Karnataka Bhagya

ವಿದೇಶ

ಸಾಕತ್ತಾಗಿದೆ ಯಂಗ್ ರೆಬೆಲ್ ಸ್ಟಾರ್ ಬುಲೆಟ್ ರೈಡ್

ತಮ್ಮ ನೆಚ್ಚಿನ ಸ್ಟಾರ್ ಗಳನ್ನ ಮೀಟ್ ಮಾಡಬೇಕು‌ ..ಅವ್ರಿಂದ ಫೋಟೋ .ಆಟೋಗ್ರಾಫ್ ಪಡ್ಕೊಬೇಕು ಅದಷ್ಟೇ ಅಲ್ಲದೆ ಸೆಲ್ಫಿ ತಗೊಬೇಕು. ಈ ರೀತಿಯ ಒಂದಿಷ್ಟು ಬೇಡಿಕೆಗಳು ಅಭಿಮಾನಿಗಳಿಗೆ ಇದ್ದೆ ಇರುತ್ತೆ…ಇನ್ನು ತಾವು ತೆಗೆದುಕೊಂಡ ಕಾರು. ಬೈಕ್. ಆಟೋಗಳನ್ನ ಸ್ಟಾರ್ ಗಳ ಬಳಿ ತೆಗೆದುಕೊಂಡು ಹೋಗಿ ಗಾಡಿ ಮೇಲೆ ಅವ್ರ ಆಟೋಗ್ರಾಫ್ ತೆಗೆದುಕೊಳ್ಳೋದು ಕಾಮನ್ ಅದೇ ರೀತಿಯಲ್ಲಿ ಇಂದು ದರ್ಶನ್ ಅಭಿಮಾನಿಗಳು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅವರನ್ನು ಭೇಟಿ ಮಾಡಿದ್ದಾರೆ ಹೊಸಕೋಟೆಯ ಪ್ರಸಾದ್ ಎಂಬುವರು ಅಭಿಮಾನಿ ಯಂಗ್ ರೆಬೆಲ್ ಅಭಿಷೇಕ್ ಅಂಬರೀಶ್ ಅವರನ್ನ ಭೇಟಿ ಮಾಡಿ ತಮ್ಮ ಹೊಸ ಗಾಡಿ ಬುಲೆಟನ್ನು ಅವರಿಗೆ ಓಡಿಸಲು ನೀಡಿದ್ದಾರೆ… ಬುಲೆಟ್ ಗಾಡಿ ಸವಾರಿ ಮಾಡಿದ ಅಭಿಷೇಕ್ ನಂತರ ಅಭಿಮಾನಿಯ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದೆ… ಸದ್ಯ ಅಭಿಷೇಕ್ ಅಂಬರೀಶ್ ಬ್ಯಾಡ್ ಮ್ಯಾನರ್ಸ್ ಬ್ಯುಸಿಯಾಗಿದ್ದು ಚಿತ್ರಕ್ಕೆ ಸುಕ್ಕಾ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಮಾಸ್ತಿ ಸಂಭಾಷಣೆ ಸಿನಿಮಾವಾಗಿದ್ದು ಚಿತ್ರವನ್ನ ಸುದಿ ನಿರ್ಮಾಣ ಮಾಡುತ್ತಿದ್ದಾರೆ…ಬೆಂಗಳೂರಿನ ಸುತ್ತ ಮುತ್ತ ಸಿನೆಮಾದ ಚಿತ್ರೀಕರಣ ನಡೆಯುತ್ತಿದೆ

ಸಾಕತ್ತಾಗಿದೆ ಯಂಗ್ ರೆಬೆಲ್ ಸ್ಟಾರ್ ಬುಲೆಟ್ ರೈಡ್ Read More »

ಯಶ್​ ನಟನೆಯ ‘ಕೆಜಿಎಫ್​ 2’ಗೆ ಹೆದರಿದ ಬಾಲಿವುಡ್​; ರಿಲೀಸ್​ ದಿನಾಂಕ ಮುಂದೂಡಿದ ಸ್ಟಾರ್​ ನಟ

ಏಪ್ರಿಲ್ 14ರಂದು ವರುಣ್ ಧವನ್ ಅಭಿನಯದ  ‘ಭೇಡಿಯಾ’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಈಗ ಈ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಲು ಸಿನಿಮಾ ತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ. ಯಶ್ (Yash) ನಟನೆಯ ‘ಕೆಜಿಎಫ್ 2’ (KGF Chapter 2) ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಸಣ್ಣಮಟ್ಟದಲ್ಲ. ಪ್ರಶಾಂತ್ ನೀಲ್ (Prashanth Neel) ಕಸುಬುದಾರಿಕೆ ಏನು ಎಂಬುದು ‘ಕೆಜಿಎಫ್’ ಮೂಲಕ ಪ್ರೇಕ್ಷಕರಿಗೆ ಗೊತ್ತಾಗಿದೆ. ಈ ಕಾರಣಕ್ಕೆ ‘ಕೆಜಿಎಫ್ ಚಾಪ್ಟರ್ 2’ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ರವೀನಾ ಟಂಡನ್ ನಟಿಸಿರುವುದರಿಂದ ಸಿನಿಮಾದ ಬಲ ಹೆಚ್ಚಿದೆ. ಈ ಎಲ್ಲಾ ಕಾರಣಕ್ಕೆ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋಕೆ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಏಪ್ರಿಲ್ 14ರಂದು ಚಿತ್ರ ರಿಲೀಸ್ ಆಗುತ್ತಿದೆ. ಈಗ ಬಾಲಿವುಡ್ನ ಸ್ಟಾರ್ ನಟನ ಸಿನಿಮಾವೊಂದು ಸದ್ದಿಲ್ಲದೆ ರಿಲೀಸ್ ದಿನಾಂಕ ಮುಂದೂಡಿದೆ. ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರ ಕ್ರಿಸ್​ಮಸ್​ ನಿಮಿತ್ತ ಡಿಸೆಂಬರ್ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ತೆರೆಗೆ ತರೋಕೆ ಪ್ಲ್ಯಾನ್​ ನಡೆದಿತ್ತು. ಅದು ಕೈಗೂಡಿಲ್ಲ. ಈಗ ಏಪ್ರಿಲ್​ 14ರಂದು ಆಮಿರ್​ ಖಾನ್​ ಸಿನಿಮಾ ರಿಲೀಸ್​ ಆಗುತ್ತಿದೆ. ಇದೇ ದಿನ ವರುಣ್​ ಧವನ್​ ಅಭಿನಯದ  ‘ಭೇಡಿಯಾ’ ಸಿನಿಮಾ ರಿಲೀಸ್​ ಆಗಬೇಕಿತ್ತು. ಆದರೆ, ಈಗ ಈ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಲು ಸಿನಿಮಾ ತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ. ‘ಕೆಜಿಎಫ್​’ ಬಾಲಿವುಡ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್​ 2’ ಗೆ ದೊಡ್ಡ ಓಪನಿಂಗ್​ ಸಿಗುವ ಸಾಧ್ಯತೆ ಇದೆ. ಈ ಮೊದಲಿನಿಂದಲೂ ‘ಭೇಡಿಯಾ’ ಚಿತ್ರತಂಡ ಯಶ್​ ಸಿನಿಮಾ ಎದುರು ಬರಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿ ಇತ್ತು ಎನ್ನಲಾಗಿದೆ. ಈಗ ಆಮಿರ್​ ಖಾನ್​ ಚಿತ್ರ ಕೂಡ ಅದೇ ದಿನ ಬರುತ್ತಿರುವುದಕ್ಕೆ ರಿಲೀಸ್​ ದಿನಾಂಕ ಮುಂದೂಡುವ ನಿರ್ಧಾರಕ್ಕೆ ಬಂದಿದೆ ಎಂಬುದನ್ನು ಖಚಿತಪಡಿಸಿವೆ ಬಾಲಿವುಡ್​ ಮೂಲಗಳು. ‘ಕೆಜಿಎಫ್​ 2’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅದರ ಬಗ್ಗೆ ನಿರೀಕ್ಷೆ ಹುಟ್ಟೋಕೆ ಹಲವು ಕಾರಣಗಳಿವೆ. ರೇಸ್​ನಲ್ಲಿ ಆಮಿರ್​ ಖಾನ್​ ಸಿನಿಮಾವನ್ನು ‘ಕೆಜಿಎಫ್​ 2’ ಹಿಂದಿಕ್ಕಬಹುದು ಎಂಬ ಮಾತು ಪ್ರೇಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ. ಈ ಎಲ್ಲಾ ಕಾರಣಕ್ಕೆ ‘ಭೇಡಿಯಾ’ ಚಿತ್ರ ಹಿಂದೆ ಸರಿದಿದೆ ಎನ್ನಲಾಗುತ್ತಿದೆ

ಯಶ್​ ನಟನೆಯ ‘ಕೆಜಿಎಫ್​ 2’ಗೆ ಹೆದರಿದ ಬಾಲಿವುಡ್​; ರಿಲೀಸ್​ ದಿನಾಂಕ ಮುಂದೂಡಿದ ಸ್ಟಾರ್​ ನಟ Read More »

ಮೈಸೂರಿನ ಅಭಿಮಾನಿಯ ಮದುವೆಗೆ ಬರ್ತಾರಾ ಅನುಷ್ಕಾ ? ಆಮಂತ್ರಣಕ್ಕೆ ಉತ್ತರ ಏನಿತ್ತು ಗೊತ್ತಾ.?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ತಾಯ್ತನವನ್ನ ಎಂಜಾಯ್ ಮಾಡುತ್ತಾ ಇತ್ತ ಸಿನಿಮಾಗಳತ್ತವೂ ಗಮನ ಹರಿಸುತ್ತಿದ್ದಾರೆ…ತನ್ನ ಅಭಿನಯದ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರೋ ನಟಿ ಅನುಷ್ಕಾ ಶರ್ಮಾ..ರಾಜ್ಯದಲ್ಲಿಯೂ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಹೊಂದಿರೋ ಅನುಷ್ಕಾ ಮೈಸೂರಿನ ಅಭಿಮಾನಿಯೊಬ್ಬರ ಮದುವೆಗೆ ಬರ್ತಾರೆ ಅನ್ನೋ ಸೂಚನೆ ಸಿಕ್ತಿದೆ… ಯೆಸ್ ಮೈಸೂರು ಮೂಲದ ನಯನಾ‌ ಹಾಗೂ ರುದ್ರೇಶ್ ಇದೇ ತಿಂಗಳು 24ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..ತಮ್ಮ ಮದುವೆಗೆ ಇಷ್ಟದ ನಟಿ ಬರಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದ ನಯನಾ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನ ಅನುಷ್ಕಾಗೆ ಕಳುಹಿಸೊಕೊಟ್ಟಿದ್ದಾರೆ… ಪತ್ರಿಕೆ ಹಾಗೂ ಅದರ ಜೊತೆಯಲ್ಲಿ ಸಿಹಿಯನ್ನು ಕಳುಹಿಸಿಕೊಟ್ಟಿದ್ದು ಇನ್ವಿಟೇಷನ್ ಅನ್ನು ಅನುಷ್ಕಾ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ..ಹಾಗೇ ವಧು ಹಾಗೂ ವರರಿಗೆ ಆಲ್ ದ ಬೆಸ್ಟ್ ಹೇಳಿದ್ದಾರೆ ಅನುಷ್ಕಾ…ಅನುಷ್ಕಾಗೂ ಬೆಂಗಳೂರಿಗೂ ಹಳೆಯ ನಂಟಿದೆ..ಹಾಗಾಗಿ ಕನ್‌ಡ ಪ್ರೀತಿಯೂ ಹೆಚ್ಚಿದೆ..ಹೌದು ಅನುಷ್ಕಾ ತಮ್ಮ ವಿದ್ಯಾಭ್ಯಾಸವನ್ನ ಬೆಂಗಳೂರಿನಲ್ಲಿ ಮುಗಿಸಿದ್ರು…

ಮೈಸೂರಿನ ಅಭಿಮಾನಿಯ ಮದುವೆಗೆ ಬರ್ತಾರಾ ಅನುಷ್ಕಾ ? ಆಮಂತ್ರಣಕ್ಕೆ ಉತ್ತರ ಏನಿತ್ತು ಗೊತ್ತಾ.? Read More »

ವಿಚ್ಛೇದನದ ನಂತರವೂ ಪತ್ನಿ ಜತೆಗಿನ ನೆನಪನ್ನ ಉಳಿಸಿಕೊಂಡ ನಾಗಚೈತನ್ಯ

ನಟ ನಾಗಚೈತನ್ಯ ಹಾಗೂ ಸಮಂತಾ ನಡುವಿನ ದಾಂಪತ್ಯದ ಬಿರುಕು ಈಗ ಎಲ್ಲರಿಗೂ ಗೊತ್ತಿರುವ ವಿಚಾರವೇ …ಇಬ್ಬರೂ ಅಧಿಕೃತವಾಗಿ ನಾವಿಬ್ಬರು ವಿಚ್ಛೇದನ ಪಡೆಯುತ್ತಿದ್ದೇನೆ ಎನ್ನುವುದನ್ನ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದರು …ಇಬ್ಬರಿಗೂ ಡಿವೋರ್ಸ್ ಆದ ನಂತರ ಇಬ್ಬರ ಮಧ್ಯೆ ಸಾಕಷ್ಟು ಸಮಸ್ಯೆಗಳಿದೆ ಎಂದು ಅಂತೆಕಂತೆಗಳು ಓಡಾಡಿತ್ತು… ಆದರೆ ನಾವಿಬ್ಬರೂ ಮುಂದಿನ ದಿನಗಳಲ್ಲಿ ಸ್ನೇಹಿತರಾಗಿರುತ್ತೇವೆ ಎಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಬರೆದುಕೊಂಡಿದ್ದರು … ಸದ್ಯ ವಿಚ್ಛೇದನದ ನಂತರ ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದು ಸಮಂತಾ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರೆ ನಾಗಚೈತನ್ಯ ಬ್ಯಾಕ್ ಟು ಬ್ಯಾಕ್ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ … ಸಾಮಾನ್ಯವಾಗಿ ವಿಚ್ಛೇದನ ಪಡೆದ ನಂತರ ತಮ್ಮ ಹಳೆ ನೆನಪುಗಳನ್ನು ಮರೆಯಲು ಪ್ರಯತ್ನಿಸುತ್ತಾರೆ ಅದರಂತೆಯೇ ಸಮಂತಾ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ನಾಗಚೈತನ್ಯ ಜೊತೆ ಇರುವ ಫೋಟೋಗಳನ್ನು ಡಿಲೀಟ್ ಮಾಡಿ ಆಗಿದೆ …ಆದರೆ ನಾಗಚೈತನ್ಯ ಮಾತ್ರ ತನ್ನ ಪತ್ನಿಯೊಂದಿಗಿನ ಸಿಹಿ ನೆನಪುಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ … ಹೌದು ನಟ ನಾಗಚೈತನ್ಯ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಸಮಂತಾ ಜೊತೆಗಿನ ಫೋಟೋಗಳನ್ನು ಯಾವುದನ್ನೂ ಡಿಲೀಟ್ ಮಾಡದೆ ಹಾಗೇ ಉಳಿಸಿಕೊಂಡಿದ್ದಾರೆ ಇದನ್ನ ನೋಡಿರುವ ನಾಗಚೈತನ್ಯ ಅಭಿಮಾನಿಗಳು ನಾಗಚೈತನ್ಯ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ …

ವಿಚ್ಛೇದನದ ನಂತರವೂ ಪತ್ನಿ ಜತೆಗಿನ ನೆನಪನ್ನ ಉಳಿಸಿಕೊಂಡ ನಾಗಚೈತನ್ಯ Read More »

ಪತಿಯ ಕನಸನ್ನ ನನಸು ಮಾಡಲು ಸಿದ್ಧರಾದ ಪುನೀತ್ ಪತ್ನಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇವಲ ಸಿನಿಮಾಗಳಲ್ಲಿ ಅಭಿನಯಿಸುವುದು ಮಾತ್ರವಲ್ಲದೆ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದರೂ ತಮ್ಮದೇಯಾದಂತಹ ನಿರ್ಮಾಣ ಹಾಗೂ ಆಡಿಯೋ ಸಂಸ್ಥೆಯನ್ನ ಹುಟ್ಟುಹಾಕಿದ್ದರು ಪುನೀತ್ ರಾಜ್ ಕುಮಾರ್ … ಪಿಆರ್ ಕೆ ಹೆಸರಿನಲ್ಲಿ ನಿರ್ಮಾಣ ಹಾಗೂ ಆಡಿಯೋ ಸಂಸ್ಥೆಯನ್ನು ಆರಂಭಿಸಿದ ಪುನೀತ್ ರಾಜಕುಮಾರ್ ಅದರ ಅಡಿಯಲ್ಲಿಯೇ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿ ಬಿಡುಗಡೆಯನ್ನು ಮಾಡಿದರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನಿರ್ಮಾಣ ಮಾಡಲು ಸಿದ್ಧತೆಯನ್ನು ಮಾಡಿಕೊಂಡಿದ್ದರು ಅಪ್ಪು ಅಕಾಲಿಕ ಮರಣದಿಂದ ಈಗಾಗಲೇ ಶುರುವಾಗಬೇಕಿದ್ದ ಮತ್ತು ಶುರುವಾಗಿದ್ದ ಸಿನಿಮಾಗಳ ಕಥೆ ಏನು ಅನ್ನೋದು ನವನಿರ್ದೇಶಕರ ಚಿಂತೆ ಆಗಿತ್ತು… ಆದರೆ ಈಗ ಪಿಆರ್ ಕೆ ಸಂಸ್ಥೆ ಯಿಂದ ಈ ಬಗ್ಗೆ ಮಹತ್ವದ ನಿರ್ಧಾರವೊಂದು ಹೊರಬಿದ್ದಿದೆ .. ಪಿಆರ್ ಕೆ ಸಂಸ್ಥೆ ಯಿಂದ ಅವಕಾಶ ಪಡೆದುಕೊಂಡಿದ್ದ ನಿರ್ದೇಶಕರು ಹಾಗೂ ಕಲಾವಿದರಿಗೆ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಮಾಧಾನ ತರುವಂತಹ ಸುದ್ದಿಯೊಂದನ್ನು ನೀಡಿದ್ದಾರೆ .. ನಾವು ಮತ್ತೆ ಕೆಲಸ ಆರಂಭಿಸುತ್ತೇವೆ ಎಂದು ಪಿಆರ್ ಕೆ ಸಂಸ್ಥೆ ತಿಳಿಸಿದೆ…ನಮಗೆ ಹಿಂದಿನಿದನ್ನುಬದಲಿಸಲು ಅಸಾಧ್ಯವಾಗಿದೆ.. ಆದರೆ ಪುನೀತ್ ರಾಜ್ ಕುಮಾರ್ ಕೊಟ್ಟಿರುವ ಸ್ಫೂರ್ತಿ ಹಾಗೂ ಉತ್ಸಾಹದೊಂದಿಗೆ ಪಿಆರ್ ಕೆ ಪ್ರೊಡಕ್ಷನ್ ಮತ್ತು ಪಿಆರ್ ಕೆ ಆಡಿಯೋ ಮೂಲಕ ಉಜ್ವಲ ಭವಿಷ್ಯ ರೂಪಿಸಲು ಎದುರು ನೋಡುತ್ತಿದ್ದೇವೆ ..ನಮ್ಮ ಈ ಪ್ರಯಾಣವನ್ನು ಮುಂದುವರಿಸುತ್ತಾ ಅವರ ಅಂದರೆ ಪುನೀತ್ ರಾಜ್ ಕುಮಾರ್ ಅವರ ಕನಸು ನನಸು ಮಾಡಲು ನಿಮ್ಮ ಬೆಂಬಲವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರೆಸ್ ನೋಟನ್ನು ಬಿಡುಗಡೆ ಮಾಡಿದ್ದಾರೆ …ಈ ಮೂಲಕ ಅಧಿಕೃತವಾಗಿ ಇನ್ನುಮುಂದೆ ಪಿಆರ್ ಕೆ ಪ್ರೊಡಕ್ಷನ್ಸ್ ಹಾಗೂ ಪಿಆರ್ ಕೆ ಆಡಿಯೋ ಸಂಸ್ಥೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಒಡೆತನದಲ್ಲಿ ಮುಂದುವರಿಯಲಿದೆ ಅನ್ನೋದನ್ನು ಕನ್ಫರ್ಮ್ ಆಗಿದೆ ಅದಷ್ಟೇ ಅಲ್ಲದೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣತಾಣಕ್ಕೂ ಎಂಟ್ರಿಕೊಟ್ಟಿದ್ದಾರೆ …

ಪತಿಯ ಕನಸನ್ನ ನನಸು ಮಾಡಲು ಸಿದ್ಧರಾದ ಪುನೀತ್ ಪತ್ನಿ Read More »

ಟ್ರೆಂಡ್ ಹುಟ್ಟುಹಾಕಿದೆ ರೋರಿಂಗ್ ಸ್ಟಾರ್ ಶ್ರೀಮುರಳಿ ಮದಗಜ

ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಮದಗಜ ಸಿನಿಮಾದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ ಮದಗಜ ಟ್ರೇಲರ್ … ಮದಗಜ ಸಿನಿಮಾದ ಟ್ರೇಲರ್ ಅನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ರು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಲವಾರು ರಾಜಕೀಯ ಗಣ್ಯರು ಭಾಗಿಯಾಗಿದರು… ಮದಗಜ ಸಿನಿಮಾಕ್ಕೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ.. ಆಶಿಕಾ ರಂಗನಾಥ್ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ …ಇನ್ನೂ ಖಡಕ್ ವಿಲನ್ ಪಾತ್ರದಲ್ಲಿ ಜಗಪತಿ ಬಾಬು ಅಭಿನಯ ಮಾಡಿರೋದು ವಿಶೇಷ….ಮದಗಜ ಸಿನಿಮಾದಲ್ಲಿ ಅದ್ದೂರಿ ತಾರಾಬಳಗವಿದ್ದು ಸದ್ಯ ಬಿಡುಗಡೆಯಾಗಿರುವ ಟ್ರೇಲರ್ ಸಖತ್ ಇಂಪ್ರೆಸಿವ್ ಆಗಿದೆ ಚಿತ್ರದ ಮೇಕಿಂಗ್ ಕ್ಯಾಮೆರಾ ವರ್ಕ್ ಡೈರೆಕ್ಷನ್ ಮ್ಯೂಸಿಕ್ ಎಲ್ಲವೂ ಕೂಡ ಪ್ರಾಮಿಸ್ಸಿಂಗ್ ಆಗಿದೆ.. ಇನ್ನೂ ಇದೆ ಡಿಸೆಂಬರ್ 3 ರಂದು ಮದಗಜ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದ್ದು ಕನ್ನಡ ಹಾಗೂ ತೆಲುಗು 2ಭಾಷೆಯಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ

ಟ್ರೆಂಡ್ ಹುಟ್ಟುಹಾಕಿದೆ ರೋರಿಂಗ್ ಸ್ಟಾರ್ ಶ್ರೀಮುರಳಿ ಮದಗಜ Read More »

ಧ್ರುವ ಸರ್ಜಾ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ

ಖಡಕ್ಕಾಗಿದೆ ಆಕ್ಷನ್ ಪ್ರಿನ್ಸ್ ಮಾರ್ಟಿನ್ ಹೇರ್ ಸ್ಟೈಲ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ ಎಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು ಸಹಜವಾಗಿ ಪ್ರೇಕ್ಷಕರಲ್ಲಿ ಈ ಹಿಟ್ ಕಾಂಬಿನೇಷನ್ ಬಗ್ಗೆ ಕುತೂಹಲ ಮೂಡಿದೆ … ಈಗಾಗಲೇ ಪೋಸ್ಟರ್ ನಿಂದಲೇ ಸುದ್ದಿ ಆಗಿತ್ತು ಮಾರ್ಟಿನ್ ಸಿನಿಮಾ ..ಸದ್ಯ ಧ್ರುವ ಸರ್ಜಾರ ಹೊಸ ಹೇರ್ ಸ್ಟೈಲ್ ನಿಂದ ಮಾರ್ಟಿನ್ ಚಿತ್ರ ಮತ್ತೆ ಟ್ರೆಂಡಿಂಗ್ ನಲ್ಲಿದೆ ..ಮಾರ್ಟಿನ್ ಸಿನಿಮಾಗಾಗಿ ಧ್ರುವ ಸರ್ಜಾ ಹೊಸ ರೀತಿಯ ಹೇರ್ ಸ್ಟೈಲ್ ಟ್ರೈ ಮಾಡಿದ್ದು ಅಭಿಮಾನಿಗಳು ಈ ಹೊಸ ಲುಕ್ ಗೆ ಫಿದಾ ಆಗಿದ್ದಾರೆ .. ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಪ್ರಶಾಂತ್ ಈ ವಿಭಿನ್ನವಾದ ಹೇರ್ ಕಟಿಂಗ್ ಮಾಡಿದ್ದು ಸಣ್ಣ ಮಕ್ಕಳಂತೂ ಧ್ರುವ ಹೇರ್ ಕಟಿಂಗ್ ನೋಡಿ ಥ್ರಿಲ್ ಆಗಿದ್ದಾರೆ ..ಪ್ರತಿ ಸಿನಿಮಾ ಹಾಗೂ ತನ್ನದೇ ಆದ ರೀತಿಯಲ್ಲಿ ತಯಾರಿ ಮಾಡಿಕೊಳ್ಳುವ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ಹೇರ್ ಸ್ಟೈಲ್ ನಿಂದ ಟ್ರೆಂಡ್ ಹುಟ್ಟುಹಾಕುತ್ತಿದ್ದಾರೆ …ಸಿನಿಮಾ ಹೀರೋಗಳಿಗೆ ಹೇರ್ ಸ್ಟೈಲ್ ನಿಂದಲೇ ಹೊಸ ರೀತಿಯ ಲುಕ್ ಕೊಡೋ ಪ್ರಶಾಂತ್ ಧ್ರುವ ಸರ್ಜಾ ಅವರಿಗೂ ಈ ಹಿಂದೆ ಎಂದಿಗೂ ಕಾಣಿಸಿಕೊಳ್ಳದ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುವಂತಹ ಕೇಶ ವಿನ್ಯಾಸವನ್ನು ಮಾಡಿದ್ದಾರೆ …ಸದ್ಯ ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಹೇರ್ ಸ್ಟೈಲ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟುಹಾಕಿದೆ …

ಧ್ರುವ ಸರ್ಜಾ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ Read More »

ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ಸಂಯುಕ್ತ ಹೆಗ್ಡೆ ಕಿರಿಕ್

ಕಿರಿಕ್ ಪಾರ್ಟಿ ಹಾಗೂ ಕಾಲೇಜ್ ಕುಮಾರ್ ಸಿನಿಮಾಗಳ ನಂತರ ಸ್ಯಾಂಡಲ್ ವುಡ್ ನತ್ತ ತಿರುಗಿಯೂ ನೋಡದ ನಟಿ ಸಂಯುಕ್ತ ಹೆಗ್ಡೆ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಮಾಡಲು ಎಂಟ್ರಿಕೊಟ್ಟಿದ್ದಾರೆ …ಹೌದು ನಟಿ ಸಂಯುಕ್ತ ಹೆಗ್ಡೆ ಶ್ರೇಯಸ್ ಕೆ ಮಂಜು ಅಭಿನಯದ ರಾಣಾ ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ .. ವಿಶೇಷ ಅಂದ್ರೆ ರಾಣ ಸಿನಿಮಾದಲ್ಲಿ ಸಂಯುಕ್ತ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿಲ್ಲ ಅದರ ಬದಲಾಗಿ ವಿಶೇಷ ಹಾಡೊಂದಕ್ಕೆ ಸಂಯುಕ್ತ ಹೆಗ್ಡೆ ಹೆಜ್ಜೆ ಹಾಕಲಿದ್ದಾರೆ ಕಂಠೀರವ ಸ್ಟುಡಿಯೋದಲ್ಲಿ ಆರ್ಟ್ ಡೈರೆಕ್ಟರ್ ಶಿವು ನಿರ್ಮಿಸಿರುವ ಅದ್ಧೂರಿ ಸೆಟ್ ನಲ್ಲಿ ಈ ಹಾಡಿನ ಶೂಟಿಂಗ್ ನಡೆಯಲಿದೆ … ಶಿವು ಭೇರ್ಗಿ ಈ ಹಾಡನ್ನು ಬರೆದಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ನಂದಕಿಶೋರ್ ಈ ಚಿತ್ರವನ್ನುನಿರ್ದೇಶಿಸುತ್ತಿದ್ದಾರೆ. ಶ್ರೇಯಸ್ಸ್ ಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಕೆ.ಎಂ.ಪ್ರಕಾಶ್ ಸಂಕಲನ, ವಿಶ್ವ , ಶಿವು ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ “ರಾಣ” ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌.

ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ಸಂಯುಕ್ತ ಹೆಗ್ಡೆ ಕಿರಿಕ್ Read More »

ಬೋಲ್ಡ್ ಲುಕ್ ಪೋಸ್ಟರ್ ಮೂಲಕ ಸೌಂಡ್ ಮಾಡ್ತಿದ್ದಾರೆ ಪಾವನ ಗೌಡ

ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ನಟಿ ಪಾವನಾ ಗೌಡ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ ಹೌದು ಪಾವನಾ ಗೌಡ ಅಭಿನಯದ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ ಚಿತ್ರಕ್ಕೆ ಇನ್ ಎಂದು ಹೆಸರಿಡಲಾಗಿದ್ದು ಸದ್ಯ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಎಲ್ಲೆಡೆ ವೈರಲ್ ಆಗಿದೆ…ಬಡಿಗೇರ ದೇವೇಂದ್ರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಈ ಹಿಂದೆ ರ ರುದ್ರಿ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ರು ನಿರ್ದೇಶಕರು …ಲಾಕ್ ಡೌನ್ ಸಂದರ್ಭವನ್ನೇ ವಸ್ತುವಾಗಿಟ್ಟುಕೊಂಡು ಒಂಟಿ ಮನೆ, ಒಬ್ಬಳೇ ಯುವತಿಯ ಜೀವನದ ಕುರಿತು ಪ್ರಯೋಗಾತ್ಮಕ ಸವಾಲಿನ ಚಿತ್ರ ನಿರ್ದೇಶನ ಮಾಡಿದ್ದಾರೆ ದೇವೇಂದ್ರ.ಕರುಣಾಕರ ಟಿ ಎನ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ಭರತ್ ನಾಯಕ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ … ಸದ್ಯ ಈ ಸಿನಿಮಾದ ಪೋಸ್ಟರ್ ಎಲ್ಲರಲ್ಲಿಯೂ ಕುತೂಹಲ ಮೂಡಿಸಿದ್ದು ಸಿನಿಮಾ ಹೇಗೆ ಮೂಡಿಬರಲಿದೆ ಅನ್ನುವ ಕಾತುರದಲ್ಲಿ ಪ್ರೇಕ್ಷಕರು ಕಾದಿದ್ದಾರೆ…ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವ್ರು ಚಿತ್ರದ ಪೋಸ್ಟರ್ ರಿವಿಲ್ ಮಾಡಿ ಚಿತ್ರತಂಡಕ್ಕೆ ಆಲ್ ದ ಬೆಸ್ಟ್ ಹೇಳಿದ್ದಾರೆ…

ಬೋಲ್ಡ್ ಲುಕ್ ಪೋಸ್ಟರ್ ಮೂಲಕ ಸೌಂಡ್ ಮಾಡ್ತಿದ್ದಾರೆ ಪಾವನ ಗೌಡ Read More »

ದರ್ಶನ್ ಅಭಿಮಾನಿಗಳ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಾಹಿತಿ ಗೊ ರು ಚನ್ನಬಸಪ್ಪ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿರುವುದು ಎಲ್ಲರಿಗೂ ಗೊತ್ತಿರು ವಿಚಾರ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ ಚಾಲೆಂಜಿಂಗ್ ಸ್ಡಾರ್ ದರ್ಶನ್ ಆದರೆ ದರ್ಶನ್ ಅಭಿಮಾನಿಗಳ ಬಗ್ಗೆ ಇತ್ತೀಚಿಗಷ್ಟೆ ಹಿರಿಯ ಸಾಹಿತಿ ಗೊರೂರು ಚನ್ನಬಸಪ್ಪ ಅವರು ಕೊಟ್ಟಿರುವ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ ..ದರ್ಶನ್ ಅಭಿಮಾನಿಗಳಿಂದ ನನ್ನ ಶ್ರವಣಶಕ್ತಿ ಹೋಯಿತೆಂದು ಚನ್ನಬಸವಪ್ಪನವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ … ನಗರದ ರಮಣಶ್ರೀ ಹೋಟೆಲ್ ನಲ್ಲಿ ನಡೆದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಹಿರಿಯ ಸಾಹಿತಿ ಗೊರೂರು ಚನ್ನಬಸಪ್ಪನವರು ದರ್ಶನ್ ಅಭಿಮಾನಿಗಳು ಒಡೆದ ಪಟಾಕಿಯಿಂದ ನನ್ನ ಕಿವಿ ಹಾಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಅದರ ಬೆನ್ನಲ್ಲೇ ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ ಆಕಸ್ಮಿಕವಾಗಿ ಆಗಿದ್ದು ಎಂದು ಅವರು ಸ್ಪಷ್ಟಪಡಿಸಿದರು … ದರ್ಶನ್ ಅವರ ಮನೆಯ ಬಳಿಯೇ ಚನ್ನಬಸವಪ್ಪ ಅವರ ಮನೆ ಕೂಡ ಇದ್ದು ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬದಂದು ಅಭಿಮಾನಿಗಳು ಸಿಡಿಸುವ ಪಟಾಕಿಯಿಂದ ಕಿರಿಕಿರಿ ಉಂಟಾಗಿದೆ ಎಂದು ಚನ್ನಬಸಪ್ಪ ತಿಳಿಸಿದ್ದಾರೆ …ನಂತರ ಇದೇ ವಿಚಾರವಾಗಿ ದರ್ಶನ್ ಅವ್ರಿಗೆ ಪತ್ರ ಬರೆದಿದ್ದು ಈಗ ಪಟಾಕಿ ಸಿಡಿಸುವ ಕಾರ್ಯಕ್ಕೆ ಬ್ರೇಕ್ ಬಿದ್ದಿದೆಯಂತೆ…

ದರ್ಶನ್ ಅಭಿಮಾನಿಗಳ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಾಹಿತಿ ಗೊ ರು ಚನ್ನಬಸಪ್ಪ Read More »

Scroll to Top