Karnataka Bhagya

Blog

Your blog category

ಸಿನಿಮಾ ಅರ್ಧದಲ್ಲಿ ಕೈ ಬಿಟ್ಟು ರಶ್ಮಿಕಾ ಎಸ್ಕೇಪ್, ಹೊಸ ನಾಯಾಕಿಗಾಗಿ ಸಿನಿಮಾ ತಂಡ ಹುಡುಕಾಟ.

ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎನ್ನುವುದು ಸಿನಿ ಪ್ರೇಕ್ಷಕರ ವಿಚಾರ, ಅದರಂತೆ ಸಾಕಷ್ಟು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯಸಿಯಾಗಿರುವ ನಟ ರಶ್ಮಿಕಾ ಮಂದಣ್ಣ ಸಿನಿಮಾದಿಂದ ರಶ್ಮಿಕಾ ಹೊರ ನಡೆದಿದ್ದಾರೆ. ಈ ವಿಚಾರವನ್ನು ಯಾರೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ನಟಿ ರಶ್ಮಿಕಾ ಮಂದಣ್ಣರ ಡಿಮ್ಯಾಂಡ್ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದು ಕಡಿಮೆಯಂತು ಆಗುತ್ತಿಲ್ಲ. ಸಾಕಷ್ಟು ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಞ ಹೇಳದೆ ಕೇಳದೆ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ವೆಂಕಿ ಕುಡುಮುಲ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಅವರು ನಿತಿನ್​ಗೆ ಜೊತೆಯಾಗಿ ನಟಿಸಬೇಕಿತ್ತು. ಆದರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಈ ಜಾಗಕ್ಕೆ ದಕ್ಷಿಣದ ಖ್ಯಾತ ನಟಿಯ ಎಂಟ್ರಿ ಆಗಿದೆ ಅನ್ನೋದು ವಿಶೇಷ. ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಈ ಆಫರ್ ನೀಡಲಾಗಿದೆ ಎನ್ನುವ ಸುದ್ದಿ ಹರಿದಾಡಿದೆ. ವೆಂಕಿ ಅವರು ಕೃತಿ ಅವರನ್ನು ಭೇಟಿ ಮಾಡಿದ್ದು, ಶೀಘ್ರವೇ ಎಲ್ಲವೂ ಫೈನಲ್ ಆಗಲಿದೆ ಎನ್ನಲಾಗುತ್ತಿದೆ. ರಶ್ಮಿಕಾ ಮಂದಣ್ಣ ಅವರು ಟಾಲಿವುಡ್​​ಗೆ ಎಂಟ್ರಿಕೊಟ್ಟಿದ್ದು ‘ಚಲೋ’- “ಭೀಷ್ಮ” ಸಿನಿಮಾ ಮೂಲಕ. ಈ ಚಿತ್ರವನ್ನು ವೆಂಕಿ ಕುಡುಮುಲ ನಿರ್ದೇಶನ ಮಾಡಿದ್ದರು.ನಿತಿನ್, ವೆಂಕಿ ಹಾಗೂ ರಶ್ಮಿಕಾ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬರುವುದರಲ್ಲಿತ್ತು. #VNRTrio ಎಂದು ಈ ಚಿತ್ರಕ್ಕೆ ತಾತ್ಕಾಲಿಕ ಶೀರ್ಷಿಕೆ ಇಡಲಾಗಿತ್ತು. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬಂದಿತ್ತು. ಒಂದೇ ಬಾರಿಗೆ ಇಷ್ಟು ಚಿತ್ರಗಳಿಗೆ ಡೇಟ್ಸ್ ಅಡ್ಜೆಸ್ಟ್ ಮಾಡಲು ಸಾಧ್ಯವಾಗದ ಕಾರಣ ರಶ್ಮಿಕಾ ನಿರ್ಮಾಪಕರ ಬಳಿ ಮಾತನಾಡಿ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಸಿನಿಮಾ ಅರ್ಧದಲ್ಲಿ ಕೈ ಬಿಟ್ಟು ರಶ್ಮಿಕಾ ಎಸ್ಕೇಪ್, ಹೊಸ ನಾಯಾಕಿಗಾಗಿ ಸಿನಿಮಾ ತಂಡ ಹುಡುಕಾಟ. Read More »

ಶಿವಮ್ಮನಿಗೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ‘ರಿಷಬ್ ಶೆಟ್ಟಿ ಫಿಲ್ಮ್ಸ್’ ನ ಶಿವಮ್ಮ

ದೊಡ್ಡ ಬಜೆಟ್- ದೊಡ್ಡ ಸ್ಟಾರ್ ಗಳ ನಡುವೆ ಕನ್ನಡದ ಕೆಲವು ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಖತ್ ಸದ್ದು ಮಾಡುತ್ತಿವೆ. ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ. ರಿಷಬ್ ಶೆಟ್ಟಿ ಸಂಸ್ಥೆಯ ‘ಶಿವಮ್ಮ’ ಚಿತ್ರ ಪ್ರಪಂಚಾದ್ಯಂತ ತನ್ನ ತೆಕ್ಕೆಗೆ ಪ್ರಶಸ್ತಿ, ಪ್ರಶಂಸೆಯನ್ನು ಗಳಿಸಿ ತನ್ನ ವರ್ಲ್ಡ್ ಟೂರಿನ ಮ್ಯಾರಥಾನ್ ಅನ್ನು ಮುಂದುವರಿಸಿದೆ. ಜೈ ಶಂಕರ್ ಆರ್ಯರ್ ನಿರ್ದೇಶನದ ಚೊಚ್ಚಲ ಚಿತ್ರ.ಈವರೆಗೂ ಶಿವಮ್ಮ ಗೆದ್ದ ಪ್ರಶಸ್ತಿಗಳ ಪಟ್ಟಿ ದೊಡ್ಡದಿದೆ. ನ್ಯೂ ಕರೆಂಟ್ಸ್ ಪುರಸ್ಕಾರ, ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ,ಯಂಗ್ ಜೂರಿ ಪುರಸ್ಕಾರ, ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್, ನಾಂಟೆಸ್, ಅತ್ಯುತ್ತಮ ನಿರ್ದೇಶಕ, ಫಾಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗ್ರಾಂಡ್ ಪ್ರಿಕ್ಸ್ ಅಟ್ ಜೆರ್ಕೋಲೊ ಹೈನಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೀನಾ ಬ್ಲಾಕ್ ಮೂವಿ, ಸ್ವಿಟ್ಜರ್ಲ್ಯಾಂಡ್ ಫಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ , ಇರಾನ್ ಗೋಥೆಂಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಪೀಡನ್ ಫಿಲ್ಮ್ ಫೆಸ್ಟ್ ಮುಂಚಿಯನ್, ಮ್ಯುನಿಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ , ರಷ್ಯಾ ಇಮೆಜಿನ್ ಇಂಡಿಯಾ, ಸ್ಪೇನ್ ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ, ಕೆನಡ ಇಂಡಿಯನ್ ಪಿಲ್ಮ್ ಫೆಸ್ಟಿವಲ್, ಮೆಲ್ಬೋರ್ನ್ ಅಂಡ್ರಿ ತರ್ಕೊವ್ಸ್ಕಿ ಅಂತರ್ರಾಷ್ಟ್ರೀಯ ಚಿತ್ರೋತ್ಸವ ಮುಂತಾದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ರಿಷಬ್ ಶೆಟ್ಟಿ:ಇಂಥದ್ದೊಂದು ಸಿನಿಮಾ ತಮ್ಮದೇ ಬ್ಯಾನರ್ ನಲ್ಲಿ ಬಂದಿದ್ದು, ಸಹಜವಾಗಿಯೇ ಅವರಿಗೆ ಸಂಭ್ರಮ ತಂದಿದೆ. ಈ ಸಿನಿಮಾ ಇನ್ನೂ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಲಿ ಎಂದು ನಿರ್ದೇಶಕರಿಗೆ ರಿಷಬ್ ಹಾರೈಸಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಶಿವಮ್ಮನಿಗೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ‘ರಿಷಬ್ ಶೆಟ್ಟಿ ಫಿಲ್ಮ್ಸ್’ ನ ಶಿವಮ್ಮ Read More »

ಕೆಜಿಎಫ್ 2 ದಾಖಲೆ‌ ಮುರಿದ ಸಲಾರ್ ಓಟಿಟಿಯಲ್ಲು ಸಲಾರ್ ನಂಬರ್ -1

ಟೀಸರ್‌ ಮೂಲಕ ಸಖತ್ ಸುದ್ದಿಯಾಗಿದ್ದ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಈಗ ಓಟಿಟಿ ಹಕ್ಕು ಮಾರಾಟದ ವಿಚಾರದಲ್ಲು ಸಖತ್ ಸೌಂಡ್ ಮಾಡುತ್ತಿದೆ.ಜುಲೈ 6 ರಂದು ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 24 ಗಂಟೆಯೊಳಗೆ 83 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ.ದೊಡ್ಡ ಮೊತ್ತಕ್ಕೆ ಸಲಾರ್‌ ಚಿತ್ರದ ಒಟಿಟಿ ಹಕ್ಕುಗಳು ಮಾರಾಟವಾಗಿವೆ ಎಂಬ ವಿಚಾರ ಕೇಳಿಬರುತ್ತಿದೆ. ಹೊಂಬಾಳೆ ಫಿಲಂಸ್‌ ನಿರ್ಮಾಣದ ಸಿನಿಮಾ ಎಂಬುದು ಒಂದೆಡೆಯಾದರೆ, ಪ್ರಶಾಂತ್‌ ನೀಲ್‌ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೂ ಚಿತ್ರ ನಿರೀಕ್ಷೆಯನ್ನು ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಟೀಸರ್‌ ಸಹ ಹೆಚ್ಚು ಜನರಿಂದ ನೋಡಲ್ಪಟ್ಟಿದೆ. ಹೀಗೆ ಹಲವು ಕಾರಣಕ್ಕೆ ಸುದ್ದಿಯಲ್ಲಿರುವ ಈ ಸಿನಿಮಾ ಇದೀಗ ಒಟಿಟಿ ವಿಚಾರದಲ್ಲಿಯೂ ದೊಡ್ಡ ಮೊತ್ತವನ್ನೇ ಸ್ವೀಕರಿಸಿದೆ. ಸದ್ಯದ ಟ್ರೆಂಡ್‌ ಮತ್ತು ಕ್ರೇಜ್‌ ನೋಡಿದರೆ ಸಲಾರ್‌ ಸಿನಿಮಾ ಮೊದಲ ದಿನವೇ ಬಿಗ್‌ ಓಪನಿಂಗ್‌ ಪಡೆದುಕೊಳ್ಳಲಿದೆ ಎನ್ನಲಾಗುತ್ತಿದೆ. ಸಾವಿರಾರು ಸ್ಕ್ರೀನ್‌ ಮೇಲೆ ಸಲಾರ್‌ ಅಬ್ಬರಿಸಲಿದೆ. ಈ ಹಿನ್ನೆಲೆಯಲ್ಲಿ ಹೊಂಬಾಳೆಯ ಈ ಹಿಂದಿನ ಬೇರಾವ ಸಿನಿಮಾ ಮಾಡದ ದಾಖಲೆಯನ್ನು ಸಲಾರ್‌ ಮಾಡಲಿದೆ ಎಂದೇ ಹೇಳಲಾಗುತ್ತಿದೆ. ಕೆಜಿಎಫ್‌ 2 ಸಿನಿಮಾ 1200 ಪ್ಲಸ್‌ ಕೋಟಿ ಕಲೆಕ್ಷನ್‌ ಮಾಡಿತ್ತು. ಆ ಚಿತ್ರದ ದಾಖಲೆಯನ್ನು ಸಲಾರ್‌ ಮುರಿದಿದೆ ಎಂಬ ಟಾಕ್‌ ಕೇಳಿಬರುತ್ತಿದೆ. ಸಲಾರ್ ಚಿತ್ರ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಡಿಜಿಟಲ್ ರೈಟ್ಸ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಒಟಿಟಿ ದೈತ್ಯ ಅಮೆಜಾನ್‌ ಪ್ರೈಂ ಸಲಾರ್ ಒಟಿಟಿ ಡೀಲ್ ಮುಗಿಸಿಕೊಂಡಿದೆ. ಸಲಾರ್‌ನ ಸೌತ್‌ನ ಎಲ್ಲ ಭಾಷೆ ಮತ್ತು ಹಿಂದಿ ಭಾಷೆಯ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. ಅದೂ ಬರೋಬ್ಬರು 200 ಕೋಟಿ ರೂಪಾಯಿಗೆ! ಹೊಂಬಾಳೆ ಸಂಸ್ಥೆ ಲಾಭದ ಕಡೆ ಹೊರಳುತ್ತಿದ್ದಾರೆ. ಚಿತ್ರಕ್ಕೆ ನಿರ್ಮಾಪಕರು ಹಾಕಿದ ಬಂಡವಾಳದ ಶೇ.80ರಿಂದ 90ರಷ್ಟನ್ನು ಒಟಿಟಿ ರೈಟ್ಸ್ ಮೂಲಕ ವಸೂಲಿಯಾಗಿದೆ ಎಂದು ವರದಿಯಾಗಿದೆ. ಇನ್ನುಳಿದಂತೆ ಸಿನಿಮಾ ಬಿಡುಗಡೆ ಬಳಿಕ ಬರುವ ಚಿತ್ರಮಂದಿರದ ಕಲೆಕ್ಷನ್‌ ಮತ್ತು ಸ್ಯಾಟಲೈಟ್‌ ಹಕ್ಕುಗಳಿಂದಲೂ ಬರುವ ಮೊತ್ತವೂ ಹೆಚ್ಚುವರಿ ಲಾಭವೇ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಕೆಜಿಎಫ್ 2 ದಾಖಲೆ‌ ಮುರಿದ ಸಲಾರ್ ಓಟಿಟಿಯಲ್ಲು ಸಲಾರ್ ನಂಬರ್ -1 Read More »

ಖುಷಿ ಸಿನಿಮಾದ ಎರಡನೇ ಹಾಡು ರಿಲೀಸ್..ವಿಜಯ್ ದೇವರಕೊಂಡ ಸಮಂತಾ ಜೋಡಿಯ ಪ್ರೇಮಗೀತೆ ಹೇಗಿದೆ?

ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ಬಹುನಿರೀಕ್ಷಿತ ಖುಷಿ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಗಂಡ ಹೆಂಡತಿ ನಡುವಿನ ಪ್ರೇಮಗೀತೆ ಇದಾಗಿದ್ದು, ಸ್ಯಾಮ್ ಹಾಗೂ ವಿಜಯ್ ಕೆಮಿಸ್ಟ್ರೀ ನೋಡುಗರ ಗಮನಸೆಳೆಯುತ್ತಿದೆ. ಕನ್ನಡದಲ್ಲಿಯೂ ಅನಾವಣಗೊಂಡಿರುವ ಆರಾಧ್ಯ ಸಿಂಗಿಂಗ್ ಮಸ್ತಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರಿಚರಣ್ ಹಾಗೂ ಚಿನ್ಮಯಿ ಶ್ರೀಪಾದ್ ಧ್ವನಿಯಾಗಿದ್ದಾರೆ. ಹೇಶಾಮ್ ಅಬ್ದುಲ್ ವಹಾಬ್ ಟ್ಯೂನ್ ಹಾಕಿದ್ದಾರೆ. ಈಗಾಗ್ಲೇ ರಿಲೀಸ್ ಆಗಿದೆ ನನ್ನ ರೋಜಾ ನೀನೇ ಎಂಬ ಹಾಡಿಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದ್ದು, ಈಗ ಆರಾಧ್ಯ ಗೀತೆಯ ಸರದಿ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಖುಷಿ ಸಿನಿಮಾ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ತೆರೆಗೆ ಬರಲಿದೆ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಮಜಿಲಿ ಹಿಟ್ ನಿರ್ದೇಶಕ ಶಿವ ನರ್ವಣ ನಿರ್ದೇಶಿಸುತ್ತಿದ್ದಾರೆ. ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಖುಷಿ ಸಿನಿಮಾ ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವಿನ್ನಿಲ್ಲಾ ಕಿಶೋರ್, ರೋಹಿನಿ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. ಹೇಷಂ ವಾಹೆಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಖುಷಿ ಸಿನಿಮಾದ ಎರಡನೇ ಹಾಡು ರಿಲೀಸ್..ವಿಜಯ್ ದೇವರಕೊಂಡ ಸಮಂತಾ ಜೋಡಿಯ ಪ್ರೇಮಗೀತೆ ಹೇಗಿದೆ? Read More »

ಟ್ರೇಲರ್ ಮೂಲಕ ಗಮನಸೆಳೆದ ಹೊಸಬರ ಆರ..ಜುಲೈ 28ರಂದು ಸಿನಿಮಾ ರಿಲೀಸ್

ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿರುವ ಹೊಸಬರ ಆರ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ನೋಡುಗರ ಗಮನಸೆಳೆಯುತ್ತಿದೆ. ಸಸ್ಪೆನ್ಸ್, ಪಯಣ, ಪ್ರೀತಿ, ದುಷ್ಟ ಶಕ್ತಿ, ದೈವ ಸಂಘರ್ಷದ ಕಥಾಹಂದರ ಒಳಗೊಂಡಿರುವ ಸ್ಪಿರಿಚುಯಲ್ ಡ್ರಾಮಾ ಮತ್ತು ಥ್ರಿಲ್ಲರ್ ಜಾನರ್ ಸಿನಿಮಾ ‘ಆರ’. ಈ ಚಿತ್ರವನ್ನು ಅಶ್ವಿನ್ ವಿಜಯಮೂರ್ತಿ ನಿರ್ದೇಶಿಸಿದ್ದಾರೆ. ಸಿನಿಮಾ, ಸಂಪೂರ್ಣ ಹೊಸ ಪ್ರತಿಭೆಗಳಿಂದ, ಹೊಸತನದಿಂದ ಕೂಡಿದೆ. ರೋಹಿತ್ ಹಾಗೂ ದೀಪಿಕಾ ಆರಾಧ್ಯ ‘ಆರ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಚಿತ್ರದ ನಾಯಕ ರೋಹಿತ್ ಬರೆದಿದ್ದು. ಆನಂದ್ ನೀನಾಸಂ ಸತ್ಯ ರಾಜ್ ನಿಖಿಲ್ ಶ್ರೀಪಾದ್ ಪ್ರತೀಕ್ ಲೋಕೇಶ್ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ ಅಶ್ವಿನ್ ವಿಜಯಮೂರ್ತಿ ಮಾತನಾಡಿ, ಒಬ್ಬ ಹುಡುಗನ ಜರ್ನಿ ಕಥೆ ಇದು. ಆ ಜರ್ನಿಯಲ್ಲಿ ಅವನು ಆಧ್ಯಾತ್ಮಿಕವಾಗಿ ಯಾವ ರೀತಿ ಸವಾಲುಗಳನ್ನು ಎದುರಿಸುತ್ತಾನೆ. ಅದು ಯಾವುದೇ ಮುಖಾಂತರವಾಗಿಯಾದರು ಬರಬಹುದು. ಹೆಣ್ಣಿನ ಮೂಲಕವಾದರೂ ಬರಬಹುದು. ದುಡ್ಡಿನ ಮೂಲಕವಾದರು ಬರಬಹುದು. ಸಂಬಂಧಗಳ ಮೂಲಕವಾದರ ಬರಬಹುದು. ನಮ್ಮ ಜೀವನದಲ್ಲಿ ಯಾರೊಬ್ಬರಾದರೂ ಬಂದರು. ಅವರು ತೋರಿಸಿಕೊಳ್ಳಲು ಬರುತ್ತಾರೆ. ತಿಳಿಸಿಕೊಡಲು ಬರ್ತಾರೆ. ಈ ಸವಾಲುಗಳನ್ನು ಎದುರಿಸಿ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾರಾ ಅನ್ನೋದು ಕಥೆ. ಇದನ್ನು ಕಮರ್ಷಿಯಲ್ ಆಗಿ ಆಧ್ಯಾತ್ಮಿಕವಾಗಿ ತೋರಿಸಲಾಗಿದೆ ಎಂದರು. ‘ಆರ’ ಎಂಬ ಯುವಕನ ಸುತ್ತ ಹೆಣೆದ ಕಥೆಯಿದು. ವಿಧಿಯ ಜೊತೆ ಸೇರಿ ಸಂರಕ್ಷಣೆಗಾಗಿ ಹೋರಾಡುವ ಸ್ಟೋರಿ ಚಿತ್ರದಲ್ಲಿ ಇದೆ. ಚಿತ್ರದ ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ನಡೆದಿದೆ. ಚಿತ್ರದಲ್ಲಿ ಉಡುಪಿಯ ಕನ್ನಡವನ್ನು ಬಳಸಲಾಗಿದೆ. ಈ ಚಿತ್ರವನ್ನು ‘ಎಆರ್’ ಫಿಲ್ಮ್ಸ್‌ ಬ್ಯಾನರ್ ಅಡಿ ಸುಜಾತ ಚಡಗ, ಚಂದ್ರಶೇಖರ್ ಸಿ ಜಂಬಿಗಿ ನಿರ್ಮಾಣ ಮಾಡಿದ್ದಾರೆ. ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ನಿರ್ದೇಶನ, ಮಾದೇಶ್ ಸಂಕಲನ, ದೇವಿ ಪ್ರಕಾಶ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಆರ ಇದೇ ಜುಲೈ 28ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಟ್ರೇಲರ್ ಮೂಲಕ ಗಮನಸೆಳೆದ ಹೊಸಬರ ಆರ..ಜುಲೈ 28ರಂದು ಸಿನಿಮಾ ರಿಲೀಸ್ Read More »

‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಮಾಡಿದ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ

ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಸಿನಿಮಾ ಜಗತ್ತಿಗೂ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ತಮ್ಮದೇ ಧೋನಿ ಎಂಟರ್ ಟೈನ್ಮೆಂಟ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಈ ಸಂಸ್ಥೆಯಡಿ ಧೋನಿ ಪತ್ನಿ ಸಾಕ್ಷಿ ಧೋನಿ ಲೆಟ್ಸ್ ಗೆಟ್ ಮ್ಯಾರೀಡ್ ಎಂಬ ತಮಿಳು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಚೆನ್ನೈನಲ್ಲಿ ನೆರವೇರಿದೆ. ಕ್ಯಾಪ್ಟನ್ ಕೂಲ್ ತಮ್ಮದೇ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾದ ಟ್ರೇಲರ್ ಅನಾವರಣ ಮಾಡಿ ಹಲವು ವಿಷಯಗಳನ್ನು ಹಂಚಿಕೊಂಡರು. ಎಂ.ಎಸ್.ಧೋನಿ ಮಾತನಾಡಿ, ನಾನು ಈ ಸಿನಿಮಾವನ್ನು ನೋಡಿದ್ದೇನೆ. ತುಂಬಾ ಎಂಟರ್ ಟೈನರ್ ಆಗಿದೆ. ನಾನು ನನ್ನ ಮಗಳ ಜೊತೆ ಸಿನಿಮಾ ನೋಡಬಹುದು. ಅವಳು ತುಂಬಾ ಪ್ರಶ್ನೆಗಳನ್ನು ಕೇಳುತ್ತಾಳೆ. ಇಡೀ ಚಿತ್ರತಂಡ ಅದ್ಭುತ ಕೆಲಸ ಮಾಡಿದೆ. ಈ ಪ್ರಾಜೆಕ್ಟ್ ನ್ನು ಅವರು ನಿಭಾಯಿಸಿದ ರೀತಿ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಹೆಂಡತಿಗೆ ಸಿನಿಮಾ ಮಾಡಬೇಕು ಎಂದಾಗ ನಾನು ಹೇಳಿದ್ದು ಒಂದೇ, ಸಿನಿಮಾ ಮಾಡುವುದೆಂದರೆ ಮನೆ ವಿನ್ಯಾಸ ಮಾಡಿದಂತೆ ಅಲ್ಲ. ನೀವು ಗೋಡೆಗೆ ಬಣ್ಣ ಹಾಕುತ್ತೀರ. ನಿಮಗೆ ಇಷ್ಟವಿಲ್ಲ, ನೀವು ಬಣ್ಣವನ್ನು ಬದಲಾಯಿಸುತ್ತೀರಿ. ನಂತರ, ಮೊದಲ ಬಣ್ಣವು ಉತ್ತಮವಾಗಿದೆ ಎಂದು ನೀವು ಅರಿತುಕೊಳ್ಳುತ್ತೀರಿ ಮತ್ತು ನಂತರ ನೀವು ಅದನ್ನು ಮತ್ತೆ ಬಣ್ಣಿಸುತ್ತೀರಿ. ಸಿನಿಮಾಗಳಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಸಿನಿಮಾಗಳಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾ ಸ್ವಲ್ಪ ದಿನಗಳಲ್ಲಿ ಥಿಯೇಟರ್ ಗೆ ಬರಲಿದೆ. ಅತ್ತೆ ಸೊಸೆ ಹಾಗೂ ಮಗನ ನಡುವೆ ನಡೆಯುವ ಕಥೆ ಎಂದರು. ಸಾಕ್ಷಿ ಧೋನಿ ಮಾತನಾಡಿ, ನನ್ನ ಬಹಳಷ್ಟು ಸ್ನೇಹಿತರು ಮತ್ತು ನಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬರೂ ಸಾಮಾನ್ಯವಾಗಿ ಜೀವನದಲ್ಲಿ ಇಂತಹ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಹೀಗಾಗಿ ಇದನ್ನು ಚಲನಚಿತ್ರವಾಗಿ ಏಕೆ ಮಾಡಬಾರದು ಎಂದು ನಾವು ಯೋಚಿಸಿದ್ದೇವೆ. ಆದ್ದರಿಂದ ನಾವು ಮಾತನಾಡಿದ್ದೇವೆ. ಇದು ನಮ್ಮ ಮೊದಲ ಸಿನಿಮಾ ಆಗಿದ್ದರಿಂದ ತಮಿಳಿನಲ್ಲಿ ಮಾಡಲು ಬಯಸಿದ್ದೆವು. ಈ ಸಿನಿಮಾ ಮಾತ್ರವಲ್ಲದೆ ನಮ್ಮಲ್ಲಿರುವ ಉಳಿದ ಚೆನ್ನೈನಿಂದಲೇ ಶುರು ಮಾಡುತ್ತೇವೆ ಎಂದರು. ರಮೇಶ್ ತಮಿಳಮಣಿ ನಿರ್ದೇಶನದ ಈ ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿರುವ ಲೆಟ್ಸ್ ಗೆಟ್ ಮ್ಯಾರೀಡ್ ಆದಷ್ಟು ಬೇಗ ತೆರೆಗೆ ಬರಲಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಮಾಡಿದ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ Read More »

ಗಿಣಿರಾಮ ಸೀರಿಯಲ್ ಹೀರೋ ಹೊಸ ಸಿನಿಮಾಗೆ ‘ಉತ್ಸವ’ ಟೈಟಲ್

ಕನ್ನಡ ಚಿತ್ರರಂಗದಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಭಿನ್ನ-ವಿಭಿನ್ನ ಹಾಗೂ ಪ್ರಯೋಗಾತ್ಮಕ ಕಥೆಗಳಿಂದ ಚಿತ್ರರಂಗಕ್ಕೆ ಹೊಸ ಮೆರಗು ಸಿಗುತ್ತಿದೆ. ಅಂಥಾದ್ದೇ‌ ಆವೇಗದಲ್ಲಿ ರೂಪಗೊಂಡಿರುವ ಹೊಸಬರ ಸಿನಿಮಾಗೆ ಉತ್ಸವ ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರದ ಮೂಲಕ ಯುವ ನಿರ್ದೇಶಕರ ಆಗಮನವಾಗುತ್ತಿದೆ. ನಾಗೇಂದ್ರ ಅರಸ್ ಸೇರಿದಂತೆ ಹಲವು ನಿರ್ದೇಶಕ ಗರಡಿಯಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅರುಣ್ ಸೂರ್ಯ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಸದ್ದಿಲ್ಲದೆ ಶೂಟಿಂಗ್ ಮುಗಿಸಿರುವ ಉತ್ಸವ ಸಿನಿಮಾದಲ್ಲಿ ಗಿಣಿರಾಮ ಸೀರಿಯಲ್ ಖ್ಯಾತಿಯ ರಿತ್ವಿಕ್ ಮಠದ್ ನಾಯಕನಾಗಿ ನಟಿಸಿದ್ದು, ಈ ಹಿಂದೆ ಆ ಎರಡು ವರ್ಷಗಳು, ಗಿಫ್ಟ್ ಬಾಕ್ಸ್ ಚಿತ್ರದಲ್ಲಿ ನಟಿಸಿದ್ದ ಇವರಿಗೆ ಇದು ಮೂರನೇ ಸಿನಿಮಾವಾಗಿದೆ. ಫೇಸ್ಟು ಪೇಸ್ ಸಿನಿಮಾ ಖ್ಯಾತಿಯ ಪೂರ್ವಿ ಜೋಷಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ನಾಗೇಂದ್ರ ಅರಸ್, ಪ್ರಕಾಶ್ ತುಮ್ಮಿನಾಡ್ ತಾರಾಬಳಗದಲ್ಲಿದ್ದಾರೆ. ಪ್ರೇಮಕಥಾ ಹಂದರ ಹೊಂದಿರುವ ಉತ್ಸವ ಸಿನಿಮಾವನ್ನು ಅರಸ ಪ್ರೊಡಕ್ಷನ್ ನಡಿ ಉಷಾ ಶ್ರೀನಿವಾಸ ನಿರ್ಮಾಣ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ ಹಾಡುಗಳಿಗೆ ಎಮಿನಲ್ ಮಹಮ್ಮದ್ ಸಂಗೀತ ಒದಗಿಸಿದ್ದು, ಜಾವೀದ್ ಆಲಿ ಹಾಗೂ ಅಕಿಂತಾ ಕುಂಡು ಧ್ವನಿಯಾಗಿದ್ದಾರೆ. ಶಿವರಾಜ್ ಮೆಹೋ ಸಂಕಲನ, ಗೌತಮ್ ಮನು ಛಾಯಾಗ್ರಹಣ ಚಿತ್ರಕ್ಕಿದೆ. ಮನಾಲಿ ಹಾಗೂ ಗೋವಾದಲ್ಲಿ ಉತ್ಸವ ಶೂಟಿಂಗ್ ನಡೆಸಲಾಗಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಗಿಣಿರಾಮ ಸೀರಿಯಲ್ ಹೀರೋ ಹೊಸ ಸಿನಿಮಾಗೆ ‘ಉತ್ಸವ’ ಟೈಟಲ್ Read More »

ಹ್ಯಾಟ್ರಿಕ್ ಹಿರೋ ಹುಟ್ಟು ಹಬ್ಬಕ್ಕೆ ಭರ್ಜರಿ ತಯಾರಿ, ಏನೆಲ್ಲಾ ತಯಾರಿ ಇರಲಿದೆ ಗೊತ್ತಾ‌‌‌.!

ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೊ ಖ್ಯಾತಿಯ ನಟ ಶಿವರಾಜ್ ಕುಮಾರ್‌ ನಾಳೆ 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇನ್ನು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸುಮಾರು 4 ವರ್ಷಗಳಿಂದ ಅದ್ಧೂರಿ ಬರ್ತ್‌ಡೇ, ಸಂಭ್ರಮಾಚರಣೆಗಳಿಂದ ದೂರ ಉಳಿದಿದ್ದರು. ಆದರೆ ಈ ಬಾರಿ ಅಭಿಮಾನಿಗಳ ಒತ್ತಾಯಕ್ಕೆಟ ಗ್ರೀನ್ ಸಿಗ್ನಲ್ ನೀಡಿದ್ದು ಅದಕ್ಕಾಗಿ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ. ನಟ ಶಿವರಾಜಕುಮಾರ್‌ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಅಭಿಮಾನಿಗಳ ಜೊತೆಗೆ ಕೇಕ್‌ ಕತ್ತರಿಸಿ, ಸಂಭ್ರಮಾಚರಣೆ ಮಾಡಲಿದ್ದಾರೆ. ಬಳಿಕ 10.30ಕ್ಕೆ “ಕಂಠೀರವ ಸ್ಟುಡಿಯೋ’ದಲ್ಲಿರುವ ವರನಟ ಡಾ. ರಾಜಕುಮಾರ್‌ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ. ಅದಾದ ನಂತರ 11.15ಕ್ಕೆ ಕೆ. ಜಿ ರಸ್ತೆಯಲ್ಲಿರುವ ಸಂತೋಷ್‌ ಚಿತ್ರಮಂದಿರದಲ್ಲಿ ಶಿವರಾಜಕುಮಾರ್‌ ಬರ್ತ್‌ಡೇ ಪ್ರಯುಕ್ತ “ಘೋಸ್ಟ್‌’ ಸಿನಿಮಾದ ಸ್ಪೆಷಲ್‌ ಟೀಸರ್‌ ಮತ್ತು ಸಾಂಗ್‌ ಬಿಡುಗಡೆಯಾಗಲಿದ್ದು, ಶಿವಣ್ಣ ಚಿತ್ರತಂಡ ಮತ್ತು ಅಭಿಮಾನಿಗಳ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಕ್ತದಾನ ಶಿಬಿರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಹ್ಯಾಟ್ರಿಕ್ ಹಿರೋ ಹುಟ್ಟು ಹಬ್ಬಕ್ಕೆ ಭರ್ಜರಿ ತಯಾರಿ, ಏನೆಲ್ಲಾ ತಯಾರಿ ಇರಲಿದೆ ಗೊತ್ತಾ‌‌‌.! Read More »

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಹಾಸ್ಟೆಲ್ ನಾ ಒಳಗೆ ಏನೇಲ್ಲಾ ಇದೆ ಗೊತ್ತಾ, ರಕ್ಷಿತ್ ಬಾಯಲ್ಲಿ ಕೇಳಿ..!

ರಕ್ಷಿತ್ ಶೆಟ್ಟಿ ಅವರು ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ಪ್ರಸೆಂಟ್ ಮಾಡುತ್ತಿದ್ದಾರೆ. ಹಾಸ್ಟೆಲ್ ಒಳಗೆ ಒಂದು ರಾತ್ರಿ ನಡೆಯುವ ಕಥೆ ಇದಾಗಿದೆ.ಇದೇ ತಿಂಗಳ ಜುಲೈ 21ರಂದು ಈ ಚಿತ್ರ ರಿಲೀಸ್​ ಆಗಲಿದೆ. ಹೊಸ ಕಲಾವಿದರ ಜೊತೆಗೆ ರಮ್ಯಾ, ದಿಗಂತ್​ ಮಂಚಾಲೆ, ಪವನ್​ ಕುಮಾರ್​, ರಿಷಬ್​ ಶೆಟ್ಟಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಹಾಸ್ಟೆಲ್ ಹುಡುಗರ ಗಲಾಟೆ ಯಾಕೋ ಜಾಸ್ತೀ ಆಗ್ತಿದೆ ಮೊದ್ಲು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಬೇಕು ಅಂತಾ ಪ್ರೇಕ್ಷಕ ಪ್ರಿಯರು ಕಾಯ್ತಿದ್ದಾರೆ‌.ನಿತಿನ್​ ಕೃಷ್ಣಮೂರ್ತಿ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ರಕ್ಷಿತ್​ ಶೆಟ್ಟಿ ಅವರು ಈ ಸಿನಿಮಾವನ್ನು ಈಗಾಗಲೇ ಎರಡು ಬಾರಿ ನೋಡಿದ್ದಾರೆ. ಪ್ರೀಮಿಯರ್ ಶೋ ದಿನ ಮತ್ತೊಮ್ಮೆ ನೋಡುವುದಾಗಿ ತಿಳಿಸಿದ್ದಾರೆ. ‘ಕನ್ನಡದಲ್ಲಿ ನಾವು ಇಂಥ ಸಿನಿಮಾ ಮಾಡಿದ್ದೇವೆ ಎಂಬುದು ಹೆಮ್ಮೆ. ಕನ್ನಡ ಚಿತ್ರರಂಗಕ್ಕೆ ಭರವಸೆಯ ತಂತ್ರಜ್ಞರು ಸಿಕ್ಕಿದ್ದಾರೆ. ನೀವೆಲ್ಲ ಈ ಸಿನಿಮಾವನ್ನು ತುಂಬ ಎಂಜಾಯ್​ ಮಾಡುತ್ತೀರಿ. ತುಂಬ ಕಾಮಿಡಿ ಇದೆ. ಯಾರಿಗೂ ನಿರಾಸೆ ಆಗಲ್ಲ. ಒಂಚೂರು ತರಲೆ ಡೈಲಾಗ್​ ಇರಬಹುದು. ಆದರೂ ಇದು ಫ್ಯಾಮಿಲಿ ಸಿನಿಮಾ. ಕಾಲೇಜು ಹುಡುಗರು ಮೊದಲು ಈ ಸಿನಿಮಾ ನೋಡುತ್ತಾರೆ’ ಎಂದು ರಕ್ಷಿತ್​ ಶೆಟ್ಟಿ ಹೇಳಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಹಾಸ್ಟೆಲ್ ನಾ ಒಳಗೆ ಏನೇಲ್ಲಾ ಇದೆ ಗೊತ್ತಾ, ರಕ್ಷಿತ್ ಬಾಯಲ್ಲಿ ಕೇಳಿ..! Read More »

ಆಗಸ್ಟ್ 10ಕ್ಕೆ ‘ಜೈಲರ್’ ರಿಲೀಸ್, ರಜನಿ ಬದುಕಿನ ನಿರೀಕ್ಷಿತ ಸಿನಿಮಾ.

ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ‘ಜೈಲರ್’ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ. ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸನ್ ಪಿಕ್ಚರ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ನಿರ್ದೇಶಿದ್ದಾರೆ. ಬಾಲಿವುಡ್‌ ನಟ ಜಾಕಿ ಶ್ರಾಫ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್, ಟಾಲಿವುಡ್ ನಟ ಸುನಿಲ್, ನಾಗಬಾಬು, ನಟಿ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ ನಟಿಸಿದ್ದು, ಸಿನಿಪ್ರಿಯರಿಗೆ ಇವರೆಲ್ಲರನ್ನೂ ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಸಿಗಲಿದೆ. ರಜನಿ ನಟಿಸಿರುವ 169ನೇ ಸಿನಿಮಾ ಜೈಲರ್. ತಲೈವ ಹೊಸ ಸಿನಿಮಾ ಎಂಟ್ರಿಗೆ ಕಾದು‌ ಕುಳಿತಿರುವ ಅಭಿಮಾನಿಗಳು ಹಬ್ಬ ಮಾಡಲು ಸಜ್ಜಾಗಿದ್ದಾರೆ. ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ‌ ನಿರ್ದೇಶನದ ಜೈಲರ್ ಸಿನಿಮಾವನ್ನೂ ಚೆನ್ನೈ, ಮಂಗಳೂರು, ಹೈದರಾಬಾದ್, ಕೇರಳ ಸೇರಿದಂತೆ ಹಲವೆಡೆ ಶೂಟಿಂಗ್ ನಡೆಸಲಾಗಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಆಗಸ್ಟ್ 10ಕ್ಕೆ ‘ಜೈಲರ್’ ರಿಲೀಸ್, ರಜನಿ ಬದುಕಿನ ನಿರೀಕ್ಷಿತ ಸಿನಿಮಾ. Read More »

Scroll to Top