Karnataka Bhagya

ವಾಣಿಜ್ಯ

ಕನ್ನಡ ಮಾತನಾಡೋದನ್ನ ಮರೆತ್ರಾ ರಶ್ಮಿಕಾ

ಭಾರತೀಯ ಸಿನಿಮಾರಂಗದಲ್ಲಿ ಭಾರಿ ಸದ್ದು ಮಾಡಿರೋ ಸಿನಿಮಾ‌ ಪುಷ್ಪ…ಪುಷ್ಪ ಸಿನಿಮಾ‌ ತೆರೆಗೆ ಬರಲು ಸಿದ್ದವಾಗಿದ್ದು ಚಿತ್ರ ಪ್ರಚಾರಕ್ಕಾಗಿ ಸಿನಿಮಾತಂಡ ಬೆಂಗಳೂರಿಗೆ ಭೇಟಿ ಕೊಟ್ಟಿದೆ….ಪುಷ್ಪ ಸಿನಿಮಾದಸುದ್ದಿಗೋಷ್ಠಿಯಲ್ಲಿ ಅಲ್ಲು ಅರ್ಜುನ್ ,ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಭಾಗಿ ಆಗಿದ್ದಾರೆ… ಪುಷ್ಪ ಡಿ.17 ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗ್ತಿದೆ….ಪುಷ್ಪ ಚಿತ್ರ ಎರಡು ಭಾಗಗಳಲ್ಲಿ ಬರ್ತಿದ್ದು ಇದೇ ವಾರ ಮೊದಲನೆ ಭಾಗ ರಿಲೀಸ್ ಆಗ್ತಿದೆ..ಹೀಗಾಗಿ ಬೆಂಗಳೂರಿನಲ್ಲಿ ಪುಷ್ಪ ಸಿನಿಮಾ ಪ್ರಚಾರಕ್ಕೆ ಆಗಮಿಸಿದೆ… ಸುದ್ದಿಗೋಷ್ಠಿಯಲ್ಲಿ ನಟಿ ರಶ್ಮಿಕಾ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ…ತೆಲುಗು ಮಾತಾಡಿ ಮಾತಾಡಿ ನನಗೆ ಕನ್ನಡನೇ ಬರ್ತಿಲ್ಲ ಎಂದಿದ್ದಾರೆ ರಶ್ಮಿಕಾ..ರಶ್ಮಿಕಾ‌‌ ಮಾತು ಕೇಳಿ ಕನ್ನಡ ಮಾತನಾಡೋದನ್ನ ಮರೆತಿದ್ದಾರಾ ಅನ್ನೋ ಅನುಮಾನ ಕನ್ನಡಿಗರಿಗೆ ಮೂಡಿದೆ… ಪುಷ್ಪ ಸಿನಿಮಾ ಬಗ್ಗೆ ಮಾತನಾಡಲು ಶುರು ಮಾಡಿದ ರಶ್ಮಿಕಾ ತೆಲುಗು ಮಾತನಾಡಿ ಕನ್ನಡವೇ ಬರ್ತಿಲ್ಲ ಎಂದಿದ್ದಾರೆ..ಅದಷ್ಟೇ ಅಲ್ಲದೆ ಪುಷ್ಪ ಕನ್ನಡ ವರ್ಷನ್ ಗೆ ನಾನು ಕನ್ನಡದಲ್ಲಿ ಡಬ್ಬಿಂಗ್ ಮಾಡಬೇಕು ಅಂದುಕೊಂಡಿದ್ದೆ..ಆದರೆ ಟೈಂ ಸಿಗಲಿಲ್ಲ.. ಹೀಗಾಗಿ ಬೇರೆಯವರು ಡಬ್ಬಿಂಗ್ ಮಾಡಿದ್ದಾರೆ.ಪಾರ್ಟ್ 2 ಗೆ ನಾನೆ ಕನ್ನಡಯಸಲ್ಲಿ ಡಬ್ಬಿಂಗ್ ಮಾಡುತ್ತೇನೆ ಎಂದು ಹೇಳುವ‌ ಮೂಲಕ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ರಶ್ಮಿಕಾ…..

ಕನ್ನಡ ಮಾತನಾಡೋದನ್ನ ಮರೆತ್ರಾ ರಶ್ಮಿಕಾ Read More »

ಪುನೀತ್ ಮನೆಗೆ ಹೋಗಲ್ಲ ಎಂದ ಅಲ್ಲು ಅರ್ಜುನ್ !

ಪುನೀತ್​ ರಾಜ್​ಕುಮಾರ್ ನಿಧನ ಹೊಂದಿರುವ ವಿಚಾರ ಕೋಟ್ಯಂತರ ಜನರಿಗೆ ಬೇಸರ ಮೂಡಿಸಿದೆ. ಪರಭಾಷೆಯ ಸ್ಟಾರ್​ಗಳು ಕೂಡ ಪುನೀತ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂತ್ಯ ಸಂಸ್ಕಾರದಲ್ಲಿ ಭಾಗಿ‌ಯಾಗಲು ಸಾಧ್ಯವಾಗದವರಿ ಅಪ್ಪು ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸುತ್ತಿದ್ದಾರೆ…ಆದರೆ ಅಲ್ಲು ಅರ್ಜುನ್ ಮಾತ್ರ ಪುನೀತ್ ಮನೆಗೆ ತೆರಳಿಲ್ಲ. ಈ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದರು…ಈ ಬಗ್ಗೆ ಮಾತನಾಡಿರೋ ಅಲ್ಲು ಅರ್ಜುನ್ ನಾನು ಈಗ ಪುನೀತ್ ಮನೆಗೆ ಭೇಟಿ ನೀಡಲ್ಲ ಎಂದಿದ್ದಾರೆ.. ಪುಷ್ಟ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿರೋ ಅಲ್ಲು ಅರ್ಜುನ್ ಈ ಬಗ್ಗೆ ಮಾತನಾಡಿದ್ದಾರೆ..ಪುನೀತ್​ ರಾಜ್​ಕುಮಾರ್​ ಕುಟುಂಬಕ್ಕೆ ನನ್ನ ಸಂತಾಪ ಇದೆ. ಪುಷ್ಪ ಸಿನಿಮಾ ಕೆಲಸಗಳಿಂದ ಬೆಂಗಳೂರಿಗೆ ಬರೋಕೆ ಆಗಿಲ್ಲ. ಈಗ ‘ಪುಷ್ಪ’ ಸಿನಿಮಾ ಪ್ರಮೋಷನ್​ಗೆ ಬೆಂಗಳೂರಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗೋಕೆ ಇಷ್ಟಪಡುವುದಿಲ್ಲ. ‘ಪುಷ್ಪ’ ರಿಲೀಸ್​ ಆದ ನಂತರ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತೇನೆ. ಬಂದು ಇಡೀ ಕುಟುಂಬವನ್ನು ಭೇಟಿ ಆಗುತ್ತೇನೆ. ಇದು ಸೂಪರ್​ ಎಂದು ಹೇಳುವಂತಹ ವಿಚಾರ ಅಲ್ಲ. ಅದು ನನ್ನ ಕರ್ತವ್ಯ’ ಎಂದರು ಅಲ್ಲು ಅರ್ಜುನ್​… ಅಲ್ಲು ಅರ್ಜುನ್ ಅವ್ರ ನಡೆ ಅಭಿಮಾನಿಗಳಿಗೆ ಸರಿ‌ ಎನ್ನಿಸಿದೆ..ಯಾವುದೋ ಕೆಲಸಕ್ಕೆ ಬಂದು ಮತ್ಯಾವುದೋ ಮಾಡುವುದು ಸರಿಯಲ್ಲ ಅನ್ನೋದು ಅಲ್ಲು ಅರ್ಜುನ್ ಲೆಕ್ಕಾಚಾರ…

ಪುನೀತ್ ಮನೆಗೆ ಹೋಗಲ್ಲ ಎಂದ ಅಲ್ಲು ಅರ್ಜುನ್ ! Read More »

ಕನ್ನಡ ಮಾಧ್ಯಗಳಿಗೆ ಕ್ಷಮೆ ಕೇಳಿದ ಅಲ್ಲು ಅರ್ಜುನ್ !

ಟಾಲಿವುಡ್ ನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ…ಐದು ಭಾಷೆಯಲ್ಲಿ ರಿಲೀಸ್ ಆಗ್ತಿರೋ ಪುಷ್ಪ ಚಿತ್ರದಲ್ಲಿ ಕನ್ನಡದ ಸ್ಟಾರ್ ಗಳು ಅಭಿನಯ ಮಾಡಿದ್ದು ಕನ್ನಡದಲ್ಲಿಯೂ ಸಿನಿಮಾ ಬಿಗ್ ಓಪನಿಂಗ್ ಪಡೆದುಕೊಳ್ಳಲಿದೆ… ಈಗಾಗಲೇ ಸಿನಿಮಾತಂಡ ಚಿತ್ರದ ಪ್ರಚಾರಕ್ಕಾಗಿ ಪ್ರತಿ ರಾಜ್ಯಗಳಿಗೂ ಭೇಟಿಕೊಟ್ಟು ಸಿನಿಮಾವನ್ನ ಪ್ರಚಾರ ಮಾಡುತ್ತಿದ್ದಾರೆ…ಅದೇ ರೀತಿ ಪುಷ್ಪ ಸಿನಿಮಾತಂಡ ಬೆಂಗಳೂರಿಗೆ ಭೇಟಿಕೊಟ್ಟು ಪ್ರಚಾರ ಕೆಲಸ ಶುರು ಮಾಡಿದೆ..ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಟ ಅಲ್ಲು ಅರ್ಜುನ್ ಕನ್ನಡ ಮಾಧ್ಯಮದವರಿಗೆ ಕ್ಷಮೆ ಕೇಳಿದ್ದಾರೆ… ಸಿನಿಮಾ ಪ್ರಚಾರ ಮಾಡಲು ಬಂದು ಕ್ಷಮೆ ಯಾಕ್ ಕೇಳಿದ್ರು ಅಂತ ಆಶ್ಚರ್ಯ ಪಡಬೇಡಿ…ಪುಷ್ಪ ಸಿನಿಮಾ ಸುದ್ದಿಗೋಷ್ಠಿ ಕರೆದಿದ್ದು 11ಗಂಟೆಗೆ ಆದರೆ ಅಲ್ಲು ಅರ್ಜುನ್ ಕಾರ್ಯಕ್ರಮಕ್ಕೆ ಆಗಮಿಸಿದ್ದು 1ಗಂಟೆಗೆ ಹಾಗಾಗಿ ಅಲ್ಲು ಅರ್ಜುನ್ ಮಾತು ಆರಂಭಿಸೋ ಮುನ್ನವೇ ಮಾಧ್ಯಮ ಪ್ರತಿನಿಧಿಗಳು ತಡವಾಗಿ ಬಂದಿದಕ್ಕೆ ಕ್ಲಾಸ್ ತೆಗೆದುಕೊಂಡ್ರು..ಆ ನಂತ್ರ ಅಲ್ಲು ಅರ್ಜುನ್ ತನಗೆ ಈ ವಿಚಾರ ತಿಳಿದೇ ಇಲ್ಲ…ಎಂದು ಕ್ಷಮೆ ಕೇಳಿದರು. ‘ದಯವಿಟ್ಟು ಕ್ಷಮಿಸಿ, ನನಗೆ ಈ ವಿಚಾರ ಗೊತ್ತಿರಲಿಲ್ಲ. ನಾನು ಖಾಸಗಿ ವಿಮಾನದಲ್ಲಿ ಬಂದೆ. ವಾತಾವರಣದಲ್ಲಿ ಫಾಗ್ ಹೆಚ್ಚಾಗಿದ್ದರೆವಿಮಾನ ಟೇಕ್‌ ಆಫ್‌ ಆಗುವುದಿಲ್ಲ. ಆದ್ದರಿಂದ ಸ್ವಲ್ಪ ಲೇಟ್‌ ಆಯ್ತು. ನನಗೆ ಯಾರಿಗೂ ನೋವು ಮಾಡಲು ಇಷ್ಟ ಇಲ್ಲ. ಹಾಗಾಗಿ ಕ್ಷಮೆ ಕೇಳುತ್ತೇನೆ. ತುಂಬಾ ಹೊತ್ತು ಕಾಯಿಸಿದ್ದಕ್ಕೆ ಎಲ್ಲಾ ಮಾಧ್ಯಮಗಳಿಗೂ ಕ್ಷಮೆ ಯಾಚಿಸುತ್ತೇನೆ. ಧನ್ಯವಾದಗಳು’ ಎಂದರು…

ಕನ್ನಡ ಮಾಧ್ಯಗಳಿಗೆ ಕ್ಷಮೆ ಕೇಳಿದ ಅಲ್ಲು ಅರ್ಜುನ್ ! Read More »

ಸತ್ತ ನಂತ್ರವೂ ದಾಖಲೆ ಬರೆದ ಪವರದ ಸ್ಟಾರ್ ಪುನೀತ್‌

ಪುನೀತ್‌ ರಾಜ್‌ಕುಮಾರ್ ಇನ್ನಿಲ್ಲ ಅನ್ನೋ ಮಾತನ್ನ ನಂಬಲು ಇಂದಿಗೂ ಯಾರು ತಯಾರಿಲ್ಲ..‌ಪುನೀತ್ ಸತ್ತ ನಂತ್ರ ಸೈಲೆಂಟ್ ಆಗಿಯೇ ಅಪ್ಪು ಮಾಡಿದ ಕೆಲಸಗಳು ಬೆಳಕಿಗೆ ಬಂದವು. ಅಪ್ಪು ಅಂತಿಮ ದರ್ಶನ ಪಡೆಯಲು ಬಂದ 25 ಲಕ್ಷಕ್ಕೂ ಹೆಚ್ಚಿನ ಜನರಲ್ಲಿ ಬಾಯಲ್ಲಿತ್ತು ಅಪ್ಪು ಸಹಾಯ ಮಾಡಿದ ಸತ್ಯ. ಹೇಗೆ ಸಹಾಯ ಮಾಡಿದ್ದರು, ಯಾವ ರೀತಿ ನೋಡಿಕೊಂಡರು ಎಂದು ಅಭಿಮಾನಿಗಳೇ ಹೇಳುತ್ತಿದ್ದರು. ಬದುಕಿದ್ದಾಗ ಅಪ್ಪು ಸಾಕಷ್ಟು ದಾನ‌ಧರ್ಮಗಳನ್ನ ಮಾಡಿದ್ದರು…ನಂತರ ಅವೆಲ್ಲವೂ ಹೊರಗೆ ಬಂದು ಪವರ್ ಸ್ಟಾರ್ ರನ್ನ ಕೊಂಡಾಡಿದ್ರು…ಬದುಕಿದ್ದಾಗ ಸಾಕಷ್ಟು ದಾಖಲೆಗಳನ್ನ ಮಾಡಿದ ಪುನೀತ್ ಸತ್ತ ನಂತ್ರವೂ ದಾಖಲೆ ಬರೆದಿದ್ದಾರೆ…. ಪ್ರತಿ ವರ್ಷವೂ ಗೂಗಲ್ ಒಂದು ಲಿಸ್ಟ್ ರಿವೀಲ್ ಮಾಡುತ್ತದೆ. ವರ್ಷದ ಕೊನೆಯಲ್ಲಿ ಗೂಗಲ್ ನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆಗಿರುವ ವ್ಯಕ್ತಿಗಳು ಯಾರೆಂದು ಅನೌನ್ಸ್ ಮಾಡುತ್ತದೆ.. ಸಾಮಾನ್ಯಾವಾಗಿ ಹೆಚ್ಚು ಬಾಲಿವುಡ್ ಸ್ಟಾರ್ ನಟರು ಈ ಲಿಸ್ಟ್‌ನಲ್ಲಿ ಇರುತ್ತಿದ್ದರು…ಆದರೆ ಈ ವರ್ಷ ನಮ್ಮ ಹೆಮ್ಮೆಯ ಕನ್ನಡಿಗ ಪುನೀತ್ ರಾಜ್‌ಕುಮಾರ್‌ ಎಂದು ರಿವೀಲ್ ಮಾಡಿದೆ. ಹೀಗಾಗಿ ಗೂಗಲ್‌ಗೂ ಗೊತ್ತು ನಮ್ಮ ಅಪ್ಪು ಗತ್ತು ಎಂದು ಅಭಿಮಾನಿಗಳು ಈ ವಿಚಾರವನ್ನು ವೈರಲ್ ಮಾಡುತ್ತಿದ್ದಾರೆ..ಈ ಮೂಲಕ‌ ಅಪ್ಪು ಮತ್ತೆ‌ ದಾಖಲೆ ಬರೆದಿದ್ದಾರೆ…

ಸತ್ತ ನಂತ್ರವೂ ದಾಖಲೆ ಬರೆದ ಪವರದ ಸ್ಟಾರ್ ಪುನೀತ್‌ Read More »

ಬಡವ ರಾಸ್ಕಲ್ ನೋಡಿ ಮೆಚ್ಚಿದ ಸಿನಿಮಾ ಪ್ರೇಕ್ಷಕ

ಡಾಲಿ ಧನಂಜಯ ಅಭಿನಯದ “ಬಡವ ರಾಸ್ಕಲ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರೀಕ್ಷೆಗೂ ಮೀರಿ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ.‌ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದು ಎಲ್ಲರ ಗಮನ ಸೆಳೆಯುತ್ತಿದೆ… ಟ್ರೇಲರ್ ನೋಡಿದ್ರೆ ತಿಳಿಯುತ್ತೆ ಇದೊಂದು ಮಧ್ಯಮ ವರ್ಗದ ಯುವಕನ ಕಥೆ ಅನ್ನೋದು… ಆಗಷ್ಟೇ ವಿದ್ಯಾಭ್ಯಾಸ ಮುಗಿಸಿದ ಯುವಕ ಕೆಲಸಕ್ಕಾಗಿ ಹುಡುಕುವ ಸನ್ನಿವೇಶಗಳೇ ಮುಖ್ಯ ಕಥಾವಸ್ತು. ಅಪ್ಪ-ಅಮ್ಮನ‌ ಜೊತೆ ‌ಮಗನ‌ ಬಾಂಧವ್ಯವನ್ನು ಮನತಟ್ಟುವಂತೆ ನಿರ್ದೇಶಕರು ತೋರಿಸಿದ್ದಾರೆ. ಕೆ.ಆರ್.ಜಿ‌ ಸ್ಟುಡಿಯೋದವರು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದು… ಇದೇ 24ರಂದು ಚಿತ್ರ ತೆರೆಗೆ ಬರಲಿದೆ. ಚಿತ್ರಕ್ಕೆ ಶಂಕರ್ ನಿರ್ದೇಶನ‌ ಮಾಡಿದ್ದು ನಟ ಧನಂಜಯ ತಮ್ಮದೇ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ…. ಚಿತ್ರದಲ್ಲಿ ಅಮೃತ ಅಯ್ಯಂಗಾರ್. ರಂಗಾಯಣ ರಘು. ತಾರಾ ಅನ್ನು ಅನೇಕರು ಅಭಿನಯ ಮಾಡಿದ್ದಾರೆ‌…ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ…ಈ ಸಿನಿಮಾ‌‌ ಮೂಲಕ‌ ಧನಂಜಯ ಅವ್ರಿಗೆ ಪಕ್ಕನ ಮನೆ‌ ಹುಡುಗ ಅನ್ನೋ ಚಾರ್ಮ್ ಸಿಗಲಿದೆ..ಈಗಾಗಲೇ ಸಾಕಷ್ಟು ಪಾತ್ರಗಳನ್ನ ನಿರ್ವಹಿಸಿರೋ ಡಾಲಿ ಈ‌ಚಿತ್ರದಲ್ಲಿ ನಾರ್ಮಲ್ ಸಿಂಪಲ್ ಹುಡುಗನಾಗಿ ಮಿಂಚಲಿದ್ದಾರೆ….

ಬಡವ ರಾಸ್ಕಲ್ ನೋಡಿ ಮೆಚ್ಚಿದ ಸಿನಿಮಾ ಪ್ರೇಕ್ಷಕ Read More »

ಬಿಕಿನಿ ಫೋಟೋ ಮೂಲಕ‌ ಪಡ್ಡೆಗಳ‌ ನಿದ್ದೆಗೆಡಿಸಿದ ಇಲಿಯಾನ

ಗೋವಾದ ಸುಂದರಿ ಟಾಲಿವುಡ್ ನ‌ ಬ್ಯೂಟಿ ಇಲಿಯಾನ ಸದ್ಯ ಸಖತದ ಸುದ್ದಿಯಲ್ಲಿದ್ದಾರೆ…ಯೆಸ್ ಇಲಿಯಾನ ಸುದ್ದಿಯಲ್ಲಿರೋದು ಸಿನಿಮಾ‌ ವಿಚಾರದಲ್ಲಿ ಅಲ್ಲ ಸದ್ಯ ಇಲಿಯಾನ ಸುದ್ದಿಯಲ್ಲಿರೋದು ತಾವು ಪೋಸ್ಟ್ ಮಾಡಿರೋ ಫೋಟೋಗಳ ಮೂಲಕ ಇತ್ತೀಚಿನ ದಿನಗಳಲ್ಲಿ ಇನ್ ಸ್ಟಾಗ್ರಾಂನಲ್ಲಿ ಇಲಿಯಾನಾ ತಮ್ಮ ಗ್ಲಾಮರಸ್ ಆದ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ … ತೆಲುಗಿನಲ್ಲಿ ನಟಿಸುತ್ತಲೇ..ಹಿಂದಿ ಸಿನಿಮಾಗಳಲ್ಲೂಈ ಇಲಿಯಾನ ನಟಿಸುತ್ತಿದ್ದರು. ಬರ್ಫಿ’, ‘ಪಟ ಪೋಸ್ಟರ್ ನಿಖಲಾ ಹೀರೋ’, ‘ಮೇನ್ ತೇರಾ ಹೀರೋ’, ‘ರುಸ್ತುಂ’ ಸಿನಿಮಾಗಳಲ್ಲಿ ನಟಿಸಿ ಒಳ್ಳೆ ಹಿಟ್ ಗಿಟ್ಟಿಸಿಕೊಂಡಿದ್ದಾರೆ ಇಲಿಯಾನ ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ … ಆದರೆ ಹೆಚ್ಚು ಹೆಚ್ಚು ಪ್ರವಾಸಗಳಲ್ಲಿ ಬ್ಯುಸಿಯಾಗಿರುವ ಇಲಿಯಾನಾ ತಮ್ಮ ಬೋಲ್ಡ್ ಫೋಟೊಗಳನ್ನು ಶೇರ್ ಮಾಡುತ್ತಲೇ ಇದ್ದಾರೆ ಅದಷ್ಟೇ ಅಲ್ಲದೆ ಹೆಚ್ಚಾಗಿ ಬಿಕಿನಿಯಲ್ಲಿರುವ ಫೋಟೋಗಳನ್ನ ಶೇರ್ ಮಾಡುವ ಮೂಲಕ ಎಲ್ಲರ ಕಣ್ಣು ಕೆಂಪಾಗಿಸಿದ್ದಾರೆ ..

ಬಿಕಿನಿ ಫೋಟೋ ಮೂಲಕ‌ ಪಡ್ಡೆಗಳ‌ ನಿದ್ದೆಗೆಡಿಸಿದ ಇಲಿಯಾನ Read More »

ಒಂದೇ ದೇವರ ಮೊರೆ ಹೋಗಿದ್ದೇಕೆ ಕಿಚ್ಚ-ದಚ್ಚು ?

ಕಿಚ್ಚ ಸುದೀಪ್ ಫ್ಯಾಮಿಲಿ ಸಮೇತರಾಗಿ ಇತ್ತೀಚೆಗಷ್ಟೇ ಕರಾವಳಿಯ ಸುತ್ತಾ ಮುತ್ತಲಿನ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು… ದೇವಾಲಯಗಳಲ್ಲೂ ಕಿಚ್ಚ ಹಾಗೂ ಪ್ರಿಯಾ ಸುದೀಪ್‌ಅವ್ರಿಗೆ ದೇವಾಲಯಗಳಿಂದ ಸನ್ಮಾನ ಮಾಡಿ ಗೌರವಿಸಿದ್ರು…ಸುದೀಪ್‌ ನಂತ್ರ ಈಗ ದರ್ಶನ್ ಟೆಂಪಲ್ ರನ್ ಮಾಡ್ತಿದ್ದಾರೆ‌‌‌… ಹೌದು ನಟ ದರ್ಶನ್ ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ…ಮೂಕಾಂಬಿಕಾ ‌ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು…ಆನಂತ್ರ ದೇವಾಲಯದ ಪ್ರಧಾನ ಅರ್ಚಕರ ಮನೆಗೆ ಭೇಟಿಕೊಟ್ಟು ಕೆಲ ಸಮಯ ಕಾಲ ಕಳೆದ್ರು…ಇನ್ನು ಸುದೀಪ್ ಕೂಡ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ರು..ಒಟ್ಟಾರೆ ಇಬ್ಬರು ಸ್ಟಾರ್ ಗಳು ಕಷ್ಟ ಪರಿಹಾರಕ್ಕೆ ಒಂದೇ ದೇವರ ಮೊರೆ‌ ಹೋಗಿದ್ದಾರೆ…

ಒಂದೇ ದೇವರ ಮೊರೆ ಹೋಗಿದ್ದೇಕೆ ಕಿಚ್ಚ-ದಚ್ಚು ? Read More »

ಅರ್ಜುನ್ ಸರ್ಜಾಗೆ ಕೊರೋನಾ ಪಾಸಿಟಿವ್

ನಟ ಅರ್ಜುನ್ ಸರ್ಜಾಗೆ ಕೋರನ ಪಾಸಿಟಿವ್ ಆಗಿರುವುದು ದೃಢವಾಗಿದೆ.. ಈ ವಿಚಾರವನ್ನ ಖುದ್ದು ಅರ್ಜುನ್ ಸರ್ಜಾ ಅವರೇ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ .. ನನಗೆ ಸೋಂಕು ತಗುಲಿದ್ದು ಅದಕ್ಕಾಗಿ ನಾನು ಅನುಸರಿಸಬೇಕಾದ ಎಲ್ಲ ರೀತಿಯ ಕ್ರಮಗಳನ್ನ ತೆಗೆದುಕೊಂಡಿದ್ದೇನೆ.. ಅದಷ್ಟೇ ಅಲ್ಲದೆ ನಾನು ಮನೆಯಲ್ಲಿಯೇ ಐಸೋಲೇಟ್ ಆಗಿದ್ದೇನೆ ..ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಂಥ ಪ್ರತಿಯೊಬ್ಬರು ಕರೋನ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅರ್ಜುನ್ ಸರ್ಜಾ ಮನವಿ ಮಾಡಿದ್ದಾರೆ… ಅರ್ಜುನ್ ಸರ್ಜಾ ಅವ್ರಿಗೆ ಕೊರೋ‌ನಾ ಸೋಂಕು ತಗುಲಿರೋದು ಇದೇ ಮೊದಲಲ್ಲ.. ಈ ಹಿಂದೆಯೂ ಅರ್ಜುನ್ ಸರ್ಜಾ ಅವ್ರಿಗೆ ಕೊರೋನಾ ಪಾಸಿಟಿವ್ ಆಗಿತ್ತು..

ಅರ್ಜುನ್ ಸರ್ಜಾಗೆ ಕೊರೋನಾ ಪಾಸಿಟಿವ್ Read More »

ಪ್ರೋ ಕಬ್ಬಡಿ ಅಖಾಡಕ್ಕೆ ಕಿಚ್ಚನ ಎಂಟ್ರಿ…

ನಟ ಕಿಚ್ಚ ಸುದೀಪ್ ಸಿನಿಮಾದಲ್ಲಿ ಅಭಿನಯ ಮಾಡೋದ್ರ ಜೊತೆಗೆ ಕ್ರೀಡೆಯಲ್ಲಿಯೂ ಸಾಕಷ್ಟು ಆಸಕ್ತಿ ಹೊಂದಿದ್ದಾರೆ… ಆಕ್ಟರ್ ಆಗಿಲ್ಲ ಅಂದಿದ್ರೆ ಕ್ರಿಕೆಟರ್ ಆಗ್ತಿದ್ದೆ ಅನ್ನೋದು ಕಿಚ್ಚನ‌ ಮನದಾಳದ ಮಾತು‌..ಸದ್ಯ ಈಗ ಕಿಚ್ಚ ಕಬ್ಬಡಿಯಲ್ಲಿ ಬ್ಯುಸಿ ಆಗಿದ್ದಾರೆ ..ಸುದೀಪ್ ಕಬ್ಬಡಿ ಆಡ್ತಿದ್ದಾರಾ…ಇಲ್ಲ ಕಬ್ಬಡಿ ಪ್ರಮೋಷನ್ ಮಾಡ್ತಿದ್ದಾರೆ… ಸುದೀಪ್ ಬೆಂಗಳೂರು ಬುಲ್ಸ್ ಪ್ರೋಕಬಡ್ಡಿ ತಂಡವನ್ನ ಬೆಂಬಲಿಸಿ ಪ್ರೋಮೋದಲ್ಲಿ ನಟಿಸಿ ಘರ್ಜಿಸಿದ್ದಾರೆ. ಈ‌ಬಾರಿಯ ಪ್ರೋ ಕಬ್ಬಡಿಯ‌ ಬೆಂಗಳೂರು ‌ತಂಡಕ್ಕೆ ಕಿಚ್ಚ‌ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ …ಅದಕ್ಕೆ ಸಂಬಂದಿಸಿದ ಪ್ರೋಮೋ ರಿಲೀಸ್ ಆಗಿದ್ದು ಕಿಚ್ಚ ಪ್ರೋಮೋದಲ್ಲಿ ಖಡಕ್ ಆಗಿ ಕಾಣಿಸ್ತಿದ್ದಾರೆ…. ಇನ್ನು ಕೆಲವೇ ದಿನಗಳಲ್ಲಿ ಪ್ರೋ ಕಬಡ್ಡಿ ಲೀಗ್ ಟೂರ್ನಿ ಆರಂಭವಾಗಲಿದೆ…ಅದಕ್ಕಾಗಿ ಬೆಂಗಳೂರು ಬುಲ್ಸ್ ಸಖತ್ತಾಗಿ ಸಿದ್ಧವಾಗುತ್ತಿದೆ. ಸೂಪರ್ ಸ್ಟಾರ್ ರೇಡರ್ ಪವನ್ ಕುಮಾರ್ ಶೆಹ್ರಾವತ್ ಅವರ ಜೊತೆ ಇನ್ನೂ ಕೆಲ ಪ್ರಮುಖ ರೇಡರ್ಗಳನ್ನ ಬುಲ್ಸ್ ತಂಡ ಹರಾಜಿನಲ್ಲಿ ಕೊಂಡು ತಂದಿದೆ. ಈಗ ಫುಲ್ ಚಾರ್ಜ್ ಆಗಿರುವ ಬೆಂಗಳೂರು ಬುಲ್ಸ್ನ ಫ್ಯಾನ್ಸ್ಗೆ ಕಿಚ್ಚ ಸುದೀಪ್ ಮತ್ತಷ್ಟು ಎನರ್ಜಿ ಕೊಟ್ಟಿದ್ದಾರೆ…

ಪ್ರೋ ಕಬ್ಬಡಿ ಅಖಾಡಕ್ಕೆ ಕಿಚ್ಚನ ಎಂಟ್ರಿ… Read More »

ಬಿಗ್ ಸೀಕ್ರೆಟ್ ರಿವೀಲ್: ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಅಪ್ಪು ಪಾತ್ರಕ್ಕೆ ಅವರದ್ದೇ ವಾಯ್ಸ್… ಅದು ಹೇಗೆ ಗೊತ್ತಾ..!???

ನಾವೆಲ್ಲರೂ ತಿಳಿದಿರುವಂತೆ ಅಪ್ಪು ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಸಿನಿಮಾ ‘ಲಕ್ಕಿಮ್ಯಾನ್’. ಈ ಚಿತ್ರದ ನಾಯಕ ನಟ ಡಾರ್ಲಿಂಗ್ ಕೃಷ್ಣ. ಈ ಚಿತ್ರ ಅಪ್ಪು ಅಭಿನಯಿಸಿರುವ ಕೊನೆಯ ಚಿತ್ರ. ಅಪ್ಪು ನಾಯಕ ನಟನಾಗಿ ಅಭಿನಯಿಸಿರುವ ಕೊನೆಯ ಚಿತ್ರ ಜೇಮ್ಸ್ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಲಕ್ಕಿಮ್ಯಾನ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಪ್ಪು ಬಹಳಷ್ಟು ಆಸೆ ಕನಸುಗಳು ಕೈಗೂಡುವ ಮುನ್ನವೇ ನಮ್ಮನ್ನು ಅಗಲಿದರು. ಆ ನೋವಿನಿಂದ ಕನ್ನಡ ಜನತೆ ಎಂದೂ ಹೊರಬರಲು ಸಾಧ್ಯವಿಲ್ಲ. ಲಕ್ಕಿಮ್ಯಾನ್ ಚಿತ್ರದ ಅಪ್ಪು ಅವರ ಪಾತ್ರದ ಡಬ್ಬಿಂಗ್ ಮುಂಚೆಯೇ ಅವರಿಲ್ಲವಾದರು. ಕೊಂಚ ಸಮಾಧಾನಕರ ವಿಷಯ ಏನೆಂದರೆ ಅಪ್ಪು ಅವರ ವಾಯ್ಸ್ ಅನ್ನೇ ಡಬ್ಬಿಂಗ್ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ಇದು ಹೇಗೆ ಅಪ್ಪು ಇಲ್ಲದಿರುವಾಗ ಎಂಬ ಪ್ರಶ್ನೆಗೆ ಉತ್ತರ ಚಿತ್ರ ತಂಡ ನೀಡಿದೆ. ಅಪ್ಪು ಅವರು ಲಕ್ಕಿಮ್ಯಾನ್ ಚಿತ್ರದಲ್ಲಿ ಅಭಿನಯಿಸಿರಿವ ಬಹತೇಕ ಚಿತ್ರೀಕರಣವನ್ನು ಇನ್ಡೋರ್ನಲ್ಲಿ ಮಾಡಿದ್ದಾರೆ. ಇದರಿಂದ ಅಪ್ಪು ಅವರ ವಾಯ್ಸ್ ಸ್ಪಷ್ಟವಾಗಿ ರೆಕಾರ್ಡ್ ಆಗಿದ್ದು. ಉಳಿದ ಡಬ್ಬಿಂಗ್ ಕೆಲಸಕ್ಕೆ ಇದೇ ಅಪ್ಪು ಅವರ ವಾಯ್ಸ್ ಅನ್ನು ಬಳಸಿ ಕೊನೆಯ ಬಾರಿಗೆ ಅಭಿಮಾನಿಗಳು ತೆರೆ ಮೇಲೆ ಕೇಳಬಹದಾಗಿದೆ. ಇದು ಬಹಳ ನೋವಿನ ಹಾಗೂ ಕೊಂಚ ಸಮಾಧಾನ ನೀಡುವ ಸಂಗತಿ. ಈ ಚಿತ್ರವನ್ನು ಪ್ರಭುದೇವ ಅವರ ತಮ್ಮ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಪ್ಪು ಪ್ರಭುದೇವ ಅವರೊಟ್ಟಿಗೆ ಸಕತ್ ಸ್ಟೆಪ್ಸ್ ಹಾಕಿದ್ದಾರೆ. ಅಪ್ಪು ನೋಡಲು ಜೇಮ್ಸ್ ಹಾಗೂ ಲಕ್ಕಿಮ್ಯಾನ್ ಚಿತ್ರಕ್ಕಾಗಿ ಇಡೀ ಕರುನಾಡು ಕಾತುರದಿಂದ ಕಾಯುತ್ತಿದೆ.

ಬಿಗ್ ಸೀಕ್ರೆಟ್ ರಿವೀಲ್: ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಅಪ್ಪು ಪಾತ್ರಕ್ಕೆ ಅವರದ್ದೇ ವಾಯ್ಸ್… ಅದು ಹೇಗೆ ಗೊತ್ತಾ..!??? Read More »

Scroll to Top