ಡಾಲಿ ಧನಂಜಯ ಅಭಿನಯದ ಬಡವ ರಾಸ್ಕಲ್ ಸಿನಿಮಾ ರಿಲೀಸ್ ಆಗಿ ಥಿಯೇಟರ್ ನಲ್ಲಿ ಅದ್ದೂರಿ ಪ್ರದರ್ಶನ ಕಂಡಿತ್ತು… ಕೊರೊನ ಮಧ್ಯೆಯೂ ಬಡವ ರಾಸ್ಕಲ್ ಸಿನೆಮಾನ ಪ್ರೇಕ್ಷಕರು ಮೆಚ್ಚಿಕೊಂಡಾಡಿದ್ದರು… ಸಿಂಪಲ್ ಕಥೆಯನ್ನು ಅದ್ಭುತವಾಗಿ ತೆರೆಯ ತೆರೆಮೇಲೆ ತಂದಿರುವ ವಿಚಾರಕ್ಕೆ ಪ್ರೇಕ್ಷಕ ಧನಂಜಯ ಹಾಗೂ ತಂಡಕ್ಕೆ ಜೈಕಾರ ಹಾಕಿದ್ದರು …
ಥಿಯೇಟರ್ ನಲ್ಲಿ ಕೋಟಿ ಕೋಟಿ ಬಾಚಿಕೊಂಡ ನಂತರ ಬಡವ ರಾಸ್ಕಲ್ ಸಿನೆಮಾ ಓಟಿಟಿ ಫ್ಲ್ಯಾಟ್ ನಲ್ಲಿ ರಿಲೀಸ್ ಆಗ್ತಿದೆ..ಹೌದು ಜನವರಿ ಇಪ್ಪತ್ತಾರರಂದು ಗಣರಾಜ್ಯೋತ್ಸವದ ಸಂಭ್ರಮಕ್ಕೆ ಬಡವ ರಾಸ್ಕಲ್ ಸಿನೆಮಾ ಓಟಿಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ… ಕಲರ್ಸ್ ಕನ್ನಡ ವಾಹಿನಿ ಬಡವ ರಾಸ್ಕಲ್ ಸಿನಿಮಾದ ಪ್ರಸಾರ ಹಕ್ಕನ್ನು ಖರೀದಿ ಮಾಡಿದ್ದು ವೂಟ್ ಆ್ಯಪ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ..
ಥಿಯೇಟರ್ ನಲ್ಲಿ ಬಡವ ರಾಸ್ಕಲ್ ಸಿನಿಮಾವನ್ನ ಮಿಸ್ ಮಾಡಿಕೊಂಡ ಪ್ರೇಕ್ಷಕರು ಈಗ ವೂಟ್ ಆ್ಯಪ್ ನಲ್ಲಿ ಸಿನಿಮಾ ನೋಡಬಹುದಾಗಿದೆ …ಬಡವ ರಾಸ್ಕಲ್ ಸಿನಿಮಾದಲ್ಲಿ ಡಾಲಿ ಧನಂಜಯ ಜೊತೆಗೆ ಅಮೃತಾ ಅಯ್ಯರ್ ನಾಯಕಿಯಾಗಿ ಅಭಿನಯ ಮಾಡಿದ್ದಾರೆ.. ನಾಗಭೂಷಣ್,ಪೂರ್ಣ ಇನ್ನೂ ಅನೇಕರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ..