Karnataka Bhagya

ದೇಶ

ಮರಳಿ ತೆರೆಮೇಲೆ “ಮೆಜೆಸ್ಟಿಕ್”

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ಅತಿಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರೋ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ನಾಯಕ ನಟ. ಕನ್ನಡ ಕಲಾರಸಿಕರಿಂದ ‘ಡಿ ಬಾಸ್’ ಎಂದೇ ಕರೆಸಿಕೊಳ್ಳುವವರು.ಇದೀಗ ಅವರು ನಾಯಕ ನಟರಾಗಿ ಬೆಳ್ಳಿತೆರೆ ಮೇಲೆ ರಾರಾಜಿಸಿದ ಮೊದಲ ಚಿತ್ರಕ್ಕೆ ಬರೋಬ್ಬರಿ ಇಪ್ಪತ್ತು ವರ್ಷಗಳ ಸಂಭ್ರಮ. ಅದೇ ಸಡಗರದಲ್ಲಿ ಮರಳಿ ‘ಮೆಜೆಸ್ಟಿಕ್’ ತೆರೆಮೇಲೆ ಬಂದಿದೆ. ಫೆಬ್ರವರಿ 8, 2002ರಂದು ಮೊದಲ ಬಾರಿ ಮೆಜೆಸ್ಟಿಕ್ ತೆರೆಕಂಡಿತ್ತು. ಪಿ. ಎನ್. ಸತ್ಯ ಅವರ ನಿರ್ದೇಶನದಲ್ಲಿ ಮಾಸ್-ರೋಮ್ಯಾಂಟಿಕ್ ಹಿಟ್ ಆಗಿ ಹೊರಹೊಮ್ಮಿದ್ದ ಈ ಚಿತ್ರ ಕನ್ನಡಿಗರ ಮನದಲ್ಲಿ ಖಾಸಗಿ ಜಾಗವೊಂದನ್ನ ಖಾತ್ರಿ ಮಾಡಿಕೊಂಡಿತ್ತು. ಈಗಲೂ ಕೂಡ ‘ಡಿ ಬಾಸ್’ ಅಭಿಮಾನಿಗಳ ಮನದಲ್ಲಿ ಮೆಜೆಸ್ಟಿಕ್ ಗೆ ವಿಶೇಷ ಸ್ಥಾನ ಇದೆ. ಹಾಗಾಗಿ ಚಿತ್ರದ ನಿರ್ಮಾಪಕ ಎಂ ಜಿ ರಾಮಮೂರ್ತಿ ಅವರು ಚಿತ್ರವನ್ನ ಮರುಬಿಡುಗಡೆಗೊಳಿಸಿದ್ದಾರೆ. ಇದೇ ಫೆಬ್ರವರಿ 18ರಂದು ಮೆಜೆಸ್ಟಿಕ್ ಬೆಳ್ಳಿತೆರೆ ಮೇಲೆ ಮತ್ತೊಮ್ಮೆ ರೌಡಿಸಂ ಆರಂಭಿಸಿದೆ. ದಶನ್ ರ ಜೊತೆಗೇ ಸ್ಪರ್ಶ ಖ್ಯಾತಿಯ ರೇಖಾ, ಜೈ ಜಗದೀಶ್, ಮುಂತಾದ ದಿಗ್ಗಜರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸಾಧು ಕೋಕಿಲ ಅವರ ಮನಕಲಕುವ ಸಂಗೀತ ಈ ಸಿನಿಮಾದಲ್ಲಿತ್ತು.

ಮರಳಿ ತೆರೆಮೇಲೆ “ಮೆಜೆಸ್ಟಿಕ್” Read More »

ಅಮ್ಮನ ಲುಕ್ ಅನ್ನು ರಿಕ್ರಿಯೇಟ್ ಮಾಡಿದ ಪ್ರಥಮಾ ಪ್ರಸಾದ್

ಸೆಲೆಬ್ರಿಟಿಗಳು ಇತರ ಸೆಲೆಬ್ರಿಟಿಗಳಿಂದ ಸ್ಪೂರ್ತಿ ಪಡೆಯುವುದು ಸರ್ವೇ ಸಾಮಾನ್ಯವಾದ ಸಂಗತಿ. ಇನ್ನು ಇದರ ಹೊರತಾಗಿ ಇಬ್ಬರು ಸೆಲೆಬ್ರಿಟಿಗಳನ್ನು ಒಂದೇ ತರಹದ ಔಟ್ ಫಿಟ್ ನಲ್ಲಿ ಭಿನ್ನವಾದ ಸ್ಟೈಲಿನಲ್ಲಿ ನೋಡಲು ಚೆಂದ. ಕನ್ನಡದ ಸೆಲೆಬ್ರಿಟಿಗಳು ಕೂಡಾ ಇದಕ್ಕೆ ಹೊರತಾಗಿಲ್ಲ. ಕಿರುತೆರೆಯಲ್ಲಿ ಮನೆ ಮಾತಾಗಿರುವ ಪ್ರಥಮ ಪ್ರಸಾದ್ ಅವರು ತಮ್ಮ ಹೊಸ ಅವತಾರದ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅದರಲ್ಲಿ ವಿಶೇಷ ಏನಪ್ಪಾ ಅಂಥ ಅಂದ್ರೆ ಪ್ರಥಮಾ ಪ್ರಸಾದ್ ಅವರು ತಮ್ಮ ತಾಯಿ ವಿನಯ ಪ್ರಸಾದ್ ಅವರ ನೀನು ನಕ್ಕರೆ ಹಾಲು ಸಕ್ಕರೆ ಚಿತ್ರದ “ಬಾರೆ ಸಂತೆಗೆ ಹೋಗೋಣ ಬಾ” ಹಾಡಿನ ಲುಕ್ ನಲ್ಲಿ ಮಿಂಚಿದ್ದಾರೆ. ವಿನಯ ಪ್ರಸಾದ್ ಈ ಹಾಡಿನಲ್ಲಿ ಪಿಂಕ್ ಲೆಹೆಂಗಾ ಹಾಗೂ ಬಿಳಿ ದಾವಣಿಯಲ್ಲಿ ಕಾಣಿಸಿಕೊಂಡಿದ್ದರು. ಪ್ರಥಮ ಪ್ರಸಾದ್ ಕೂಡಾ ಇದೇ ತರಹ ಕಾಸ್ಟ್ಯೂಮ್ ಧರಿಸಿದ್ದಾರೆ. ಲಂಗ ದಾವಣಿಯಿಂದ ಹಿಡಿದು ಜಡೆ, ಸನ್ ಗ್ಲಾಸ್, ಮೇಕಪ್ ವರೆಗೂ ಅಮ್ಮನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ವಿನಯಾ ಪ್ರಸಾದ್ ಕೂಡಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಅಮ್ಮನ ಲುಕ್ ಅನ್ನು ರಿಕ್ರಿಯೇಟ್ ಮಾಡಿದ ಪ್ರಥಮಾ ಪ್ರಸಾದ್ Read More »

ಮೊದಲ ಬಾರಿಗೆ ಪಾಸಿಟಿವ್ ಪಾತ್ರದಲ್ಲಿ ನಟಿಸುತ್ತಿದ್ದೇನೆ – ಮಾನ್ಸಿ ಜೋಷಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ಪಾರು ಕೂಡಾ ಒಂದು. ವಿಭಿನ್ನ ಕಥಾಹಂದರದ ಜೊತೆಗೆ ತಾರಾಗಣದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಪಾರು ಧಾರಾವಾಹಿ. ಪಾರು ಧಾರಾವಾಹಿಯಲ್ಲಿ ಖಳನಾಯಕಿ ಅನುಷ್ಕಾ ಆಗಿ ನಟಿಸಿ ಸೀರಿಯಲ್ ಪ್ರಿಯರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಚೆಲುವೆ ಮಾನ್ಸಿ ಜೋಷಿ ಖಳನಾಯಕಿಯಾಗಿಯೇ ಕಿರುತೆರೆಯಲ್ಲಿ ಅಬ್ಬರಿಸಿದ್ದೇ ಹೆಚ್ಚು! ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಮಾನ್ಸಿ ಜೋಷಿ ಇದೇ ಮೊದಲ ಬಾರಿಗೆ ಪಾಸಿಟಿವ್ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಅಣ್ಣ ತಂಗಿಯಲ್ಲಿ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ. ಹೌದು, ಪಾರು ಧಾರಾವಾಹಿಯ ಅನುಷ್ಕಾ ಪಾತ್ರ ಕೊನೆಗೊಂಡ ನಂತರ ಬರೋಬ್ಬರಿ ಆರು ತಿಂಗಳುಗಳ ಕಾಲ ಮಾನ್ಸಿ ಕಿರುತೆರೆಯಿಂದ ದೂರವಿದ್ದರು. ಇದೀಗ ಮತ್ತೆ ಕಿರುತೆರೆಯತ್ತ ಮುಖ ಮಾಡಿರುವ ಮಾನ್ಸಿ ಜಿಲ್ಲಾಧಿಕಾರಿಯಾಗಿ ಮೋಡಿ ಮಾಡುತ್ತಿದ್ದಾರೆ. “ಖಳನಾಯಕಿಯಾಗಿ ಕಿರುತೆರೆ ಜಗತ್ತಿಗೆ ಕಾಲಿಟ್ಟ ನಾನು ಖಳನಾಯಕಿಯಾಗಿ ಅಬ್ಬರಿಸಿದ್ದೇ ಹೆಚ್ಚು! ವಿಲನ್ ಪಾತ್ರಗಳಿಗೆ ಸೀಮಿತವಾದ ನಾನು ಇದೇ ಮೊದಲ ಬಾರಿ ಪಾಸಿಟಿವ್ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದೇನೆ. ಭಿನ್ನ ಪಾತ್ರದ ಮೂಲಕ ಮತ್ತೆ ವೀಕ್ಷಕರನ್ನು ರಂಜಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ” ಎಂದು ಹೇಳುತ್ತಾರೆ ಮಾನ್ಸಿ ಜೋಷಿ. ಇನ್ನು ಪಾತ್ರದ ಬಗ್ಗೆ ಹೇಳಿರುವ ಮಾನ್ಸಿ ಜೋಷಿ “ನಾನು ಅಣ್ಣ ತಂಗಿ ಧಾರಾವಾಹಿಯಲ್ಲಿ ಜಿಲ್ಲಾಧಿಕಾರಿಯಾಗಿ ನಟಿಸುತ್ತಿದ್ದೇನೆ. ಹಳ್ಳಿಯೊಂದರ ಜಿಲ್ಲಾಧಿಕಾರಿಯಾಗಿರುವ ನಾನು ಹಳ್ಳಿಯ ಅಭಿವೃದ್ಧಿಗಾಗಿ, ಜನರ ಒಳಿತಿಗಾಗಿ ಸದಾ ಕಾಲ ಶ್ರಮವಿಟ್ಟು ಕಾರ್ಯ ನಿರ್ವಹಿಸುತ್ತಿರುತ್ತೇನೆ” ಎನ್ನುತ್ತಾರೆ. ಸ್ಟಾರ್ ಸುವರ್ಣ ವಾಹಿನಿಯ ಬಿಳಿಹೆಂಡ್ತಿಯ ರಮ್ಯಾ ಆಗಿ ನಟನಾ ಪಯಣ ಶುರು ಮಾಡಿದ ಮಾನ್ಸಿ ಮುಂದೆ ರಾಧಾ ರಮಣದ ಅನ್ವಿತಾ, ನಾಯಕಿ ಧಾರಾವಾಹಿಯ ಪ್ರಿಯಾಂಕಾ, ಪಾರು ಧಾರಾವಾಹಿಯ ಅನುಷ್ಕಾ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಮಾನ್ಸಿ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ ಚೆಲುವೆ. ತಮಿಳಿನ ಅನುಬುಡನ್ ಖುಷಿಯಲ್ಲಿ ನಾಯಕಿ ಖುಷಿಯಾಗಿ ನಟಿಸುತ್ತಿರುವ ಈಕೆ ಪ್ರಸ್ತುತ ತೆಲುಗಿನ ದೇವತಾ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಮೊದಲ ಬಾರಿಗೆ ಪಾಸಿಟಿವ್ ಪಾತ್ರದಲ್ಲಿ ನಟಿಸುತ್ತಿದ್ದೇನೆ – ಮಾನ್ಸಿ ಜೋಷಿ Read More »

ಸೈತಾನ್ ಹಿಂದೆ ಬಿದ್ದ ಅನುಶ್ರೀ

ಕನ್ನಡ ಕಿರುತೆರೆಯ ಬಾರಿ ಬೇಡಿಕೆಯ ನಿರೂಪಕಿ ಅನುಶ್ರೀ ಈಘ ರಿಯಾಲಿಟಿ ಶೋ ಬಿಟ್ಟು ಸೈತಾನನ ಹಿಂದೆ ಬಿದ್ದಿದ್ದಾರೆ…ಹೌದು ನಟಿ ಅನುಶ್ರೀ ಅಭಿನಯದ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ…ಸಂಕ್ರಾಂತಿ ಸಂಭ್ರಮಕ್ಕೆ ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿದ ಸಿನಿಮಾತಂಡ ಸ್ಯಾಂಡಲ್‌ವುಡ್ ನ ಅನೇಕ ಗಣ್ಯರಿಂದ‌ಸಮಾಗಮದಲ್ಲಿ‌ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದಾರೆ… ಅನುಶ್ರೀ ಅಭಿನಯದ ಮಹಿಳಾ ಪ್ರಧಾನ ಸಿನಿಮಾಗೆ ಸೈತಾನ್ ಎಂದು ಹೆಸರಿಡಲಾಗಿದೆ…ಪ್ರಭಾಕರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು ಪ್ರತಿಭನ್ ಹಾಗೂ ಪುನೀತ್ ಹೆಚ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಇನ್ನು ನೋಬಿನ್ ಪೌಲ್ ಸಂಗೀತ ಸಿನಿಮಾಗೆ ಇರಲಿದೆ .. ಈಗಾಗಲೇ ಬೆಂಕಿಪಟ್ಟಣ ಹಾಗೂ ಉಪ್ಪು ಹುಳಿ ಖಾರ ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರ ಮನರಂಜಿಸಿದ ಅನು ಶ್ರೀ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ ..ಸದ್ಯ ಚಿತ್ರದ ಟೈಟಲ್ ರಿವಿಲ್ ಆಗಿದ್ದು ಇನ್ನು ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ..

ಸೈತಾನ್ ಹಿಂದೆ ಬಿದ್ದ ಅನುಶ್ರೀ Read More »

ಏಕ್ ಲವ್ ಯಾ ಸಿನಿಮಾ ನೋಡುವ ಮೊದಲು ಪ್ರೇಕ್ಷಕ ಯಾರು ಗೊತ್ತಾ

ಸ್ಯಾಂಡಲ್ ವುಡ್ ನ ಶೋ ಮ್ಯಾನ್ ಎಂದೇ ಗುರುತಿಸಿಕೊಂಡಿರುವ ನಿರ್ದೇಶಕ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿರುವ ಏಕ್ ಲವ್ ಯಾ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ…ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ರಾಣಾ ನಾಯಕನಾಗಿ ಎಂಟ್ರಿ ಕೊಡುತ್ತಿದ್ದು ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟುಹಾಕಿದೆ .. ಸಿನಿಮಾ ಫೆಬ್ರವರಿ 24ರಂದು ತೆರೆಕಾಣಲು ಸಿದ್ದವಾಗಿದ್ದು ಚಿತ್ರ ಬಿಡುಗಡೆಗೂ ಒಂದು ದಿನ ಮುನ್ನವೇ ಚಿತ್ರವನ್ನ ವಿಶೇಷ ವ್ಯಕ್ತಿಯೊಬ್ಬರು ವೀಕ್ಷಿಸಲಿದ್ದಾರೆ… ಹೌದು… ರಾಜ್ಯದ ಪ್ರಥಮ ಪ್ರಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವ್ರು ಏಕ್ ಲವ್ ಯಾ ಸಿನಿಮಾ ನೋಡಲಿದ್ದಾರೆ…ನಿರ್ದೇಶಕ ಪ್ರೇಮ್ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಸಿನಿಮಾ ನೋಡಲು ಆಹ್ವಾನ ಮಾಡಿದ್ದಾರೆ…ಏಕ್ ಲವ್ ಯಾ ಸಿನಿಮಾವನ್ನ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡಿದ್ದು ರಚಿತಾ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ.

ಏಕ್ ಲವ್ ಯಾ ಸಿನಿಮಾ ನೋಡುವ ಮೊದಲು ಪ್ರೇಕ್ಷಕ ಯಾರು ಗೊತ್ತಾ Read More »

ಕಲಾತಪಸ್ವಿ ರಾಜೇಶ್ ನಿಧನ

ಕಳೆದ ಒಂದು ವಾರದಿಂದ ಆರೋಗ್ಯ ಸ್ಥಿತಿ ಗಂಭೀರವಾಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ರಾಜೇಶ್ ನಿಧನರಾಗಿದ್ದಾರೆ…ಉಸಿರಾಟದ ತೊಂದರೆ ಹಾಗೂ ವಯೋಸಹಕ ಖಾಯಿಲೆಯಿಂದ ಬಳಲ್ತಿದ್ದರು ರಾಜೇಶ್… ಮೂರು ದಿನಗಳ ಹಿಂದೆ ರಾಜೇಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು‌ ಆದರೆ ಇಂದು ಮುಂಜಾನೆ ಉಸಿರಾಟದ ಸಮಸ್ಯೆಯಿಂದ ನಟ ರಾಜೇಶ್ ಸಾವನ್ನಪ್ಪಿದ್ದಾರೆ…ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ರಾಜೇಶ್… ಸುಮಾರು ದಿನಗಳಿಂದ ವೆಂಟಿಲೇಟರ್ ಸಹಾಯದಿಂದ ರಾಜೇಶ್ ಅವರಿಗೆ ಚಿಕಿತ್ಸೆ ಕೊಡಲಾಗ್ತಿತ್ತು…ರಾಜೇಶ್ ಪುತ್ರಿ‌ ನಿದೇದಿತಾ ಹಾಗೂ ಅಳಿಯ ಅರ್ಜುನ್ ಸರ್ಜಾ ಅವ್ರನ್ನ ಬಿಟ್ಟು‌ ಅಗಲಿದ್ದಾರೆ..ರಾಜೇಶ್ ಅವ್ರ ಪಾರ್ಥಿವ ಶರೀರವನ್ನ ಅವ್ರ ಸ್ವಗೃಹ ವಿಧ್ಯಾರಣ್ಯ ಪುರದಲ್ಲಿ ಅಂತಿಮ ದರ್ಶನ ಕ್ಕೆ‌ ವ್ಯವಸ್ಥೆ ಮಾಡಲಾಗಿದೆ… ರಾಜೇಶ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ…

ಕಲಾತಪಸ್ವಿ ರಾಜೇಶ್ ನಿಧನ Read More »

ಕೈನಲ್ಲಿ ಹೆಚ್ಚು ಸಿನಿಮಾ ಇಲ್ಲವಾದರು ಸಂಭಾವನೆ ಹೆಚ್ಚಿಸಿಕೊಂಡ ಪ್ರಿಯಾಮಣಿ

ಪ್ರಿಯಾಮಣಿ ತನ್ನ ಸಹಜ ಅಭಿನಯದ ಮೂಲಕ ಅಪಾರ ಅಭಿಮಾನಿಗಳ ಮನಸ್ಸು ಮುಟ್ಟಿರುವ ನಟಿ… ಅಭಿನಯದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ಈ ನಟಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ…ಆದರೂ ಪ್ರಿಯಾಮಣಿ ಸಂಭಾವನೆ ಬಗ್ಗೆ ಇಂಡಸ್ಟ್ರಿ ಯಲ್ಲಿ ಸಖತ್ ಸೌಂಡ್ ಆಗ್ತಿದೆ…. ದಿ ಫ್ಯಾಮಿಲಿ ಮ್ಯಾನ್ ನಂತರ ಪ್ರಿಯಾಮಣಿ ಪ್ಯಾನ್-ಇಂಡಿಯಾ ಪ್ರೇಕ್ಷಕರಲ್ಲಿ ಪರಿಚಿತರಾಗಿದ್ದಾರೆ.‌‌‌..ಫ್ಯಾಮಿಲಿ ಮ್ಯಾನ್ ಸೀಸನ್ ಒನ್ ಹಾಗೂ ಸೀಸನ್ 2ಹಿಟ್ ಆದ ನಂತರ ಪ್ರಿಯಾಮಣಿಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ …ಒಟಿಟಿ ನಲ್ಲಿ ಫ್ಯಾಮಿಲಿ ಮ್ಯಾನ್ ಭರ್ಜರಿ ಯಶಸ್ಸು ಕಂಡಿತ್ತು… ಪ್ರೇಕ್ಷಕರ ಗಮನವನ್ನು ಸೆಳೆಯಿತು.. ಅದಷ್ಟೇ ಅಲ್ಲದೆ ಪ್ರಿಯಾಮಣಿ ಅಭಿನಯಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ರು … ಸಕ್ಸಸ್ ಕೈಹಿಡಿಯುತ್ತಿದ್ದಂತೆ ಪ್ರಿಯಾಮಣಿ ತಮ್ಮ ಸಂಭಾವನೆಯನ್ನ ಹೆಚ್ಚು ಮಾಡಿಕೊಂಡಿದ್ದಾರೆ…ಹೌದು ಪ್ರಿಯಾಮಣಿ ಈಗ ತಮ್ಮ ಹೊಸ ಪ್ರಾಜೆಕ್ಟ್‌ಗಳಿಗಾಗಿ ದಿನಕ್ಕೆ 3-4 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಅವರು ದಿ ಫ್ಯಾಮಿಲಿ ಮ್ಯಾನ್‌ಗಾಗಿ ದಿನಕ್ಕೆ 1.5 ಲಕ್ಷ ರೂ. ಪಡೆದಿದ್ದರಂತೆ…ಸದ್ಯ ಪ್ರಿಯಾಮಣಿ ಅವರ ಕೈಯಲ್ಲಿ ವಿರಾಟ ಪರ್ವಂ, ಮೈದಾನ್ ಮತ್ತು ಹೆಸರಿಸದ ಅಟ್ಲೀ ನಿರ್ದೇಶನದ ಚಿತ್ರಗಳಿವೆ. .ಇದರ ಜೊತೆಯಲ್ಲಿ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕೂಡ ಪ್ರಿಯಾಮಣಿ ಬ್ಯುಸಿಯಾಗಿದ್ದಾರೆ… ಆದ್ದರಿಂದ ಸದ್ಯ ಪ್ರಿಯಾಮಣಿ ಈಗ ಭಾರಿ ಡಿಮ್ಯಾಂಡ್ ನಲ್ಲಿರುವ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ…

ಕೈನಲ್ಲಿ ಹೆಚ್ಚು ಸಿನಿಮಾ ಇಲ್ಲವಾದರು ಸಂಭಾವನೆ ಹೆಚ್ಚಿಸಿಕೊಂಡ ಪ್ರಿಯಾಮಣಿ Read More »

ಬೆಂಗಳೂರಿನ ರಸ್ತೆ ಇನ್ನಾಗಲಿದೆ “ಪುನೀತ”

ಹಲವಾರು ಸಾಧನೆಗಳಿಗೆ, ಸಾಧಕರಿಗೆ ದಾರಿದೀಪವಾಗಿರೋ ಯುವರತ್ನ ಪುನೀತ್ ರಾಜಕುಮಾರ್ ಅವರ ಹೆಸರನ್ನು ಬೆಂಗಳೂರಿನ ದಾರಿಯೊಂದಕ್ಕೆ ಇಡೋ ಯೋಜನೆಯನ್ನ ‘ಬಿಬಿಎಂಪಿ’ ಹಾಕಿಕೊಂಡಿದೆ. ತಮ್ಮ ಈ ಯೋಜನೆಯನ್ನ ಸ್ವತಃ ‘ಬಿಬಿಎಂಪಿ’ ಜನರ ಎದುರಿಗಿಟ್ಟಿದೆ. ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)’ ಹೇಳಿಕೊಂಡಂತೆ ಮೈಸೂರ್ ರಸ್ತೆಯಲ್ಲಿರೋ ನಾಯಂಡಳ್ಳಿ ಜಂಕ್ಷನ್ ನಿಂದ ಬನ್ನೇರ್ಘಟ್ಟ ರಸ್ತೆಯಲ್ಲಿರೋ ವೆಗ ಸಿಟಿ ಮಾಲ್ ವರೆಗಿನ ರಸ್ತೆಯನ್ನು ಪುನೀತ್ ರಾಜಕುಮಾರ್ ಹೆಸರಿನಿಂದ ನಾಮಕರಣ ಮಾಡಲಾಗುವುದು. ಬಿಬಿಎಂಪಿಯ ಈ ನಿರ್ಧಾರದಿಂದ ಅಭಿಮಾನಿಗಳು ಸಂತುಷ್ಟರಾಗುವುದಲ್ಲಿ ಅನುಮಾನವಿಲ್ಲ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿರೋ ರಸ್ತೆಯೊಂದನ್ನು ಅಲ್ಲಿನ ಪುನೀತ್ ಅಭಿಮಾನಿಗಳೇ ಸ್ವಯಂಪ್ರೇರಿತರಾಗಿ ‘ಪುನೀತ್ ರಾಜಕುಮಾರ್ ರಸ್ತೆ’ ಎಂದು ಘೋಷಣೆ ಮಾಡಿದ್ದರು. ಇದೀಗ ಆ ಸಾಲಿಗೆ ಬೆಂಗಳೂರಿನ ರಸ್ತೆಯೊಂದು ಸೇರ್ಪಡೆಯಾಗುತ್ತಿರುವುದೇ ಸಂತಸ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೊಂದಿರೋ ಅಭಿಮಾನಿ ಬಳಗಕ್ಕೆ ಸಾಟಿಯೇ ಇಲ್ಲ. ಪುನೀತ್ ನಮ್ಮನ್ನೆಲ್ಲ ಅಗಲಿದಾಗ ಮರುಗಿದ ಜನಸಾಗರಕ್ಕೆ ಲೆಕ್ಕವೇ ಇಲ್ಲ. ಅಂತಹ ಅಪೂರ್ವ, ಅದ್ಭುತ ವ್ಯಕ್ತಿತ್ವ ಅವರದ್ದು. ಇದೀಗ ಬಿಬಿಎಂಪಿಯ ಈ ನಡೆಯಿಂದ ಪುನೀತ್ ರ ನೆನಪಿಗೆ ಇನ್ನೊಂದಿಷ್ಟು ಶಕ್ತಿ ಬಂದಂತಾಗಿದೆ.

ಬೆಂಗಳೂರಿನ ರಸ್ತೆ ಇನ್ನಾಗಲಿದೆ “ಪುನೀತ” Read More »

ಗ್ರಾಮದ ಕಥೆ, ರಾಜಕುಮಾರನೊಬ್ಬನ ಜೊತೆ, “ಪೆಪೆ”

ವಿನಯ್ ರಾಜಕುಮಾರ್, ಕನ್ನಡ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ, ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಿರೋ ಹೆಸರು. ‘ಸಿದ್ದಾರ್ಥ’ ಚಿತ್ರದಿಂದ ಸಿನಿರಂಗ ಸೇರಿ, “ರನ್ ಅಂಥೋನಿ” ಅಲ್ಲಿ ಓಡಿ, ‘ಅನಂತು vs ನುಸ್ರತ್’ ನ ಲಾಯರ್ ಆಗಿ ಇದೀಗ “ಪೆಪೆ”ಯಾಗಿ ಕನ್ನಡಿಗರ ಮುಂದೆ ಬರಲಿದ್ದಾರೆ. ರಾಜ್ ಕುಟುಂಬದ ಕುಡಿ ವಿನಯ್ ಅವರ ಮುಂದಿನ ಚಿತ್ರ “ಪೆಪೆ”ಯ ಟೀಸರ್ ಇಂದು, ಅಂದರೆ ಫೆಬ್ರವರಿ 17ರಂದು ‘ಪಿ ಆರ್ ಕೆ ಆಡಿಯೋ’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ರಕ್ತಸಿಕ್ತವಾದ ಈ ಸಿನಿತುಣುಕು ಯುವಜನತೆಯ ಮನ ಗೆಲ್ಲುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ‘ಉದಯ್ ಸಿನಿ ವೆಂಚರ್” ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ಜೊತೆಗೆ ಯಶ್ ಶೆಟ್ಟಿ, ಬಾಲ ರಾಜವಾಡಿ, ಮೇದಿನಿ ಕೆಳಮನೆ ಮುಂತಾದವರನ್ನೊಳಗೊಂಡ ಬಹುಪಾಲು ಹೊಸಬರ ತಾರಾಗಣವಿದೆ. “ಪೆಪೆ”ಯ ಸೃಷ್ಟಿಕರ್ತರಾದ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಅವರು ಹೇಳುವ ಪ್ರಕಾರ ಇದೊಂದು ಮಲೆನಾಡಿನ ಸೊಗಡಿನ ಒಂದು ಗ್ರಾಮ್ಯ ಕಥೆ. ಚಿತ್ರದ ಟೀಸರ್ ನಲ್ಲೂ ಸಹ ಗ್ರಾಮೀಣ ಸೊಬಗು ಎದ್ದು ಕಾಣುತ್ತದೆ. ತುಂಬಾ ರಗಡ್ ಲುಕ್ ಅಲ್ಲಿರೋ ವಿನಯ್ ಗೆ ಈ ಪಾತ್ರ ಸರಿಹೊಂದುವಂತೆ ಕಾಣುತ್ತಿದೆ. ಪೂರ್ಣಚಂದ್ರ ತೇಜಸ್ವಿಯವರ ಹಿನ್ನೆಲೆ ಸಂಗೀತ ನೋಡುಗರ ಮನದಲ್ಲಿ ಉಳಿದುಬಿಡುವಂತದ್ದು. ಸಮರ್ಥ್ ಉಪಾಧ್ಯ ಅವರ ಛಾಯಗ್ರಹಣದಲ್ಲಿ ಮೂಡಿಬಂದಿರೋ ದೃಶ್ಯಗಳು ಕಣ್ಣಿಗೆ ಖುಷಿಕೊಡುತ್ತವೆ. ಒಟ್ಟಿನಲ್ಲಿ ಪ್ರತೀ ಚಿತ್ರದಲ್ಲೂ ವಿಭಿನ್ನ ಕಥೆಗಳನ್ನ ಆರಿಸಿಕೊಳ್ಳುತ್ತಿರೋ ವಿನಯ್ ರಾಜಕುಮಾರ್ ರವರಿಗೆ ಈ ಚಿತ್ರದಿಂದ ಸಾಕಷ್ಟು ಯಶಸ್ಸು ಸಿಗಲಿ, ಟೀಸರ್ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ-ಕಾತುರತೆ ಉಂಟುಮಾಡಿರೋ ಚಿತ್ರ ಎಲ್ಲರ ಮೆಚ್ಚುಗೆ ಪಡೆಯುವಂತಾಗಲಿ ಎಂಬುದೇ ನಮ್ಮಾಸೆ.

ಗ್ರಾಮದ ಕಥೆ, ರಾಜಕುಮಾರನೊಬ್ಬನ ಜೊತೆ, “ಪೆಪೆ” Read More »

ಈ‌ವರ್ಷದ ಹುಟ್ಟುಹಬ್ಬ ದರ್ಶನ್ ಗೆ ಸಖತ್ ಸ್ಪೆಷಲ್ ಕಾರಣ ಇಲ್ಲಿದೆ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗಷ್ಟೆ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡ್ರು …ಕಳೆದ 2ವರ್ಷಗಳಂತೆ ಈ ವರ್ಷವೂ ಕೂಡ ದರ್ಶನ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಹುಟ್ಟುಹಬ್ಬಕ್ಕೂ ಮುಂಚೆಯೇ ಅಭಿಮಾನಿಗಳಿಗೆ ತಿಳಿಸಿದ್ದರು… ಕೋವಿಡ್ ಪರಿಸ್ಥಿತಿ ಇರುವುದರಿಂದ ಈ ಬಾರಿಯ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುವುದಿಲ್ಲ… ಅದಷ್ಟೇ ಅಲ್ಲದೆ ನಾನು ಮನೆಯಲ್ಲಿ ಕೂಡ ಯಾರಿಗೂ ಸಿಗುವುದಿಲ್ಲ ಆದ್ದರಿಂದ ದಯಮಾಡಿ ಅಭಿಮಾನಿಗಳು ತಾವಿದ್ದಲ್ಲಿಯೆ ನನಗೆ ಶುಭಕೋರಿ ಎಂದು ಮನವಿ ಮಾಡಿದ್ದರು .. ಇನ್ನು ಸ್ನೇಹಿತರೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ದರ್ಶನ್ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ.ಮ. ಈ ವರ್ಷದ ಹುಟ್ಟುಹಬ್ಬದ ದಿನವನ್ನ ತಮ್ಮ ಕುಟುಂಬದವರಿಗಾಗಿ ಮೀಸಲಾಗಿಟ್ಟರು ದರ್ಶನ್ …ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಪುತ್ರ ವಿನೀಶ್ ದರ್ಶನ್ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ…ಸದ್ಯ ದರ್ಶನ್ ಪತ್ನಿ ಹಾಗೂ ಮಗನ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ…. ಪ್ರತಿವರ್ಷ ಅಭಿಮಾನಿಗಳು ಹಾಗೂ ಸಿನಿಮಾದವರೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದ ದರ್ಶನ್ ಈ ವರ್ಷ ಫ್ಯಾಮಿಲಿಗಾಗಿ ಒಂದಷ್ಟು ಸಮಯವನ್ನು ಮೀಸಲಿಟ್ಟಿದ್ದಾರೆ…. ಈ ವಿಡಿಯೋ ನೋಡಿದ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ ….

ಈ‌ವರ್ಷದ ಹುಟ್ಟುಹಬ್ಬ ದರ್ಶನ್ ಗೆ ಸಖತ್ ಸ್ಪೆಷಲ್ ಕಾರಣ ಇಲ್ಲಿದೆ Read More »

Scroll to Top