Karnataka Bhagya

ಲೈಫ್ ಸ್ಟೈಲ್

ಸ್ಯಾಂಡಲ್‌ವುಡ್ ಶಿವನನ್ನ ಮೆಚ್ಚಿದ ಬಾಲಿವುಡ್ ಸತ್ಯ ನ ಕ್ರಿಯೇಟರ್ RGV

ಸ್ಯಾಂಡಲ್ ವುಡ್ ನಟ ನಿರ್ದೇಶಕ ರಾಜ್ ಬಿ ಶೆಟ್ಟಿಗೆ ‘RGV’ ಶಹಬ್ಬಾಸ್ ಗಿರಿ ಸಿಕ್ಕಿದೆ…ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿದ ರಾಮ್ ಗೋಪಾಲ್ ಫಿದಾ ಆಗಿದ್ದಾರೆ… ರಾಜ್ ಬಿ ಶೆಟ್ಟಿಗೆ ಮತ್ತು ರಿಷಬ್ ಶೆಟ್ಟಿ ಅಭಿನಯದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಈಗಾಗಲೇ ಓಟಿಟಿ ಪ್ಲ್ಯಾಟ್ ಫಾರ್ಮ್‌ನಲ್ಲಿ ಇತಿಹಾಸ ಸೃಷ್ಟಿಸ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಒಟಿಟಿಗೆ ಎಂಟ್ರಿ ಕೊಟ್ಟ ಈ ಸಿನಿಮಾ ಮೂರೇ ದಿನದಲ್ಲಿ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿದೆ. ಇದೀಗ ಈ ಸಿನಿಮಾವನ್ನು ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮ ನೋಡಿ ಮೆಚ್ಚಿಕೊಂಡಿದ್ದಾರೆ.ಗರುಡ ಗಮನ ವೃಷಭ ವಾಹನ ಸಿನಿಮಾ ಚಿತ್ರಪ್ರೇಮಿಗಳು ಮಾತ್ರವಲ್ಲದೆ ಸಿನಿಮಾರಂಗದ ಸೆಲೆಬ್ರಿಟಿಗಳಿಗೂ ಇಷ್ಟವಾಗಿತ್ತುಮ..ಈಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಮನಸೂರೆಗೊಳಿಸಿದೆ. ಇಡೀ ಸಿನಿಮಾಕ್ಕೆ ಫಿದಾ ಆಗಿರುವ ಆರ್ ಜಿವಿ ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಚಿತ್ರವನ್ನು, ರಾಜ್ ಬಿ ಶೆಟ್ಟಿ ಅಭಿನಯವನ್ನು ಪದಗಳಲ್ಲಿ ಬಣ್ಣಿಸಿದ್ದಾರೆ. ಸಿನಿಮಾ ಮತ್ತೊಂದು ಲೆವೆಲ್ನಲ್ಲಿದೆ. ರಾಜ್ ಬಿ ಶೆಟ್ಟಿ ಪಾತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಈ ಮೂಲಕ ಅವರು ಸಂಪೂರ್ಣ ರೂಪಾಂತರ ಹೊಂದಿದ್ದಾರೆ ಎಂದಿರುವ ಆರ್ಜಿವಿ, ಇಡೀ ಚಿತ್ರ ‘ಅಲ್ಟ್ರಾಸ್ಕೋಪಿಕ್’ ಎಂದು ಹಾಡಿ ಹೊಗಳಿದ್ದಾರೆ ರಾಮ್ ಗೋಪಾಲ್ ವರ್ಮಾಗೂ ಮೊದಲೇ ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ಇಷ್ಟಪಟ್ಟಿದ್ದರು. ಇದೀಗ RGV ಕೂಡ ರಾಜ್ ಸಿನಿಮಾಗೆ ಫಿದಾ ಆಗಿದ್ದಾರೆ.

ಸ್ಯಾಂಡಲ್‌ವುಡ್ ಶಿವನನ್ನ ಮೆಚ್ಚಿದ ಬಾಲಿವುಡ್ ಸತ್ಯ ನ ಕ್ರಿಯೇಟರ್ RGV Read More »

ಯಾರಿಗೂ ತಿಳಿಯದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಆಂಜನೇಯನ ದರ್ಶನ ಮಾಡಿದ ರಚಿತ ರಾಮ್

ನಟಿ ರಚಿತಾ ರಾಮ್ ಆಂಜನೇಯನ ಭಕ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ… ಅದಷ್ಟೇ ಅಲ್ಲದೆ ರಚಿತಾ ಚಿತ್ರೀಕರಣ ಬಿಡುವಿದ್ದಾಗ ಆಗಾಗ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸುತ್ತಿದ್ದಾರೆ.. ಕೆಲವು ದಿನಗಳ ಹಿಂದೆಯಷ್ಟೇ ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದರು ರಚಿತಾ ರಾಮ್ …ಈ ವಿಚಾರವನ್ನ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು …ಈಗ ಬೆಂಗಳೂರಿನ ಹನುಮಂತನಗರದಲ್ಲಿರುವ ಕಾರ್ಯಸಿದ್ಧಿ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ರಚಿತಾ…ವಿಶೇಷ ಅಂದ್ರೆ ರಚಿತಾ ಯಾರಿಗೂ ತಿಳಿಯಬಾರದು ಎಂದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಾರ್ವಜನಿಕರ ಮಧ್ಯೆಯೇ ದೇವರ ದರ್ಶನ ಮಾಡಿದ್ದಾರೆ ..ನಂತರ ಆ ಫೋಟೋ ವನ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ…

ಯಾರಿಗೂ ತಿಳಿಯದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಆಂಜನೇಯನ ದರ್ಶನ ಮಾಡಿದ ರಚಿತ ರಾಮ್ Read More »

ಸ್ಯಾಂಡಲ್ ವುಡ್ ಯುವರಾಜ’ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್

ಸ್ಯಾಂಡಲ್ ವುಡ್ ಯುವರಾಜ.. ನಿಖಿಲ್ ಕುಮಾರ್ ಗೆ ಜನವರಿ 22 ರಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್ ಡೇ ಪ್ರಯುಕ್ತ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗ್ತಿರುವ..ನಿಖಿಲ್ ನಟಿಸ್ತಿರುವ ಐದನೇ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಲು ಚಿತ್ರತಂಡ ಸಕಲ ರೀತಿಯಿಂದ ಸಜ್ಜಾಗಿದೆ. ಸಂಕ್ರಾಂತಿ ಹಬ್ಬ ಮುಗಿಸಿಕೊಂಡು ಶೂಟಿಂಗ್ ಅಖಾಡಕ್ಕೆ ಧುಮುಕಿದ್ದ ಯುವರಾಜನ ಹೊಸ ಸಿನಿಮಾಗೆ ಮಂಜು ಅಥರ್ವ ಆಕ್ಷನ್ ಕಟ್ ಹೇಳ್ತಿದ್ದಾರೆ.ಕಳೆದ ಏಳು ವರ್ಷಗಳಿಂದ ಮಂಜು ಅಥರ್ವ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಮಂಜು, ತಮಿಳಿನ ಕದಿರನ್ ಜೊತೆ ಕೆಲಸ ಮಾಡಿದ್ದಾರೆ. ಮಾಸ್ಟರ್‌ಪೀಸ್‌, ‘ಮಫ್ತಿ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಆಗಿ ಕೆಲಸ ಮಾಡಿದ್ದಾರೆ. ನೆನಪಿರಲಿ ಪ್ರೇಮ್‌ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಕೋ-ಡೈರೆಕ್ಟರ್‌ ಕೂಡ ಆಗಿದ್ದರು. ಇದೀಗ ಮಂಜು ಅಥರ್ವ, ನಿಖಿಲ್‌ ಅವರ ಸಿನಿಮಾ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಿತ್ರದ ಪಾತ್ರಗಳು ಫೈನಲ್ ಆಗಿಲ್ಲ. ಚಿತ್ರಕ್ಕೆ ಅಜನೀಶ್ ಲೋಕನಾಥ್‌ ಸಂಗೀತ ನೀಡುತ್ತಿದ್ದಾರೆ. ಮಫ್ತಿ, ಮದಗಜ ಸಿನಿಮಾಗಳ ಸಿನಿಮಾಟೋಗ್ರಾಫರ್ ನವೀನ್ ಕ್ಯಾಮೆರಾ ಕೈ ಚಳಕ ಸಿನಿಮಾದಲ್ಲಿರಲಿದೆ. ಸದ್ಯಕ್ಕೆ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ನೀಡಿರುವ ಚಿತ್ರ ತಂಡ ಸದ್ಯದಲ್ಲಿಯೇ ಟೈಟಲ್ ಜೊತೆಗೆ ಉಳಿದ ತಾರಾಬಳಗದ ಬಗ್ಗೆ ಮಾಹಿತಿ‌ ಹೊರ ಬೀಳಲಿದೆ.

ಸ್ಯಾಂಡಲ್ ವುಡ್ ಯುವರಾಜ’ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ Read More »

ತೆರೆ ಮೇಲೂ ಒಂದಾದ ಕುಚುಕ್ಕು ಜೋಡಿ!

ಪ್ರಜ್ವಲ್‌ದೇವರಾಜ್ ಒಂದರ ನಂತರ ಮತ್ತೋಂದು ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ‌ ಬ್ಯೂಸಿ ಆಗಿರೋ ಡೈನಾಮಿಲ್ ಪ್ರಿನ್ಸ್ ಚಿತ್ರಗಳ ಸಾಲಿಗೆ ಹೆಸರಿಡದ ಚಿತ್ರವೊಂದನ್ನು ಸೇರಿಕೊಂಡಿದೆ… ಮಂಗಳವಾರ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಸಮಾರಂಭವು ಸರಳವಾಗಿ ನಡೆದಿದೆ…ಚಿತ್ರವನ್ನು ಫಿಲ್ಮಿ ಫೆಲೋ ಸ್ಟುಡಿಯೋಸ್ ಅರ್ಪಿಸುತ್ತಿದ್ದು, ಆಲ್ ಓಶನ್ ಮಿಡಿಯಾ ಪ್ರೈ.ಲಿಮಿಟೆಡ್ ಮತ್ತು ಮಾತ ಭಗವತಿ ಪಿಕ್ಚರ‍್ಸ್ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ… ಬಾಲಿವುಡ್‌ನ ಅಧಿರ್‌ಭಟ್ ಬರೆದಿರುವ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಕಥೆಗೆ ಪನ್ನಗಭರಣ ನಿರ್ದೇಶನ ಮಾಡುತ್ತಿದ್ದಾರೆ.. ಇದೇ ಮೊದಲಬಾರಿ ಪ್ರಜ್ವಲ್‌ದೇವರಾಜ್‌ಗೆ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಪ್ರಜ್ವಲ್ ’ಮಾಫಿಯಾ’, ’ಗಣ’ ಚಿತ್ರಗಳಲ್ಲಿ ತೊಡಗಿಕೊಂಡಿದ್ದು, ಇವುಗಳನ್ನು ಮುಗಿಸಿದ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸಂಗೀತ ವಾಸುಕಿವೈಭವ್, ಛಾಯಾಗ್ರಹಣ ವಿರಾಜ್‌ಸಿಂಗ್, ಕಾರ್ಯಕಾರಿ ನಿರ್ಮಾಪಕರಾಗಿ ಪ್ರವೀಣ್‌ಯಾದವ್ ಅವರು ನಿರ್ವಹಿಸುತ್ತಿದ್ದಾರೆ.

ತೆರೆ ಮೇಲೂ ಒಂದಾದ ಕುಚುಕ್ಕು ಜೋಡಿ! Read More »

ಅಯೋಗ್ಯ ನಿಗಾಗಿ ಕವನ ಬರೆದ ಡಿಂಪಲ್ ಕ್ವೀನ್

ನಟ ನೀನಾಸಂ ಸತೀಶ್ ಹಾಗೂ ನಟಿ ರಚಿತಾ ರಾಮ್ ಅಭಿನಯದ ಹೊಸ ಸಿನಿಮಾ ಈಗಾಗಲೇ 3ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ನಾಲ್ಕನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದೆ… ಅಯೋಗ್ಯ ಸಿನಿಮಾ ಮೂಲಕ ಸಕ್ಸಸ್ ಫುಲ್ ಜೋಡಿ ಎನಿಸಿಕೊಂಡಿದ್ದ ರಚಿತಾ ಹಾಗೂ ಸತೀಶ್ ಮತ್ತೆ ಮೋಡಿ ಮಾಡಲು ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ .. ಸದ್ಯ ನಾಲ್ಕನೇ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸತೀಶ್ ಮತ್ತು ರಚಿತಾ ಇಬ್ಬರು ಚಿತ್ರೀಕರಣದಲ್ಲಿ ಭಾಗಿಯಾಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ… ಮತ್ತೊಂದು ವಿಶೇಷ ಅಂದರೆ ಸತೀಶ್ ಗಾಗಿ ನಟಿ ರಚಿತಾ ರಾಮ್ ಕವನ ಬರೆದಿದ್ದಾರೆ … ಆಕಾಶದಲ್ಲಿ ಮೋಡ ಇದ್ರೆ ಮಳೆ ಬರ್ತದೆಥಿಯೇಟರ್ ಗೆ ಜನ ಬಂದ್ರೆ ಹಣ ಬರ್ತದೆಮ್ಯಾಥ್ಯೂ ಸಿನಿಮಾದಲ್ಲಿ ನಾವಿಬ್ಬರು ಇದ್ದರೆ ಕಳೆ ಬರ್ತದೆ…ಎಂದು ರಚಿತಾ ಕವನ ಬರೆದಿದ್ದಾರೆ…

ಅಯೋಗ್ಯ ನಿಗಾಗಿ ಕವನ ಬರೆದ ಡಿಂಪಲ್ ಕ್ವೀನ್ Read More »

18 ವರ್ಷದ ದಾಂಪತ್ಯಕ್ಕೆ ಎಳ್ಳು ನೀರು‌‌ಬಿಟ್ಟ ಧನುಷ್

ತಮಿಳಿನ ಸೂಪರ್ ಸ್ಟಾರ್ ನಟ ಧನುಷ್ ತಮ್ಮ 18ವರ್ಷದ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ…ಧನುಷ್ ಹಾಗೂ ಐಶ್ವರ್ಯ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ್ದು…ಅಧಿಕೃತವಾಗಿ ಈ ವಿಚಾರವನ್ನ ಧನುಷ್ ಘೋಷಣೆ ಮಾಡಿದ್ದಾರೆ… ಧನುಷ್ ಟ್ವಿಟರ್ ಅಕೌಂಟ್ ನಲ್ಲಿ ದೂರಾಗೋ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ..ಧನುಷ್ ಸೂಪರ್ ಸ್ಟಾರ್ ರಜನಿಕಾಂತ್ ರ ಮೊದಲ ಪುತ್ರಿ ಐಶ್ವರ್ಯ ಅವ್ರನ್ನ ವಿವಾಹವಾಗಿದ್ದರು…ಇಬ್ಬರ ಸುಂದರ ಸಂಸಾರಕ್ಕೆ ಸಾಕ್ಷಿಯಾಗಿ ಎರಡು ಗಂಡು ಮಕ್ಕಳಿದ್ದಾರೆ..ಪ್ರೀತಿಸಿ ಮದುವೆ ಆಗಿದ್ದ ನಟ ಧನುಷ್ ಹಾಗು ಐಶ್ವರ್ಯ ಈಗ ಸ್ವ ಇಚ್ಛೆಯಿಂದ ವಿಚ್ಛೇದನ ಪಡೆದಿದ್ದಾರೆ…

18 ವರ್ಷದ ದಾಂಪತ್ಯಕ್ಕೆ ಎಳ್ಳು ನೀರು‌‌ಬಿಟ್ಟ ಧನುಷ್ Read More »

ಸ್ಯಾಂಡಲ್ ವುಡ್ ಸುಪ್ರೀಂ ಹೀರೋ ಮೇಲು ‌ಬಿತ್ತು ಕೋವಿಡ್ ಕಣ್ಣು

ಸ್ಯಾಂಡಲ್ ವುಡ್ ನ ಸುಪ್ರೀಂ ಹೀರೋ ನಟ ಅನೀಶ್ ತೇಜೇಶ್ವರ್ ಗೆ ಪುರನ ಸೋಂಕು ಕಾಣಿಸಿಕೊಂಡಿದೆ… ತಮಗೆ ಕೋವಿಡ್ ಹರಡಿರುವ ವಿಚಾರವನ್ನ ಅನೀಶ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಗಳಿಗೆ ತಿಳಿಸಿದ್ದಾರೆ.. ನಾನು ಕೋವಿಡ್ ಸೋಂಕಿಗೆ ಒಳಪಟ್ಟಿತ್ತು ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಐಸೊಲೇಟ್ ಆಗಿದ್ದೇನೆ.. ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪ್ರತಿಯೊಬ್ಬರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅನೀಶ್ ಮನವಿ ಮಾಡಿದ್ದಾರೆ .. ಜನವರಿ ಹನ್ನೆರಡು ರಂದು ಅನೀಶ್ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದರು ಅಂದೆ ತಾನು ಅಭಿನಯದ 10ನೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನ್ನು ಕೂಡ ಲಾಂಚ್ ಮಾಡಿದ್ದರು .. ಸಿನಿಮಾ ಸ್ಟಾರ್ಗಳಿಗೆ ಹೆಚ್ಚು ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು. ಈಗಾಗಲೇ ಬಾಲಿವುಡ್ ನಲ್ಲಿ ಸಾಲು ಸಾಲು ಮಂದಿ ಸೋಂಕಿನಿಂದ ಮನೆಯಲ್ಲೇ ಐಸೋಲೆಟ್ ಆಗಿದ್ದಾರೆ….ಇನ್ನು ಸ್ಯಾಂಡಲ್ ವುಡ್ ನಲ್ಲಿ ಮಾಸ್ಟರ್ ಆನಂದ್. ನಿಶ್ವಿಕಾ ನಾಯ್ಡು. ಅನುಪಮ ಗೌಡ ಹೀಗೆ ಸಾಕಷ್ಟು ಜನರು ಈ ಸೋಂಕಿಗೆ ಒಳಗಾಗಿದ್ದಾರೆ ..

ಸ್ಯಾಂಡಲ್ ವುಡ್ ಸುಪ್ರೀಂ ಹೀರೋ ಮೇಲು ‌ಬಿತ್ತು ಕೋವಿಡ್ ಕಣ್ಣು Read More »

KGF ಬೆಸ್ಟು ಪುಷ್ಪ ಗಿಂತ ಎಂಬುದಕ್ಕೆ 10 ಕಾರಣಗಳು

ಪುಷ್ಪಾ ಸಿನಿಮಾ, 10 ಕೆಜಿಎಫ್ ಸಿನಿಮಾಗಳಿಗೆ ಸಮ ಎನ್ನುವ ಮಾತು ತೆಲುಗು ನಿರ್ದೇಶಕರೊಬ್ಬರಿಂದ ಬಂದಿತ್ತು. ಇದೀಗ ಮೊದಲ ವಾರದ ಗಳಿಕೆಯಲ್ಲಿ ಪುಷ್ಪ ಸಿನಿಮಾ ಕೆಜಿಎಫ್ ಸಿನಿಮಾವನ್ನು ಮೀರಿಸಿದೆ ಎನ್ನುವ ವರದಿಗಳು ಪ್ರಕಟಗೊಳ್ಳುತ್ತಿವೆ. ಆದರೆ ಸಿನಿಮಾ ಎನ್ನುವುದು ಕಲೆಕ್ಷನ್ನಿಗೂ ಮಿಗಿಲಾದ ಎಮೋಷನ್ನು. ನಿರ್ಮಾಣ ಹಂತದಿಂದಲೂ ಸುಕುಮಾರ್ ನಿರ್ದೇಶನದ ತೆಲುಗು ಸಿನಿಮಾ ಪುಷ್ಪ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ ಜೊತೆ ಹೋಲಿಕೆಗಳು ನಡೆಯುತ್ತಿವೆ. ಇದೀಗ ಮೊದಲ ವಾರದ ಗಳಿಕೆಯಲ್ಲಿ ಪುಷ್ಪ ಸಿನಿಮಾ ಕೆಜಿಎಫ್ ಸಿನಿಮಾವನ್ನು ಮೀರಿಸಿದೆ ಎನ್ನುವ ವರದಿಗಳು ಪ್ರಕಟಗೊಳ್ಳುತ್ತಿವೆ. ಆದರೆ ಸಿನಿಮಾ ಎನ್ನುವುದು ಕಲೆಕ್ಷನ್ನಿಗೂ ಮಿಗಿಲಾದ ಒಂದು ಎಮೋಷನ್ನು. ಪುಷ್ಪಾ ಸಿನಿಮಾವನ್ನು ಮೀರಿಸುವ ಕೆಜಿಎಫ್ ಸಿನಿಮಾದ ಹತ್ತು ಅಂಶಗಳನ್ನು ಇಲ್ಲಿ ನೀಡಿದ್ದೇವೆ 1.ಬಿಗ್ ಕ್ಯಾನ್ವಾಸ್ ಕೆಜಿಎಫ್ ಸಿನಿಮಾ ನಿಜಾರ್ಥದಲ್ಲಿ ದೊಡ್ಡ ಕ್ಯಾನ್ವಾಸ್ ಸಿನಿಮಾ. ಪಾತ್ರವರ್ಗದ ಸಂಖ್ಯೆ ಮಾತ್ರವಲ್ಲದೆ ಲೊಕೇಶನ್ನುಗಳು ಬಿಗ್ ಕ್ಯಾನ್ವಾಸ್ ಸಿನಿಮಾದ ಅನುಭವ ನೀಡುತ್ತದೆ. ಪುಷ್ಪ ಸಿನಿಮಾ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ರಕ್ತಚಂದನ ಕಳ್ಳಸಾಗಣೆ ಕಥೆಯನ್ನು ಹೊಂದಿರುವ ಕಾರಣಕ್ಕೋ ಏನೋ ಬಿಗ್ ಕ್ಯಾನ್ವಾಸ್ ಅನುಭವ ನೀಡುವುದಿಲ್ಲ. 2.ಬ್ಯಾಕ್ ಗ್ರೌಂಡ್ ಸ್ಕೋರ್ ಕೆಜಿಎಫ್ ಸಿನಿಮಾದ ಯಶಸ್ಸಿನಲ್ಲಿ, ಆ ಸಿನಿಮಾ ಕಟ್ಟಿಕೊಟ್ಟ ಅನುಭವದಲ್ಲಿ ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತದ ಪಾಲು ಮಹತ್ತರವಾದುದು. ಮೈನವಿರೇಳಿಸುವ ಎಪಿಕ್ ಪ್ರಕಾರದ ಸಂಗೀತವನ್ನು ಕೆ.ಜಿ.ಎಫ್ ಸಿನಿಮಾ ಹೊಂದಿದೆ. ಸ್ಟಾರ್ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ನೀಡಿರುವ ಪುಷ್ಪಾ ಸಿನಿಮಾದ ಹಾಡುಗಳು ಗಮನ ಸೆಳೆಯುವಂತಿದ್ದರೂ ಪ್ರೇಕ್ಷಕನನ್ನು ಸಿನಿಮಾದ ಗುಂಗಿನಲ್ಲಿ ಇರಿಸುವಲ್ಲಿ ಸೋಲುತ್ತದೆ. ತಾಯಿ ಸೆಂಟಿಮೆಂಟ್ ಇರಬಹುದು, ಮನದೆನ್ನೆಯ ಸಾಂಗತ್ಯ ಇರಬಹುದು, ರೊಚ್ಚಿಗೇಳುವ ಕ್ಷಣದಲ್ಲೇ ಆಗಿರಬಹುದು ದೃಶ್ಯದ ಭಾವನೆಗೆ ತಕ್ಕಂತೆ ಕೆಜಿಎಫ್ ರವಿ ಬಸ್ರೂರ್ ಸಂಗೀತ ಮನಮಿಡಿಯುವಂತಿದೆ. 3.ಕಾರ್ಟೂನ್ ಮುನ್ನುಡಿ ಯಾವುದೇ ಬೆಸ್ಟ್ ಸಿನಿಮಾದ ಆರಂಭಕ್ಕೆ ಸಿನಿಮಾದ ಪ್ರಾರಂಭಿಕ ದೃಶ್ಯಗಳು ಮುನ್ನುಡಿ ಬರೆಯುತ್ತವೆ. ಪುಷ್ಪ ಸಿನಿಮಾದಲ್ಲಿ ಸಿನಿಮಾದ ಕಾಂಟೆಕ್ಸ್ಟ್, ಕಥೆ ನಡೆಯುವ ಹಿನ್ನೆಲೆ ಪರಿಸರವನ್ನು ಪ್ರೇಕ್ಷಕರಿಗೆ ತಿಳಿಸಲು ಕಾರ್ಟೂನಿನ ಮೊರೆ ಹೋಗಿದೆ. ಸಿನಿಮಾದ ಸೀರಿಯಸ್ ನೆಸ್ ಅನ್ನು ಪುಷ್ಪ ಸಿನಿಮಾದ ಆರಂಭಿಕ ಕಾರ್ಟೂನ್ ದೃಶ್ಯಾವಳಿ ಪೇಲವಗೊಳಿಸುತ್ತದೆ. 4.ಡಯಲಾಗ್ ದರ್ಬಾರ್ ಕೆಜಿಎಫ್ ಸಿನಿಮಾದಲ್ಲಿನ ಡಯಲಾಗುಗಳು ಸರಳವಾಗಿದ್ದರೂ ಎದುರಾಳಿಗೆ ಮುಟ್ಟಿ ನೋಡಿಕೊಳ್ಳುವಂಥ ಏಟು ಕೊಡುವಂತಿದ್ದವು. ಪುಷ್ಪ ಸಿನಿಮಾದಲ್ಲಿ ಬೆರಳೆಣಿಕೆಯಷ್ಟು ಡಯಲಾಗುಗಳು ಇದ್ದರೂ ಅವುಗಳಿಗೆ ಚಿತ್ರಮಂದಿರಗಳಲ್ಲಿ ಕೇಳಿ ಬರುವ ವಿಷಲ್ಲುಗಳ ಪ್ರಮಾಣ ಕಡಿಮೆಯೇ. 5.ಅಶ್ಲೀಲತೆಯ ಟಚ್ ಕೆಜಿಎಫ್ ಸಿನಿಮಾಗೆ ಅಶ್ಲೀಲತೆಯ ನೆರಳು ಸೋಕಿಲ್ಲ. ಸಿನಿಮಾದ ಕಥಾನಾಯಕಿ ಬೋಲ್ಡ್ ಅಂಡ್ ಬ್ಯೂಟಿಫುಲ್. ಪೊಗರು ತೋರಿಸುವಾಗಲೂ, ನಾಯಕನ ಪ್ರಭಾವಳಿಗೆ ಒಳಗಾಗಿ ಅವನ ಪ್ರೇಮಪಾಶಕ್ಕೆ ಬೀಳುವಾಗಲೂ ನಿಧಿ ಶೆಟ್ಟಿ ಅಭಿನಯ ಕೃತಕ ಎನಿಸುವುದಿಲ್ಲ. ನಾಯಕಿಯನ್ನು ವೈಭವೀಕರಿಸಲು ಅಶ್ಲೀಲತೆಯ ಮೊರೆ ಹೋಗದೇ ಇರುವುದು ಕೆಜಿಎಫ್ ಹೆಗ್ಗಳಿಕೆ. ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಅವರ ಪಾತ್ರ ಈ ಬಗೆಯ ‘ತೋರಿಕೆ’ಗಾಗಿಯೇ ಮೀಸಲು ಎನ್ನುವ ಅನುಮಾನ ಬರುವುದಕ್ಕೆ ಹಲವು ದೃಶ್ಯಗಳು ಸಾಕ್ಷ್ಯ. 6.ಅತ್ಯದ್ಭುತ ಟ್ರೇಲರ್ ಕೆಜಿಎಪ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ದೇಶಾದ್ಯಂತ ಸೃಷ್ಟಿಯಾದ ಅದರ ಹವಾ ಯಾರೂ ಮರೆಯುವಂತಿಲ್ಲ. ಕೆಜಿಎಫ್ ಸಿನಿಮಾ ಟ್ರೇಲರ್ ಕುರಿತಾಗಿ ದೇಶ ವಿದೇಶಗಳ ಅಸಂಖ್ಯ ಯೂಟ್ಯೂಬ್ ರಿಯಾಕ್ಷನ್ ಚಾನಲ್ಲುಗಳು ಪ್ರತಿಕ್ರಿಯೆ ನೀಡಿದ್ದವು. ಆ ಮಟ್ಟಿನ ಬಝ್ ಅನ್ನು ಪುಷ್ಪಾ ಟ್ರೇಲರ್ ಕೂಡಾ ಸೃಷ್ಟಿಸಿರಲಿಲ್ಲ. 7. ಕ್ಲೈಮ್ಯಾಕ್ಸ್ ಹುಕ್ ಬಾಹುಬಲಿ ಸಿನಿಮಾದ ಮೊದಲ ಭಾಗ ಬಿಡುಗಡೆಯಾದಾಗ ಇದ್ದ ಕುತೂಹಲ ತಿಳಿದಿದೆ..ಅಂಥದ್ದೇ ಕುತೂಹಲವನ್ನು ಕೆಜಿಎಫ್ ಸಿನಿಮಾದ ಮೊದಲ ಭಾಗದ ಕ್ಲೈಮ್ಯಾಕ್ಸ್ನ್ ಹೊಂದಿದೆ. ಗುರಿ ಸಾಧನೆಗೆ ರಾಕ್ಷಸರ ಕೋಟೆ ಒಳಹೊಕ್ಕಿರುವ ನಾಯಕ ತನ್ನ ಕಾರ್ಯದಲ್ಲಿ ಯಶಸ್ವಿಯಾಗುವನೇ, ಎದುರಾಳಿಗಳನ್ನು ಬಗ್ಗು ಬಡಿಯುವನೇ ಎನ್ನುವ ಕುತೂಹಲ ಕೆಜಿಎಫ್ ಸಿನಿಮಾ ನೋಡಿದವರ ತಲೆಯಲ್ಲಿ ಜೀವಂತವಾಗಿದೆ. 8. ವಿಲನ್ನುಗಳೆಂಬ ಹೀರೋಗಳು ರಾಕ್ಷಸ ಕುಲವೇ ತುಂಬಿರುವ ಕೆಜಿಎಫ್ ನ ಕೋಟೆ ಕೊತ್ತಲದಲ್ಲಿರುವ ಖೂಳರು, ಖದೀಮರು ಒಮ್ಮೆ ಎದೆಯಲ್ಲಿ ಭೀತಿ ಹುಟ್ಟಿಸುತ್ತಾರೆ. ಕೇಡಿತನದಲ್ಲಿ ಒಬ್ಬರನ್ನು ಒಬ್ಬರು ಮೀರಿಸಬಲ್ಲರು. ಅದರಲ್ಲೂ ಮೊದಲ ಭಾಗದ ಮುಖ್ಯ ವಿಲನ್ ಗರುಡ ಎಲ್ಲಾ ವಿಧಗಳಲ್ಲಿ ರಾಕಿಯನ್ನು ಮೀರಿಸುವಂತೆ ತೋರಿಸಲ್ಪಟ್ಟಿದ್ದರು. ಅಷ್ಟೊಂದು ಶಕ್ತಿಶಾಲಿಯಾದ ವಿಲನ್ ಅನ್ನು ಹೊಡೆದುಹಾಕುವುದು ಸಾಧ್ಯವೇ ಇಲ್ಲ ಎನ್ನುವಂತೆ ಸಿನಿಮಾದಲ್ಲಿ ಬಿಂಬಿಸಲಾಗಿತ್ತು. ವಿಲನ್ನುಗಳು ಎಷ್ಟು ಶಕ್ತಿಶಾಲಿಯಾಗಿರುತ್ತಾರೋ ಸಿನಿಮಾ ಅಷ್ಟೇ ಎತ್ತರಕ್ಕೆ ಹೋಗುತ್ತದೆ. ಆ ಲೆಕ್ಕದಲ್ಲಿ ಕೆಜಿಎಫ್ ವಿಲನ್ನುಗಳು ಪ್ರೇಕ್ಷಕರನ್ನು ಸಿನಿಮಾದ ಚೌಕಟ್ಟಿನಿಂದ ಅತ್ತಿತ್ತ ಸುಳಿದಾಡಲು ಬಿಡಲೊಲ್ಲರು.  9. ಸ್ಟೈಲಿಶ್ ಕಥಾ ನಾಯಕ ಸ್ಟೈಲಿಶ್ ಸ್ಟಾರ್ ಎಂದೇ ಹೆಸರಾದ ಅಲ್ಲು ಅರ್ಜುನ್ ಕೂಡಾ ನಾಚುವಷ್ಟು ಸ್ಟೈಲಿಶ್ ಆಗಿ ಯಶ್ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮದೇ ಮ್ಯಾನರಿಸಂ ಮತ್ತು ಡಯಲಾಗ್ ಡೆಲಿವರಿ ಶೈಲಿಯಿಂದ ಯಶ್ ಮಾಸ್ ಆಡಿಯೆನ್ಸ್ ಹೃದಯಕೋಟೆಗೆ ಲಗ್ಗೆಯಿಡುತ್ತಾರೆ. ಪುಷ್ಪಾ ಸಿನಿಮಾದ ಕಥಾ ನಾಯಕ ಗ್ರಾಮೀಣ ಭಾಗದ ಕಳ್ಳಸಾಗಣೆದಾರನಾಗಿರುವುದರಿಂದ ಆತನನ್ನು ಹೆಚ್ಚು ಸ್ಟೈಲಿಶ್ ಆಗಿ ತೋರಿಸುವುದು ಕೃತಕವಾಗುತ್ತದೆ. ಆ ಕಾರಣಕ್ಕೋ ಏನೋ ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಎಂದಿನ ಸ್ಟೈಲಿಶ್ ಚಾರ್ಮ್ ಕಾಣಸಿಗುವುದಿಲ್ಲ.    10. ಪ್ಯಾನ್ ಇಂಡಿಯಾ ವಾರ್ ಇತ್ತೀಚಿಗಷ್ಟೆ ಬಾಹುಬಲಿ ನಿರ್ದೇಶಕ ರಾಜಮೌಳಿ ‘ಎಲ್ಲಾ ಭಾಷೆಯ ಚಿತ್ರರಂಗಗಳಿಂದ ಕಲಾವಿದರನ್ನು ಹಾಕಿಕೊಂಡ ಮಾತ್ರಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಅಗೋದಿಲ್ಲ’ ಎಂದು ಹೇಳಿದ್ದು ಈ ಸಂದರ್ಭದಲ್ಲಿ ಪ್ರಸ್ತುತ. ಪುಷ್ಪಾ ಸಿನಿಮಾದಲ್ಲಿ ವಿವಿಧ ಭಾಷೆಯ ಕಲಾವಿದರಿದ್ದಾರೆ ಎನ್ನುವುದು ಗಮನಾರ್ಹ. ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಲೇಬಲ್ ಪಟ್ಟಿ ಜನಪ್ರಿಯತೆ ಪಡೆದಿದ್ದು ಕೆಜಿಎಫ್ ಚಿತ್ರದಿಂದ ಎಂದು ಖಾತರಿಯಿಂದ ಹೇಳಬಹುದು. ಪ್ರೇಕ್ಷಕರ ಪಾಯಿಂಟ್ ಆಫ್ ವ್ಯೂನಿಂದ ಹೇಳುವುದಾದರೆ ಭಾರತದ ಯಾವುದೇ ರಾಜ್ಯದ ಸಿನಿಮಾ ಪ್ರೇಕ್ಷಕ ಕನೆಕ್ಟ್ ಮಾಡಿಕೊಳ್ಳಬಹುದಾದ ಅಂಶಗಳು ಕೆಜಿಎಫ್ ಸಿನಿಮಾದಲ್ಲಿ ಎನ್ನುವುದಂತೂ ನಿಜ. ಸಿನಿಮಾದ ಕಥಾ ನಾಯಕ ರಾಕಿ ಬೆಳೆಯುವುದು ಮುಂಬೈನಲ್ಲಿ, ಆತನಿಗೆ ಆಶ್ರಯ ನೀಡುವವನು ಒಬ್ಬ ಮುಸಲ್ಮಾನ ಚಾಚಾ. ಅಲ್ಲದೆ ಲೋಕಲ್ ನಲ್ಲಿ ಹೆಸರು ಮಾಡಿದ್ದ ರಾಕಿಗೆ ದೊಡ್ಡ ಡೀಲ್ ನೀಡುವವನು ಒಬ್ಬ ಕ್ರಿಶ್ಚಿಯನ್ ಗ್ಯಾಂಗ್ ಸ್ಟರ್. ರಾಕಿ ತನ್ನ ಗುರಿ ಸಾಧನೆಗೆ ಬಂದಿದ್ದರೂ ಆ ಹಾದಿಯಲ್ಲಿ ಅಸಹಾಯಕರ ಸಹಾಯಕ್ಕೆ ನಿಲ್ಲುತ್ತಾನೆ. ಹೀಗೆ ಅನೇಕ ವಿಧಗಳಲ್ಲಿ ಕೆಜಿಎಫ್, ಒಂದು ಪರ್ಫೆಕ್ಟ್ ಪ್ಯಾನ್ ಇಂಡಿಯಾ ಸಿನಿಮಾ

KGF ಬೆಸ್ಟು ಪುಷ್ಪ ಗಿಂತ ಎಂಬುದಕ್ಕೆ 10 ಕಾರಣಗಳು Read More »

ತಾಯಿ ಆಗ್ತಾರಂತೆ ಪ್ರಿಯಾಂಕ ಚೋಪ್ರಾ ..

ಸಾಮಾನ್ಯವಾಗಿ ಸಿನಿಮಾ ಸ್ಟಾರ್ ಗಳು ಮದುವೆಯಾದ ಕೆಲವೇ ವರ್ಷಗಳಲ್ಲಿ ಎಲ್ಲರೂ ಕೇಳುವ ಪ್ರಶ್ನೆ ಮಗು ಯಾವಾಗ ಅನ್ನೋದು.. 2018ರಲ್ಲಿ ನಿಕ್ ಜೋನಾಸ್ ಜೊತೆ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಸದ್ಯ ನಿಕ್ ಜೊತೆ ಸುಂದರವಾದ ದಾಂಪತ್ಯ ಜೀವನವನ್ನು ಕಟ್ಟಿಕೊಂಡಿದ್ದಾರೆ.. ದೀಪಾವಳಿ ಹಬ್ಬದಂದು ಹೊಸ ಮನೆ ಗೃಹ ಪ್ರವೇಶ ಮಾಡಿರುವ ಈ ಜೋಡಿ ಈಗ ಮಗುವಿನ ನಿರೀಕ್ಷೆಯ ಕನಸನ್ನ ಕಟ್ಟಿಕೊಳ್ಳುತ್ತಿದೆ .. ಹೌದು ಇತ್ತೀಚಿಗಷ್ಟೆ ಪ್ರಿಯಾಂಕ ಚೋಪ್ರಾ ಅವರನ್ನು ಸುದ್ದಿಗೋಷ್ಠಿಯೊಂದರಲ್ಲಿ ಮಾಧ್ಯಮದವರು ನಿಮ್ಮ ತಾಯಿ ಅಜ್ಜಿ ಆಗಲು ಬಯಸುತ್ತಿದ್ದಾರೆ… ಎಂಬ ಪ್ರಶ್ನೆಯನ್ನ ಕೇಳಲಾಗಿತ್ತು.. ಅದಕ್ಕೆ ನೇರವಾಗಿ ಉತ್ತರಿಸದ ಪ್ರಿಯಾಂಕಾ ಚೋಪ್ರಾ ಮಗು ಪಡೆಯುವುದು ನನ್ನ ಹಾಗೂ ನಿಕ್ ಅವರ ಜೀವನದ ದೊಡ್ಡ ಕನಸು ಎಂದಿದ್ದಾರೆ… ಈ ಮೂಲಕ ತಾವು ತಾಯಿಯಾಗಲು ಬಯಸುತ್ತಿದ್ದಾರೆ ಎನ್ನುವುದನ್ನ ಪ್ರಿಯಾಂಕ ನೇರವಾಗಿ ಹೇಳಿದ್ದಾರೆ .. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ದೇವರ ಇಚ್ಛೆಯಿಂದ ಯಾವಾಗ ನಾನು ತಾಯಿಯಾಗುತ್ತೇನೋ ಆಗ ನಾನು ಸಿನಿಮಾರಂಗದಿಂದ ನಿಧಾನವಾಗಿ ನಿವೃತ್ತಿ ಹೊಂದುತ್ತೇನೆ ಎಂದು ಕೂಡ ಅನೌನ್ಸ್ ಮಾಡಿದ್ದಾರೆ.. ಒಟ್ಟಾರೆ ಪ್ರಿಯಾಂಕಾ ಹಾಗೂ ನಿಕ್ ಮಗುವಿನ ನಿರೀಕ್ಷೆಯ ತವಕ ಹೆಚ್ಚಾಗಿದೆ…

ತಾಯಿ ಆಗ್ತಾರಂತೆ ಪ್ರಿಯಾಂಕ ಚೋಪ್ರಾ .. Read More »

ಸೀರೆಯುಟ್ಟು ಮೋಡಿ ಮಾಡಿದ “ಕನ್ನಡತಿ”ಯ ವರುಧಿನಿ

ಕನ್ನಡತಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಫೇಮಸ್ ಧಾರಾವಾಹಿ ಕನ್ನಡತಿ… ಪಾತ್ರವರ್ಗ, ಕಲಾವಿದರು,ಕತೆಯ ಮೂಲಕವೇ ಹೆಚ್ಚು ಪ್ರೇಕ್ಷಕರ ಗಮನ ಸೆಳೆದಿರುವ ಧಾರಾವಾಹಿ ಕನ್ನಡತಿ … ಧಾರಾವಾಹಿಯಲ್ಲಿರುವಂತಹ ಭುವಿ, ಹರ್ಷ, ಅಮ್ಮಮ್ಮ, ವರುಧಿನಿ, ಸಾನಿಯಾ ಹೀಗೆ ಪ್ರತಿ ಪಾತ್ರವರ್ಗವು ಕೂಡ ತನ್ನದೇ ಆದಂತಹ ಸ್ಟೈಲ್ ಹಾಗೂ ಮ್ಯಾನರಿಸಂ ಹೊಂದಿದೆ …ಆದ್ದರಿಂದಲೇ ಪ್ರತಿ ಪಾತ್ರವೂ ತನ್ನದೇ ಆದ ತೂಕ ಉಳಿಸಿಕೊಂಡು ಬರುತ್ತಿದೆ.. ಇನ್ನು ಧಾರಾವಾಹಿಯ ನಾಯಕ ನಾಯಕಿಯಷ್ಟೇ ಪ್ರಮುಖವಾದ ಪಾತ್ರ ವರುಧಿನಿ ಹೌದು ವರುಧಿನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾರ ಅನ್ನಯ್ಯ ಅವರು ಇತ್ತೀಚಿಗಷ್ಟೆ ತಮ್ಮ ಟ್ರೆಡಿಶನ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.. ಸದಾ ಮಾಡ್ರನ್ ಆಗಿ ಕಾಣಿಸಿಕೊಳ್ಳುವ ಸಾರಾ ಅವರು ಇದೇ ಮೊದಲ ಬಾರಿಗೆ ಸೀರೆಯುಟ್ಟು ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ .. ಆಲ್ ಟೈಮ್ ಮಾಡರ್ನ್ ಲುಕ್ ನಲ್ಲಿ ಸಾರಾ ಅವರನ್ನ ನೋಡಿದ ಅಭಿಮಾನಿಗಳು ಮೊದಲ ಬಾರಿಗೆ ಸೀರೆಯಲ್ಲಿ ಕಂಡು ಫುಲ್ ಖುಷ್ ಆಗಿದ್ದಾರೆ ..

ಸೀರೆಯುಟ್ಟು ಮೋಡಿ ಮಾಡಿದ “ಕನ್ನಡತಿ”ಯ ವರುಧಿನಿ Read More »

Scroll to Top