ಪುನೀತ್ ಇಲ್ಲದ ನೋವನ್ನ ಮರೆಯೋಕೆ ನಾವು ಸಾಯಬೇಕು…ರವಿಚಂದ್ರನ್
ನಾನು ವೀಕ್ ಅಂತ ಮೊದಲ ಬಾರಿಗೆ ಅನ್ನಿಸಿದ್ದು ಅಪ್ಪು ಸಾವಿನ ಸುದ್ದಿ ಕೇಳಿದಾಗ- ರವಿಚಂದ್ರನ್ ಪುನೀತ್ ಸಾವಿನ ನಂತ್ರ ರವಿಚಂದ್ರನ್ ಅಪ್ಪು ನೆನೆದು ಮಾತನಾಡಿದ್ದಾರೆ…ಮನೋರಂಜನ್ ಅಭಿನಯದ ಮುಗಿಲ್ ಪೇಟೆ ಚಿತ್ರದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನೆದು ಮಾತನಾಡಿದ ರವಿಚಂದ್ರನ್ ಅಪ್ಪು ನೆನೆದು ಭಾವುಕರಾದರು… ಪುನೀತ್ ಮಗುವಾಗೆ ಇದ್ದು ಮಗುವಾದೆ ಹೋದ್ರು..ಆ ಮಗು ನಮ್ಮ ತೋಳಲ್ಲೇ ಇರುತ್ತೆ, ಮಡಿಲಲ್ಲೇ ಇರುತ್ತೆ..ಪುನೀತ್ ಇಲ್ಲದ ನೋವನ್ನ ಮರೆಯೋಕೆ ನಾವು ಸಾಯಬೇಕು…ಆಗ ಮಾತ್ರ ಅಪ್ಪು ಇಲ್ಲ ಅಂತ ನಮ್ಮಿಂದ ಹೇಳೋಕೆ ಸಾಧ್ಯ….ಪುನೀತ್ ರಾಜ್ ಕುಮಾರ್ ಮಾಡಿದ ಒಳ್ಳೆ ಕೆಲಸಗಳನ್ನ ನೋಡಿದ್ರೆ ನಾವು ಏನು ಮಾಡಿಲ್ಲ..ಹಣ ಮುಖ್ಯ ಅಲ್ಲ ಜನ ಮುಖ್ಯ ಅಂತ ಪುನೀತ್ ತೋರಿಸಿಕೊಟ್ಟು ಹೋಗಿದ್ದಾರೆ. ನಾನು ನನ್ನ ಜೀವನದಲ್ಲಿ ತುಂಬಾ ವೀಕ್ ಆಗಿದ್ದು ಪುನೀತ್ ಇಲ್ಲ ಅಂತ ಗೊತ್ತಾದಾಗ..ಒಂದ್ ಕಡೆ ನನ್ನ ತಾಯಿ ಹೆಲ್ತ್ ಸರಿ ಇರಲಿಲ್ಲ.ಆಗ ನನ್ನ ಪತ್ನಿ ಕಾಲ್ ಮಾಡಿ ಹೇಳಿದ್ರು. ಆಗ ಪುನೀತ್ ಇಲ್ಲ ಅಂತ ಗೊತ್ತಾಯ್ತು.. ಏನ್ ಮಾಡಬೇಕು, ಏನು ಮಾತಾಡಬೇಕು ಅಂತ ಗೊತ್ತಾಗಿಲ್ಲ ಎಂದು ಮೌನಕ್ಕೆ ಶರಣಾದ್ರು ಕ್ರೇಜಿಸ್ಟಾರ್..ಒಟ್ಟಾರೆ ಪುನೀತ್ ಇಲ್ಲ ಅನ್ನೋದು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಆದರೆ ಅವ್ರ ನೆನಪು ಮಾತ್ರ ಕಾಡೋದು ಬಿಡ್ತಿಲ್ಲ….
ಪುನೀತ್ ಇಲ್ಲದ ನೋವನ್ನ ಮರೆಯೋಕೆ ನಾವು ಸಾಯಬೇಕು…ರವಿಚಂದ್ರನ್ Read More »