Karnataka Bhagya

ಲೈಫ್ ಸ್ಟೈಲ್

ಆದಿತ್ಯ ಹಾಗೂ ಕಿಚ್ಚನ ಜೊತೆ ತೆರೆ ಹಂಚಿಕೊಂಡಿದ್ದ ನಟಿಗೆ ಕ್ಯಾನ್ಸರ್‌ !

ಕ್ಯಾನ್ಸರ್‌ ಕಾಯಿಲೆ ಯಾರನ್ನು ಬಿಡೋದಿಲ್ಲ..ಬಡವನಾಗಲಿ..ಶ್ರೀಮಂತನಾಗಲಿ ಬೇದ ಬಾವವಿಲ್ಲದೆ ಜೀವ ಹಿಂಡಿಬಿಡುತ್ತೆ…ಇನ್ಮು ಸಾಕಷ್ಟು ಸಿನಿಮಾ‌ ಕಲಾವಿದರಿಗೂ ಕ್ಯಾನ್ಸರ್ ಕಾಡಿದ್ದು ಒಂದಿಷಗಟು ಜನರು ಕ್ಯಾನ್ಸರ್‌ ಜೊತೆ ಹೋರಾಟ ಮಾಡಿ ಗೆದ್ದು ಬಂದಿದ್ದಾರೆ… ನಟ ಆದಿತ್ಯ ಹಾಗೂ ಕಿಚ್ಚ ಸುದೀಪ್ ಜೊತೆ ಅಭಿನಯ ಮಾಡಿದ್ದ ನಟಿ ಹಂಸ ನಂದಿನಿ ಅವರಿಗೆ ಸ್ತನ ಕ್ಯಾನ್ಸರ್ ತಗುಲಿದೆ. ಪೋಷಕ ಪಾತ್ರಗಳ ಮೂಲಕ ಹೆಸರು ಮಾಡಿದ್ದ ನಂದಿನಿ, ಇತ್ತೀಚಿನ‌ ದಿನಗಳಲ್ಲಿ ಐಟಂ ಸಾಂಗ್‌ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರ…. 37ವರ್ಷದ ಹಂಸ ನಂದಿನಿ ಕಳೆದ 4 ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪತ್ರವೊಂದನ್ನು ಬರೆದುಕೊಂಡಿದ್ದಾರೆ ಹಂಸ ನಂದಿನಿ.. ಬ್ಲಾಕ್ ಅಂಡ್ ವೈಟ್ ಫೋಟೊ ಶೇರ್ ಮಾಡುವುದರ ಜೊತೆಗೆ ಸುದೀರ್ಘವಾದ ಪತ್ರದಲ್ಲಿ‌ ಹೀಗಿದೆ…ಹೋರಾಟದಿಂದ ಹಿಂದೆ ಸರಿಯುವುದನ್ನು ನಿರಾಕರಿಸುತ್ತೇನೆ. ಆದರೆ, ಧೈರ್ಯ ಮತ್ತು ಪ್ರೀತಿಯಿಂದ, ನಾನು ಮುಂದೆ ಹೋಗುತ್ತೇನೆ. ನಾಲ್ಕು ತಿಂಗಳ ಹಿಂದೆ, ನನ್ನ ಸ್ತನದಲ್ಲಿ ಸಣ್ಣ ಗಡ್ಡೆಯೊಂದು ಇರುವುದು ಗೊತ್ತಾಯಿತು. ನನ್ನ ಜೀವನ ಒಂದೇ ರೀತಿ ಇರುವುದಿಲ್ಲ ಎಂದು ಆ ಕ್ಷಣವೇ ನನಗೆ ತಿಳಿಯಿತು. ಒಂದೆರಡು ಗಂಟೆಗಳಲ್ಲಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಯಿತು. ನನಗೆ ಸ್ತನ ಕ್ಯಾನ್ಸರ್ ಮೂರನೇ ಸ್ಟೇಜ್‌ನಲ್ಲಿರುವುದು ಗೊತ್ತಾಯಿತು. 18 ವರ್ಷಗಳ ಹಿಂದೆ ಭೀಕರ ಕಾಯಿಲೆಯಿಂದಾಗಿ ನನ್ನ ತಾಯಿಯನ್ನು ನಾನು ಕಳೆದುಕೊಂಡಿದ್ದೆ. ಅದರ ಕರಾಳ ನೆರಳಿನಲ್ಲೇ ಅಂದಿನಿಂದ ನಾನು ವಾಸಿಸುತ್ತಿದ್ದೆ ಮತ್ತು ನಾನು ಭಯಗೊಂಡಿದ್ದೆ’ ಎಂದಿದ್ದಾರೆ ಹಂಸ ನಂದಿನಿ. ‘ಹಲವಾರು ಸ್ಕ್ಯಾನ್‌ಗಳು ಮತ್ತು ಪರೀಕ್ಷೆಗಳ ನಂತರ, ನಾನು ಧೈರ್ಯವಾಗಿ ಆಪರೇಷನ್‌ ಥಿಯೇಟರ್‌ಗೆ ಹೋದೆ. ಅಲ್ಲಿ ನನ್ನ ಗಡ್ಡೆಯನ್ನು ತೆಗೆದುಹಾಕಲಾಯಿತು. ಈ ಹಂತದಲ್ಲಿ ಯಾವುದೇ ಹರಡುವಿಕೆ ಇಲ್ಲ ಎಂದು ವೈದ್ಯರು ದೃಢಪಡಿಸಿದರು. ನಾನು ಅದೃಷ್ಟವಂತೆ. ಯಾಕೆಂದರೆ, ಅದನ್ನು ನಾನು ಬಹುಬೇಗನೇ ಕಂಡುಹಿಡಿದುಬಿಟ್ಟಿದ್ದೆ. ನಾನು ಅನುವಂಶಿಕ ರೂಪಾಂತರವನ್ನು ಹೊಂದಿದ್ದೇನೆ. ಮುಂದೆ ನನ್ನ ಮತ್ತೊಂದು ಸ್ತನವು ಕ್ಯಾನ್ಸರ್‌ ಆಗುವ 70% ಸಾಧ್ಯತೆ ಇದೆ. ಅಂಡಾಶಯದ ಕ್ಯಾನ್ಸರ್‌ ಆಗುವ ಸಾಧ್ಯತೆ 45% ಇದೆ. ಇದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅಧಿಕ ರೋಗನಿರೋಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಿದೆ’ ಎಂದು ನಟಿ ಹಂಸ ನಂದಿನಿ ಪತ್ರದಲ್ಲಿ ಬರೆದುಕೊಂಡಿದ್ದಾರೆ… ಸದ್ಯ ನಾನು 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಕೀಮೋಥೆರಪಿ ಮಾಡಿಸಿಕೊಳ್ಳಬೇಕಿದೆ. ನಾನು ಕೆಲವು ಭರವಸೆಗಳನ್ನು ನೀಡುತ್ತೇನೆ. ಈ ರೋಗವು ನನ್ನ ಜೀವನವನ್ನು ವ್ಯಾಪಿಸಿಕೊಳ್ಳಲು ನಾನು ಬಿಡುವುದಿಲ್ಲ ಮತ್ತು ನಾನು ಅದರ ವಿರುದ್ಧ ನಗುವಿನೊಂದಿಗೆ ಹೋರಾಡುತ್ತೇನೆ, ಗೆಲ್ಲುತ್ತೇನೆ. ನಾನು ಉತ್ತಮ ಮತ್ತು ಬಲಶಾಲಿಯಾಗಿ ಮತ್ತೆ ತೆರೆಯ ಮೇಲೆ ಬರುತ್ತೇನೆ. ನಾನು ನನ್ನ ಕಥೆಯನ್ನು ಹೇಳುವುದರಿಂದ, ಇತರರಿಗೆ ಇದರ ಬಗ್ಗೆ ಅರಿವು ಮೂಡಿಸಲು ಸಾಧ್ಯ ಆದ್ದರಿಂದ ಈ‌ಪತ್ರ ಎಂದಿದ್ದಾರೆ ಹಂಸ ನಂದಿನಿ

ಆದಿತ್ಯ ಹಾಗೂ ಕಿಚ್ಚನ ಜೊತೆ ತೆರೆ ಹಂಚಿಕೊಂಡಿದ್ದ ನಟಿಗೆ ಕ್ಯಾನ್ಸರ್‌ ! Read More »

ಬಿಡುಗಡೆಯಾಗಿ 3ವರ್ಷವಾದರೂ ದಾಖಲೆ ನಿಲ್ಲಿಸದ ಕೆಜಿಎಫ್ ಸಿನಿಮಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ 3ವರ್ಷ ಕಳೆದಿದೆ ಬಿಡುಗಡೆಯ ಸಂದರ್ಭದಲ್ಲಿ ಹಾಗೂ ಬಿಡುಗಡೆ ಮುನ್ನವೇ ಸಾಕಷ್ಟು ದಾಖಲೆಗಳನ್ನು ಬರೆದಿದ್ದಂಥ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ 3ವರ್ಷವಾದರೂ ಇನ್ನೂ ಕೂಡ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದೆ… ಕೆಜಿಎಫ್ ಚಿತ್ರ ಭೋಜಪುರಿ ಭಾಷೆಯ ಸಿನಿಮಾ ಅಂಗಳದಲ್ಲಿ ಕೂಡ ತನ್ನ ದಾಖಲೆಯ ಮೈಲಿಗಲ್ಲನ್ನು ಸ್ಥಾಪಿಸಿದೆ… ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಿತ್ತು 5ಭಾಷೆಯಲ್ಲಿ ಥಿಯೇಟರ್ ನಲ್ಲಿ ಬಿಡುಗಡೆಯಾದರೆ ಅನಂತರ ಡಬ್ಬಾಗಿ ಸಾಕಷ್ಟು ಭಾಷೆಗಳ ಮೂಲಕ ಪ್ರೇಕ್ಷಕರನ್ನು ತಲುಪಿತ್ತು….ಅದೇ ರೀತಿಯಲ್ಲಿ ಭೋಜ್ ಪುರಿ ಭಾಷೆಯಲ್ಲಿ ಡಬ್ಬಿಂಗ್ ಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು ಈಗ ಭೋಜ್ಪುರಿ ಪ್ರೇಕ್ಷಕರು ಕೆಜಿಎಫ್ ಸಿನಿಮಾ ನೋಡಿ ಜೈಕಾರ ಹಾಕಿದ್ದಾರೆ .. ಯೂಟ್ಯೂಬ್ ನಲ್ಲಿ 400ಮಿಲಿಯನ್ ಗೂ ಹೆಚ್ಚು ಭೋಜಪುರಿ ಪ್ರೇಕ್ಷಕರು ಕೆಜಿಎಫ್ ಚಿತ್ರ ನೋಡಿ ಖುಷಿ ಪಟ್ಟಿದ್ದಾರೆ..ಈ ಮೂಲಕ ‌ಯಾವುದೇ ಕನ್ನಡ ಸಿನಿಮಾ ಬರೆಯದ ಇತಿಹಾಸವನ್ನ ಕೆಜಿಎಫ್ ಬರೆದಿದೆ…

ಬಿಡುಗಡೆಯಾಗಿ 3ವರ್ಷವಾದರೂ ದಾಖಲೆ ನಿಲ್ಲಿಸದ ಕೆಜಿಎಫ್ ಸಿನಿಮಾ Read More »

ಬರೀ ವೋಟಿಗಾಗಿ ಕಾಯಬೇಡಿ ಅಂತ ಅಂದಿದ್ಯಾರಿಗೆ ಶಿವರಾಜ್ ಕುಮಾರ್

ಮಹಾರಾಷ್ಟ್ರದಲ್ಲಿ ಬಾವುಟ ಸುಟ್ಟ ವಿಚಾರವಾಗಿ ನಟ ಶಿವರಾಜ್ ಕುಮಾರ್ ಮಾತನಾಡಿದ್ದಾರೆ…ಭಾಷೆ ಎಲ್ಲರಿಗೂ ಮುಖ್ಯ. ಆ ಭಾಷೆಗೆ ಅಗೌರವ ಕೋಡಬೇಡಿಯಾವ ರಾಜ್ಯದಲ್ಲಿ ಯಾವ ಭಾಷೆ ಇದೆಯೋ ಅದಕ್ಕೆ ಮರ್ಯಾದೆ ಕೊಡೋದು ಧರ್ಮ..ಭಾಷೆಗಾಗಿ ನಾನು ಪ್ರಾಣ ಕೊಡೋಕು ಸಿದ್ಧ..ಕನ್ನಡದ ಭಾವುಟ ಸುಡೋದು ಎಷ್ಟು ಸರಿ.. ಅಂತಹ ಕೆಲಸ ಮಾಡಬಾರದು.. ಕರ್ನಾಟಕವನ್ನ ಪ್ರೀತಿಸಬೇಕು.. ನಮಗೆ ಏನು ಪವರ್ ಅಲ್ಲ ಅಂತ ಅಂದುಕೊಳ್ಳಬೇಡಿ.‌..ಮನುಷ್ಯನಿಗೆ ಕೋಪ ಬಂದ್ರೆ ತಡೆದುಕೊಳ್ಲೋದಕ್ಕೆ ಆಗಲ್ಲ..ಸರ್ಕಾರ ಇದರ ಬಗ್ಗೆ ಗಮನ ಕೊಡಬೇಕು.. ಬರೀ ಓಟಿಗೆ ಮಾತ್ರ ಕಾಯೋದು ಬೇಡ..ನಾನು ತುಂಬಾ ಪ್ರಾಕ್ಟಿಕಲ್ ಆಗಿ ಮಾತಾಡುತ್ತೇನೆ. ನಮ್ಮ ಭಾವುಟ ಸುಟ್ಟು ಹಾಕಿದ್ರೆ ನಮ್ಮ ತಾಯಿಯನ್ನೇ ಸುಟ್ಟ ಹಾಗೆ ಅಲ್ವಾ.ಅದನ್ನೆಲ್ಲಾ ಮಾಡಬೇಡಿ…. ಎಲ್ಲದಕ್ಕು ಮರ್ಯಾದೆ ಕೊಡಬೇಕು.. ಬೇರೆಯವರಿಗೆ ನಾವು ಮರ್ಯಾದೆ ಕೊಡ್ತೇವೆ. ನಮಗೂ ಮರ್ಯಾದೆ ಕೊಡಿ…ನಾವು ಎಲ್ಲಾರಿಗೂ ಜಾಗ ಕೊಡ್ತೀವಿ.. ಎಲ್ಲಾ ಸಿನಿಮಾನೂ ನೋಡಿ. ಬಟ್ ಜಾಸ್ತಿ ಕನ್ನಡ ಸಿನಿಮಾ ನೋಡಿ ಎಂದರು…ಈ ಮೂಲಕ‌ ಕನ್ನಡ ಬಾವುಟ ಸುಟ್ಟ ದ್ರೋಹಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟರು ಶಿವಣ್ಣ…

ಬರೀ ವೋಟಿಗಾಗಿ ಕಾಯಬೇಡಿ ಅಂತ ಅಂದಿದ್ಯಾರಿಗೆ ಶಿವರಾಜ್ ಕುಮಾರ್ Read More »

ಎಲ್ಲರ ಗಮನ ಸೆಳೆಯುತ್ತಿದೆ ಕೆಜಿಎಫ್ ಆ್ಯಂಡ್ರೂ ನ್ಯೂ ಲುಕ್

ಕೆಜಿಎಫ್ ಸಿನಿಮಾದಲ್ಲಿ ಆ್ಯಂಡ್ರೂ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ನಟ ಅವಿನಾಶ್ …ವಿಭಿನ್ನ ಧ್ವನಿ ಹಾಗೂ ಡಿಫರೆಂಟ್ ಮ್ಯಾನರಿಸಂ ನಿಂದಲೇ ಅವಿನಾಶ್ ಪ್ರಖ್ಯಾತಿ ಪಡೆದಿದ್ದರು…. ಕೆಜಿಎಫ್ ನಲ್ಲಿ ಎಲ್ಲರ ಗಮನ ಸೆಳೆದು ಫೇಮಸ್ ಆಗಿದ್ದ ಅವಿನಾಶ್ ಇತ್ತೀಚೆಗಷ್ಟೇ ಹೊಸ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ … ಬ್ಲಡ್.. ಸ್ವೆಟ್.. ಟಿಯರ್ಸ್… ಕಾನ್ಸೆಪ್ಟ್ ನಲ್ಲಿ ಫೋಟೋ ಶೂಟ್ ನಡೆದಿದ್ದು ,ಅವಿನಾಶ್ ಸಖತ್ ರಗಡ್ ಆಗಿ ಕ್ಯಾಮೆರಾ ಮುಂದೆ ಪೋಸ್ ನೀಡಿದ್ದಾರೆ …ಸೆಲೆಬ್ರಿಟಿ ಫೋಟೋಗ್ರಾಫರ್ ಹಾಗೂ ಸಿನಿಮಾಟೋಗ್ರಾಫರ್ ಭುವನ್ ಗೌಡ ಕ್ಯಾಮರಾ ಕಣ್ಣಲ್ಲಿ ಅವಿನಾಶ್ ಹೊಸ ಲುಕ್ ಸೆರೆಯಾಗಿದ್ದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅವಿನಾಶ್ ಅವರ ಹೊಸ ಲುಕ್ ವೈರಲ್ ಆಗ್ತಿದೆ …

ಎಲ್ಲರ ಗಮನ ಸೆಳೆಯುತ್ತಿದೆ ಕೆಜಿಎಫ್ ಆ್ಯಂಡ್ರೂ ನ್ಯೂ ಲುಕ್ Read More »

ಅಬ್ಬರಿಸುತ್ತಿರುವ ಮದಗಜ..

ಚಿತ್ರ: ಮದಗಜ (ಕನ್ನಡ)ನಿರ್ಮಾಣ: ಉಮಾಪತಿ ಶ್ರೀನಿವಾಸ ಗೌಡನಿರ್ದೇಶನ: ಎಸ್. ಮಹೇಶ್ ಕುಮಾರ್ತಾರಾಗಣ: ಶ್ರೀಮುರಳಿ, ದೇವಯಾನಿ, ಆಶಿಕಾ ರಂಗನಾಥ್, ಜಗಪತಿ ಬಾಬು, ಗರುಡಾ ರಾಮ್, ರಂಗಾಯಣ ರಘು, ಚಿಕ್ಕಣ್ಣ ಶ್ರೀ‌ಮುರಳಿ ಅಭಿನಯದ ಮದಗಜ‌ ಸಿನಿಮಾ‌ ಬಿಡುಗಡೆ ಆಗಿದ್ದು ..ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಕೂಡ ಪಡೆದಿದೆ…ಅಯೋಗ್ಯದಂತಹ ಕಾಮಿಡಿ ಸಿನಿಮಾ‌ ಮಾಡಿ ಸೈ ಎನ್ನಿಸಿಕೊಂಡಿದ್ದ ನಿರ್ದೇಶಕ ಮಹೇಶ್ ಮೊದಲ‌ಬಾರಿಗೆ ಮಾಸ್ ಸಿನಿಮಾ‌ ಮಾಡಿ ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿದ್ದಾರೆ..ಶ್ರೀ ಮುರಳಿ ಇಮೇಜ್ ಗೆ ತಕ್ಕಂತ ಚಿತ್ರಕಥೆ ಮಾಡಿರೋ ಮಹೇಶ್ ಈ‌ಬಾರಿ ಕಂಪ್ಲೀಟ್ ಆಕ್ಷನ್ ಕಮರ್ಷಿಯಲ್ ಚಿತ್ರವನ್ನ ಪ್ರೇಕ್ಷಕರ ಎದುರು ತಂದಿದ್ದಾರೆ… ಮದಗಜ‌ ಸಿನಿಮಾ ಕಥೆ ನಾರ್ಮಲ್ ಎನಿಸಿದರು ಚಿತ್ರದ ಪ್ರಸೆಂಟೇಶನ್ ವಿಭಿನ್ನವಾಗಿದೆ ಮತ್ತು ಹೊಸತಾಗಿದೆ …ಶಿವಗಡ ಮತ್ತು ಗಜೇಂದ್ರಗಡ ಎಂಬ 2ಊರಿನ ಮಧ್ಯೆ ನಡೆಯುವ ಕಥೆಯ ಮಧ್ಯೆ ಪ್ರೀತಿ ಮಮತೆ, ತಾಯಿ ಮಗನ ಸಂಬಂಧ ತಂದೆ ಮಗನ ಸಂಬಂಧ ಇವೆಲ್ಲದುರ ಕಂಪ್ಲೀಟ್ ಪ್ಯಾಕೇಜ್ ಮದಗಜ‌ ಸಿನಿಮಾ…. ಮದಗಜ ಸಿನಿಮಾದಂತಹ ಕಥೆಯುಳ್ಳ ಚಿತ್ರಗಳು ಈಗಾಗಲೆ ಸಾಕಷ್ಟು ಬಂದಿವೆ… ಆದರೆ ಅದನ್ನು ತೆರೆಯ ಮೇಲೆ ಬೇರೆ ರೀತಿಯ ಪ್ರೆಸೆಂಟ್ ಮಾಡುವ ಮೂಲಕ ನಿರ್ದೇಶಕ ಮಹೇಶ್ ಕುಮಾರ್ ಗೆದ್ದಿದ್ದಾರೆ… ಮೇಕಿಂಗ್ ಅತ್ಯುತ್ತಮವಾಗಿ ಮೂಡಿ ಬಂದಿದ್ದು.. ಕ್ಯಾಮೆರಾ ವರ್ಕ್ ನಲ್ಲಿ ನವೀನ್ ಪ್ರೇಕ್ಷಕರ ಗಮನ ಸೆಳೆಯುತ್ತಾರೆ… ಇನ್ನು ರವಿ ಬಸ್ರೂರು ಹಿನ್ನೆಲೆ ಸಂಗೀತ ಕಥೆಗೆ ಹಾಗೂ ಹೀರೋ ಮ್ಯಾನರಿಸಂಗೆ ತಕ್ಕಂತಿದೆ… ಮೇಕಿಂಗ್ ನಲ್ಲಿ ಅದ್ದೂರಿತನವಿತ್ತು ಫೈಟ್ಸ್ ಮಾಸ್ ಆಡಿಯನ್ಸ್ ಗೆ ಸಖತ್ ಮಜ ಕೊಡುತ್ತೆ… ವಾರಣಾಸಿ ಘಾಟ್ ನಲ್ಲಿ ಮಾಡಿರುವ ಜಾತ್ರೆ ಫೈಟ್ ಗಳು ಸಖತ್ ಸ್ಟೈಲಿಶ್ ಆಗಿ ಮತ್ತು ಅದ್ದೂರಿಯಾಗಿ ಮೂಡಿಬಂದಿದೆ …ಮೇಕಿಂಗ್ ಗೆ ಕೊಟ್ಟಷ್ಟೇ ಪ್ರಾಮುಖ್ಯತೆ ಸಿನೆಮಾ ಕಥೆಗೂ ನೀಡಿದ್ದರೆ ಚಿತ್ರ ಇನ್ನೂ ಅದ್ದೂರಿಯಾಗಿ ಮೂಡಿ ಬರ್ತಿತ್ತು ಅನ್ನೋದು ಚಿತ್ರ ನೋಡಿದ ಪ್ರೇಕ್ಷಕರ ಅಭಿಪ್ರಾಯ… ಚಿತ್ರಕತೆಯಲ್ಲಿ ಮತ್ತಷ್ಟು ಟ್ವಿಸ್ಟ್ ಟರ್ನ್ಗಳು ಇದ್ದಿದ್ದರೆ ಸಿನಿಮಾ ಮತ್ತಷ್ಟು ಮಜಾ‌ಕೊಡ್ತಿತ್ತು… ಇಡೀ ಕತೆ ರಕ್ತದ ಹೊಳೆ ಹರಿಸುವುದು ಮತ್ತು ರಕ್ತ ಸಂಬಂಧಗಳನ್ನು ಬೆಸೆಯುವ ಸುತ್ತಲೇ ಸುತ್ತುತ್ತದೆ… ಚಂದ್ರಮೌಳಿ ಬರೆದಿರುವ ಸಂಭಾಷಣೆ ಆಗಾಗ ಪಂಚ್ ನೀಡುತ್ತೆ… ಇನ್ನೂ ಶ್ರೀಮುರಳಿ ಆಕ್ಷನ್ ವಿಚಾರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದು, ಆಶಿಕಾ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲವಾದರೂ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದಾರೆ… ಇನ್ನು ಚಿಕ್ಕಣ್ಣ ಧರ್ಮಣ್ಣ ಶಿವರಾಜ್ ಕೆ ಆರ್ ಪೇಟೆ ರಂಗಾಯಣ ರಘು ತಮ್ಮ ಪಾತ್ರಕ್ಕೆ ಒದಗಿಸಬಹುದಾದ ನ್ಯಾಯ ಒದಗಿಸುತ್ತಾರೆ.. ಖಳನಾಯಕರ ಪಾತ್ರದಲ್ಲಿ ಅನಿಲ್ ಗರುಡ ರಾಮ್ ಎಲ್ಲರ ಅಭಿನಯ ನೋಡುಗರಿಗೆ ಕೆಲ ದೃಶ್ಯಗಳಲ್ಲಿ ಭಯ ಹುಟ್ಟಿಸಿದಂತಾಗುತ್ತದೆ… ತಾಯಿ ಪಾತ್ರದಲ್ಲಿ ದೇವಯಾನಿ ಪ್ರೇಕ್ಷಕರಿಗೆ ಫೀಲ್ ಆಗುವ ರೀತಿಯಲ್ಲಿ ನಟಿಸಿದ್ದಾರೆ… ಕಂಪ್ಲೀಟ್ ಸಿನಿಮಾ ಮುಗಿದ ಮೇಲೆ ಶ್ರೀಮುರಳಿ ಹಾಗೂ ಜಗಪತಿಯ ಪಾತ್ರಗಳು ಪ್ರೇಕ್ಷಕರನ್ನು ಕಾಡುತ್ತವೆ…ಒಟ್ಟಾರೆ ವಾರಾಂತ್ಯದಲ್ಲಿ ಕಂಪ್ಲೀಟ್ ಕಮರ್ಷಿಯಲ್ ಸಿನಿಮಾ ನೋಡಬೇಕೆಂದರೆ ಮದಗಜ ಚಿತ್ರವನ್ನು ಅನುಮಾನವಿಲ್ಲದೆ ಆಯ್ಕೆ ಮಾಡಿಕೊಳ್ಳಬಹುದು

ಅಬ್ಬರಿಸುತ್ತಿರುವ ಮದಗಜ.. Read More »

ಬದಲಾವಣೆಯ ಭಾಗವಾಗಿ ಬಂದ ಆನ

ಸಿನಿಮಾ- ಆನನಟನೆ- ಅಧಿತಿ ಪ್ರಭುದೇವ,‌ಸುನೀಲ್ ಪುರಾಣಿಕ್ ಮುಂತಾದವರುನಿರ್ದೇಶಕ- ಮನೋಜ್ ಪಿ ನಡುಲಮನೆ‌ ಬಿಡುಗಡೆಯ ಮುಂಚೆಯೇ ಫಸ್ಟ್ ಲುಕ್ ಹಾಗೂ ಮೇಕಿಂಗ್ ನಿಂದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಸಿನಿಮಾ ಆನಾ…ನಟಿ ಅಧಿತಿ ಅಭಿನಯದ ಮೊದಲ ಕ್ರೈಂ ಥ್ರಿಲ್ಲರ್ ಚಿತ್ರ ಇದಾಗಿದ್ದು ನಿರ್ದೇಶಕ ಮನೋಜ್ ಕೂಡ ತಮ್ಮ ಕೆಲಸದಿಂದ ಭರವಸೆ ಮೂಡಿಸಿದ್ರು… ಲಾಕ್ ಡೌನ್ ಕಾರಣದಿಂದ ಇಡೀ ದೇಶವೇ ಲಾಕ್ ಆಗಿದ್ದ ಇಂತಹ ಸಂದರ್ಭದಲ್ಲಿ ಕೆಲಸ ಕಳಕೊಂಡ ನಾಲ್ವರು ದರೋಡೆಗೆ ಇಳಿಯುತ್ತಾರೆ…ಇನ್ನೆಷ್ಟು ದಿನ ಹೀಗೆ ಬದುಕುವುದು ಅಂತ ಒಬ್ಬ ಗಣಿ ಧಣಿಯ ಮಗಳನ್ನು ಕಿಡ್ನಾಪ್ ಮಾಡಿ ಹತ್ತು ಕೋಟಿಗೆ ಬೆಡಿಕೆ ಇಡುತ್ತಾರೆ… ಅವರಿಂದ ಬರುವ ಹಣ ಹಂಚಿಕೊಂಡು ನೆಮ್ಮದಿಯಾಗಿರಬಹುದು ಎಂದು ಮಾಸ್ಟರ್ ಪ್ಲಾನ್ ಮಾಡಿ ಆ ಹುಡುಗಿಯನ್ನು ಕಿಡ್ನಾಪ್ ಮಾಡುತ್ತಾರೆ… ಕಿಡ್ನಾಪ್ ಮಾಡಿದ ನಂತರ ನಿಗೂಢ ಸ್ಥಳದಲ್ಲಿ ಅವಳನ್ನು ಬಚ್ಚಿಡುತ್ತಾರೆ… ನಂತರ 4 ಜನಕ್ಕೆ ಆಗುವ ವಿಚಿತ್ರ ಅನುಭವಗಳು ಹಾಗೂ ಕಿಡ್ನಾಪ್ ಆದ ಯುವತಿ ಯಾರು ಅನ್ನೋದರ ಮೇಲೆ ಸಿನಿಮಾದ ಕಥೆ ಎಳೆ ಬಿಚ್ಚಿಕೊಳ್ಳುತ್ತದೆ… ಆನ ಕನ್ನಡದ ಮೊದಲ ಸೂಪರ್ ಹೀರೊ ಚಿತ್ರ ಎಂದೇ ಆರಂಭದಿಂದಲೇ ಚಿತ್ರತಂಡ ಪ್ರಚಾರ ಮಾಡಿದರು.. ಆದರೆ ಕಥೆ ಕೇಳಿದರೆ ಹಾರಾರ್ ಶೈಲಿಯಲ್ಲಿದ್ದು ..ಇದು ಸೂಪರ್ ಹೀರೋ‌ ಚಿತ್ರವೂ ಅಥವಾ ಕ್ರೈಂ ಥ್ರಿಲ್ಲರ್ ಸಿನಿಮಾವೂ ಎಂಬುದು ಪ್ರೇಕ್ಷಕರಿಗೆ ಕಾಡುವ ಪ್ರಶ್ನೆ.. ಆದರೆ ಸಿನಿಮಾದಲ್ಲಿ 2ಅಂಶಗಳಿದ್ದು ಅದರ ಜತೆಗೆ ಮಾಟ ಮಂತ್ರ ಮತ್ತು ಮೂವತ್ತರ ದಶಕದ ಫ್ಲ್ಯಾಶ್ ಕೂಡ ಇದೆ… ಸಿನಿಮಾದ ಫಸ್ಟ್ ಹಾಫ್ ಸಕತ್ ಫಾಸ್ಟಾಗಿ ನೋಡಿಸಿಕೊಂಡು ಹೋಗುವ ನಂತರದ ಸೆಕೆಂಡ್ ಹಾಫ್ ಸ್ವಲ್ಪ ಲ್ಯಾಗಾಯ್ತು ಅನ್ನುವುದು ಪ್ರೇಕ್ಷಕರ ಅಭಿಪ್ರಾಯ… ಅದಿತಿಗೆ ಇದು ಮೊದಲ ಸೂಪರ್ ಹೀರೋ ಚಿತ್ರವಾಗಿದ್ದು ತನ್ನ ಅಭಿನಯದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ… ಸಿನಿಮಾ ಮುಗಿಯುವ ಹೊತ್ತಿಗೆ ಇದೊಂದು ಪ್ರೀಕ್ವೆಲ್ ಮುಂದೆ ಆನ2 ಕೂಡ ಬರುವ ಸಾಧ್ಯತೆ ಇದೆ.. ಎನ್ನುವ ಸುಳಿವು ಕೂಡ ಚಿತ್ರತಂಡ ನೀಡಿದೆ…

ಬದಲಾವಣೆಯ ಭಾಗವಾಗಿ ಬಂದ ಆನ Read More »

ಸಖತ್ ಎಷ್ಟು ಸಖತ್ತಾಗಿದೆ ಗೊತ್ತಾ??

ಸಿನಿಮಾ- ಸಖತ್ನಟನೆ- ಗಣೇಶ್. ನಿಶ್ವಿಕಾ ನಾಯ್ಡು, ಸಾಧು ಕೋಕಿಲನಿರ್ದೇಶಕ- ಸಿಂಪಲ್ ಸುನಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ಸಖತ್ ಸಿನಿಮಾ ಬಿಡುಗಡೆ ಆಗಿ ಬಿಗ್ ಓಪನಿಂಗ್ ಪಡೆದುಕೊಂಡಿದೆ..ಚಮಕ್ ನಂತ್ರ ಮತ್ತೆ ಗಣಿ- ಸುನಿ ಸ್ಯಾಂಡಲ್ ವುಡ್ ಗೆ ಸಖತ್ ಎಂಟ್ರಿ ಕೊಟ್ಟಿದ್ದಾರೆ…ಗಣೇಶ್ ಸಿನಿಮಾ ಅಂದ ತಕ್ಷಣ ಕಾಮಿಡಿ ಎಂಟರ್ಟೇನ್ಮೆಂಟ್ ಹಾಗೂ ರೊಮ್ಯಾಂಟಿಕ್ ಸೀನ್ ಗಳನ್ನ ಎಕ್ಸ್ಪೆಕ್ಟ್ ಮಾಡಬಹುದು.ಮಾದರಂತೆಯೇ ಸಖತ್ ಚಿತ್ರದಲ್ಲಿಯೂ ಈ ಎಲ್ಲಾ ಎಲಿಮೆಂಟ್ಸ್ ಗಳು ನೋಡ ಸಿಗುತ್ತೆ… ಬಾಲ್ಯದಿಂದಲೂ ಎಸ್‌ಪಿ ಬಾಲಸುಬ್ರಮಣ್ಯಂ ಅವರಂತೆ ಗಾಯಕನಾಗಬೇಕೆಂಬ ಹಂಬಲ ಹೊಂದಿರುವ ಬಾಲು (ಗಣೇಶ್) ಸುತ್ತ ಇಡೀ ಕಥೆ ಸುತ್ತುತ್ತದೆ. ದುರದೃಷ್ಟವಶಾತ್, ನಾಯಕ ಸಣ್ಣ ವಯಸ್ಸಿನಲ್ಲೇ ತನ್ನ ಹೆತ್ತವರನ್ನು ಕಳೆದುಕೊಳ್ಳುತ್ತಾನೆ…ಆನಂತ್ರ ಸಾಧು (ಸಾಧು ಕೋಕಿಲಾ) ನಡೆಸುವ ಆರ್ಕೆಸ್ಟ್ರಾದಲ್ಲಿ ಬೆಳೆಯುತ್ತಾನೆ. ಆಂಕರ್ ಮಯೂರಿ (ಸುರಭಿ) ಜೊತೆ‌ ಒಂದಿಷ್ಟು ರೊಮ್ಯಾಂಟಿಕ್‌ ಸೀನ್‌ಗಳಿದ್ದು ಪ್ರೇಕ್ಷಕರಿಗೆ ಇಬ್ಬರ ಕೆಮಿಸ್ಟ್ರಿ ತೆರೆ ಮೇಲೆ ನೋಡಲು ಖುಷಿ ಕೊಡುತ್ತೆ.. ಒಂದು ಅಪಘಾತಕ್ಕೆ ಬಾಲು ಸಾಕ್ಷಿಯಾಗುವುದು ಕಥೆಗೆ ಬೇರೆಯದ್ದೆ ತಿರುವು ನೀಡುತ್ತೆ…ಬಾಲು ದೃಷ್ಟಿ ಶಾಲೆಗೆ, ಅಂಧರ ಶಾಲೆಯನ್ನು ಪ್ರವೇಶಿಸಿ, ಹಾಡುವ ಶಿಕ್ಷಕರಾಗಿ ಸೇರಿದಾಗ ಕಥೆಗೆ ಮತ್ತಷ್ಟು ಪ್ರಾಮುಖ್ಯತೆ ಸಿಗುತ್ತೆ… ಮಕ್ಕಳು ಮತ್ತು ಅಂಧ ಶಿಕ್ಷಕಿ (ನಿಶ್ವಿಕಾ) ದೃಷ್ಟಿಹೀನರ ಬಗ್ಗೆ ಬಾಲು ಅವರ ದೃಷ್ಟಿಕೋನವನ್ನು ಹೇಗೆ ಬದಲಾಯಿಸುತ್ತಾರೆ ಮತ್ತು ಅಪರಾಧವು ಹೇಗೆ ತಿರುವುಗಳು ಪಡೆದುಕೊಳ್ಳುತ್ತೆ ಅನ್ನೋದೆ ಸಿನಿಮಾದ ಮುಖ್ಯಭಾಗ ಗಣೇಶ್ ಎಂದಿನಂತೆ ಸಖತ್ ಆಕ್ಟಿಂಗ್ ಮಾಡಿದ್ದಾರೆ…ಇನ್ಮು‌ ನಿಶ್ವಿಕಾ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ‌‌..ಸಿನಿಮಾದಲ್ಲಿ ಕೆಲವು ರಿಪಿಟೆಡ್ ಸೀನ್ ಗಳನ್ನು ಹೊರತುಪಡಿಸಿದ್ರೆ.. ಚಿತ್ರವು ಸೆಕೆಂಡ್ ಹಾಫ್ ಹೆಚ್ಚು ಇಂಪ್ರೆಸಿವ್ ಆಗಿದೆ…ಇನ್ನು‌ ಸುನಿ ಕೂಡ ತಮ್ಮ ಕೆಲಸವನ್ನ ಎಂದಿನಂತೆ ಅಚ್ಚುಕಟ್ಟಾಗಿ ಮಾಡಿದ್ದಾರೆ….

ಸಖತ್ ಎಷ್ಟು ಸಖತ್ತಾಗಿದೆ ಗೊತ್ತಾ?? Read More »

ಅನೌನ್ಸ್ ಆಯ್ತು ಲವ್ ಮಾಕ್ಟೇಲ್ ಸಿನಿಮಾ ರಿಲೀಸ್ ಡೇಟ್ !

ನಟ ಕೃಷ್ಣ ಹಾಗೂ ಮಿಲನ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಲವ್ ಮಾಕ್ಟೇಲ್ 2 ಸಿನಿಮಾದ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ …ಲವ್ ಮಾಕ್ಟೇಲ್ ಸಿನಿಮಾ ಯಶಸ್ವಿ ಕಂಡ ಹಿನ್ನೆಲೆಯಲ್ಲಿ ಕೃಷ್ಣ ಮತ್ತೆ ಲವ್ ಮಾಕ್ಟೇಲ್ 2 ಚಿತ್ರವನ್ನ ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ…. ಈಗಾಗಲೇ ಚಿತ್ರೀಕರಣ ಮುಗಿಸಿ ಸೆನ್ಸಾರ್ ಸರ್ಟಿಫಿಕೇಟ್ ಪಡೆದಿರುವ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಕೂಡ ಅನೌನ್ಸ್ ಮಾಡಿದೆ… ಲವ್ ಮಾಕ್ಟೈಲ್ 2 ಸಿನಿಮಾವನ್ನ ಫೆಬ್ರವರಿ 12ರಂದು ಬಿಡುಗಡೆ ಮಾಡಲು ಕೃಷ್ಣ ಹಾಗೂ ಮಿಲನ ನಿರ್ಧಾರ ಮಾಡಿದ್ದಾರೆ… ಚಿತ್ರದಲ್ಲಿ ಕೃಷ್ಣನ ಜೊತೆ ರಾಚೆಲ್ ಡೇವಿಸ್ ನಾಯಕಿಯಾಗಿ ಅಭಿನಯ ಮಾಡಿದ್ದಾರೆ.. ಲವ್ ಮಾಕ್ಟೇಲ್ ಸಿನಿಮಾ ಯಶಸ್ಸಿನಿಂದ ಎರಡನೇ ಭಾಗದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ… ಸದ್ಯ ಚಿತ್ರದ ಹಾಡಿಗಳು ಹಿಟ್ ಆಗಿದ್ದು ಸಿನಿಮಾ ಹೇಗಿರಲಿದೆ ಅನ್ನೋ ಕುತೂಹಲ ಜೋರಾಗಿದೆ..ಒಟ್ಟಾರೆ ಪ್ರೇಮಿಗಳ‌ದಿನ ಸಮೀಪದಲ್ಲಿಯೇ ಚಿತ್ರ ಬಿಡುಗಡೆ ಆಗ್ತಿದ್ದು ಕನ್ನಡ ಸಿನಿಮಾ‌ ಪ್ರೇಮಿಗಳು ಚಿತ್ರ ನೋಡಲು ಕಾತುರರಾಗಿದ್ದಾರೆ…

ಅನೌನ್ಸ್ ಆಯ್ತು ಲವ್ ಮಾಕ್ಟೇಲ್ ಸಿನಿಮಾ ರಿಲೀಸ್ ಡೇಟ್ ! Read More »

ಮದುವೆ ಆದ ಮೂರೇ ದಿನಕ್ಕೆ ಅಡುಗೆ ಮನೆ ಸೇರಿದ ಕತ್ರಿನಾ

ಬಿಟೌನ್ ನಟಿ ಕತ್ರಿನಾ ಕೈಫ್ ಇತ್ತೀಚೆಗಷ್ಟೆ ವಿಕ್ಕಿ ಕೌಶಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು… ಮದುವೆ ಆದ ಕೆಲವೇ ದಿನಗಳಲ್ಲಿ ನಟಿ ಕತ್ರಿನಾ ಕೈಫ್ ಅಡುಗೆ ಮಾಡಲು ಕಲಿತಿದ್ದಾರೆ ..ಸದ್ಯ ಅಡುಗೆ ಮನೆಯಲ್ಲಿ ಕತ್ರಿನಾ ಬ್ಯುಸಿ ಆಗಿದ್ದಾರೆ ಅಂದ್ರೆ ನೀವು ನಂಬಲೇ‌ಬೇಕು ಇದನ್ನ ನಾವ್ ಹೇಳ್ತಿಲ್ಲ ಅವ್ರ ಪತಿ ವಿಕ್ಕಿ ಕೌಶಲ್ ಅವ್ರೇ ಹೇಳ್ತಿದ್ದಾರೆ…. ಹೌದು… ಇತ್ತೀಚೆಗಷ್ಟೆ ಕತ್ರಿನಾ ಕೈಫ್ ತನ್ನ ಪತಿ ವಿಕ್ಕಿ ಕೌಶಲ್ ಅವ್ರಿಗಾಗಿ ಹಲ್ವಾ ಮಾಡಿ ಬಡಿಸಿದ್ದಾರೆ… ಈ ವಿಚಾರ ವನ್ನು ವಿಕ್ಕಿ ಕೌಶಲ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ .. ನನ್ನ ಜೀವನದಲ್ಲಿ ತಿಂದಂಥ ಅತ್ಯಂತ ಅಮೂಲ್ಯವಾದ ಹಲ್ವಾ ಇದು ಎಂದು ವಿಕ್ಕಿ ಕೌಶಲ್ ಸಂತಸ ವ್ಯಕ್ತಪಡಿಸಿದ್ದಾರೆ …..ಅದರ ಜತೆಗೆ ನಟಿ ಕತ್ರಿನಾ ಕೈಫ್ ಕೂಡ ನಾನೇ ಮಾಡಿದ ಹಲ್ವಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಂತಸದಿಂದ ಫೋಟೋವನ್ನು ಶೇರ್ ಮಾಡಿದ್ದಾರೆ … ಸದ್ಯ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಹನಿಮೂನ್ ಮುಗಿಸಿ ಮುಂಬೈಗೆ ವಾಪಸಾಗಿದ್ದಾರೆ…ತಮ್ಮ ಹೊಸ‌ಮನೆಯ ಗೃಹ ಪ್ರವೇಶ ಮಾಡಿರೋ ದಂಪತಿಗಳು ತಮ್ಮ ತಮ್ಮ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಲಿದ್ದಾರೆ…

ಮದುವೆ ಆದ ಮೂರೇ ದಿನಕ್ಕೆ ಅಡುಗೆ ಮನೆ ಸೇರಿದ ಕತ್ರಿನಾ Read More »

‘ಪುಷ್ಪ’ ಕನ್ನಡ ವರ್ಷನ್ ನೋಡೋಕೆ ಬಂದವರ ಮೇಲೆ ದೌರ್ಜನ್ಯ; ತೆಲುಗು ನೋಡಿ ಎಂದು ಅವಾಜ್

‘ಪುಷ್ಪ’ ಸಿನಿಮಾ (Pushpa Movie) ಇಂದು (ಡಿಸೆಂಬರ್ 17) ರಿಲೀಸ್ ಆಗಿದೆ. ತೆಲುಗು ಮಾತ್ರವಲ್ಲದೆ, ಕನ್ನಡ, ಹಿಂದಿ, ತಮಿಳಿನಲ್ಲೂ ಸಿನಿಮಾ ಬಿಡುಗಡೆ ಆಗಿದೆ. ಬೇಸರದ ವಿಚಾರ ಎಂದರೆ, ಕನ್ನಡ ಅವತರಣಿಕೆಯಲ್ಲಿ ಈ ಸಿನಿಮಾ ಇಂದು ತೆರೆಕಾಣಲೇ ಇಲ್ಲ. ಕನ್ನಡ ವರ್ಷನ್ ಬಂದಿಲ್ಲ ಎನ್ನುವ ಮಾತು ಚಿತ್ರಮಂದಿರದವರ ಕಡೆಯಿಂದ ಬಂದಿದೆ. ಇದನ್ನು ಪ್ರಶ್ನೆ ಮಾಡಲು ಹೋದವರ ಮೇಲೆ ದೌರ್ಜನ್ಯ ನಡೆದಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕೆಲವರು ಈ ಬಗ್ಗೆ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ‘ಪುಷ್ಪ’ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಗಿ ಇನ್ನುಳಿದ ಭಾಷೆಗಳಿಗೆ ಡಬ್​ ಆಗಿದೆ. ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಿಗೆ ಡಬ್​ ಆಗಿ ತೆರೆಕಂಡಿದೆ. ಆದರೆ ಕರ್ನಾಟಕದ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ ವರ್ಷನ್​ಗಿಂತಲೂ ತೆಲುಗು ವರ್ಷನ್​ ಅನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮೊದಲು ಮೂರು ಕನ್ನಡ ಶೋಗಳನ್ನು ಆಯೋಜಿಸಲಾಗಿತ್ತು. ಆದರೆ, ಶುಕ್ರವಾರ (ಡಿಸೆಂಬರ್​ 17) ಈ ಸಂಖ್ಯೆ ಕೇವಲ ಒಂದಕ್ಕೆ ಇಳಿಕೆ ಆಗಿತ್ತು. ಈಗ ಅಲ್ಲಿಯೂ ಸಿನಿಮಾ ಪ್ರದರ್ಶನ ಕಂಡಿಲ್ಲ. ಬೆಂಗಳೂರಿನ ಆವಲಹಳ್ಳಿಯ ವೆಂಕಟೇಶ್ವರದಲ್ಲಿ ಬೆಳಗ್ಗೆ 11 ಗಂಟೆಗೆ ಕನ್ನಡ ವರ್ಷನ್​ ರಿಲೀಸ್​ ಆಗಬೇಕಿತ್ತು. ಆದರೆ, ಕನ್ನಡದಲ್ಲಿ ‘ಪುಷ್ಪ’ ಸಿನಿಮಾ‌ ನೋಡೋಕೆ ಬಂದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಕನ್ನಡ ಅವತರಣಿಕೆ‌ ಬಂದಿಲ್ಲ ಎಂದು ಥಿಯೇಟರ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ‘ಪುಷ್ಪ’ದ ಕನ್ನಡ ವರ್ಷನ್​ ವೆಂಕಟೇಶ್ವರದಲ್ಲಿ ಮಾತ್ರ ಪ್ರದರ್ಶನ ನಿಗದಿ ಆಗಿತ್ತು. ಈಗ ಅಲ್ಲಿಯೂ ಶೋ ಇಲ್ಲದೇ ಇರುವುದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ‘ಕನ್ನಡ ವರ್ಷನ್​ ಬಂದಿಲ್ಲಾ ರೀ, ಬೇಕಿದ್ರೆ ತೆಲುಗು ನೋಡಿ ಎಂದು ಅವಾಜ್​ ಹಾಕಿದರು. ಮತ್ತೊಬ್ಬನಿಗೆ ಹೊಡೆದರು. ನನ್ನ ಕಾಲರ್​ ಪಟ್ಟಿ ಹಿಡಿದು ಇಲ್ಲಿಂದ ಸೈಲೆಂಟ್​ ಆಗಿ ಹೊರಟು ಹೋಗಿ, ಹಣ ಹಿಂದಿರುಗಿಸುತ್ತೇವೆ ಎಂದರು. ಇದು ಹಣದ ವಿಚಾರ ಅಲ್ಲ. ನಾವು ಕನ್ನಡದಲ್ಲಿ ಸಿನಿಮಾ ನೋಡೋಕೆ ಬಂದಿದ್ದೇವೆ. ಅದನ್ನು ತೋರಿಸಬೇಕಾಗಿದ್ದು ನಿಮ್ಮ ಧರ್ಮ’ ಎಂದು ಅಭಿಮಾನಿಯೊಬ್ಬರು ಸಿಟ್ಟಾಗಿದ್ದಾರೆ.

‘ಪುಷ್ಪ’ ಕನ್ನಡ ವರ್ಷನ್ ನೋಡೋಕೆ ಬಂದವರ ಮೇಲೆ ದೌರ್ಜನ್ಯ; ತೆಲುಗು ನೋಡಿ ಎಂದು ಅವಾಜ್ Read More »

Scroll to Top