ಗಿಳಿರಾಮ ಧಾರಾವಾಹಿಯ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್
ಗಿಳಿರಾಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ.. ಆರಂಭದಲ್ಲಿಯೇ ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಈ ಧಾರಾವಾಹಿ ಮೊದಲಿನಿಂದಲೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವದರಲ್ಲಿ ಯಶಸ್ವಿಯಾಗಿದೆ… ಧಾರಾವಾಹಿಯಲ್ಲಿ ಮಹತಿ ಹಾಗೂ ಶಿವರಾಮನ ಪಾತ್ರ ಜನರನ್ನ ಮೋಡಿ ಮಾಡಿದೆ .. ಸದ್ಯ ಈ ಧಾರಾವಾಹಿಯ ಬಗ್ಗೆ ಒಂದಷ್ಟು ಸುದ್ದಿ ಜೋರಾಗಿ ಹರಿದಾಡುತ್ತಿದೆ…ಹೌದು ಈಗಾಗಲೇ ಕಾಶಿಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಧಾರಾವಾಹಿ ತಂಡ ಆದಷ್ಟು ಬೇಗ ಧಾರಾವಾಹಿಯನ್ನ ಮುಗಿಸುತ್ತಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ… ಕಾರಣ ಏನಪ್ಪಾ ಅಂದರೆ ಈಗಾಗ್ಲೇ ಶಿವರಾಂ ಪಾತ್ರವನ್ನ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿ ಸೀರಿಯಸ್ ಸಿಚ್ಯುವೇಶನ್ ಗೆ ನಿರ್ದೇಶಕರು ತಳ್ಳಿದ್ದಾರೆ… ಹೀಗಾಗಿ ಶಿವರಾಮನ ಪಾತ್ರ ಅಂತ್ಯವಾಗುತ್ತೆ..ಧಾರಾವಾಹಿ ಕೂಡ ಮುಗಿಯುತ್ತದೆ ಎಂಬ ಗಾಸಿಪ್ ಎಲ್ಲೆಡೆ ಹರಿದಾಡಿದೆ… ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಶಿವರಾಮನ ಪಾತ್ರಧಾರಿ ಋುತ್ವಿಕ್ ಧಾರಾವಾಹಿ ಮುಗಿಯುವುದಿಲ್ಲ ಪ್ರೇಕ್ಷಕರು ಇದರಿಂದ ಬೇಸರವಾಗುವ ಅಗತ್ಯವಿಲ್ಲ..ಯಾರೋ ಅನಗತ್ಯವಾಗಿ ಧಾರಾವಾಹಿಯ ಬಗ್ಗೆ ಈ ರೀತಿ ಸುದ್ದಿ ಹರಡುತ್ತಿದ್ದಾರೆ.. ಹಾಗಾಗಿ ಇನ್ನೂ ಸಾಕಷ್ಟು ದಿನಗಳ ಕಾಲ ಶಿವರಾಮ ಹಾಗೂ ಮಹತಿ ನಿಮ್ಮನ್ನು ರಂಜಿಸಲಿದ್ದಾರೆ ಎಂದಿದ್ದಾರೆ…
ಗಿಳಿರಾಮ ಧಾರಾವಾಹಿಯ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್ Read More »