Karnataka Bhagya
Blogಕ್ರೀಡೆ

ರಗಡ್ ಅವತಾರದಲ್ಲಿ ಟಾಲಿವುಡ್ ನಲ್ಲಿ ಮೋಡಿ ಮಾಡಲಿದ್ದಾರೆ ದೀಕ್ಷಿತ್ ಶೆಟ್ಟಿ

ನಾಗಿಣಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ನಟಿಸಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ದೀಕ್ಷಿತ್ ಶೆಟ್ಟಿಗೆ ಬ್ರೇಕ್ ನೀಡಿದ್ದು ದಿಯಾ ಸಿನಿಮಾ. ದಿಯಾ ಸಿನಿಮಾದಲ್ಲಿ ನಾಯಕ ರೋಹಿತ್ ಆಗಿ ನಟಿಸಿದ್ದ ದೀಕ್ಷಿತ್ ಶೆಟ್ಟಿ ಅವರ ಮುದ್ದಾದ ಅಭಿನಯಕ್ಕೆ ಮಾರುಹೋಗದವರಿಲ್ಲ. ದಿಯಾ ಸಿನಿಮಾದ ನಂತರ ಒಂದಾದ ಮೇಲೆ ಒಂದರಂತೆ ಸಿನಿಮಾದಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ದೀಕ್ಷಿತ್ ಸ್ಯಾಂಡಲ್ ವುಡ್ ಜೊತೆಗೆ ಟಾಲಿವುಡ್ ನಲ್ಲೂ ಮೋಡಿ ಮಾಡುತ್ತಿದ್ದಾರೆ.

ತೆಲುಗಿನ ನ್ಯಾಚುರಲ್‌ ಸ್ಟಾರ್‌ ಎಂದೇ ಫೇಮಸ್ಸು ಆಗಿರುವ ನಾನಿ ಅಭಿನಯದ ‘ದಸರಾ’ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ನಟಿಸಲಿದ್ದು ಸೂರಿ ಎಂಬ ರಗಡ್‌ ಅವತಾರದಲ್ಲಿ ಇವರು ಕಾಣಿಸಿಕೊಳ್ಳುತ್ತಿದ್ದಾರೆ. ದೀಕ್ಷಿತ್ ಅವರಿಗೆ ತೆಲುಗು ಸಿನಿರಂಗ ಹೊಸದೇನಲ್ಲ. ಮೂರು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದು ಅದರಲ್ಲಿ ನಾನಿ ಬ್ಯಾನರ್ ನಲ್ಲಿ ಮೂಡಿ ಬಂದ ಮೀಟ್ ಕ್ಯೂಟ್ ಕೂಡಾ ಒಂದು.

“ನಾನಿ ಬ್ಯಾನರ್‌ನ ‘ಮೀಟ್‌ ಕ್ಯೂಟ್‌’ ಸಿನಿಮಾದಲ್ಲಿ ಅಭಿನಯಿಸಿದ್ದೆ. ಆ ಸಿನೊಮಾದಲ್ಲಿ ನನ್ನ ನಟನೆಯನ್ನು ನೋಡಿದ ನಾನಿ ನಟನೆಯನ್ನು ಮೆಚ್ಚಿಕೊಂಡಿದ್ದರು. ಮಾತ್ರವಲ್ಲ ಈ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡರು. ಇನ್ನು ಈ ಸಿನಿಮಾ
ನಾನಿ, ನಾನು ಮತ್ತು ಕೀರ್ತಿ ಸುರೇಶ್‌ ಇವರ ಮೂರರ ಮಧ್ಯೆ ನಡೆಯುತ್ತದೆ”ಎನ್ನುತ್ತಾರೆ ದೀಕ್ಷಿತ್ ಶೆಟ್ಟಿ.

ದಿಯಾ ಸಿನಿಮಾದ ನಂತರ ಬೇರೆ ಸಿನಿಮಾಗಳಲ್ಲಿ ನಾನು ನಟಿಸಿದ್ದರೂ ಎಲ್ಲ ಕಥೆ ಬೇರೆ ಬೇರೆಯಾಗಿದೆ. ಸಿನಿಮಾದ ಕಥೆಗಳಲ್ಲಿ ಭಿನ್ನತೆಯಿದೆ. ‘ದಸರಾ’ ಸಿನಿಮಾದಲ್ಲಿ ಬಣ್ಣ ಹಚ್ಚಲು ಅವಕಾಶ ಸಿಕ್ಕಿರುವುದು ನನ್ಮ ಪರಿಶ್ರಮದ ಫಲ. ಜೊತೆಗೆ ಕೆಲಸಕ್ಕೆ ತಕ್ಕ ಪ್ರತಿಫಲವುಇ ಹೌದು. ಕ್ಷೇತ್ರ ಯಾವುದೇ ಆಗಿರಲಿ, ಕೆಲಸ ಮಾಡುತ್ತಿದ್ದರೆ ಅಥವಾ ಮಾಡಿದರೆ ಮುಂದಿನ ದಿನಗಳಲ್ಲಿ ಅವಕಾಶಗಳು ಜಾಸ್ತಿ ಸಿಗುತ್ತದೆ ಎಂಬುದು ನನ್ನ ಅಭಿಪ್ರಾಯ” ಎನ್ನುತ್ತಾರೆ ದೀಕ್ಷಿತ್ ಶೆಟ್ಟಿ.

Related posts

ಗಣೇಶ್ ಸಖತ್ ಸಿನಿಮಾಗೆ ಐವತ್ತು ದಿನಗಳ ಸಂಭ್ರಮ !

Nikita Agrawal

ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಸಿಂಪಲ್ ಸುಂದರಿ

Nikita Agrawal

21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್

Nikita Agrawal

Leave a Comment

Share via
Copy link
Powered by Social Snap