ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರೆ… ಇತ್ತೀಚೆಗಷ್ಟೇ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು…ಬರ್ತಡೆ ದಿನ ದರ್ಶನ್ ಅವ್ರ ಸಾಕಷ್ಟು ಚಿತ್ರಗಳು ಅನೌನ್ಸ್ ಆಗಿದೆ…ಈಗಾಗಲೇ ಕ್ರಾಂತಿ , ತರುಣ್ ನಿರ್ದೇಶನದ ಸಿನಿಮಾ ಅದರೊಟ್ಟಿಗೆ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿದೆ …
ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಅಕ್ಕಪಕ್ಕದ ಇಂಡಸ್ಟ್ರಿಗೂ ಪರಿಚಿತರಾಗಿರುವ ದರ್ಶನ್ ಅವರ ಸಿನಿಮಾವನ್ನ ಚೆನ್ನೈನ ಖ್ಯಾತ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಂಡಿದೆ…
ಚೆನೈನ ಖ್ಯಾತ ಅಭಿಷೇಕ್ ಫಿಲಂಸ್ ಸಂಸ್ಥೆ ಲಾಂಛನದಲ್ಲಿ ರಮೇಶ್ ಪಿ ಪಿಳ್ಳೈ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಫೆಬ್ರವರಿ 16 ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟರ್ ಬಿಡುಗಡೆ ಮಾಡಿ ನಿರ್ಮಾಪಕರು ಶುಭ ಕೋರಿದ್ದಾರೆ ಹಾಗೂ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ.