Karnataka Bhagya

ವಾಣಿಜ್ಯ

ಮತ್ತೆ ಕೆಂಪೇಗೌಡ ಲುಕ್ ನಲ್ಲಿ ಕಿಚ್ಚ ಮಿಂಚಿಂಗ್…

ಕಬ್ಜ…ಸ್ಯಾಂಡಲ್‌ವುಟ್ ನ ಮತ್ತೊಂದು ‌ಪ್ಯಾನ್ ಇಂಡಿಯಾ ಸಿನಿಮಾ..ನಟ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಮತ್ತೆ ಒಟ್ಟಿಗೆ ಅಭಿನಯ ಮಾಡುತ್ತಿದ್ದು ಚಿತ್ರಕ್ಕೆ ಆರ್ ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ .. ಈಗಾಗಲೆ ಚಿತ್ರದ ಪೋಸ್ಟರ್ ಹಾಗೂ ಮೇಕಿಂಗ್ ನಿಂದಲೇ ಸದ್ದು ಮಾಡುತ್ತಿರುವ ಕಬ್ಜ ಸಿನಿಮಾದಲ್ಲಿ ಕಿಚ್ಚ ಸುದೀಪ್ ಭಾರ್ಗವ ಬಕ್ಷಿ ಎನ್ನುವ ಪಾತ್ರ ನಿರ್ವಹಿಸುತ್ತಿದ್ದಾರೆ … ಈ ಹಿಂದೆ ಉಪ್ಪಿ ಕ್ಯಾರೆಕ್ಟರ್ ಲುಕ್ ರಿವಿಲ್ ಮಾಡಿದ್ದ ತಂಡ ಕಿಚ್ಚ ಸುದೀಪ್ ಕೂಡ ಇದೆ ರೀತಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಹಿಂಟ್ ನೀಡಿದ್ರು…ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಕಬ್ಜ ತಂಡ ಸೇರಿಕೊಂಡಿದ್ದು ಚಿತ್ರದಲ್ಲಿ ತಾವು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಲುಕ್ ರಿವಿಲ್ ಮಾಡಿದ್ದಾರೆ…. ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ತಮ್ಮ ಲುಕ್ ರಿವಿಲ್ ಮಾಡಿದ್ದು ಅಭಿಮಾನಿಗಳಿಂದ ಕಿಚ್ಚನ ಹೊಸ‌ ಲುಕ್ ಗೆ ಮೆಚ್ಚುಗೆ ವ್ಯಕ್ತವಾಗಿದೆ…ಕೆಂಪೇಗೌಡ ಸಿನಿಮಾದಲ್ಲಿ‌ ಕಿಚ್ಚ ಇದೇ ಲುಕ್ ನಲ್ಲಿ ಮಿಂಚಿದ್ರು…ಅದಾದ ನಂತ್ರ ಈಗ‌ ಮತ್ತೆ ಓಲ್ಡ್ ಲುಕ್ ಗೆ ಕಂ ಬ್ಯಾಕ್ ಮಾಡಿದ್ದಾರೆ…

ಮತ್ತೆ ಕೆಂಪೇಗೌಡ ಲುಕ್ ನಲ್ಲಿ ಕಿಚ್ಚ ಮಿಂಚಿಂಗ್… Read More »

ಕಿರುತೆರೆಯಲ್ಲಿ ದೊರೆಸಾನಿಯಾದ ನಟಿ ರೂಪಿಕಾ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರೋ‌ ಹೊಸ ಧಾರಾವಾಹಿಯಲ್ಲಿ ನಟಿ ರೂಪಿಕಾ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ‌..ಧಾರವಾಹಿಗೆ ದೊರೆಸಾನಿ ಎಂದು ಹೆಸರಿಟ್ಟಿದ್ದು ಮಿಲನ್ ಪ್ರಕಾಶ್ ಧಾರಾವಾಹಿಯನ್ನ ನಿರ್ದೇಶನ ಮಾಡುತ್ತಿದ್ದಾರೆ… ರೂಪಿಕಾ‌ ನಾಯಕಿಯಾದ್ರೆ ಧಾರಾವಾಹಿಯಲ್ಲಿ ರೂಪಿಕಾಗೆ ಜೋಡಿಯಾಗಿ ಪೃಥ್ವಿ ರಾಜ್‌ ನಟಿಸುತ್ತಿದ್ದಾರೆ….ಬದುಕು, ಬೆಳ್ಳಿ ಚುಕ್ಕಿ, ಅವಳ ಮನೆ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದ ರೂಪಿಕಾ ಈಗ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ…. ಇತ್ತೀಚಿಗೆ 3rd ಕ್ಲಾಸ್ ಸಿನಿಮಾದಲ್ಲಿ ಕಾಣಿಸಿಕೊಂಡ ರೂಪಿಕಾ ಡೈಮೆಂಡ್ ಕ್ರಾಸ್‌ ರಿಲೀಸ್‌ಗೆ ಕಾಯುತ್ತಿದ್ದಾರೆ. ತಮಿಳಿನ Chill Broದಲ್ಲಿ ನಟಿಸಿದ್ದಾರೆ..

ಕಿರುತೆರೆಯಲ್ಲಿ ದೊರೆಸಾನಿಯಾದ ನಟಿ ರೂಪಿಕಾ Read More »

ಉಪ್ಪಿ- ಪ್ರಿಯಾಂಕ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಹೀಗಿತ್ತು…

ನಟಿ ಪ್ರಿಯಾಂಕ ಉಪೇಂದ್ರ ಹಾಗೂ ಉಪೇಂದ್ರ ತಮ್ಮ 18ನೇ ವಿವಾಹ ವಾರ್ಷಿಕೋತ್ಸವವನ್ನು ಇತ್ತೀಚೆಗಷ್ಟೇ ಆಚರಣೆ ಮಾಡಿಕೊಂಡಿದ್ದಾರೆ… ಈ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸ್ವಲ್ಪ ಸ್ಪೆಷಲ್ ಆಗಿರಲಿ ಎಂದು ಉಪೇಂದ್ರ ಹಾಗೂ ಪ್ರಿಯಾಂಕ ಬಂಡೀಪುರದ ರೆಸಾರ್ಟ್ ನಲ್ಲಿ ಆಚರಣೆ ಮಾಡಿಕೊಂಡಿದ್ದಾರೆ ವಾರ್ಷಿಕೋತ್ಸವದ ಸಂಭ್ರಮದ ಫೋಟೋಗಳನ್ನು ಪ್ರಿಯಾಂಕ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಇಬ್ಬರೂ ಕೂಡ ವಾರ್ಷಿಕೋತ್ಸವದ ದಿನವನ್ನು ಸಕತ್ತಾಗಿ ಎಂಜಾಯ್ ಮಾಡಿದ್ದಾರೆ.. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ತಮಗಾಗಿ ಸ್ವಲ್ಪ ಸಮಯವನ್ನು ಬಿಡುವು ಮಾಡಿಕೊಂಡು ಬಂಡೀಪುರ ಅಭಯಾರಣ್ಯದ ರೆಸಾರ್ಟ್ ರಲ್ಲಿ ಕೆಲ ಸಮಯ ಕಳೆದಿದ್ದಾರೆ …

ಉಪ್ಪಿ- ಪ್ರಿಯಾಂಕ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಹೀಗಿತ್ತು… Read More »

ಪುಷ್ಪ- ಒನ್‌ಮ್ಯಾನ್‌ ಶೋ ಕಂಪ್ಲೀಟ್ ಅಲ್ಲು ಅರ್ಜುನ್ ಸಿನಿಮಾ

ಚಿತ್ರ- ಪುಷ್ಪನಿರ್ದೇಶಕ: ಸುಕುಮಾರ್ತಾರಾಗಣ: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಪಾರ್ಟ್ ೧ಸಿನಿಮಾ‌ ಬಿಡುಗಡೆ ಆಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ…ಸ್ಟೋರಿ. ಕಾಮಿಡಿ. ರೊಮ್ಯಾಂಟಿಕ್ ‌ಎನ್ನಿಸೋ ಎಲ್ಲಾ ಅಂಶಗಳು ಸಿನಿಮಾದಲ್ಲಿದ್ದು ಪುಷ್ಪ ಕಂಪ್ಲೀಟ್ ಮಾಸ್ ಹಾಗೂ ಎಂಟರ್ಟೇನ್ಮೆಂಟ್ ಸಿನಿಮಾ ಅನ್ನೋದರಲ್ಕಿ ಎರಡು ಮಾತಿಲ್ಲ…. ಚಿತ್ರದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಹಾಗೂ ಸಂಗೀತಕ್ಕೆ ಫುಲ್ ಮಾರ್ಕ್ ಪ್ರೇಕ್ಷಕರಿಂದ ಸಿಕ್ಕಿದೆ…ಇನ್ಮು‌ಚಿತ್ರದಲ್ಲಿ ಹೈ ವೋಲ್ಟೇಜ್ ಹಾಗೂ ಪ್ಲಸ್ ಪಾಯಿಂಟ್ ಅಂದ್ರೆ ಅಲ್ಲು ಅರ್ಜುನ್ ಅಭಿನಯ‌ ಹಾಗೂ ಡೈಲಾಗ್ ಡೆಲಿವರಿ…ಚಿತ್ರಕ್ಕಾಗಿ ಅಲ್ಲು ಅರ್ಜುನ್ ಗೆಟಪ್‌ ಬದಲಾಯಿಸಿಕೊಂಡಿದ್ದು ಸಿನಿಮಾಗೆ ವರ್ಕ್ ಔಟ್ ಆಗಿದೆ.. ಇನ್ನು‌ ಅಲ್ಲು ಅರ್ಜುನ್ ಕೆಲ ಸೀನ್ ಗಳಲ್ಲಿ ವಾವ್ಹ್ ಅನ್ನಿಸುವಂತೆ ಆಕ್ಟ್ ಮಾಡಿದ್ದು , ಮಾಸ್ ಸೀನ್ ಗಳು ಅವ್ರ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನ ನೀಡಲಿದೆ…ಇನ್ನು ಸ್ಟೈಲಿಷ್ ಸ್ಟಾರ್ ಅಭಿನಯ ಮತ್ತು ಆಕ್ಷನ್ ಗೆ ತಕ್ಕಂತೆ ಕ್ಯಾಮೆರಾ ವರ್ಕ್ ಮ್ಯಾಚ್ ಆಗಿದೆ… ರಶ್ಮಿಕಾ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಮೊದಲ‌ಬಾರಿಗೆ ಡಿ ಗ್ಲಾಮರ್ ಪಾತ್ರದಲ್ಲಿ ರಶ್ಮಕಾ ಫುಲ್ ಮಾರ್ಕ್ ಪಡೆದುಕೊಂಡಿದ್ದಾರೆ….ಶ್ರೀವಲ್ಲಿ ಹಾಗೂ ಪುಷ್ಪರಾಜ್ ಸೀನ್ ಗಳು ನೋಡುಗರನ್ನ ಖುಷಿ‌ಪಡಸುತ್ತದೆ…. ಇನ್ನ ಸುಕುಮಾರ್ ಆಕ್ಷನ್ ಸೀನ್ ಗಳನ್ನ ಸಖತ್ತಾಗಿ‌ ಪ್ಲಾನ್‌ ಮಾಡದ್ದು‌ ಅಲ್ಲು ಅರ್ಜುನ್ ಅವ್ರ ಪ್ರತಿ‌ ಸಿನಿಮಾದಲ್ಲಿ ಫೈಟ್ಸ್ ಹೈಲೆಟ್ ಆಗುವಂತೆಯೇ ಇಲ್ಲಿಯೂ ವರ್ಕ್ ಔಟ್ ಆಗಿದೆ…. ಅಲ್ಲು ಅರ್ಜುನ್ ಮತ್ತೊಮ್ಮೆ ಈ ಚಿತ್ರದಲ್ಲಿ ತಮ್ಮ ಆಕ್ಷನ್ ಸೀಕ್ವೆನ್ಸ್‌, ಸಖತ್ ಡೈಲಾಗ್ ಹಾಗೂ ಅಭಿನಯದಿಂದ ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿದ್ದಾರೆ … ಜಾಲಿ ರೆಡ್ಡಿ ಪಾತ್ರದಲ್ಲಿ ಧನಂಜಯ ‌ಮಿಂಚಿದ್ದು ಪಾತ್ರಕ್ಕೆ ತಕ್ಕಂತೆ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ ಕಥೆ ಮತ್ತು ನಿರೂಪಣೆಯು ಸ್ವಲ್ಪ ವೇಗ ಎನ್ನಿಸಿದರು…ನೋಡುಗರಿಗೆ ಮಜಾ‌‌ಕೊಡುತ್ತೆ…ಸಿನಿಮಾ‌ ಸೆಕೆಂಡ್ ಹಾಫ್ ರಕ್ತಚಂದನ ಕಳ್ಳಸಾಗಣೆಯ ಬಗ್ಗೆ ತೋರಿಸಲಾಗಿದೆ…ಕಳ್ಳಸಾಗಾಣಿಕೆದಾರರು ಪೊಲೀಸರನ್ನು ಹೇಗೆ ಕಣ್ಣು ತಪ್ಪಿಸುತ್ತಾರೆ ,ವಂಚಿಸುತ್ತಾರೆ ಎಂಬುದನ್ನ ಇನ್ನು ಚೆನ್ನಾಗಿ‌ ತೋರಿಸಬಹುದಾಗಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ… ಎಂದಿನಂತೆ ದೇವಿ ಶ್ರೀ ಪ್ರಸಾದ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ಸಖತ್ತಾಗಿ ವರ್ಕ್ ಆಗಿದೆ..ಎಲ್ಲಾ ಹಾಡುಗಳು ತೆರೆ ಮೇಲೆ ಅದ್ದೂರಿಯಾಗಿ ಕಾಣಿಸೋದ್ರ ಜೊತೆಗೆ ಕಲರ್ ಫುಲ್ ಆಗಿ ಮೂಡಿ ಬಂದಿದೆ…ಇನ್ಮು ಸಖತ್ ಹೈಪ್ ಕ್ರಿಯೆಟ್ ಮಾಡಿರೋ ಸಮಂತಾ ಸಾಂಗ್ ಗೆ ಪ್ರೇಕ್ಷಕರಿಂದ ಫುಲ್ ಮಾರ್ಕ್ ಸಿಕ್ಕಿದೆ…. ಚಿತ್ರದ ಕ್ಲೈಮ್ಯಾಕ್ಸ್ ಹತ್ತಿರವಾಗ್ತಿದ್ದಂತೆ ಫಹಾದ್ ಫಾಸಿಲ್ ಎಂಟ್ರಿ‌ಯಿಂದ ಸಿನಿಮಾದ ದಿಕ್ಕೆ ಬದಲಾಗುತ್ತೆ…ಫಹಾದ್ ಎಂಟ್ರಿ.ಪಂಚಿಂಗ್ ಕಥೆಯ ಮೇಲಿನ‌ ಕುತೂಹಲವನ್ನ ದುಪ್ಪಟ್ಟು ಮಾಡುತ್ತೆ…ಫಾಹಾದ್ ಎಂಟ್ರಿ ಆದ ನಂತ್ರ ಸಿನಿಮಾ ಕಂಪ್ಲೀಟ್ ಅಲ್ಲು ಅರ್ಜುನ್ ಹಾಗೂ ಫಹಾದ್ ಶೋ ಆಗಿ‌ ಬದಲಾಗುತ್ತೆ…ಒಟ್ಟಾರೆ ಪುಷ್ಪ ಕಂಪ್ಲೀಟ್ ಮಾಸ್ ಪೈಸಾ ವಸೂಲ್ ಸಿನಿಮಾ…

ಪುಷ್ಪ- ಒನ್‌ಮ್ಯಾನ್‌ ಶೋ ಕಂಪ್ಲೀಟ್ ಅಲ್ಲು ಅರ್ಜುನ್ ಸಿನಿಮಾ Read More »

ರಶ್ಮಿಕಾ ಹಾಟ್ ಲುಕ್ ಗೆ ಫಿದಾ ಆದ ಫ್ಯಾನ್

ಸ್ಯಾಂಡಲ್ ವುಡ್ ನಲ್ಲಿ ತನ್ನ ಕೆರಿಯರ್ ಆರಂಭಿಸಿ ಸದ್ಯ ಟಾಲಿವುಡ್ ,ಬಾಲಿವುಡ್ ಕಾಲಿವುಡ್, ನಟಿಯಾಗಿ ಮೆರೆಯುತ್ತಿರುವ ಹೀರೋಯಿನ್ ರಶ್ಮಿಕಾ ಮಂದಣ್ಣ… ನಟಿ ರಶ್ಮಿಕಾ ಅಭಿನಯದ ಪುಷ್ಪ ಸಿನಿಮಾ ಇಂದು ತೆರೆಗೆ ಬಂದಿದೆ… ಸಿನಿಮಾದ ಪ್ರಚಾರಕ್ಕಾಗಿ ಬೇರೆ ಬೇರೆ ರಾಜ್ಯಗಳ ರೌಂಡ್ ಹಾಕುತ್ತಿರುವ ರಶ್ಮಿಕಾ ಇತ್ತೀಚೆಗಷ್ಟೇ ಕೇರಳದಲ್ಲಿ ತಮ್ಮ ಪುಷ್ಪ ಸಿನಿಮಾದ ಪ್ರಚಾರವನ್ನು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು… ಪ್ರಚಾರದಲ್ಲಿ ರಶ್ಮಿಕಾ ಥೇಟ್ ಮಲಯಾಳಿ ಹುಡುಗಿ ಈ ರೀತಿಯಲ್ಲಿ ಕಾಣಿಸಿಕೊಂಡರು …ಅದ್ರಲ್ಲೇನಿದೆ ವಿಶೇಷತೆ ಅಂದ್ರೆ… ರಶ್ಮಿಕಾ ಈ ಹಿಂದೆ ಎಂದಿಗೂ ಕಾಣಿಸಿಕೊಳ್ಳದಷ್ಟು ಗ್ಲಾಮರಸ್ ಲುಕ್ ನಲ್ಲಿ ಕೇರಳ ಸಿನಿಮಾ ಪ್ರೇಕ್ಷಕರ ಮುಂದೆ ಬಂದು ಎಲ್ಲರ ಗಮನ ಸೆಳೆದರು… ಇನ್ನು ರಶ್ಮಿಕಾ ಅಭಿನಯದ ಸಿನಿಮಾ ಇಂದು ತೆರೆಗೆ ಬಂದಿದ್ದು, ಚಿತ್ರದಲ್ಲಿ ರಶ್ಮಿಕಾ ಡಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ…ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಲುಕ್ ಕಂಪ್ಲೀಟ್ ಆಗಿ ಬದಲಾಗಿದೆ… ರಶ್ಮಿಕಾ ಸಖತ್ ಸ್ಟೈಲಿಶ್ ಆಗಿದ್ದಾರೆ.. ಒಟ್ಟಾರೆ ಕೇರಳದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದ ರಶ್ಮಿಕ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ

ರಶ್ಮಿಕಾ ಹಾಟ್ ಲುಕ್ ಗೆ ಫಿದಾ ಆದ ಫ್ಯಾನ್ Read More »

ಪುಷ್ಪ ಸಿನಿಮಾ‌ ಬಹಿಷ್ಕಾರ ಮಾಡಲು ಕನ್ನಡಿಗರು ನಿರ್ಧಾರ

ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ.. ಪುಷ್ಪ ಸಿನಿಮಾ 5ಭಾಷೆಯಲ್ಲಿ ತೆರೆಗೆ ಬರ್ತಿದ್ದು ಕನ್ನಡದಲ್ಲಿಯೂ ಕೂಡ ಸಿನಿಮಾ ಡಬ್ ಆಗಿ ರಿಲೀಸ್ ಆಗ್ತಿದೆ… ಚಿತ್ರದಲ್ಲಿ ಕನ್ನಡಿಗರಾದ ರಶ್ಮಿಕಾ ಹಾಗೂ ಧನಂಜಯ ಕೂಡ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿದ್ದಾರೆ.. ಚಿತ್ರತಂಡ ಕನ್ನಡದಲ್ಲಿಯೂ ಸಿನಿಮಾ‌ಹಿಟ್ ಆಗುವ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ … ಸಿನಿಮಾ ಬಿಡುಗಡೆಗೆ ಇನ್ನೇನು 1ದಿನ ಬಾಕಿ ಇರುವಾಗಲೇ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ ಈಗಾಗಲೇ ಒಂದಲ್ಲ ಒಂದು ಸಮಸ್ಯೆಯಿಂದ ಪುಷ್ಪ ಸಿನಿಮಾಗೆ ತೊಂದರೆ ಉಂಟಾಗಿದ್ದು ಈಗ ಕನ್ನಡಿಗರು ಪುಷ್ಪ ಚಿತ್ರವನ್ನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ .. ಪುಷ್ಪ ಸಿನಿಮಾನ ರಾಜ್ಯದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿತ್ತು ಇದರಿಂದ ಬೇರೆಯ ಕನ್ನಡ ಸಿನಿಮಾಗಳಿಗೆ ಸಮಸ್ಯೆಯಾಗುತ್ತಿದೆ… ಪ್ರತಿವಾರದಂತೆ ಶುಕ್ರವಾರ ಕನ್ನಡದ ಸಾಕಷ್ಟು ಚಿತ್ರಗಳ ಚಿತ್ರಗಳು ಬಿಡುಗಡೆಗೆ ಸಿದ್ಧತೆಯಾಗಿದ್ದು… ಪುಷ್ಪ ಸಿನಿಮಾದಿಂದ ಆ ಚಿತ್ರಗಳಿಗೆ ಥಿಯೇಟರ್ ನ ಸಮಸ್ಯೆಗಳು ಎದುರಾಗಿದೆ …. ಇದೇ ಕಾರಣದಿಂದ ಕನ್ನಡಿಗರು ರಾಜ್ಯದಲ್ಲಿ ಮೊದಲು ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡಬೇಕು… ಆನಂತರ ಉಳಿದ ಚಿತ್ರಮಂದಿರಗಳನ್ನ ಬೇರೆ ಭಾಷೆಯ ಚಿತ್ರಗಳಿಗೆ ನೀಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ ..ಈ ಮೂಲಕ ಪುಷ್ಪ ಸಿನಿಮಾಗೆ ಬಹಿಷ್ಕಾರ ಹಾಕಿ ಕನ್ನಡ ಸಿನಿಮಾಗೆ ಮನ್ನಣೆ ನೀಡಿ ಅಂತಿದ್ದಾರೆ ನೆಟ್ಟಿಗರು..

ಪುಷ್ಪ ಸಿನಿಮಾ‌ ಬಹಿಷ್ಕಾರ ಮಾಡಲು ಕನ್ನಡಿಗರು ನಿರ್ಧಾರ Read More »

ಅಪ್ಪು ನೆನಪಿನಲ್ಲಿ ಕರುನಾಡ ರತ್ನ. ಕಾರ್ಯಕ್ರಮ

ಪವರ್ ಸ್ಟಾರ್ ಇಲ್ಲ ಅನ್ನೋದು ಯಾರು ಕೂಡ ಅರಗಿಸಿಕೊಳ್ಳಲಾಗದ ವಿಚಾರ..ಆದರೆ ದಿನ ಕಳೆದಂತೆ ವಾಸ್ತವಕ್ಕೆ ಒಗ್ಗಿಕೊಳ್ಳಲೇಬೇಕು…ಪ್ರತಿಯೊಬ್ಬರನ್ನು ಪ್ರೀತಿಯಿಂದಲೇ ಕಾಣುತ್ತಿದ್ದರು ಪವರ್ ಸ್ಟಾರ್ … ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವನದ ಮೌಲ್ಯಗಳು , ಸಾಧನೆ , ಸಂದೇಶ ಮತ್ತು ಎಲ್ಲಾ ಅಮೂಲ್ಯ ನೆನಪುಗಳನ್ನು ಅನಾವರಣಗೊಳಿಸಲು ಕರುನಾಡ ರತ್ನ ಎನ್ನುವ ಕಾರ್ಯಕ್ರಮವನ್ನು GKGS ಟ್ರಸ್ಟ್ ಮತ್ತು ವರುಣ್ ಸ್ಟುಡಿಯೊಸ್ ವತಿಯಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್. ರಾಘವೇಂದ್ರ ರಾಜ್ ಕುಮಾರ್. ಮಂಗಳ ರಾಘವೇಂದ್ರ ರಾಜ್ ಕುಮಾರ್ . ರವಿಚಂದ್ರನ್ ಭಾಗಿ ಆಗಿದ್ದಾರೆ…ಇನ್ನು ರಾಜಕೀಯ ಕ್ಷೇತ್ರದಿಂದ ಡಿಕೆ ಸುರೇಶ್. ರೇಣುಕಾಚಾರ್ಯ ಇನ್ನು ಅನೇಕರು ಭಾಗಿ ಆಗಿದ್ದಾರೆ.. ಇನ್ನು ಈ ಕಾರ್ಯಕ್ರಮವು Zee ಕನ್ನಡ ಚಾನೆಲ್ ನಲ್ಲಿ ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.ಮನೆ ಮನೆಯ ರತ್ನ , ಕರ್ನಾಟಕ ರತ್ನ ನಮ್ಮ ನೆನಪಲ್ಲಿ ಚಿರಸ್ಥಾಯಿಯಾದ ಅಪ್ಪು ಅವರಿಗೆ ಈ ನಮನ ಅನ್ನೋ‌ ಉದ್ದೇಶದ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದಾರೆ ವರುಣ್ ….

ಅಪ್ಪು ನೆನಪಿನಲ್ಲಿ ಕರುನಾಡ ರತ್ನ. ಕಾರ್ಯಕ್ರಮ Read More »

ಕನ್ನಡಾಂಬೆಗಾಗಿ ಒಕ್ಕೊರಲಿನ ಹೋರಟಕ್ಕೆ ಸ್ಯಾಂಡಲ್ ವುಡ್

ಮಹಾರಾಷ್ಟ್ರ ದ ಕೊಲ್ಲಾಪುರದಲ್ಲಿ ಕನ್ನಡ ಭಾವುಟ ಸುಟ್ಟ ಪ್ರಕರಣ ಕನ್ನಡಿಗರ ಆಕ್ರೋಶಕ್ಮೆ ಕಾರಣವಾಗಿದೆ…ಕನ್ನಡ ನಾಡು‌, ನುಡಿ ಹಾಗೂ ಭಾಷೆ ವಿಚಾರದಲ್ಲಿ ಸದಾ ಮುಂದಿರೋ ಸಿನಿಮಾ‌ಕಲಾವಿದರು ಭಾವುಟ ಸುಟ್ಟ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ…ಇದೇ ವಿಚಾರವಾಗಿ ಕೋಪಗೊಂಡಿರೋ ಸ್ಟಾರ್ಸ್ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡೋ ಮೂಲಕ ಅಭಿಯಾನ ಶುರು ಮಾಡಿದ್ದಾರೆ … ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯಕ್ರಮ ಕೈಗೊಳ್ಳಿ ಧ್ರುವ ಸರ್ಜಾ ಭಾಷೆ ಅನ್ನೋದು ಒಂದು ನಾಡಿನ ಸ್ವಾಭಿಮಾನದ ಪ್ರತೀಕ.ಕನ್ನಡಧ್ವಜ ನಮ್ಮ #ಸಂಸ್ಕೃತಿಯ ತಿಲಕ. ಕನ್ನಡಧ್ವಜ ವನ್ನು ಸುಟ್ಟಿದ್ದು ತೀವ್ರ ಬೇಸರ ತರಿಸಿದೆ! ಸರ್ಕಾರ ಈಕೂಡಲೇ ಇಂತಹ ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯಕ್ರಮ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸಬೇಕೆನ್ನುವುದು ನನ್ನಂತ ಕೋಟ್ಯಾಂತರ ಕನ್ನಡಿಗರ ಒತ್ತಯ ಎಂದು‌ ಧ್ರುವಾ ಟ್ವೀಟ್ ಮಾಡಿದ್ದಾರೆ…. ಕನ್ನಡಪರ ಹೋರಾಟಗಾರರನ್ನ ಬಿಡುಗಡೆಗೊಳಿಸಿ ಎಂದ ವಿಜಯ್ನಾಡು,ನುಡಿ,ಭಾಷೆ ನಮ್ಮ ಉಸಿರಾಟದ ಒಂದು ಭಾಗ.ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ ಎಂದು ದುನಿಯಾ‌ ವಿಜಯ್ ಟ್ವೀಟ್ ಮಾಡಿದ್ದಾರೆ… ತಾಯ್ನಾಡಿಗೆ ಅಪಮಾನ ಮಾಡಿದವ್ರಿಗೆ ಶಿಕ್ಷೆ ಆಗಲೇಬೇಕೆಂದ ರಿಷಬ್ ನಮ್ಮ ಕರುನಾಡ ಧ್ವಜ ಸುಟ್ಟು, ಕನ್ನಡ ತಾಯಿ, ತಾಯ್ನಾಡಿಗೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು. ಕನ್ನಡಪರ ಹೋರಟಗಾರರನ್ನ ಬಿಡುಗಡೆ ಮಾಡಬೇಕಾಗಿ ವಿನಂತಿ ಮಾಡಿದ್ದಾರೆ ರಿಷಬ್ ಶೆಟ್ಟಿ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದ ಗಣೇಶ್ ಅವರು ಸುಟ್ಟಿದ್ದು ಧ್ವಜವಲ್ಲ,ಕನ್ನಡಿಗರ ಸ್ವಾಭಿಮಾನದ ಕಿಚ್ಚು.ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು.ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು ‌ ತಪ್ಪಿತಸ್ತರಿಗೆ ಶಿಕ್ಷೆ ಆಗಲಿ ಎಂದ ಶಿವಣ್ಣ ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ ಎಂದಿದ್ದಾರೆ ಶಿವರಾಜ್ ಕುಮಾರ್ . ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದ ದರ್ಶನ್ ಇನ್ನು‌ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದ ದರ್ಶನ್ ….

ಕನ್ನಡಾಂಬೆಗಾಗಿ ಒಕ್ಕೊರಲಿನ ಹೋರಟಕ್ಕೆ ಸ್ಯಾಂಡಲ್ ವುಡ್ Read More »

ಕನ್ನಡ ಬಾವುಟ ಸುಟ್ಟ ಪ್ರಕರಣ- ಸಿಡಿದೆದ್ದ ಸ್ಯಾಂಡಲ್ ವುಡ್

ಮಹಾರಾಷ್ಟ್ರ ದ ಕೊಲ್ಲಾಪುರದಲ್ಲಿ ಕನ್ನಡ ಭಾವುಟ ಸುಟ್ಟ ಪ್ರಕರಣ ತಾರಕಕ್ಕೇರಿದೆ..ಎಂಈಎಸ್ ಪುಂಡಾಟ ಕಂಡು ಸ್ಯಾಂಡಲ್ ವುಡ್ ಮಂದಿ ಗರಂ ಆಗಿದ್ದಾರೆ…ಕನ್ನಡ ಬಾವುಟ ಸುಟ್ಟ ಪುಂಡರನ್ನ ಬಂದಿಸುವಂತೆ ಸಿನಿಮಾ ಕಲಾವಿದರು ಪಟ್ಟು ಹಿಡಿದ್ದಿದ್ದಾರೆ‌.. ಕನ್ನಡ ನಾಡು‌ ನುಡಿಗೆ ಸಮಸ್ಯೆ ಮಾಡುವವರಿಗೆ ಶಿಕ್ಷೆ ಆಗಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರೆ ಸ್ಯಾಂಡಲ್ ವುಡ್ ಸ್ಟಾರ್ ಗಳು…ಮೊನ್ನೆ ಮಹರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡಾಂಭೆ ಬಾವುಟವನ್ನ‌ ಮರಾಠಿಗರು ಸುಟ್ಟು ಹಾಕಿದ್ರು..ಈ ಘಟನೆಯ ಬಗ್ಗೆ ಎಚ್ಚೆತ್ತುಕೊಂಡ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಬೇಕು ಎಂದು ಸ್ಯಾಂಡಲ್ ವುಡ್ ಸ್ಟಾರ್ ಗಳ ಒತ್ತಾಯವಾಗಿದೆ… ನಟ ಶಿವರಾಜ್ ಕುಮಾರ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್ ಇನ್ನು ಅನೇಕರು ಈ‌ಬಗ್ಗೆ ಟ್ವೀಟ್ ಮಾಡುವ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕೆಂದು‌ ಪಟ್ಟು ಹಿಡಿದಿದ್ದಾರೆ…

ಕನ್ನಡ ಬಾವುಟ ಸುಟ್ಟ ಪ್ರಕರಣ- ಸಿಡಿದೆದ್ದ ಸ್ಯಾಂಡಲ್ ವುಡ್ Read More »

ರೇವತಿ ನಿಖಿಲ್ ಜೊತೆ ಮೊದಲ‌ ರೀಲ್ಸ್ ಮಾಡಿದ ರೈಡರ್ !

ನಿಖಿಲ್ ಕುಮಾರ್ ಅಭಿನಯದ ರೈಡರ್ ಸಿನಿಮಾ‌ತೆರೆಗೆ ಬರಲು ಸಿದ್ದವಾಗಿದೆ…ಇದೇ ತಿಂಗಳು 24ರಂದು ಚಿತ್ರ ರಿಲೀಸ್ ಆಗ್ತಿದ್ದು…ಚಿತ್ರವನ್ನ ವಿಜಯ್ ಕುಮಾರ್ ಕೊಂಡ ನಿರ್ದೇಶನ‌ ಮಾಡಿದ್ದು ಶರತ್ ಚಕ್ರವರ್ತಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ… ಕಾಶ್ಮೀರ ಪರದೇಸಿ ಇದೇ ಮೊದಲ ಬಾರಿಗೆ ನಿಖಿಲ್ ಜೋಡಿ ಯಾಗಿದ್ದು ಈಗಾಗಲೇ ಸಿನಿಮಾ ಟೀಸರ್ ನಿಂದ ಬಾರಿ ನಿರೀಕ್ಷೆ ಹುಟ್ಟುಹಾಕಿದೆ…ಸೀತಾ ರಾಮ‌ಕಲ್ಯಾಣದ ನಂತ್ರ ರಿಲೀಸ್ ಆಗ್ತಿರೋ ಚಿತ್ರ ಇದಾಗಿದ್ದು ಟೈಟಲ್ ನಲ್ಲಿರುವಂತೆಯೇ ನಿಖಿಲ್ ಸ್ಫೋರ್ಟ್ಸ್ ಪರ್ಸನ್ ಆಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ…ಅದ್ರ ಜೊತೆಯಲದಲಿ ಮತ್ತೊಂದು ಶೇಡ್ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರಂತೆ ನಿಖಿಲ್ .. ಸದ್ಯ ಚಿತ್ರದ ಡವ ಡವ…ಡವ..ಡವ ಹಾಡು ಟ್ರೆಂಡ್ ಹುಟ್ಟುಹಾಕಿದ್ದು ..ಸೋಷಿಯಲ್ ‌ಮಿಡಿಯಾ‌ದಲ್ಲಿ ಹಾಡು ಭಾರಿ ಹವಾ ಕ್ರಿಯೆಟ್ ಮಾಡಿದೆ..ಆರಂಭದಲ್ಲಿ ಖುದ್ದು ನಿಖಿಲ್ ಅವ್ರೇ ಈ ಹಾಡಿಗೆ ರೀಲ್ಸ್ ಮಾಡುವ ಮೂಲಕ ಸಿನಿಮಾ ಪ್ರಚಾರ ಆರಂಭಿಸಿದ್ರು…ಈಗ ಚಿತ್ರ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಪತ್ನಿ ಜೊತೆ ಡವ ಡವ ಡವ ಡವಾ ಹಾಡಿಗೆ ಹೆಜ್ಜೆ ಹಾಕಿ ಚಿತ್ರ ಪ್ರಚಾರ ಮುಂದುವರೆಸಿದ್ದಾರೆ ನಿಖಿಲ್… ಇದು ನಿಖಿಲ್ ಹಾಗೂ ರೇವತಿಯ ಮೊದಲ ರೀಲ್ಸ್ ಆಗಿದ್ದು ಅಭಿಮಾನಿಗಳು ನಿಖಿಲ್ ಮತ್ತು ರೇವತಿ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ…ರೇವತಿ ಹಾಡಿನಲ್ಲಿ ಒಂದೇ ಸೀನ್ ನಲ್ಲಿ ಬಂದರು ನೆಟ್ಟಿಗರು ಮಾತ್ರ ವಿಡಿಯೋವನ್ನ ಪದೇ ಪದೇ ನೋಡಿ ಎಂಜಾಯ್ ಮಾಡ್ತಿದ್ದಾರೆ….

ರೇವತಿ ನಿಖಿಲ್ ಜೊತೆ ಮೊದಲ‌ ರೀಲ್ಸ್ ಮಾಡಿದ ರೈಡರ್ ! Read More »

Scroll to Top