Karnataka Bhagya

Blog

Your blog category

ರಕ್ಷಿತ್ ಶೆಟ್ಟಿ ಅಭಿನಯದ #777 ಚಾರ್ಲಿ ಸಿನಿಮಾ ಶೂಟಿಂಗ್ ಕಂಪ್ಲೀಟ್

ಕೊರೋನಾ ಮಹಾಮಾರಿ ಕಡಿಮೆಯಾದ ಹಿನ್ನೆಲೆ ಒಂದೊಂದೇ ಸಿನಿಮಾ ಶೂಟಿಂಗ್‍ಗಳು ಪ್ರಾರಂಭವಾಗಿದ್ದು, ಇನ್ನು ಕೆಲವು ಶೂಟಿಂಗ್‍ಗಳು ಮುಕ್ತಾಯಗೊಳ್ಳುತ್ತಿವೆ. ಇನ್ನಷ್ಟು ಸ್ಟಾರ್ ನಟರ ಸಿನಿಮಾಗಳು ಒಂದರ ನಂತರ ಒಂದು ಪೈಪೋಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇದೀಗ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಕ್ಷಿತ್ ಶೆಟ್ಟಿ ಅಭಿನಯದ #777 ಚಾರ್ಲಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದೇ ಖುಷಿಯಲ್ಲಿರುವ ರಕ್ಷಿತ್ ಶೆಟ್ಟಿ ತಮ್ಮೊಟ್ಟಿಗೆ ಕೆಲಸ ಮಾಡಿದ ತಂಡದ ಜೊತೆ ಮಾತನಾಡಿದ್ದಾರೆ. ಈ ಸಿನಿಮಾ ಗೆದ್ದರೆ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಏನಾದರೊಂದು ನನ್ನ ಕಡೆಯಿಂದ ಸಿಗುತ್ತದೆ ಎಂಬ ಮಾತನ್ನು ಹೇಳಿದ್ದಾರೆ. ಇದರ ಜೊತೆಗೆ ಈ ಸಿನಿಮಾವು ಡಿಸೆಂಬರ್ 31ರಂದು ಬಿಡುಗಡೆಗೊಳ್ಳಲಿದೆ. ಖುದ್ದಾಗಿ ರಕ್ಷಿತ್ ಶೆಟ್ಟಿ ಅವರೇ ಅನೌನ್ಸ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ 2016ರ ಡಿಸೆಂಬರ್ 30 ರಂದು ತೆರೆ ಕಂಡಿತ್ತು. ಅವನೇ ಶ್ರೀಮನ್ನಾರಾಯಣ ಚಿತ್ರ 2019ರ ಡಿಸೆಂಬರ್ 27ರಂದು ಬಿಡುಗಡೆಯಾಗಿತ್ತು. ಇದೀಗ #777 ಚಾರ್ಲಿ ಡಿಸೆಂಬರ್ ತಿಂಗಳಿನಲ್ಲಿಯೇ ಬಿಡುಗಡೆಯಾಗುತ್ತಿದೆ. ಈ ಹಿಂದೆ ರಿಕ್ಕಿ ಹಾಗೂ ಕಿರಿಕ್‌ ಪಾರ್ಟಿ ಚಿತ್ರಕ್ಕೆ ರಿಶಬ್ ಶೆಟ್ಟಿ ಜೊತೆ ಸಹ‌ ನಿರ್ದೇಶಕನಾಗಿ ಕೆಲಸ‌‌ ಮಾಡುವುದರ ಜೊತೆಗೆ ಕಥಾಸಂಗಮ ಚಿತ್ರದಲ್ಲಿ ಒಂದು ಕಥೆಯನ್ನು ನಿರ್ದೇಶನ ಮಾಡಿ ಬರವಸೆ ಹುಟಿಸಿದ್ದ ಕಿರಣ್ ರಾಜ್ ಈ ಸಿನಿಮಾದ ಕಥೆ, ಚಿತ್ರಕಥೆ ಜೊತೆಗೆ ಚೊಚ್ಚಲ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ, ಚಿತ್ರದಲ್ಲಿ ಸಂಗೀತಾ ಶೃಂಗೇರಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಲ್ಲದೇ ರಾಜ್.ಬಿ ಶೆಟ್ಟಿ, ದಾನಿಶ್ ಸೇಠ್, ಬಾಬಿ ಸಿಂಹ, ಮೊದಲಾದ ತಾರಾಗಣವಿದೆ.

ರಕ್ಷಿತ್ ಶೆಟ್ಟಿ ಅಭಿನಯದ #777 ಚಾರ್ಲಿ ಸಿನಿಮಾ ಶೂಟಿಂಗ್ ಕಂಪ್ಲೀಟ್ Read More »

ಪಶ್ಚಿಮ ಘಟ್ಟದ ಭೂಗತ ಲೋಕವನ್ನಾಧರಿಸಿದ ಬರೆದ “ಕಾರ್ಗಲ್ ನೈಟ್ಸ್” ಚಿತ್ರದ ಟ್ರೇಲರ್ ಗೆ ಸಕ್ಕತ್ ರೆಸ್ಪಾನ್ಸ್

ಒಂದು ಹೊಸ ಚಿತ್ರ ತಂಡ, ವಿಭಿನ್ನವಾದ ಕಾನ್ಸೆಪ್ಟ್ , ಜೊತೆಗೆ ಒಂದು ವಿನೂತನ ಪ್ತಯತ್ನವನ್ನ “ಕಾರ್ಗಲ್ ನೈಟ್ಸ್” ಎನ್ನುವ ಚಿತ್ರದ ಮೂಲಕ ತೆರೆಯ ಮೇಲೆ ತರುತ್ತಿದ್ದಾರೆ ಅರುಣ್ ಎ ಎನ್ ಆರ್ ಮತ್ತು ನಿರ್ದೇಶಕ ದೇವರಾಜ್ ಪೂಜಾರಿ. ಹೌದು ಹತ್ತೊಂಬತ್ತನೇ ಶತಮಾನದಲ್ಲಿ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳ ನೆರಳಲ್ಲಿ ಬೆಳೆದ ಕಳ್ಳಸಾಗಾಣಿಕೆಯ ನೈಜವಾದ ಘೋರ ಅನುಭವಗಳನ್ನು ಆಧಾರಿಸಿ ಚಿತ್ರಿಸಿರುವ ಈ ಚಿತ್ರ ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು ಇಂದು ಇದರ ಟ್ರೈಲರ್ A2 music YouTube ಚಾನಲ್ ನಲ್ಲಿ ಬಿಡುಗಡೆ ಮಾಡಲಾಯಿತು. 90 ರ ದಶಕದ ಕಾಲದ ಸಾಗರ ತಾಲ್ಲೂಕಿನ ಕಾರ್ಗಲ್ ನಲ್ಲಿ ನಿಗೂಢವಾಗಿ ಸಾಗುತ್ತಿದ್ದ ಗಂಧದ ಮರಗಳ ಕಳ್ಳಸಾಗಾಣಿಕೆಯ ವಾತಾವರಣವನ್ನು ಮಲ್ಲಿಕಾರ್ಜುನ್ ಮತ್ತು ಅವರ ತಂಡ ಅದ್ಭುತವಾಗಿ ಮರುಸೃಷ್ಟಿಸಿದ್ದು, ಪಶ್ಚಿಮ ಘಟ್ಟದ ಭೂಗತ ಲೋಕವನ್ನು ಅದ್ಬುತವಾಗಿ ಚಿತ್ರೀಕರಿಸಿದ್ದಾರೆ. ಇನ್ನೂಈ ಚಿತ್ರವನ್ನು ರೋಷನ್ ಲೋಕೇಶ್ ಸಂಕಲಿಸಿದ್ದು, ಸುರೇಂದ್ರನಾಥ್ ಬಿ ಆರ್ ಸಂಗೀತವನ್ನು ರಚಿಸಿದ್ದಾರೆ. ಹಾಗೆಯೇ ಈ ಚಿತ್ರದ ಇನ್ನೊಂದು ವಿಶೇಷತೆ ಅಂದರೆ ಚಿತ್ರದ ಕತೆಯನ್ನು ಸಾಗರ ತಾಲ್ಲೂಕು ಹಾಗೂ ಕಾರ್ಗಲ್ ನಲ್ಲಿ ಕಳ್ಳಸಾಗಾಣಿಕೆಯ ಸಾಕ್ಷ್ಯಗಳನ್ನು ದಾಖಲಿಸಿ ರಚಿಸಿದ್ದಾರೆ. ಇನ್ನೂ ಯುವ ನಟ ಹರ್ಶಿಲ್ ಕೌಶಿಕ್ ಈ ಚಿತ್ರದ ಮುಖ್ಯ ಪಾತ್ರದಾರಿಯಗಿದ್ದು ನಾಯಕ ನಟನಾಗಿ ನಟಿಸುತ್ತಿದಾರೆ. ಇವರ ಜೊತೆಗೆ ರಾಗ್ ಯು ಆರ್ ಎಸ್ , ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಸೂಚನ್ ಶೆಟ್ಟಿ, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಚಂದ್ರಕಾಂತ್, ರಾಜೇಶ್ ರಾಮಕೃಷ್ಣ, ಶಶಿಧರ್ ಗೌಡ, ಶ್ರೀಗಂಧ್ ನಾಗ್, ನರೇಂದ್ರ ಕಬ್ಬಿನಾಲೆ ಈ ಚಿತ್ರದಲ್ಲಿ ತಮ್ಮ ವಿಭಿನ್ನವಾದ ಪಾತ್ರದ ಮೂಲಕ ಚಿತ್ರಕ್ಕೆ ಇನ್ನಷ್ಟೂ ಕಳೆ ತುಂಬಿದ್ದಾರೆ.

ಪಶ್ಚಿಮ ಘಟ್ಟದ ಭೂಗತ ಲೋಕವನ್ನಾಧರಿಸಿದ ಬರೆದ “ಕಾರ್ಗಲ್ ನೈಟ್ಸ್” ಚಿತ್ರದ ಟ್ರೇಲರ್ ಗೆ ಸಕ್ಕತ್ ರೆಸ್ಪಾನ್ಸ್ Read More »

ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾದ ಟಾಪ್ ನಟಿಯರು ಯಾರ್ಯಾರು ಗೊತ್ತಾ.?

ನಮಸ್ಕಾರ ಸ್ನೇಹಿತರೇ ಕೇವಲ ನಾಯಕನಟರಿಗೆ ಮಾತ್ರವಲ್ಲದೆ ನಮ್ಮ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯರು ಕೂಡ ಅಪಾರ ಪ್ರಮಾಣದ ಅಭಿಮಾನಿಗಳ ದಂಡು ಹೊಂದಿದ್ದಾರೆ. ಯಾರ ಸಹಾಯವೂ ಇಲ್ಲದೆ ಯಾವ ಶಿಫಾರಸು ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯ ಮೂಲಕ ಅದೆಷ್ಟೋ ಅಭಿಮಾನಿಗಳನ್ನು ಹೊಂದಿರುವ ಇವರು ಸ್ವಾವಲಂಬಿ ಮಹಿಳಾ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇನ್ನು ಇಂದಿನ ವಿಷಯದಲ್ಲಿ ನಾವು ನಮ್ಮ ಕನ್ನಡ ಚಿತ್ರರಂಗದ ವಿವಾಹಿತ ನಟಿಯರ ಕುರಿತಂತೆ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಇಂದಿನ ವಿಚಾರದಲ್ಲಿ ನಾವು ತಮಗಿಂತಲೂ ಕಡಿಮೆ ವಯಸ್ಸಿನವರನ್ನು ಮದುವೆಯಾಗಿರುವ ನಟಿಯರ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ ಬನ್ನಿ. ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ಎಂದೇ ಖ್ಯಾತರಾಗಿರುವ ಕರಾವಳಿ ಮೂಲದ ಬೆಡಗಿ ರಾಧಿಕಾ ಪಂಡಿತ್. ರಾಧಿಕಾ ಪಂಡಿತ್ ಅವರು ಮೊದಲು ಕಿರುತೆರೆಯ ಧಾರವಾಹಿಗಳಲ್ಲಿ ನಟಿಸುವ ಮೂಲಕ ಮನೋರಂಜನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ ನಂತರ ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಅದಾದ ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ ಕನ್ನಡ ಚಿತ್ರರಂಗದಲ್ಲಿ ಅನಭಿಷಕ್ತ ರಾಣಿಯಾಗಿ ಮೆರೆದಿದ್ದಾರೆ. ಇದೀಗ ತಮ್ಮ ಬಹುಕಾಲದ ಗೆಳೆಯ ರಾಕಿಂಗ್ ಸ್ಟಾರ್ ಯಶ್ ರವರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಕೂಡ ಹೊಂದಿದ್ದಾರೆ. ಇನ್ನು ರಾಧಿಕಾ ಪಂಡಿತ್ ಅವರು ಯಶ್ ಅವರಿಗಿಂತ ವಯಸ್ಸಿನಲ್ಲಿ 2 ವರ್ಷ ದೊಡ್ಡವರು. ಶಿಲ್ಪ ಶೆಟ್ಟಿ ಮಂಗಳೂರು ಮೂಲದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರು ಕೂಡ ಈ ಲಿಸ್ಟಿನಲ್ಲಿ ಕಾಣಸಿಗುತ್ತಾರೆ. ಶಿಲ್ಪ ಶೆಟ್ಟಿ ಅವರು ಖ್ಯಾತ ಉದ್ಯಮಿಯಾಗಿರುವ ರಾಜ್ ಕುಂದ್ರಾ ರವರನ್ನು ವಿವಾಹವಾಗಿ ರುತ್ತಾರೆ. ಇನ್ನು ಇವರಿಬ್ಬರಿಗೆ ಒಬ್ಬ ಮಗ ಕೂಡ ಜನಿಸಿದ್ದಾನೆ. ಶಿಲ್ಪ ಶೆಟ್ಟಿ ಅವರು ರಾಜ್ ಕುಂದ್ರಾ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವರು. ಇನ್ನು ಶಿಲ್ಪ ಶೆಟ್ಟಿ ಅವರನ್ನು ಬಾಲಿವುಡ್ ಚಿತ್ರರಂಗದ ಫಿಟ್ನೆಸ್ ಪ್ರೇಮಿ ಎಂದು ಕೂಡ ಕರೆಯಲಾಗುತ್ತದೆ. ಛಾಯಾಸಿಂಗ್ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಾಯಕ ನಟಿಯಾಗಿ ಇದ್ದಂತಹ ಛಾಯಾಸಿಂಗ್ ರವರು ವಿವಾಹಿತರಾಗಿ ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ದಾರೆ. ಇನ್ನು ಛಾಯಾ ಸಿಂಗ್ ರವರು ಮದುವೆಯಾಗಿರುವುದು ತಮಿಳು ಚಿತ್ರರಂಗದ ಖ್ಯಾತ ನಟ ಪ್ರಸನ್ನ ರವರನ್ನು. ಇನ್ನು ಪ್ರಸನ್ನ ಕೂಡ ಛಾಯಾ ಸಿಂಗ್ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರು. ಐಶ್ವರ್ಯ ರೈ ಮಂಗಳೂರು ಮೂಲದ ಭುವನ ಸುಂದರಿ ಐಶ್ವರ್ಯ ರೈ ಅವರು ಕೂಡ ಬಾಲಿವುಡ್ ಚಿತ್ರರಂಗದ ನಂಬರ್1 ನಟಿಯರಲ್ಲಿ ಒಬ್ಬರಾಗಿದ್ದರು. ಒಂದು ಕಾಲದಲ್ಲಿ ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ನಟಿಸಿ ಖ್ಯಾತರಾದವರು. ಇನ್ನು ಇವರು ಮದುವೆಯಾಗಿರುವುದು ಭಾರತ ಚಿತ್ರರಂಗದ ಶಹೆಂಶಃ ಎಂದೇ ಖ್ಯಾತರಾಗಿರುವ ಅಮಿತಾ ಬಚ್ಚನ್ ರವರ ಪುತ್ರ ಅಭಿಷೇಕ್ ಬಚ್ಚನ್ ರವರನ್ನು. ಇನ್ನು ಇವರಿಗೆ ಒಬ್ಬ ಮಗಳು ಕೂಡ ಇದ್ದಾಳೆ. ವಯಸ್ಸಿನ ವಿಚಾರಕ್ಕೆ ಬರುವುದಾದರೆ ಅಭಿಷೇಕ್ ಬಚ್ಚನ್ ರವರು ಐಶ್ವರ್ಯ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರು. ಅನುಪ್ರಭಾಕರ್ ಕನ್ನಡ ಚಿತ್ರರಂಗದ ಒಂದು ಕಾಲದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಕಾಣಿಸಿಕೊಂಡಿದ್ದಂತಹ ಅನುಪ್ರಭಾಕರ್ ಅವರು ಈಗ ಸುಖ ಸಂಸಾರವನ್ನು ಜೀವಿಸುತ್ತಿದ್ದಾರೆ. ಇನ್ನು ಇವರು ಎರಡನೆಯ ಮದುವೆಯಾಗಿ ನಟ ಹಾಗೂ ಮಾಡೆಲ್ ರಘು ಮುಖರ್ಜಿ ಅವರನ್ನು ಮದುವೆಯಾಗಿದ್ದು, ರಘು ಮುಖರ್ಜಿ ಅವರು ಅನುಪ್ರಭಾಕರ್ ಅವರಿಗಿಂತ ವಯಸ್ಸಿನಲ್ಲಿ 2 ವರ್ಷ ಚಿಕ್ಕವರು. ನಮ್ರತಾ ಶಿರೋಡ್ಕರ್ ನಮ್ರತಾ ಶಿರೋಡ್ಕರ್ ಅವರು ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಒಂದೇ ಚಿತ್ರವಾದರೂ ಕೂಡ ದಕ್ಷಿಣ ಭಾರತದಲ್ಲಿ ಪ್ರಸಿದ್ಧತೆಯನ್ನು ಪಡೆದುಕೊಂಡಂತಹ ನಟಿ. ಇನ್ನೂ ಅವರು ಮದುವೆಯಾಗಿರುವುದು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ಮಹೇಶ್ ಬಾಬು ರವರನ್ನು. ನಮೃತ ಹಾಗೂ ಮಹೇಶ್ ಬಾಬು ದಂಪತಿಗಳಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ಇನ್ನು ಮಹೇಶ್ ಬಾಬು ರವರು ನಮೃತ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರು.

ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾದ ಟಾಪ್ ನಟಿಯರು ಯಾರ್ಯಾರು ಗೊತ್ತಾ.? Read More »

ಟಾಲಿವುಡ್ ಮಂದಿ ಕಣ್ಣು ಯಶ್ ಮೇಲೆ.! ಒನ್ ಲೈನ್ ಕಥೆ ಕೇಳಿ ಅಚ್ಚರಿಗೊಂಡ್ರ ರಾಕಿ ಬಾಯ್ ?? ಏನಾಗಿದೆ ಗೊತ್ತೇ ??

ಸ್ನೇಹಿತರೆ, ಸಿನಿಮಾರಂಗ ಅನ್ನೋದೇ ಹಾಗೆ ಗೆಲ್ಲೋ ಕುದುರೆಯ ಹಿಂದೆ ಓಡೋ ಮಂದಿ ಇರ್ತಾರೆ. ಸದ್ಯ ಕೆಜಿಎಫ್ ರಾಕಿ ಬಾಯ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ಟಾಲಿವುಡ್ ನ ಸ್ಟಾರ್ ನಿರ್ದೇಶಕರು ಯಶ್ ಹಿಂದೆ ಬಿದ್ದಿದ್ದಾರೆ. ಅಲ್ಲದೆ ಯಶ್ ಗೆ ಒಂದು ಕಥೆ ಮಾಡಬೇಕು ಅಂತ ಸಾಹಸ ಕೂಡ ಮಾಡುತ್ತಿದ್ದಾರೆ. ಇನ್ನು ನಾನು ಕರ್ನಾಟಕದಲ್ಲಿ ಕಟೌಟ್ ಆಗಬೇಕು ಎಂದು ಆಸೆಹೊತ್ತು ಬೆಂಗಳೂರಿಗೆ ಬಂದವರು ಸದ್ಯ ಫ್ಯಾನ್ ಇಂಡಿಯಾದ ಕಟೌಟ್ ಆಗಿದ್ದಾರೆ. ಇನ್ನು ಕೆಜಿಎಫ್ ಎನ್ನುವ ಬಂಗಾರದ ಬೆಳ್ಳಿ ಸಿನಿಮಾವನ್ನು ಕಳೆದ ಐದು ವರ್ಷದಿಂದ ಶ್ರಮ ಶ್ರದ್ಧೆ ಮತ್ತು ತಪಸ್ಸಿನಿಂದ ಮಾಡಿ ಈಗ ಕೆಜಿಎಫ್ ಎರಡನೇ ಅಧ್ಯಾಯ ಅಂತ್ಯದಲ್ಲಿ ಬಂದು ನಿಂತಿದ್ದಾರೆ. ಹೀಗಾಗಿ ಯಶ್ ಅವರ ಮುಂದಿನ ಹೆಜ್ಜೆಯನ್ನು ಬಿಗ್ ಪ್ರೊಡ್ಯೂಸಸ್ ಗಳಿಂದ ಹಿಡಿದು ಸ್ಟಾರ್ ಡೈರೆಕ್ಟರ್ ಗಳ ತನಕ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬೆನ್ನಲೆ ತೆಲುಗಿನ ಓರ್ವ ಸ್ಟಾರ್ ಡಾಕ್ಟರ್ ಕೂಡ ಯಶ್ ಗೆ ಕಥೆ ಹೇಳಿ ಅವರನ್ನು ಮೆಚ್ಚಿಸಿದ್ದಾರಂತೆ. ಅವರು ಬೇರೆ ಯಾರೂ ಅಲ್ಲ ಬೋಯಪಾಟಿ ಶ್ರೀನು. ಹೌದು ಯಶ್ ಹಿಂದೆ ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ಗಳಲ್ಲಿ ಒಬ್ಬರಾದ ಬೋಯಪಾಟಿ ಶ್ರೀನು ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಯಶ್ ಅವರಿಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವನ್ನ ಮಾಡಬೇಕು ಎಂದು ಕೂಡ ಅಂದುಕೊಂಡಿದ್ದರಂತೆ. ಈ ಬೆನ್ನಲ್ಲೇ ಯಶ್ ಅವರಿಗೆ ಕಥೆ-1 ರೆಡಿ ಮಾಡಿ ಒನ್ ಲೈನ್ ಕಥೆ ಹೇಳಿ ಇಂಪ್ರೆಸ್ ಮಾಡಿದ್ದಾರಂತೆ ಶ್ರೀನು. ಅಷ್ಟೇ ಅಲ್ಲದೆ ರಾಮ್ ಚರಣ್ ತೇಜ ಗೆ ಮಾಡಿದಂತಹ ಕಥೆಯನ್ನು ಸದ್ಯ ಯಶ್ ಅವರಿಗೆ ಮಾಡಲು ಹೊರಟಿದ್ದಾರೆ ಲೆಜೆಂಡ್ ಖ್ಯಾತಿಯ ಬೋಯಪಾಟಿ ಶ್ರೀನು. ಸದ್ಯ ರಾಮ್ ಚರಣ್ ತೇಜ ಬೇಡ ಎಂಬ ಕಥೆಯನ್ನು ನಿರ್ದೇಶಕ ಯಶ್ ಅವರಿಗೆ ಹೇಳಿ ಒಪ್ಪಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸದ್ಯ ಕೆಜಿಎಫ್ 2 ಸಿನಿಮಾದ ಎಲ್ಲಾ ಕೆಲಸವನ್ನು ಮುಗಿಸಿರುವ ಯಶ್ ಚಿತ್ರ ಬಿಡುಗಡೆಯಾಗಲು ಇನ್ನು ಎಂಟು ತಿಂಗಳು ಬಾಕಿ ಇದೆ. ಹೀಗಾಗಿ ಈ ಮಧ್ಯೆ ಯಶ್ ಅವರು ಯಾವುದಾದರೂ ಸಿನಿಮಾವನ್ನು ಒಪ್ಪಿಕೊಳ್ಳಲೇಬೇಕು. ಹೀಗಾಗಿ ಅವರ ಮುಂದಿನ ನಡೆ ಹೇಗಿರುತ್ತೆ ಅಂತ ಕಾದುನೋಡಬೇಕಾಗಿದೆ‌. ಸ್ನೇಹಿತರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಟಾಲಿವುಡ್ ಮಂದಿ ಕಣ್ಣು ಯಶ್ ಮೇಲೆ.! ಒನ್ ಲೈನ್ ಕಥೆ ಕೇಳಿ ಅಚ್ಚರಿಗೊಂಡ್ರ ರಾಕಿ ಬಾಯ್ ?? ಏನಾಗಿದೆ ಗೊತ್ತೇ ?? Read More »

ಖ್ಯಾತ ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಗೂಗ್ಲಿ ನಟಿ ಕೃತಿ ಕರಬಂಧ

ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ.. ಆದರೆ ಕೆಲ ನಟಿಯರು ಅದ್ಯಾಕೆ ಈ ರೀತಿ ಗೊತ್ತಿದ್ದು ಗೊತ್ತಿದ್ದು ಎರಡನೇ ಪತ್ನಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೋ ತಿಳಿಯದು ಎನ್ನುತ್ತಿದ್ದಾರೆ ನೆಟ್ಟಿಗರು.. ಹೌದು ಅದಾಗಲೇ ಶಿಲ್ಪಾ ಶೆಟ್ಟಿ, ಪ್ರಿಯಾಮಣಿ ಸೇರಿದಂತೆ ಅನೇಕ‌ ನಟಿಯರು ಸಿರಿವಂತ ಉದ್ಯಮಿಗಳ ಬಾಳಿಗೆ ಬೆಳಕಾಗಿ ಎರಡನೇ ಮದುವೆಯಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಆದರೆ ಇದೀಗ ನಟಿ ಕೃತಿ ಕರಬಂಧ ಅವರ ಸರದಿ.. ಹೌದು ಗೂಗ್ಲಿ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿದ್ದ ನಟಿ ಕೃತಿ ಕರಬಂಧ ಇದೀಗ ಖ್ಯಾತ ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ವಿಚಾರ ತಿಳಿದು ಬಹಳಷ್ಟು ಅಭಿಮಾನಿಗಳು ಶುಭಾಶಯ ತಿಳಿಸಿದರೆ ಮತ್ತಷ್ಟು ಮಂದಿ ಬೇರೆ ಹುಡುಗರೇ ಸಿಗಲಿಲ್ಲವಾ.. ಅದ್ಯಾಕೆ ಹೀಗೆ ನಟಿಯರು ಎರಡನೇ ಮದುವೆ ಆಗ್ತಾರೋ ಎನ್ನುತ್ತಿದ್ದಾರೆ.. ಹೌದು ಗೂಗ್ಲಿ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡ ನಟಿ ಕೃತಿ ಕರಬಂಧ ನಂತರ ಶಿವಣ್ಣ, ನೆನಪಿರಲಿ ಪ್ರೇಮ್, ಚಿರು ಸರ್ಜಾ, ಪ್ರೇಮ್ ಅವರ ಜೊತೆ ಅಭಿನಯಿಸಿದರು.. ಆದರೆ ಸುಂದರವಾಗಿದ್ದರೂ ಸಹ ನಂತರದ ದಿನಗಳಲ್ಲಿ ಅದ್ಯಾಕೋ ಸ್ಯಾಂಡಲ್ವುಡ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ.. ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಗುರುತಿಸಿಕೊಂಡರು.. ಆದರೆ ಸ್ಯಾಂಡಲ್ವುಡ್ ಪ್ರೇಕ್ಷಕರು ಅದೆಷ್ಟೋ ಜನರಿಗೆ ಈಗಲೂ ಗೂಗ್ಲಿಯ ಸ್ವಾತಿಯೇ ಕ್ರಶ್ ಎನ್ನಬಹುದು.. ಇನ್ನು ಮೂವತ್ತು ವರ್ಷ ವಯಸ್ಸಿನ ಕೃತಿ‌ಕರಬಂಧ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದಾರೆ.. ಹೌದು ಬಾಲಿವುಡ್ ನ ಖ್ಯಾತ ನಟನ ಜೊತೆ ಎರಡನೇ ಮದುವೆಯಾಗುತ್ತಿದ್ದು ಸಧ್ಯದಲ್ಲಿಯೇ ಮದುವೆ ಸಮಾರಂಭ ನೆರವೇರಲಿದೆ.. ಹೌದು ಅದಾಗಲೇ ಅನೇಕ ಕನ್ನಡ ಹಾಗೂ ಇನ್ನಿತರ ಬಾಷೆಗಳ ನಟಿಯರು ಸ್ಟಾರ್‌ ಗಳಿಗೆ ಉದ್ಯಮಿಗಳಿಗೆ ಎರಡನೇ ಪತ್ನಿಯಾಗಿ ಹೋಗಿ ನಂತರ ಕೆಲರು ಯಶಸ್ವಿಯಾಗಿ ಸಂಸಾರ ನಡೆಸಿದರೆ ಮತ್ತೆ ಕೆಲವರು ಮನಸ್ತಾಪಗಳಿಂದ ದೂರಾದ ಉದಾಹರಣೆಗಳು ಇವೆ. ಸಧ್ಯ ಮೊನ್ನೆಮೊನ್ನೆಯಷ್ಟೇ ನಟಿ ಶಿಲ್ಪಾ ಶೆಟ್ಟಿ ಸಹ ತನ್ನ ಮದುವೆ ನಡೆದ ಸಮಯದ ಬಗ್ಗೆ ವಿವರಿಸಿದ್ದರು. ತಮಗೆ ಇಷ್ಟವಿಲ್ಲದಿದ್ದರೂ ರಾಜ್‌ ಕುಂದ್ರಾ ನನ್ನನ್ನು ಪ್ರೀತಿಸಿ ಮದುವೆಯಾದರು ಎಂದಿದ್ದರು.. ಇದೀಗ ಕೃತಿ ಕರಬಂಧ ಸಹ ಬಾಲಿವುಡ್‌ ನಟ ಒಬ್ಬರನ್ನು ಪ್ರೀತಿ ಎರಡನೇ ಮದುವೆಯಾಗುತ್ತಿದ್ದಾರೆ. ಇನ್ನು ಕೃತಿ‌ಕರಬಂಧ ಮದುವೆಯಾಗುತ್ತಿರುವ ಆ ನಟ ಮತ್ಯಾರೂ ಅಲ್ಲ.. ಪುಲ್ಕಿತ್ ಸಾಮ್ರಾಟ್.. ಹೌದು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಈ ಹಿಂದೆ ಸಿನಿಮಾವೊಂದರಲ್ಲಿ ಕೃತಿ ಅಭಿನಯಿಸಿದ್ದರು.. ಆ ಸಮಯದಲ್ಲಿಯೇ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿ ಪ್ರೀತಿಗೆ ತಿರುಗಿದೆ. ಆದರೆ ವಿಚಿತ್ರ ಎಂದರೆ ಅದಾಗಲೇ ಪುಲ್ಕಿತ್ ಸಾಮ್ರಾಟ್ ಮದುವೆಯಾಗಿದ್ದರು.. ಹೌದು ಅದಾಗಲೇ ಒಂದು ಮದುವೆಯಾಗಿರುವ ನಟ ಪುಲ್ಕಿತ್ ಸಾಮ್ರಾಟ್ ಕಾನೂನಿನ ಮೂಲಕ‌ ಮೊದಲ ಹೆಂಡತಿಯಿಂದ ದೂರವಾಗಿದ್ದು ಕೃತಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಆಗಾಗ ತನ್ನ ಪ್ರಿಯಕರ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಆತ್ಮೀಯವಾಗಿರುವ ಫೋಟೋಗಳನ್ನು ಹಂಚಿಕೊಳ್ಳುವ ನಟಿ ಕೃತಿ ತಮ್ಮ ಪ್ರೀತಿಗ ವಿಚಾರವನ್ನು ಅದಾಗಲೇ ಬಹಿರಂಗಪಡಿಸಿದ್ದಾರೆ.. ಯಾವುದೇ ಕಾರ್ಯಕ್ರಮವಾಗಲಿ ಸಮಾರಂಭವಾಗಲಿ ಸಿನಿಮಾ ಸಂಬಧಿತ ಸಮಾರಂಭಗಳಲ್ಲಿ‌ ಸದಾ ಒಟ್ಟಾಗಿಯೇ ಕಾಣಿಸಿಕೊಳ್ಳುವ ಜೋಡಿ ಇದೀಗ ಮದುವೆಯ ನಿರ್ಧಾರ ಮಾಡಿದೆ.. ಹೌದು ಮೂವತ್ತೇಳು ವರ್ಷದ ಪುಲ್ಕಿತ್ ಸಾಮ್ರಾಟ್ ಜೊತೆ ಮೂವತ್ತು ವರ್ಷದ ನಟಿ ಕೃತಿ ಕರಬಂಧ ಸಧ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ..

ಖ್ಯಾತ ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಗೂಗ್ಲಿ ನಟಿ ಕೃತಿ ಕರಬಂಧ Read More »

ಅತ್ಯಾಚಾರ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರಿಗೆ 1 ಲಕ್ಷ ಬಹುಮಾನ ಕೊಟ್ಟ ಜಗ್ಗೇಶ್

ಬೆಂಗಳೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೊಲೀಸರು ಮಿಂಚಿನ ವೇಗದಲ್ಲಿ ಬೇಧಿಸಿದ್ದುj, ಕೇವಲ 86 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹೀಗಾಗಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಸರ್ಕಾರ ಪೊಲೀಸ್ ತಂಡಕ್ಕೆ 5 ಲಕ್ಷ ರೂ.ಬಹುಮಾನ ಘೋಷಿಸಿದೆ. ಇದರ ಬೆನ್ನಲ್ಲೇ ಇದೀಗ ನಟ ಜಗ್ಗೇಶ್ ಸಹ ಬಹುಮಾನ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಕಾಮ ಪಿಪಾಸುಗಳನ್ನು ಬಂಧಿಸಿದ ನನ್ನ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ವೈಯಕ್ತಿಕ ಅಭಿನಂದನೆಗಳು. ಐ ಆ್ಯಮ್ ಪ್ರೌಡ್ ಆಫ್ ಮೈ ಸ್ಟೇಟ್ ಪೊಲೀಸ್, ಪ್ರಕರಣ ಬೇಧಿಸಿದ ನಲ್ಮೆಯ ಪೋಲಿಸರಿಗೆ ನನ್ನ ಕಡೆಯಿಂದ 1 ಲಕ್ಷ ರೂ. ಬಹುಮಾನ. ನಿಮ್ಮ ಸಾರ್ಥಕ ಸೇವೆ ಹೀಗೇ ಮುಂದುವರಿಯಲಿ, ರಾಷ್ಟ್ರಕ್ಕೆ ಮಾದರಿ ನಮ್ಮ ಪೋಲಿಸ್ ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಗ್ಗೆ ಈ ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದ ಜಗ್ಗೇಶ್, ಎಂಥ ಕ್ರೂರಿಗಳು, ತಾಯಿ ಹೆಣ್ಣಲ್ಲವೆ? ಅಕ್ಕ, ತಂಗಿ ಹೆಣ್ಣಲ್ಲವೆ? ಮಡದಿ ಹೆಣ್ಣಲ್ಲವೆ? ಹೆಣ್ಣು ಗೌರವಿಸದವರು ರಕ್ಕಸರು, ಈ ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು. ಈ ಕ್ರೂರ ಕೃತ್ಯಕ್ಕೆ ಖಂಡನೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದರು. ಇದೀಗ ಪ್ರಕರಣ ಬೇಧಿಸಿದ ಪೊಲೀಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಹುಮಾನವನ್ನೂ ಘೋಷಿಸಿದ್ದಾರೆ. ಈಗಾಗಲೇ ಪೊಲೀಸರ ಕಾರ್ಯ ಮೆಚ್ಚಿ ಸರ್ಕಾರ ತನಿಖಾ ತಂಡಕ್ಕೆ 5 ಲಕ್ಷ ರೂ. ಬಹುಮಾನ ಘೊಷಿಸಿದೆ. ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿದ್ದ ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ತನಿಖೆ ನಡೆಸಿ ಆರೋಪಿಗಳ ಹಡೆಮುರಿ ಕಟ್ಟಿದ್ದಾರೆ ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಸ್ಥಳದಲ್ಲಿ ಸಿಕ್ಕ ಬಿಯರ್ ಬಾಟ್ಲಿ, ತಳವಾಡಿಯ ಬಸ್ ಟಿಕೆಟ್ ಮತ್ತು ಯುವಕನ ಹೇಳಿಕೆ ಆಧರಿಸಿ ತನಿಖೆ ನಡೆಸಿದ್ದರು. ಘಟನೆ ನಡೆಯುವ ಮೂರು ದಿನಗಳ ಮುಂಚೆ ಮತ್ತು ಒಂದು ದಿನದ ಹಿಂದೆ ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ಘಟನಾ ಸ್ಥಳಕ್ಕೆ ಬಂದಿರುವುದನ್ನು ಕಾಮಕರು ಫಾಲೋ ಮಾಡಿದ್ದರು. ಘಟನೆ ನಡೆದ ದಿನದಿಂದ ಕಾಮುಕರು ಎಸ್ಕೇಪ್ ಆಗಿದ್ದರು, ಪೊಲೀಸರು ತನಿಖೆ ಮುಂದುವರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅತ್ಯಾಚಾರ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರಿಗೆ 1 ಲಕ್ಷ ಬಹುಮಾನ ಕೊಟ್ಟ ಜಗ್ಗೇಶ್ Read More »

ರಕ್ಷಿತ್ ಶೆಟ್ಟಿ ಕಡೆಯಿಂದ ಗೌರಿ-ಗಣೇಶ ಹಬ್ಬಕ್ಕೆ ಸಿಕ್ತಿದೆ ಭರ್ಜರಿ ಗಿಫ್ಟ್

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಕ್ಷಿತ್, ಬಹುನಿರೀಕ್ಷೆಯ 777 ಚಾರ್ಲಿ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಭಾರಿ ಕುತೂಹಲ ಮೂಡಿಸಿರುವ 777 ಚಾರ್ಲಿ ಕಡೆಯಿಂದ ಮತ್ತೊಂದು ಭರ್ಜರಿ ಸುದ್ದಿ ಹೊರಬಿದ್ದಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ಚಾರ್ಲಿತಂಡ ಗೌರಿ-ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಸಖತ್ ಗಿಫ್ಟ್ ಕೊಡಲು ಮುಂದಾಗಿದೆ. ಚಿತ್ರದಿಂದ ಮೊದಲ ಹಾಡನ್ನು ಬಿಡುಗಡೆ ಮಾಡಲು ಸಿನಿಮಾತಂಡ ಸಿದ್ಧವಾಗಿದೆ. ಚಿತ್ರದಿಂದ ಮೊದಲ ವಿಡಿಯೋ ಹಾಡನ್ನು ಬಿಡುಗಡೆ ಮಾಡುವುದಾಗಿ ಸಿನಿಮಾ ತಂಡ ಘೋಷಣೆ ಮಾಡಿದೆ. 777ಚಾರ್ಲಿ ಸಿನಿಮಾದ ಮೊದಲ ವಿಡಿಯೋ ಹಾಡು ‘ಟಾರ್ಚರ್’ ಸಾಂಗ್ ಸೆಪ್ಟಂಬರ್ 9ಕ್ಕೆ ಬಿಡುಗಡೆಯಾಗುತ್ತಿದೆ. ಗೌರಿ-ಗಣೇಶ ಹಬ್ಬಕ್ಕೂ ಮುಂಚಿತವಾಗಿ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡುತ್ತಿದೆ ತಂಡ. ಅಂದಹಾಗೆ ಈ ಹಾಡು ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಮೊದಲ ಟೀಸರ್ ಸಹ ಕನ್ನಡದ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಹಾಗೂ ಹಿಂದಿಯಲ್ಲೂ ಬಿಡುಗಡೆಯಾಗಿತ್ತು. ಟೀಸರ್‌ಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಮೊದಲ ಹಾಡು ಎಲ್ಲಾ ಭಾಷೆಯಲ್ಲೂ ಬರ್ತಿರುವುದು ಕುತೂಹಲ ಹೆಚ್ಚಿಸಿದೆ. ಈ ಬಗ್ಗೆ ಮಾಹಿತಿ ನೀಡಿರುನ ರಕ್ಷಿತ್ ಶೆಟ್ಟಿ, “ನಮ್ಮ 777ಚಾರ್ಲಿ ಚಿತ್ರದ ಮೊದಲ ವಿಡಿಯೋ ಸಾಂಗ್ ಇದೇ ಸೆಪ್ಟೆಂಬರ್ 9ರಂದು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ” ಎಂದು ಹೇಳಿದ್ದಾರೆ. ಅಂದಹಾಗೆ 777 ಚಾರ್ಲಿ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ನೋಬಿನ್ ಪೌಲ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಾರ್ಲಿ ಸಿನಿಮಾದಲ್ಲಿ ಮನುಷ್ಯ ಮತ್ತು ನಾಯಿಯ ಜೊತೆಗಿನ ಭಾವುಕ, ಪ್ರೀತಿಯ ಪಯಣದ ಕಥೆ ಎನ್ನುವುದು ಈಗಾಗಲೇ ಗೊತ್ತಾಗಿದೆ. ಚಿತ್ರದಲ್ಲಿ ರಕ್ಷಿತ್ ಹೆಸರು ಧರ್ಮ ಮತ್ತು ನಾಯಿಯ ಹೆಸರು ಚಾರ್ಲಿ. ಚಿತ್ರಕ್ಕೆ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್, ಬಾಬಿ ಸಿಂಹ ಇನ್ನೂ ಹಲವರು ನಟಿಸಿದ್ದಾರೆ. ಸದ್ಯ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ಸಿನಿಮಾತಂಡ ಟೀಸರ್, ಹಾಡುಗಳನ್ನು ಬಿಡುಗಡೆ ಮೂಡುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎನ್ನುವ ಮಾಹಿತಿ ಇನ್ನು ರಿವೀಲ್ ಮಾಡಿಲ್ಲ. ಸದ್ಯ ಕೊರೊನಾ 3ನೇ ಅಲೆಯ ಆತಂಕ, ಚಿತ್ರಮಂದಿರಗಳಲ್ಲಿ ಇನ್ನೂ ಶೇ. 50 ರಷ್ಟು ಭರ್ತಿಗೆ ಮಾತ್ರ ಇರುವ ಕಾರಣ ಸಿನಿಮಾತಂಡ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಸದ್ಯದಲ್ಲೇ ಎಲ್ಲಾ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಇನ್ನು ರಕ್ಷಿತ್ ಶೆಟ್ಟಿ ಸಿನಿಮಾ ವಿಚಾರಕ್ಕೆ ಬರುವುದಾದರೆ ರಕ್ಷಿತ್ ಸದ್ಯ 777 ಚಾರ್ಲಿ ಬಿಡುಗಡೆ ಜೊತೆಗೆ, ಸಪ್ತಸಾಗರದಾಚೆ ಎಲ್ಲೋ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರಕ್ಕೆ ಹೇಮಂತ್ ರಾವ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಸಿನಿಮಾ ಬಳಿಕ ಪುಣ್ಯಕೋಟಿ ಸಿನಿಮಾ ಕೂಡ ರಕ್ಷಿತ್ ಕೈಯಲ್ಲಿದೆ. ಇತ್ತೀಚಿಗಷ್ಟೆ ‘ರಿಚರ್ಡ್’ ಸಿನಿಮಾ ಘೋಷಣೆ ಮಾಡಿದ್ದಾರೆ. ಚಿತ್ರಕ್ಕೆ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟನೆಯ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ರಿಚರ್ಡ್ ಸಿನಿಮಾ ನಿರ್ದೇಶನದ ಮೂಲಕ ರಕ್ಷಿತ್ 7 ವರ್ಷಗಳ ಬಳಿಕ ಮತ್ತೆ ನಿರ್ದೇಶನದ ಕಡೆ ಮುಖ ಮಾಡುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ ಅಥವಾ ಜನವರಿಯಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಎಲ್ಲಾ ಸಿನಿಮಾಗಳ ಜೊತೆಗೆ ಕಿರಿಕ್ ಪಾರ್ಟಿ-2 ಸಿನಿಮಾ ಕೂಡ ಮಾಡುವುದಾಗಿ ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ ಕಡೆಯಿಂದ ಗೌರಿ-ಗಣೇಶ ಹಬ್ಬಕ್ಕೆ ಸಿಕ್ತಿದೆ ಭರ್ಜರಿ ಗಿಫ್ಟ್ Read More »

Scroll to Top