ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿರುವುದು ಎಲ್ಲರಿಗೂ ಗೊತ್ತಿರು ವಿಚಾರ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ ಚಾಲೆಂಜಿಂಗ್ ಸ್ಡಾರ್ ದರ್ಶನ್
ಆದರೆ ದರ್ಶನ್ ಅಭಿಮಾನಿಗಳ ಬಗ್ಗೆ ಇತ್ತೀಚಿಗಷ್ಟೆ ಹಿರಿಯ ಸಾಹಿತಿ ಗೊರೂರು ಚನ್ನಬಸಪ್ಪ ಅವರು ಕೊಟ್ಟಿರುವ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ ..ದರ್ಶನ್ ಅಭಿಮಾನಿಗಳಿಂದ ನನ್ನ ಶ್ರವಣಶಕ್ತಿ ಹೋಯಿತೆಂದು ಚನ್ನಬಸವಪ್ಪನವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ …
ನಗರದ ರಮಣಶ್ರೀ ಹೋಟೆಲ್ ನಲ್ಲಿ ನಡೆದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಹಿರಿಯ ಸಾಹಿತಿ ಗೊರೂರು ಚನ್ನಬಸಪ್ಪನವರು ದರ್ಶನ್ ಅಭಿಮಾನಿಗಳು ಒಡೆದ ಪಟಾಕಿಯಿಂದ ನನ್ನ ಕಿವಿ ಹಾಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಅದರ ಬೆನ್ನಲ್ಲೇ ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ ಆಕಸ್ಮಿಕವಾಗಿ ಆಗಿದ್ದು ಎಂದು ಅವರು ಸ್ಪಷ್ಟಪಡಿಸಿದರು …
ದರ್ಶನ್ ಅವರ ಮನೆಯ ಬಳಿಯೇ ಚನ್ನಬಸವಪ್ಪ ಅವರ ಮನೆ ಕೂಡ ಇದ್ದು ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬದಂದು ಅಭಿಮಾನಿಗಳು ಸಿಡಿಸುವ ಪಟಾಕಿಯಿಂದ ಕಿರಿಕಿರಿ ಉಂಟಾಗಿದೆ ಎಂದು ಚನ್ನಬಸಪ್ಪ ತಿಳಿಸಿದ್ದಾರೆ …ನಂತರ ಇದೇ ವಿಚಾರವಾಗಿ ದರ್ಶನ್ ಅವ್ರಿಗೆ ಪತ್ರ ಬರೆದಿದ್ದು ಈಗ ಪಟಾಕಿ ಸಿಡಿಸುವ ಕಾರ್ಯಕ್ಕೆ ಬ್ರೇಕ್ ಬಿದ್ದಿದೆಯಂತೆ…