ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯದ ಸಿನಿಮಾವೊಂದು ಸೆಟ್ಟೇರಲು ಸಿದ್ದವಾಗಿದೆ..ಹೌದು ಶಂಕರ್ ನಾಗ್ ಅಭಿನಯದ ಚಿತ್ರಕ್ಕೆ ಅಬ ಜಬತಬ ಎಂದು ಹೆಸರಿಡಲಾಗಿದೆ..ಶಂಕರ್ ನಾಗ್ ನಮ್ಮೆಲ್ಲರನ್ನ ಬಿಟ್ಟು ಅಗಲಿ ಸಾಕಷ್ಟು ವರ್ಷಗಳು ಕಳೆದಿವೆ ಅಂತದ್ರಲ್ಲಿ ಸಿನಿಮಾದಲ್ಲಿ ಅಭಿನಯಿಸೋದು ಹೇಗೆ ಅನ್ನೋ ಪ್ರಶ್ನೆ ಉತ್ತರ ಚಿತ್ರತಂಡ ಶೀಘ್ರದಲ್ಲೇ ಕೊಡಲಿದ್ಯಂತೆ…
ಎರಡು ವರ್ಷದ ಹಿಂದೆ, ಕನ್ನಡ ಗೊತ್ತಿಲದವರಿಗೆ ಕನ್ನಡ ಕಲಿಸಲು ಹೋಗಿ, ಕನ್ನಡ್ ಗೊತ್ತಿಲ್ಲ ಅಂತ ಸಿನಿಮಾ ಮಾಡಿದ ನಿರ್ದೇಶಕ ಮಯೂರ ರಾಘವೇಂದ್ರ ಈಗ ಅಬ ಜಬ ತಬ ಅಂತಿದ್ದಾರೆ….
“ಅಬ ಜಬ ದಬ ಚಿತ್ರವನ್ನ ಎಸ್ ರಾಮ್ ಪ್ರೊಡ್ಯೂಕ್ಷನ್ಸ್” ಬ್ಯಾನರ್ ನಲ್ಲಿ ಅನಂತ ಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ..ಚಿತ್ರದ ಶೀರ್ಷಿಕೆಯನ್ನು ಮಂತ್ರಾಲಯದ ರಾಯರ ಸಾನಿಧ್ಯದಲ್ಲಿ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ…