ ನಂತರ ಅಮೂಲ್ಯ ಅವರ ಗೆಳತಿಯರೆಲ್ಲ ಸೇರಿ ಬೇಬಿ ಶವರ್ ಕಾರ್ಯಕ್ರಮವನ್ನ ಮಾಡಿದ್ರು … -ಈ ಅಮೂಲ್ಯ ಅವರ ಪತಿ ಜಗದೀಶ್ ಅಮೂಲ್ಯಗೆ ಮತ್ತೊಮ್ಮೆ ಅದ್ದೂರಿಯಾದ ವಿಶೇಷ ಕಾರ್ಯಕ್ರಮವನ್ನ ಮಾಡ್ತಿದ್ದಾರೆ ಈ ಕಾರ್ಯಕ್ರಮದಲ್ಲಿ ಇಡೀ ಸ್ಯಾಂಡಲ್ ವುಡ್ ಗಣ್ಯರು ಭಾಗಿಯಾಗಿದ್ದಾರೆ -ಅಮೂಲ್ಯ ಬೇಬಿ ಶವರ್ ನಲ್ಲಿ ಐರಾ ಹಾಗೂ ರಾಧಿಕಾ -ಸ್ಯಾಂಡಲ್ ವುಡ್ ಬಳಗವೇ ಭಾಗಿ ಆಯ್ತು‌ ಅಮೂಲ್ಯ ಮನೆ ಸಂಭ್ರಮದಲ್ಲಿ

ಸ್ಯಾಂಡಲ್ ವುಡ್ ಕಲಾವಿದರಿಂದ ಅಮ್ಮು ಅವರಿಗೆ ಸಿಕ್ತು ಪ್ರೀತಿ ಆಶೀರ್ವಾದ Read More »

ಮೇಘಾ ಶೆಟ್ಟಿ ಮನೆಯಲ್ಲಿ ಮದುವೆ ಸಂಭ್ರಮ..‌. ವಧು ಯಾರು ಗೊತ್ತಾ?

ಮೇಘಾ ಶೆಟ್ಟಿ… ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ನಟಿಸಿರುವ ಮೇಘಾ ಶೆಟ್ಟಿ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಅರೇ ಹೇಳದೇ ಕೇಳದೇ ಮೇಘಾ ಶೆಟ್ಟಿ ಹಸೆಮಣೆ ಏರುತ್ತಿದ್ದಾರಾ? ಯಾರಪ್ಪ ಹುಡುಗ ಎಂದು ಕನ್ ಫ್ಯೂಸ್ ಆಗಬೇಡಿ‌.ಯಾಕೆಂದರೆ ಮದುವೆಯೇನೂ ಆಗುತ್ತಿರುವುದು ನಿಜ. ಆದರೆ ಮದುವೆಯಾಗುತ್ತಿರುವವರು ಮೇಘಾ ಶೆಟ್ಟಿ ಅಕ್ಕ ಸುಷ್ಮಾ ಶೆಟ್ಟಿ. ಅಕ್ಕನ ಮದುವೆಯ ಸಂಭ್ರಮದಲ್ಲಿ ಇರುವ ಮೇಘಾ ಶೆಟ್ಟಿ ಸಂತಸದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಹಂದಿ ಶಾಸ್ತ್ರದ ವಿಡಿಯೋ ಹಾಗೂ ಫೋಟೋಗಳನ್ನು ಮೇಘಾ ಶೆಟ್ಟಿ ಹಂಚಿಕೊಂಡಿದ್ದಾರೆ. ಮೇಘಾ ಶೆಟ್ಟಿ ಅಕ್ಕ ಸುಷ್ಮಾ ಶೆಟ್ಟಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದು ಸ್ವತಃ ಅನು ಸಿರಿಮನೆ ಪಾತ್ರಕ್ಕೆ ಮೇಕಪ್ ಮಾಡುವುದು ಅವರೇ ಎನ್ನುವುದು ವಿಶೇಷ. ವಿನೋದ್ ಜಿ ಅವರ ಜೊತೆ ದಾಂಪತ್ಯ ಜೀವನ ಆರಂಭಿಸಲಿದ್ದಾರೆ ಸುಷ್ಮಾ. ಒಟ್ಟಿನಲ್ಲಿ ಈ ಸಂಭ್ರಮದ ಕ್ಷಣಕ್ಕೆ ಬಂಧುಮಿತ್ರರು, ಸ್ನೇಹಿತರು ಕೂಡಾ ಹಾಜರಾಗಿದ್ದು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಮೇಘಾ ಶೆಟ್ಟಿ ಮನೆಯಲ್ಲಿ ಮದುವೆ ಸಂಭ್ರಮ..‌. ವಧು ಯಾರು ಗೊತ್ತಾ? Read More »

ವಿಕಲಾಂಗ ಮಕ್ಕಳನ್ನು ದತ್ತು ಪಡೆದ ಕಿಸ್ ಬೆಡಗಿ… ಎರಡು ಮಕ್ಕಳ ತಾಯಿಯಾದ ಶ್ರೀಲೀಲಾ

ಕಿಸ್ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಶ್ರೀಲೀಲಾ ಈಗ ಸಿನಿಮಾದ ಹೊರತಾಗಿ ಸಾಮಾಜಿಕ ಕಾರ್ಯಕ್ರಮದ ಮೂಲಕವೂ ಸುದ್ದಿಯಲ್ಲಿದ್ದಾರೆ. ಹೌದು, ಶ್ರಿಲೀಲಾ ಅವರು ಅನಾಥಾಶ್ರಮದಿಂದ ಇಬ್ಬರು ವಿಕಲಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ. ಗುರು ಎಂಬ ಹತ್ತು ತಿಂಗಳಿನ ಹುಡುಗ ಹಾಗೂ ಶೋಭಿತ ಎಂಬ ಹುಡುಗಿಯನ್ನು ದತ್ತು ಪಡೆದಿರುವ ಶ್ರೀಲೀಲಾ ಸ್ವಲ್ಪ ಹೊತ್ತು ಆಶ್ರಮದ ಮಕ್ಕಳೊಂದಿಗೆ ಕಾಲ ಕಳೆದಿದ್ದಾರೆ. ಶ್ರೀಲೀಲಾ ಅವರ ಮಹತ್ಕಾರ್ಯವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. “ಬೈ ಟು ಲವ್” ಸಿನಿಮಾದಲ್ಲಿ ನಟಿಸಿರುವ ಶ್ರೀಲೀಲಾ ಸದ್ಯ ಸಿನಿಮಾ ಪ್ರಚಾರದ ಬ್ಯುಸಿಯಲ್ಲಿದ್ದಾರೆ. ಈ ನಡುವೆ ಶ್ರೀಲೀಲಾ ಅವರು ಆಶ್ರಮಕ್ಕೆ ತೆರಳಿದ್ದು ಅಲ್ಲಿನ ಮಕ್ಕಳ ಸ್ಥಿತಿ ಕಂಡು ಭಾವುಕರಾದರು‌. ಮಾತ್ರವಲ್ಲ ಶ್ರೀಲೀಲಾ ಅವರು ಇಬ್ಬರು ವಿಕಲಾಂಗ ಮಕ್ಕಳನ್ನು ದತ್ತು ಪಡೆಯುವ ನಿರ್ಧಾರವನ್ನು ಕೈಗೊಂಡು ಇತರರಿಗೆ ಮಾದರಿಯಾಗಿದ್ದಾರೆ. ಅಚ್ಚರಿಯ ವಿಚಾರವೆಂದರೆ ಚೆಂದುಳ್ಳಿ ಚೆಲುವೆ ಬೈಟು ಲವ್ ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಇದೇ 18ಕ್ಕೆ ಚಿತ್ರ ತೆರೆಗೆ ಬರಲಿದೆ. ಕಿಸ್ ಸಿನಿಮಾ ಮೂಲಕ ಕೆರಿಯರ್ ಆರಂಭಿಸಿದ ಶ್ರೀಲೀಲಾ ಭರಾಟೆ ಚಿತ್ರದಲ್ಲಿ ನಟಿಸಿದರು. ಪೆಲ್ಲಿ ಸಂದಡಿ ಚಿತ್ರದ ಮೂಲಕ ಟಾಲಿವುಡ್ ಗೆ ಕಾಲಿಟ್ಟ ಇವರು ರವಿ ತೇಜ ಜೊತೆಗೆ ಧಮಾಕಾ ದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಜೊತೆ ಎರಡನೇ ಹೀರೋಯಿನ್ ಆಗಿ ನಟಿಸಲು ಆಫರ್ ಬಂದಿದೆ ಎಂಬ ಗಾಸಿಪ್ ಕೇಳಿ ಬಂದಿತ್ತು. ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿಲ್ಲ.

ವಿಕಲಾಂಗ ಮಕ್ಕಳನ್ನು ದತ್ತು ಪಡೆದ ಕಿಸ್ ಬೆಡಗಿ… ಎರಡು ಮಕ್ಕಳ ತಾಯಿಯಾದ ಶ್ರೀಲೀಲಾ Read More »

ತಮಿಳುನಾಡು ಸಿಎಂ ಅವರನ್ನ ಭೇಟಿ ಮಾಡಿದ ಶಿವರಾಜ್ ಕುಮಾರ್

ಸ್ಯಾಂಡಲ್ ವುಡ್ ನ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ …ಎಲ್ಲರಿಗೂ ಗೊತ್ತಿರುವಂತೆ ಶಿವರಾಜ್ ಕುಮಾರ್ ಅವರಿಗೆ ತಮಿಳುನಾಡಿನಲ್ಲಿ ಸಾಕಷ್ಟು ಜನ ಸ್ನೇಹಿತರಿದ್ದಾರೆ…ಚೆನ್ನೈನಲ್ಲೇ ತಮ್ಮ ವಿದ್ಯಾಭ್ಯಾಸ ಹಾಗೂ ಆ್ಯಕ್ಟಿಂಗ್ ಟ್ರೈನಿಂಗ್ ಮುಗಿಸಿದಂತಹ ಶಿವಣ್ಣ ಅವರಿಗೆ ಚೆನ್ನೈ ನಡುವೆ ಅವಿನಾಭಾವ ಸಂಬಂಧವಿದೆ.. ಚೆನ್ನೈನ ತಮ್ಮ ಸ್ನೇಹಿತರೊಬ್ಬರ ಮಗಳ ಮದುವೆಗೆ ಶಿವಣ್ಣ ಇತ್ತೀಚೆಗಷ್ಟೇ ತೆರಳಿದ್ದು ಅದೇ ಸಮಯದಲ್ಲಿ ತಮಿಳುನಾಡಿನ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ… ತಮಿಳುನಾಡಿನ ಸಿಎಂ ಆಗಿರುವಂತಹ ಸ್ಟಾಲಿನ್ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿದ್ದು ಕೆಲ ಕಾಲ ಅವರ ಮನೆಯಲ್ಲೇ ಕಳೆದಿದ್ದಾರೆ …ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಇಬ್ಬರೂ ಕೂಡ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ… ಸದ್ಯ ಶಿವರಾಜ್ ಕುಮಾರ್ ಹಾಗೂ ಸ್ಟಾಲಿನ್ ಅವರ ಭೇಟಿ ಕುತೂಹಲ ಕೆರಳಿಸಿದ್ದು, ಸದ್ಯ ಇವರಿಬ್ಬರು ಯಾವ ಕಾರಣಕ್ಕೆ ಇವರಿಬ್ಬರು ಭೇಟಿ ಮಾಡಿದ್ದಾರೆ ಎಂಬ ಕೌತುಕ ಹೆಚ್ಚಾಗಿದೆ… ಆದರೆ ಮೂಲಗಳ ಪ್ರಕಾರ ಇದೊಂದು ಅನೌಪಚಾರಿಕ ಭೇಟಿ ಎಂದು ತಿಳಿದುಬಂದಿದೆ …

ತಮಿಳುನಾಡು ಸಿಎಂ ಅವರನ್ನ ಭೇಟಿ ಮಾಡಿದ ಶಿವರಾಜ್ ಕುಮಾರ್ Read More »

ತನ್ನ ಸಿನಿಮಾ‌ ಬಗ್ಗೆ ಬೇಸರ ವ್ಯಕ್ತ ಪಡಿಸಿದ‌ ವಿನೋದ್ ಪ್ರಭಾಕರ್

ವಿನೋದ್ ಪ್ರಭಾಕರ್ ಅಭಿನಯದ ವರದ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ‌…ಚಿತ್ರಕ್ಕೆ ಉದಯ್ ಪ್ರಕಾಶ್ ನಿರ್ದೇಶನ ಮಾಡಿದ್ದು ವಿನೋದ್ ಪ್ರಭಾಕರ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರೆ ಈಗಾಗಲೇ ಚಿತ್ರರಂಗದ ಕೆಲ ಗಣ್ಯರು ಸಿನಿಮಾದ ಹಾಡುಗಳನ್ನ ಬಿಡುಗಡೆ ಮಾಡುವ ಮೂಲಕ ವರ್ಗ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ … ವರದ ಸಿನಿಮಾ ಒಳ್ಳೆ ಪ್ರಚಾರ ಗಿಟ್ಟಿಸಿಕೊಂಡಿತು ತೆರೆಗೆ ಬರಲು ಸಿದ್ಧವಾಗಿದೆ ಆದರೆ ಸಿನಿಮಾ ಬಗ್ಗೆ ಸ್ವತಃ ನಟ ವಿನೋದ್ ಪ್ರಭಾಕರ್ ರವರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ …ಇತ್ತೀಚಿಗಷ್ಟೆ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ವೇದಿಕೆಯ ಮೇಲೆಯೇ ನಟ ವಿನೋದ್ ಪ್ರಭಾಕರ್ ಹಾಗೂ ನಿರ್ದೇಶಕ ಉದಯ್ ಪ್ರಕಾಶ್ ನಡುವೆ ವೈಮನಸ್ಸು ಇರುವುದು ವ್ಯಕ್ತವಾಗಿದೆ …ವೇದಿಕೆ‌ ಮೇಲೆಯೇ ಅಸಮಾಧಾನ ಹೊರ ಹಾಕಿದಾರೆ ವಿನೋದ್ ಪ್ರಭಾಕರ್…. ಚಿತ್ರದ ಟ್ರೈಲರ್ ನಲ್ಲಿ ಪುನೀತ್ ನಮನ ಭಾವಚಿತ್ರ ಹಾಕಿಲ್ಲ ಎಂದು ವಿನೋದ್ ಬೇಸರ ವ್ಯಕ್ತ ಪಡಿಸಿದ್ದಾರೆ….ನಾನು ಕೆಲವು ಕೆಲಸದಲ್ಲಿ ಬ್ಯುಸಿಯಾಗಿದ್ದೆ …ಅದಕ್ಕೆ ಈಗ ಟ್ರೈಲರ್ ರಿಲೀಸ್ ಆದಾಗ ಗೊತ್ತಾಯ್ತು…ನಿಯತ್ತಾಗಿರೋನಿಗೆ ಎದೆ ತುಂಬಾ ಪ್ರೀತಿ ಕೊಡ್ತಿನಿ ನಿಯತ್ತಾಗಿಲ್ದಿರೋನಿಗೆ ಎದೆ ಬಗೆದು ಪ್ರಾಣ ತೆಗೀತಿನಿ ಎಂದು ರಿಯಲ್ ಲೈಫ್ ನಲ್ಲಿಯೂ ಡೈಲಾಗ್ ಹೊಡೆದಿದ್ದಾರೆ ವಿನೋದ್ ಪ್ರಭಾಕರ್

ತನ್ನ ಸಿನಿಮಾ‌ ಬಗ್ಗೆ ಬೇಸರ ವ್ಯಕ್ತ ಪಡಿಸಿದ‌ ವಿನೋದ್ ಪ್ರಭಾಕರ್ Read More »

ನಾಗಿಣಿ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್… ಸ್ವಪ್ನಸುಂದರಿಯಾಗಿ ರಂಜಿಸಲಿದ್ದಾರೆ ಶಿವಾನಿ

ಕನ್ನಡ ಕಿರುತೆರೆಯಲ್ಲಿ ಹೊಸದಾಗಿರುವ ಹವಾ ಸೃಷ್ಟಿ ಮಾಡಿರುವ ಧಾರಾವಾಹಿಗಳ ಪೈಕಿ ನಾಗಿಣಿಯೂ ಕೂಡಾ ಒಂದು. ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯು ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿತ್ತು. ಬರೋಬ್ಬರಿ ಸಾವಿರ ಸಂಚಿಕೆಗಳನ್ನು ಪೂರೈಸಿದ್ದ ನಾಗಿಣಿಯಲ್ಲಿ ದೀಪಿಕಾ ದಾಸ್ ಹಾಗೂ ದೀಕ್ಷಿತ್ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿದ್ದರು. ಇದೀಗ ನಾಗಿಣಿ ಧಾರಾವಾಹಿಯ ಸೀಕ್ವೆಲ್ ನಾಗಿಣಿ 2 ಕೂಡಾ ಆರಂಭವಾಗಿದ್ದು ಇದರಲ್ಲಿ ನಮೃತಾ ಗೌಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟಿಆರ್ ಪಿಯಲ್ಲಿ ಟಾಪ್ ಸ್ಥಾನದಲ್ಲಿ ಇರುವ ನಾಗಿಣಿ 2 ಧಾರಾವಾಹಿಯ ಬಗ್ಗೆ ಇದೀಗ ಒಂದು ಕುತೂಹಲಕಾರಿ ವಿಷಯ ಹೊರಬಿದ್ದಿದೆ. ವಿಭಿನ್ನ ಕಥೆಯ ಮೂಲಕ ಸೀರಿಯಲ್ ವೀಕ್ಷಕರ ಮನ ಸೆಳೆದಿರುವ ನಾಗಿಣಿ ಧಾರಾವಾಹಿ ಕಥೆ ತಿರುವು ಪಡೆದುಕೊಂಡಿದೆ. ಹೌದು, ಇದೀಗ ಧಾರಾವಾಹಿಯ ಸಂಪೂರ್ಣ ಕಥೆ ಬದಲಾಗಿದ್ದು ಹೊಸ ಅಧ್ಯಾಯ ಆರಂಭವಾಗಲಿದೆ. ಇದರಲ್ಲಿ ಶಿವಾನಿ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ದಿನಗಳ ಕಾಲ ನಾಗಿಣಿಯಾಗಿದ್ದ ಶಿವಾನಿ ಇನ್ನು ಮುಂದೆ ಸ್ವಪ್ನ ಸುಂದರಿ ಶೈಲ ಆಗಿ ನಿಮ್ಮನ್ನು ರಂಜಿಸಲು ಬರುತ್ತಿದ್ದಾರೆ. ಈಗಾಗಲೇ ಪೋಸ್ಟರ್ ರಿಲೀಸ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಅಂದ ಹಾಗೇ ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ನಾಟಕದ ಪೋಸ್ಟರ್ ನಂತಿದ್ದು ಮುಂದಿನ ದಿನಗಳಲ್ಲಿ ಧಾರಾವಾಹಿತು ಅದ್ಯಾವ ರೀತಿಯಲ್ಲಿ ಸಾಗಬಹುದು ಎಂದು ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ನಾಗಿಣಿ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್… ಸ್ವಪ್ನಸುಂದರಿಯಾಗಿ ರಂಜಿಸಲಿದ್ದಾರೆ ಶಿವಾನಿ Read More »

ತೂಕ ಇಳಿಸಿಕೊಂಡಿರುವ ಸಮೀರಾ ರೆಡ್ಡಿ ಹೇಳಿದ್ದೇನು ಗೊತ್ತಾ?

ವರದನಾಯಕ ಸಿನಿಮಾದಲ್ಲಿ ನಾಯಕಿ ಲಕ್ಷ್ಮಿ ಯಾಗಿ ಅಭಿನಯಿಸುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಮಿಂಚಿದ್ದ ಸಮೀರಾ ರೆಡ್ಡಿವರ್ಷದ ಹಿಂದೆ ಹೆಣ್ಣು ಮಗುವಿನ ತಾಯಿಯಾಗಿದ್ದರು. ಸದ್ಯ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಸಮೀರಾ ಬಣ್ಣದ ಲೋಕದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ‌. ಇದರ ನಡುವೆಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಸಮೀರಾ ರೆಡ್ಡಿ ಹೆಚ್ಚಾಗಿಸ್ಫೂರ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಇದರ ಜೊತೆಗೆ ಪ್ರತಿ ಶುಕ್ರವಾರ ತಮ್ಮ ಫಿಟ್ ನೆಸ್ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಸಮೀರಾ ಇದೀಗ ತಾನು ಎಷ್ಟು ಶಕ್ತಿಯುತವಾಗಿದ್ದೇನೆ ಹಾಗೂ ಆಹಾರ ಪದ್ಧತಿಯು ಹೇಗೆ ಬದಲಾಗಿದೆ ಎಂಬುದನ್ನು ತೆರೆದಿಟ್ಟಿದ್ದಾರೆ. ಸದ್ಯ 11 ಕೆಜಿ ತೂಕ ಇಳಿಸಿಕೊಂಡಿರುವ ಸಮೀರಾ ರೆಡ್ಡಿ ಆ ವಿಷಯವನ್ನು ಮುಕ್ತವಾಗಿ ಶೇರ್ ಮಾಡಿದ್ದಾರೆ. ತೂಕ ಇಳಿಸಿಕೊಂಡ ಮೇಲೆ ತೆಗೆದಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು “ಒಂದು ವರ್ಷದ ಹಿಂದೆ ನಾನು ಫಿಟ್ ನೆಸ್ ಅನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಆಗ ನಾನು 92 ಕೆಜಿ ತೂಕವಿದ್ದೆ. ಆದರೆ ಈಗ 81ಕೆಜಿ ತೂಕ ಇದ್ದೇನೆ”ಎಂದು ಬರೆದುಕೊಂಡಿದ್ದಾರೆ. ಲಕ್ಷಗಟ್ಟಲೇ ಲೈಕ್ಸ್ ಪಡೆದಿರುವ ಈ ಪೋಟೋಕ್ಕೆ ಸಾವಿರಾರು ಕಮೆಂಟ್ ಗಳು ಬಂದಿದೆ.

ತೂಕ ಇಳಿಸಿಕೊಂಡಿರುವ ಸಮೀರಾ ರೆಡ್ಡಿ ಹೇಳಿದ್ದೇನು ಗೊತ್ತಾ? Read More »

ಅಮೂಲ್ಯ ಬೇಬಿ ಶವರ್ ಫೋಟೋ ನೋಡಿ ಕಣ್ತುಂಬಿಕೊಳ್ಳಿ

ನಟಿ ಅಮೂಲ್ಯ ಇನ್ಮು ಕೆಲವೇ ದಿನಗಳಲ್ಲಿ ತಾಯಿಯಾಗಲಿದ್ದಾರೆ ..ತುಂಬು‌ ಗರ್ಭಿಣಿಯಾಗಿರೋ ಗೋಲ್ಡನ್ ಗರ್ಲ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ…ಇತ್ತೀಚೆಗೆ ಸೀಮಂತ ಮಾಡಿಸಿಕೊಂಡಿದ್ದ ಅಮೂಲ್ಯ ಈಗ ಬೇಬಿ ಶವರ್ ನಲ್ಲಿ ಮಿಂಚಿದ್ದಾರೆ… ಬೇಬಿ ಶವರ್ ನಲ್ಲಿ ನಟಿ ಅಮೂಲ್ಯ ಮಿಂಚಿಂಗ್ ಅಮ್ಮು ಸ್ನೇಹಿತರಿಂದ ಬೇಬಿ ಶವರ್ ಆಯೋಜನೆ ಲ್ಯಾವೆಂಡರ್ ಗೌನ್ ನಲ್ಲಿ ಮಿಂಚಿದ ಗೋಲ್ಡನ್ ಗರ್ಲ್ ಇನ್ಮು ಕೆಲವೇ ದಿನಗಳಲ್ಲಿ ತಾಯಿಯಾಗಲಿರೋ ಚೆಲುವಿನ ಚಿತ್ತಾರದ ಬೆಡಗಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ಅಮ್ಮು – ಜಗದೀಶ್ ಅಮೂಲ್ಯ ಬೇಬಿ ಶವರ್ ನಲ್ಲಿ ನಟಿ ಸನ್ನಿಧಿ ಕೂಡ ಭಾಗಿ

ಅಮೂಲ್ಯ ಬೇಬಿ ಶವರ್ ಫೋಟೋ ನೋಡಿ ಕಣ್ತುಂಬಿಕೊಳ್ಳಿ Read More »

Scroll to Top