Karnataka Bhagya

ರಾಜಕೀಯ

ಸರಿಗಮಪ ವೇದಿಕೆಯಲ್ಲಿ ಪ್ರೇಮ್ ರಕ್ಷಿತಾ ಮ್ಯಾಜಿಕ್

ನಿರ್ದೇಶಕ ಪ್ರೇಮ್ ಡೈರೆಕ್ಟ್ ಮಾಡಿರುವ ಏಕ್ ಲವ್ ಯಾ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ …ಈಗಾಗಲೆ ಸಿನಿಮಾ ತಂಡ ಚಿತ್ರದ ಪ್ರಚಾರ ಕಾರ್ಯ ಆರಂಭ ಮಾಡಿದ್ದು ..ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಏಕಲವ್ಯ ಚಿತ್ರತಂಡ ಭಾಗಿಯಾಗಿದೆ… ವಿಶೇಷ ಅಂದರೆ ಸರಿಗಮಪ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ರಕ್ಷಿತಾ ಹಾಗೂ ಪ್ರೇಮ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ …ಏಕಲವ್ಯ ಸಿನಿಮಾ ಇದೇ ತಿಂಗಳ ಇಪ್ಪತ್ತ ನಾಲ್ಕರಂದು ಬಿಡುಗಡೆಯಾಗುತ್ತಿದ್ದು ಚಿತ್ರದಲ್ಲಿ ರಾಣಾ ನಾಯಕನಾಗಿ ಅಭಿನಯಿಸಿದ್ದಾರೆ…ಈ ಮೂಲ ರಾಣಾ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ .. ಈಗಾಗಲೇ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಚಿತ್ರತಂಡ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ಕೊಟ್ಟು ಸಿನಿಮಾದ ಪ್ರಚಾರ ಕಾರ್ಯ ಮಾಡಿ ಮುಗಿಸಿದೆ… ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿ ರಚಿತಾ ರಾಮ್ ಅಭಿನಯ ಮಾಡಿದ್ದಾರೆ…

ಸರಿಗಮಪ ವೇದಿಕೆಯಲ್ಲಿ ಪ್ರೇಮ್ ರಕ್ಷಿತಾ ಮ್ಯಾಜಿಕ್ Read More »

ಭಟ್ಟರ ಗರಡಿ ಸಿನಿಮಾದಿಂದ ಔಟಾದ ರಚಿತಾ ರಾಮ್

ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾ ದಲ್ಲಿ ನಟ ಯಶಸ್ ಸೂರ್ಯ ಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಲಿದ್ದಾರೆ ಎನ್ನುವ ಸುದ್ದಿ ಈಗಾಗಲೇ ಜೋರಾಗಿತ್ತು….ನಟಿ ರಚಿತಾ ರಾಮ್ ಅವರಿಗೆ ಚಿತ್ರತಂಡ ಆಹ್ವಾನ ಮಾಡಿದ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು…. ಆದರೆ ಸದ್ಯದ ಸುದ್ದಿ ಪ್ರಕಾರ ನಟಿ ರಚಿತಾ ರಾಮ್ ಗರಡಿ ಚಿತ್ರದಲ್ಲಿ ಅಭಿನಯ ಮಾಡುತ್ತಿಲ್ಲವಂತೆ. ರಚಿತಾ ರಾಮ್ ಸ್ಥಾನಕ್ಕೆ ಪಂಚತಂತ್ರ ಸಿನಿಮಾ ಖ್ಯಾತಿಯ ಸೋನಾಲ್ ಮಾಂಟೇರಿಯೋ ಎಂಟ್ರಿಯಾಗಿದ್ದಾರೆ …ಈಗಾಗಲೇ ಪಂಚತಂತ್ರ ಸಿನಿಮಾದಲ್ಲಿ ಭಟ್ಟರ ಜತೆ ಕೆಲಸ ಮಾಡಿದ ಸೋನಾಲ್ ಈಗ ಗರಡಿ ಸಿನಿಮಾದಲ್ಲೂ ಅಭಿನಯ ಮಾಡಲಿದ್ದಾರಂತೆ… ಗರಡಿ ಸಿನಿಮಾವನ್ನ ಬಿ.ಸಿ ಪಾಟೀಲ್ ನಿರ್ಮಾಣ ಮಾಡುತ್ತಿದ್ದು.. ಸಿನಿಮಾದ ಚಿತ್ರೀಕರಣ ಇದೇ ವಾರದಲ್ಲಿ ಶುರುವಾಗಲಿದೆ…. ಇನ್ನೂ ಗರಡಿ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ… ಚಿತ್ರಕ್ಕೆ ವಿ ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದು ನಿರಂಜನ್ ಬಾಬು ಛಾಯಾಗ್ರಹಣ ಮಾಡಲಿದ್ದಾರೆ…. ಕೌರವ ವೆಂಕಟೇಶ್ ವಿನೋದ್ ಮತ್ತು ವಿಕ್ರಮ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಲಿದ್ದಾರೆ… ಸಿನಿಮಾ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿದ್ದು ಸದ್ಯ ಭಟ್ಟರ ತಂಡ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದೆ….ಇನ್ನು ಬಿಗ್ ಬಜೆಟ್ ನ ಸಿನಿಮಾ ರಚಿತ ಕೈಬಿಟ್ಟಿದ್ದು ಯಾಕೆ ಅನ್ನುವ ಪ್ರಶ್ನೆಗೆ ಉತ್ತರ… ಸದ್ಯ ರಚಿತಾ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರಂತೆ, ಗರಡಿ ಸಿನಿಮಾ ಗೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಚಿತ್ರದಿಂದ ಹೊರ ನಡೆದಿದ್ದಾರೆ….

ಭಟ್ಟರ ಗರಡಿ ಸಿನಿಮಾದಿಂದ ಔಟಾದ ರಚಿತಾ ರಾಮ್ Read More »

ತೂಕ ಇಳಿಸಲು ಟಿಪ್ಸ್ ಕೊಟ್ಟ ಬೆಣ್ಣೆ ನಗರಿ ಬೆಡಗಿ… ಅದೇನು ಗೊತ್ತಾ?

ಇಂದಿನ ಆಧುನಿಕ ಯುಗದಲ್ಲಿ ತೂಕ ಇಳಿಸುವಿಕೆ ತುಂಬಾ ಕಷ್ಟದ ಕೆಲಸ. ಇನ್ನು ಹೀರೋಯಿನ್ ಗಳು ಸದಾ ಫಿಟ್ ಆಗಿ ಕಾಣಲು ಪ್ರಯತ್ನಿಸುತ್ತಲೇ ಇರುತ್ತಾರೆ. ಡಯಟ್ , ಪ್ರೊಟೀನ್ ಶೇಕ್ ಮುಂತಾದವನ್ನು ತಯಾರಿಸಿ ಕುಡಿಯುತ್ತಾರೆ. ಚಂದನವನದ ಬೆಡಗಿ ಅದಿತಿ ಪ್ರಭುದೇವ ತೂಕ ಇಳಿಸಲು ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ಮನೆಯಲ್ಲಿಯೇ ಕೆಲ ಜ್ಯೂಸ್ ತಯಾರಿಸಿ ಕುಡಿಯುತ್ತಾರೆ. ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಮೊದಲನೆಯದು ನಿಂಬೆ ಮತ್ತು ಜೇನುತುಪ್ಪ. ಬೆಚ್ಚಗಿನ ನೀರಿಗೆ ಒಂದು ಹನಿ ನಿಂಬೆರಸ ಒಂದು ಸ್ಪೂನ್ ಜೇನು ಹಾಕಿ ಕುಡಿಯುವುದರಿಂದ ತೂಕ ಇಳಿಸಲು ಸಹಕಾರಿ ಎನ್ನುತ್ತಾರೆ ಬೆಣ್ಣೆ ನಗರಿ ಬೆಡಗಿ‌. 4 ತುಂಡು ಸೇಬು, 4 ಸೌತೆಕಾಯಿ ತುಂಡು , ಟೊಮಾಟೋ, ಪುದೀನಾ ಶುಂಠಿ ಕ್ಯಾರೆಟ್ , ಬೀಟ್ರೂಟ್ ಎಲ್ಲವನ್ನು ಸೇರಿಸಿ ಮಿಕ್ಸಿಗೆ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಬೇಕು. ನಂತರ ಅದನ್ನು ಕುಡಿದರೆ ತೂಕ ಇಳಿಸಲು‌ ನೆರವಾಗುವುದಲ್ಲದೇ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ಅದಿತಿ. ಬೆರ್ರಿಗಳು ಅಥವಾ ಕಿತ್ತಳೆ ಹಣ್ಣು, ಬಾಳೆಹಣ್ಣು , ಪ್ರೊಟೀನ್ ಪೌಡರ್ , ಸ್ವಲ್ಪ ನಿಂಬೆರಸ ಹಾಕಿ ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿಕೊಂಡು ಬೆಳಗಿನ ಬ್ರೇಕ್ ಫಾಸ್ಟ್ ಬದಲಿಗೆ ಕುಡಿಯಬಹುದು. ಅರಿಶಿನ ಹಾಲಿಗೆ ಬೆಲ್ಲ ಸೇರಿಸಿ ಕುಡಿದರೆ ಇನ್ನೂ ಉತ್ತಮ ಎಂದು ಹೇಳುತ್ತಾರೆ ದಾವಣಗೆರೆ ಚೆಲುವೆ. ಪಾಲಕ್ ಸೊಪ್ಪು , ಬಾಳೆಹಣ್ಣು, ಸೌತೆಕಾಯಿ ಸಿಪ್ಪೆ ಸಮೇತ ,8 ಬಾದಾಮಿ ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತೂಕ ಇಳಿಕೆಗೆ ಸಹಕಾರಿ. ಇನ್ನು ಕ್ಯಾರೆಟ್ ತುರಿದು ಹಾಲು ಕುದಿಸುವಾಗ ಹಾಕಿ ಅದನ್ನು ಬೇಯಿಸಿ ಕುಡಿಯುವುದರಿಂದ ದೇಹಕ್ಕೆ ಉತ್ತಮ ಎನ್ನುವ ಟಿಪ್ಸ್ ಕೊಟ್ಟಿದ್ದಾರೆ ಅದಿತಿ ಪ್ರಭುದೇ‌ವ.

ತೂಕ ಇಳಿಸಲು ಟಿಪ್ಸ್ ಕೊಟ್ಟ ಬೆಣ್ಣೆ ನಗರಿ ಬೆಡಗಿ… ಅದೇನು ಗೊತ್ತಾ? Read More »

ಪೋಲೀಸ್ ಅಧಿಕಾರಿಯಾಗಿ ಭಡ್ತಿ ಪಡೆದ ಚೈತ್ರಾ ಕೋಟೂರು..‌ ಅಸಲಿ ಸಂಗತಿ ಏನು ಗೊತ್ತಾ?

ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಚೈತ್ರಾ ಕೋಟೂರು ಇದೀಗ ಪೋಲೀಸ್ ಅಧಿಕಾರಿಯಾಗಿ ನಿಮ್ಮ ಮುಂದೆ ಬರಲಿದ್ದಾರೆ.ಗುರುರಾಜ್ ಕುಲಕರ್ಣಿ ನಿರ್ದೇಶನದ ಚಾರ್ಜ್ ಶೀಟ್ ಸಿನಿಮಾದಲ್ಲಿ ಪೋಲೀಸ್ ಅಧಿಕಾರಿಯಾಗಿ ನಟಿಸುವ ಮೂಲಕ ಮತ್ತೊಮ್ಮೆ ಹಿರಿತೆರೆಯಲ್ಲಿ ಖಡಕ್ ಅಧಿಕಾರಿಯಾಗಿ ಅಬ್ಬರಿಸಲಿದ್ದಾರೆ ಚೈತ್ರಾ ಕೋಟೂರು. ಈ ಸಿನಿಮಾದ ಬಗ್ಗೆ ಹೇಳಿಕೊಳ್ಳುವ ಚೈತ್ರಾ “ತುಂಬಾ ಖುಷಿಯಾಗುತ್ತಿದೆ. ನಾನು ಇದೇ ಮೊದಲ ಬಾರಿ ನಾನು ಪೋಲೀಸ್ ಇನ್ಸ್ ಪೆಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ಇನ್ನು ಚಾರ್ಜ್ ಶೀಟ್ ಸಿನಿಮಾದಲ್ಲಿ ತನಿಖಾ ವರದಿಯನ್ನು ಯಾವ ರೀತಿಯಲ್ಲಿ ತಯಾರಿಸುತ್ತಾರೆ ಎಂಬುದನ್ನು ನಿಮ್ಮ ಮುಂದೆ ತೆರೆದಿಡಲಿದ್ದೇವೆ” ಎನ್ನುತ್ತಾರೆ. ಸಸ್ಪೆನ್ಸ್ , ಕ್ರೈಮ್ ಥ್ರಿಲ್ಲರ್ ಕಥಾಹಂದರವುಳ್ಳ ಈ ಸಿನಿಮಾದಲ್ಲಿ ಬಾಲಾಜಿ ಶರ್ಮಾ ಹಾಗೂ ಸಾಗರ್ ಅವರು ನಟಿಸಲಿದ್ದಾರೆ. ಡಾ. ಸುನಿಲ್ ಕುಂಬಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುವುದು ಮಾತ್ರವಲ್ಲದೇ ಕಥೆಯನ್ನು ಕೂಡಾ ಬರೆದಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ ಸಣ್ಣ ಪಾತ್ರವೊಂದನ್ನು ನಿರ್ವಹಿಸಲಿರುವುದು ವಿಶೇಷ‌. ಇನ್ನು ಚೈತ್ರಾ ಕೋಟೂರು ಅವರು ಕಿರುತೆರೆ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸಿದ್ದರು. ಬಿಗ್ ಬಾಸ್ ಮೂಲಕ ಸದ್ದು ಮಾಡಿದ ಈ ಚೆಲುವೆ ಇತ್ತೀಚೆಗೆ ಹುಡುಗ್ರು ತುಂಬಾ ಒಳ್ಳೇವ್ರು ಎಂಬ ಹಾಡನ್ನು ನಿರ್ಮಾಣ ಮಾಡಿದ್ದರು. ಚೈತ್ರಾ ಅವರೇ ಸಂಗೀತ ನೀಡಿ, ಸಾಹಿತ್ಯ ಬರೆದು ನಟಿಸಿದ ಈ ಹಾಡು ರ್ಯಾಪ್ ಶೈಲಿಯಲ್ಲಿದ್ದು ಅದು ಕೂಡಾ ಸಕತ್ ಹಿಟ್ ಆಗಿತ್ತು.

ಪೋಲೀಸ್ ಅಧಿಕಾರಿಯಾಗಿ ಭಡ್ತಿ ಪಡೆದ ಚೈತ್ರಾ ಕೋಟೂರು..‌ ಅಸಲಿ ಸಂಗತಿ ಏನು ಗೊತ್ತಾ? Read More »

ಶಾಕುಂತಲೆಯಾಗಿ ಸದ್ದು ಮಾಡುತ್ತಿರುವ ಸುಕೃತಾ ನಾಗ್…

ಬಾಲಕಲಾವಿದೆಯಾಗಿ ಕಿರುತೆರೆಗೆ ಕಾಲಿಟ್ಟ ಸುಕೃತಾ ನಾಗ್ ಫೇಮಸ್ ಆಗಿದ್ದು ಅಂಜಲಿಯಾಗಿ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ದಾರ್ಥ್ ತಂಗಿ ಅಂಜಲಿ ಆಗಿ ಕರುನಾಡಿನ ಮನೆ ಮನ ಗೆದ್ದ ಹುಡುಗಿ ಸುಕೃತಾ ನಾಗ್ ಈಗ ಲಕ್ಷಣ ಧಾರಾವಾಹಿಯಲ್ಲಿ ಶ್ವೇತಾ ಆಗಿ ಮೋಡಿ ಮಾಡುತ್ತಿದ್ದಾರೆ. ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ಪಾತ್ರಕ್ಕೆ ಜೀವ ತುಂಬಿರುವ ಸುಕೃತಾ ಅವರ ಹೊಸ ಲುಕ್ ಗೆ ಪ್ರೇಕ್ಷಕ ಪ್ರಭು ಈಗಾಗಲೇ ಫಿದಾ ಆಗಿದ್ದಾಗಿದೆ. ಧಾರಾವಾಹಿಯಲ್ಲಿ ಬ್ಯುಸಿ ಆಗಿರುವ ಸುಕೃತಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಫ್ಯಾಷನ್ ಅಂದರೆ ಇಷ್ಟ ಪಡುವ ಸುಕೃತಾ ಈಗ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಸ್ಪೆಷಲ್ ಫೋಟೋಶೂಟ್ ನಲ್ಲಿ ಶಾಕುಂತಲೆಯ ರೀತಿಯಲ್ಲಿ ತಯಾರಾಗಿರುವ ಸುಕೃತಾ ಫ್ಯಾಷನ್ ಪ್ರಿಯರ ಮನ ಸೆಳೆದಿದ್ದಾರೆ. ಸದಾ ಮಾಡರ್ನ್ ಔಟ್ ಫಿಟ್ ಗಳಿಂದ ಗಮನ ಸೆಳೆಯುತ್ತಿದ್ದ ಸುಕೃತಾ ಈ ಬಾರಿ ಸೀರೆ ಉಟ್ಟು ಮಿಂಚಿದ್ದಾರೆ. ಈ ಮೊದಲು ಸುಕೃತಾ ಈ ರೀತಿ ಫೋಟೋಶೂಟ್ ಮಾಡಿಸಿಕೊಂಡಿರಲಿಲ್ಲ. ಹಬ್ಬ, ಸಮಾರಂಭಗಳು ಇದ್ದಾಗ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸುತ್ತಿದ್ದ ಈ ಚೆಂದುಳ್ಳಿ ಚೆಲುವೆ ಈ ಬಾರಿ ವಿಭಿನ್ನ ಎಂಬಂತೆ ಶಾಕುಂತಲೆ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಶ್ವೇತ ವರ್ಣದ ಸೀರೆ ಉಟ್ಟು ಅದಕ್ಕೆ ಒಪ್ಪುವ ಮೂಗುತಿಯಲ್ಲಿ ಕಂಗೊಳಿಸುವ ಸುಕೃತಾ ಅದಕ್ಕೆ ತಕ್ಕಂತೆ ಮೇಕಪ್ ಮಾಡಿಸಿಕೊಂಡು ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಈ ಫೋಟೊಶೂಟ್ ಮೂಲಕ ಸುಕೃತಾ ಸಾಕಷ್ಟು ಸದ್ದು ಮಾಡುತ್ತಿರುವುದಂತೂ ನಿಜ.

ಶಾಕುಂತಲೆಯಾಗಿ ಸದ್ದು ಮಾಡುತ್ತಿರುವ ಸುಕೃತಾ ನಾಗ್… Read More »

ನನ್ನ ಹಾದಿ ಯಾವತ್ತಿಗೂ ಸುಗಮವಾಗಿರಲಿಲ್ಲ ಎಂದ ಕಿಶನ್ ಬಿಳಿಗಲಿ‌‌.. ಯಾಕೆ ಗೊತ್ತಾ?

ಕಿಶನ್ ಬಿಳಿಗಲಿ ಕನ್ನಡಿಗರಿಗೇನೂ ಹೊಸಬರಲ್ಲ. ಡ್ಯಾನ್ಸ್ ದಿವಾನೆ ಎನ್ನುವ ಡ್ಯಾನ್ಸ್ ಶೋ ವಿನ್ನರ್ ಆಗಿದ್ದ ಕಿಶನ್ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿ ಕನ್ನಡಿಗರ ಮನಗೆದ್ದರು. ಮಾತ್ರವಲ್ಲ ಕರ್ನಾಟಕದಾದ್ಯಂತ ಮನೆ ಮಾತಾದರು. ವಿಸ್ಮಯಾ ಗೌಡ ನಿರ್ದೇಶನದ ಡಿಯರ್ ಕಣ್ಮಣಿ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿರುವ ಕಿಶನ್ ಬಿಳಗಲಿಕನ್ನಡದ ಸೆನ್ಸೇಷನಲ್ ಸೆಲೆಬ್ರಿಟಿಗಳಲ್ಲಿ ಒಬ್ಬರೂ ಹೌದು. ಅಂದ ಹಾಗೇ ಕಿಶನ್ ಅವರ ಹಾದಿ ಸುಲಭದ ಹಾದಿಯಾಗಿರಲಿಲ್ಲ. ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ ನಂತರವಷ್ಟೇ ಅವರು ಈ ಸ್ಥಾನವನ್ನು ಗಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಿಶನ್ ತನ್ನ ಯಶಸ್ಸಿನ ಹಾದಿಯ ವಿಡಿಯೋ ತುಣುಕನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಕೆರಿಯರ್ ನ ಚಿತ್ರಣವನ್ನು ಈ ವಿಡಿಯೋ ನೀಡಿದೆ. ಇದರೊಂದಿಗೆ ನೋಟ್ ಕೂಡಾ ಬರೆದುಕೊಂಡಿದ್ದಾರೆ. “ಪಯಣ ಯಾವಾಗಲೂ ಮುಖ್ಯವಾದುದು ನಿಜ. ನಾನು ಇನ್ನೂ ಬಹಳಷ್ಟು ವಿಷಯಗಳಲ್ಲಿ ವಿಫಲವಾಗಿದ್ದು ನಿಜ. ಆದರೆ ಅದನ್ನು ಎಲ್ಲಿಯೂ ಯಾವತ್ತಿಗೂ ಬಿಟ್ಟುಕೊಡುವುದಿಲ್ಲ. ನೀವು ನಿಮ್ಮ ಗುರುತುಗಳನ್ನು ಹೆಮ್ಮೆಯಿಂದ ಧರಿಸಿ. ಮುಂದೊಂದು ದಿನ ನೀವು ಹೇಳಲು ಕಥೆಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಇದು ಆರಂಭವಷ್ಟೇ”ಎಂದಿದ್ದಾರೆ.

ನನ್ನ ಹಾದಿ ಯಾವತ್ತಿಗೂ ಸುಗಮವಾಗಿರಲಿಲ್ಲ ಎಂದ ಕಿಶನ್ ಬಿಳಿಗಲಿ‌‌.. ಯಾಕೆ ಗೊತ್ತಾ? Read More »

ಶ್ರೀಸಾಯಿ ಆಂಜನೇಯ ಚಿತ್ರ ಪ್ರೊಡಕ್ಷನ್ ಹೌಸ್ ಗೆ ಒಂದು ವರ್ಷ… ಸಂತಸ ಹಂಚಿಕೊಂಡ ರಕ್ಷ್

ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಆಗಿ ನಟಿಸುತ್ತಿರುವ ನಟ ರಕ್ಷ್ ಈಗ ಸಂಭ್ರಮದ ಮೂಡ್ ನಲ್ಲಿದ್ದಾರೆ. ಅದಕ್ಕೆ ಕಾರಣವೂ ಇಲ್ಲಿದೆ! ಗಟ್ಟಿಮೇಳ ಧಾರಾವಾಹಿಯ ನಿರ್ಮಾಪಕರಾಗಿ ರಕ್ಷ್ ಭಡ್ತಿ ಪಡೆದಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದಿರುವ ವಿಚಾರ. ಇದೀಗ ನಿರ್ಮಾಪಕರಾಗಿ ಒಂದು ವರ್ಷ ಪೂರೈಸಿರುವ ರಕ್ಷ್ ಈಗ ಯಶಸ್ಸಿನ ಸಡಗರದಲ್ಲಿದ್ದಾರೆ. “ಶ್ರೀ ಸಾಯಿ ಆಂಜನೇಯ ಚಿತ್ರ” ಎನ್ನುವ ಪ್ರೊಡಕ್ಷನ್ ಹೌಸ್ ಅನ್ನು ರಕ್ಷ್ ಶುರು ಮಾಡಿದ್ದು, ಅದರ ಮುಖಾಂತರವೇ ಗಟ್ಟಿಮೇಳ ಧಾರಾವಾಹಿಯನ್ನು ರಕ್ಷ್ ಅವರು ನಿರ್ಮಾಣ ಮಾಡುತ್ತಿದ್ದರು. ನಿರ್ಮಾಪಕರಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನನ್ನು ಪ್ರೋತ್ಸಾಹಿಸಿದ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. “ನಿಮ್ಮೆಲ್ಲರ ಪ್ರೀತಿಗೆ ತುಂಬಾ ಧನ್ಯವಾದಗಳು ಹಾಗೂ ಈ ಪಯಣದಲ್ಲಿ ಪ್ರೋತ್ಸಾಹ ನೀಡಿದ್ದೀರಿ. ಶ್ರೀ ಸಾಯಿ ಆಂಜನೇಯ ಚಿತ್ರಕ್ಕೆ ಈಗ ಒಂದು ವರ್ಷದ ಸಂಭ್ರಮ. ಇದೊಂದು ಉತ್ತಮ ಪಯಣ. ಇದು ಕಲಿಯುವ ,ಮತ್ತೆ ಮತ್ತೆ ಕಲಿಯಬೇಕಾದ ಹಾಗೂ ಕಲಿಯಲು ಇರುವ ಪಯಣ. ನನ್ನ ಮೇಲೆ ನಂಬಿಕೆ ಇಟ್ಟ ಜೀ ಕನ್ನಡ ವಾಹಿನಿಗೆ ಧನ್ಯವಾದಗಳು. ನನ್ನ ಕಲಾವಿದರಿಗೆ, ತಂತ್ರಜ್ಞರಿಗೆ ಧನ್ಯವಾದಗಳು. ನನ್ನ ಅಭಿಮಾನಿಗಳ ಪೇಜ್ ಗೂ ಧನ್ಯವಾದಗಳು. ನಿಮ್ಮ ಅಭಿಮಾನ ಹೀಗೆ ಇರಲಿ “ಎಂದಿದ್ದಾರೆ.

ಶ್ರೀಸಾಯಿ ಆಂಜನೇಯ ಚಿತ್ರ ಪ್ರೊಡಕ್ಷನ್ ಹೌಸ್ ಗೆ ಒಂದು ವರ್ಷ… ಸಂತಸ ಹಂಚಿಕೊಂಡ ರಕ್ಷ್ Read More »

ಹಾಟ್ ಸ್ಟೈಲ್ ನಲ್ಲಿ ಸಮ್ಮರ್ ಸೀಸನ್ ವೆಲ್ಕಂ ಮಾಡಿದ ದೀಪಿಕಾ ಪಡುಕೋಣೆ !

ನಟಿ ದೀಪಿಕಾ ಪಡುಕೋಣೆ ಪದ್ಮಾವತ್ ಸಿನಿಮಾ ಆದ ನಂತರ ಯಾವುದೇ ದೊಡ್ಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ….ಸದ್ಯ ಓಟಿಟಿ ಸಿನಿಮಾದಲ್ಲಿ ಆಕ್ಟ್ ಮಾಡಿರುವ ದೀಪಿಕಾ ಜಾಹೀರಾತಿನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ .. ಇನ್ನೇನು ಕೆಲವೇ ದಿನಗಳಲ್ಲಿ ವಿಂಟರ್ ಸೀಸನ್ ಮುಗಿದು ಸಮ್ಮರ್ ಸೀಸನ್ ಆರಂಭವಾಗಲಿದೆ… ಇನ್ನೂ ಸಮ್ಮರ್ ಆರಂಭವಾಗಲು 1ತಿಂಗಳು ಇರುವಾಗಲೇ ದೀಪಿಕಾ ಹಾಟ್ ಲುಕ್ ನಲ್ಲಿ ಸಮ್ಮರ್ ಸೀಸನ್ ಅನ್ನು ವೆಲ್ಕಂ ಮಾಡಿದ್ದಾರೆ… ಈ ಬಾರಿಯ ಸಮ್ಮರ್ ಸೀಸನ್ ನಲ್ಲಿ ಯಾವ ರೀತಿಯ ಉಡುಗೆ ತೊಡಬೇಕು… ಯಾವ ಲುಕ್ ಚೆನ್ನಾಗಿರುತ್ತೆ.. ಅನ್ನೋದಕ್ಕೆ ಹೊಸದೊಂದು ಫೋಟೋ ಶೂಟ್ ಮಾಡಿಸಿದ್ದಾರೆ …ಈ ಶೂಟ್ ನಲ್ಲಿ‌ ಕಂಪ್ಲೀಟ್ ಡೆನಿಮ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ದೀಪಿಕಾ ಗ್ಲಾಮರಸ್ ಹಾಗೂ ಸ್ಟೈಲಿಶ್ ಲುಕ್ ಮಾತ್ರವಲ್ಲದೆ ಸಕತ್ ಹಾಟ್ ಆಗಿ ಕ್ಯಾಮೆರಾ ಗೆ ಪೋಸ್ ಕೊಟ್ಟಿದ್ದಾರೆ…. ಇನ್ನು ದೀಪಿಕಾ ಅವರ ಈ ಹೊಸ ರೀತಿಯ ಲುಕ್ ಕಂಡ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ… ಒಟ್ಟಾರೆ ದೀಪಿಕಾ ಪಡುಕೋಣೆ ಸಿನಿಮಾ ಆಗಲೀ ಜಾಹೀರಾತಾಗಲಿ ಒಂದಲ್ಲ ಒಂದು‌ ರೀತಿಯಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ….

ಹಾಟ್ ಸ್ಟೈಲ್ ನಲ್ಲಿ ಸಮ್ಮರ್ ಸೀಸನ್ ವೆಲ್ಕಂ ಮಾಡಿದ ದೀಪಿಕಾ ಪಡುಕೋಣೆ ! Read More »

ಯೋಧರನ್ನ ಭೇಟಿ ಮಾಡಿದ ಜ್ಯೂ ರೆಬೆಲ್ ಸ್ಟಾರ್

ಸ್ಯಾಂಡಲ್‌ವುಡ್ ನ ಜ್ಯೂ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು ‌ಭಾರತಾಂಬೆಯ ರಕ್ಷಣೆಗಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹೆಮ್ಮೆಯ ಸಿ.ಆರ್.ಪಿ.ಎಫ್ ಯೋಧರನ್ನು ಭೇಟಿ ಮಾಡಿ ಅವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಿದ್ದಾರೆ…. ಯೋಧರಲ್ಲಿ ಇರುವ ದೇಶ ಪ್ರೇಮ, ನಿಷ್ಠೆ, ಕಾಳಜಿಗೆ ಬಗ್ಗೆ ಮಾತುಕತೆ ನಡೆಸಿ ನಂತರ ಯೋಧರು ನೀಡಿದ ಅತಿಥ್ಯವನ್ನು ಅತ್ಯಂತ ವಿನಮ್ರವಾಗಿ ಸ್ವೀಕರಿಸಿದ್ದಾರೆ… ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಹೆಮ್ಮೆಯ ಯೋಧ ಗುರು ರವರನ್ನು ಸ್ಮರಿಸಿದ್ದಾರೆ…

ಯೋಧರನ್ನ ಭೇಟಿ ಮಾಡಿದ ಜ್ಯೂ ರೆಬೆಲ್ ಸ್ಟಾರ್ Read More »

ಉಪ್ಪಿ ಜೊತೆ ಆಕ್ಟ್ ಮಾಡಲು ಇಲ್ಲಿದೆ ಚಾನ್ಸ್ ….

ಭಾರತೀಯ ಸಿನಿಮಾರಂಗದ ಟಾಪ್ ಮೋಸ್ಟ್ ನಿರ್ದೇಶಕರ ಲೀಸ್ಟ್ ನಲ್ಲಿರುವ ಕನ್ನಡದ ಏಕೈಕ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ….ಹೌದು ಉಪ್ಪಿ ನಿರ್ದೇಶನ ಅಂದ್ರೆ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡ್ತಾರೆ .. ಸ್ಯಾಂಡಲ್ ವುಡ್ ನಲ್ಲಿ ಮೋಸ್ಟ್ ಟ್ಯಾಲೆಂಟೆಡ್ ನಿರ್ದೇಶಕ ಎಂದು ಕರೆಸಿಕೊಳ್ಳುವ ರಿಯಲ್ ಸ್ಟಾರ್ ಈಗ ತಮ್ಮ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ..ಇಷ್ಟು ದಿನ ಸಿನಿಮಾ ನೋಡಿ ಎಂಜಾಯ್ ಮಾಡಿದ ಅಭಿಮಾನಿಗಳಿಗೆ ಹಾಗೂ ಕಲಾವಿದರಿಗೆ ಈಗ ಉಪ್ಪಿ ಜತೆ ನಟಿಸುವುದಕ್ಕೆ ಒಂದು ಚಾನ್ಸ್ ಸಿಕ್ಕಿದೆ… ಹೌದು ಉಪ್ಪಿ ನಿರ್ದೇಶನದ ತಮ್ಮ ಮುಂದಿನ ಸಿನಿಮಾಗೆ ಕಲಾವಿದರ ಹುಡುಕಾಟ ಶುರುವಾಗಿದೆ ..14 -ರಿಂದ 60 ವಯಸ್ಸಿನ ನಟ ನಟಿಯರು ಉಪ್ಪಿ ಜತೆ ನಟಿಸುವುದಕ್ಕೆ ಚಾನ್ಸ್ ಗಿಟ್ಟಿಸಬಹುದು .. ಇದಕ್ಕೆ ಮಾಡಬೇಕಾಗಿರುವುದಿಷ್ಟೆ ನೀವು ಅಭಿನಯ ಮಾಡಿರುವಂಥ 2ನಿಮಿಷದ ವಿಡಿಯೋವನ್ನು ಉಪ್ಪಿಯ upendraproductions@gmail.com ಐಡಿಗೆ ಇಮೇಲ್ ಮಾಡಬೇಕು.. ಮಾರ್ಚ್ 10 ರೊಳಗೆ ವಿಡಿಯೋನ ಕಲಳಿಸಿಕೊಡಬೇಕು.. ವೀಡಿಯೋ ನೋಡಿ ನಿಮ್ಮ ಅಭಿನಯ ಮೆಚ್ಚುಗೆಯಾದರೆ ಉಪ್ಪಿ ಜತೆ ಅವರ ನಿರ್ದೇಶನದ ಸಿನೆಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು … ಅಂದಹಾಗೆ ಉಪ್ಪಿ ನಿರ್ದೇಶನ ಮಾಡಿ ನಟಿಸುತ್ತಿರುವ ಚಿತ್ರದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ…ಪೋಸ್ಟರ್ ರಿವೀಲ್ ಮಾಡಿ ಪ್ರೇಕ್ಷಕರ ತಲೆಯಲ್ಲಿ ಹುಳ ಬಿಟ್ಟಿರುವ ಉಪೇಂದ್ರ ಕೆಲವೇ ದಿನಗಳಲ್ಲಿ ಚಿತ್ರದ ಬಗ್ಗೆ ಅಪ್ ಡೇಟ್ ನೀಡಲಿದ್ದಾರೆ….

ಉಪ್ಪಿ ಜೊತೆ ಆಕ್ಟ್ ಮಾಡಲು ಇಲ್ಲಿದೆ ಚಾನ್ಸ್ …. Read More »

Scroll to Top