ಕನ್ನಡ ಚಿತ್ರರಂಗಕ್ಕೆ ಭರ್ಜರಿ, ಬಹಾದ್ದೂರ್, ದನಕಾಯೋನು ಮುಂತಾದ ಸೂಪರ್ ಹಿಟ್ ಚಿತ್ರಗಳನ್ನ ನೀಡಿರೋ ಆರ್. ಶ್ರೀನಿವಾಸ್ ಅವರ “ಆರ್ ಎಸ್ ಪ್ರೊಡಕ್ಷನ್ಸ್” ಸಂಸ್ಥೆಯ ಇಪ್ಪತ್ತನೇ ಚಿತ್ರ ‘ಕಾಟನ್ ಪೇಟೆ ಗೇಟ್’. ಕನ್ನಡ ಹಾಗು ತೆಲುಗು ಎರಡೂ ಭಾಷೆಗಳಲ್ಲಿ ಒಮ್ಮೆಲೆ ಚಿತ್ರೀಕರಣವಾಗುತ್ತಿರೋ ಈ ಚಿತ್ರಕ್ಕೆ ತೆಲುಗಿನಲ್ಲಿ “ಸೀತಣ್ಣ ಪೇಟ ಗೇಟ್” ಎಂದು ಹೆಸರಿಟ್ಟಿದ್ದಾರೆ. ಬಹುಪಾಲು ಚಿತ್ರೀಕರಣ ಮುಗಿಸಿಕೊಂಡ ಈ ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಕ್ರೈಂ ಥ್ರಿಲರ್ ಕಥೆಯ ಸಸ್ಪೆನ್ಸ್ ಚಿತ್ರ ಇದಾಗಿದ್ದು, ವೈ ರಾಜಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯೋಗಿ ರೆಡ್ಡಿ ಹಾಗು ಚಿಡತಾಲ ನವೀನ್ ಛಾಯಾಗ್ರಾಹಣ ಇರುವ ಈ ಚಿತ್ರದಲ್ಲಿ ಸದ್ಯ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆಯಂತೆ. ಗಾಳಿ ಸುದ್ದಿಗಳನ್ನು ನಂಬುವುದಾದರೆ, ಚಿತ್ರತಂಡ ಏಪ್ರಿಲ್ 14ರಂದು ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಮಾಡಲಿದೆಯಂತೆ.
ಬಯ್ಯಪು ರವಿ ಪೆನ್ನಲಿ ಮೂಡಿಬಂದ ಸಂಭಾಷಣೆ ಜೊತೆಗೆ ಶಿವ ಸರ್ವಣಿ ಸಂಕಲನ ಇರಲಿದೆಯಂತೆ. ಸಿನಿಮಾದಲ್ಲಿರುವ ನಾಲ್ಕು ಹಾಡುಗಳಿಗೆ ಎನ್ ಎಸ್ ಪ್ರಸು ಸಂಗೀತ ತುಂಬಿದ್ದಾರೆ. ಇನ್ನು ಮುಖ್ಯಭೂಮಿಕೆಗಳಲ್ಲಿ ಯಶ್ವನ್, ವೇಣುಗೋಪಾಲ್, ಅನುಷಾ ಜೈನ, ಸುರಭಿ ತಿವಾರಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರದ ಹಾಡೋದಕ್ಕೆ ಸನ್ನಿ ಲಿಯೋನ್ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿಯಿದೆ.