ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕ ತುನ್ನೂರು
ಮಾ.೨೩ರಿಂದ ಭೀಮಾ ಸೇತುವೆ ಸಂಚಾರಕ್ಕೆ ಮುಕ್ತ ಯಾದಗಿರಿ: ಶಹಾಪುರ-ಯಾದಗಿರಿ ಸಂಪರ್ಕ ಕಲ್ಪಿಸುವ ಭೀಮಾ ನದಿಗೆ ಅಡ್ಡಲಾಗಿರುವ ಹಳೆಯ ಸೇತುವೆ ರಿಪೇರಿ ಕಾರ್ಯ ಮುಗಿದಿದ್ದು ಮಾ.೨೩ ರಂದು ಸಂಚಾರಕ್ಕೆ ಮುಕ್ತವಾಗಲಿದೆ ಎಂದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.ಭೀಮಾ ಸೇತುವೆ ಹಾಗೂ ರೈಲ್ವೆ ಮೇಲ್ಸೇತುವೆ(ಬ್ರಿಡ್ಜ್) ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕೆಲಸ ವಿಳಂಭವಾದರೂ ಕಾಮಗಾರಿ ಗುಣಮಟ್ಟದಿಂದ ಕೂಡಿದೆ ಎಂದು ಸಂಬAಧಿಸಿದ ತಾಂತ್ರಿಕ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲು ಚರ್ಚಿಸಿದ್ದೇನೆ. ಸೇತುವೆ ಮೇಲಿನ ಸಿಸಿ ರಸ್ತೆ ಪೂರ್ಣಗೊಂಡಿದ್ದು, ಈಗ ಕ್ಯೂರಿಂಗ್ ಸಮಯವಿದೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಲು ಅಲ್ಲಲ್ಲಿ ಹೋಲ್ಸ್ ಬಿಡಲಾಗಿದೆ. ಹೋಲ್‌ಗಳ ಮೂಲಕ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಸ್ಟೀಲ್ ರಾಡ್ಸ್ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಈ ಕೆಲಸ ಮಾಡುವುದಾಗಿ ಅಧಿಕಾರಿ ತಿಳಿಸಿದ್ದಾಗಿ ಹೇಳಿದರು.ಈ ವರ್ಷ ಅಧಿಕ ಮಳೆ ಆಗಿದ್ದರಿಂದ ಸುಮಾರ ೧೦೦ ವರ್ಷದ ಸೇತುವೆ ತಗ್ಗುಗುಂಡಿಗಳು ಬಿದ್ದು ಸತ್ಯಾನಾಸ್ ಆಗಿತ್ತು. ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.ಸಂಘ ಸಂಸ್ಥೆಗಳಿಂದ ಸೇತುವೆ ರಿಪೇರಿಗೆ ಒತ್ತಡವೂ ಇತ್ತು.ಜನರ ಹಿತದೃಷ್ಟಿಯಿಂದ ಸರ್ಕಾರದ ಗಮನಕ್ಕೆ ತಂದು ಸೇತುವೆ ದುರಸ್ಥಿಗೊಳಿಸಲಾಗಿದೆ. ವಾರದಲ್ಲಿ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.ಅಧಿಕ ಮಳೆಯಾಗಿದ್ದರಿಂದ ಭೀಮಾ ಸೇತುವೆ ಮತ್ತು ರೈಲ್ವೆ ಮೇಲ್ಸೇತುವೆ ಕಸಿದಿತ್ತು. ಭೀಮಾ ಸೇತುವೆ ರಿಪೇರಿ ಕಾರ್ಯಕ್ಕೆ ರೂ.೧ ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ರೈಲ್ವೆ ಮೇಲ್ಸೇತುವೆ ಸೈಡ್ ವಾಲ್ ಮತ್ತು ಪೇಚಿಂಗ್ ಕಲ್ಲುಗಳ ಅಳವಡಿಸಲು ರೂ.೧ ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಗುತ್ತಿಗೆದಾರ ಸುದರ್ಶನ ನಾಯ್ಕ್, ಕಾಂಗ್ರೆಸ್ ಮುಖಂಡರಾದ ವೆಂಕಟರೆಡ್ಡಿ ವನಕೇರಿ, ಲಚಮ ರೆಡ್ಡಿ,ಮಲ್ಲಿಕಾರ್ಜುನ ಈಟೆ,ಸುರೇಶ ಮಡ್ಡಿ, ಶರಣಗೌಡ ಬಲಕಲ್, ಕಿಸ್ಟೋಪರ ಬೆಳ್ಳಿ, ಗುಲಾಮ ಮುರ್ತುಜಾ, ಅಮರೇಶ ಜಾಕಾ,ಲೋಕೋಪಯೋಗಿ ಇಲಾಖೆ ಎಇಇ ಶ್ರೀಧರ ಇದ್ದರು. ಬಾಕ್ಸ.. ಬಾಕ್ಸ..ಈಗಿರುವ ಭೀಮಾ ಮತ್ತು ರೈಲ್ವೆ ಸೇತುವೆ ಅತ್ಯಂತ ಪರಾತನವಾಗಿದೆ. ಇದಕ್ಕೆ ಪರ್ಯಾಯ ಬ್ರಿಡ್ಜ್ ನಿರ್ಮಾಣದ ಚಿಂತನೆ ಇದೆ. ನೂರಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಮೇಲಿರುವ ಈ ಸೇತುವೆಗೆ ಪರ್ಯಾಯವಾಗಿ ಇನ್ನೊಂದು ಸೇತುವೆ ನಿರ್ಮಾಣಕ್ಕೆ ಜನರ ಬೇಡಿಕೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಗಮನಕ್ಕೆ ಈಗಾಗಲೇ ತಂದಿದ್ದೇನೆ. ಶೀಘ್ರದಲ್ಲೇ ಅಂದಾಜು ವೆಚ್ಚ ತಯ್ಯಾರಿಸಿ ಸಲ್ಲಿಸುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕ ತುನ್ನೂರು Read More »