ಮಾಸ್ಟರ್ ಆನಂದ್ ಗೆ ಕೋವಿಡ್ ಪಾಸಿಟಿವ್ ಅಭಿಮಾನಿಗಳಿಗೆ ಅವರ ಮಗಳ ಚಿಂತೆ ..
ನಟ ನಿರೂಪಕ ಮಾಸ್ಟರ್ ಆನಂದ್ ಗೆ ಕೋವಿಡ್ ಸೋಂಕು ತಗುಲಿದೆ…ಅವರಿಗೆ ಹಾಗೂ ಅವರ ಪತ್ನಿ ಇಬ್ಬರಿಗೂ ಕೋವಿಡ್ ಸೋಂಕು ಉಂಟಾಗಿದ್ದು. ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದಾರೆ… ಅದಷ್ಟೇ ಅಲ್ಲದೆ ಬಿಬಿಎಂಪಿ ಕಡೆಯಿಂದ ಈಗಾಗಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಈ ವಿಚಾರವನ್ನ ಫೋಟೋ ಸಮೇತವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.. ನಿಮಗೂ ಕೂಡ ಕೊರೋನಾ ಸೋಂಕು ಕಂಡುಬಂದಲ್ಲಿ ಅಥವಾ ಕೆಮ್ಮು ಶೀತ ಜ್ವರ ಯಾವುದೇ ರೀತಿ ಲಕ್ಷಣ ಕಂಡುಬಂದಲ್ಲಿ ಮೊದಲಿಗೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ..ಇನ್ನು ಅವರ ಪೋಸ್ಟ್ ಗೆ ಕಮೆಂಟ್ ಮಾಡಿರುವ ಅಭಿಮಾನಿಗಳು ತಮ್ಮ ಮಗಳು ಹೇಗಿದ್ದಾಳೆ ಎಂದು ವಿಚಾರಿಸುತ್ತಿದ್ದಾರೆ… ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಸದ್ಯ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.. ಆದಕಾರಣ ಅಭಿಮಾನಿಗಳು ವಂಶಿಕಾ ಬಗ್ಗೆ ಹೆಚ್ಚು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಿದ್ದಾರೆ …
ಮಾಸ್ಟರ್ ಆನಂದ್ ಗೆ ಕೋವಿಡ್ ಪಾಸಿಟಿವ್ ಅಭಿಮಾನಿಗಳಿಗೆ ಅವರ ಮಗಳ ಚಿಂತೆ .. Read More »